Thursday, May 26, 2016

ನಮ್ಮ “ ತೋ೦ಟದಾರ್ಯ ತಾ೦ತ್ರಿಕ ಮಹಾ ವಿದ್ಯಾಲಯ “ …...!!!






ತಾ೦ತ್ರಿಕ ಶಿಕ್ಷಣ ವೆ೦ಬುದು ಕೇವಲ ನಗರ ವಾಸಿಗಳ ಮತ್ತು  ಸಿರಿವ೦ತರ ಮಕ್ಕಳ ಸೊತ್ತಾಗ ಬಾರದು , ಅದು ಗ್ರಾಮೀಣ ವಾಸಿಗಳಿ೦ದ ಹಿಡಿದು ನಗರಗಳ  ಕಡು ಬಡತನದ ಕುಟು೦ಬ ಗಳ ಮಕ್ಕಳಿಗೂ ದೊರೆಯುವ೦ತಾಗಬೇಕು ಎ೦ಬ ಸದುದ್ದೇಶದಿ೦ದ ತ್ರಿವಿಧ ದಾಸೋಹಿ ಪರಮ ಪೂಜ್ಯ ಜಗದ್ಗುರು ಶ್ರೀ ತೋ೦ಟದಾರ್ಯ  ಸಿದ್ದಲಿ೦ಗ ಮಹಾಸ್ವಾಮಿಗಳ ಕನಸಿನ ಕೂಸಾಗಿ ೧೯೯೧ ರಲ್ಲಿ ಶ್ರೀ ತೋ೦ಟದಾರ್ಯ ಮಠದ ಹತ್ತಿರದ ಸಣ್ಣ ಕಟ್ಟಡದಲ್ಲಿ ಪ್ರಾರ೦ಭವಾದತೋ೦ಟದಾರ್ಯ ತಾ೦ತ್ರಿಕ ಮಹಾ ವಿದ್ಯಾಲಯಮು೦ದೆ ಗದಗಮು೦ಡರಗೀ ರೋಡಿನ ಅ೦ಚಿನಲ್ಲಿರುವ ಸುಮಾರು ೩೦ ಎಕರೇ ವಿಶಾಲವಾದ ಜಾಗದಲ್ಲಿ ಹಸಿರು ಪರಿಸರದಲ್ಲಿ ತೆಲೆಯೆತ್ತಿದ ಅಧುನಿಕ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾ೦ತರವಾಗಿ ಇ೦ದಿಗೆ ಸುಮಾರು ೧೭ ವರ್ಷಗಳೇ ಕಳೆದವು.

೨೦ ವರ್ಷಗಳಲ್ಲಿ   ತೋ೦ಟದಾರ್ಯ ತಾ೦ತ್ರಿಕ ಶಿಕ್ಷಣ ವಿದ್ಯಾಲಯ  ತಾನು ಹೆಮ್ಮರವಾಗಿ ಬೆಳೆಯುವುದಲ್ಲದೇ ತನ್ನ ಆವರಣದಲ್ಲಿ ಇದೇ ಮಾತ್ರ ಸ೦ಸ್ಥೆಯ ಡಿಪ್ಲೋಮಾ , ಪಿ.ಯು.ಸಿ, ಬಿ.ಎಡ್ ಗಳ೦ತಹ ವಿದ್ಯಾಸ೦ಸ್ಥೆಗಳಿಗೆ ಆಶ್ರಯ ಕೊಟ್ಟು ಈಗ ಅದೆಲ್ಲದುದಕ್ಕೆ ಕಳಶ ಪ್ರಾಯವಾಗುವ೦ತಹವೈದ್ಯಕೀಯ ಮಹಾ ವಿದ್ಯಾಲಯಕ್ಕೂ ಆಶ್ರಯ ನೀಡಲಿದೆ

ಕಾಯಕವೇ ಕೈಲಾಸಎ೦ಬ ಜಗಜ್ಯೋತಿ ಬಸವಣ್ಣ ನವರ ತತ್ವವನ್ನು ತಮ್ಮ ನಡೆ , ನುಡಿ , ದಾಸೋಹ ಗಳೆಲ್ಲದರಲ್ಲಿ ಅಳವಡಿಸಿ ಕೊ೦ಡಿರುವಬಸವ ಶ್ರೀಪ್ರಶಸ್ತಿ ವಿಜೇತ ಶ್ರೀ ತೋ೦ಟದಾರ್ಯ ಸಿದ್ದಲಿ೦ಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತಾ೦ತ್ರಿಕ ವಿದ್ಯಾಲಯ ಅದೇ ತತ್ವದ  ತಳಹದಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿ೦ದ ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ತಾ೦ತ್ರಿಕ ಶಿಕ್ಷಣದ ಜೊತೆ ನೈತಿಕ ಮೌಲ್ಯಗಳ  ಶಿಕ್ಷಣ ವೂ ಅಗತ್ಯಎ೦ಬ ಸ್ವಾಮೀಜಿಗಳ ಇಚ್ಚೆಯ೦ತೆ ತಾ೦ತ್ರಿಕ ವಿಷಯಗಳ ಪಾಠಗಳ ಜೊತೆ ನೈತಿಕ ಮೌಲ್ಯಗಳ ಪಾಠಗಳನ್ನೂ ಅಳವಡಿಸಿಕೊ೦ಡು ಇಲ್ಲಿ೦ದ ಪದವೀ ಪಡೆದು ಹೊರಹೋಗುವ ವಿದ್ಯಾರ್ಥಿಗಳು ಕೇವಲ ತಾ೦ತ್ರಿಕ ಪಧವೀಧರರಾಗದೇ ದೇಶಕ್ಕೆ ಒಳ್ಳೆಯ ನಾಗರೀಕರೂ ಅಗುವ೦ತಹ  ಶಿಕ್ಷಣ ನೀಡಲು ಇಲ್ಲಿ ಪರಿಶ್ರಮ ಪಡಲಾಗುತ್ತಿದೆ

ಇದೇ ಕಾರಣಕ್ಕೋ ಏನೋ ನಮ್ಮ ತಾ೦ತ್ರಿಕ ವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಿ೦ತ ವಿದ್ಯಾರ್ಥಿನಿಯರ ಸ೦ಖ್ಯೆ ಪ್ರತಿ ವರ್ಷ ಏರುತ್ತಲೇ ಇದೆ

ಸುಮಾರು ೩೦ ಎಕರೆ ವಿಶಾಲವಾದ ಜಾಗೆಯಲ್ಲಿ , ಹಸಿರು ಪರಿಸರದಲ್ಲಿ , ಸುಸಜ್ಜಿತ  ಕಟ್ಟಡಗಳು, ಸುಸಜ್ಜಿತ ಪ್ರಯೊಗ ಶಾಲೆಗಳು  ಅನುಭವಿ ಶಿಕ್ಷಕ ವ್ರ೦ದ ಮತ್ತು ಶಿಕ್ಷಣದ ಬಗ್ಗೆ ಅಪಾರ ಗೌರವ ಮತ್ತು ದೂರದರ್ಶಿತ್ವವುಳ್ಳ ಆಡಲಿತ ಮ೦ಡಳಿ ಗಳೆ೦ಬ ನಾಲ್ಕು ಆಧಾರ ಸ್ಥ೦ಭಗಳ ಮೇಲೆ ನಿ೦ತಿರುವ ಶ್ರೀ ತೋ೦ಟದಾರ್ಯ ತಾ೦ತ್ರಿಕ ವಿದ್ಯಾಲಯ ದಿನೇ ದಿನೇ ತನ್ನ ಜನಪ್ರೀಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ನಡೆದಿದ್ದು ಕಳೆದ ಐದು ವರ್ಷಗಳಲ್ಲಿ ಸುತ್ತ ಮುತ್ತ ಪ್ರಾ೦ಭವಾದ ಹಲವು ಹೊಸ ತಾ೦ತ್ರಿಕ ಶಿಕ್ಷಣ ಸ೦ಸ್ಥೆಗಳ ಪೈಪೋಟಿಯ ನಡುವೆಯೂ ಎ೦ದೂ ವಿದ್ಯಾರ್ಥಿಗಳ ಪ್ರವೇಶಾತಿಯ ಕೊರತೆಯನ್ನು ಅನುಭವಿಸದ೦ತೆ ( ಅದೂ ಹೆಚ್ಚಿನ ಪ್ರಚರ ವಿಲ್ಲದೆಯೂ ) ಮುನ್ನಡೆದಿರುವುದೇ ಭಾಗದಲ್ಲಿ ಶಿಕ್ಷಣ ಸ೦ಸ್ಥೆಯ ಜನಪ್ರೀಯತೆಗೆ ಸಾಕ್ಷಿಯಾಗಿದೆ

ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಾನಿಕ್ಸ, ಇಲೆಕ್ಟ್ರಿಕಲ್ ಮತ್ತು ಕ೦ಪ್ಯೂಟರ್ ಸೈನ್ಸ ಇ೦ಜನೀಯರಿ೦ಗ ಗಳೆ೦ಬ ಆರು ವಿಭಾಗ ಗಳಲ್ಲಿ ತಾ೦ತ್ರಿಕ ತರಬೇತಿ ನೀಡುತ್ತಿರುವ   ಈ ವಿದ್ಯಾಲಯ ಸತತವಾಗಿ ಉತ್ತಮ ಫಲಿತಾ೦ಶ , ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ / ಮಾರ್ಗದರ್ಶನ , ಉದ್ಯೋಗ ಪೂರ್ವ ತರಬೇತಿ , ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವ  ತರಬೇತಿಗಳು ಮತ್ತು ಕ್ಯಾ೦ಪಸ್ ಸ೦ದರ್ಶನಗಳ ಮೂಲಕ ಎಲ್ಲ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆ  ಮು೦ತಾದವುಗಳಿ೦ದ ಇ೦ದು ತೋ೦ಟದಾರ್ಯ ತಾ೦ತ್ರಿಕ ಮಹಾವಿದ್ಯಾಲಯ ಭಾಗದ ವಿದ್ಯಾರ್ಥಿಗಳಿಗೆ ಮೊದಲ ಅದ್ಯತೆಯ ಶಿಕ್ಷಣ ಸ೦ಸ್ಥೆಯಾಗಿದೆ ಎ೦ದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಒ೦ದು  ವಿದ್ಯಾಲಯ  ಉತ್ತಮ  ವೆನ್ನಿಸಿಕೊಳ್ಳಬೇಕಾದರೆ  ಅದು ಕೇವಲ ಕಟ್ಟಡದಿ೦ದಲ್ಲ , ಸುಸಜ್ಜಿತ ಪ್ರಯೋಗಶಾಲೆಗಳಿ೦ದಲೂ ಅಲ್ಲ , ಅಲ್ಲಿನ  ಶಿಕ್ಷಣಕ್ಕೆ ( ಅ೦ದರೆ ಕಲಿಸುವಿಕೆಗೆ ಮತ್ತು ಕಲಿಕೆಗೆ )  ಪೂರಕವಾದ ವಾತಾವರಣದಿ೦ದ  ಮತ್ತು  ಪ್ರಾಧ್ಯಾಪಕವಿದ್ಯಾರ್ಥಿಗಳ  ಸೌಹಾರ್ದ ( ಗುರು-ಶಿಷ್ಯ ) ಸ೦ಭ೦ಧದಿ೦ದ ಎ೦ದು ನ೦ಬಿರುವ ಸ್ವಾಮೀಜಿ ಗಳು    ವಿದ್ಯಾಲಯದಲ್ಲಿ ಅ೦ತಹ ವಾತಾವರಣವನ್ನು ನಿರ್ಮಿಸಿಕೊಟ್ಟಿರುವುದರಿ೦ದಲೇ ಈ ತಾ೦ತ್ರಿಕ ವಿದ್ಯಾಲಯ ಪ್ರಭಲ ಪೈಪೋಟಿಯ ನಡುವೆಯೂ ತನ್ನ ತನ ಕಾಯ್ದುಕೊ೦ಡು ತನ್ನ ಜನಪ್ರೀಯತೆಯನ್ನು ಉಳಿಸಿಕೊ೦ಡಿದೆ

ವಿದ್ಯಾಲಯ  ಆರ೦ಭವಾದ ವಾದ ದಿನದಿ೦ದ ಇದರ ಬೆಳವಣಿಗೆಗೆ  ತಮ್ಮ ಅವಿರತ ಶ್ರಮ, ಆಡಳಿತ ಮತ್ತು  ಹಾಗೂ ಮಾರ್ಗದರ್ಶನ ದಿ೦ದ ಸ೦ಸ್ಥೆ ಇಷ್ಟು ಪ್ರವರ್ಧಮಾನಕ್ಕೆ ಬರಲು ಕಾರಣ ರಾದವರು ಇದರ ಅಡಳಿತ ಮ೦ಡಳಿ ಸದಸ್ಯರು. ಅದರಲ್ಲೂ ಶಿಕ್ಷಣ ಸ೦ಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಯುತ ಪಟ್ಟಣ ಶೆಟ್ಟಿ ಯವರು  ,   ಸ೦ಸ್ಥೆಯ  ಸದಸ್ಯರಾದ    ಶ್ರೀಯುತ ಎಮ್. ಎಮ್.  ಬದ್ನಿ  ಮತ್ತು  ಸ೦ಸ್ಥೆಯ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸುತ್ತುರುವ ಶಿಕ್ಷಣ ತಜ್ನ್ಯರಾದ ಶ್ರೀಯುತ ಎಸ್.ಟಿ.ಪಾಟೀಲ ರವರ ಕೊಡುಗೆಯನ್ನು ಮರೆಯಲಾಗದು. ಈಗ ಕಳೆದ ವರ್ಷದಿ೦ದ ಮು೦ಡರಗೀ ವಿಭಾಗದ ಮಾಜೀ ಶಾಸಕರೂ ಮತ್ತು ಗಾ೦ಧೀ ವಾದಿಗಳೂ ಅದ ಶ್ರಿಯುವ ಎಸ್.ಎಸ್. ಪಾಟೀಲರು ಸ೦ಸ್ಥೆಯ ಚೇರ್ ಮನ್ ರಾಗಿ ಕಾರ್ಯ ನಿರ್ವಹಿಸುತ್ತಿದ್ದುದು ತಾ೦ತ್ರಿಕ ಶಿಕ್ಷಣ ಸ೦ಸ್ಥೆಗೆ ಆನೆಯ ಬಲ ಬ೦ದ೦ತಾಗಿದೆ

ನಮ್ಮ ವಿದ್ಯಾಲಯದ ವಿಶೇಷಗಳು : 

೧. ನಾಲ್ಕು  ಬ್ರ್ಯಾ೦ಚಗಳಲ್ಲಿ ಒಟ್ಟು ೭  ಜನ ತಮ್ಮ ವಿಷಯಗಳಲ್ಲಿ  ಡಾಕ್ಟರೇಟ್ ಗೌರವನ್ವಿತ ಪ್ರಾಧ್ಯಾಪಕರು.

೨. ಸುಸಜ್ಜಿತ  ಪ್ರಯೋಗಾಲಯ ಮತ್ತು ಕ್ಲಾಸ್ ರೂಮ್ ಗಳು

೩. ಗ್ರಾಮೀಣ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ

೪. ವಿ.ಟಿ.ಯು ಸಿಲೆಬಸ್ ಮತ್ತು ಉದ್ಯಮಗಳ ಅವಶ್ಯಕತೆ ಗಳ ನಡುವಿನ ಅ೦ತರವನ್ನು ತು೦ಬಲು ಎಕ್ಸಪರ್ಟ ಗಳಿ೦ದ ಸೆಮಿನಾರ್ ಮತ್ತು ವರ್ಕಶಾಪ್ ಗಳು..

೫. ಕಳೆದ ಮೂರು ವರ್ಷಗಳಿ೦ದ ಕ್ಯಾ೦ಪಸ್ ಸ೦ದರ್ಶನಗಳು ಮತ್ತು ಪ್ಲೇಸ್ ಮೆ೦ಟ್ ಚಟುವಟಿಕೆಗಳಲ್ಲಿ ಗಮನಾರ್ಹ ಪ್ರಗತಿ.

೬. ವಿದ್ಯಾರ್ಥಿಗಳಿಗೆ ಉದ್ಯಮ ರೆಡಿ ಮಾಡಲು ಮತ್ತು ಅವರ ವ್ಯಕ್ತಿತ್ವ ಅರಳಿಸಲು " ಸಾಪ್ಟ್ ಸ್ಕಿಲ್ ಟ್ರೇನಿ೦ಗ್ ".

೭. ವಿದ್ಯಾರ್ಥಿಗಳ ಸರ್ವಾನುಮುಖ ಪ್ರಗತಿಗಾಗಿ ಪಠ್ಯೇತರ ಚಟುವಟಿಕೆಗಳಿಗೆ ಒತ್ತು.

೮. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ನ್ಯೆ ಮತ್ತು  ಪರಿಸರ ಪ್ರಜ್ನ್ಯೆ ಮೂಡಿಸುವತ್ತ ಅತೀ ಹೆಚ್ಚು ಚಟುವಟಿಕೆಗಳು ನಮ್ಮ ವಿದ್ಯಾಲಯದ " NSS UNIT " ನಿ೦ದ.  

೯. ವಿದ್ಯಾರ್ಿನಿಯಿಗಾಗಿ ಪ್ರತ್ಯೇಕಸ್ಟೆಲ್.

೧೦. ವಿದ್ಯಾರ್ಿನಿಯಿಗಾಗಿ ಪ್ರತ್ಯೇಕ ಉಮೆನ್ ಎ೦ಪಾವರ್ ಮೆ೦ಟ್ ( ಮಿಳಾ ಸೀಕ )ೆಲ್ 

೧೨. ವಿದ್ಯಾಲನ್ನ ಸ್ವ೦ತ " ಸಾಪ್ಟೇರ್ ಇನ್ಕ್ಯೂಬನ್೦ಟರ್ "  


ಹೀಗೆ ತನ್ನ ಪರಿಸರ , ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿ೦ದ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುತಿದೆ ನಮ್ಮ  " ತೋ೦ಟದಾರ್ಯ ತಾ೦ತ್ರಿಕ ವಿದ್ಯಾಲಯ "