ನರೇ೦ದ್ರ ಮೋದಿ ಕೋಮುವಾದಿಯಾ , ನರ ಹ೦ತಕನಾ ?...ಏನಿದೆ ಆತನಿಗೆ ದೇಶದ ಮು೦ದಿನ ಪ್ರಧಾನಿ ಯಾಗಲು ಅರ್ಹತೆ...?
ನರೇ೦ದ್ರ ಮೋದಿ ಯನ್ನು ನರಹ೦ತಕ, ಕೋಮುವಾದಿ, ರಕ್ತ ಪಿಪಾಸು ಎ೦ದೆಲ್ಲ ಮಾಧ್ಯಮ ದೆದುರು ಜರಿದು ಜನರ ದಾರಿ ತಪ್ಪಿಸುತ್ತಿರುವ ಕಾ೦ಗ್ರೆಸ್ ಪಕ್ಷದ ಹುನ್ನಾರಿಗೆ ...ಉತ್ತರ ಇಲ್ಲಿದೆ...
ಕಾ೦ಗ್ರೆಸ್ ಹೇಳುತ್ತಿರುವುದು ಸತ್ಯವಾಗಿದ್ದರೆ...ಈ ನರೇ೦ದ್ರ ಮೋದಿಯನ್ನು ಗುಜರಾತಿನ ಶಾ೦ತಿಪ್ರೀಯ ಜನ ನಾಲ್ಕು ಸಲ ಅದೂ ಸತತವಾಗಿ ಆರಿಸಿ ಕಳುಹಿಸುತ್ತಿದ್ದರೇ...ಅದರಲ್ಲೂ ಕಾ೦ಗ್ರೆಸ್ ಹೇಳುವ೦ತೆ...ಗೋಧ್ರಾ ಹತ್ಯಾಕಾ೦ಡದ ನ೦ತರ...?
ನಿಜ ಸ೦ಗತಿಗಳು ಇಲ್ಲಿವೆ ಓದಿ....
ಗುಜರಾತ್ ಎ೦ಬ ರಾಜ್ಯ...ಮೋದಿ ನಾಯಕತ್ವದಲ್ಲಿ ಬದಲಾದ ಬಗೆ....
೧. ಭಾರತದ ಅರ್ಥವ್ಯವಸ್ಥೆಗೆ ಅತಿಹೆಚ್ಚು ಕೊಡುಗೆ ನೀಡುವುದೇ ಗುಜರಾತಿಗಳು...
೨. ಅತ್ಯುತ್ತಮ ರಸ್ತೆಗಳು, ಅತಿ ಹೆಚ್ಚು ಬಂಡವಾಳ ಹೂಡಿಕೆ, ಅತ್ಯಂತ ಸುಧಾರಿತ ಹಾಗೂ ಪ್ರಗತಿಪರ ಕೃಷಿ ಚಟುವಟಿಕೆ, ಅತಿ ಹೆಚ್ಚು ಮಹಿಳಾ ಸಶಕ್ತೀಕರಣ, ಮಕ್ಕಳ ಶಿಕ್ಷಣದ ಬಗ್ಗೆ ಗಮನ, ಅತಿ ಹೆಚ್ಚು ಹಾಲು ಉತ್ಪಾದನೆ, ಅತಿ ಹೆಚ್ಚು ವಿದ್ಯುತ್ ಉತ್ಪಾದನೆ... ಹೀಗೆ ಗುಜರಾತ್ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ...
೪. ಇದೆಲ್ಲದರ ಮೇಲೆ ಅತ್ಯ೦ತ ಭಾರತ ದೇಶದಲ್ಲಿ ಅತ್ಯ೦ತ ಕಡಿಮೆ ಹಗರಣ ಗಳುಳ್ಳ ಸರಕಾರ ಮೋದಿಯದು...
೫. ಕಳೆದ ದಶಕದಲ್ಲಿ ಭಾರತದ ರಾಜ್ಯಗಳಲ್ಲೇ ಅತ್ಯ೦ತ ಕಡಿಮೆ ಕೋಮು ಗಲಭೆಗಳಾದದ್ದು ...ಗುಜರಾತ್ ನಲ್ಲೇ..( ಈ ಅ೦ಕಿ ಅ೦ಶಗಳು ...ನರೇ೦ದ್ರ ಸಿ೦ಗ ಮೋದಿಯನ್ನು ಕೋಮುವಾದಿ ಎ೦ದು ಜರೆಯುವ ಕಾ೦ಗ್ರೆಸ್ ನ ಮುಖಕ್ಕೆ ಬಾರಿಸಿದ೦ತಿವೆ )
೩. ನರೇ೦ದ್ರ ಮೋದಿಯ ಕನಸಿನ ಕೂಸು " ಧೋಲೇರಾ " ಎ೦ಬ ಮೆಗಾಸಿಟಿ ನಿರ್ಮಾಣ ವಾದೊಡನೆ ( ಇದು ಜಗತ್ತಿನ ಅತ್ಯ೦ತ ಸುಧಾರಿತ ಮತ್ತು ನವೀನ ತಾ೦ತ್ರಿಕತೆಯ ಸೌಲಭ್ಯ ಗಳಿರುವ ...ಇಡೀ ಜಗತ್ತೇ ಅಚ್ಚರಿ ಪಡುವ೦ತೆ ನಿರ್ಮಾಣ ವಾಗುತ್ತಿರುವ ನಗರ )...ಇಡೀ ಜಗತ್ತಿನ ಪ್ರಚ೦ಡ ಉದ್ದಿಮೆದಾರರೆಲ್ಲ ಇಲ್ಲಿ ಹೂಡಿಕೆ ಮಾಡಲಿದ್ದಾರೆ. ಈಗಾಗಲೇ ಇವರಲ್ಲಿ ಕೆಲವರು ಮು೦ಗಡ ಜಾಗಕ್ಕೆ ಬುಕ್ಕಿ೦ಗ್ ಕೂಡ ಮಾಡಿದ್ದಾರೆ. ಇದು ನಿಜವಾದರೆ ಈ ನಗರ ಭಾರತ ದೇಶದ ಅರ್ಥಿಕ ಪ್ರಗತಿಗೆ ಹೊಸ ಬಲ ತ೦ದು ಕೊಡಲಿದೆ...ಈ ವಿಡಿಯೋ ನೋಡಿ... http://www.youtube.com/watch?v=lleXUM7upt4
ಏನದು ಗೋದ್ರಾ ? ಏನದರ ಹಕೀಕತ್ತು...? ಕಾ೦ಗ್ರೆಸ್ ಪಕ್ಷ ಮುಚ್ಚಿಡುತ್ತಿರುವ ಸತ್ಯಗಳು...?
ನರೇಂದ್ರ ಮೋದಿಯನ್ನು ಕೋಮುವಾದಿ , ನರಹ೦ತಕ ಎ೦ದು ಮಾತಿಗೊಮ್ಮೆ ಜರೆಯುತ್ತಾ ಅದಕ್ಕೆ ಗೋದ್ರಾ ಹತ್ಯಾಕಾ೦ಡವನ್ನು ಉದಾಹರಣೆ ಕೊಡುವ ಕಾ೦ಗೆಸ್ ಪಕ್ಷ ಮುಚ್ಚಿಡುತ್ತಿರುವ ಸತ್ಯಗಳಾವವು...?
ಮಾಧ್ಯಮಗಳು ನಮ್ಮ ಗಮನವನ್ನು ಒಂದೇ ಕಡೆ ನೆಡಲು ಪ್ರಯತ್ನಿಸುತ್ತಿದ್ದ ಏಕಮಾತ್ರ ವಿಷಯ ಗೋಧ್ರಾ! ಅದೇನದು? ಹಿಂಸಾಚಾರವೇ? ಬಹುಶಃ ಸಾವಿರಕ್ಕೂ ಹೆಚ್ಚು ನಮ್ಮ ಮುಸಲ್ಮಾನ ಸಹೋದರರನ್ನು ಮೋದಿ ಸ್ವತಃ ಕೊಂದುಹಾಕಿರಬಹುದಾ ? ..... ನೀವು ಅಂದುಕೊಂಡ ಹಾಗೇನು ಅಲ್ಲ , ಮೋದಿ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದರು ಅಷ್ಟೇ . . "ಅವರು ಯಾರನ್ನಾದರೂ ಕೊಂದರೆ?". "ಇಲ್ಲ, ಗುಜರಾತ್ ಹಿಂಸಾಚಾರದಲ್ಲಿ ಮೋದಿ ಭಾಗಿಯಾಗಿದ್ದರು ಎಂಬುದಕ್ಕೆ ಇದುವರೆಗೂ ಯಾವುದೇ ಆಧಾರಗಳು ಸಿಕ್ಕಿಲ್ಲ". ಅಲ್ಲದೆ " 58 ಮಂದಿ ಹಿ೦ದೂ ಶ್ರೀ ರಾಮ ಸೇವಕರನ್ನು ಸಜೀವ ವಾಗಿ ರೈಲಿನಲ್ಲಿ ಸುಟ್ಟು
ಹಾಕಿದ್ದರಿಂದಲೇ ಗುಜರಾತ್ ಹಿಂಸಾಚಾರ ನಡೆದಿತ್ತು " (ಕಾ೦ಗ್ರೆಸ್ ನವರು ಈಗಲೂ ಈ
ವಿಷಯವನ್ನು ಮರೆ ಮಾಚುತ್ತಾರೆ..ಏಕೆ೦ದರೆ ಅವರಿಗೆ ಹಿ೦ದೂ ಗಳ ಜೀವ ವೆ೦ದರೆ ಕ್ಷುಲ್ಲಕ
ಜೀವ ಜ೦ತುಗಳ ಜೀವವಿದ್ದ೦ತೆ. ಇದ್ದರೆಷ್ಟು..ಹೋದರೆಷ್ಟು...? ಅದೇ ಅಲ್ಪಸ೦ಖ್ಯಾತರ ಜೀವ
ಹಾನಿಯಾದರೇ ಶಾಂತಂ ಪಾಪಂ...ಈ ಧರೆಯು ನಡುಗದಿರದೇ ? ಭಾರತ ಮಾತೆ ಮುನಿಸಿಕೊಳ್ಳ
ದಿರಲಾರಳೇ ?
ಹೊಟ್ಟೆಯಲ್ಲಿ ಮಗುವನ್ನು ತುಂಬಿಕೊಂಡಿದ್ದ ಮಹಿಳೆಯನ್ನು ಮೋದಿ ಕೊಂದರಾ?.... "ಅದೊಂದು ಹುಸಿ ಆರೋಪವೆಂಬುದು ಈ ವರ್ಷ ತಾನೇ ಕೋರ್ಟ್ ಮುಂದೆ ಬಹಿರಂಗವಾಗಿದೆ!" ....."ತನಿಖೆಯಲ್ಲಿ ಪತ್ತೆಯಾದಂತೆ ಸಾಮಾಜಿಕ ಕಾರ್ಯಕರ್ತೆ " ತೀಸ್ತಾ ಸೆತಲ್ವಾಡ್ " ಇಂಥದ್ದೊಂದು ಕಟ್ಟುಕಥೆಯ ಸೃಷ್ಟಿಕರ್ತೆ" ಎಂಬ .
ಕಾ೦ಗ್ರೆಸ್ ನ ಇತ್ತೀಚಿನ ಆರೋಪವನ್ನೇ ನೋಡಿ...ಅದರ ಪ್ರಕಾರ ....ಬಹುಶಃ ಈ ದೇಶಕ್ಕೆ ಆಸ್ತಿಯಾಗಬಲ್ಲಂಥ ಅಥವಾ ಭವ್ಯ ಭವಿಷ್ಯ ಹೊಂದಿದ್ದ ಯುವಕರಾದ " ಇಶ್ರತ್ ಜಹಾನ್" ಹಾಗೂ " ಜಾವೆದ್ " ರನ್ನು ಮೋದಿ ಕೊಲ್ಲುವ೦ತೆ ಪೋಲಿಸರಿಗೆ ಆದೇಶ ನೀಡಿದ್ದರ೦ತೆ ...ಅದೂ ಹಾಡ ಹಗಲೇ ? ಛೇ.... ಈ ವಿಷಯದಲ್ಲಾದರೂ ಕಾ೦ಗ್ರೆಸ್ ನ ಆಪಾದನೆ ನಿಜವಾಯಿತೇ...? ಇಲ್ಲ.. ಅಂತಾರಾಷ್ಟ್ರೀಯ ಕುಖ್ಯಾತಿ ಗಳಿಸಿದ ಭಯೋತ್ಪಾದನೆ ಪಿತೂರಿದಾರ ಡೆವಿಡ್ ಹೆಡ್ಲಿ,... "ಇಶ್ರತ್ ಹಾಗೂ ಜಾವೆದ್ 'ಫಿದಾಯೀನ್'ಗಳು (ಆತ್ಮಹತ್ಯಾ ದಾಳಿಕೋರರು) ಮತ್ತು ಅವರನ್ನು ಮೋದಿಯನ್ನು ಕೊಲ್ಲಲು ಕಳುಹಿಸಲಾಗಿತ್ತು" ಎಂದು ನುಡಿದು ಬಿಟ್ಟನಲ್ಲ..ಅಲ್ಲಿಗೆ ಕಾ೦ಗ್ರೆಸ್ ಗೆ ಮತ್ತೊ೦ದು ಮುಖಭ೦ಗ...!
ಈ ಮಧ್ಯೆ ಹಗಲೂ ರಾತ್ರಿಯೆನ್ನದೆ ಗುಜರಾತ್‌ನಲ್ಲಿ ಏಕೆ ಕೋಮು ಹಿಂಸಾಚಾರಗಳು ನಡೆಯುತ್ತವೆ ಎ೦ಬ೦ತೆ ಮಾತನಾಡುತ್ತಿರುವ ಕಾ೦ಗ್ರೆಸ್ ಪಕ್ಷದ ನಾಯಕಮಣಿಗಳ ಮಾತನ್ನು ಸೀರಿಯಸ್ಸಾಗಿ ತೆಗೆದು ಕೊಳ್ಳೋಣವಾ ?
ಭಾರತದಲ್ಲಿ ನಡೆದಿದ್ದು ಗುಜರಾತ್ ಹಿಂಸಾಚಾರವೊಂದೆಯೇ? ... ಹಳೆಯ ಪತ್ರಿಕೆಗಳ ದಾಖಲೆಗಳನ್ನು ನೋಡಿ ನಿಮಗೇ ನಿಜಸ೦ಗತಿ ತಿಳಿಯುತ್ತದೆ...,
1947 ರಿಂದೀಚೆಗೆ ಇಂಥ ನೂರಾರು ಕೋಮು ಹಿಂಸಾಚಾರಗಳು ನಡೆದಿದ್ದವು. ಸುಮಾರು 4 ಸಾವಿರಕ್ಕೂ ಅಮಾಯಕ ಜನರು ಪ್ರಾಣ ಕಳೆದುಕೊಂಡ ಸಿಖ್ ಹತ್ಯಾಕಾಂಡ (ಇ೦ದಿರಾ ಹತ್ಯೆ ಯಾದಾಗ ) ಕೂಡಾ ನಡೆದಿತ್ತು ( ಇದನ್ನು ಕಾ೦ಗ್ರೆಸ್ ನೆನೆಸಿಕೊಳ್ಳಲೂ ಭಯಪಡುತ್ತದೆ )...ಸಿಕ್ಖರ ಓಟುಗಳು ಕರಗಿಯಾವಲ್ಲ ) .ಆ ಘಟನೆಯಲ್ಲೂ ಮೋದಿ ಇದ್ದನೇ ? ನಾವಿನ್ನೂ ಕಂಡು ಹುಡುಕಲಾಗಿಲ್ಲ, ಯಾವ ಮಾಧ್ಯಮಗಳೂ ಇದುವರೆಗೆ ಸಿಖ್ ಹತ್ಯಾಕಾಂಡದ ಬೆನ್ನು ಬಿದ್ದಿಲ್ಲ ?!
ಇನ್ನು ಬೋಫೋರ್ಸ್, ಆ೦ಡರ್‌ಸನ್, ಕಾಮನ್ವೆಲ್ತ್, ಕೋಲ್ ಗೇಟ್ ಹಗರಣ ಗಳ ಬಗ್ಗೆ ಪ್ರಶ್ನೆಯೆತ್ತಿದರೆ ಕಾ೦ಗ್ರೆಸ್ ಗೆ ಕೆ೦ಗಣ್ಣು....ಇನ್ನು ಭಾರತದ ಅಳಿಯ " ರಾಬರ್ಟ ವಾಧ್ರಾ " ನ ಭೂಕಬಳಿಕೆ ಮತ್ತು ಇತರ ಹಗರಣಗಳ ಬಗ್ಗೆ ಕಾ೦ಗ್ರೆಸ್ ನಲ್ಲಿ ಉತ್ತರವಿರಲಿಲ್ಲ!!
ಮೋದಿಯಲ್ಲೊಬ್ಬ ಕೊಲೆಗಡುಕನನ್ನು ಹುಡುಕುವ ಪ್ರಯತ್ನ ಮಾಡಿ ನೋಡಿ...ನಿಮಗೆ ಯಶಸ್ಸು ಯಶಸ್ಸು ಸಿಗುವುದಿಲ್ಲ. " ಸೊಹ್ರಾಬುದ್ದೀನ್ ಶೇಖ್ " ಎಂಬ 'ಹುತಾತ್ಮ'ನ ವಿಷಯ ವನ್ನೇ ತೆಗೆದುಕೊಳ್ಳಿ . ಓಹೋ, ಇಲ್ಲಿ ಸಿಕ್ಕಿಬಿದ್ದರು ಮೋದಿ ಅವರ ಗೃಹ ಸಚಿವನೇ ಸಿಕ್ಕಿಬಿದ್ದಿದ್ದಾನೆ ನೋಡಿ.. ಕನಿಷ್ಠ ಈ ವಿಷಯದಲ್ಲಾದರೂ ಅಮಿತ್ ಶಾ ನುಣುಚಿಕೊಳ್ಳಲು ಸಾಧ್ಯವಿರಲಿಲ್ಲ. ಜತೆಗೆ ಸುಪ್ರೀಂಕೋರ್ಟ್ ಕೂಡಾ ತನಿಖೆಗೆ ಆದೇಶ ನೀಡಿತ್ತು. ಆದರೆ ಇಲ್ಲೂ ನಿರಾಶೆ .... ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ. ಏಕೆಂದರೆ 5 ರಾಜ್ಯಗಳಿಗೆ ಬೇಕಾದ ಭಯೋತ್ಪಾದಕ ಈ " ಸೊಹ್ರಾಬುದ್ದೀನ್" . ಸೊಹ್ರಾಬುದ್ದೀನ್ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಹಾಗೂ ಕುಖ್ಯಾತ ಭಯೋತ್ಪಾದಕ ಎಂಬುದು ಅಮೆರಿಕ, ಭಾರತ ಹಾಗೂ ವಿಶ್ವಸಂಸ್ಥೆಯ ಮಾಹಿತಿ ಮೂಲಕ ತಿಳಿದು ಬ೦ದಿದೆ ( ಅ೦ತರ್ಜಾಲದಲ್ಲಿ ಇದರ ಬಗ್ಗೆ ಮಾಹಿತಿ ಇದೆ ) . ಒಮ್ಮೆ 40 ಎಕೆ-47 ರೈಫಲ್‌ಗಳ ಜತೆ ಸಿಕ್ಕಿಬಿದ್ದಿದ್ದ ಅವನನ್ನು ಪೋಲೀಸರು ಎನ್ಕೌಂಟರ್‌ನಲ್ಲಿ ಕೊಂದುಹಾಕಿದ್ದರು.
ಇದೇನೆ ಇರಲಿ...
ಕಾ೦ಗ್ರೆಸ್ ಪಕ್ಷದ ಎ೦ಜಲು ತಿನ್ನುತ್ತಾ ...ಕಳೆದ ಎಂಟು ವರ್ಷಗಳಿಂದ ಮೋದಿಯನ್ನು ಕ್ರಿಮಿನಲ್ ಎಂದು ಚಿತ್ರಿಸುತ್ತಾ ಬಂದಿದ್ದ ಮಾಧ್ಯಮಗಳಿಗೆ ಅದು ನಿಜವೆಂದು ಮನವರಿಕೆ ಮಾಡಿಕೊಡಲು ಮಾತ್ರ ಸಾಧ್ಯವಾಗಿಲ್ಲ, ಇದೆಲ್ಲಕ್ಕಿ೦ತ ಮಿಗಿಲಾಗಿ ಸತತ ಮೊರು ಅವಧಿಗೆ ಮುಖ್ಯ ಮ೦ತ್ರಿ
ಯಾದರೂ ನರೇ೦ದ್ರ ಮೋದಿಗೆ ಯಾವುದೇ ಬ್ರಷ್ಟಾಚಾರದ , ಅನಾಚಾರದ ಆರೋಪ ಮೆತ್ತಿಕೊ೦ಡಿಲ್ಲ.
ಆತನ ಮ೦ತ್ರಿ ಮ೦ಡಲದ ಯಾವ ಮ೦ತ್ರಿಗಳ ಮೇಲೂ ಗ೦ಭೀರ ಆರೋಪಗಳಿಲ್ಲ...ನಮ್ಮ ಮು೦ದಿನ ಪ್ರಧಾನಿಯಾಗಲು ಇದಕ್ಕಿ೦ತ ಅರ್ಹತೆ ಬೇಕೆ...?
ಅದಕ್ಕೇ ಯಾವ ಮಾಧ್ಯಮಗಳು ಮೋದಿಯನ್ನು ಇದುವರೆಗೂ ಕ್ರಿಮಿನಲ್ ಎಂದು ಚಿತ್ರಿಸುತ್ತಾ ಬಂದವೋ ಆ ಮಾಧ್ಯಮಗಳಿಗೆ ಮೋದಿಯೊಬ್ಬ ಕ್ರಿಮಿನಲ್ ಅಲ್ಲ ಹಾಗೂ ಆತ ಈ ದೇಶದ ಪ್ರಧಾನಿಯಾಗಲು ಅರ್ಹ ಎಂದು ಮನವರಿಕೆ ಮಾಡಿಕೊಡಬೇಕಾದ ಹೊಣೆಗಾರಿಕೆ ಮಾತ್ರ ಖಂಡಿತಾ ಇದೆ....