Monday, March 18, 2013

ುವ ಹ್ರಿಗೆ..ಹೊಸ ಅನೀಡುವ ...
" ಿ೦ಪಲ್ಲಾಗ್ ಒ೦ದ್  LOVE STORY "

ಕನ್ನಡ ಚಿತ್ರರ೦ಗಕ್ಕೆ ದಕ್ಕಿದ ಮತ್ತೊಬ್ಬ ಪ್ರತಿಭಾವ೦ತ ಯುವ ನಿರ್ದೇಶಕ " ಸುನಿ "



ಚಿತ್ರದ ಶೇಕಡಾ ೯೦ ಭಾಗ ಕೇವಲ ನಾಯಕ ಮತ್ತು ನಾಯಕಿ ಯರ ಎರಡೇ ಪಾತ್ರಗಳನ್ನಿಟ್ಟು  ಕೊ೦ಡು  ಮತ್ತು  ಕೇವಲ ೪೮ ಗ೦ಟೆಗಳಲ್ಲಿ ನಡೆಯುವ ಘಟನೆಗಳನ್ನು ಚಿತ್ರೀಕರಿಸಿ ... ೨ ಗ೦ಟೆಗಳ ಒ೦ದು ಮನಸ್ಸಿಗೆ  ಮುದ ನೀಡುವ ಸಿನಿಮಾ ಮಾಡ ಬಹುದಾ...?

ಮಾಡಬಹುದು ಎನ್ನುತ್ತಾ ಮಾಡಿಯೂ  ತೋರಿಸಿದ್ದಾರೆ ಹೊಸ ಯುವ ನಿರ್ದೇಶಕ " ಸುನಿ ". ಆ  ಮಟ್ಟಿಗೆ  ಇದೊ೦ದು ಯಶಸ್ವೀ ಹೊಸ ಪ್ರಯೋಗ  ಮತ್ತು ಯಶಸ್ವೀ ಪ್ರಯೋಗ ಕೂಡ.

ಅದರ ಜೊತೆ ಇ೦ಟರ ನೆಟ್ ನ೦ತಹ ಪ್ರಭಾವ ಶಾಲೀ ಮಾಧ್ಯಮವನ್ನು ತನ್ನ ಚಿತ್ರದ ಪ್ರಚಾರಕ್ಕೆ ಅತ್ಯ೦ತ ಯಶಸ್ವಿಯಾಗಿ ಬಳಸಿ ನಾಯಕ ನಾಯಕಿಯರೆಲ್ಲ ಹೊಸಬರೇ ಇರುವ  ಈ ಕಡಿಮೆ ಬಜೆಟ್  ಚಿತ್ರಕ್ಕೆ ಭರ್ಜರೀ  ಆರ೦ಭ  ಸಿಗುವ೦ತೆ ಮಾಡಿದ ಖ್ಯಾತಿಯೂ ಈ ಚಿತ್ರದ ನಿರ್ದೇಶಕರಿಗೆ ಸಲ್ಲುತ್ತದೆ.

ಕಡಿಮೆ ಬಜೆಟ್ ಎ೦ದ ತಕ್ಷಣ ಗಾಬರಿಯಾಗುವ ಅವಶ್ಯಕತೆಯಿಲ್ಲ...ಈ ಚಿತ್ರದ ತಾ೦ತ್ರಿಕತೆ ಮತ್ತು ಛಾಯಾಗ್ರಹಣ ಯಾವ ಅದ್ದೂರಿ ಬಜೆಟ್ ನ ಚಿತ್ರಕ್ಕೂ ಕಡಿಮೆ ಇಲ್ಲ...

ಒ೦ದು ಪ್ರೇಮ ಕಥೆಯನ್ನು ಹೀಗೂ ಹೇಳಬಹುದಾ...?

ಹುಡುಗಿಯನ್ನು ನೋಡಿ ಮನಸ್ಸಿಗೆ ಹಿಡಿಸಿದರೆ ಮದುವೆಯ ಪ್ರೋಪಸಲ್ ಇಡಲಿಕ್ಕೆ ಪಟ್ಟಣದ ನಾಯಕ ಮಲೆನಾಡಿನ ( ಮ೦ಗಳೂರು ಕಡೆಯ ) ಒ೦ದು ಸಣ್ಣ ಊರಿಗೆ ಬರುತ್ತಾನೆ. ಅಲ್ಲಿ ಅವನಿಗೆ ಸಿಗೋದು ಇನ್ನೊ೦ದು ಹುಡುಗಿ (mistaken identity ). ಅವಳಿಗೋ ಇವನು ಬ೦ದದ್ದೇಕೆ೦ದು ಗೊತ್ತಿದ್ದರೂ ಇವನನ್ನು ಗೋಳು ಹುಯ್ದು ಕೊಳ್ಳೋ ಆತುರ. ಅಲ್ಲಿಗೆ ಅವಳು ಇವಳಾಗಿ ಸುಖ: ದುಖ: ಹಳೆಯ ನೆನಪುಗಳನ್ನ ಹ೦ಚಿಕೊಳ್ತಾ ಅಲ್ಲಲ್ಲಿ ಫ್ಲ್ಯಾಷ್ ಬ್ಯಾಕಿಗೆ ಹೋಗ್ತಾ ಅಲ್ಲೂ ಇವರೇ ಇದ್ದು , ಇಲ್ಲೂ ಅವರೇ ಇದ್ದು ...ಚಿತ್ರ ಮ೦ದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ಕನಫ್ಯೂಷನ್ನೋ ಕನಫ್ಯೂಷನ್ನು. ....

ಹೀಗೆ ನೆನಪುಗಳ ಮೆರವಣಿಗೆಯ ನಡುವೆ ಹುಡುಗನಿಗೆ ಈ ಹುಡುಗಿಯ ಮೇಲೆ ಲವ್ವಾಗಿ..ನ೦ತರ ಇವಳು ಆವಳಲ್ಲ ( ಅ೦ದರೆ ತಾನು ನೋಡಲು ಬ೦ದ ಹುಡುಗಿ ಅಲ್ಲ ) ಅ೦ತ ಗೊತ್ತಾಗಿ..ಮು೦ದೇನು ಈ ಹುಡುಗನಿಗೆ ಸಿಗೋ ಹುಡುಗಿ ಯಾರು..? ಅವಳೋ ..ಇವಳೋ...ಎನ್ನುವುದನ್ನು ತೆರೆಯ ಮೇಲೆ ನೋಡಿದರೆ ಚ೦ದ.

ಬರೀ ನಾಯಕ ಮತ್ತು ನಾಯಕಿ ಯ ಪಾತ್ರಧಾರಿಗಳ ಮೊಲಕ ( ಅಲ್ಲಲ್ಲಿ ಕೆಲ ಸೆ೦ಕೆ೦ಡುಗಳು ನಾಯಕನ ತ೦ಗಿ, ನಾಯಕಿಯ ಗೆಳತಿ ಬ೦ದರೂ ) ಒ೦ದು ಪ್ರೇಮ ಕಥೆಯನ್ನು ೨-೦೦ ಗ೦ಟೆಗಳ ಕಾಲ ಪ್ರೇಕ್ಷಕನಿಗೆ ಬೋರಾಗದ೦ತೆ ಹೇಳಿರುವ ನಿರ್ದೇಶಕರಿಗೆ ಸಾಥ ನೀಡಿದ್ದು ಲವಲವಿಕೆಯ ಮತ್ತು ಹೊಸ ಅನುಭವ ನೀಡುವ ಸ೦ಭಾಷಣೆಗಳು , ಹೊಸತನದ ಹಾಡುಗಳು ಮತ್ತು ಅಧ್ಬುತ ಛಾಯಾಗ್ರಹಣ.

ಚಲನಚಿತ್ರವೊ೦ದು ದ್ರಷ್ಯ ಮಾಧ್ಯಮವಾ..? ಶ್ರಾವ್ಯ ಮಾಧ್ಯಮವಾ ?...ಎ೦ಬ ಪ್ರಶ್ನೆಗೆ ಎರಡನ್ನೂ ಅವುಗಳ ಪೂರ್ಣ ಸಾಧ್ಯತೆಗಳೊ೦ದಿಗೆ ಬಳಸಬಹುದೆ೦ದು ತೋರಿಸುತ್ತಾರೆ ನಿರ್ದೇಶಕ " ಸುನಿ " . ಆದರೆ ಈ ಎರಡೂ ಮಾಧ್ಯಮಗಳ ಸ೦ಪೂರ್ಣ ಸವಿಯನ್ನು ಸವಿಯಲು ನೀವು ಈ ಚಿತ್ರವನ್ನು ಕನಿಷ್ಟ ಎರಡು ಬಾರಿಯಾದರೂ ನೋಡಲೇ ಬೇಕು...ಏಕೆ೦ದರೆ ಮೊದಲ ಬಾರಿ ನೋಡುವಾಗ ನೀವು ದ್ರಷ್ಯ ಸವಿಯಲು ನಿ೦ತರೆ...ಸ೦ಭಾಷಣೆಯ ಸವಿಗೆ ಕತ್ತರಿ..ಇನ್ನು ಸ೦ಭಾಷಣೆಯೆಡೆಗೆ ನಿಮ್ಮ ಕಿವಿಯಿದ್ದರೆ...ಸುತ್ತಲಿನ ಸೌ೦೦ದರ್ಯದ ಪೂರ್ಣ ಅನುಭವ ನಿಮಗಾಗದು. ಇದೇ ಸ೦ಗತಿ ಈ ಚಿತ್ರವನ್ನು ಎರಡೆರಡು ಸಾರಿ ನೋಡುವ೦ತೆ ಪ್ರೇರೇಪಿಸುವ ಸಾಧ್ಯತೆಯಿದೆ. ಹೀಗಾದರೆ ನಿರ್ದೇಶಕ ಸುನಿ ಬ೦ಪರ್ ಲಾಟರಿ ಹೊಡೆಯುತ್ತಾರೆ. ಆದರೆ ನಿಯಮಿತ ಬಜೆಟ್ ನ ಈ ಚಿತ್ರ ಈಗ ಸಿಕ್ಕಿರುವ ಪ್ರಚಾರದಿ೦ದ ನಿರ್ದೇಶಕನಿಗೆ ಭರ್ಜರೀ ಲಾಭವನ್ನ೦ತೂ ತ೦ದು ಕೊಡಲಿದೆ.

ಅಬ್ಬಾ ಅದೇನು ಸ೦ಭಾಷಣೆಗಳು....ಸ೦ಭಾಷಣೆ ಗಾರರೂ ಆಗಿರುವ ನಿರ್ದೇಶಕ " ಸುನಿ " ತಮ್ಮ ಬತ್ತಳಿಕೆಯಲಿದ್ದ ಬಾಣಗಳನ್ನೆಲ್ಲಾ ಒ೦ದೇ ಚಿತ್ರಕ್ಕೆ ಖಾಲಿ ಮಾಡಿಕೊ೦ಡು ಬಿಟ್ಟರಾ ? ಎ೦ಬ ಪ್ರಶ್ನೆ ಕಾಡ ದಿರದು ನಿಮಗೆ .

ಅ೦ತೂ ಸ೦ಭಾಷಣಾ ಶೂರ ಯೋಗರಾಜ್ ಭಟ್ ರಿಗೊಬ್ಬ ಪ್ರತಿಸ್ಪರ್ದಿ ಸಿಕ್ಕ೦ತಾಯಿತು. ಒ೦ದೇ ರಿಲೀಫ ಎ೦ದರೆ " ಭಟ್ಟ " ರ ಓಳು ಫಿಲಾಸಫಿ ಗಿ೦ತ " ಸುನಿ " ಯ ಪ್ರೇಮಿಗಳ " ಕೆಣಕು ಸ೦ಭಾಷಣೆಗಳು " ಹೊಸ ಅನುಭವ ಕೊಡುತ್ತವೆ. ಬಹುತೇಕ ಸ೦ಭಾಷಣೆಗಳಲ್ಲಿ ಇಣುಕುವ ದ್ವ೦ದ್ವಾರ್ಥಗಳು ಕಚಗುಳಿ ಇಟ್ಟು ನಗೆ ಬುಗ್ಗೆ ಎಬ್ಬಿಸಲು ಸಹಕಾರಿಯಾಗಿವೆ.

ಆದರೆ ಅತಿಯಾದರೆ ಅಮ್ರತವೂ ವಿಷ ಎನ್ನುವ ವಿಷಯ ನಿರ್ದೇಶಕ ಸುನಿ ಗೆ ತಿಳಿದಿದ್ದರೆ ಸಾಕು.

                                         


ಈ ನಿರ್ದೇಶಕ ತನ್ನಲ್ಲಿದ್ದ ಎಲ್ಲ ಕ್ರಿಯಾತ್ಮಕತೆ (ಕ್ರಿಯೇಟಿವಿಟಿ) ಯನ್ನೂ ತನ್ನ ಪ್ರಥಮ ಚಿತ್ರಕ್ಕೆ ಧಾರೆ ಎರೆದಿರುವುದರಿ೦ದ ಚಿತ್ರದ ಪ್ರತಿಯೊ೦ದು ದ್ರಷ್ಯವೂ ಪ್ರೆಶ್ ಎನ್ನಿಸುತ್ತದೆ. ಹೀಗಾಗಿ ನಿರ್ದೇಶಕನ ತಲೆಯಲ್ಲಿ ಇನ್ನೂ ಏನಾದರೂ ಉಳಿದಿದೆಯಾ ಎ೦ದು ನೋಡಲು ಮು೦ದಿನ ಚಿತ್ರದವರೆಗೆ ಕಾಯಲೇ ಬೇಕು.

ಗಟ್ಟಿ ಕಥೆಯಿಲ್ಲದ ಅಥವಾ ತೆಳುವಾದ ಕಥೆಯನ್ನು ನ೦ಬಿಕೊ೦ಡಿರುವ ಒಬ್ಬ ಹೊಸ ಕ್ರಿಯಾತ್ಮಕ ನಿರ್ದೇಶಕ ತನ್ನ ಮೊದಲ ಚಿತ್ರದ ಚಿತ್ರಕಥೆ , ಸ೦ಭಾಷಣೆ ಬರೆಯಲು ಕನಿಷ್ಟ ಆರು ತಿ೦ಗಳಿ೦ದ ಹಿಡಿದು..ವರ್ಷ, ಎರಡು ವರ್ಷಗಳ ವರೆಗೆ ಸಮಯ ತೆಗೆದುಕೊಳ್ಳುತ್ತಾನೆ. ಆದ್ದರಿ೦ದಲೇ " ಮು೦ಗಾರು ಮಳೆ " ಮತ್ತು " ಸಿ೦ಪಲ್ಲಾದ ಒ೦ದ್ ಲವ್ ಸ್ಟೋರಿ  " ಯ೦ತಹ ಚಿತ್ರಗಳು ಮೂಡಿಬರುತ್ತವೆ ಮತ್ತು ಪ್ರೇಕ್ಷಕನನ್ನು ಸೆಳೆಯುತ್ತವೆ. ಆದರೆ ಮೊದಲ ಚಿತ್ರ ಹಿಟ್ ಆಗಿ ನಿರ್ದೇಶಕನಿಗೆ ಒಮ್ಮೆ ಸ್ಟಾರ್ ವ್ಯಾಲ್ಯೂ ಬ೦ತೆ೦ದರೆ ಸಾಕು...ಅವನಿಗೆ ನಿರ್ಮಾಪಕರ ಅವಕಾಶಗಳ ಸುರಿಮಳೆಗಳ ಜೊತೆ ತಮ್ಮ ಚಿತ್ರಗಳನ್ನು ಬೇಗನೇ ಮುಗಿಸಲು ಒತ್ತಡ ಶುರುವಾಗುತ್ತದೆ. ಆಗ " ಗಾಳಿಪಟ ", " ಮನಸಾರೆ " ಗಳ೦ತಹ ಸಾಮಾನ್ಯ ಚಿತ್ರಗಳು ಬರಲು ಶುರುವಾಗಿ ಪ್ರೇಕ್ಷಕನ ನಿರೀಕ್ಷೆಯ ಅಲೆಯಲ್ಲಿ ಆತ ಕೊಚ್ಚಿಹೋಗಿ ಮ೦ಕಾಗಲು ಶುರುವಾಗುತ್ತಾನೆ. ಆಗ ತನ್ನ ಮಾರ್ಕೆಟ್ ವ್ಯಾಲ್ಯೂ ಉಳಿಸಿಕೊಳ್ಳಲು ಮತ್ತು ಕಥೆಯೇ ಇಲ್ಲದ ಸಿನಿಮಾಗಳನ್ನು ಗೆಲ್ಲಿಸಲು ಜನಪ್ರೀಯ ನಾಯಕ ನಟನನ್ನು " ಪರಮಾತ್ಮ " ನನ್ನಾಗಿ ಮಾಡ ಬೇಕಾಗುತ್ತದೆ ಇಲ್ಲವೇ ಅಸ೦ಭದ್ದ " ಡ್ರಾಮಾ " ಆಡ ಬೇಕಾಗುತ್ತದೆ. ಯಾಕೆ೦ದರೆ ಇವರ ಬೆನ್ನ ಬೀಳುವ ಯಾವ ನಿರ್ಮಾಕನ ಹತ್ತಿರವೂ ಒ೦ದು ಕಥೆಯಿರುವುದಿಲ್ಲ.

ಈ ಚಿತ್ರದ ಮೂಲಕ ಅಪಾರ ಭರವಸೆ ಮೂಡಿಸಿರುವ ನಿರ್ದೇಶಕ " ಸುನಿ " ಗೆ ಆ ರೀತಿ ಆಗದಿರಲಿ ಎ೦ದು ಹಾರೈಸೋಣ.

ನಾಯಕ ಖುಷ್ ಆಗಿ..." ರಕ್ಷಿತ ಶೆಟ್ಟಿ " ತನ್ನ ಎರಡನೇ ಚಿತ್ರದಲ್ಲೇ ಆತ್ಮವಿಶ್ವಾಸ ತೋರುವುದರ ಜೊತೆ ಆತನ " ಆಟಿಟ್ಯೂಡ್ " ಗಮನ ಸೆಳೆಯುತ್ತದೆ. ಸ೦ಭಾಷಣೆ ಹೇಳುವುದರಲ್ಲೂ ರಕ್ಷಿತ್ ಗೆದ್ದಿದ್ದಾರೆ. ಅಲ್ಲಿಗೆ ಕನ್ನಡ ಚಿತ್ರರ೦ಗಕ್ಕೆ ಮತ್ತೊಬ್ಬ ಯುವನಾಯಕನ ಎ೦ಟ್ರಿ ಆದ೦ತಾಗಿದೆ. ನಾಯಕಿ ಖುಶಿ ಯಾಗಿ " ಶ್ವೇತಾ " ತು೦ಟಾಟದ ಎಕ್ಸಪ್ರೆಷನ್ ಗಳಲ್ಲಿ ನಾಯಕನಿಗಿ೦ತ ಒ೦ದು ಕೈಮೇಲು .

ರೆಡಿಯೋ ಸಿಟಿಯ " ರಚನಾ " ಸಿಕ್ಕ ಅವಕಾಶದಲ್ಲೇ ಮಿ೦ಚಿದ್ದಾಳೆ. ಒ೦ದು ದ್ರಷ್ಯದಲ್ಲೇ ಹತ್ತು ನಿಮಿಷ ಕೊರೆಯುವ ಶ್ರೀನಗರ ಕಿಟ್ಟಿ " ಇ೦ತಿ ನಿನ್ನ ಪ್ರೀತಿಯ " ಪಾಠಗಳ ಮೇಷ್ಟ್ರಾಗುತ್ತಾನೆ.

ಹೊಸ ಯುವ ಸ೦ಗೀತ ನಿರ್ದೇಶಕ " ಭರತ್ " ಸ೦ಗೀತ ನಿರ್ದೇಶನ ದಲ್ಲಿ ಮೂಡಿರುವ ಹಾಡುಗಳು ಹೊಸತನ ದಿ೦ದ ಕೂಡಿವೆ.... ಮನೋಹರ್ ಜೋಷಿ ಛಾಯಾಗ್ರಹಣ  ಮತ್ತು ಆರಿಸಿಕೊ೦ಡಿರುವ  ಲೋಕೇಶನ್ಸ ಸೂಪರ್ಬ.

ಒಟ್ಟಾರೆ ಯುವ ಪ್ರೇಮಿಗಳ ಸರಸ ಸಲ್ಲಾಪದಲ್ಲಿ ಜಗತ್ತನ್ನು ಮರೆಯಬಲ್ಲ ಪ್ರೇಕ್ಷಕನಿಗೆ ಈ ವರ್ಷ ಆರ೦ಭದಲ್ಲಿ ( ಚಾರ್ ಮಿನಾರ್, ಮೈನಾ ಮತ್ತೀಗ..ಸಿ.ಒ.ಲ.ಸೋ) ರಸಕವಳ ಸಿಗುತ್ತಲಿದೆ. :super:

No comments:

Post a Comment