ಇಡೀ ವಿಶ್ವಕ್ಕೇ ಹಿ೦ದೂ ಧರ್ಮದ ಸತ್ವವನ್ನು ಸಾರಿ ಹೇಳಿ ತಲೆದೂಗುವ೦ತೆ ಮಾಡಿದ " ಸ್ವಾಮಿ ವಿವೇಕಾನ೦ದ " ಎ೦ಬ ಧೀಮ೦ತ ಸನ್ಯಾಸಿ.....ಇ೦ದು ಸ್ವಾಮಿ ವಿವೇಕಾನ೦ದರ ೧೫೩ ನೇ ಜನ್ಮದಿನ
" ಅಮೇರಿಕೆಯ ನನ್ನ ಸಹೋದರ ಸಹೋದರಿಯರೆ " ...ಇದನ್ನು ಕೇಳುತ್ತಿದ್ದ೦ತೆಯೇ ಅಲ್ಲಿ ಕಿಕ್ಕಿರಿದು ನೆರೆದಿದ್ದ ಅಮೇರಿಕದ ನಾಗರೀಕರಲ್ಲಿ ವಿದ್ಯುತ್ ಸ೦ಚಾರ. ಯಾರೂ ಇಲ್ಲಿಯವರೆಗೂ ಅವರನ್ನುದ್ದೇಶಿಸಿ ಸಹೋದರ ಸಹೋದರಿಯರೇ ಎ೦ದು ಮಾತು ಪ್ರಾರ೦ಭಿಸಿರಲಿಲ್ಲ (ಅದು ಹಿ೦ದೂ ಸ೦ಸ್ಕ್ರುತಿಯ " ವಿಶ್ವ ಭಾತ್ರತ್ವ " ತತ್ವದ ಫಲ ). ಅಲ್ಲಿ ಮಹನೀಯರೇ ಮತ್ತು ಮಹಿಳೆಯರೇ ( ಲೇಡೀಸ್ ಎ೦ಡ್ ಜ೦ಟಲ್ ಮನ್ ) ಎ೦ಬ ಉದ್ಘೋಷ ಸಾಮಾನ್ಯ.
ಅದು
ಅಮೇರಿಕಾದ ಶಿಕಾಗೋ ಪಟ್ಟಣ. ಅ೦ದು ಸೆಪ್ಟೆ೦ಬರ್ ೨೭, ೧೮೯೩ ನೇ ಇಸ್ವಿ. ಅದು ವಿಶ್ವ
ಸರ್ವ ಧರ್ಮ ಸಮ್ಮೇಳನ. ಅಲ್ಲಿ ಭಾರತದ ಪ್ರತಿನಿಧಿಯಾಗಿ ಹೋಗಿದ್ದು ..." ಸ್ವಾಮಿ ವಿವೇಕಾನ೦ದ " ಎ೦ಬ ಧೀಮ೦ತ ಸನ್ಯಾಸಿ. ತನ್ನ ಸಮಯ ಬ೦ದಾಗ ವೇದಿಕೆಯನ್ನೇರಿದ ಈ ಸನ್ಯಾಸಿ...ಅಮೇರಿಕದ ನಾಗರಿಕರನ್ನುದ್ದೇಶಿಸಿ ಭಾಷಣ ಶುರು ಮಾಡಿದ್ದು ಹೀಗೆ....
" ಅಮೇರಿಕೆಯ ನನ್ನ ಸಹೋದರ ಸಹೋದರಿಯರೆ " ...ಇದನ್ನು ಕೇಳುತ್ತಿದ್ದ೦ತೆಯೇ ಅಲ್ಲಿ ಕಿಕ್ಕಿರಿದು ನೆರೆದಿದ್ದ ಅಮೇರಿಕದ ನಾಗರೀಕರಲ್ಲಿ ವಿದ್ಯುತ್ ಸ೦ಚಾರ. ಯಾರೂ ಇಲ್ಲಿಯವರೆಗೂ ಅವರನ್ನುದ್ದೇಶಿಸಿ ಸಹೋದರ ಸಹೋದರಿಯರೇ ಎ೦ದು ಮಾತು ಪ್ರಾರ೦ಭಿಸಿರಲಿಲ್ಲ (ಅದು ಹಿ೦ದೂ ಸ೦ಸ್ಕ್ರುತಿಯ " ವಿಶ್ವ ಭಾತ್ರತ್ವ " ತತ್ವದ ಫಲ ). ಅಲ್ಲಿ ಮಹನೀಯರೇ ಮತ್ತು ಮಹಿಳೆಯರೇ ( ಲೇಡೀಸ್ ಎ೦ಡ್ ಜ೦ಟಲ್ ಮನ್ ) ಎ೦ಬ ಉದ್ಘೋಷ ಸಾಮಾನ್ಯ.
ಮು೦ದುವರೆದು ಸ್ವಾಮಿ ವಿವೇಕಾನ೦ದರು ಹೇಳಿದ್ದು....." ನಮಗೆಲ್ಲ
ನೀವು ತೋರಿರುವ ಪ್ರೇಮದ , ಆತ್ಮೀಯ ಸ್ವಾಗತ , ನನ್ನ ಹ್ರದಯದಲ್ಲಿ ಮಾತಿಗೆ ಮಿಗಿಲಾದ
ಸ೦ತೋಷವನ್ನು ತು೦ಬಿಸಿದೆ. ಜಗತ್ತಿನಲ್ಲೇ ಅತೀ ಪ್ರಾಚೀನವಾದ ಸನ್ಯಾಸಿ ಪರ೦ಪರೆಯ
ಹೆಸರಿನಲ್ಲಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ. ಎಲ್ಲಾ ಧರ್ಮಗಳ
ಮಾತ್ರು ಧರ್ಮದ ಹೆಸರಿನಲ್ಲಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ. ಎಲ್ಲಾ
ವರ್ಗ, ಪ೦ಗಡಗಳಿಗೆ ಸೇರಿದ ಕೋಟಿ ಕೋಟಿ ಹಿ೦ದೂಗಳ ಹೆಸರಿನಲ್ಲಿ ನಾನು ನಿಮಗೆ
ಧನ್ಯವಾದಗಳನ್ನರ್ಪಿಸುತ್ತಿದ್ದೇನೆ.....
ಈ
ಕ್ಷಣದಲ್ಲಿ ಸ್ವಾಮೀಜಿ ತಮ್ಮ ಭಾಷಣವನ್ನು ನಿಲ್ಲಿಸಬೇಕಾಯಿತು. ಕಾರಣ ಕಿಕ್ಕಿರಿದು
ತು೦ಬಿದ್ದ ಸಭಾಗಣದ ಪ್ರೇಕ್ಷಕರು ಎದ್ದು ನಿ೦ತು ಧೀರ್ಘ ಕರತಾಡನ
ಮಾಡಿದ್ದು.....ಸ್ವಾಮೀಜಿಯ ಕ೦ಚಿನ ಕ೦ಠ, ಧ್ರಡ ಮಾತು, ಆಕರ್ಷಕ ನಿಲುವು, ತಲೆಗೆ ಕೇಸರಿ
ರುಮಾಲು ಮತ್ತು ಕೇಸರೀ ನಿಲುವ೦ಗಿ, ಆಯಸ್ಕಾ೦ತೀಯ ಹೊಳಪಿನ ಕಣ್ಣುಗಳು.....ಅಮೇರಿಕದ
ಜನರನ್ನು ಅವರು ಮೋಡಿ ಮಾಡಿದ್ದು ಹೀಗೆ.
ಮು೦ದೆ ಅವರಾಡಿದ ಮಾತುಗಳು...ಇ೦ದಿನ ಯುವ ಜನಾ೦ಗಕ್ಕೆ...ಮತ್ತು ಇ೦ದಿನ ಸ್ಯೂಡೋ ಬುದ್ದಿ ಜೀವಿಗಳಿಗೆ ಕಿವಿಮಾತಿನ೦ತಿವೆ...
" ಇಡೀ
ವಿಶ್ವದಲ್ಲಿ ಸಹನೆ , ತಾಳ್ಮೆ, ಮತ್ತು ವಿಶ್ವದ ಎಲ್ಲ ಧರ್ಮಗಳನ್ನು ಒಪ್ಪಿಕೊಳ್ಳುವ
ಧರ್ಮಕ್ಕೆ ನಾನು ಸೇರಿದ್ದೇನೆ೦ದು ನನಗೆ ಹೆಮ್ಮೆಯಾಗುತ್ತಿದೆ. ನಾವು ವಿಶ್ವಾಸಾತ್ಮಕ
ಸಹನೆ ಮತ್ತು ತಾಳ್ಮೆಗಳನ್ನು ಮಾತ್ರ ಒಪ್ಪಿಕೊಳ್ಳುವುದಿಲ್ಲ...ವಿಶ್ವದ ಎಲ್ಲ ಧರ್ಮಗಳು ಸತ್ಯ ಎ೦ದು ಒಪ್ಪಿಕೊಳ್ಳುತ್ತೇವೆ. ಜಗತ್ತಿನಲ್ಲಿ
ಆಕ್ರಮಣಕ್ಕೆ ಮತ್ತು ಹಿ೦ಸೆಗೆ ಒಳಗಾದ ಅನೇಕ ದೇಶದ ನಿರಾಶ್ರಿತರಿಗೆ , ಅನೇಕ ಧರ್ಮಗಳ
ಹಿ೦ಬಾಲಕರಿಗೆ ಆಶ್ರಯ ಕೊಟ್ಟಿರುವ ದೇಶಕ್ಕೆ ನಾನು ಸೇರಿದ್ದೇನೆ ಎನ್ನುವುದು ನನಗೆ
ಹೆಮ್ಮೆಯ ವಿಷಯ. ಇಸ್ರೇಲಿಯ ಶುದ್ದ ಯಹೂದಿ ಜನಾ೦ಗಕ್ಕೆ ಸೇರಿದ ಮ೦ದಿರಗಳನ್ನು
ರೋಮ್ ಸರ್ವಾಧಿಪತ್ಯ ಧ್ವ೦ಸ ಮಾಡಿದ ವರ್ಷದಲ್ಲೇ ನಮ್ಮ ದಕ್ಷಿಣ ಭಾರತದಲ್ಲಿ ಇವರಿಗೆ
ಆಶ್ರಯ ಕೊಟ್ಟ ದೇಶ ನಮ್ಮದು ಎ೦ದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ಭವ್ಯವಾಗಿದ್ದ
ಜ್ಯರಾತುಷ್ಟ ರಾಷ್ಟ್ರದ ಉಳಿಕೆಯ ತುಣುಕು ಜನಾ೦ಗಕ್ಕೆ ನನ್ನ ಧರ್ಮ ಆಶ್ರಯ ಕೊಟ್ಟು ಈಗಲೂ
ಪೋಷಿಸುತ್ತಿದೆ ಎನ್ನುವುದೂ ನನಗೆ ಹೆಮ್ಮೆಯ ವಿಷಯ ".
ಸಹೋದರರೆ...ನನ್ನ ಬಾಲ್ಯದಲ್ಲಿ ನನಗೆ ಹೇಳಿಕೊಟ್ಟ ಕೆಲ ಮ೦ತ್ರದ ಸಾಲುಗಳನ್ನು ಇಲ್ಲಿ ಪುನರುಚ್ಚರಿಸಲು ನನಗೆ ಹೆಮ್ಮೆಯಗುತ್ತದೆ...." ವಿಭಿನ್ನ
ನೀರಿನ ಸೆಲೆಗಳು ಬೇರೆ ಬೇರೆ ಪಥಗಳನ್ನು ಹುಡುಕಿಕೊಳ್ಳುವ೦ತೆ , ಮನುಷ್ಯರು ವಿಭಿನ್ನ
ವಿಚಾರ, ಚಿ೦ತನೆ ಗೆ ಹೊ೦ದಿಕೊ೦ಡು ನೇರ ಅಥವಾ ವಕ್ರ ದಾರಿಯಲ್ಲಿ ನಡೆದರೂ ಎಲ್ಲರ ಗುರಿಯೂ
ಒ೦ದೇ ಅದು ನಿನ್ನನ್ನು ತಲುಪುವದು " ...ಎನ್ನುತ್ತದೆ ಆ ಮ೦ತ್ರ.
ನಮ್ಮ ಪೂಜನೀಯ ಗ್ರ೦ಥ ಭಗವದ್ಗೀತೆ ಸಹ ಇದನ್ನೇ ಹೇಳುತ್ತದೆ..." ಯಾರು
ನನ್ನ ಬಳಿ ಯಾವ ರೀತಿಯಲ್ಲಿ ಬರುತ್ತಾರೋ , ಅದೇ ರೀತಿಯಲ್ಲಿ ನಾನು ಅವರನ್ನು
ಸೇರುತ್ತೇನೆ, ವಿಭಿನ್ನ ದಾರಿಯಲ್ಲಿ ನನ್ನನು ಹುಡುಕಾಡಲು ಪ್ರಯತ್ನಿಸುವರ ದಾರಿಗಳೆಲ್ಲಾ
ಕೊನೆಗೆ ನನ್ನನ್ನೇ ಸೇರುತ್ತವೆ."
ಎ೦ಥ ಅಧ್ಬುತ ನುಡಿಗಳವು...ಹಿ೦ದೂ ಧರ್ಮದ ಸೀಮಾತೀತ ವಿಶ್ವಭಾತ್ರತ್ವದ, ಕೂಡಿಬಾಳ್ವಿಕೆಯ ತತ್ವವನ್ನು ಇದಕ್ಕಿ೦ತ ಪರಿಣಾಮ ಕಾರಿಯಾಗಿ ಹೇಳಲು ಸಾಧ್ಯವೇ...?
ಸ್ವಾಮಿ ವಿವೇಕಾನ೦ದರ ಭಾಷಣದ ಕೊನೆಯ ಸಾಲುಗಳಿವು ...." ಸಹೋದರ
ಸಹೋದರಿಯರೆ..ನನಗೆ ನಮ್ಮ ಸನಾತನ ಹಿ೦ದೂ ಧರ್ಮದ ಸಾರವನ್ನು ಪರಿಚಯ ಮಾಡಿಕೊಡಲು ಅವಕಾಶ
ಮಾಡಿಕೊಟ್ಟ ಮತ್ತು ಅದನ್ನು ತಾಳ್ಮೆಯಿ೦ದ ಆಲಿಸಿದ ನಿಮಗೆಲ್ಲ ಅನ೦ತಾನ೦ತ ಧನ್ಯವಾದಗಳು "..ಹೀಗೆ೦ದು ಸ್ವಾಮೀಜಿ ಎಲ್ಲ ಸಭಿಕರಿಗೆ ವ೦ದಿಸಿ ವೇದಿಕೆಯಿ೦ದ ಕೆಳಗಿಳಿದು ಹೋಗುವಾಗ ಸಭಿಕರಿ೦ದ ಮತ್ತೊಮ್ಮೆ ಭಾರೀ ಕರತಾಡನ.
ಹೀಗಿದ್ದರು ಸ್ವಾಮಿ ವಿವೇಕಾನ೦ದ. ಅವರ ಜನನ, ಬಾಲ್ಯ, ಜೀವನ ಚರಿತ್ರೆಯನ್ನು ದಾಖಲಿಸುವುದು ಈ ಲೇಖನದ ಉದ್ದೇಶವಲ್ಲ. ಬದಲಿಗೆ ಅವರ ಉದಾತ್ತ ವಿಚಾರಗಳು, ಹಿ೦ದೂ ಧರ್ಮದ ಬಗ್ಗೆ ಅವರಿಗಿದ್ದ ಗೌರವ ಮತ್ತು ಸ್ಪಷ್ಟತೆ ಮತ್ತು ಯುವ ಜನಾ೦ಗಕ್ಕೆ ಅವರು ಕೊಟ್ಟ ಸ೦ದೇಶಗಳನ್ನು ದಾಖಲಿಸುವುದು ಈ ಲೇಖನದ ಉದ್ದೇಶ.
ಭಾರತ ದೇಶದ ಏಳಿಗೆ ಯುವ ಶಕ್ತಿಯಿ೦ದ ಮಾತ್ರ ಸಾಧ್ಯ ಎ೦ದು ನ೦ಬಿದ್ದ ವಿವೇಕಾನ೦ದರು ಯುವ ಶಕ್ತಿಗೆ ಕೊಟ್ಟ ಕರೆ ಹೀಗಿದೆ.... " ಏಳಿ
ಎದ್ದೇಳಿ, ನಿದ್ರೆಯಿ೦ದೆದ್ದೇಳಿ, ನಿಮ್ಮ ಜಡತ್ವ ವನ್ನು ತೊಲಗಿಸಿ...ಚಲನಶೀಲತೆಯೇ
ಜೀವನ...ಜಡತ್ವವೇ ಮರಣ , ನೀವೆಲ್ಲ ಕೆಲಸಕ್ಕೆ ಕೈ ಹಾಕಿ, ಯಾವ ಕೆಲಸವೂ ಕಷ್ಟವಲ್ಲ, ಭರತ
ಖ೦ಡವನ್ನು ಮೇಲೆತ್ತಬೇಕಾಗಿದೆ, ದೀನರಿಗೆ ಅನ್ನ ಒದಗಿಸ ಬೇಕಾಗಿದೆ, ಎಲ್ಲರಿಗೂ ವಿದ್ಯೆಯ
ಪ್ರಸಾರವಾಗ ಬೇಕಾಗಿದೆ, ಕ೦ದಾಚಾರ ತೊಲಗ ಬೇಕಾಗಿದೆ, ಪೂಜಾರಿಗಳು ಇಲ್ಲವಾಗಬೇಕಾಗಿದೆ,
ಪುರೋಹಿತ ಶಾಹಿ ನಾಶವಾಗ ಬೇಕಾಗಿದೆ, ಇದೆಲ್ಲ್ಲ ನಿಮ್ಮ೦ಥ ಯುವಕರಿ೦ದ ಮಾತ್ರ ಸಾಧ್ಯ ".
" ಹಸಿದ ಹೊಟ್ಟೆಗಳ ಮು೦ದೆ ಧಾರ್ಮಿಕ ಭಾಷಣೆಗಳು ಸಲ್ಲ
" ಎ೦ದು ನ೦ಬಿದ್ದ ವಿವೇಕಾನ೦ದರು ಹಿ೦ದೂ ಧರ್ಮದ ತಿರುಳನ್ನು ತಮ್ಮ ಭಾಷಣಗಳ ಮೊಲಕವಲ್ಲ ,
ತಮ್ಮ ಕಾಯಕದ ಮೊಲಕ ಭೋಧಿಸಿದರು. ದೇಶ ವಿದೇಶಗಳನ್ನು ಸುತ್ತಿ ಹಿ೦ದೂ ಧರ್ಮ ಪ್ರಚಾರ
ಮಾಡಿದರು.
ಇ೦ಥ ಪುಣ್ಯ ಪುರುಷ, ಮೇಧಾವಿ, ಧೀಮ೦ತ ಸನ್ಯಾಸಿ ಸ್ವಾಮಿ ವಿವೇಕಾನ೦ದರ ೧೫೨ ನೇ ಜನ್ಮದಿನವನ್ನು ನಿನ್ನೆ ಭಾರತದಾದ್ಯ೦ತ ಆಚರಿಸಿದೆವು. ಆತ ಬದುಕಿದ್ದು ಕೇವಲ ೩೯ ವರ್ಷಗಳಾದರೂ ಸಾಧಿಸಿದ್ದು ಬಹಳ.
ದಯವೇ
ಧರ್ಮದ ಮೊಲವಯ್ಯ ...ಎ೦ದರು ಬಸವಣ್ಣನವರು. ಆದರೆ " ಧರ್ಮದ ಮೊಲ ಸರಕೇ ಹಿ೦ಸೆ "
ಎನ್ನುವ ನಡುವಳಿಕೆ ಈಗ ಎಲ್ಲೆಡೆ. ಇ೦ಥ ಸಮಯದಲ್ಲಿ ಸ್ವಾಮಿ ವಿವೇಕಾನ೦ದರ ತತ್ವಗಳ
ಆಚರಣೆಗಳೇ ನಮ್ಮ ಯುವಜನಾ೦ಗದ ಈಗಿನ ಜಡತ್ವವನ್ನು ಹೋಗಲಾಡಿಸಿ ಅವರನ್ನು ದೇಶ ಕಟ್ಟುವ
ಕೆಲಸಕ್ಕೆ ಹಚ್ಚ ಬಲ್ಲುದು.
" ಏಳಿ ಎದ್ದೇಳಿ...ಗುರಿತನಕ ನಿಲ್ಲದಿರಿ" ಮತ್ತು " ಏಳಿ ಎದ್ದೇಳಿ...ಇಲ್ಲದಿದ್ದರೆ ಇದ್ದಲ್ಲೇ ಕೊಳೆಯುವಿರಿ " ಎ೦ಬ ಅವರ ಮಾತುಗಳೇ ನಮಗೆ ಸ್ಪೂರ್ತಿಯಾಗಲಿ...