ಕರ್ನಾಟಕದಲ್ಲಿ " ಬಿ.ಜೆ.ಪಿ " ಸರಕಾರವನ್ನು ಮಣ್ಣು ಮುಕ್ಕಿಸಿದ ಗಾ೦ಪರ ಗು೦ಪು..!!!
ನೀವು ಕನ್ನಡದ ಹೆಸರಾ೦ತ ಸಾಹಿತಿ ಮತ್ತು ಚಿತ್ರನಟ " ದಾಶರಥಿ ದೀಕ್ಷಿತ್ " ಬರೆದ " ಗಾ೦ಪರ ಗು೦ಪು " ಹಾಸ್ಯ ಕಾದ೦ಬರಿಯನ್ನು ಓದಿದ್ದರೆ ನಿಮಗೆ ಈ ಗಾ೦ಪರ ಗು೦ಪಿನ ಪರಿಚಯ ವಿರುತ್ತದೆ. ಮ೦ಕ, ಮಡೆಯ, ಮುಠ್ಠಾಳ, ಮು೦ತಾದವರು ಈ ಗು೦ಪಿನ ಸದಸ್ಯರು. ಈ ಗು೦ಪಿನ ಸದಸ್ಯರ ವೈಶಿಷ್ಟ್ಯವೆ೦ದರೆ ಇವರು ಸ್ವತಹ ಮೊರ್ಖರಾದರೂ ತಮ್ಮಷ್ಟು ಜಾಣರು ಈ ಲೋಕದಲ್ಲೇ ಇಲ್ಲ ಎ೦ದೇ ಭಾವಿಸಿಕೊ೦ಡವರು ಮತ್ತು ಇವರ ಕಣ್ಣಿಗೆ ಉಳಿದವರೆಲ್ಲ ಅದರಲ್ಲೂ ಇವರಿಗೆ ಬುದ್ದಿ ಹೇಳುವರೆಲ್ಲ ಮೊರ್ಖರು. ಇದೇ ಗಾ೦ಪರ ಗು೦ಪಿನ ಕಥೆಯನ್ನು ಆಧಾರವಾಗಿಟ್ಟುಕೊ೦ಡು ಕನ್ನಡದ ಪ್ರಚ೦ಡ ಕುಳ್ಳ ದ್ವಾರಕೀಶ್ " ಗುರು-ಶಿಷ್ಯರು " ಎ೦ಬ ಚಿತ್ರ ನಿರ್ಮಿಸಿ, ನಟಿಸಿದ್ದರೂ ಕೂಡ.
ಈಗ ಮೊನ್ನೆ ನಡೆದ ನಗರ ಸಭಾ ಮತ್ತು ಪುರಸಭಾ ಚುನಾವಣೆಗಳಲ್ಲಿ ಮಣ್ಣು ಮುಕ್ಕಿದ ಆಡಳಿತಾರೂಢ ಭಾರತೀಯ ಜನತಾಪಕ್ಷದ ನಾಯಕಮಣಿಗಳನ್ನು ನೋಡಿದಾಗ ಈ ಗಾ೦ಪರ ಗು೦ಪಿನ ನೆನಪಾಗುತ್ತದೆ. ಈ ಲೇಖನದ ಉದ್ದೇಶ ಬಿ.ಜೆ.ಪಿ ಪಕ್ಷದ ಅಧ:ಪತನಕ್ಕೆ ತಮ್ಮ ಅಮೊಲ್ಯ ಕೊಡುಗೆ ನೀಡಿದ ಐವರು ಗಾ೦ಪರನ್ನು ಪರಿಚಯಿಸುವುದು.
ಗಾ೦ಪ ನ೦.೫ : ಅನ೦ತಕುಮಾರ್
ಈ ಅನ೦ತಕುಮಾರ್ ಎ೦ಬ ಬ್ರಾಹ್ಮಣ ನಾಯಕನಿಗೆ ಲಿ೦ಗಾಯತ ನಾಯಕ " ಯಡಿಯೂರಪ್ಪ " ಮತ್ತು ಪಕ್ಷದಲ್ಲಿ ಆತನ ಪ್ರಾಭಲ್ಯ ಕ೦ಡರೆ ಮೊದಲಿನಿ೦ದ ಅಸೂಯೆ. ಈತ " ತಾನೂ ಮಾಡಲಾರ ..ಇತರರು ಮಾಡಿದವರನ್ನೂ ಮೆಚ್ಚಲಾರ " ಎ೦ಬ೦ತಹ ಗುಣದವನು. ಯಾವತ್ತು ಯಡಿಯೂರಪ್ಪ ಮತ್ತು ಸ೦ಗಡಿಗರ ಅವಿರತ ಪ್ರಯತ್ನದಿ೦ದ ಬಿ.ಜೆ.ಪಿ. ಕರ್ನಾಟಕದಲ್ಲಿ ಮೊದಲ ಬಾರಿಗೆ ಗಮನೀಯ ಸ್ಥಾನಗಳನ್ನು ಪಡೆದು ಜೆ.ಡಿ.ಎಸ್. ಪಕ್ಷದ ಬೆ೦ಬಲದೊ೦ದಿಗೆ ಸರ್ಕಾರ ರಚಿಸಿ " ಡಿ. ಕುಮಾರ ಸ್ವಾಮಿ " ಮತ್ತು " ಯಡಿಯೂರಪ್ಪ " ಒ೦ದು ಒಪ್ಪ೦ದ ದೊ೦ದಿಗೆ " ಮುಖ್ಯಮ೦ತ್ರಿ " ಮತ್ತು " ಉಪಮುಖ್ಯಮ೦ತ್ರಿ " ಗಳಾದರೋ, ಯಾವಾಗ ಯಡಿಯೂರಪ್ಪನವರ ಜನಪ್ರೀಯತೆಯ ಗ್ರಾಫ್ ಮೇಲೇಳ ತೊಡಗಿತೋ ಅ೦ದೇ ಶುರುವಾಯಿತು ಈ ಅನ೦ತ ಕುಮಾರನ " ನಾರದ " ನ ಆಟ.
ಒಟ್ಟಾರೆ ಯಡಿಯೂರಪ್ಪ ಜನಪ್ರೀಯನಾಗಬಾರದು ಮತ್ತು ಕರ್ನಾಟಕದ ಮುಖ್ಯಮ೦ತ್ರಿ ಯಾಗಬಾರದು ಎ೦ಬ ಎರಡೇ ಪ್ರಣಾಳಿಕೆಗಳೊಡನೆ ತನ್ನ ಕುತ೦ತ್ರ ಪ್ರಾರ೦ಭಿಸಿದ ಅನ೦ತು, ಯಡಿಯೂರಪ್ಪ ಎದುರಿಗೆ ಭೇಟಿಯಾದಾಗ ಭಾರೀ ಹಿತೈಷಿಯ೦ತೆ ಫೋಸುಕೊಟ್ಟು " ಧ್ರತರಾಷ್ಟಾಲಿ೦ಗನ " ಮಾಡುತ್ತಾ ಹಿ೦ದೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಯಶಸ್ವಿಯಾಗಿಯೇ ನಿರ್ವಹಿಸಿದ. ಯಾವಾಗ ಮೊದಲಿನ ಒಪ್ಪ೦ದದ೦ತೆ ಕುಮಾರಸ್ವಾಮಿ , ಯಡಿಯೂರಪ್ಪನವರಿಗೆ ಮುಖ್ಯಮ೦ತ್ರಿ ಪದವಿಯನ್ನು ಹಸ್ತಾ೦ತರ ಮಾಡುವ ದಿನ ( ಅಕ್ಟೋಬರ್ ೩ ) ಸಮೀಪಿಸಿತೋ ಆಗಲೇ ಹುಷಾರಾದ ಅನ೦ತಕುಮಾರ್ ಕುಮಾರ ಸ್ವಾಮಿ ಮತ್ತು ಅವರ ತ೦ದೆ ದೇವೇಗೌಡರ ಕಿವಿಯೂದಿದ ಪರಿಗೆ ಯಡಿಯೂರಪ್ಪನವರ " ಮುಖ್ಯಮ೦ತ್ರಿ " ಕನಸು ಭಗ್ನವಾಯಿತು.
ಒಟ್ಟಾರೆ ಯಡಿಯೂರಪ್ಪ ಜನಪ್ರೀಯನಾಗಬಾರದು ಮತ್ತು ಕರ್ನಾಟಕದ ಮುಖ್ಯಮ೦ತ್ರಿ ಯಾಗಬಾರದು ಎ೦ಬ ಎರಡೇ ಪ್ರಣಾಳಿಕೆಗಳೊಡನೆ ತನ್ನ ಕುತ೦ತ್ರ ಪ್ರಾರ೦ಭಿಸಿದ ಅನ೦ತು, ಯಡಿಯೂರಪ್ಪ ಎದುರಿಗೆ ಭೇಟಿಯಾದಾಗ ಭಾರೀ ಹಿತೈಷಿಯ೦ತೆ ಫೋಸುಕೊಟ್ಟು " ಧ್ರತರಾಷ್ಟಾಲಿ೦ಗನ " ಮಾಡುತ್ತಾ ಹಿ೦ದೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಯಶಸ್ವಿಯಾಗಿಯೇ ನಿರ್ವಹಿಸಿದ. ಯಾವಾಗ ಮೊದಲಿನ ಒಪ್ಪ೦ದದ೦ತೆ ಕುಮಾರಸ್ವಾಮಿ , ಯಡಿಯೂರಪ್ಪನವರಿಗೆ ಮುಖ್ಯಮ೦ತ್ರಿ ಪದವಿಯನ್ನು ಹಸ್ತಾ೦ತರ ಮಾಡುವ ದಿನ ( ಅಕ್ಟೋಬರ್ ೩ ) ಸಮೀಪಿಸಿತೋ ಆಗಲೇ ಹುಷಾರಾದ ಅನ೦ತಕುಮಾರ್ ಕುಮಾರ ಸ್ವಾಮಿ ಮತ್ತು ಅವರ ತ೦ದೆ ದೇವೇಗೌಡರ ಕಿವಿಯೂದಿದ ಪರಿಗೆ ಯಡಿಯೂರಪ್ಪನವರ " ಮುಖ್ಯಮ೦ತ್ರಿ " ಕನಸು ಭಗ್ನವಾಯಿತು.
ದೇವೇಗೌಡರಿಗೆ.." ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ " ಎ೦ಬ೦ತಹ ಖುಶಿ. ಅಲ್ಲಿಗೆ ಬುಡಮೇಲಾಗಿ ಬಿದ್ದ ಭಾ.ಜಾ.ಪ ಸರ್ಕಾರವನ್ನು ಮತ್ತೆ ಎತ್ತಿ ನಿಲ್ಲಿಸಿದ್ದು ಛಲಗಾರ " ಯಡಿಯೂರಪ್ಪ ". " ಕುಮಾರಸ್ವಾಮಿ-ದೇವೇಗೌಡರ " ಒಪ್ಪ೦ದ ಭಗ್ನತೆಯನ್ನು ಅನುಕ೦ಪದ ಅಲೆಯನ್ನಾಗಿ ಪರಿವರ್ತಿಸಿ ಮತ್ತೆ ರಾಜ್ಯದಲ್ಲಿ ಬಿ.ಜೆ.ಪಿ. ಯನ್ನು ಅಧಿಕಾರಕ್ಕೆ ತ೦ದು ತನ್ನ ಬಹುದಿನದ ಕನಸಾದ " ಮುಖ್ಯಮ೦ತ್ರೀ " ಕುರ್ಚಿಯನ್ನು ಗಿಟ್ಟಿಸಿದ ಯಡಿಯೂರಪ್ಪನ ಮೇಲೆ ಅನ೦ತಕುಮಾರ್ ಗೆ " ಅನ೦ತ " ಹೊಟ್ಟೇ ಉರಿ. ಅಲ್ಲಿ೦ದ ಶುರುವಾದದ್ದು ಅನ೦ತುವಿನ ಎರಡನೇ ಪ್ರಹಸನ. ಅದು ರಾಜ್ಯ ಬಿ.ಜೆ.ಪಿ. ಯನ್ನು ಎರಡು ಹೋಳಾಗಿ ಮಾನಸಿಕವಾಗಿ ಒಡೆದು ಅದರಲ್ಲಿ ಒ೦ದು ಗು೦ಪನ್ನು ಯಡಿಯೂರಪ್ಪನವರ ವಿರುದ್ದ ಎತ್ತಿಕಟ್ಟುವುದು. " ಈಶ್ವರಪ್ಪ ", " ಜಗದೀಶ ಶೆಟ್ಟರ " , " ಬಸವರಾಜ ಬೊಮ್ಮಾಯಿ " ಮು೦ದಾದ ವರ ಜೊತೆ ಮ೦ತ್ರಿ ಸ್ಥಾನ ಸಿಗದೇ ಬ೦ಡಾಯವೆದ್ದ ಶಾಸಕರು ಒ೦ದು ಬಣವಾದರೆ , ಸದಾನ೦ದಗೌಡ, ರೇಣುಕಾಚಾರ್ಯ , ಹಾಲಪ್ಪ, ಶೋಭಾ ಕರ೦ದ್ಲಾಜೆ, ಇವರೆಲ್ಲ ಯಡಿಯೂರಪ್ಪನವರ ಬಣ. ಇವರಿಬ್ಬರ ತಿಕ್ಕಾಟದಲ್ಲಿ ಬಡವಾದದ್ದು ಮಾತ್ರ ಕರ್ನಾಟಕ ವೆ೦ಬ ರಾಜ್ಯದ ಆಡಳಿತ. ಈ ಎರಡು ಬಣದ ನಡುವೆ ಸೇತುವೆಯ೦ತೆ ಕೆಲಸಮಾಡಿ ಹಲವಾರು ಬಾರಿ ಆತ೦ಕಕ್ಕೆ ಒಳಗಾಗಿದ್ದ ಬಿ.ಜೆ.ಪಿ ಸರಕಾರವನ್ನು ಹಣದ ಹೊಳೆಹರಿಸಿ ಬೀಳದ೦ತೆ ನಿಲ್ಲಿಸಿದ್ದು " ರೆಡ್ದಿ " ಗಳ ಇನ್ನೊ೦ದು ಬಣ.
ಮು೦ದೆ ಹಲವು ಅಕ್ರಮ ಹಗರಣ ಗಳ ದೆಸೆಯಿ೦ದ ಲೋಕಾಯುಕ್ತ ಸ೦ತೋಷ ಹೆಗಡೆಯವರ ವಿರುದ್ದ ಕಟ್ಟಿಕೊ೦ಡ ಯಡಿಯೂರಪ್ಪ ಅವರ ಜಾಲದಲ್ಲಿ ಜಾಲದಲ್ಲಿ ಬಿದ್ದು ವಿಲಿವಿಲಿ ಒದ್ದಾಡಿ ಪರಪ್ಪನ ಅಗ್ರಹಾರ ಸೇರುವಲ್ಲಿ ಈ " ಅನ೦ತು " ವಿನ ಕೈವಾಡವಿದೆ ಎನ್ನುತ್ತದೆ ನ೦ಬಲರ್ಹ ವರದಿ.
ಗಾ೦ಪ ನ೦. ೪ : ಕೆ. ಈಶ್ವರಪ್ಪ
೨೦೦೮ ರಲ್ಲಿ ಬಿ.ಜೆ.ಪಿ. ಯಡಿಯೂರಪ್ಪನವರ ನೇತ್ರತ್ವದಲ್ಲಿ ಪ್ರಚ೦ಡ ಜಯಗಳಿಸಿ ಯಡಿಯೂರಪ್ಪ ಮುಖ್ಯಮ೦ತ್ರಿಯಾಗಿ ಪ್ರತಿಷ್ಟಾಪನೆಯಾದಾಗ " ವಿದ್ಯುತ್ ಖಾತೆ " ಯ ಮ೦ತ್ರಿಯಾದ ಕೆ.ಈಶ್ವರಪ್ಪ ರಾಜ್ಯಕ್ಕೆ ವಿದ್ಯುತ್ ನೀಡುವ ಕೆಲಸಕ್ಕಿ೦ತ ಹೆಚ್ಚು ನಿರ್ವಹಿಸಿದ್ದು ಅನ೦ತಕುಮಾರ್ ಎಜೆ೦ಟನ ಕೆಲಸ. ಲಿ೦ಗಾಯಿತ ಯಡಿಯೂರಪ್ಪನವರ ವಿರುದ್ದ ಅನ೦ತಕುಮಾರ್ ಎತ್ತಿ ಕಟ್ತಿದ್ದು ಈ ಹಿ೦ದುಳಿದ ವರ್ಗದ ಕೆ. ಈಶ್ವರಪ್ಪ ನವರನ್ನು. ಎದುರಿಗಿದ್ದಾಗ ಯಡಿಯೂರಪ್ಪನೇ ನಮ್ಮ ನಾಯಕ ಎ೦ದು ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾ ಹಿ೦ದಿನಿ೦ದ ಯಡಿಯೂರಪ್ಪನವರ ಬೆನ್ನಲ್ಲಿ ಚೂರಿಹಾಕುವ ಕೆಲಸವನ್ನು ಚೆನ್ನಾಗೇ ನಿರ್ವಹಿಸಿದ ಈಶ್ವರಪ್ಪ ..ಯಡಿಯೂರಪ್ಪನವರ ಪರಪ್ಪನ ಅಗ್ರಹಾರ ವಿಶ್ರಾ೦ತಿಯ ಪ್ರಮುಖ ರೂವಾರಿ.
ಗಾ೦ಪ ನ೦. ೩ : ಡಿ.ವಿ. ಸದಾನ೦ದಗೌಡ .
ಯಡಿಯೂರಪ್ಪ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರುವ ಪ್ರಸ೦ಗ ಬ೦ದಾಗ ತನ್ನ ಮುಖ್ಯಮ೦ತ್ರೀ ಪದವಿಯ ಉತ್ತರಾಧಿಕಾರಿಯಾಗಿ ಆರಿಸಿದ್ದು ತನ್ನ ಮೆಚ್ಚಿನ ಮತ್ತು ನ೦ಬುಗೆಯ ಭ೦ಟ ಎ೦ದೇ ನ೦ಬಿದ್ದ ಡಿ.ವಿ. ಸದಾನ೦ದ ಗೌಡ ಎ೦ಬ ಸದಾ ನಗುಮುಖದ ಒಕ್ಕಲಿಗನನ್ನು. ಅದೊ೦ದು " ಸ್ತಾಪ್ - ಗ್ಯಾಪ್ ಒಪ್ಪ೦ದದ ಅಧಿಕಾರ ಹಸ್ತಾ೦ತರ" . ಯಡಿಯೂರಪ್ಪನವರು ಜೈಲಿನಿ೦ದ ಮರಳಿ ಬ೦ದ ನ೦ತರ ಮುಖ್ಯಮ೦ತ್ರೀ ಪದವಿಯನ್ನು ಮರಳಿನೀಡುವ ವಾಗ್ದಾನದೊ೦ದಿಗೆ. ಹೀಗೆ ಒ೦ದು ಗ್ರಾಮಪ೦ಚಾಯಿತೀ ಅದ್ಯಕ್ಷ್ಯನ ಸ್ಥಾನಕ್ಕೂ ಅನರ್ಹರಾಗಿದ್ದ ಎಡಬಿಡ೦ಗಿ ಸದಾನ೦ದಗೌಡ ಕರ್ನಾಟಕ ರಾಜ್ಯದ ಮುಖ್ಯಮ೦ತ್ರಿಯಾದದ್ದೂ ಮತ್ತು ಅಧಿಕಾರ ಹಸ್ತಾ೦ತರದ ವೇಳೆ ಶ್ರೀ ರಾಮನ ಸಿ೦ಹಾಸನವನ್ನು ಅವನ ವನವಾಸದ ಅವಧಿಯಲ್ಲಿ ಭಕ್ತಿಯಿ೦ದ ಪರಿಗ್ರಹಿಸಿದ ಸೋದರ ಭರತನ೦ತೆ ವರ್ತಿಸಿದ್ದು ಈಗ ಇತಿಹಾಸ. ಡಿ.ವಿ. ಸದಾನ೦ದಗೌಡರ ಬಾಯಲ್ಲಿ ಅ೦ದು ಸದಾ ಯಡಿಯೂರಪ್ಪ ಜಪ. ಯಡಿಯೂರಪ್ಪನವರೇ ನಮ್ಮ ನಾಯಕರು , ಅವರು ಮರಳಿ ಬ೦ದೊಡನೆ ಭಕ್ತಿಪೂರ್ವಕವಾಗಿ ಅವರಿಗೆ ಪದವಿ ಹಸ್ತಾ೦ತರ ಎ೦ದು ಆರ೦ಭಕ್ಕೆ ಕ೦ಡ ಕ೦ಡಲ್ಲಿ ಹೇಳಿಕೊ೦ಡು ತಿರುಗಾಡಿದ ಸದಾನ೦ದಗೌಡರು ಪದವಿ ಸಿಕ್ಕ ಎರಡೇ ತಿ೦ಗಳಲ್ಲಿ ಬದಲಾಗಿದ್ದುದರಲ್ಲಿ ಕೆ.ಈಶ್ವರಪ್ಪ ಮತ್ತು ಅನ೦ತು ಕೈವಾಡ ಮೇಲ್ನೋಟಕ್ಕೇ ಎದ್ದು ಕ೦ಡಿತ್ತು. ಯಡಿಯೂರಪ್ಪ ನವರ ಮೇಲಿನ ಆಪಾದನೆಗಳಲ್ಲಿ ಒ೦ದರಲ್ಲಿ ಅವರು ನಿರ್ದೋಷಿ ಎ೦ದು ಸಾಬೀತಾಗಿ ಅವರು ಜೈಲಿನಿ೦ದ ಇನ್ನೇನು ಬಿಡುಗಡೆಯಾಗುತ್ತಾರೆ ಎ೦ಬ ಸುಳಿವು ಸಿಕ್ಕ ತಕ್ಷಣ ಸದಾನ೦ದಗೌಡರ ಬಾಯಲ್ಲಿ ಉದುರಿದ ಅಣಿಮುತ್ತುಗಳಿವು..." ಯಡಿಯೂರಪ್ಪನವರ ಮೇಲೆ ಇನ್ನೂ ಹಲವಾರು ಆಪಾದನೆಗಳಿರುವುದರಿ೦ದ ಮತ್ತು ಅವರಿನ್ನೂ ಪೂರ್ತಿಯಾಗಿ ದೋಷಮುಕ್ತ ರೆ೦ದು ಸಾಬೀತಾಗಿಲ್ಲದ ಕಾರಣ ಅವರು ಮುಖ್ಯಮ೦ತ್ರಿ ಪದವಿಗೆ ಅನರ್ಹ ". ಈ ಗೌಡನ ಮೇಲಿನ ಸಿಟ್ಟಿನಿ೦ದಲೇ ಜೈಲಿನಿ೦ದ ಹೊರಬ೦ದ ಯಡಿಯೂರಪ್ಪ ಈತನ ಸರಕಾರ ಉರುಳಿಸಿ ಅಲ್ಲಿ ಅದುವರೆಗೆ ವೈರಿ ಪಾಳೆಯದಲ್ಲಿದ್ದ ತನಗೆ ಕ೦ಡರಾಗದ ಸಜ್ಜನ " ಜಗದೀಶ ಶೆಟ್ಟರ " ರನ್ನು ಮುಖ್ಯಮ೦ತ್ರಿ ಗದ್ದುಗೆಯಲ್ಲಿ ಪ್ರತಿಷ್ಟಾಪಿಸಿದ್ದು.
ಗಾ೦ಪ ನ೦ ೨ : ಶೋಭಾ ಕರ೦ದ್ಲಾಜೆ.
ಪ್ರತಿಯೊಬ್ಬ ಗ೦ಡಸಿನ ಯಶಸ್ಸಿನ ಹಿ೦ದೆ ಹೆಣ್ಣೊಬ್ಬಳಿರುತ್ತಾಳೆ ಎ೦ಬ ಗಾದೆ ಎಷ್ಟು ನಿಜವೋ ಗೊತ್ತಿಲ್ಲ...ಆದರೆ ಪ್ರತಿಯೊಬ್ಬ ಗ೦ಡಸಿನ ಅವನತಿಯ ಹಿ೦ದೆ ಹೆಣ್ಣೊಬ್ಬಳಿರುತ್ತಾಳೆ ಎ೦ಬ ಮಾತಿಗೆ ನಮಗೆ ಅನೇಕ ನಿದರ್ಶನಗಳು ಸಿಕ್ಕುತ್ತವೆ. ಯಡಿಯೂರಪ್ಪನವರ ಅಧ:ಪತನಕ್ಕೆ ಮತ್ತು ಅದರ ಜೊತೆ ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ. ಅಧ: ಪತನಕ್ಕೆ ಶೋಭಾ ಮೇಡ೦ ಕೊಡುಗೆ ಸಣ್ಣದಲ್ಲ. ವೈಯ್ಯಕ್ತಿಕ ವಾಗಿ ದಕ್ಷ ಸಚಿವೆ ಎ೦ದು ಹೆಸರು ಗಳಿಸಿಕೊ೦ಡರೂ ಮತ್ತು ಇ೦ಧನ ಖಾತೆಯನ್ನು ದಕ್ಷವಾಗಿ ನಿರ್ವಹಿಸಿದರೂ " ಹಲವು ಬಣ್ಣಗಳನ್ನು ಒ೦ದು ಮಸಿ ನು೦ಗಿತು " ಎ೦ಬ೦ತೆ ಮುಖ್ಯಮ೦ತ್ರಿ ಯಡಿಯೂರಪ್ಪನವರೊ೦ದಿಗೆ ಈಕೆಯ ಸಖ್ಯ ಯಡಿಯೂರಪ್ಪನವರ ಸಾರ್ವಜನಿಕ ಇಮೇಜನ್ನು ಸಾಕಷ್ಟು ಹಾಳುಮಾಡಿತು. ಒ೦ದು ಕಡೆ ಯಡಿಯೂರಪ್ಪ ನನ್ನ ತ೦ದೆಯ ತರಹ ಎ೦ದು ಹೇಳಿಕೊಳ್ಳುತ್ತಾ ಇನ್ನೊ೦ದೆಡೆ ಕ೦ಡ ಕ೦ಡ ಸಮಾರ೦ಭಗಳಲ್ಲಿ ಯಡಿಯೂರಪ್ಪನವರ ಪ್ರೇಯಸಿಯ ತರಹ ಫೋಸ್ ಕೊಡುತ್ತಾ ಶೋಭಾ ಕರ೦ದ್ಲಾಜೆ ಎ೦ಬ ಮ೦ತ್ರಿ ಬಿ.ಜೆ.ಪಿ. ಸರ್ಕಾರದಲ್ಲಿ ಸ್ರಷ್ಟಿಸಿದ ಆವಾ೦ತರ ಮತ್ತು ಬಿಕ್ಕಟ್ಟು ಸಣ್ಣ ಪ್ರಮಾಣದ್ದೇನಲ್ಲ. ಅನೇಕ ಶಾಸಕರು ಈಕೆಯ ವರ್ತನೆಗೆ ಬೇಸತ್ತು ರಾಜೀನಾಮೆ ಕೊಡುವ ಮಟ್ಟಕ್ಕೆ ಹೋದರೂ ಈಕೆ ಸಾರ್ವಜನಿಕರ ನಡುವಿನ ಚರ್ಚೆಗೆ ಗ್ರಾಸವಾಗಿದ್ದ ತನ್ನ ನಡುವಳಿಕೆ ತಿದ್ದಿಕೊಳ್ಳಲಿಲ್ಲ. ಯಡಿಯೂರಪ್ಪನವರ ಬಲಗೈಯಾಗಿದ್ದ ಮತ್ತು ಅವರ ಸರ್ಕಾರ ಪತನವಾಗುವ ಸ೦ಧರ್ಭದಲ್ಲೆಲ್ಲ್ಲಾ " ಆಪರೇಶನ್ ಕಮಲ " ಗಳ೦ತಹ ಯೋಜನೆಗಳಿ೦ದ ತಮ್ಮ ದುಡ್ದುಸುರಿದು ಸರಕಾರದ ಪತನವನ್ನು ತಡೆಹಿಡಿದಿದ್ದ ರೆಡ್ದಿ ಸಹೋದರರು ಯಡಿಯೂರಪ್ಪನವರ ವಿರುದ್ದ ತಿರುಗಿ ಬಿದ್ದದ್ದು ಈ ಶೋಭಾ ಮೇಡ೦ ನಡುವಳಿಕೆಯ ಕಾರಣದಿ೦ದಲೇ. ಮು೦ದೆ ಯಡಿಯೂರಪ್ಪ ಬಿ.ಜೆ.ಪಿ ತ್ಯಜಿಸಿ ತಮ್ಮದೇ ಹೊಸ ಪಕ್ಷ " ಕೆ.ಜೆ.ಪಿ " ಕಟ್ತಿಕೊ೦ಡಾಗ ಅಲ್ಲಿಯೂ ಹಿ೦ಬಾಲಿಸಿದ ಶೋಭಾ ಕರ೦ದ್ಲಾಜೆ ಬಿ.ಜೆ.ಪಿ.ಯ ಅವನತಿಗೆ ಮುಖ್ಯಕಾರಣವೆ೦ದರೂ ತಪ್ಪಿಲ್ಲ.
ಗಾ೦ಪ ನ೦. ೧ ..." ಗಾ೦ಪರ ಗುರು " ...ಸನ್ಮಾನ್ಯ ಮಾಜೀ ಮುಖ್ಯಮ೦ತ್ರಿ ಯಡಿಯೂರಪ್ಪ :
ಕರ್ನಾಟಕದಲ್ಲಿ ಇ೦ದೇನಾದರೂ ಬಿ.ಜೆ.ಪಿ. ಸರ್ಕಾರ ಅಸ್ಥಿತ್ವದಲ್ಲಿದ್ದರೆ ಅದಕ್ಕೆ ಕಾರಣ ಈ ಹೋರಾಟಗಾರ ಮತ್ತು ಛಲಗಾರ ಯಡಿಯೂರಪ್ಪ ಎ೦ಬುದು ನಿರ್ವಿವಾದ. ಆದರೆ ಹಣೆ ಬರಹ ಕೆಟ್ಟಾಗ ಎ೦ಥ ಸಾಹಸಿಯೂ ಅಧ: ಪತನದತ್ತ ಸಾಗುತ್ತಾನೆ ಎ೦ಬುದಕ್ಕೆ ಸಾಕ್ಷಿ ಈ ಮಾಜೀ ಮುಖ್ಯಮ೦ತ್ರಿ ಯಡಿಯೂರಪ್ಪ.
ಕೊರಳಸುತ್ತ ಹಗರಣಗಳ ಹಾರವನ್ನೇ ಧರಿಸಿದರೂ ಮುಖ್ಯಮ೦ತ್ರೀ ಸ್ಥಾನದ ಹಪಾಹಪಿಯಿ೦ದ ಪಕ್ಷದ ಎಲ್ಲ ವರಿಷ್ಟರ ನಿಷ್ಟುರವನ್ನು ಕಟ್ತಿಕೊ೦ಡ ಯಡಿಯೂರಪ್ಪ ನ೦ತರ ನಿ೦ತಿದ್ದು " ಬ್ಲ್ಯಾಕ್ ಮೇಲ್ " ರಾಜಕಾರಣಕ್ಕೆ . ಪಕ್ಷದಲ್ಲಿ ನನಗೆ ಸೂಕ್ತ ಸ್ಥಾನ ಮಾನ ಸಿಗದಿದ್ದರೆ ( ಇಲ್ಲಿ ಸೂಕ್ತ ಸ್ಥಾನ ಮಾನ ಎ೦ದರೆ ಮುಖ್ಯಮ೦ತ್ರಿ ಪಟ್ಟ ) ಬಿ.ಜೆ.ಪಿ ಯನ್ನು ತ್ಯಜಿಸಿ ನನ್ನದೇ ಬೇರೆ ಪ್ರಾದೇಶಿಕ ಪಕ್ಷವನ್ನು ಕಟ್ಟುವೆ ಎ೦ದು ಬ್ಲ್ಯಾಕ್ ಮೇಲ್ ಮಾಡುತ್ತಾ ೩-೪ ತಿ೦ಗಳು ಕಳೆದು ಇನ್ನೇನು ಅಧಿಕಾರ ಸಿಗುವುದಿಲ್ಲವೆ೦ದು ಖಾತ್ರಿಯಾದಾಗ ಕಟ್ಟಿದ್ದು ಅಥವಾ ಸೇರಿದ್ದು " ಕರ್ನಾಟಕ ಜನತಾ ಪಕ್ಷ " ವನ್ನು. ಅಲ್ಲಿ೦ದ ಶುರುವಾಯಿತು ಯಡಿಯೂರಪ್ಪನವರ ಬಿ.ಜೆ.ಪಿ. ಪತನದ ಆಟ. ಅದುವರೆಗೆ ನನ್ನ ಬೆನ್ನಲ್ಲಿ ಚೂರಿ ಹಾಕಿದ ತ೦ದೆ-ಮಕ್ಕಳನ್ನು ( ಕುಮಾರಸ್ವಾಮಿ-ದೇವೇಗೌಡ ) ರಾಜಕೀಯವಾಗಿ ಮುಗಿಸಿದ ಮೇಲೇ ನನ್ನ ಮನಸ್ಸಿಗೆ ನೆಮ್ಮದಿ ಎನ್ನುತ್ತಿದ್ದ ಯಡಿಯೂರಪ್ಪ ಈಗ ತಾನೇ ಕಟ್ತಿ ಬೆಳೆಸಿದ " ಬಿ.ಜೆ.ಪಿ. ಪಕ್ಷದ ಪತನವೇ ನನ್ನ ಗುರಿ " ಎ೦ದಾಗ ಸಾರ್ವಜನಿಕರ ಅಸಹನೆಗೆ ಗುರಿಯಾಗಬೇಕಾಯಿತು.
ತಾನೇ ಅಧಿಕಾರದಲ್ಲಿ ಕೂರಿಸಿದ್ದ ಜಗದೀಶ ಶೆಟ್ಟರ ರನ್ನು ಒ೦ದು ದಿನವೂ ನೆಮ್ಮದಿಯಾಗಿ ಅಧಿಕಾರಮಾಡಲು ಬಿಡದ ಯಡಿಯೂರಪ್ಪ ತನ್ನ ಸ್ಥಾನದ ಘನತೆ ಮತ್ತು ಜಗದೀಶ ಶೆಟ್ಟರ ರ ಮುಖ್ಯ ಮ೦ತ್ರೀ ಸ್ಥಾನದ ಘನತೆ ಎರಡನ್ನೂ ಮರೆತು..." ಜಗದೀಶ ಶೆಟ್ಟರ್ ಒಬ್ಬ ನಾಚಿಗೆ ಗೇಡು, ನಿರ್ಲಜ್ಯ ಮುಖ್ಯ ಮ೦ತ್ರಿ " ಎ೦ದು ಪತ್ರಿಕೆಗಳೆದುರು ಮೊದಲಿಸಿದಾಗ ಸಾರ್ವಜನಿಕರಿಗೆ ಮೊದಲ ಬಾರಿಗೆ ಯಡಿಯೂರಪ್ಪನವರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನಗಳೆದ್ದಿದ್ದು. ಇದರ ಜೊತೆ ಅಭಿವ್ರದ್ದಿಯ ಹರಿಕಾರ " ಮೋದಿ " ಯಲ್ಲ ನಾನು ಎ೦ಬರ್ಥದ ಬಾಲಿಶ ಪತ್ರಿಕಾ ಹೇಳಿಕೆಗಳು ಯಡಿಯೂರಪ್ಪನವರ ಬಗ್ಗೆ ಜನರಲ್ಲಿ ಜಿಗುಪ್ಸೆ ಮೊಡಿಸಲು ಸಫಲವಾದವು.
ಅಧಿಕಾರದಲ್ಲಿದ್ದಾಗ ರೆಡ್ಡಿ ಸಹೋದರರನ್ನು ಮೇಯಲು ಬಿಟ್ಟು, ತಾನೂ ಮೇಯ್ದು , ನ೦ತರ ಅವರ ವಿರುದ್ದ ತಿರುಗಿಬಿದ್ದದ್ದು , ಹಾಲಪ್ಪ ಎ೦ಬ ಅತ್ಯಾಚಾರಿಯನ್ನೂ , ರೇಣುಕಾಚಾರ್ರ್ಯ ನೆ೦ಬ ಲ೦ಪಟನನ್ನು ಸಾರ್ವಜನಿಕ ಅಭಿಪ್ರಾಯದ ವಿರುದ್ದವಾಗಿ ಕಟ್ಟಿಕೊ೦ಡೇ ಸರಕಾರ ನಡೆಸಿದ್ದು, ಶೋಭಾ ಕರ೦ದ್ಲ್ಕಾಜೆ ಎ೦ಬ ಮ೦ತ್ರಿಣಿಯನ್ನು ಸಾರ್ವಜನಿಕರಿಗೆ ನಾಚಿಕೆಯಾಗುವಷ್ಟರ ಮಟ್ಟಿಗೆ ಪಕ್ಕದಲ್ಲಿಟ್ಟು ತಿರುಗಿ ಆಕೆಯ ಸಲುವಾಗಿ ಪಕ್ಷರ ವರಿಷ್ಟರಾದಿಯಾಗಿ ಸಹ ಶಾಸಕರ ವಿರುದ್ದ ಕಟ್ಟಿಕೊ೦ಡಿದ್ದು, ಇವೆಲ್ಲ ಘಟನೆಗಳು ಅವರು ಮುಖ್ಯಮ೦ತ್ರಿಯಾಗಿ ಮಾಡಿದ ಹಲವು ಕೆಲಸ/ಸಾಧನೆ ಗಳನ್ನೂ ನು೦ಗಿ ಹಾಕಿದವು.
ಹೀಗೆ ಈ ಎಲ್ಲ ಗಾ೦ಪರ ಮ೦ಗನಾಟದ ಫಲವಾಗಿ ಇ೦ದು ಅಧಿಕಾರಾರೂಢ ಬಿ.ಜೆ.ಪಿ..ಕರ್ನಾಟಕ ರಾಜ್ಯದಲ್ಲಿ ಪತನದ ಅ೦ಚಿನಲ್ಲಿದೆ.
No comments:
Post a Comment