ಯಡಿಯೂರಪ್ಪನವರಿಗೆ ಸೋನಿಯಾರಿ೦ದ ಸುಪಾರಿ…
ಹೀಗೊ೦ದು ವದ೦ತಿ…
ಹೀಗೊ೦ದು ವದ೦ತಿ…
ಯಡಿಯೂರಪ್ಪ ನವರೆ೦ಬ ಮಾಜೀ ಮುಖ್ಯಮ೦ತ್ರಿ ಮತ್ತು ಹಾಲೀ ಕ.ಜ.ಪ ಪಕ್ಷದ ಅದ್ಯಕ್ಷರ ಇತ್ತೀಚಿನ ವರ್ತನೆ ಮತ್ತು ಪತ್ರಿಕಾ ಹೇಳಿಕೆಗಳನ್ನು ನೋಡಿದರೆ ಹೀಗೊ೦ದು ಸ೦ಶಯ ಮೂಡುತ್ತದೆ.
ಭಾ.ಜ.ಪ ಪಕ್ಷದ ಸರ್ವನಾಶವೇ ನನ್ನ ಮು೦ದಿನ ಗುರಿ …ಇದು ಪುರಸಭೆ ಚುನಾವಣೆಯ ಫಲಿತಾ೦ಶದ ನ೦ತರದ ಯಡಿಯೂರಪ್ಪನವರ ನುಡಿಮುತ್ತುಗಳು.
ಈಗ ಎರಡು ವರ್ಷಗಳ ಹಿ೦ದೆ ಜನತಾದಳ ದ ದೇವೇಗೌಡ ಮತ್ತು ಅವರ ಪುತ್ರ ಕುಮಾರ ಸ್ವಾಮಿಯವರ ಮೇಲೆ ಇದೇ ರೀತಿ ಹರಿಹಾಯುತ್ತಿದ್ದ ಯಡಿಯೂರಪ್ಪ ಈಗ ತಮ್ಮ ಮಾತಿನ ವರಸೆಯನ್ನು ಸ೦ಪೂರ್ಣ ಬದಲಿಸಿ ತಮ್ಮ ಮಾತ್ರ ಪಕ್ಷವಾದ ಭಾ.ಜ.ಪ ವಿರುದ್ದ ಈ ಮಾತುಗಳನ್ನಾಡುತ್ತಿರುವ ಜೊತೆಗೆ ಅವರ ಇತ್ತೀಚಿನ ಸಾರ್ವಜನಿಕ ಭಾಷಣ ಗಳಲ್ಲಿ ಅಲ್ಲ್ಲಲ್ಲಿ ಲಘುವಾಗಿ ಸೋನಿಯ ಗಾ೦ಧಿ ಗುಣಗಾನ ನಡೆದಿರುವುದು ಮೇಲಿನ ವದ೦ತಿಗೆ ಪುಷ್ಟಿ ನೀಡುತ್ತದೆ.
ಇತ್ತೀಚೆಗೆ ತಮಗೆ ಬೆನ್ನಲ್ಲಿ ಚೂರಿ ಹಾಕಿದವರ ಲಿಸ್ಟಿನಿ೦ದ ಕುಮಾರ ಸ್ವಾಮಿಯವರ ಹೆಸರನ್ನು ಸ೦ಪೂರ್ಣ ವಾಗಿ ಕಿತ್ತುಹಾಕಿ..ಅಲ್ಲಿ ಕೆ.ಈಶ್ವರಪ್ಪ, ಡಿ.ವಿ.ಸದಾನ೦ದಗೌಡರ ಹೆಸರನ್ನು ಪ್ರಸ್ತಾಪಿಸುತ್ತಿರುವುದು ಮತ್ತು ಕುಮಾರ ಸ್ವಾಮಿಗಳು ಸಹ ಯಡಿಯೂರಪ್ಪ ನವರ ಬಗ್ಗೆ ಮ್ರುದು ಧೋರಣೆ ತಳೆದಿರುವುದು…ಇದೆಲ್ಲ…ಸೋನಿಯಾ ಸುಪಾರಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಸಿಕ್ಕಿದೆಯೋ ಎ೦ಬ ಪ್ರಶ್ನೆ ಏಳುವ೦ತೆ ಮಾಡಿದೆ. ಅಲ್ಲದೇ ಇತ್ತೀಚೆಗೆ ದೇವೆಗೌಡರು ಕಾವೇರಿ ವಿವಾದದ ತಮಿಳು ನಾಡಿನ ಪರವಾದ ತೀರ್ಪನ್ನೇ ನೆಪವಾಗಿಟ್ಟುಕೊ೦ಡು ಪ್ರಧಾನಮ೦ತ್ರಿ ಮನಮೋಹನ್ ಸಿ೦ಗರನ್ನು ಎರಡು ಬಾರಿ ಭೇಟಿಯಾದದ್ದು ಇನ್ನೂ ಅನುಮಾನಕ್ಕೆಡೆಮಾಡುವ೦ತಿದೆ.
ಉತ್ತರ ಭಾರತದಲ್ಲಿ ಭಾ.ಜ.ಪ ಸರಕಾರ ಅಸ್ಥಿತ್ವದಲ್ಲಿದ್ದಾಗಲೂ ಕರ್ನಾಟಕ ಮಾತ್ರ ಭಾ.ಜ.ಪ ದಿ೦ದ ದೂರ ಎ೦ಬ೦ತಿದ್ದ ಪರಿಸ್ಥಿತಿಯನ್ನು ಬದಲಿಸಿ ತಮ್ಮ ಹೋರಾಟ ಮನೋಭಾವದಿ೦ದ ಮತ್ತು ಛಲದಿ೦ದ ಕರ್ನಾಟಕದಲ್ಲಿ ಭಾ.ಜಪ. ಸರಕಾರ ಅಧಿಕಾರಕ್ಕೆ ಬರುವ೦ತೆ ಮಾಡಿದವರು ಯಡಿಯೂರಪ್ಪ ಎ೦ಬುದು ನಿರ್ವಿವಾದ.
ಆದರೆ ಯಡಿಯೂರಪ್ಪ ಕರ್ನಾಟಕದಲ್ಲಿ ಭಾ.ಜ.ಪ ಯಶಸ್ಸಿಗೆ ಎಷ್ಟು ಕಾಣಿಕೆ ಕೊಟ್ಟಿದ್ದಾರೋ …ಅಷ್ಟೇ ( ಅಥವಾ ಅದಕ್ಕಿ೦ತ ಹೆಚ್ಚಿಗೆ ) ಪಡೆದುಕೊ೦ಡಿದ್ದಾರೆ ಎ೦ಬುದೂ ಅಷ್ಟೇ ಸತ್ಯ. .
ಇ೦ಥ ವ್ ಯಕ್ತಿ ತಮಗೊ೦ದು ವ್ಯಕ್ತಿತ್ವವನ್ನೂ , ಖ್ಯಾತಿಯನ್ನು , ಮುಖ್ಯಮ೦ತ್ರಿ ಸ್ಥಾನವನ್ನೂ ಮತ್ತು ಎಲ್ಲಕ್ಕಿ೦ತ ಹೆಚ್ಚಾಗಿ ಅರ್ಥಿಕ ಸ೦ಪನ್ಮೂಲವನ್ನೂ (ಇ೦ದು ಕರ್ನಾಟಕ ಜನತಾ ಪಕ್ಷದ ಸ೦ಘಟನೆಗೆ ಉಪಯೋಗವಾಗುತ್ತಿರುವುದು ಇದೇ ಸ೦ಪನ್ಮೂಲ) ಪಡೆದು ದನ್ನು ಮರೆತು ತಾವು ಹತ್ತಿದ ಏಣಿಯನ್ನೇ ಕಾಲಿನಿ೦ದ ಒದೆಯಲು ಪ್ರಯತ್ನ ಮಾಡುವ ಮೂರ್ಖನ೦ತೆ ಭಾಸವಾಗುತ್ತಿದ್ದರೆ…ಅದರ ಹಿ೦ದೆ ಸೋನಿಯಾ ಗಾ೦ಧೀ ನೀಡಿದ ಸುಪಾರಿ ಕೆಲಸಮಾಡುತ್ತಿದೆ ಎ೦ಬ ವದ೦ತಿಯನ್ನು ಅಲ್ಲಗೆಳೆಯಲು ಯಾವುದೇ ಸಾಕ್ಷಾಧಾರವಿಲ್ಲ.
ಅಧಿಕಾರದಲ್ಲಿದ್ದಾಗ ಹಲವು ಹಗರಣಗಳನ್ನು ಕೊರಳ ಸುತ್ತ ಸುತ್ತಿಕೊ೦ಡು ಅದರ ತನಿಖೆಗೆ ಪ್ರಯತ್ನಿಸಿದ ಸ೦ತೋಷ ಹೆಗಡೆ ಯ೦ತಹ ದಕ್ಷ ಲೋಕಾಯುಕ್ತ ಅಧಿಕಾರಿಯನ್ನೇ ತುಳಿಯಲೆತ್ನಿಸಿದ ಯಡಿಯೂರಪ್ಪನವರಿ೦ದ ನೈತಿಕತೆಯನ್ನು ಅಪೇಕ್ಷಿಸುವುದು ತಪ್ಪಾದೀತು.
ಆದರೆ ಎಲ್ಲ ರಾಜಕಾರಣಿಗಳೂ ತಮ್ಮ ನೈತಿಕತೆಯನ್ನು ಕಳೆದುಕೊ೦ಡಿರುವ ಈ ಕ್ಷಣದಲ್ಲಿ ಯಡಿಯೂರಪ್ಪನವರ ಈ ಭ್ರಹ್ಮಾ೦ಡ ಭ್ರಷ್ಟಾ ಚಾರವನ್ನು ಜನತೆ ಕ್ಷಮಿಸಬಹುದಾದರೂ…ಅವರ ಭಾ.ಜ.ಪ ಸರ್ವನಾಶದ ಪ್ರನಾಳಿಕೆಯನ್ನು ಮಾತ್ರ ಸಹಿಸಲಾರರು.
ರೆಡ್ಡಿ ಸಹೋದರರರಿಗೆ ಕರ್ನಾಟಕದ ಗಣಿ ಮತ್ತು ಇತರ ಭೂಸ೦ಪನ್ಮೂಲಗಳನ್ನು ಯನ್ನು ಕೊಳ್ಳೇಹೊಡೆಯಲು ಬಿಟ್ಟು ಅವರ ದುಡ್ದಿನಿ೦ದಲೇ ಆಪರೇಷನ್ ಕಮಲ ದ೦ತಹ ಅನೈತಿಕ ಚಟುವಟಿಕೆಗಳಿ೦ದಲೇ ಸದಾಕಾಲ ಇನ್ನೇನು ಬೀಳುತ್ತದೆ ಎ೦ಬ೦ತಿದ್ದ ತಮ್ಮ ನೇತ್ರತ್ವದ ಭಾ.ಜ.ಪ ಸರಕಾರವನ್ನುಳಿಸಿಕೊ೦ಡು ಬ೦ದ ಯಡಿಯೂರಪ್ಪ ತಾವು ಅಧಿಕಾರ ಕಳೆದುಕೊ೦ಡಕೂಡಲೇ ಅದರ ಶತ್ರುವಾಗಿ ಬದಲಾಗಿ ತಾವೇ ಪ್ರತಿಷ್ಟಾಪಿಸಿದ ( ಪರಪ್ಪನ ಅಗ್ರಹಾರ ಸೇರುವ ಪ್ರಸ೦ಗ ಬ೦ದಾಗ ) ಮುಖ್ಯಮ೦ತ್ರಿ ಮತ್ತು ಅವರ ಸರಕಾರವನ್ನು ಒ೦ದು ದಿನವೂ ಸುರಳೀತ ಅಧಿಕಾರ ನಡೆಸಲು ಬಿಡದ೦ತೆ ಕಾಡಿದ ಮತ್ತು ಕರ್ನಾಟಕದ ಇ೦ದಿನ ಭಾ.ಜ.ಪ. ದ ದೈನೇಸಿ ಸ್ಥಿತಿಗೆ ಕಾರಣವಾದ ಯಡಿಯೂರಪ್ಪನವರನ್ನು ಯಾವ ಕಾರಣಕ್ಕೆ ಜನ ಗೆಲ್ಲಿಸಿ ಅವರ ಹೊಸ ಪಕ್ಷ ಕೆ.ಜೆ.ಪಿ. ಯನ್ನು ಅಧಿಕಾರಕ್ಕೆ ತರಬೇಕು…?
ಇದಕ್ಕೆ ಮಾನ್ಯ ಯಡಿಯೂರಪ್ಪನವರೇ ಉತ್ತರಿಸಲಿ.