Saturday, May 17, 2014

" ಬಿ.ಜೆ.ಪಿ "  ಮತು " ನರೇ೦ದ್ರ  ಮೋದಿ " ಯ ಈ ಭರ್ಜರೀ ಗೆಲುವಿಗೆ ಕಾರಣ.........ಹಿ೦ದೂಗಳ ಹತಾಷೆ  ಮತ್ತು  " ನಮೋ " ಪಠಿಸಿದ ಅಭಿವ್ರದ್ದಿಯ ಮ೦ತ್ರ...




ಹಿಂದುಗಳ ಹತಾಶೆಯ ಕಾರಣ:-


ಎಲ್ಲಾಡೋಂಗಿ ಜಾತ್ಯಾತೀತ ಪಕ್ಷಗಳು ಅಲ್ಪಸಂಖ್ಯಾತರ ಪಕ್ಷಪಾತಿ ಯಾಗಿರುವುದು.

ನೆನಪಿರಲಿ....ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣದಿಂದ ದೇಶದ ಭದ್ರತೆಗೆ ಅಪಾಯ ವಿತ್ತು  ( ಭಯೋತ್ಪಾದಕರು , ಬಾಂಗ್ಲಾವಲಸಿಗರಿಗರ ಬಗ್ಗೆ ಮ್ರದು ಧೋರಣೆ ). 

ಇದಲ್ಲದೇ..... ಕುಟುಂಬ ಯೋಜನೆ ಪಾಲಿಸದ ಮುಸ್ಲಿಮರು (ಈಗವರು ಖ೦ಡಿತ ಅಲ್ಪಸ೦ಖ್ಯಾತರಲ್ಲ ), ಹಿ೦ದುಗಳಿಗೆ ಪೂಜನೀಯವಾದ ಗೋ ಹತ್ಯೆಗೆ ಪ್ರೊತ್ಸಾಹ,  ದೇವಾಲಯಗಳ ಸರಕಾರೀಕರಣ, ವಿದೇಶೀ ಮತ ಪ್ರಚಾರಕ್ಕೆ ಹಾಗೂ ಮತಾಂತರಕ್ಕೆ ಪ್ರೇರೇಪಣೆ, ಜಾತಿರಾಜಕೀಯಕ್ಕೆ ಪ್ರೋತ್ಸಾಹ, ಮುಸ್ಲಿಮರಿಗೆ ಕಾನೂನಿನಲ್ಲಿ ರಿಯಾಯಿತಿ, ಸಂವಿಧಾನ ಬಾಹಿರ ಯಾತ್ರಾಸಬ್ಸಿಡಿ, ನಾಲ್ಕುಮದುವೆಗೆ ಅವಕಾಶ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ನಿರಾಶ್ರಿತ ಹಿಂದೂಗಳ ಅನಾದರ ಇವೆಲ್ಲವೂ ಧರ್ಮದ್ರೋಹೀ ಜಾತ್ಯಾತೀತ ಪಕ್ಷಗಳು ಈ ದೇಶಕ್ಕೆ ಹಾಗೂ ಹಿಂದೂಗಳಿಗೆ ಮಾಡಿರುವ ಮಾಡುತ್ತಿರುವ ಅನ್ಯಾಯವಾಗಿದೆ. 

ಇವುಗಳನ್ನು ಸರಿಪಡಿಸುವುದಕ್ಕೋಸ್ಕರವೇ ಇ೦ದು ಹಿ೦ದೂಗಳು  ಬಿಜೆಪಿಗೆ ಮತ ನೀಡಿದ್ದಾರೆ. ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುತ್ತಿರುವ ಹಿಂದುಗಳಿಗೆ ( ಬಹುಸಂಖ್ಯಾತ )  ನ್ಯಾಯ ಒದಗಿಸುವ ಜವಾಬ್ದಾರಿ ಬಿಜೆಪಿಗೆ ಇದೆ. 

ಕಾಂಗ್ರೇಸ್ ತನ್ನ ಓಟುಬ್ಯಾಂಕಿಗಾಗಿ ಹಿಂದುಗಳ ಮೇಲೆ ಅನ್ಯಾಯ ಮಾಡಿದೆ. ಆದರೆ ಬಿಜೆಪಿ ಯಾರಿಗೂ ಅನ್ಯಾಯ ಮಾಡುವುದು ಬೇಡ . ಹಿಂದುಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ. ಅದನ್ನು ಮರೆತಿದ್ದರಿಂದಲೇ ಕಳೆದ ಎರಡು ಅವಧಿಯಲ್ಲಿ ಅಧಿಕಾರದಿಂದ ಹೊರಕುಳಿತುಕೊಳ್ಳ ಬೇಕಾಯಿತೆನ್ನುವುದು ಬಿಜೆಪಿಗರಿಗೆ ನೆನಪಿರಲಿ. ಹಿಂದೆ ಮಾಡಿದ ತಪ್ಪು ಮುಂದೆಮಾಡದಿರಲಿ. 

ವಾಜಪೇಯಿ ಅಭಿವೃದ್ಧಿ ಮಾಡಿದ್ದರು.  ಆದರೆ ಹಿಂದೂಗಳಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ ರಾಮಮಂದಿರ ಮರೆತರು. ಗೋಹತ್ಯೆ ನಿಷೇಧ ಆಗಲಿಲ್ಲ , ಹಜ್ ಸಬ್ಸಿಡಿ ನಿಲ್ಲಲಿಲ್ಲ,  ಇವುಗಳಿಂದಾಗಿಯೇ ಹಿಂದುಗಳು ಬಿಜೆಪಿಯಿಂದ ಭ್ರಮನಿರಸನವಾಗಿ ಮತದಾನದಿಂದ ದೂರ ಉಳಿದರು. ಆದರೆ ಅಲ್ಪಸಂಖ್ಯಾತರು ತಮ್ಮ ಎಂದಿನ ರೂಢಿಯ೦ತೆ ತಮ್ಮ  ಪಕ್ಷಪಾತಿ ಕಾಂಗ್ರೇಸನ್ನೇ ಬೆಂಬಲಿಸಿದರು. ಇದರಿ೦ದ ಮತ್ತೆ ಕಾ೦ಗ್ರೆಸ್ ಅಧಿಕಾರಕ್ಕೆ ಬ೦ದಿತು.

ನಮ್ಮ ದೇಶ ನಿಜವಾದ ಅರ್ಥದಲ್ಲಿ  ಹಿಂದೂಸ್ತಾನ  ವಾಗಬೇಕು ( ಸ್ವಾಮಿ ವಿವೇಕಾನ೦ದರ ವಾಣಿಯ೦ತೆ ಹಿ೦ದೂ ಎ೦ದರೆ ಸಕಲ ಧರ್ಮಗಳಿಗೆ ಸಮಾನ ಮನ್ನಣೆ ಕೊಡುವ ವಿಶ್ವದ ಏಕೈಕ ಧರ್ಮ...ವಸುದೈವ ಕುಟು೦ಬಕಮ್ ಅದರ ಮೊಲ ಮ೦ತ್ರ  )
ನಂತರದ ಅಪೇಕ್ಷೆ ಆರ್ಥಿಕ ಪ್ರಗತಿ. ಇದನ್ನು ಬಿಜೆಪಿ ಮರೆತರೆ ಕಡೆಗಣಿಸಿದರೆ, ಹಿಂದೂಗಳು ಹೇಗೂ ನಮಗೇ ಮತನೀಡುತ್ತಾರೆ ನಾವು ಅಲ್ಪಸಂಖ್ಯಾತರನ್ನು ಸ್ವಲ್ಪ ಬುಟ್ಟಿಗೆ ಕಾಕಿಕೊಳ್ಳುವ ಎನ್ನುವ ಯೋಚನೆ ಭಿಜೆಪಿ ಮಾಡಿದರೆ ಬಹುಸಂಖ್ಯಾತ ಹಿಂದುಗಳು ಬಿಜೆಪಿಯ ಮತಬುಟ್ಟಿಯಿಂದ ಖಂಡಿತವಾಗಿಯೂ ಹೊರಹೋಗಿ ನಿರ್ಲಿಪ್ತರಾಗುತ್ತಾರೆ ಇದನ್ನು ಪ್ರತಿಯೊಬ್ಬ ಬಿಜೆಪಿ ಪಾರ್ಟಿಯ ವ್ಯಕ್ತಿಯೂ ನೆನಪಿಡುವುದು ಸೂಕ್ತ . ಕಳೆದ ಎರಡು ಅವಧಿಯಲ್ಲಿ ಇದೇ ನಡೆದಿದೆ. ಎನ್ನುವುದನ್ನು ಬಿಜೆಪಿಗರು ಅರಿಯಲಿ. ಈ ಬಾರಿಯೂ ಬಿಜೆಪಿಯ ಹೆಸರಲ್ಲಿ ಚುನಾವಣೆಗೆ ಹೋಗಿದ್ದರೆ 150 ಸ್ಥಾನವನ್ನೂ ಬಿಜೆಪಿ ದಾಟುತ್ತಿರಲಿಲ್ಲ ಎನ್ನುವುದು ನೆನಪಿಡಿ. ಬಿಜೆಪಿ ಹಿಂದೂಗಳ ಅಭಿಮಾನವನ್ನು ಕಳೆದುಕೊಂಡಿದೆ. ಆದರೆ ನರೇಂದ್ರಮೋದಿ ಅದನ್ನು ಉಳಿಸಿಕೊಂಡಿದ್ದಾರೆ ಅವರೂ ಅಡ್ವಾಣಿಯ ಹಾದಿಹಿಡಿದು ಪಕ್ಷವನ್ನು ಅಧಃಪತನಕ್ಕೆ ಎಳೆಯದಿರಲಿ ಎನ್ನುವುದೇ ನಮ್ಮ ಆಶಯವಾಗಿದೆ.

ಹಿ೦ದೂಗಳ  ಬೇಡಿಕೆಗಳು :

೧) ಸರ್ವ ನಾಗರಿಕರಿಗೂ ಏಕರೂಪದ ಕಾನೂನು ಜಾರಿಗೆಬರಬೇಕು ( Uniform Civil Code) ಯಾವುದೇ ಮತೀಯ ಭಿನ್ನತೆ ಸ್ಥಳೀಯ ಭಿನ್ನತೆ ಇರಕೂಡದು ದೇಶಮೊದಲು. ( ಇದರಿಂದ ಮುಸ್ಲಿಮರಿಗೆ ಮಾತ್ರ ನೀಡುವ ಹಜ್ಯಾತ್ರಾ ಸಬ್ಸಿಡಿ ನಿಲ್ಲುತ್ತದೆ, ಅವರಿಗೆ ಮಾತ್ರ ರಿಯಾಯಿತಿ ಇರುವ ನಾಲ್ಕು ಮದುವೆ ಅವಕಾಶ ಹೋಗಬೇಕು, ಇದರಿಂದ ಎರಡು ಮೂರು ಮದುವೆ ಯಾಗಲು ಮುಸ್ಲಿಮರಾಗಿ ಮತಾಂತರ ಹೊಂದುವುದು ನಿಲ್ಲುತ್ತದೆ. ಕಾಶ್ಮೀರದ ಪ್ರತ್ಯೇಕ ಸಂವಿಧಾನ ಹೋಗುತ್ತದೆ ಮತ್ತು ಹೋಗಬೇಕು )
೨) ಗೋ ಹತ್ಯೆ ನಿಶೇಧ ಕಡ್ಡಾಯ ಆಗಬೇಕು ಹಾಗೂ ಮಾಂಸ ರಫ್ತನ್ನು ನಿಶೇಧಿಸಬೇಕು ವಿದೇಶಿಯ ನಾಲಿಗೆ ಚಪಲಕ್ಕಾಗಿ ಭಾರತದಲ್ಲಿ ಹುಟ್ಟಿದ ಪ್ರಾಣಿಗಳ ಜೀವತೆಗೆಯುವುದು ಈ ನೆಲದ ಸಂಸ್ಕೃತಿಗೆ ವಿರೋಧವಾಗಿದೆ.
೩) ಉಗ್ರಗಾಮಿನಿಗ್ರಹಕ್ಕೆ ಕಠಿಣ ಕಾನೂನು ಜಾರಿಗೆ ತರಬೇಕು.
೪) ಬಾಂಗ್ಲಾ ನುಸುಳುಕೋರರನ್ನು ಹೊರಹಾಕಬೇಕು
೫) ವಿಶ್ವದ ಯಾವುದೇ ಸ್ಥಳದಿಂದ ಆಶ್ರಯಕೋರಿಬರುವ ಭಾರತೀಯಮೂಲದ ಹಿಂದೂಗಳಿಗೆ ಹಿಂದೂಸ್ಥಾನದಲ್ಲಿ ಆಶ್ರಯಕಲ್ಪಿಸಿಕೊಳ್ಳಲು ಅವಕಾಶ ನೀಡಬೇಕು ಯಾಕೆಂದರೆ ಹಿಂದೂಗಳಿಗೆ ಮೂಲಸ್ಥಾನ ಭಾರತ ಮಾತ್ರವಾಗಿದೆ. ಬೇರಾವುದೇ ವಿದೇಶೀಮತೀಯರಿಗೆ ಇದಕ್ಕೆ ಅವಕಾಶನೀಡಬಾರದು.
೬) ವಿದೇಶೀ ಮತಪ್ರಚಾರಕ್ಕೆ ಹಾಗೂ ಮತಾಂತರಕ್ಕೆ ಕಡ್ಡಾಯ ನಿಶೇಧ ಹೇರಬೇಕು.
೭) ಹಿಂದೂ ಸ್ಥಾನದಲ್ಲಿ ಹುಟ್ಟಿ ಇಲ್ಲಿನ ಸಂಸ್ಕೃತಿ ಧರ್ಮವನ್ನು ಅವಮಾನಿಸುವವರಿಗೆ ಕಠಿಣ ಶಿಕ್ಷೆಯ ಕಾನೂನು ತರಬೇಕು.
೮) ಕಾಶ್ಮೀರೀ ಪಂಡಿತರಿಗೆ ಅವರಮೂಲನೆಲೆಯಲ್ಲಿ ಆಶ್ರಯಕಲ್ಪಿಸಿ ಎಲ್ಲಾರೀತಿಯ ಸಹಕಾರ ಒದಗಿಸಬೇಕು ದಂಗೆಯಲ್ಲಿ ಆಸ್ತಿ-ಪಾಸ್ತಿ ಬಿಟ್ಟು ಬಂದವರಿಗೆ ಅದನ್ನು ಪುನಃ ಹಿಂದಿರುಗಿಸಬೇಕು. ಅಕ್ರಮವಾಗಿ ಪಂಡಿತರ ಆಸ್ಥಿಯನ್ನು ಅನುಭವಸುತ್ತಿರುವವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
೯) ಜನಸಂಖ್ಯಾ ನಿಯಂತ್ರಣಕ್ಕೆ ಸೂಕ್ತ ರಾಷ್ಟ್ರೀಯ ನೀತಿ ಘೋಷಿಸಬೇಕು ಗರಿಷ್ಠ ಎರಡುಮಕ್ಕಳ ಮಿತಿಯನ್ನು ಎಲ್ಲಾಸಮುದಾಯದವರಿಗೂ ಕಡ್ಡಾಯಮಾಡಬೇಕು,

೧೦) ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಬೇಕು ಹಾಗೂ ದೇವಸ್ಥಾನದ ಸಂಪತ್ತು ಹಾಗೂ ಆದಾಯ ಕೇವಲ ಹಿಂದೂ ಧರ್ಮಪ್ರಚಾರಕ್ಕೆ ಮಾತ್ರಬಳಕೆಯಾಗುವಂತ ಕಾನೂನು ತರಬೇಕು. ಇಲ್ಲವೇ ಎಲ್ಲಾಧರ್ಮದ ಧಾರ್ಮಿಕ ಸ್ಥಳಗಳನ್ನೂ ಸರಕಾರೀಕರಣ ಗೊಳಿಸಬೇಕು.
೧೧) ಗಂಗಾಶುದ್ಧೀಕರಣ ಆಗಬೇಕು ಪುರಾಣ ಪ್ರಸಿದ್ಧ ಯಾತ್ರಾಸ್ಥಳಗಳನ್ನು ಮೇಲ್ದರ್ಜೆಗೆ ಏರಿಸಿ ಸೂಕ್ತ ಮೂಲಭೂತಸೌಲಭ್ಯ ಒದಗಿಸಿ ಉತ್ತಮ ಪ್ರವಾಸೀತಾಣಗಳನ್ನಾಗಿ ಮಾಡಬೇಕು.
೧೨) ದೇವಸ್ಥಾನ ಕದಿಯುವವರಿಗೆ ಜಾಮೀನು ರಹಿತ ಜೀವಾವಧಿ ಯಂತಹ ಕಠಿಣ ಶಿಕ್ಷೆ ನೀಡಬೇಕು.
೧೩) ನಕಲಿ ಗಾಂಧಿ ಗಳಹೆಸರಲ್ಲಿರುವ ಸಾವಿರಾರು ಯೋಜನೆಗಳನ್ನು ಕಡಿತಮಾಡಿ ಎಲ್ಲಾ ಸ್ವಾತಂತ್ರ ಯೋಧರ ಹೋರಾಟಗಾರರ ಹೆಸರನ್ನು ಇಡಬೇಕು.
೧೪) ಅಯೋಧ್ಯಾ ಮಥುರಾ ಕಾಶಿ ಗಳಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಿ ಪವಿತ್ರ ಯಾತ್ರಾಸ್ಥಳವಾಗಿ ಮಾಡಬೇಕು.
೧೫) ಪ್ರಾಚೀನವಾದ ಸಂಸ್ಕೃತಭಾಷೆಗೆ ಪ್ರೋತ್ಸಾಹಕೊಟ್ಟು ದೇಶಾದ್ಯಂತ ಒಂದು ಭಾಷಾವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು.
೧೬) ನಿಜವಾಗಿ ಹಿ೦ದುಳಿದ ಜ್ಯಾತಿಯವರಿಗೆ ಮಾತ್ರ ಕಲಿಕೆಯಲ್ಲಿ ಮಾತ್ರ  ಮಿಸಲಾತಿ ಅನ್ವಯಿಸಿ ಉಳಿದವರಿಗೆ ಅರ್ಥಿಕವಾಗಿ ಹಿ೦ದುಳಿದಿರುವಿಕೆಯ ಆಧಾರದ ಮೆಲೆ ಮೀಸಲಾತಿಯ  ಯೋಜನೆ ಜಾರಿಮಾಡುವಂತಿರಬಾರದು. ಉದ್ಯೋಗಗಳಲ್ಲಿ ಮೀಸಲಾತಿ ಇರಬಾರದು. ಅಲ್ಲಿ ಪ್ರತಿಭೆಯೇ ಮಾಮದ೦ಡವಾಗಬೆಕು

ಇನ್ನು ಎಲ್ಲ ಭಾರತೀಯರ ಬೇಡಿಕೆಗಳು

೧) ಚುನಾವಣಾ ಪ್ರಚಾರ ಸಭೆಗಳಲ್ಲಿ ಘೋಷಿಸಿದ೦ತೆ  ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿ  ಸ್ವಿಸ್ ಬ್ಯಾ೦ಕ್ ನಿ೦ದ ವಾಪಾಸುತರಬೇಕು.
೨) ಸರಿಯಾಗಿ ಕಾರ್ಯನಿರ್ವಹಿಸದ ಸಂಸದರ ಶಾಸಕರ ವೆಚ್ಚವನ್ನು ಭತ್ಯೆಯನ್ನು ಹಿಂಪಡೆಯಬೇಕು. ಅವರನ್ನು ಮೌಲ್ಯಮಾಪನಮಾಡಿ ಅಯೋಗ್ಯರನ್ನುಗುರುತಿಸಿ ಅನರ್ಹಗೊಂಡವರು ಮುಂದೆ ಸ್ಪರ್ದಿಸದಂತೆ ಕಾನೂನುಮಾಡಬೇಕು.
೩) ಕಠಿಣ ಭ್ರಷ್ಟಾಚಾರ ನಿಗ್ರಹ ಕಾಯಿದೆ ಯುಳ್ಳ ಲೋಕ ಪಾಲ ಜಾರಿಯಾಗಬೇಕು.
ಇದು ನಾವು ಓಟುನೀಡಿ ಆರಿಸಿದ ಭಾಜಪಾ ಲೋಕಸಭಾಸದಸ್ಯರಲ್ಲಿ ಮಾಡುತ್ತಿರುವ ಮನವಿ ಹಾಗೂ ನೀಡುತ್ತಿರುವ ಸಲಹೆಯಾಗಿದೆ ಸಮ್ಮತಿ ಇರುವವರು
೪) ರಕ್ಷಣಾ ಶಸ್ತ್ರಾಸ್ತ್ರಗಳಲ್ಲಿ ಭಾರತ ಸ್ವಾವಲಂಭಿಯಾಗಬೇಕು.
೫) ಭಾರತದ ಗಡಿಯನ್ನು ಇ೦ಚಿ೦ಚಾಗಿ ಆಕ್ರಮಿಸಿಕೊಳ್ಳುತ್ತಿರುವ ಚೀನಾ ವನ್ನು ಹಿಮ್ಮೆಟ್ಟಿಸಿ ಪಡೆದ ಭೂಮಿಯನ್ನು ಹಿ೦ದೆ ಪಡೆಯುವುದು. 
೬) ಪಾಕಿಸ್ತಾನ ಕಾಶ್ಮೀರದ ವಿಷಯದಲ್ಲಾಗಲಿ ಇತರ ಭಾರತದ ಯಾವುದೇ ಅ೦ತರಿಕ ವಿಷಯದಲ್ಲಿ ತಲೆಹಾಕದ೦ತೆ ಎಚ್ಚರಿಕೆ ನೀಡುವುದು.
 ೭) ಭಯೋತ್ಪದಕ ಕ್ರತ್ಯ ಮತ್ತು ಅತ್ಯಾಚಾರ ಅಪರಾದಿಹಿಗಳಿಗೆ ತುರ್ತು ವಿಚಾರಣೆಯಾಗಿ ಕಠಿಣ ಶಿಕ್ಷೆಯಾಗುವ೦ತೆ ಕಾನೂನಿನಲ್ಲಿ ತಿದ್ದುಪಡಿ. 
೮) ಭಾರತವನ್ನೂ ಔದ್ಯೋಗಿಕ ಪ್ರಗತಿಯತ್ತ ಮುನ್ನಡೆಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು. 

ಇವೆಲ್ಲ ಬೇಡಿಕೆಗಳು ನರೇ೦ದ್ರ ಮೋದಿಯವರ ಆಡಳಿತದಿ೦ದ ನೆರವೇರುತ್ತವೆ ಎ೦ದು ಆಸಿಸುವ