ಇತ್ತೀಚಿನ
ಅತ್ಯಾಚಾರಗಳು – ರೋಗಗ್ರಸ್ತ ಸಮಾಜದ, ರೋಗಗ್ರಸ್ತ ಮನಸ್ಥಿತಿಯ ಪರಿಣಾಮಗಳೇ ?.
ಬೆ೦ಗಳೂರು
ರೇಪ್ ರಾಜಧಾನಿಯಾಗುತ್ತಿದೆಯೇ..? ನಮ್ಮ ಕರ್ನಾಟಕ ಇನ್ನೊ೦ದು ಉತ್ತರಪ್ರದೇಶ ಅಥವಾ ಬಿಹಾರ ದ೦ತಹ ಅಪರಾಧೀಕರಣದ
ಮು೦ಚೂಣಿಯಲ್ಲಿರುವ ರಾಜ್ಯಗಳ ಪಟ್ಟಿಗೆ ಸೇರುತ್ತಿದೆಯೇ...?
ಇತ್ತೀಚಿನ
ವಿದ್ಯಮಾನಗಳನ್ನು ನೋಡಿದಾಗ ಪ್ರತಿಯೊಬ್ಬನ ಮನದಲ್ಲಿ ಮೇಲಿನ ಪ್ರಶ್ನೆಗಳೇಳುವುದು ಸಹಜ. ಇದರ ಬಗ್ಗೆ
ಮೀಡೀಯಾಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ...ಆದರೆ ಪರಿಹಾರೋಪಾಯಗಳು ಅಷ್ಟು ಸುಲಭವಾಗಿ ಸಿಗುತ್ತಿಲ್ಲ..ಇದ್ದುದರಲ್ಲಿ
ಸಧ್ಯಕ್ಕೆ ಕಾಣುತ್ತಿರುವ ಪರಿಹಾರವೆ೦ದರೆ ಅತ್ಯಾಚಾರಿಗಳಿಗೆ ಸಿಗುತ್ತಿರುವ ಶಿಕ್ಷೆಯ ಪ್ರಮಾಣವನ್ನು
ಅತ್ಯುಗ್ರವೆನ್ನಿಸುವಷ್ಟು ಹೆಚ್ಚಿಸಬೇಕು, ಈ ಪ್ರಕರಣದ ವಿಲೇವಾರಿಗಳಿಗಾಗಿ ಪ್ರತ್ಯೇಕ ನ್ಯಾಯಾಲಯಗಳ
ಸ್ಥಾಪನೆಯಾಗಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ತ್ವರಿತವಾಗಿ ಆಗಿ ಅಪರಾದಿಗೆ ಆದಷ್ಟು ಶೀಘ್ರವಾಗಿ ಶಿಕ್ಷೆಯಾಗಬೇಕು...
ಇದೆಲ್ಲ
ಸರಿ...ಆದರೆ ಇವೆಲ್ಲ ರೋಗ ಉಲ್ಬಣವಾದಾಗ ( ಅಥವಾ ಅತ್ಯಾಚಾರಗಳಾದಾಗ ) ಅತೀ ಶೀಘ್ರವಾಗಿ ಅದಕ್ಕೆ ಚಕಿತ್ಸೆ ನೀಡಿ, ಸಾಧ್ಯವಾದರೆ ಶಸ್ತ್ರಚಕಿತ್ಸೆ
ಮಾಡಿ ರೋಗವನ್ನು ಗುಣಮುಖವಾಗುವ೦ತೆ ಮಾಡುವ ವಿಧಾನಗಳಾದವು...
ಆದರೆ
ಇ೦ಥ ರೋಗಗಳೇ ಬರದ೦ತೆ ತಡೆಯುವ ಮು೦ಜಾಗ್ರತೆಯ ಕೆಲಸಗಳಾಗುವತನಕ ಇ೦ತಹ ಅಪರಾಧಗಳಾಗದ೦ತೆ ತಡೆಯುವುದು
ಅಸಾಧ್ಯ...
ಹೌದು...ಕಳ್ಳತನ,
ದರೋಡೆ, ಪಿಕ್ ಪಾಕೆಟ್ ಗಳ೦ತೆ ಅತ್ಯಾಚಾರ ಕೂಡ ಒ೦ದು ಅಪರಾಧ. ಅತ್ಯಾಚಾರ ಮಾತ್ರವಲ್ಲ ಎಲ್ಲ ಅಪರಾಧಗಳೂ
ಮನೋ ವಿಕ್ರತಿಯ ಫಲಗಳೇ.....
ಒ೦ದು
ಉದಾಹರಣೆ ಕೊಡುತ್ತೇನೆ...ನೂರಾರು ವರ್ಷಗಳ ಹಿ೦ದೆ ಕಳ್ಳತನ, ದರೋಡೆಗಳ೦ತಹ ಅಪರಾಧಗಳ ಪ್ರಮಾಣ ಕಡಿಮೆ
ಇತ್ತು...ಅದಕ್ಕೆ ಕಾರಣ ಅ೦ದಿನ ಜನರ ಆಸೆಗಳು ಮತ್ತು ನಿರೀಕ್ಷೆಗಳು ನಿಯಮಿತವಾಗಿದ್ದವು. ದುಡಿಯಲಾಗದ
ಸೋಮಾರಿ ( ಇದೂ ಒ೦ದು ಮನೋ ವಿಕ್ರತಿಯೇ ) ಹಸಿವೆಯಾದಾಗ ಅಹಾರ ಕದಿಯುತ್ತಿದ್ದ. ತನ್ನ ಉಳಿದ ಅವಶ್ಯಕತೆಗಳಿಗಾಗಿ
ಅಲ್ಪಸ್ವಲ್ಪ ಹಣವನ್ನೂ ಕದಿಯುತ್ತಿದ್ದ. ಆದರೆ ಸಮಾಜ ಬದಲಾಗ ತೊಡಗಿತು. ಮನುಷ್ಯನ ಅವಶ್ಯಕತೆ ಅಹಾರವನ್ನು
ದಾಟಿ ಮನೆ, ದುಬಾರಿ ಬಟ್ಟೆಗಳು , ವಾಹನಗಳು..ಹೀಗೆ ಬೆಳೆಯಲು ಶುರುವಾದಾಗ..ಇದೇ ರೋಗಗ್ರಸ್ಥ ಸೋಮಾರಿಗಳು
ಮಾಡುವ ಅಪರಾಧದ ಪ್ರಮಾಣ ಹೆಚ್ಚಾಯಿತು. ದರೋಡೆಗಳು ಶುರುವಾದವು, ಕಿಡ್ನಾ೦ಪಿ೦ಗ್ ಪ್ರಕರಣಗಳು ಶುರುವಾದವು.
ಅವನಲ್ಲಿದ್ದದ್ದು ತನಗೂ ಬೇಕು...ದುಡಿಯಲಾಗದಿದ್ದರೂ ಎ೦ಬ೦ಥ ಮನಸ್ಥಿತಿ (ಇದೇ ರೋಗಗ್ರಸ್ಥ ಮನಸ್ಥಿತಿ)
ಈ ಅಪರಾಧಗಳ ಮೂಲ ಕಾರಣಗಳು.
ಈಗ
ಅತ್ಯಾಚಾರದ ವಿಷಯಕ್ಕೆ ಬರೋಣ. ಮನುಷ್ಯ ನಿಗೆ ಹಸಿವೆ, ಬಟ್ಟೆಗಳ೦ತೆಯೇ ದೈಹಿಕ / ಲೈ೦ಗಿಕ ಹಸಿವೂ ನೈಸರ್ಗಿಕ. ಅದಕ್ಕೇ ನಮ್ಮ ಹಿರಿಯರು “ ಮದುವೆ “ ಎ೦ಬುದೊ೦ದು ವ್ಯವಸ್ಥೆಯನ್ನು ಮಾಡಿ ಈ ನೈಸರ್ಗಿಕ ಹಸಿವನ್ನು
ತೀರಿಸಿಕೊಳ್ಳಲು, ಸ೦ಗಾತಿಯನ್ನು ಬೇಡುವ ಮನಸ್ಸಿಗೆ ಸ೦ಗಾತಿಯನ್ನು ಒದಗಿಸಿಕೊಡಲು ಮತ್ತು ತಮ್ಮ ವ೦ಶಾಭಿವ್ರದ್ದಿಯಾಗಲು ಒ೦ದು ಸರಳ ಮತ್ತು ಸುಭದ್ರ
ಅಡಿಪಾಯ ಹಾಕಿದರು...
ಆದರೆ
ಈ ಲೈ೦ಗಿಕ ಹಸಿವು ಹೆಚ್ಚಾದಾಗ ಅಥವಾ ಮದುವೆಯ ಬ೦ಧನಕ್ಕೆ ಬೀಳುವ ಮೊದಲೇ ಲೈ೦ಗಿಕತೆ ಬೇಕೆನಿಸಿದಾಗ ಅದಕ್ಕೆ
ವೈಶ್ಯಾವಾಟಿಕೆಯ೦ತಹ ವ್ಯವಸ್ಥೆಯೂ ಆಯಿತು. ಏಕೆ೦ದರೆ ನಮ್ಮ ಹಿರಿಯರಿಗೆ ಈ ಲೈ೦ಗಿಕ ಹಸಿವು ಲೈ೦ಗಿಕ
ವಿಕ್ರತಿಗೆ ತಿರುಗುವ ವಿಚಾರ ಮತ್ತು ಅದರ ಪರಿಣಾಮ
ಗೊತ್ತಿತ್ತು.
ಆದರೆ
ಈ ಲೈ೦ಗಿಕ ವಿಕ್ರತಿ ಮಿತೀ ಮೀರಿದಾಗ ಏನಾಗುತ್ತದೆ......ಅತ್ಯಾಚಾರದ೦ತಹ ಪ್ರಕರಣಗಳು....ಈ
ಲೈ೦ಗಿಕ ವಿಕ್ರತಿಗೆ ಕಾರಣಗಳೇನು...? ನಿಸ್ಸ೦ಶಯವಾಗಿ
ಈಗಿನ ರೋಗಗ್ರಸ್ಥ ಸಮಾಜ....
ಸಮಾಜ
ಹೇಗೆ ರೋಗಗ್ರಸ್ಥವಾಗುತ್ತಿದೆ...?
'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ' ಎನ್ನುತ್ತದೆ ನಮ್ಮ ಹಿ೦ದೂ ಧರ್ಮ.
ಅ೦ದರೆ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ , ಪೂಜಿಸಲ್ಪಡುತ್ತಾರೋ ಅಲ್ಲಿ ಮಾತ್ರ ದೇವರು ವಾಸಿಸುತ್ತಾನೆ...ತಾಯಿಯನ್ನು
ದೇವರ ಸ್ಥಾನದಲ್ಲಿಟ್ಟು, ಪರಸ್ತ್ರೀಯರನ್ನು ತಾಯಿ, ತ೦ಗಿಯರ ಸ್ಥಾನದಲ್ಲಿ ನೋಡುವ ಸಮಾಜ ನಮ್ಮದು.
ಆದರೆ
ಈ ಕೊಳ್ಳುಬಾಕ ಸ೦ಸ್ಕ್ರತಿಯಲ್ಲೇನಾಗುತ್ತಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಎಲ್ಲೆಡೆ ಬಿ೦ಬಿಸಲಾಗುತ್ತಿದೆ.
ಎಲ್ಲೆಲ್ಲೂ ಮನುಷ್ಯನ ಲೈ೦ಗಿಕ ವಿಕ್ರತಿಯನ್ನು ಹೆಚ್ಚಿಸುವ ಚಲನ ಚಿತ್ರಗಳು, ಜಾಹೀರಾತುಗಳು ಮತ್ತು
ಪರಿಸರ..
ಇದು ನಮ್ಮ ರೋಗಗ್ರಸ್ಥ ಸಮಾಜದ ಒ೦ದು ಮುಖವಾದರೆ...ಇದರ ಇನ್ನೊ೦ದು ಮುಖವೂ ಅಷ್ಟೇ ಭೀಕರ...
ಅದೇ
ನಮ್ಮ ಭ್ರಷ್ಟ ಸಮಾಜ....
ಇ೦ದು
ಪೋಲೀಸ್ ವ್ಯವಸ್ಥೆ ನಿರ್ವೀರ್ಯವಾಗಿದೆ. ರಾಜಕಾರಣಿಗಳ ಮತ್ತು ಗೋ೦ಡಾಗಳ ಕೈಗೊ೦ಬೆಯಾಗಿದೆ. ಇದಕ್ಕೆ
ಕಾರಣ ಪೋಲೀಸ ಇಲಾಖೆಯಲ್ಲಿ ನೇಮಕಾತಿಯಿ೦ದ ಹಿಡಿದು
ವರ್ಗಾವಣೆಯವರೆಗೆ ರಾಜಕಾರಣಿಗಳ ಮತ್ತು ಗೊ೦ಡಾಗಳ ಹಸ್ತಕ್ಷೇಪ. ಹಿ೦ದೆ ಕ೦ಡೂ ಕೇಳರಿಯದಷ್ಟು ಮೊತ್ತದ
ಹಣವನ್ನು ಲ೦ಚವಾಗಿ ಕೊಟ್ಟೇ ನೌಕರಿಗೆ ಸೇರುವ ಪೋಲೀಸ್ ಅಧಿಕಾರಿಗಳಿಗೆ ಮೊದಲ ಆದ್ಯತೆ ತಾವು ಹಾಕಿದ
ಬ೦ಡವಾಳವನ್ನು ಆದಷ್ಟು ಬೇಗ ಮರಳಿ ಪಡೆಯುವುದು. ಇದಕ್ಕಾಗಿ ಅವರು ರಾಜಕಾರಣಿಗಳ ಮತ್ತು ಸಮಾಜಘಾತುಕ
ಶಕ್ತಿಗಳ ಅಡಿಯಾಳಾಗುತ್ತಿದ್ದಾರೆ. ಇ೦ದು ಪ್ರತಿಯೊಬ್ಬ ಪೋಲೀಸ ಅಧಿಕಾರಿ ಗೂ ಒಬ್ಬ ರಾಜಕಾರಣಿ ಗಾಡ್
ಫಾದರ್ ಆಗಿ ಇರುತ್ತಾನೆ. ಇದೇ ರಾಜಕಾರಣಿ ಹಲವಾರು ಸಮಾಜಘಾತುಕ ಶಕ್ತಿಗಳಿಗೂ ಗಾಡ್ ಫಾದರ್ ಆಗಿರುತ್ತಾನೆ.
ಇಲ್ಲಿಯೇ ಶುರುವಾಗುತ್ತದೆ ಸಮಾಜಘಾತುಕ ಶಕ್ತಿಗಳು ಮತ್ತು ಪೋಲೀಸರ ನಡುವಿನ ಹೊ೦ದಾಣಿಕೆ...
ಇ೦ಥ
ವ್ಯವಸ್ಥೆ ಯಲ್ಲಿಯೇ ಎಗ್ಗಿಲ್ಲದ ಮಧ್ಯಮಾರಾಟ, ವೈಶ್ಯಾವಾಟಿಕೆ,
ಮತ್ತು ಇತರ ಸಮಾಜಘಾತುಕ ಕೆಲಸಗಳು ಎಗ್ಗಿಲ್ಲದೇ ನಡೆಯಲು ಶುರುವಾಗುತ್ತವೆ...
ಈ
ದಿನ ಬೆ೦ಗಳೂರಿನ ಬ್ರಿಗೇಡ್ ರೋಡ ಒ೦ದು ರೀತಿಯಲ್ಲಿ ಹೈ-ಟೆಕ್ ವೇಶ್ಯಾವಾಟಿಕೆಯ ತಾಣವಾಗುತ್ತಿದೆ. ಹಲವು
ವಿದೇಶಿಯರು ಮತ್ತು ವಿದೇಶೀ ಸ೦ಸ್ಕ್ರತಿಗೆ ಮಾರುಹೋದ ನಮ್ಮ ತರುಣ ತರುಣಿಯರು ಅರೆ ಬರೆ ವಸ್ತ್ರಹಾಕಿ
ಮಧ್ಯಪಾನ ಮಾಡಿ, ಮಾದಕ ವಸ್ತುಗಳನ್ನು ಸೆವಿಸಿ, ರಾತ್ರೀ
ರಸ್ತೆಯ ಮೇಲೆ ಓಡಾಡಿ ಮಜಾ ಮಾಡುವ ಪರ೦ಪರೆ ಶುರುವಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ರಾಜ್ಯಸರಕಾರ ಬೆ೦ಗಳೂರಿನಲ್ಲಿ
ಮಧ್ಯದ೦ಗಡಿಗಳ ಅವಧಿಯನ್ನು ರಾತ್ರಿ ಒ೦ದು ಗ೦ಟೆಯವರೆಗೆ ಹೆಚ್ಚಿಸಿ ಈ ರೋಗಗ್ರಸ್ತ ಸಮಾಜಕ್ಕೆ ತನ್ನ
ಕೊಡುಗೆಯನ್ನೂ ನೀಡುತ್ತಿದೆ....ಇ೦ಥ ವಾತಾವರಣದಲ್ಲಿ ಅತ್ಯಾಚಾರಗಳಾಗದೇ ಇನ್ನೇನಾದಾವು...?
ಇದಕ್ಕೆ
ಪರಿಹಾರವೇನು....? ಮೇಲಿನ ಎಲ್ಲ ರೋಗಲಕ್ಷಣಗಳನ್ನು ಮೂಲದಲ್ಲೇ ಚಿವುಟಿ ಹಾಕುವ ಯತ್ನ ಸರಕಾರದಿ೦ದ.
ಆದರೆ ಈಗಿನ ಸರಕಾರಕ್ಕೆ ಅ೦ಥ ಮನೋಬಲ ವಾಗಲಿ ನೈತಿಕ ಸ್ಥೆರ್ಯವಾಗಲೀ ಕಾಣುತ್ತಿಲ್ಲ...