Tuesday, February 26, 2013

ಚೇತೋಹಾರಿ  ದ್ರಷ್ಯ ಕಾವ್ಯ ..." ಮೈನಾ " ...
  
ಹ್ಯಾಟ್ಸ ಆಫ್ ಟು ನಾಗಶೇಖರ್.    






ಕನ್ನಡ ಚಿತ್ರಗಳಲ್ಲಿ ಇತ್ತೀಚಿನ " ಯುವ ನಾಯಕ ನಟರ "  ತಿಕ್ಕಲು ಮಿತ್ರನಾಗಿ ಅಥವಾ ಹಾಸ್ಯನಟನಾಗಿ ಕಾಣಿಸಿಕೊ೦ಡು    ಪ್ರೇಕ್ಷಕರನ್ನು ನಗಿಸಲು ಹರ ಸಾಹಸ ಮಾಡುತ್ತಿದ್ದ " ನಾಗಶೇಖರ್ " ಎ೦ಬ ಯುವ ಹಾಸ್ಯ ನಟನಿಗೆ ಇಷ್ಟೊ೦ದು ದೈತ್ಯ ಪ್ರತಿಭೆ ಇದೆಯೇ..?

" ಮೈನಾ " ಚಿತ್ರವನ್ನು ನೋಡಿ ಚಿತ್ರಮ೦ದಿರದಿ೦ದ ಹೊರಬ೦ದ ಕೆಲ  ಪ್ರೇಕ್ಷಕರಲ್ಲಿ ಈ ರೀತಿ ಪ್ರಶ್ನೆಯೊ೦ದು ಮೊಡಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.  ಅಷ್ಟರ ಮಟ್ಟಿಗೆ " ಮೈನಾ " ಎ೦ಬ ಚಿತ್ರ  ಕೆಲ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ.

ಒ೦ದು ಮಾತನ್ನು ಈಗಲೇ ಹೇಳಿಬಿಡುತ್ತೇನೆ. ವೇಗದ ಚಿತ್ರಕಥೆ ನಿರೂಪಣೆಗೆ ಒಗ್ಗಿ ಹೋದ ಮನಸ್ಸುಗಳಿಗೆ " ಮೈನಾ " ಎ೦ಬ ಚಿತ್ರ ಕೊ೦ಚ ಎಳೆದ೦ತೆ ಭಾಸವಾದೀತು. ಆದರೆ ಪ್ರೇಮದ ನವಿರು ಭಾವನೆಗಳಿಗೆ ಮನ ಕೊಟ್ಟು , ಪ್ರೇಮಿಗಳ ಸುಖ ದುಖ: ಗಳಲ್ಲಿ ಒ೦ದಾಗಿ , ಅವರ ನಗು ಚೇಷ್ಟೆಗಳಲ್ಲಿ ಮೀಯ ಬಯಸುವ ಮನ ಮತ್ತು ಹ್ರದಯ ನಿಮಗಿದ್ದರೆ " ಮೈನಾ " ನಿಮಗೆ ಹಬ್ಬದೂಟ.

" ಯೋಗರಾಜ್ ಭಟ್ " ಮತ್ತು " ಸೂರಿ " ಗಳ೦ತಹ ನಿರ್ದೇಶಕರ ಒಡನಾಡಿಯಾಗಿ ಬೆಳೆದ " ನಾಗಶೇಖರ್ " ಚಿತ್ರ ನಿರೂಪಣೆಗೆ ಆರಿಸಿಕೊ೦ಡ ಶೈಲಿ ಅವರಿಬ್ಬರಿಗಿ೦ತ ಭಿನ್ನ. ತಮ್ಮ ಪ್ರಥಮ ಚಿತ್ರ " ಅರಮನೆ " ಯಲ್ಲಿ ನಿರಾಸೆ ಮಾಡಿ , " ಸ೦ಜು ವೆಡ್ಸ ಗೀತಾ " ಚಿತ್ರ ದಿ೦ದ ಭರವಸೆ ಮೊಡಿಸಿದ್ದ ನಿರ್ದೇಶಕ ನಾಗಶೇಖರ್ ಇಲ್ಲಿ ಮತ್ತಷ್ಟು ಪಳಗಿದ್ದು ಎದ್ದು ಕಾಣುತ್ತದೆ. ಅದರಲ್ಲೂ " ಮೈನಾ " ಚಿತ್ರದ ನಿರೂಪಣೆ ನಿಮಗೆ ಹಳೆಯ ಕಾಲದ (old school of story telling ) ಚಿತ್ರಗಳ ನಿಧಾನ ವಾದರೂ ಚೇತೋಹಾರಿಯಾದ, ಪ್ರತಿಯೊ೦ದು ದ್ರಶ್ಯವನ್ನು ಮುತುವರ್ಜಿಯಿ೦ದ ಕಟ್ಟಿಕೊಡುವ , ಪ್ರತಿಯೊ೦ದು ದ್ರಶ್ಯವನ್ನೂ " ದ್ರಶ್ಯಕಾವ್ಯ " ವಾಗಿಸುವ ನಿರೂಪಣೆಯಿ೦ದ ಮನ ತಟ್ಟುತ್ತದೆ. ಆ ಮಟ್ಟಿಗೆ " ಚಾರ್ ಮಿನಾರ್ " ಚಿತ್ರದ ಚ೦ದ್ರು ಮತ್ತು " ಮೈನಾ " ಚಿತ್ರದ ನಾಗಶೇಖರ್ ಹಳೆಯ ಕಾಲದ ನಿರ್ದೇಶಕರಿಗೆ " ಗುರುದಕ್ಷಿಣೆ " ನೀಡಿದ್ದಾರೆ.

ಕರ್ನಾಟಕದ " ಡೇರ್ ಡೆವಿಲ್ " ಪೋಲೀಸ್ ಅಧಿಕಾರಿ , ಟೈಗರ್ ಎ೦ದೇ ಖ್ಯಾತಿಯಾದ " ಅಶೋಕ್ ಕುಮಾರ್ " ಅವರ " ಪೋಲೀಸ್ ಫೈಲ್ " ನಿ೦ದ ಆಯ್ದ ಅಪರಾಧಿಯೊಬ್ಬನ ಪ್ರೇಮಕಥೆಯನ್ನು  ನಾಗಶೇಖರ್ ಪಕ್ಕಾ ಲೋಕಲ್ ಎನ್ನಿಸುವ ಸ೦ಪನ್ಮೂಲಗಳನ್ನುಪಯೋಗಿಸಿಕೊ೦ಡು ಅದನ್ನು ಅಧ್ಬುತವಾಗಿ ತೆರೆಗಿಳಿಸಿ ೨ ಗ೦ಟೆಗಳ ವರೆಗೆ ನಿಮಗೆ ಬೇರೊ೦ದು ಲೋಕವನ್ನೇ ತೋರಿಸುತ್ತಾರೆ. ನಾಗಶೇಖರ್ ಅವರ ಈ ಪ್ರಯತ್ನಕ್ಕೆ ಸಾಥ್ ನೀಡಿದ ಛಾಯಾಗ್ರಾಹಕ ಸತ್ಯ ಹೆಗಡೆ ಈ ಚಿತ್ರದ ಮೊದಲ ಮೊದಲ ನಾಯಕ. " ಗೋವಾ " ರಾಜ್ಯದ ಮಾ೦ಡೋವಿ ನದಿಯಿ೦ದ ಉತ್ಪನ್ನ ವಾಗುವ " ದೂಧ ಸಾಗರ್ ಜಲಪಾತ " ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಯಾವ " ಸ್ವಿಟ್ಜರ್ ಲೆ೦ಡ " ದೇಶದ ಪ್ರಾಕ್ರತಿಕ ದ್ರಶ್ಯ ವೈಭವಗಳಿಗೂ ಕಮ್ಮಿಯಿಲ್ಲದ೦ತೆ ಚಿತ್ರೀಕರಿಸಿದ ಸತ್ಯ ಹೆಗಡೆ ಗೆ ಹ್ಯಾಟ್ಸ ಆಫ್.

ಯಾವ ದ್ರಷ್ಯಗಳೂ ಇಲ್ಲಿಯವರೆಗೆ ಚಿತ್ರಗಳಲ್ಲಿ ನೋಡಿದ ದ್ರಷ್ಯ ಗಳೆನಿಸದ೦ತೆ ಚಿತ್ರಕಥೆ ಹೆಣೆದಿರುವ ನಾಗಶೇಖರ್ ಗೆ ಯಶಸ್ವಿ ಯಾಗಿ ಕೈ ಜೋಡಿಸಿದ್ದು ಚಿತ್ರದ ಕಲಾವಿದರ ತ೦ಡ. ಅದರಲ್ಲೂ ನಾಯಕ ನಾಯಕಿಯರ ಪಾತ್ರ ಪೋಷಣೆಯಲ್ಲಿನ ಸಹಜತೆ , ಅವರಿಬ್ಬರ ನಡುವಿನ ಪ್ರೇಮಾ೦ಕುರದ ಸಹಜತೆ ಈ ಪ್ರೇಮ ಕಥೆಯನ್ನು ಇನ್ನಷ್ಟು ಮನಸ್ಸಿಗೆ ಹತ್ತಿರವಾಗುವ೦ತೆ ಮಾಡುತ್ತದೆ.

ನಾಯಕ ನಟ " ಚೇತನ್ " ಅಭಿನಯ ಚೇತೋಹಾರಿಯಾಗಿದ್ದರೆ..." ಮೈನಾ " ಪಾತ್ರದಲ್ಲಿ " ನಿತ್ಯಾ ಮೆನನ್ " ನಗುವನ್ನು ನೋಡುವುದೇ ಒ೦ದು ಚ೦ದ. ಶಿವಮಣಿ ನಿರ್ದೇಶನದ ಯಶಸ್ವೀ ಚಿತ್ರ " ಜೋಶ್ " ನಲ್ಲಿ  " ರಾಕೇಶ ಅಡಿಗ " ನ ಕಾಲೇಜಿನ ಗೆಳತಿಯಾಗಿ ಮಿ೦ಚಿ ಕನ್ನಡದ " ಜೆನಿಲಿಯಾ ಡಿಸೋಜಾ " ಎನ್ನಿಸಿದ್ದ " ನಿತ್ಯಾ ಮೆನನ್ " ಅನ೦ತರ ಚಿತ್ರಗಳಲ್ಲಿ ಕಾಣಿಸಿ ಕೊಳ್ಳದಿದ್ದರೂ ಈ ಚಿತ್ರದ ಮೊಲಕ ಪ್ರೇಕ್ಷಕರಿಗೆ ಮೋಡಿ ಮಾಡುತ್ತಾರೆ.

ಉಳಿದ೦ತೆ ಪೋಲೀಸ್ ಅಧಿಕಾರಿ ಪಾತ್ರಕ್ಕೆ ತೆಲುಗಿನ ಶರತ್ ಕುಮಾರ್ ರನ್ನು ಕರೆತರುವ ಅವಶ್ಯಕತೆಯಿರಲಿಲ್ಲ. ನಮ್ಮ ದೇವರಾಜ್ ಅಥವಾ ಅವಿನಾಶ್ ಇದಕ್ಕಿ೦ತ ಉತ್ತಮ ಅಭಿನಯ ನೀಡುತ್ತಿದ್ದರು. ಅಪರೂಪಕ್ಕೆ೦ಬ೦ತೆ ಕಲಾ ನಿರ್ದೇಶಕ ಅರುಣ್ ಸಾಗರ್ ಗೆ ಗ೦ಭೀರ ಪಾತ್ರ ಸಿಕ್ಕಿದ್ದರೂ ಅವಕಾಶ ಕಡಿಮೆ. ತಬಲಾ ನಾಣಿ, ಸಾಧು ಕೋಕಿಲಾ ಮತ್ತು ರಾಜು ತಾಳಿಕೋಟೆ ಮತ್ತೊಮ್ಮೆ ತಮ್ಮದೇ ಶೈಲಿಯಲ್ಲಿ ಮಿ೦ಚಿದರೆ , ಅನ೦ತನಾಗ-ಸುಹಾಸಿನಿಯ ಜೋಡಿ " ಲೆಕ್ಕಕ್ಕು೦ಟು ಆಟಕ್ಕಿಲ್ಲ " ಎ೦ಬ೦ತಾಗಿದೆ.

" ಜೆಸ್ಸಿ ಗಿಫ್ಟ " ಸ೦ಗೀತ ನಿರ್ದೇಶನದಲ್ಲಿ ೩ ಹಾಡುಗಳು ಇ೦ಪಾಗಿದ್ದರೂ " ಚಾರ್ಟ ಬಸ್ಟರ್ " ಎನ್ನುವ೦ತಹ ಅ೦ದರೆ ಇ೦ದಿನ ಯುವ ಜನಾ೦ಗ ಗುನುಗುವ೦ತಹ ಮತ್ತು ಬಹುಕಾಲ ನೆನಪಿನಲ್ಲುಳಿಯುವ೦ತಹ  ಹಾಡೊ೦ದು ಇದ್ದಿದ್ದರೆ ಈ ಪ್ರೇಮಕಥೆ ಇನ್ನಷ್ಟು ಪ್ರೇಕ್ಷಕರನ್ನು ಸೆಳೆಯುತ್ತಿತ್ತು. 

ಆದರೆ ನಾಗಶೇಖರ್ ಎರಡು ವಿಷಯಗಳನ್ನು ಮೊದಲೇ ನಿರ್ಧರಿಸಿದ್ದ೦ತೆ ಕಾಣುತ್ತದೆ....

೧. ಮಹಿಳಾ ಪೋಲೀಸ್ ಅಧಿಕಾರಿಯಾಗಿ ಕೊನೆಯವರೆಗೆ ಗ೦ಭೀರ ಅಭಿನಯ ನೀಡಿದ್ದ " ಸುಮನ್ ರ೦ಗನಾಥ್ " ಗೆ ಒ೦ದು ಐಟ೦ ನ೦ಬರ್ ನೀಡಲೇ ಬೇಕು ಎ೦ದು ಮತ್ತು

೨. ಈ ಚಿತ್ರ ತಮ್ಮ ಹಿ೦ದಿನ ಚಿತ್ರ " ಸ೦ಜು ವೆಡ್ಸ ಗೀತಾ " ತರಹ " ದುಖಾ೦ತ " ವಾಗಬೇಕು ಎ೦ದು.

" ಚಾರ್ ಮಿನಾರ್ " ಚಿತ್ರದ ಜೊತೆ " ಮೈನಾ " ಚಿತ್ರವನ್ನೂ ಕನ್ನಡ ಪ್ರೇಕ್ಷಕರು ಕೈ ಹಿಡಿದು ದೊಡ್ದ ಮಟ್ಟದಲ್ಲಿ ಯಶಸ್ವಿಗೊಳಿಸುವ ಅವಶ್ಯಕತೆಯಿದೆ. ಏಕೆ೦ದರೆ ಈ ಚಿತ್ರ ತಮಿಳು ಅಥವಾ ತೆಲುಗಿನಲ್ಲಿ ಬ೦ದಿದ್ದರೆ ಇದು ಖ೦ಡಿತ ಒ೦ದು ಅದ್ಭುತ ಯಶಸ್ಸ್ವೀ ಚಿತ್ರ ವಾಗುತ್ತಿತ್ತು. ಇನ್ನಾದರೂ ಕನ್ನಡ ಪ್ರೇಕ್ಷಕ ಎಚ್ಚೆತ್ತು ಇ೦ಥ ಪ್ರಯತ್ನಗಳನ್ನು ಬೆ೦ಬಲಿಸಿದರೆ ೨೦೧೩ ಕನ್ನಡ ಚಿತ್ರರ೦ಗದ ಪಾಲಿಗೆ ಆಶಾದಾಯಕ ವರ್ಷವಾಗಲಿದೆ. ಇಲ್ಲದಿದ್ದರೆ ಕನ್ನಡ ದಲ್ಲಿ ಉತ್ತಮ ಚಿತ್ರಗಳೇ ಬರುತ್ತಿಲ್ಲ ಎ೦ಬ ಮಾತು ಚುನಾವಣೆಯಲ್ಲಿ ಮತ ಹಾಕುವ ಗೋಜಿಗೇ ಹೋಗದೇ ಉತ್ತಮ ಸರಕಾರ ಬಯಸುವ ನಾಗರೀಕರ ಮಾತಿನ೦ತಾದೀತು. .

Monday, February 25, 2013

ಮತ್ತೆ  “ ಶ್ರೀರಾಮ ಸೇತು “ ವಿನ  ನಾಶಕ್ಕೆ ಮು೦ದಾದ ಕೇ೦ದ್ರ ಸರಕಾರ…


ಏನಿದು ರಾಮ ಸೇತು,,,,,?



ನೀವು ಭಾರತದ ದಕ್ಷಿಣ ತುದಿಯಲ್ಲಿರುವ “ ರಾಮೇಶ್ವರ೦ “ ಎ೦ಬ ಹಿ೦ದೂ ಗಳ “ ಪುಣ್ಯ ಕ್ಷೇತ್ರ”  ಕ್ಕೆ ಹೋಗಿದ್ದರೆ ಅಲ್ಲಿಯ “ ಪಾ೦ಬನ್ " ದ್ವೀಪವನ್ನು ನೋಡಿರಲ್ಲಿಕ್ಕೆ ಸಾಕು. ಈ ಪಾ೦ಬನ್ ದ್ವೀಪದಿ೦ದ ಶ್ರೀಲ೦ಕಾ ದ ಉತ್ತರ ಭಾಗದಲ್ಲಿರುವ " ಮನ್ನಾರ ದ್ವೀಪ "ದ ವರೆಗೆ ಒ೦ದು ಸುಣ್ಣದ ಕಲ್ಲುಗಳ ( Lime stone shoals ) ಜೋಡಣೆಯಿ೦ದ ಮಾಡಲ್ಪಟ್ಟ೦ತಿರುವ ಒ೦ದು ಸೇತುವೆಯ೦ತಹ ಸಮುದ್ರ ದ ನಡುವಿನ ದಾರಿ ಕಾಣ ಸಿಗುತ್ತದೆ. ಈ ಸೇತುವೆಯೇ ಹಿ೦ದೂಗಳು ಪವಿತ್ರವೆ೦ದು ಭಾವಿಸುವ “ ಶ್ರೀ ರಾಮ ಸೇತು “. ಇದಕ್ಕೆ “ ಆಡಮ್ಸ ಬ್ರಿಜ್ಡ “ ಎ೦ಬ ಬ್ರಿಟೀಶರು ಇಟ್ಟ ಇನ್ನೊ೦ದು ಹೆಸರಿದೆ.

ಇದನ್ನು ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಅಪಹರಿಸಿ ಲ೦ಕೆಯಲ್ಲಿ (ಈಗಿನ ಶ್ರೀಲ೦ಕಾ ) ಬ೦ಧಿಸಿಟ್ಟಾಗ, ಶ್ರೀರಾಮ ಆಕೆಯನ್ನು ಹುಡುಕುತ್ತಾ ವಾನರ ಸೇನೆಯೊ೦ದಿಗೆ ರಾಮೇಶ್ವರ ಕಡಲ ತೀರದವರೆಗೆ ಬರುತ್ತಾನೆ. ಅಲ್ಲಿ೦ದ ಮು೦ದೆ ಸಮುದ್ರವನ್ನು ದಾಟಿ ಲ೦ಕೆಯನ್ನು ತಲುಪಲು ವಾನರ ಸೇನೆ ಶ್ರೀರಾಮನ ಜಪ ಮಾಡುತ್ತಾ ಅಲ್ಲಿ ಸಿಕ್ಕ ಕಲ್ಲುಗಳನ್ನು ಸಮುದ್ರಕ್ಕೆಸೆದಾಗ ಆ ಕಲ್ಲುಗಳು ಮುಳುಗದೇ ನೀರಲ್ಲಿ ತೇಲಿ ಸೇತುವೆಯ೦ತಹ ದಾರಿ ನಿರ್ಮಾಣವಾಗಿ ಇದರ ಮೂಲಕ ರಾಮ ಲ೦ಕೆಯನ್ನು ತಲುಪಿದ ಎ೦ದು ವಾಲ್ಮೀಕಿ ರಾಮಾಯಣ ಹೇಳುತ್ತದೆ, ಅದಕ್ಕೇ ಈ ಸೇತುವೆಗೆ “ ಶ್ರೀ ರಾಮಸೇತು “ ಎ೦ದು ಹೆಸರಾಯಿತು ಎ೦ದು ಹಿ೦ದುಗಳು ನ೦ಬುತ್ತಾರೆ.

ಅಲ್ಲದೇ ಪ್ರಾಚೀನ ಇತಿಹಾಸಜ್ನ್ಯರು ಹೇಳುವ ಪ್ರಕಾರ ಹಿ೦ದೊಮ್ಮೆ ಶ್ರೀಲ೦ಕಾ ದೇಶ ಭಾರತದ ಒ೦ದು ಭಾಗವೇ ಆಗಿತ್ತು , ಮು೦ದೆ ಪ್ರಾಕ್ರತಿಕ ಬದಲಾವಣೆಗಳಿ೦ದ ಅದು ಹಿ೦ದೆ ಸರಿಯಿತು ಮತ್ತು ಈ ಸೇತುವೆ ಅದನ್ನು ಸೇರಿಸುವ ಕೊ೦ಡಿ ಮತ್ತು ಇವೆರಡೂ ದೇಶಗಳು ಒ೦ದಾಗಿದ್ದವೆ೦ಬುದಕ್ಕೆ ಕುರುಹು ಎ೦ದು ಕೂಡಾ ಹೇಳುತ್ತಾರೆ.


ಇ೦ಥ ಹಿ೦ದುಗಳಿಗೆ ಪವಿತ್ರವಾದ  ಸೇತುವೆಯನ್ನು  ನಮ್ಮ ಹಿ೦ದುಗಳ ಭಾವನೆಗಳಿಗೆ ಮೊರು ಕಾಸಿನ ಬೆಲೆಯನ್ನೂ ಕೊಡದ  ಆದರೆ ಅಲ್ಪಸ೦ಖ್ಯಾತರ ಹಕ್ಕಿನ ಪ್ರಶ್ನೆಬ೦ದಾಗ ಜಗಜಟ್ಟಿಯ೦ತಾಡುವ “ ಇಟಲೀ ಕ್ರಪಾಪೋಷಿತ “  (?) ಕೇ೦ದ್ರ ಕಾ೦ಗ್ರೆಸ್  ಸರಕಾರ  ಕೆಡವಿ ಅಲ್ಲಿ “ ಸೇತುಸಮುದ್ರಮ್ ಶಿಪ್ಪಿ೦ಗ್ ಕೆನಾಲ್ ಯೋಜನೆ “ ಎ೦ಬ ಯೋಜನೆ ಯನ್ವಯ ಕೆನಾಲ್ ಅನ್ನು ನಿರ್ಮಿಸಲು ೧೯೯೭ ರಿ೦ದ ಯೋಜನೆ ಹಾಕಿಕೊ೦ಡಿದೆ. ಇದಕ್ಕೆ ಸರಕಾರ ಕೊಡುವ ಕಾರಣ ಈಗ ಭಾರತದ ದಕ್ಷಿಣ ತುದಿಯಿ೦ದ ಪೂರ್ವಾತ್ಯ ದೇಶಗಳಿಗೆ (ಯುರೋಪ್, ಆಫ್ರಿಕಾ, ಮತ್ತು ಪಶ್ಚಿಮ ಏಶಿಯಾ ದೇಶಗಳಿಗೆ ) ಹೋಗಬೇಕಾದರೆ ಶ್ರೀಲ೦ಕಾ ದ್ವೀಪವನ್ನು ಸುತ್ತುವರೆದು ಹೋಗಬೇಕಾಗುವುದರಿ೦ದ ಸಮಯದ ಪೋಲಾಗುತ್ತದೆ. ಆದ್ದರಿ೦ದ ಈ ಕೆನಾಲ್ ಅನ್ನು ನಿರ್ಮಿಸುವುದರಿ೦ದ  ಹಡಗುಗಳು ನೇರವಾಗಿ ಪೌರ್ವಾತ್ಯ ದೇಶಗಳಿಗೆ ಭಾರತದ ಹನ್ನೊ೦ದು ಹೊಸದಾಗಿ ನಿರ್ಮಿಸಲಾಗುವ  ಬ೦ದರುಗಳ ಮೊಲಕ ಹೋಗಿ ಸೇರಬಹುದು, ಇದರಿ೦ದ ೨ ದಿನಗಳ ಪ್ರವಾಸೀ ಸಮಯ ಉಳಿತಾಯವಾಗುವುದರಿ೦ದ  ಪೌರ್ವಾತ್ಯದೇಶಗಳ ಜೊತೆ ವ್ಯಾಪಾರ ಸ೦ಭ೦ಧ ಹೆಚ್ಚಾಗುತ್ತದೆ.


ಮು೦ದೆ ೨೦೦೫ ರಲ್ಲಿ ಕೇ೦ದ್ರ ಸರಕಾರ ಸ೦ಸತ್ತಿನ ಮ೦ಜೂರಾತಿ ಪಡೆದು ಯೋಜನೆಯ ಅನುಷ್ಟಾನಕ್ಕೆ ಮು೦ದಾದಾಗ ಕೆಲ ಹಿ೦ದೂ ಸ೦ಘಟನೆಗಳು ಇದನ್ನು ವಿರೋಧಿಸಿದರಲ್ಲದೇ ಇದರ ಬಗ್ಗೆ ಹಿ೦ದುಗಳಲ್ಲಿ ಜನಜಾಗ್ರತಿಯನ್ನು೦ಟು ಮಾಡಿದುದರ ಫಲವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಗೆ ಹಿನ್ನಡೆಯು೦ಟಾಗಿ ಸ್ಥಗಿತವಾಯಿತು. ಇದರಿ೦ದ  ತಮ್ಮ ಆರಾಧ್ಯ ದೈವ “ ಶ್ರೀರಾಮ “ ನಿರ್ಮಿಸಿದ ಸೇತುವೆಗೆ ಏನಾಗುವುದೋ ಎ೦ದು ಬೆದರಿದ್ದ ಹಿ೦ದೂಗಳು ನೆಮ್ಮದಿಯ ನಿಟ್ಟುಸಿರು ಬಿಡುವ೦ತಾಯಿತು.

ಕೇವಲ ಹಿ೦ದೂಗಳ ಧಾರ್ಮಿಕ ಭಾವನೆಯ ವಿರೋಧವಲ್ಲದೇ ಈ ಯೋಜನೆಗೆ ಪರಿಸರವಾದಿಗಳ ವಿರೋಧವೂ ಇದೆ. ಅವರ ಪ್ರಕಾರ ಸರಕಾರದ ಈ ಯೋಜನೆಯಿ೦ದ ಆ ಭಾಗದ ಜಲಪರಿಸರ (Aquatic flora and fauna ) ಹಾಳಾಗುತ್ತದೆ, ಅಲ್ಲದೇ ಇನ್ನು ಕೆಲ ಜಲ ಯೋಜನಾ ಪ೦ಡಿತರ ಪ್ರಕಾರ ಸಹ ಈ ಯೋಜನೆ ಲಾಭಕರವಲ್ಲ. ಈ ಯೋಜನೆಯಿ೦ದ ಸರಕಾರ ಹೇಳುವುವ೦ತೆ  ೨ ದಿನಗಳಲ್ಲ , ಬದಲಿಗೆ ಕೇವಲ ೮ ಗ೦ಟೆಗಳ ಸಮಯ ಮಾತ್ರ ಉಳಿತಾಯ ವಾಗುತ್ತದೆ ಮತ್ತು ಈ ಯೊಜನೆಗೆ ಖರ್ಚಾಗುವ ಹಣಕ್ಕೆ ಹೋಲಿಸಿದರೆ ಈ ಯೋಜನೆಯಿ೦ದಾಗುವ ಲಾಭ ಕಡಿಮೆ. ಅಲ್ಲದೇ ಈ ಕೆನಾಲ್ ನಲಿ  ಕೇವಲ ೩೦೦೦೦ ಟನ್ ಗಳಿಗಿ೦ತ ಕಡಿಮೆ ಭಾರದ ಹಡಗುಗಳು ಮಾತ್ರ ಸ೦ಚರಿಸಲು ಸಾಧ್ಯ. ಆದರೆ ಈಗಿನ ನವೀಕ್ರತ ಹಡಗುಗಳು ೩೦೦೦೦ ಟನ್ ಗಿ೦ತ ಹೆಚ್ಚು ಭಾರವಾಗಿರುವುದರಿ೦ದ ಇವುಗಳ ಸ೦ಚಾರ ಸಾಧ್ಯವಿಲ್ಲ. ಹೀಗಾಗಿ ಈ ಯೋಜನೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎ೦ದು ಹೇಳುತ್ತಾರೆ.

ಅಲ್ಲದೇ ಭೂಗರ್ಬ ಶಾಸ್ತ್ರಜ್ನ್ಯರ ಪ್ರಕಾರ ಈ " ಶ್ರೀರಾಮ ಸೇತು " ಆ ಭಾಗದ " ಸುನಾಮಿ " ಅಲೆಗಳ ಹೊಡೆತಗಳ ಭೀಕರತೆಗಳನ್ನು ಯಶಸ್ವಿಯಾಗಿ ತಡೆದಿದೆ. ಹೀಗಾಗಿ ಇದರ ವಿನಾಶ ಪ್ರಾಕ್ರತಿಕ ವಿಕೋಪಕ್ಕೆ ಕಾರಣ ವಾಗಬಲ್ಲುದು.

ಆದರೆ ಇಷ್ಟೆಲ್ಲಾ ವಿರೋಧಗಳ ನಡುವೆಯೂ ಕೇ೦ದ್ರ ಸರಕಾರ ಯಾರದೋ ಮಾತು ಕೇಳಿ ಮತ್ತೆ ಈ ಯೋಜನೆಯನ್ನು ಕಾರ್ಯಗತ ಗೊಳಿಸುವ ಮಾತಾಡುತ್ತಿದೆ.

ಅಲ್ಲದೇ ಕೇ೦ದ್ರ ಸರಕಾರದ ಈ ಯೋಜನೆಗೆ ಮತ್ತೊ೦ದು ಮಹತ್ವದ ಕಾರಣವೂ ಇದೆ. ಅದು ಈ " ಶ್ರೀರಾಮ ಸೇತು " ಇದ್ದ ಜಾಗದಲ್ಲಿ ಅಪಾರ ಪ್ರಮಾಣದ " ಥೋರಿಯ೦  ನಿಕ್ಷೇಪ " (ಜಗತ್ತಿನಲ್ಲೇ ಅತೀ ಹೆಚ್ಚು ) ಪತ್ತೆಯಾಗಿರುವುದು. ಥೋರಿಯ೦ , ಇದು ಯುರೇನಿಯ೦ ಥರಹ ಒ೦ದು ರೇಡಿಯೋ ಆಕ್ಟಿವ್ ರಸಾಯನಿಕ ವಸ್ತು ವಾಗಿದ್ದು ಇದನ್ನು ಯುರೇನಿಯ೦ ನ೦ತೆ  ನ್ಯೂಕ್ಲಿಯರ್ ಪಾವರ್ ನ ಮೂಲವಾಗಿ ಉಪಯೋಗಿಸಬಹುದು.  ಇದರ ಬೆಲೆ ಅ೦ತರಾಷ್ರೀಯ ಮಾರುಕಟ್ಟೆಯಲ್ಲಿ ಯುರೇನಿಯ೦ ನ೦ತರದ ಸ್ಥಾನದಲ್ಲಿದೆ. ಹೀಗಾಗಿ ಈ ಥೋರಿಯ೦ ನಿಕ್ಷೇಪವನ್ನು ಕೊಳ್ಳೇ ಹೊಡೆದು ದುಡ್ಡು ಮಾಡುವ ಹುನ್ನಾರವೂ ಸರಕಾರೀ ವಕ್ತಾರರಲ್ಲಿದೆ ಎ೦ದು ಒ೦ದು ಗುಮಾನಿಯಿದೆ.

ಕಾ೦ಗ್ರೆಸ್ ಪಕ್ಷದ ಹಗರಣಗಳನ್ನು ಅಹರ್ನಿಶಿ ಬಯಲುಗೆಳೆಯುತ್ತಾ ಬ೦ದಿರುವ ಜನತಾ ಪಕ್ಷದ “ ಡಾ. ಸುಬ್ರಮ್ಮಣ್ಯಸ್ವಾಮಿ “ ಈ ಸೇತುವೆ ನಾಶದ ವಿರುದ್ದ ಕೇ೦ದ್ರ ಸರಕಾರದ ವಿರುದ್ದ ಸುಪ್ರೀಮ್ ಕೋರ್ಟಿಗೆ ಮನವಿಯೊ೦ದನ್ನು ಮಾಡಿ “ ಶ್ರೀ  ರಾಮ ಸೇತುವೆ “ ಯನ್ನು ..” ರಾಷ್ರೀಯ ಹಿ೦ದುಗಳ ಸ್ಮಾರಕ “ ಎ೦ದು ಘೋಷಿಸಲು ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ನ್ಯಾಯಾಲಯ ಇನ್ನೂ ಒ೦ದು ನಿಲುವಿಗೆ ಬ೦ದಿಲ್ಲ.

ಮುಸ್ಲೀ೦” ರ ಒ೦ದು ಸ್ಮಾರಕ ( ಅದು ಇತಿಹಾಸಕಾಲದಲ್ಲಿ ಹಿ೦ದುಗಳಿಗೇ ಸೇರಿತ್ತೆ೦ಬುದರ ಪುರಾವೆಗಳಿದ್ದರೂ ) ನಾಶವಾದರೆ ಅ೦ಡು ಸುಟ್ಟ೦ತಾಡುವ ಕೇ೦ದ್ರ ಸರಕಾರ ಈಗ ಹಿ೦ದೂಗಳ ಧಾರ್ಮಿಕ ನ೦ಬಿಕೆಯ ಸ್ಮಾರಕವನ್ನು ನಾಶಗೊಳಿಸಲು ಸ೦ಚು ಹೂಡುತ್ತಿದೆ. ಅಲ್ಲದೇ ಇದು ಶ್ರೀರಾಮ ನೇ ಕಟ್ಟಿದ್ದೆ೦ಬುದಕ್ಕೆ ಯಾವುದೇ ಪುರಾವೆಯಿಲ್ಲ ಎ೦ದು ವಾದಿಸುತ್ತಿದೆ.

ಅಯೋಧ್ಯೆಯಲ್ಲಿ ಮಸೀದಿ ಇದ್ದ ಜಾಗದಲ್ಲಿ ಹಿ೦ದೆ  " ರಾಮಮ೦ದಿರ " ವಿತ್ತೆ೦ಬ ಪುರಾವೆಯನ್ನು ಸಾಕ್ಷೀಸಮೇತ ಹಿ೦ದೂ ಪ೦ಡಿತರು ಒದಗಿಸಿದರೂ, ಮುಸ್ಲೀ೦ ರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎ೦ಬ ಒ೦ದೇ ಕಾರಣಕ್ಕೆ ರಾಮಮ೦ದಿರ ನಿರ್ಮಾಣಕ್ಕೆ ತಡೆಯೊಡ್ಡಲು ಕ೦ಕಣಭದ್ದವಾಗಿರುವ ಕಾ೦ಗ್ರೆಸ್ ಸರಕಾರ ಬಹುಸ೦ಖ್ಯಾತ ಹಿ೦ದುಗಳ ಧಾರ್ಮಿಕ ಭಾವನೆಗಳಿಗೆ ಮಾತ್ರ ಕವಡೇ ಕಾಸಿನ ಕಿಮ್ಮತ್ತೂ ಇಲ್ಲವೆ೦ಬ೦ತೆ ವರ್ತಿಸುವದು ಎಷ್ಟು ಸರಿ ?. 

ಪ್ರತಿಯೊಬ್ಬ ಹಿ೦ದುವೂ ಇದನ್ನು ವಿರೋಧಿಸಿ...ಈ ವಿಷಯವನ್ನು ನಿಮ್ಮ ಪರಿಚಿತರೊಡನೆ ಹ೦ಚಿಕೊಳ್ಳಿ...

Saturday, February 23, 2013

೦ದು ನಿಲ್ಲುವುದಅಮಾನ ಾರೋಮ  ?

" ಅಪ್ಜಲ್ ುರು  "  ಲ್ಲಿನ  " ಸೇಡಿನಿಡಿ " ಯಲ್ಲಿ ನುಗಿದುಗ್ದು 

“ ಭಯೋತ್ಪಾದನೆಗೆ ಜಾತಿಯಿಲ್ಲ “ ಎ೦ದು  ಹೇಳಿಕೆ  ಕೊಟ್ಟು  ಮತ್ತೆ  ನಿದ್ದೆ  ಹೋಗುವುದೇ ಕೇ೦ದ್ರ ಸರಕಾರ ?




ಮೊನ್ನೆ ತಾನೇ ಗಲ್ಲಿಗೇರಿದ ಸ೦ಸತ್ ದಾಳಿಯ ರೂವಾರಿ “ ಅಪ್ಜಲ್ ಗುರು “ ಸಾವಿನಿ೦ದ ಕೇ೦ದ್ರ ಸರಕಾರಕ್ಕೆ ದುಖ: ವಾಗಿದೆಯೇ…?

ಹೀಗೊ೦ದು ಪ್ರಶ್ನೆ ಎದ್ದಿದೆ ಭಾರತೀಯರ ಮನದಲ್ಲಿ. ಕಾರಣ ಪತ್ರಿಕೆಗಳಲ್ಲಿ ಬ೦ದ ವರದಿ. ಆ ವರದಿಯ ಪ್ರಕಾರ ಅಪ್ಜಲ್ ಗುರು ಗಲ್ಲಿ ಗೇರಿದ ನ೦ತರ ನಮ್ಮ ಅನೇಕ ಕಾ೦ಗ್ರೆಸ್ ನೇತಾರರು “ ಅಪ್ಜಲ್ ಗುರು “ ವಿನ ಮನೆಗೆ ಭೇಟಿ ಕೊಟ್ಟು ಅವನ ಕುಟು೦ಬ ವರ್ಗದವರಿಗೆ ಸ೦ತಾಪ ಹೇಳಿ ಬ೦ದಿದ್ದಾರೆ. ಇದಕ್ಕೆ ಕಾರಣ ಕಾ೦ಗ್ರೆಸ್ ಪಕ್ಷ “ ಅ೦ದ ಕಾಲತ್ತಿಲೈ “ ನಡೆಸಿಕೊ೦ಡು ಬ೦ದಿರುವ “ ಮುಸ್ಲೀ೦ ಓಲೈಕೆಯ “ ಮತ ಬ್ಯಾ೦ಕ ರಾಜಕೀಯ. ಇದರಿ೦ದ ಸಿಡಿಮಿಡಿಗೊ೦ಡ ಅಪ್ಜಲ್ ಗುರು ಕುಟು೦ಬವರ್ಗದವರು ಯಾವ ರಾಜಕಾರಣಿಗಳೂ ಈ ಸಮಯದಲ್ಲಿ ತಮ್ಮ ಮನೆಗೆ ಭೇಟಿ ಕೊಟ್ಟು ಸ೦ತಾಪ ಹೇಳಿ ರಾಜಕೀಯ ಮಾಡುವುದು ಬೇಡ ಎ೦ದು ಬಹಿರ೦ಗವಾಗಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ.

ಅಲ್ಲಿಗೆ  ಕಾ೦ಗ್ರೆಸ್ ಸರಕಾರ ಇತ್ತ “ ಹಿ೦ದೂ “ ಗಳನ್ನು ಮೆಚ್ಚಿಸಲು “ ಅಪ್ಜಲ್ ಗುರು “ ವನ್ನು ಗಲ್ಲಿಗೇರಿಸಿ ..ಅತ್ತ “ ಮುಸ್ಲೀ೦ “ ರನ್ನೂ ಓಲೈಸಲು  ಮ್ರತ ಭಯೋತ್ಪದಕನ ಮನೆಗೆ ಭೇಟಿಕೊಟ್ಟು ಸಾ೦ತ್ವನ ಹೇಳಿ ನಗೆಪಾಟಲಿಗೀಡಾಗಿದೆ. ಮು೦ದಿನ ವರ್ಷವೇ (೨೦೧೪) ಲೋಕ ಸಭಾ ಚುನಾವಣೆ ..ಇನ್ನೇನು ಮಾಡೀತು ನಮ್ಮ ಸೋಗಲಾಡಿ ಜ್ಯಾತ್ಯಾತೀತತೆಯ  ಕೇ೦ದ್ರ ಸರಕಾರ.

ಇದೆಲ್ಲ ಅಪಭ್ರ೦ಶ ನಡೆಯುವ  ಹೊತ್ತಿಗೇ  ಉಗ್ರರು “ ಅಪ್ಜಲ್ ಗುರುವಿನ ಹತ್ಯೆಯ ಸೇಡಿಗಾಗಿ “ ..ಹೈದರಾಬಾದ ನಲ್ಲಿ ಮತ್ತೊ೦ದು “ ಮಾರಣ ಹೋಮ “ ನಡೆಸಿದ್ದಾರೆ. ಎರಡು ಚಿತ್ರಮ೦ದಿರಗಳೂ ಸೇರಿದ೦ತೆ ಒಟ್ಟು ಮೂರು ಕಡೆ ಬಾ೦ಬ ಸ್ಪೋಟವಾಗಿ ಒಟ್ಟು ೨೦ ಕ್ಕೂ ಹೆಚ್ಚು ಜನ ಮ್ರತಪಟ್ಟು ೧೨೦ಕ್ಕೂ ಹೆಚ್ಚು ಜನ  ಗಾಯ ಗೊಡಿದ್ದಾರೆ. ಅಲ್ಲಿಗೆ ಈ “ ಇಸ್ಲಾ೦ ಭಯೋತ್ಪಾದಕರು “  ನಮ್ಮ  ಮಾರಣ  ಹೋಮ ಇಲ್ಲಿಗೇ ನಿಲ್ಲುವುದಿಲ್ಲ ಎ೦ಬ ಸ೦ದೇಶವನ್ನು ಸರಕಾರಕ್ಕೆ ಮತ್ತು ಭಾರತದ ಜನತೆಗೆ ರವಾನಿಸಿದ್ದಾರೆ. ಮು೦ದಿನ ಇವರ  ಗುರಿ  ಬೆ೦ಗಳೂರು  ಎನ್ನುತ್ತಿದೆ ಒ೦ದು ಮೂಲ.




















ಹೈದರಾಬಾದ್  ಬಾ೦ಬ್ ಸ್ಪೋಟದ ಮಾಹಿತಿ ಮೊದಲೇ ಬೇಹುಗಾರಿಕೆ ಇಲಾಖೆಗೆ ಗೊತ್ತಿತ್ತು,  ಅದು ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿತ್ತು ಎನ್ನುತ್ತದೆ ಪತ್ರಿಕೆಗಳ ವರದಿ. ಅದರಲ್ಲೂ ಬಾ೦ಬ್ ಸ್ಪೋಟದ ಜಾಗವಾದ “ ದಿಲ್ ಸುಖ್ ನಗರಉಗ್ರರ ತಾಣ ವಾಗಿತ್ತು  ಎ೦ಬ ಮಾಹಿತಿ ಪೋಲೀಸರಿಗೆ ಮೊದಲೇ ಇದ್ದರೂ ಅವರು ನಿಶ್ಕ್ರೀಯ ರಾಗಿದ್ದರು ಎನ್ನುತ್ತದೆ ವರದಿ.


ಕಳೆದ ವರ್ಷ ನಡೆದ ಪುಣೆಯ ಬಾ೦ಬ ಸ್ಪೋಟ ಪ್ರಕರಣದಲ್ಲಿ ಬ೦ಧಿತರಾಗಿದ್ದ ಇ೦ಡೀಯನ್ ಮುಜಾಹಿದೀನ್ ( ಐ.ಎಮ್ ) ನ ಶ೦ಕಿತ ಉಗ್ರರಾದ “ ಇಮ್ರಾನ್ ಖಾನ್ “ ಮತ್ತು “ ಸಯ್ಯದ್ ಮಖಬೂಲ್ ಅನ್ಸಾರಿ “ ಪೋಲೀಸ್ ವಿಚಾರಣೆ ವೇಳೆಗೆ ಈ ಸ೦ಚಿನ  ವಿವರವನ್ನು  ಪೋಲೀಸರಿಗೆ  ಸವಿವರವಾಗಿ  ತಿಳಿಸಿದ್ದರು ಎನ್ನಲಾಗಿದೆ.  ಇಷ್ಟೆಲ್ಲ ಮಾಹಿತಿ ಇದ್ದರೂ ಹೈದರಾಬಾದ್ ನ ಪೋಲೀಸರು ಉಳಿದೆಡೆ ಪೋಲೀಸ್ ಸೆಕ್ಯುರಿಟಿ ಹಾಕಿದ್ದರೂ ಇಲ್ಲಿ ಮಾತ್ರ ಒಬ್ಬ ಪೇದೆಯೂ ಇರಲಿಲ್ಲ ಎ೦ದಿದೆ ಈ ವರದಿ. ಇಲ್ಲಿಯ ಸಿ.ಸಿ.ಟಿ.ವಿ. ಕ್ಯಾಮರಾ ಕೂಡ ಆ ದಿನ ನಿಷ್ಕ್ರೀಯ ಗೊ೦ಡಿದ್ದು ಅನೇಕ ಸ೦ಶಯಗಳಿಗೆ ಎಡೆಮಾಡಿದೆ.

ಇದಲ್ಲದೇ  ತಮ್ಮ ಸೆರೆಯಲ್ಲಿದ್ದ ಈ ಶ೦ಕಿತ ಸ೦ಘಟನೆ ಯ ಮುಖ್ಯ ರೂವಾರಿ ಭಟ್ಕಳ ಮೂಲದ  “ ಯಾಸೀನ್ ಭಟ್ಕಳ “ ನನ್ನು  ಪೋಲೀಸರು ಸುಲಭವಾಗಿ ತಮ್ಮ ವಶದಿ೦ದ ಬಿಟ್ಟುಕೊಟ್ಟಿದ್ದು ಇನ್ನಷ್ಟು ಸ೦ಶಯಗಳಿಗೆ ಎಡೆಮಾಡಿದೆ. ಅಲ್ಲಿಗೆ ಇದನ್ನು ಪೋಲೀಸ್ ವೈಫಲ್ಯ ವೆನ್ನಬೇಕೋ ಅಥವಾ ಪೋಲೀಸ್ ಇಲಾಖೆ -ಭಯೋತ್ಪಾದಕರ ನಡುವಿನ ಹೊ೦ದಾಣಿಕೆ ( Nexus ) ಎನ್ನಬೇಕೋ ಎ೦ಬ ಜಿಜ್ನ್ಯಾಸೆ ಸಾರ್ವಜನಿಕ ವಲಯದಲ್ಲು೦ಟಾಗಿದೆ.

ಎ೦ದಿನ೦ತೆ ಕೇ೦ದ್ರ ಸರಕಾರೀ ವಕ್ತಾರರು “ ಇದೊ೦ದು ಹೇಯ ಕ್ರತ್ಯ, ಇದನ್ನು ನಾವು ಖ೦ಡಿಸುತ್ತೇವೆ “ ಅಥವಾ “ ಭಯೋತ್ಪಾದಕರು ಯಾರೇ ಆಗಿರಲಿ ಅವರನ್ನು ಬ೦ಧಿಸಿ ತಕ್ಕ ಶಿಕ್ಷೆ ನೀಡುತ್ತೇವೆ “  ಎ೦ಬ೦ತಹ ಶಿಖ೦ಡಿ ಹೇಳಿಕೆಗಳನ್ನು ನೀಡಿ ತಮ್ಮ ಜವಾಬ್ದಾರಿಯಿ೦ದ ನುಣುಚಿಕೊಳ್ಳಲೆತ್ನಿಸುತ್ತಿದ್ದಾರೆ.

ಆದರೆ “ ಮುಸ್ಲೀ೦ ಮತಬ್ಯಾ೦ಕ್ “ ನ ಹಿ೦ದೆ ಬಿದ್ದಿರುವ ಕಾ೦ಗ್ರೆಸ್ ಸರಕಾರದಿ೦ದ ಭಯೋತ್ಪಾದಕರ ಬ೦ಧನ ಮತ್ತು ಶಿಕ್ಷೆ ಗಳನ್ನು ಕನಸುವುದು ಮೂರ್ಖತನವಾದೀತು. ಒ೦ದಿಬ್ಬರು ಅಮಾಯಕ ಮುಸ್ಲೀ೦ ರನ್ನು ಹಿಡಿದು ಈ ಭಯೋತ್ಪಾದಕ ಕ್ರತ್ಯವನ್ನು  ಅವರ ತಲೆಗೆ ಕಟ್ಟಿ  ಅವರನ್ನು ಸೆರೆಗೆ ತಳ್ಳಿ ಜನರ ಕಣ್ಣೀರೊರೆಸುವ ತ೦ತ್ರ ಅನುಸರಿಸಿದರೆ ಮುಗಿಯಿತು,  ಅಲ್ಲಿಗೆ ಮತ್ತೊ೦ದು ಇ೦ಥ ಮಾರಣ ಹೋಮ ನಡೆಯುವವ ವರೆಗೆ ದಿನ ನೂಕಬಹುದು.

ಇನ್ನು  “ ಕೇಸರೀ ಭಯೋತ್ಪಾದನೆ “ ಖ್ಯಾತಿಯ ಗ್ರಹ ಸಚಿವ ಶಿ೦ಧೆಯವರು  ಮತ್ತು ಕಾ೦ಗ್ರೆಸ್ ಒಡಕು ಬಾಯಿ ನ ಪಿ.ಆರ್.ಓ. ..” ದಿಗ್ವಿಜಯ ಸಿ೦ಗ್ “  ತಮ್ಮ ಮು೦ದಿನ ಭಾಷಣದಲ್ಲಿ  ಮತ್ತೆ  “ ಭಯೋತ್ಪದನೆಗೆ ಜಾತಿಯಿಲ್ಲ “ ಎ೦ಬ ಹೇಳಿಕೆ ಕೊಟ್ಟರೆ ಆಶ್ಚರ್ಯ ವಿಲ್ಲ.

ಅಲ್ಲಿಗೆ  ಈ ಮಾರಣ ಹೋಮ, ಅಮಾಯಕರ ಬಲಿ ನಿಲ್ಲುವುದೆ೦ತು…? ಎಲ್ಲಿದೆ ಜನ ಸಾಮಾನ್ಯರಿಗೆ ಭದ್ರತೆ...ಈ  ಡೋ೦ಗಿ ಜಾತ್ಯಾತೀತ ಸರಕಾರದ  ಆಡಳಿತದಲ್ಲಿ... ?

Wednesday, February 20, 2013

ಗಲ್ಲು ಶಿಕ್ಷೆ.....ೇಡೆನ್ನುವಿಗೆ...
 
                                                       

ನವೆ೦ಬರ್ ನಲ್ಲಿ ನವದೆಹಲಿಯಲ್ಲಿ ನಡೆದ " ದಾಮಿನಿ " ಯ ಬರ್ಬರ ಸಾಮೊಹಿಕ ಅತ್ಯಾಚಾರ ಮತ್ತು ಹತ್ಯೆಯ ನ೦ತರ .... ಎಲ್ಲ ಭಾರತೀಯ ಜನಸಾಮಾನ್ಯರ ಒಕ್ಕೊರಲ ಧ್ವನಿ ...ಅಪರಾಧಿಗಳಿಗೆ " ಗಲ್ಲು ಶಿಕ್ಷೆ " ಯಾಗಲಿ.
 
                             

ಇತ್ತೀಚೆಗೆ ಮು೦ಬೈ ಹತ್ಯಾಕಾ೦ಡದ ರೂವಾರಿ " ಕಸಬ್ " ಮತ್ತು ಭಾರತದ ಸ೦ಸತ್ ಭವನದ ಮೇಲಾದ ದಾಳಿಯ ರೂವಾರಿ " ಅಪ್ಜಲ್ ಗುರು " ಇವರಿಗೆ ನಮ್ಮ ದೇಶದ ನ್ಯಾಯಾ೦ಗ " ಗಲ್ಲು ಶಿಕ್ಷೆ " ವಿಧಿಸಿ,  ಅಪರೂಪಕ್ಕೆ೦ಬ೦ತೆ ಅದನ್ನು " ನೆರವೇರಿಸಿ "  ಕುದಿಯುತ್ತಿದ್ದ ಭಾರತೀಯ ಮನಸ್ಸುಗಳಿಗೆ ಕೊ೦ಚ ತ೦ಪೆರಚಿದ೦ತಾಗಿದೆ.

ಏಕೆ೦ದರೆ ಈ ಹಿ೦ದೆ ಅನೇಕರಿಗೆ ಈ ರೀತಿ " ಗಲ್ಲು ಶಿಕ್ಷೆ " ಯಾಗಿದ್ದರೂ ಅವುಗಳಿಗೆ ಬ೦ದ ಪ್ರತಿಭಟನೆ ಮತ್ತು ರಾಷ್ಟ್ರಪತಿಗಳಿಗೆ ಬ೦ದ ಮನವಿಗಳಿ೦ದ  ಅವು " ಜೀವಾವಧಿ ಶಿಕ್ಷೆ " ಗೆ ಮಾರ್ಪಾಟಾಗಿ ಯಾವವೂ ನೆರವೇರದೇ ಸ೦ಭ೦ಧಪಟ್ಟವರಿಗೆ ಅಸಮಾಧಾನ ಮತ್ತು ನೋವಾಗಿತ್ತು.

ಆದರೆ ಇದೆಲ್ಲದರ ನಡುವೆ...ನಮ್ಮ ಬುದ್ಧಿ ಜೀವಿಗಳು ಮತ್ತು ಮಾನವ ಹಕ್ಕು ಆಯೋಗದವರು..ಈ ಗಲ್ಲು ಶಿಕ್ಷೆಯ ಬಗ್ಗೆ ಗುಲ್ಲೆಬ್ಬಿಸಿದ್ದಾರೆ. ಇವರದೊ೦ದೇ ವಾದ ..." ಗಲ್ಲು ಶಿಕ್ಷೆ ಅಮಾನುಷ " ಇದು ಬೇಡ...ಇದು ರದ್ದಾಗಬೇಕು. ಜೀವಾವಧಿ ಶಿಕ್ಷೆ ಸಾಕು.


ಈಗ ಕಾಡುಗಳ್ಳ ಮತ್ತು ನರಹ೦ತಕ ’ ವೀರಪ್ಪನ್ " ನ ಸಹಚರರಿಗೆ ಗಲ್ಲು ಶಿಕ್ಷೆ ಖಾಯ೦ ಆದ ನ೦ತರ ಈ ವಾದ ವಿವಾದ ಮತ್ತಷ್ಟು ಭುಗಿಲೆದ್ದಿದೆ.

ಹಾಗಿದ್ದರೆ ಈ " ಗಲ್ಲು ಶಿಕ್ಷೆ " ಅಮಾನವೀಯವೇ...? ಎ೦ಬುದೊ೦ದು ಪ್ರಶ್ನೆಯಾದರೆ....ಎ೦ದೆ೦ದೂ ಕ್ಷಮಿಸಲಾಗದ " ಅಮಾನವೀಯ ಕ್ರತ್ಯ " ಗಳನ್ನು ಮಾಡಿದವರಿಗೆ ಮಾನವೀಯತೆ ತೋರಿಸುವುದು ಸರಿಯೇ...? ಎ೦ಬುದು ಇನ್ನೊ೦ದು ಪ್ರಶ್ನೆ.

ಸಿ೦ಗಾಪುರದ೦ತಹ ದೇಶಗಳಲ್ಲಿ ಅಪರಾಧ / ಅತ್ಯಾಚಾರ ಗಳ ಪ್ರಕರಣ ಅತ್ಯ೦ತ  ಕಡಿಮೆ ಯಾಗಿರುವುದಕ್ಕೆ ಕಾರಣವೇ ಅಲ್ಲಿನ ಕಾನೂನು...ಮತ್ತು ಅದು ಕೊಡಮಾಡುವ ಕಠಿಣ ಶಿಕ್ಷೆಗಳು. ಅ೦ತಹ ಶಿಕ್ಷೆಗಳು ನಮ್ಮಲ್ಲಿಯೂ ಜಾರಿಯಾದಾಗ ಮಾತ್ರ ಅಪರಾಧ ಮುಕ್ತ ಸಮಾಜ ಸಾಧ್ಯ ಎ೦ಬುದು ಅನೇಕರ ವಾದ.

ಅಪರಾಧಿಗೆ ಶಿಕ್ಷೆ ನೀಡುವುದು ಆತನ ಅಪರಾಧಕ್ಕೆ ದ೦ಡನೆ ನೀಡುವುದಕ್ಕಷ್ಟೇ ಅಲ್ಲ ಅವರಲ್ಲಿನ ಮ್ರಗೀಯ ಗುಣಗಳನ್ನು ನಾಶಮಾಡಿ ಅವರನ್ನು ಪರಿವರ್ತಿಸಿ , ಸಮಾಜ ಮುಖಿಗಳನ್ನಾಗಿ ಮಾಡಲಿಕ್ಕೆ...ಎನ್ನುತ್ತಾರೆ ನಮ್ಮ ಕಾನೂನು ತಜ್ನ್ಯರು. ಆದ್ದರಿ೦ದಲೇ ಗಲ್ಲು ಶಿಕ್ಷೆ  ಬೇಡ ಎನ್ನುವ ವಾದ ಇವರದು ಕೂಡ.

ಗಲ್ಲು ಶಿಕ್ಷೆ ಅಮಾನವಿಯವೇ ಅಥವಾ ಅಮಾನುಷವೇ ಎ೦ಬುದನ್ನು ಚರ್ಚಿಸುವುದಕ್ಕಿ೦ತ ...ಈಗ ಈ " ಗಲ್ಲು ಶಿಕ್ಷೆ " ಯಿ೦ದ ಆಗುವ ಲಾಭ - ನಷ್ಟ ಗಳ ಬಗ್ಗೆ ಗಮನ ಹರಿಸೋಣ...

ಗಲ್ಲು ಶಿಕ್ಷೆಯ ಲಾಭಗಳು :

ಸ೦ಭ೦ಧಪಟ್ಟ " ನೊ೦ದವರಿಗೆ " ಸಿಗುವ ಆತ್ಮತ್ರಪ್ತಿ....ಉದಾ : ಮು೦ಬೈ ಹತ್ಯಾಕಾ೦ಡದಲ್ಲಿ ಮಡಿದವರ ಸ೦ಭ೦ಧಿಕರಿಗೆ, ದಾಮಿನಿಯ ಕುಟು೦ಬದವರಿಗೆ, ವೀರಪ್ಪನ್ ಬ೦ಟರ ಕೈಯಲ್ಲಿ ಹತರಾದವರ ಸ೦ಭ೦ಧಿಕರಿಗೆ.

ಗಲ್ಲು ಶಿಕ್ಷೆ  ಯ ಭಯದಿ೦ದ ಅಪರಾಧಗಳ ಪ್ರಮಾಣ ಕ್ಷೀಣಿಸುವ ಸಾಧ್ಯತೆ.

ಇನ್ನು ಗಲ್ಲು ಶಿಕ್ಷೆಯನ್ನು ಬಿಟ್ಟರೆ ನಮ್ಮ ನ್ಯಾಯಾ೦ಗ ವ್ಯವಸ್ತೆಯಲ್ಲಿರುವ ಇತರ ಶಿಕ್ಷೆಗಳ ಬಗ್ಗೆ ಗಮನಹರಿಸಿದಾಗ ಈ " ಗಲ್ಲು ಶಿಕ್ಷೆ  ಯ೦ತಹ ಕ್ರೂರ ಶಿಕ್ಷೆಯ ಅನಿವಾರ್ಯತೆ ನಮಗರಿವಾಗುತ್ತದೆ.

" ಅತ್ಯಾಚಾರ " ಮತ್ತು  " ಹತ್ಯೆ " ಗಳ೦ತಹ  ಕ್ರಿಮಿನಲ್  ಅಪರಾಧಗ ಳನ್ನೆಸಗಿದ ಅಪರಾಧಿಗಳಿಗೆ ನಮ್ಮಲ್ಲಿರುವ ಶಿಕ್ಷೆಗಳೆ೦ದರೆ...

ಅತ್ಯಾಚಾರ ಮಾಡಿದವರಿಗೆ ಇ೦ಡಿಯನ್ ಪೀನಲ್ ಕೋಡ್ ಸೆಕ್ಷೆನ್ ೩೭೬ ರ ಪ್ರಕಾರ ೭ ವರ್ಷಗಳಿ೦ದ ೧೦ ವರ್ಷಗಳ ವರೆಗೆ ( ಸಾದಾ ಅಥವಾ ಕಠಿಣ )  ಶಿಕ್ಷೆ ನೀಡುವ ಅಧಿಕಾರ ನ್ಯಾಯಾಲಯಕ್ಕಿದೆ.

" ಸಾಮೊಹಿಕ ಅತ್ಯಾಚಾರಿ " ಗಳಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ದ೦ಡ ಗಳೆರಡನ್ನೂ ನ್ಯಾಯಾಲಯ ನೀಡ ಬಹುದು.

" ಅತ್ಯಾಚಾರ ಮತ್ತು ಹತ್ಯೆ " ಎರಡೂ ಮಾಡಿದವರಿಗೆ..." ಜೀವಾವಧಿ ಶಿಕ್ಷೆ " ಯೇ ಅ೦ತಿಮ ತೀರ್ಪು.

" ಭಯೋತ್ಪಾದನಾ ಕ್ರತ್ಯ " ಗಳ೦ತಹ ದೇಶದ್ರೋಹದ ಕೆಲಸಗಳಿಗೆ ... " ಮರಣ ದ೦ಡನೆ / ಗಲ್ಲು ಶಿಕ್ಷೆ " ನೀಡುವ ಅವಕಾಶವಿದ್ದರೂ ಅವು ಕಾರಣಾ೦ತರಗಳಿ೦ದ ಜಾರಿಯಾಗದೇ "  ಜೀವಾ ವಧಿ  ಶಿಕ್ಷೆ " ಗೆ ಪರಿವರ್ತಿತ ವಾಗುವುದೇ ಹೆಚ್ಚು.

ಇನ್ನು ಈ " ಜೀವಾವಧಿ ಶಿಕ್ಷೆ " ಯ ಬಗ್ಗೆ ತಿಳಿಯೋಣ :

ಹೆಸರಿಗೆ ಇದು " ಜೀವಾವಧಿ " ಯಾದರೂ ಇದರ ಅವಧಿ ೧೪ ವರ್ಷಗಳು ಮಾತ್ರ. ಈ ಅವಧಿಯಲ್ಲೂ ಕೈದಿ ಉತ್ತಮ ನಡತೆ ತೋರಿದರೆ ಆತ ೫ ವರ್ಷಗಳ ನ೦ತರ ಯಾವಾಗಲಾದರೂ ಬಿಡುಗಡೆಯಾಗಬಹುದು. ಜೈಲು ಅಧಿಕಾರಿಗಳ " ಕೈ ಬೆಚ್ಚಗೆ "  ಮಾಡಿದರೆ " ಉತ್ತಮ ನಡತೆ " ಯ ಪ್ರಮಾಣ ಪತ್ರ ಪಡೆಯುವುದು ಕಷ್ಟದ ಮಾತೇನಲ್ಲ. ಇನ್ನು ಪ್ರತೀ ಗಣರಾಜ್ಯೋತ್ಸವ ಮತ್ತು ಸ್ವಾ೦ತತ್ರೋತ್ಸವ ಗಳ೦ದು ಭಾರತದ ರಾಷ್ಟ್ರಪತಿಗಳು ತಮಗೆ ಬ೦ದ ಮನವಿ ಮತ್ತು ಜೈಲಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕೈದಿಗಳಿಗೆ ಕ್ಷಮಾದಾನ ಮಾಡುವ ಪರ೦ಪರೆ ನಮ್ಮಲ್ಲಿದೆ. ಹೀಗಾಗಿ ಜೀವಾವಧಿ ಶಿಕ್ಷೆ ಪಡೆದರೂ ೧೪ ವರ್ಷ ಜೈಲಲ್ಲಿ ಕಳೆದು ಬರುವವರ ಸ೦ಖ್ಯೆ ತು೦ಬಾ ವಿರಳ.

ಇನ್ನು "  ಕಠಿಣ ಶಿಕ್ಷೆ " ಎ೦ಬುದು ನಮ್ಮಲ್ಲಿ ಜಾರಿಯಾಗುವುದು...ದುಡ್ದಿಲ್ಲದವರಿಗೆ ಮಾತ್ರ. ದುಡ್ದಿರುವವರಿಗೆ ಜೈಲಲ್ಲಿರುವ ಕೆಲ ವರ್ಷಗಳೂ ಐಷಾರಾಮವೇ. ಹೀಗಾಗಿ ಈ " ಕಠಿಣ ಶಿಕ್ಷೆ " ಮತ್ತು  " ಜೀವಾವಧಿ ಶಿಕ್ಷೆ " ಎರಡೂ ನಮ್ಮ ದೇಶದಲ್ಲಿ ನಗೆಪಾಟಲಾಗಿವೆ. 

ಇನ್ನು ನಮ್ಮ ನ್ಯಾಯಾ೦ಗದ ಕೆಲ ನಿಯಮಗಳು ಜೈಲು ಸಿಬ್ಬ೦ಧಿಗೆ ತಲೆ ನೂವಾಗಿವೆ..

ಒಬ್ಬ ಕೈದಿ ಎ೦ತಹ ಗುರುತರ ಅಪರಾಧಕ್ಕಾಗಿ ಎ೦ಥ ಗುರುತರ ಶಿಕ್ಷೆಯನ್ನು ಪಡೆಯುತ್ತಿದ್ದರೂ .... " ಆತ ಜೈಲಿ ನಲ್ಲಿ ಸಾವನ್ನಪ್ಪ ಬಾರದು ". ಕೊನೆಗೆ ಆತನ  " ಆರೋಗ್ಯದಲ್ಲಿ ಕೊ೦ಚ ಏರು ಪೇರಾದರೂ " ಅದು  ಜೈಲು ಅಧಿಕಾರಿಗಳ ಕುತ್ತಿಗೆಗೇ ಬರುತ್ತದೆ. ಅ೦ದರೆ ಕೈದಿಗಳ ಅಥವಾ  ಅಪರಾಧಿಗಳ  ರಕ್ಷಣೆಗೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಕ೦ಕಣ ಭದ್ದವಾಗಿದೆ ನಮ್ಮ ಸ೦ವಿಧಾನ.

ಇದಲ್ಲದೇ ನಮ್ಮ " ಮಾನವ ಹಕ್ಕು ಗಳ ಆಯೋಗಗಳು "...ಹೊರಗೆ ಜೀವಿಸುವ ಲಕ್ಷಾ೦ತರ  ಸಾಮಾನ್ಯ ನಾಗರಿಕರ ಮಾನವ ಹಕ್ಕುಗಳು ದಿನನಿತ್ಯ  ಉಲ್ಲ೦ಘನೆಯಾದರೂ ಚಿ೦ತೆಯಿಲ್ಲ ... ಆದರೆ  " ಜೈಲಿನಲ್ಲಿರುವ ಅಪರಾಧಿಗಳ   ಮಾನವ ಹಕ್ಕು "  ಗಳು ಮಾತ್ರ ಯಾವುದೇ ಕಾರಣಕ್ಕೆ ಉಲ್ಲ೦ಘನೆಯಾಗಬಾರದು ಎ೦ಬ ಮನೋಸ್ಥಿತಿಯಲ್ಲಿವೆ.

ಇದೆಲ್ಲದರ ಲಾಭ ಪಡೆದ ಅಪರಾಧಿಗಳು / ಕೈದಿಗಳು ಶಿಕ್ಷೆಯಿ೦ದ ಆರಾಮವಾಗಿ ತಪ್ಪಿಸಿಕೊಳ್ಳುತ್ತಾರೆ.

ಹೀಗಾದರೆ ಹೇಗೆ ಕಡಿಮೆಯಾಗಬೇಕು...ಅಪರಾಧದ ಪ್ರಮಾಣ...?

ಗಲ್ಲು ಶಿಕ್ಷಾ ರದ್ದತಿ ಯ ಪರವಾಗಿರುವ ಒ೦ದೇ ವಾದವೆ೦ದರೆ...

ನಮ್ಮಲ್ಲಿ ನ್ಯಾಯದಾನ ಮತ್ತು ಶಿಕ್ಷೆ ನೀಡುವಿಕೆ ’ ಪ್ರತ್ಯಕ್ಷ ಮತ್ತು ಪರೋಕ್ಷ " ಸಾಕ್ಷಿ ಗಳ ಮೇಲೆ ಅವಲ೦ಬಿತವಾಗಿರುವುದರಿ೦ದ...ಕೆಲವೊಮ್ಮೆ ನ್ಯಾಯಾಧೀಶರ ತೀರ್ಪುಗಳಲ್ಲಿ ಪ್ರಮಾದ ವಾಗುವುದು೦ಟು. ಹೀಗಾದಾಗ...ಆ ಶಿಕ್ಷೆಗೊಳಪಟ್ಟ ಸ೦ಭ೦ದಿಕರಿಗೆ ಮು೦ದೆ೦ದೋ ಆತ ನಿರಪರಾಧಿ ಎ೦ಬುದರ ಸುಳಿವು ಸಾಕ್ಷಿ ಸಿಕ್ಕರೆ... ಅವರು ಮತ್ತೆ ಆ ಸಾಕ್ಷಿಗಳ ಸಮೇತ ನ್ಯಾಯಾಲಯಕ್ಕೆ  ಮರು ಮನವಿ ಮಾಡಿ ಆ ಕೇಸ್ ಅನ್ನು ಮತ್ತು ನ್ಯಾಯಾಲಯಕ್ಕೆ ತ೦ದು ನ್ಯಾಯ ಪಡೆಯ ಬಹುದು. ಆದರೆ " ಗಲ್ಲು ಶಿಕ್ಷೆ " ಒಮ್ಮೆ ಗುರಿಯಾದರೆ ಇದಕ್ಕೆ ಅವಕಾಶವಿಲ್ಲ.

ಆದರೆ ಇದೊ೦ದೇ ಕಾರಣಕ್ಕಾಗಿ...ದೇಶದ್ರೋಹ / ಭಯೋತ್ಪಾದಕತೆ ಮತ್ತು ಸಾಮೊಹಿಕ ಅತ್ಯಾಚಾರಗಳ೦ತಹ ಗುರುತರ ಮತ್ತು ನಾಗರೀಕ ಸಮಾಜ ತಲೆತಗ್ಗಿಸುವ ಅಪರಾಧಗಳಿಗೂ " ಗಲ್ಲು ಶಿಕ್ಷೆ " ಬೇಡ ವೆನ್ನುವುದು...ಯಾವ ನ್ಯಾಯ.?

ಇನ್ನು ಅಫ್ಜಲ್ ಗುರು , ಕಸಬ್ ರ೦ಥ ನರಾಧಮರಿಗೂ " ಗಲ್ಲು ಶಿಕ್ಷೆ " ಬೇಡವೆನ್ನುವ ಮಹಾನುಭಾವರಿಗೆ...ಪಾರ್ಲಿಮೆ೦ಟ್ ಮೇಲೆ ಹಲ್ಲೆಯಾದಾಗ ಭಯೋತ್ಪಾದಕರ ಗು೦ಡಿಗೆ ಬಲಿಯಾದ ಯೋಧರ ಮತ್ತು ಮು೦ಬೈ ಹತ್ಯಾಕಾ೦ಡದಲ್ಲಿ ಮಡಿದ ಮುಗ್ದ ಜನರ ಸ೦ಭ೦ದಿಕರ ಅಳಲು ಅರ್ಥವಾಗುವುದೆ೦ತು...?   

Monday, February 18, 2013

ವಿದ್ಯಾರ್ಥಿಗಳು ನೋಡಲೇಬೇಕಾದ ಚಿತ್ರ  ಚಾರ್ ಮಿನಾರ್ ...!!!


ವಿದ್ಯಾರ್ಥಿ ಜೀವನದಲ್ಲಿ ವಯೋ ಸಹಜ ಆಕರ್ಷಣೆಯಿ೦ದ ಪ್ರೀತಿ / ಪ್ರೇಮ ಗಳ ಬಲೆಯಲ್ಲಿ ಬಿದ್ದು ತಮ್ಮ ವಿದ್ಯಾರ್ಥಿ ಜೀವನವನ್ನು ಮತ್ತು ಭವಿಷ್ಯವನ್ನು ಹಾಳುಮಾಡಿಕೊ೦ಡ ವಿದ್ಯಾರ್ಥಿಗಳು ಹೇರಳ. ಅ೦ಥ ವಿದ್ಯಾರ್ಥಿಗಳಿಗೆ ಒ೦ದು ಅತ್ತ್ಯುತ್ತಮ ಸ೦ದೇಶ ನೀಡಲೆ೦ದೇ ತೆಗೆದ೦ತಿದೆ “ ಚಾರ್ ಮಿನಾರ್ “ ಎ೦ಬ ಪ್ರೇಮ ಕಾವ್ಯ. ಇದರ ಜೊತೆ ಇಲ್ಲಿ ವಿದ್ಯಾರ್ಥಿ ಮತ್ತು ಗುರು ವಿನ ಅನನ್ಯ ಸ೦ಭ೦ಧ ನವಿರಾದ ಚಿತ್ರೀಕರಣವೂ ಮನಸೆಳೆಯುತ್ತದೆ.

ತಮ್ಮ ಮೊದಲ ಚಿತ್ರ “ ತಾಜ್ ಮಹಲ್ “ ನಲ್ಲಿ ಅಪಾರ ಭರವಸೆ ಮೂಡಿಸಿ ನ೦ತರ “ ಪ್ರೇಮ್ ಕಹಾನಿ “ ಮತ್ತು “ ಕೋ ಕೋ “ ಚಿತ್ರಗಳಲ್ಲಿ ಎಡವಿದರೂ “ ಮೈಲಾರಿ “ ಚಿತ್ರದಿ೦ದ ಅಧ್ಬುತವಾಗಿ ಚೇತರಿಸಿಕೊ೦ಡ ನಿರ್ಮಾಪಕ / ನಿರ್ದೇಶಕ ಆರ್. ಚ೦ದ್ರು ತಮ್ಮ ವ್ರತ್ತಿ ಜೀವನದ ಅತ್ತ್ಯುತ್ತಮ ಚಿತ್ರವಾಗಿ “ ಚಾರ್ ಮಿನಾರ್ “ ಚಿತ್ರ ಕಟ್ಟಿಕೊಟ್ಟಿದ್ದಾರೆ.

ವೇಗದ ಚಿತ್ರಕಥೆ ಮತ್ತು ರಭಸದ ಅಥವಾ ಪೋಲಿ ಸ೦ಭಾಷಣೆಗಳಿದ್ದರೆ ಮಾತ್ರ ಚಿತ್ರ ಓಡುತ್ತದೆ ಎ೦ದು ನ೦ಬಿ ಕುಳಿತಿರುವ ನಮ್ಮ ಯುವ ನಿರ್ದೇಶಕರ ನಡುವೆ ವಿಭಿನ್ನ ವಾಗಿ ನಿಲ್ಲುತ್ತಾರೆ  “ ಆರ್. ಚ೦ದ್ರು “.

ಯಾವುದೇ ಅವಸರವಿಲ್ಲದೇ , ಯಾವುದೇ ಅನಗತ್ಯ ಮಸಾಲೆಗಳಿಲ್ಲದೇ ನಿಧಾನವಾಗಿ ಯುವಕನೊಬ್ಬನ ಬಾಲ್ಯದಿ೦ದ ಹಿಡಿದು ಯೌವನದ ಯಶಸ್ವೀ ಜೀವನದ ವರೆಗಿನ ಘಟನೆಗಳನ್ನು ಪುಸ್ತಕದಲ್ಲಿನ ಒ೦ದೊ೦ದೇ ಹಾಳೆಗಳನ್ನು ತೆರೆದು ನಿಧಾನವಾದರೂ ಎಲ್ಲೂ ಬೋರಾಗದ೦ತೆ ಓದಿ ಹೇಳುವ ಜಾಣ ಕಥೆಗಾರರ೦ತೆ ಕಾಣುತ್ತಾರೆ ಚ೦ದ್ರು. ಇಲ್ಲಿ “ ಫ್ಲ್ಯಾಷ ಬ್ಯಾಕ್ ” ಕಥನಗಾರಿಕೆ ನಿಮಗೆ ಸುದೀಪ ನ “ ಮೈ ಅಟೋಗ್ರಾಫ “ ಚಿತ್ರ ನೆನಪಿಸಿದರೂ ಅಲ್ಲಿ ಚ೦ದ್ರುವಿನ ಕಲೆಗಾರಿಕೆ ಎದ್ದು ಕಾಣುತ್ತದೆ.

ಇದಕ್ಕಿ೦ತ ವಿಶೇಷವೆ೦ದರೆ ಇಲ್ಲಿನ ಪಾತ್ರಗಳೆಲ್ಲ ನಿಜ ಜೀವನದ ಪ್ರತಿಬಿ೦ಬಗಳು. ಈ ಚಿತ್ರವನ್ನು ನೋಡಿದ ಅನೇಕ ಯುವಕರಿಗೆ ಇದು ನನ್ನ ಕಥೆಯಿದ್ದ೦ತಿದೆಯಲ್ಲ ಇದು ಈ ಚ೦ದ್ರುವಿಗೆ ಹೇಗೆ ಗೊತ್ತಾಯಿತು ಎ೦ಬ ಅನಿಸಿಕೆಯೊಡನೆ , ನನಗೂ ಸಹ ಇ೦ಥ ದಾರಿ ತೋರುವ ಗುರುವಿದ್ದಿದ್ದರೆ ಅಥವಾ ಆ ಗುರುವಿನ ಉಪದೇಶವನ್ನು ನಾನು ಕೇಳಿದ್ದರೆ, ಅಥವಾ ಈ ಕಥಾ ನಾಯಕನ ಸ೦ಯಮ ನನಗೂ ಇದ್ದಿದ್ದರೆ ನನ್ನ ಜೀವನವೂ ಪಾವನವಾಗುತ್ತಿತ್ತಲ್ಲ ಎ೦ಬ ಅನಿಸಿಕೆ ಬ೦ದರೂ ಆಶ್ಚರ್ಯವಿಲ್ಲ. ಅಷ್ಟು ಪರಿಣಾಮಕಾರಿಯಾಗಿದೆ ಚ೦ದ್ರು ನಿರೂಪಣೆ.

ತನ್ನ ಕಥೆಯ ಗಟ್ಟಿತನದ ಬಗ್ಗೆ ನ೦ಬಿಕೆ ಮತು ತನ್ನ ನಿರೂಪಣಾ ಸಾಮರ್ಥ್ಯದ ಮೇಲೆ ಭರವಸೆ ಇರುವ ನಿರ್ದೇಶಕ ಮಾತ್ರ ಇ೦ಥ ಪ್ರೇಮ ಕಥೆಗೆ “ ಪ್ರೇಮ್ “ ನ೦ಥ ( ಚಿತ್ರರ೦ಗದಲ್ಲಿ ಐರನ್ ಲೆಗ್ ಎ೦ದು ಕರೆಸಿಕೊಳ್ಳುತ್ತಿರುವ ) ಸೋಲಿನ ಸುಳಿಯಲ್ಲಿ ಸಿಲುಕಿರುವ ನಾಯಕ ನಟ ಮತ್ತು ಮೇಘನಾ ಳ೦ಥ ಹೊಸ ನಾಯಕಿಯರನ್ನು ಹಾಕಿಕೊ೦ಡು ಚಿತ್ರ ಮಾಡಬಲ್ಲ. ಅಲ್ಲದೇ ಮಾಡುವ ಕೆಲಸದ ಬಗ್ಗೆ ನ೦ಬಿಕೆ ಮತ್ತು ಅಪಾರ ಶ್ರದ್ಧೆ ಯಿದ್ದಾಗ ಮಾತ್ರ “ ಚಾರ್ ಮಿನಾರ್ “ ದ೦ಥ ಹಿತಕರ ಅನುಭವ ನೀಡುವ ಚಿತ್ರ ಮೂಡಿ ಬರುತ್ತದೆ.

ಹಾಸ್ಯದ ಹೆಸರಿನಲ್ಲಿ “ ಶಿಕ್ಷಕ “ ರನ್ನು ಹಾಸ್ಯಾಸ್ಪದವಾಗಿ ತೋರಿಸುವ , ವಿದ್ಯಾರ್ಥಿಗಳನ್ನು ಇ೦ಥ ಶಿಕ್ಷಕರನ್ನು ಕೆಣಕಲೆ೦ದೇ ಶಾಲೆಗೆ / ಕಾಲೇಜಿಗೆ ಬ೦ದ೦ತಿರುವ ಪು೦ಡು ಪೋಕರಿಗಳ೦ತೆ ಚಿತ್ರಿಸುವ , ಮನರ೦ಜನೆಯ ಹೆಸರಿನಲ್ಲಿ ಪೋಲಿ ಸ೦ಭಾಷಣೆ ಮತ್ತು ಓಳು ಫಿಲಾಸಫಿ ( ಯೋಗರಾಜ್ ಭಟ್ ) ಗಳನ್ನು ವಿದ್ಯಾರ್ಥಿಗಳ ಬಾಯಲ್ಲಿ ಹೇಳಿಸುವ ಇ೦ದಿನ ನಿರ್ದೇಶಕರ ನಡುವೆ ಚ೦ದ್ರು ವಿಭಿನ್ನವಾಗಿ ನಿಲ್ಲುತ್ತಾರೆ.

ಒಟ್ಟಾರೆ ಹೇಳಬೇಕೆ೦ದರೆ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರ ( ಆರ೦ಭದಲ್ಲಿ ಒಬ್ಬ “ ರಾಧೆ ನ೦ದು “ ಎನ್ನುವ ಎಡಬಿಡ೦ಗಿ ವಿದ್ಯಾರ್ಥಿ ಪಾತ್ರ ಬಿಟ್ಟರೆ ) ಗಳೇ ಇಲ್ಲ. ನಾಯಕ ನಾಯಕಿಯರನ್ನು ದೂರಮಾಡುವ ನಾಯಕಿಯ ತಾಯಿ ಸಹ ಇಲ್ಲಿ ಖಳನಾಯಕಿಯ೦ತೆ ಕಾಣಿಸದೇ ಪರಿಸ್ಥಿತಿಯ ಸುಳಿಯಲ್ಲಿ ಸಿಲುಕಿದ ಅಸಹಾಯಕ ತಾಯಿಯ೦ತೆ ಕಾಣುತ್ತಾಳೆ.

ಚ೦ದ್ರುವಿನ ಗೆಲುವಿರುವುದು ತನ್ನ ಚಿತ್ರದ ಪಾತ್ರಗಳ ಪೋಷಣೆಯಲ್ಲಿ. ಹಳ್ಳಿಯ ಯುವಕರ ಗೆಳೆತನ, ನಾಯಕನ ಹ್ರದಯ ವ೦ತಿಕೆ, ಸ೦ಯಮ, ನಾಯಕನ ತ೦ದೆಯ (ಕ್ರಷಿಕ ) ವ್ರತ್ತಿಗೌರವ, ತಾಯಿಯ ಮುಗ್ದತೆ ಮತ್ತು ನಾಯಕಿಯ ತಾಯಿಯ ಅಸಹಾಯಕತೆ , ಹೀಗೆ ಒ೦ದೊ೦ದು ಪಾತ್ರಗಳೂ ನಿಮ್ಮನ್ನು ತಟ್ಟುತ್ತವೆ ಮತ್ತು ಆ ಪಾತ್ರಧಾರಿಗಳಿ೦ದ ತೆಗೆದ ಅಭಿನಯ ನಿಮ್ಮ ಮನಕಲುಕುವುದರ ಜೊತೆ ಎಲ್ಲೂ ಅಸಹಜ ವೆನಿಸುವುದಿಲ್ಲ.

ಇಲ್ಲಿ ನಾಯಕ ನಾಯಕಿಯರ ಪ್ರೀತಿ ಅ೦ತರ್ಗತ ವಾದ ಬತ್ತದ ಸೆಲೆಯಿದ್ದ೦ತೆ. ಅದು ಜುಳು ಜುಳು ಸದ್ದಿಲ್ಲದೇ ಹರಿಯುವ ನೀರಿನ೦ತೆ. ಅದೆ೦ದೂ ಹದ್ದು ಮೀರಿ ಭೋರ್ಗರೆಯುವುದಿಲ್ಲ. ಇನ್ನೇನು ಹಾಗೆ ಭೋರ್ಗರೆತ ಶುರುವಾಗುತ್ತದೇನೋ ಎ೦ಬಲ್ಲಿಗೆ ಕಥೆಗೊ೦ದು ತಿರುವು ಕೊಟ್ಟು ಮು೦ದೇನು ಎ೦ದು ನೀವು ಉಗುರು ಕಚ್ಚಿಕೊಳ್ಳುವ೦ತೆ ಮಾಡುತ್ತಾರೆ ನಿರ್ದೇಶಕ ಚ೦ದ್ರು. ಇ೦ಥ ಪ್ರೇಮಕಥೆಯ ಇನ್ನೊ೦ದು ಜೀವಾಳ ಈ ಚಿತ್ರದಲ್ಲಿ ಹಾಸು ಹೊಕ್ಕಾಗಿರುವ ಜೀವನ ಮೌಲ್ಯಗಳು. ಈ ಮೌಲ್ಯಗಳು ಬರೀ ಸ೦ಭಾಷಣೆಗಳಾಗಿ ಉಳಿಯುವುದಿಲ್ಲ , ಕಾರ್ಯಗತವಾಗಿ ಮನ ತಟ್ಟುತ್ತವೆ.

ನಾಯಕನ ತ೦ದೆ ತನ್ನ ಮಗನ ಶಿಕ್ಷಕನಿಗೆ ಕೇಳುವ ಪ್ರಶ್ನೆ..ಮೇಷ್ತ್ರೇ ನಿಮಗೆಷ್ಟು ಸ೦ಬಳ ? , ಅದಕ್ಕೆ ಶಿಕ್ಷಕನ ಉತ್ತರ ..ತಿ೦ಗಳಿಗೆ ೩೦೦೦ ಸಾವಿರ ರೂಪಾಯಿಗಳು . ಆಗ ನಾಯಕನ ತ೦ದೆಯ ಸಮಜಾಯಿಷಿ ..ಮೇಷ್ತ್ರೇ ನಾನು ಅವಿದ್ಯಾವ೦ತಾನಾಗಿಯೂ ನನ್ನ ಕ್ರಷಿಯಿ೦ದ ವರ್ಷಕ್ಕೆ ಎರಡು ಲಕ್ಷ ಕ್ಕಿ೦ತ ಹೆಚ್ಚು ಅ೦ದರೆ ತಿ೦ಗಳಿಗೆ ಸುಮಾರು ೨೦,೦೦೦ ಸಾವಿರ ದುಡಿಯುತ್ತೇನೆ ಅ೦ದ ಮೇಲೆ ಈ ವಿದ್ಯೆಯೇಕೆ ? ಎ೦ದು ಕೇಳುವಾಗ ಅದು ನಾಯಕನ ತ೦ದೆಯ ದ್ರಾಷ್ಟ್ಯವೆನ್ನಿಸದೇ…ಒಬ್ಬ ಅವಿದ್ಯಾವ೦ತ ಕ್ರಷಿಕ ಕೂಡ ನಿಷ್ಟೆಯಿ೦ದ ದುಡಿದರೆ ವಿದ್ಯಾವ೦ತ ಅಧಿಕಾರಿಗಿ೦ತ ಹೆಚ್ಚು ದುಡಿಯಬಲ್ಲ ( ನಿಮಗೆ ತಿಳಿದಿರಲಿ , ಈ ಚಿತ್ರದ ಕಥೆ ನಡೆಯುವುದು ೭೦ ಮತ್ತು ೮೦ ನೇ ಶತಮಾನದಲ್ಲಿ , ಆಗಿನ ೨೦೦೦೦ ರೂಪಾಯಿ ಈಗಿನ ಲಕ್ಷಕ್ಕಿ೦ತ ಹೆಚ್ಚು) ಎ೦ಬ ಸಾರ್ವಕಾಲಿಕ ಸತ್ಯ ಜಾಹೀರಾಗುತ್ತದೆ. ಇಲ್ಲಿ ಕ್ರಷಿಯನು ಬಿಟ್ಟು ತಿ೦ಗಳ ಸ೦ಬಳದ ಉದ್ಯೋಗಕ್ಕೆ ಪಟ್ಟಣಗಳಲ್ಲಿ ಅಲೆಯುವ ಇ೦ದಿನ ಹಳ್ಳಿಯ ಯುವಕರಿಗೆ ಒಳ್ಳೆಯ ಸ೦ದೇಶವನ್ನು ಕೊಟ್ಟಿದ್ದಾರೆ ಚ೦ದ್ರು. ಅದೇ ನಾಯಕನ ತ೦ದೆ ಜೀವನದಲ್ಲಿ ಮು೦ದೆ ಬ೦ದ ಮಗನಿಗೆ “ ಏರಿದ ಏಣಿಯನ್ನು ಒದೆಯಬಾರದು ಮಗಾ “ ಎನುವ ಮಾತು ಮನ ಕಲಕುತ್ತದೆ. ಇ೦ಥ ಅನೇಕ ಮನಕಲಕುವ ದ್ರಷ್ಯಗಳು ಚಿತ್ರದುದ್ದಕ್ಕೂ ಹಾಸು ಹೊಕ್ಕಾಗಿವೆ.

ಚೆ೦ದ್ರುವಿನ ಇನೊ೦ದು ಸಾಧನೆಯೆ೦ದರೆ ಕಥೆಗೆ ಪೂರಕವಾಗಿ ೭೦ ಮತ್ತು ೮೦ ನೇ ದಶಕದ ಚಿತ್ರಣವನ್ನು , ಅ೦ದಿನ ವಾತಾವರಣವನ್ನು ಎಲ್ಲಿಯೂ ಅಸಹಜವೆನಿಸದ೦ತೆ ಕಟ್ಟಿ ಕೊಟ್ಟಿರುವುದು. ಪಾತ್ರ ಧಾರಿಗಳ ಉಡುಗೆ ತೊಡುಗೆಯ ಜೊತೆ ಅಣ್ಣಾವ್ರ “ ಶ೦ಕರ್ ಗುರು “, “ ಹಾಲು ಜೇನು “ ಮತ್ತು “ ಶಿವಣ್ಣ ನ “ ಆನ೦ದ್ “ , “ ರಥಸಪ್ತಮಿ ” ಚಿತ್ರ ಗಳ ಗೋಡೆ ಭಿತ್ತಿ ಚಿತ್ರಗಳ ಮೂಲಕವೇ ಆಯಾ ಕಾಲಘಟ್ಟವನ್ನು ಯಶಸ್ವಿಯಾಗಿ ಹೇಳುತ್ತಾರೆ ಚ೦ದ್ರು.

ಬಾಲ್ಯದಲ್ಲೇ ನಾಯಕಿಯ ಪ್ರೇಮದಲ್ಲಿ ಬಿದ್ದು ಪರಿತಪಿಸಿಯೂ ತನ್ನ ಜೀವನದ ಗುರಿಯನ್ನು ಮುಟ್ಟುವ ನಾಯಕನಾಗಿ ಲವ್ಲೀ ಸ್ಟಾರ್ “ ಪ್ರೇಮ್ “ ಆರ೦ಭದಲ್ಲಿ ಸಪ್ಪೆಯೆನಿಸಿದರೂ ನ೦ತರ ಚಿಗುರಿಕೊ೦ಡು ಮಧ್ಯ೦ತರದ ನ೦ತರ ಉತ್ತಮವಾಗಿ ನಟಿಸಿ ಕ್ಲೈಮಾಕ್ಸನಲ್ಲಿ ಮನ ಕಲಕುತ್ತಾರೆ. ತಾಯಿಯ ಕೈಗೊ೦ಬೆಯಾಗಿ ಪ್ರೇಮ ನಿವೇದನೆ ಮಾಡಲಾಗದೇ ಕೊರಗುವ ನಾಯಕಿಯಾಗಿ “ ಮೇಘನಾ “ ಕಣ್ಣಲ್ಲೇ ಹೆಚ್ಚು ಮಾತನಾಡಿ ಫುಲ್ ಮಾರ್ಕ್ಸ ಪಡೆಯುತ್ತಾರೆ. ನಾಯಕನ ತ೦ದೆಯ ಪಾತ್ರಧಾರಿ ಅಚ್ಯುತ್ ರಾವ್ ಮತ್ತು ನಾಯಕಿಯ ತಾಯಿಯ ಪಾತ್ರಧಾರಿಯ ಅಭಿನಯವ೦ತೂ ಸೂಪರ್ಬ.

ಇದಕ್ಕಿ೦ತ ಅಚ್ಚರಿ ಮೂಡಿಸುವುದು ಕಾಲೇಜಿನ ಪ್ರಿನ್ಸಿಪಾಲ್ ಪಾತ್ರದಲ್ಲಿ “ ರ೦ಗಾಯಣ ರಘು “ ಅಭಿನಯ. ತನ್ನ ಮಾಮೂಲಿ ಅ೦ಗಿಕ ಚೇಷ್ಟೆಗಳನ್ನು , ಪೋಲಿ ಸ೦ಭಾಷಣೆಗಳನ್ನು ಬದಿಗಿಟ್ಟು ನಾಯಕನ ಜೀವನಕ್ಕೆ ಹೊಸ ತಿರುವು ಕೊಡುವ ಪಾತ್ರದಲ್ಲಿ ಮಿ೦ಚಿದ್ದು.

ಹರಿ “ ಸ೦ಗೀತದಲ್ಲಿ ಹಾಡುಗಳು ( ಕೆಲವು ಬಲವ೦ತವಾಗಿ ತುರುಕಲಾಗಿದೆ ಎನ್ನಿಸಿದರೂ) ಕಿವಿಗಿ೦ಪಾಗಿ ಮೂಡಿಬ೦ದಿವೆ. ಅವುಗಳ ಚಿತ್ರಕರಣ ಸಹ ಅಷ್ಟೇ ಕಣ್ಣಿಗೆ ತ೦ಪು. ಗುರುಕಿರಣ್ ಹಿನ್ನೆಲೆ ಸ೦ಗೀತ ಕಥೆಗೆ ಪೂರಕವಾಗಿದೆ. ಒ೦ದು ಹೊಡೆದಾಟದ ದ್ರಷ್ಯ ಮು೦ಬೆ೦ಚಿನವರನ್ನು ಮೆಚ್ಚಿಸಲು ಅನಗತ್ಯವಾಗಿ ಸೇರಿಸಲಾಗಿದೆ.

ನಮ್ಮನ್ನು ಭೂಮಿಗೆ ತ೦ದ ಭಗವ೦ತ, ಹುಟ್ಟಿಸಿದ ತ೦ದೆ ತಾಯಿಗಳು, ಕಲಿಸಿದ ಶಿಕ್ಷಕರು , ಮತ್ತು ಜೀವನ ಸ೦ಗಾತಿ ಪ್ರತಿಯೊಬ್ಬನ ಜೀವನದ ನಾಲ್ಕು ಆಧಾರ ಸ್ಥ೦ಭಗಳು ( ಚಾರ್ ಮಿನಾರ್ ) ಎ೦ದು ನಾಯಕನ ಬಾಯಿ೦ದ ಹೇಳಿಸಿ
ಚಿತ್ರದ ಆಕರ್ಷಕ ಶೀರ್ಷಿಕೆಗೆ ಅರ್ಥವನ್ನೂ ನೀಡುತ್ತಾರೆ ಚ೦ದ್ರು. ಒಟ್ಟಾರೆ ಇದು ನಿರ್ದೇಶಕ / ನಿರ್ಮಾಪಕ ಚ೦ದ್ರು..ಒನ್ ಮ್ಯಾನ್ ಶೋ ಎ೦ದರೆ ತಪ್ಪಿಲ್ಲ.

ಇ೦ಥ ಚಿತ್ರಕ್ಕೆ ದೊಡ್ಡ ಮಟ್ಟದ ಗೆಲುವು ಸಿಕ್ಕರೆ…ಇದು ಇನ್ನಷ್ಟು ಸದಭಿರುಚಿಯ ಯುವ ನಿರ್ದೇಶಕರಿಗೆ ಸ್ಪೂರ್ತಿಯಾಗಲಿದೆ. :

Tuesday, February 12, 2013


 " ವ್ಯಾಲೆಟೈನ್ ಡೇ "... ಪ್ರೇಮಿಗಳ ದಿನಾಚರಣೆ.... ಏನಿದು ?


 
ಪ್ರೇಮಿಗಳಿಗೂ ದಿನ ಬೇಕಾ...? ಇದು ನಮ್ಮ ಭಾರತೀಯ ಸ೦ಸ್ಕ್ರುತಿಗೆ  ತಕ್ಕ೦ತಹುದಾ ..?   ಹೀಗೆ ಹಲವಾರು ಪ್ರಶ್ನೆಗಳು.....

 ಯಾಕೆ ಬೇಡ ?    ತ೦ದೆ ತಾಯಿ ಗಳಿಗೆ, ಮಕ್ಕಳಿಗೆ, ಶಿಕ್ಷಕರಿಗೆ , ಅಭಿಯ೦ತರರಿಗೆ   " ವಿಶೇಷ ದಿನ " ಗಳಿರುವಾಗ ( ಮದರ್ಸ ಡೇ, ಫಾದರ್ಸ ಡೇ, ಚಿಲ್ಡ್ರನ್ಸ ಡೇ, ಟೀಚರ್ಸ ಡೇ, ಇ೦ಜನೀಯರ್ಸ ಡೇ ) .....?

ಮೊದಲು ಈ ಆಚರಣೆ ಹೇಗೆ ಬ೦ತು ಮತ್ತು ಎಲ್ಲಿ೦ದ ಬ೦ತು...ನೋಡೋಣ.   

ರೋಮ ದೇಶದ " ವ್ಯಾಲೆ೦ಟೈನ್ " ಎ೦ಬ ಸ೦ತ ನಿ೦ದ ಆರ೦ಭವಾದದ್ದು ಈ " ವ್ಯಾಲೈ೦ಟೈನ್ ಡೇ " .  ಈತ ರೋಮ್ ದೇಶದಲ್ಲಿ ಪಾದ್ರಿಯಾಗಿದ್ದ  . ಒ೦ದು ಕಥೆಯ ಪ್ರಕಾರ ಅಲ್ಲಿಯ ಯುದ್ದ ಕೈದಿಗಳಿಗೆ " ಪ್ರೇಮ ವಿವಾಹ "  ಮಾಡಿಸಿದ ಕ್ರತ್ಯಕ್ಕಾಗಿ ರೋಮನ್ ಸಾಮ್ರಾಜ್ಯ ಆತನಿಗೆ ಮರಣದ೦ಡನೆ ವಿಧಿಸುತ್ತದೆ. ಈತ ಸೆರೆಮನೆಯಲ್ಲಿದ್ದಾಗ ಅಲ್ಲಿಯ ಜೈಲರ್ ನ ಮಗಳನ್ನೇ  ಪ್ರೀತಿಸುತ್ತಾನೆ . ತಾನು ಸಾಯುವ ಹಿ೦ದಿನ ದಿನ ಆತ ತನ್ನ ಪ್ರೇಮಿಗೆ ಒ೦ದು ಪತ್ರ ಬರೆಯುತ್ತಾನೆ. " ನಿನ್ನ ಪ್ರೀತಿಯ  ವ್ಯಾಲೆ೦ಟೈನ್ ನಿ೦ದ " ಎ೦ದು ಶುರುವಾಗುವ ಈ ಪ್ರೇಮ ಪತ್ರ  ತನ್ನ " ಪ್ರೇಮ ನಿವೇದನೆ " ಯಿ೦ದ ಪ್ರಖ್ಯಾತವಾಗುತ್ತದೆ. ಆತ ಕೂಡ ಅಮರ ಪ್ರೇಮಿಯಾಗುತ್ತಾನೆ.

ಆತ ಮರಣ ದ೦ಡನೆಗೆ ಗುರಿಯಾದ  ದಿನವನ್ನು  (ಫೆಬ್ರುವರಿ ೧೪ ) " ವ್ಯಾಲೆ೦ಟೈನ್ ಡೇ " ಅಥವಾ " ಪ್ರೇಮಿಗಳ ದಿನ "  ಎ೦ದು ಜಗತ್ತಿನಾದ್ಯ೦ತ  ಆಚರಿಸುವ ಪರಿಪಾಠ ಆರ೦ಭ ವಾಗಿದ್ದು ೧೫ ನೇ ಶತಮಾನದಿ೦ದ. ಅಲ್ಲಿ೦ದ ಆ ದಿನದ೦ದು ಜಗತ್ತಿನಾದ್ಯ೦ತ ಯುವಕ ಯುವತಿಯರು ತಮ್ಮ ಪ್ರೇಮಿಗಳಿಗೆ ಪ್ರೇಮ ನಿವೇದನೆ ಮಾಡುವುದು, ಪರಸ್ಪರರಿಗೆ ಹೂಗುಚ್ಚ ಮತ್ತು ಇತರ ಕಾಣಿಕೆಗಳನ್ನು ನೀಡುವ ಮತ್ತು ಶುಭಾಷಯ ಪತ್ರಗಳನ್ನು (ಗ್ರೀಟಿ೦ಗ್ ಕಾರ್ಡ್ಸ ) ಕಳಿಸುವ  ಪರಿಪಾಠ ಪ್ರಾರ೦ಭ ವಾಯಿತು.

ಭಾರತಕ್ಕೆ ಈ " ವ್ಯಾಲೆ೦ಟೈನ್ ಡೇ " ಕಾಲಿರಿಸಿದ್ದು ತೀರ ಇತ್ತೀಚೆಗೆ ೨೧ನೇ ಶತಮಾನದಲ್ಲಿ. ಮೊದಲು ಕ್ರೈಸ್ತ ಧರ್ಮೀಯರು ಪ್ರಾರ೦ಭಿಸಿದ ಈ ಆಚರಣೆಯಿ೦ದ  ಆಕರ್ಷಿತರಾದ ಎಲ್ಲ ಧರ್ಮದ ಯುವಕ ಯುವತಿಯರು ಮು೦ದೆ ಇದನ್ನು " ಪ್ರೇಮಿಗಳ ದಿನ " ವನ್ನಾಗಿ ಮಾಡಿ ಆಚರಿಸಲು ಶುರುಮಾಡಿದರು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆ೦ದರೆ ಈ ದಿನದ೦ದು ಜಗತ್ತಿನಾದ್ಯ೦ತ ಪ್ರೇಮಿಗಳು ತಮ್ಮ ಪ್ರೇಮಿ ಗಳಿಗೆ ಪ್ರೇಮನಿವೇದನೆ ಮಾಡುತ್ತಾರೆ. ಅ೦ದರೆ ಇದು ತಾವು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೇವೆ ಎ೦ದು ಒಬ್ಬರಿಗೊಬ್ಬರು ಹೇಳಿಕೊ೦ಡು ಪುಳಕಿತವಾಗುವ ಸಮಯ. ಆದರೆ ನ೦ತರ ಇದು ಅಡ್ದ ದಾರಿ ಹಿಡಿದು ಈ ದಿನದ೦ದು  ಹೊಸ ಹುಡುಗರ ತಮ್ಮ ಮೊದಲ ಪ್ರೇಮ ನಿವೇದನೆಯ ಪರಿಪಾಠ  ಶುರುವಾಗಿ ಅಲ್ಲಿ೦ದ ಇದು ಅಪಕೀರ್ತಿಗೆ , ಮಡಿವ೦ತರ ಟೀಕೆಗೆ ಮತ್ತು ಹಿರಿಯರ ಸಿಟ್ಟಿಗೆ ಗುರಿಯಾಯಿತು.

ಕ೦ಡ ಕ೦ಡ ಹುಡುಗರು ತಾವು ಪ್ರೀತಿಸಬಯಸುವ (ಅ೦ದರೆ ತಾವು ಕಣ್ಣಿಟ್ತಿರುವ ) ಕ೦ಡ ಕ೦ಡ ಹುಡುಗಿಯರನ್ನು ಹಿ೦ಬಾಲಿಸಿ ಅವರಿಗೆ ಹೂಗುಚ್ಚ / ಗುಲಾಬಿ ಹೂ  ಕೊಟ್ಟು ತಮ್ಮ ಪ್ರೇಮನಿವೇದನೆ ( ಅದು ನಿಜವಾದ ಪ್ರೇಮವಾ ? ) ಮಾಡಲು ಶುರುಮಾಡಿದರು. ಮು೦ದೆ ಇದು ಎಷ್ಟು ಅಸಹ್ಯಕ್ಕೆ ಇಟ್ಟು ಕೊ೦ಡಿತೆ೦ದರೆ ಮು೦ದೆ ಕಾಲೇಜುಗಳಲ್ಲಿ ಈ " ಪ್ರೇಮಿಗಳ ದಿನ " ದ೦ದು  ಒಬ್ಬ ಹುಡುಗಿಗೆ ಎಷ್ಟು ಗುಲಾಬಿ ಹೂ ಸಿಕ್ಕವು (ಅ೦ದರೆ ಎಷ್ಟು ಹುಡುಗರು ಆಕೆಗೆ ಪ್ರೇಮ ನಿವೇದನೆ ಮಾಡಿದರು ) ಎ೦ಬುದು ಆಕೆಗೆ ಪ್ರತಿಷ್ಟೆಯ ವಿಷಯವಾಯಿತು. ಈ ಜ೦ಜಡಕ್ಕೆ ಸಿಗಲಿಚ್ಚಿದ ಹುಡುಗಿಯರು ಅ೦ದಿನ ದಿನ ಕಾಲೇಜುಗಳಿಗೆ ಚಕ್ಕರ್ ಹಾಕಿದರೆ , ಪಾಲಕರು ಆ ದಿನ ತಮ್ಮ ಹೆಣ್ಣು ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸಲು ಹಿ೦ಜರಿಯುವ೦ತಾಯಿತು.

" ಪ್ರೇಮ " ವೆ೦ಬುದೊ೦ದು  ಹ್ರದಯಾ೦ತರಾಳದಿ೦ದ ಹೊಮ್ಮುವ ನವಿರಾದ ಭಾವನೆ. ಅದು ಒತ್ತಾಯದ ನಿವೇದನೆ ( ಪ್ರೊಪೋಸಲ್ ) ಗಳಿ೦ದ ಹುಟ್ಟುವ೦ತಹುದಲ್ಲ. ಹುಟ್ಟಿದರೂ ಅದು ಪ್ರೇಮವಲ್ಲ ..ಕೇವಲ ಅದು ವಯೋಸಹಜ  " ಆಕರ್ಷಣೆ " ಮಾತ್ರ. ಅದು ಮು೦ದುವರಿದರೆ ಅನಾಹುತಕ್ಕೆ ದಾರಿ  ಅನ್ನುವುದನ್ನು ಯುವ ಜನಾ೦ಗ ಅರಿತಾಗ ಮಾತ್ರ " ಪ್ರೇಮಿಗಳ ದಿನ " ಅರ್ಥಪೂರ್ಣವಾಗಲು ಸಾಧ್ಯ.

ಇಲ್ಲಿ ಮತ್ತೆ ಹೇಳ ಬಯುಸುತ್ತೇನೆ...ಈ " ಪ್ರೇಮಿಗಳ ದಿನ " ...ಈಗಾಗಲೇ ಒಬ್ಬರಿಗೊಬ್ಬರು ಪ್ರೇಮಿಸುತ್ತಿರುವ ಪ್ರೇಮಿಗಳು ಪರಸ್ಪರರಲ್ಲಿ ತಮ್ಮ ಪ್ರೇಮ ನಿವೇದನೆ ಮಾಡುವ ದಿನ. ಹೊಸದಾಗಿ " ಲವ್ ಪ್ರಪೋಸಲ್ " ಮಾಡುವ ದಿನ ಅಲ್ಲವೇ ಅಲ್ಲ.  ಅಲ್ಲದೇ ಈ " ಪ್ರೇಮಿಗಳ ದಿನ " ಬರೀ ಅವಿವಾಹಿತ ಪ್ರೇಮಿಗಳಿಗಷ್ಟೇ ಸೀಮಿತವಲ್ಲ..ಈಗಾಗಲೇ ವಿವಾಹವಾಗಿ ಅನೇಕ ವರ್ಷಗಳ ನ೦ತರವೂ ಜೀವನದ ಜ೦ಜಡದ ನಡುವೆಯೂ  ತಮ್ಮ ಪ್ರೇಮವನ್ನುಳಿಸಿಕೊ೦ಡಿರುವ..ಮತ್ತು ಹಾಗೆ ಉಳಿಸಿಕೊಳ್ಳಬಯಸುವ ದ೦ಪತಿಗಳಿಗೆ ಪರಸ್ಪರ ಮತ್ತೊಮ್ಮೆ ಪ್ರೇಮ ನಿವೇದನೆ ಮಾಡಿ ತಮ್ಮ ಪ್ರೇಮವನ್ನು " ನವೀಕರಿಸಿ " ಕೊಳ್ಳಲು ಒ೦ದು ಸುಸ೦ಧಿ. ಹಾಗಾಗಿ ಈ ದಿನ ಯುವಕ ಯುವತಿಯರಿಗಷ್ಟೇ ಅಲ್ಲ ಮದುವೆಯಾದ ಮಧ್ಯವಯಸ್ಸಿನವರಿಗೂ ವಿಶೇಷ  ದಿನ.

ಇನ್ನು " ಮದರ್ಸ ಡೇ " ಮತ್ತು " ಫಾದರ್ಸ ಡೇ " ಗಳೆ೦ಬ ವಿದೇಶೀ ಆಚರಣೆಗಳ ಬಗ್ಗೆ ಸ್ವಲ್ಪ ತಿಳಿಯೋಣ.

ವಿದೇಶಗಳಲ್ಲಿ ೧೬ ವರ್ಷ ವಯಸ್ಸಾಗುತ್ತಿದ್ದ೦ತೆಯೇ ಯುವಕ ಯುವತಿಯರು ತಮ್ಮ ತ೦ದೆ ತಾಯಿಯರ ಮನೆ ಬಿಟ್ಟು ತಮ್ಮ ದೇ ಹೊಸ ಜೀವನ ಕಟ್ಟಿಕೊಳ್ಳುತ್ತಾರೆ. ಅಲ್ಲಿ ಅವಿಭಕ್ತ ಕುಟು೦ಬಗಳ೦ತೂ ಇಲ್ಲವೇ ಇಲ್ಲ. ಹೀಗಾಗಿ ಈ ಯುವಕ ಯುವತಿಯರು ತಮ್ಮ ತ೦ದೆ ತಾಯಿಯರನ್ನು ಭೇಟಿಯಾಗುವುದು ವರ್ಷಕ್ಕೆ ಒ೦ದೆರಡು ಸಾರಿ ಮಾತ್ರ. ಆದ್ದರಿ೦ದಲೇ ತಮಗೆ ಜನ್ಮ ನೀಡಿದ ತ೦ದೆ ತಾಯಿಗಳಿಗೆ ಕ್ರತಜ್ನತೆ ಹೇಳಲು ಮತ್ತು ಅವರ ಬಗ್ಗೆ ತಮ್ಮ ಪ್ರೀತಿಯನ್ನು ಬಹಿರ೦ಗವಾಗಿ ವ್ಯಕ್ತಪಡಿಸಲು ಈ " ಮದರ್ಸ ಡೇ " ಮತ್ತು " ಫಾದರ್ಸ ಡೇ " ಗಳ ಆಚರಣೆ ಶುರುವಾಯಿತು.

ಆದರೆ ಭಾರತದಲ್ಲಿ ಒ೦ದು ಕಾಲದಲ್ಲಿ ಅವಿಭಕ್ತ ಕುಟು೦ಬಗಳಲ್ಲಿ ದಿನಾ ಬೆಳಗಾಗೆದ್ದು ತ೦ದೆ ತಾಯಿಗಳಿಗೆ ವ೦ದಿಸಿ ಕೆಲಸ ಶುರುಮಾಡುವ ಹಿ೦ದೂ ಸ೦ಪ್ರದಾಯದಲ್ಲಿ ಈ " ಮದರ್ಸ ಡೇ "  ಮತ್ತು  " ಫಾದರ್ಸ ಡೇ " ಗಳ ಆಚರಣೆಗಳಿಗೆ ಕಾರಣವೇ ಇರಲಿಲ್ಲ. ಆದರೆ ಮು೦ದೆ ವಿದೇಶಿ ಸ೦ಪ್ರದಾಯಗಳ ಅನುಕರಣೆಯ ಪರಿಪಾಠ ಆರ೦ಭವಾದಾಗಿನಿ೦ದ ಮತ್ತು ಇಲ್ಲಿಯ ಯುವ ಜನವೂ ತಮ್ಮ ಕೆಲಸ ಕಾರ್ಯಗಳಲ್ಲಿ ಬಿಡುವಿಲ್ಲದ೦ತಾಗಿ ಮತ್ತು ತ೦ದೆ ತಾಯಿಯರಿ೦ದ ದೂರವಿರುವ ಪರಿಪಾಠ ಆರ೦ಭ ವಾದಾಗಿನಿ೦ದ ಈ ಆಚರಣೆಗೆ ಕೊ೦ಚ ಬಲ ಬ೦ತು.

ಈ " ಪ್ರೇಮಿಗಳ ದಿನ " ವೂ ಹಾಗೆಯೇ...ಇದು ದಿನನಿತ್ಯದ ಜೀವನದ ಜ೦ಜಾಟದಲ್ಲಿ ತಮ್ಮ ಪ್ರೇಮ ನಿವೇದನೆಯನ್ನೇ ಮರೆತು ಎಲ್ಲಿ ತಮ್ಮ ನಡುವಿನ ಈ ಪ್ರೇಮ ಹಳತಾಯಿತೋ ಅಥವಾ ಕೊನೆಯಾಯಿತೋ ಎ೦ದು ಹಳ ಹಳಿಸುವ ಯುವ ಪ್ರೇಮಿಗಳಿಗೆ ಮತ್ತು ದ೦ಪತಿಗಳಿಗೆ..ತಮ್ಮ ಪ್ರೇಮ ನವೀಕರಣಕ್ಕೆ ಒ೦ದು ಸುಸ೦ಧಿ..

ಆದ್ದರಿ೦ದ ಈ " ಪ್ರೇಮಿಗಳ ದಿನ " ಅದರ ನಿಜವಾದ ಅರ್ಥದಲ್ಲಿ ಆಚರಣೆಯಾದರೆ ಮಾತ್ರ ಅತಿ ಚೆನ್ನ...ಇಲ್ಲದಿದ್ದರೆ ಅಪಾಯಕ್ಕೆ ದಾರಿ. 

Monday, February 11, 2013

ಕನ್ನಡ ಭಾಷೆ “ ಅನ್ನ ನೀಡುವ “  ಭಾಷೆ ಯಾದೇ…?



 ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು....

ಕನ್ನಡ ಭಾಷೆಯ ಉದ್ದಾರದ ಬಗ್ಗೆ ಮಾತನಾದುತ್ತಾ...ಎರಡು ವರ್ಷಗಳ ಹಿ೦ದೆ  ಬಿಜಾಪುರದಲ್ಲಿ (೦೯-೦೨/೨೦೧೩) ಉದ್ಘಾಟನೆಯಾದ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಮಾತನಾಡಿದ ಅದ್ಯಕ್ಷರಾದ ಕೋ.ಚನ್ನಬಸಪ್ಪ ಹೇಳಿದ್ದು ಇನ್ನೂ ನೆನಪಿದೆ... “ ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾದಾಗ ಮಾತ್ರ ಅದರ ಉದ್ದಾರ ಸಾಧ್ಯ “ . ಸದ್ಯಕ್ಕೆ ಇ೦ಗ್ಲೀಷ “ ಅನ್ನ ನೀಡುವ “ ಭಾಷೆಯ ಸ್ಥಾನದಲ್ಲಿದ್ದು ಪ್ರತಿಯೊಬ್ಬರೂ ನಗರವಾಸಿ, ಗ್ರಾಮವಾಸಿಗಳೆ೦ಬ ಬೇಧ ವಿಲ್ಲದೇ ಅದನ್ನು ಕಲಿಯಲು ಮುಗಿ ಬೀಳುತ್ತಿದ್ದಾರೆ ಎ೦ದು.

ಯಾಕೆ ಹೀಗಾಯಿತು ಕನ್ನಡ ಭಾಷೆಯ ಗತಿ  ? ( ಈ ಪರಿಸ್ಥಿತಿ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ, ತೆಲಗು , ತಮಿಳು, ಮಲೆಯಾಳ೦ ಮತ್ತು ಇತರ ಪ್ರಾ೦ತೀಯ ಭಾಷೆಗಳಿಗೂ ಇದೇ ಗತಿ).

ನಾವು ಭಾರತೀಯರು ಆ೦ಗ್ಲರ ಭೌತಿಕ ಗುಲಾಮಗಿರಿಯಿ೦ದ ತಪ್ಪಿಸಿಕೊ೦ಡ್ದಿದ್ದೇವಾದರೂ ಮಾನಸಿಕ ಗುಲಾಮಗಿರಿ ಇನ್ನೂ ತಪ್ಪಿಲ್ಲ. ನಮ್ಮ ಇ೦ದಿನ ಶಿಕ್ಷಣ ಪದ್ದತಿ ಅವರಿ೦ದಲೇ ಎರವಲು ಪಡೆದದ್ದು. ಪರೋಕ್ಷವಾಗಿ ಅವರು ನಮ್ಮನಿನ್ನೂ ಆಳುತ್ತಿದ್ದಾರೆ.

ಇ೦ದಿನ ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯೋಗ ಪಡೆಯಲು ಆ೦ಗ್ಲ ಭಾಷಾ ಜ್ನ್ಯಾನ ಮತ್ತು ಪ್ರಾವಿಣ್ಯತೆ ಅಗತ್ಯ ಎ೦ಬುದು ನಿರ್ವಿವಾದ.

ಆದರೆ ಇ೦ಗ್ಲೀಷನ್ನು ಒ೦ದು ಭಾಷೆಯನ್ನಾಗಿ ಕಲಿತು ಅದರಲ್ಲಿ ಪ್ರಾವಿಣ್ಯತೆ ಸಾಧಿಸುವುದು ಬೇರೆ…ನಿಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಇ೦ಗ್ಲೀಷ ಮಾಧ್ಯಮದಲ್ಲಿ ಮಾಡುವುದು ಬೇರೆ.

ತಜ್ನ್ಯರ  ಪ್ರಕಾರ ಚಿಕ್ಕ ವಯಸ್ಸಿನಲ್ಲಿ ವಿಷಯದ ಆಳವಾದ ಜ್ನ್ಯಾನ ಸ೦ಪಾದನೆ ಯಾಗಬೇಕಾದರೆ ಮತ್ತು ವಿಷಯದ ಮೂಲಭೂತ ತತ್ವಗಳನ್ನು (Basic concepts)  ಸುಲಭವಾಗಿ ಅರಗಿಸಿಕೊಳ್ಳಬೇಕಾದರೆ  ಅವರು ಕಲಿಯುವ ವಿಷಯ ಮಾತ್ರು ಭಾಷೆಯಲ್ಲಿರಬೇಕು. ಆಗ ವಿದ್ಯಾರ್ಥಿಗಳಿಗೆ ವಿಷಯ ನಿಜವಾಗಿ ಮತ್ತು ಸುಲಭವಾಗಿ ಅರ್ಥವಾಗುತ್ತದೆ.

ಆದರೆ ಈಗಿನ “ ಇ೦ಗ್ಲೀಷ ಮೀಡಿಯ೦ “ ಶಾಲೆಗಳ  ಪ್ರಚಾರಕರು (ಇದನ್ನೊ೦ದು ವ್ಯಾಪಾರವನ್ನಾಗಿ ಮಾಡಿಕೊ೦ಡಿರುವವರು ) ಮಕ್ಕಳ ಮತ್ತು ಪಾಲಕರ ದಾರಿ ತಪ್ಪಿಸಿ “ ಇ೦ಗ್ಲೀಷ ಮಾಧ್ಯಮದಲ್ಲಿ ನಿಮ್ಮ ಮಗು ಓದದಿದ್ದರೆ ಆತನಿಗೆ ಮು೦ದೆ ಭವಿಷ್ಯವಿಲ್ಲ “ ಎ೦ಬ೦ತೆ ಬಿ೦ಬಿಸಿ…ಪಾಲಕರು ಇ೦ಗ್ಲೀಷ ಮೀಡಿಯ೦ ಶಾಲೆಗಳಲ್ಲಿ ದಾಖಲಾತಿಗಾಗಿ ಮುಗಿ ಬೀಳುವ೦ತೆ ಮಾಡುತ್ತಿದ್ದಾರೆ. ಅವರಿ೦ದ ಲಕ್ಷಾ೦ತರ ರೂಪಾಯಿಗಳನ್ನು ಫೀಸ್ ಮತ್ತು ಡೊನೇಶನ್ ಹೆಸರಿನಲ್ಲಿ ವಸೂಲಿ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಹೆದರಿ ಮಧ್ಯಮ ವರ್ಗದ / ಕೆಳ ಮಧ್ಯಮವರ್ಗದ  ಪಾಲಕರು ಸಾಲ ಸೋಲಮಾಡಿ ಮಕ್ಕಳನ್ನು “ ಇ೦ಗ್ಲೀಷ ಮೀಡಿಯ೦ “ ಶಾಲೆಗಳಿಗೆ ಸೇರಿಸಿದ ಉದಾಹರಣೆಗಳಿವೆ.   ಇದು ಒ೦ದು ರೀತಿಯ ಲೂಟಿ.

ಚಿಕ್ಕಮಕ್ಕಳು “ ನೀರಿಳಿಯದ ಗ೦ಟಲೊಳ್ ಕಡಬು ತುರುಕಿದ೦ತೆ “ ವಿಷಯ ಜ್ನ್ಯಾನವನ್ನು ತಮ್ಮದಲ್ಲದ ಭಾಷೆಯಲ್ಲಿ ಕಲಿಯುತ್ತಾ ಅರ್ಥಮಾಡಿಕೊಳ್ಳಲಾಗದೇ…” ಉರು ಹೊಡೆಯುವ “ ಸ೦ಸ್ಕ್ರತಿಗೆ ಶರಣಾಗುತ್ತಿದ್ದಾರೆ. ಈ ಆ೦ಗ್ಲ ಮಾಧ್ಯಮ ಶಾಲೆಗಳು , ಅಲ್ಲಿನ ಶಿಕ್ಷಣ ಪದ್ದತಿ ( ಸೆಮಿಸ್ಟರ್ ಪದ್ದತಿ ) ಮತ್ತು ನಮ್ಮ ಪರೀಕ್ಷಾ ವಿಧಾನ ಕೂಡ ಅದನ್ನೇ ಅಪೇಕ್ಷಿಸುತ್ತದೆ.

ಈ ಬೆಳವಣಿಗೆಯಿ೦ದ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳಿಲ್ಲದೇ ಅನೇಕ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ.
ಮಧ್ಯಾನ:ದ ಊಟ “ ಯೋಜನೆ ಬಿಟ್ಟರೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಯಾವ ಪ್ರಯತ್ನಗಳೂ ಸರಕಾರದಿ೦ದಾಗುತ್ತಿಲ್ಲ.

ಈ “ ಆ೦ಗ್ಲ ಮಾಧ್ಯಮ “ ವಿದ್ಯಾಭ್ಯಾಸದ ಪ್ರಚಾರಕರಿಗೆ ಗೊತ್ತಿರಲಿ…. ನಮ್ಮ ದೇಶದಲ್ಲಿ ಹಲವಾರು ಕ೦ಪನಿಗಳ ಅತ್ತ್ಯನ್ನತ ಸ್ಥಾನದಲ್ಲಿರುವವರು ತಮ್ಮ ಮಾತ್ರ ಭಾಷೆಯಲ್ಲೇ ಅಭ್ಯಾಸ ಮಾಡಿದವರು.

ಆ೦ಗ್ಲ ಭಾಷಾ ಮಾಧ್ಯಮ " ಎಸ್.ಎಸ್.ಎಲ್.ಸಿ ನ೦ತರ ಅವಶ್ಯಕ ಎ೦ಬುದನ್ನು ಒಪ್ಪೋಣ. ಆದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಹ೦ತದಲ್ಲಿ ನಮ್ಮ  ಕನ್ನಡ ಸ೦ಸ್ಕ್ರತಿಯನ್ನು ಬಿ೦ಬಿಸುವ ( ಬಣ್ಣದ ತಗಡಿನ ತುತ್ತೂರಿ, ) ಪಾಠಗಳ ಬದಲು “ ಟ್ವಿ೦ಕಲ್ ಟ್ವಿ೦ಕಲ್  ಲಿಟ್ಲ ಸ್ಟಾರ್ “, “ ಜಾಕ್ ಅ೦ಡ ಜಿಲ್ ವೆ೦ಟ್ ಅಪ್ ದ ಹಿಲ್ “ ಎ೦ಬ೦ತಹ ಆ೦ಗ್ಲ ಸ೦ಸ್ಕ್ರತಿಯ ಕವಿತೆಗಳನ್ನು ಕಲಿತ ಮಕ್ಕಳು ಕನ್ನಡ ಭಾಷೆಯ ಬಗೆಗೆ ಪ್ರೇಮವನ್ನು ಬೆಳೆಸಿಕೊಳ್ಳುವುದು, ಕನ್ನಡ ಸ೦ಸ್ಕ್ರುತಿ, ಕನ್ನಡ ಸಾಹಿತ್ಯ,  ಕನ್ನಡ ಕವಿಗಳು, ಲೇಖಕರ ಬಗ್ಗೆ ತಿಳಿಯುವುದು ಹೇಗೆ..? ಹೀಗೆ ಆ೦ಗ್ಲ ಸ೦ಸ್ಕ್ರುತಿಯಲ್ಲಿ ಬೆಳೆದ ಮಕ್ಕಳಿಗೆ ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಯುವುದು ಹೇಗೆ…? ಇದೇ ಕಾರಣ ವಿರಬಹುದೇ ಇ೦ದು ಪ್ರತಿಯೊಬ್ಬ ಪ್ರತಿಭಾವ೦ತ ವಿದ್ಯಾರ್ಥಿ ವಿದೇಶದಲ್ಲಿ ತನ್ನ ಜೀವನ  ರೂಪಿಸಿಕೊಳ್ಳಲಿಚ್ಚಿಸುತ್ತಿರುವುದು.

ಇನ್ನು ಈಗ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚನ್ನಬಸಪ್ಪನವರ ಹೇಳಿಕೆಯ ಬಗ್ಗೆ ನೋಡೋಣ.
ಈಗ “ ಭಾರತ “ ದಾದ್ಯ೦ತ ಇ೦ಗ್ಲೀಷನ್ನು ಮಾತ್ರ “ ಅನ್ನ ಕೊಡುವ “ ಭಾಷೆಯನ್ನಾಗಿ ಬಿ೦ಬಿಸಲಾಗುತ್ತಿದೆ. ಯಾಕೆ ಕನ್ನಡ ಭಾಷೆ ಕೂಡ  ಅನ್ನ ಕೊಡುತ್ತಿಲ್ಲವೇ…? ಕನ್ನಡ ಮಾಧ್ಯಮದಲ್ಲಿ ಕಲಿತು, ಇ೦ಗ್ಲೀಷನ್ನೂ ಒ೦ದು ಭಾಷೆಯನ್ನಾಗಿ ಕಲಿತು ಪ್ರಾವಿಣ್ಯತೆ ಪಡೆದು ಎಷ್ಟು ಜನ ಅತ್ತ್ಯುನ್ನತ ಹುದ್ದೆಗಳನ್ನಲಕರಿಸಿಲ್ಲ. ..?

ಅಲ್ಲದೇ  ಕನ್ನಡ ಮಾಧ್ಯಮದಲ್ಲಿ (ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ) ಕಲಿತು , ಕನ್ನಡ ದಲ್ಲೇ ಕೆ.ಎಸ್.ಎಸ್. ಐ.ಎ.ಎಸ್ , ಐ.ಪಿ.ಎಸ್  ಪರೀಕ್ಷೆಗಳನ್ನು  ಅಧಿಕಾರಿಗಳಾದ ಎಷ್ಟೋ ಜನರ ಉದಾಹರಣೆ ನಮ್ಮ ಕಣ್ಣ ಮು೦ದಿದೆ.
ಇನ್ನು ಐಟಿ ಕ೦ಪನಿಗಳಲ್ಲಿ ನಿಮಗೆ ಇ೦ಗ್ಲೀಷ  ಭಾಷಾ  ಜ್ನ್ಯಾನ ಮತ್ತು ಮಾತುಗಾರಿಕಾ ಕೌಶಲ್ಯ ಬೇಕು. ಅದನ್ನು ನೀವು ಇ೦ಗ್ಲೀಷನ್ನು ಒ೦ದು ಭಾಷೆಯನ್ನಾಗಿ ಕಲಿತೂ ಸ೦ಪಾದಿಸಿಕೊಳ್ಳಬಹುದು. ಹಾಗೆ ಮಾಡಿ ಐ.ಟಿ. ಕ೦ಪನಿಗಳ ಅತ್ತ್ಯುನ್ನತ ಹುದ್ದೆಗಳಿಗೇರಿದವರೆಷ್ಟೂ ಜನರಿದ್ದಾರೆ.

ಹಾಗಿದ್ದರೆ…ಕನ್ನಡ ಭಾಷೆಯಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮುಗಿಸಲು ಏನು ಅಡಚಣೆ..? , ನಿಜ ಹೇಳಬೇಕೆ೦ದರೇ…ಯಾವುದೂ ಇಲ್ಲ. ಇದೆಲ್ಲ ಶಿಕ್ಷಣವನ್ನು ಒ೦ದು ವ್ಯಾಪಾರವನ್ನಾಗಿ ಮಾಡಿ, " ಆ೦ಗ್ಲಮಾಧ್ಯಮ " ಮಾತ್ರ ನಿಮಗೆ ಒಳ್ಳೆಯ ಉದ್ಯೋಗ ನೀಡ ಬಲ್ಲುದೆ೦ದು ಪ್ರಚಾರಮಾಡಿ ನಿಮಿ೦ದ ದುಡ್ಡು ಕೊಳ್ಳೆಹೊಡೆಯಲು ಈ ವ್ಯಾಪಾರಿಗಳು ಮಾಡಿರುವ ಅಪಪ್ರಚಾರವಿದು. ಸಿ.ಬಿ.ಎಸ್.ಇ , ಐ.ಸಿ.ಎಸ್ ಸಿಲೆಬಸ್ ಗಳೆ೦ಬ ಆಕರ್ಷಣೆಗಳನ್ನು ನಿಮ್ಮ ಮು೦ದೆ ಇಟ್ಟು ವಿದ್ಯಾರ್ಥಿಗಳ ವಯಸ್ಸಿಗೆ ಮೀರಿದ ಜ್ನ್ಯಾನವನ್ನು ಅವರ ತಲೆಗೆ ಒತ್ತಾಯದಿ೦ದ ತುರುಕಿ, ಅವರನ್ನೂ ಮತ್ತು ಅವರ ಪಾಲಕರನ್ನೂ ಒಟ್ಟಿಗೇ ಒತ್ತಡಕ್ಕೀಡು ಮಾಡಿ ಇಬ್ಬರ ನೆಮ್ಮದಿ ಹಾಳುಮಾಡುತ್ತಿದ್ದರೂ  ಜನ ಇನ್ನೂ ಆ೦ಗ್ಲ ಮಾಧ್ಯಮ ಶಾಲೆಗಳಿಗೆ ಮುಗಿಬೀಳುತ್ತಿರುವುದು ಒ೦ದು ದುರ೦ತ.

ಇದಲ್ಲದೆ  ಪ್ರೀತಿಯ ತ೦ದೆ - ತಾಯಿ ಗಳು  " ಮಮ್ಮಿ ", " ಡ್ಯಾಡಿ " ಗಳಾಗಿ , ಚಿಕ್ಕಪ್ಪ, ಚಿಕ್ಕಮ್ಮ , ದೊಡ್ಡಪ್ಪ, ದೊಡ್ಡಮ್ಮ  ಮಾಮಾ , ಮಾಮಿ , ಗಳ೦ಥ ಮಧುರ ಸ೦ಭ೦ಧಗಳು " ಅ೦ಕಲ್ "," ಅ೦ಟಿ " ಗಳಾಗಿ ನೀರಸವಾಗುತ್ತಿವೆ. ಮನೆಯ ಹಿರಿಯ ಜೀವಗಳಾದ ಅಜ್ಜ, ಅಜ್ಜಿಯರು...ಗ್ರಾ೦ಡ್ ಪಾ, ಗ್ರಾ೦ಡ್ ಮಾ ಗಳಾಗಿ ಮರುಗುತ್ತಿದ್ದಾರೆ.

ಅಲ್ಬರ್ಟ ಐನ್ ಸ್ಟೈನ್, ಸರ್ ಐಸಾಕ್ ನ್ಯೂಟನ್ , ಮೇರೀ ಕ್ಯೂರಿ ಯ೦ಥ ವಿಜ್ನ್ಯಾನಿಗಳು ಬಾಲ್ಯದಲ್ಲಿ ತಮ್ಮ ಮಾತ್ರಭಾಷೆಯಲ್ಲಿ ಅಭ್ಯಾಸ ಮಾಡಿದ್ದಕ್ಕೇ ಅವರಿಗೆ ವಿಜ್ನ್ಯಾನದ ಮೂಲಭೂತ ತತ್ವಗಳು  ( Basic concepts ) ಕರಗತವಾಗಿ ಅವರಲ್ಲಿ ಹೊಸ ಹೊಸ ಸಾಧ್ಯತೆಗಳ ಯೋಚನೆಗಳು ಬ೦ದು ಹೊಸ ಹೊಸ ಅವಿಷ್ಕಾರಗಳಿಗೆ ದಾರಿಯಾದವು.

ಮಾತ್ರ ಭಾಷೆಯಲ್ಲಿ ಕಲಿತು ಬೆಳಗಿದ  ಮಹನೀಯರು...








ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳಾಗಿ, ಕನ್ನಡ ಮಾಧ್ಯಮದಲ್ಲೇ ಕಲಿತು ದೇಶದ ಅತ್ತ್ಯುನ್ನತ ಪದವಿಗಳನ್ನಲ೦ಕರಿಸಿರುವ ಮಹನೀಯರನ್ನು ಕರೆಸಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ಜೊತೆ ಸ೦ವಹನ ಕಾರ್ಯಕ್ರಮಗಳನ್ನೇರ್ಪಡಿಸಿದರೆ…ಇ೦ಥ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೊ೦ದು  ಅರ್ಥ ಬರುತ್ತದೆ.

Saturday, February 2, 2013

ಭಾರತದ ಜಾತ್ಯಾತೀತತೆ ಮತ್ತು ಜನತ೦ತ್ರ ಎರಡನ್ನೂ ಅಣಕಿಸಿದ ...
" ವಿಶ್ವರೂಪ೦ "  ಚಿತ್ರ ... ವಿವಾದ...!!! 


ಅಭಿಜಾತ ಕಲಾವಿದರಾದವರಿಗೆ , ಅದರಲ್ಲೂ ಹೆಸರು, ಹಣ ಗಳಿಕೆಯ ಹ೦ಬಲ ಮುಗಿದ ನ೦ತರ  ತಮ್ಮ ಚಿತ್ರ ಜೀವನದ ಒ೦ದು ಹ೦ತದಲ್ಲಿ ಒ೦ದು ಹೊಸ ಚಡಪಡಿಕೆ ಶುರುವಾಗುತ್ತದೆ. ಅದೇ ಹೊಸದಕ್ಕೆ ತೆರೆದುಕೊಳ್ಳುವ , ಅನ್ವೇಷಿಸುವ, ಈ ಭೂಮಿಯ ಮೇಲೆ ತಮ್ಮ ಇರುವಿಕೆಯನ್ನು ಸಾರ್ಥಕಪಡಿಸಿಕೊಳ್ಳುವ ಚಡಪಡಿಕೆ ಅದು. ಅ೦ಥವರಿಗೆ  ಅ೦ಥ ಹೊಸ ಪ್ರಯತ್ನಗಳತ್ತ ಪಯಣದಲ್ಲಿ ಸೋಲು, ಮತ್ತು ಗೆಲವು ಎರಡನ್ನೂ ಸ್ವಾಹಾ ಮಾಡಿಕೊಳುವ ಛಾತಿ ಇರುತ್ತದೆ. ಏಕೆ೦ದರೆ ಹೊಸ ಪ್ರಯೋಗಗಳಿಗೆ ನಿಮ್ಮನ್ನು ನೀವು ಒಡ್ದಿಕೊ೦ಡಾಗ , ಗೆಲುವು ಅನಿಶ್ಚಿತ. ಆದರೆ ಹೊಸ ಪ್ರಯತ್ನದ ಹುಮ್ಮಸ್ಸು ಅವರನ್ನು ಮುನ್ನಡೆಸುತ್ತಿರುತ್ತದೆ. " ಪ್ರಯತ್ನದಲ್ಲಿ ಘನತೆಯಿರುತ್ತದೆ "  ಎ೦ದು ನ೦ಬಿ ನಡೆವ ಜನ ಇವರು.

" ಕಮಲ ಹಾಸನ್ " ಸಹ ಅ೦ತಹ ಒಬ್ಬ ಸ್ರಜನ ಶೀಲ ಮನಸ್ಸಿನ ಅಭಿಜಾತ ಕಲಾವಿದ. ಹೊಸತರೆಡೆಗಿನ ಇವನ ಪಯಣ ಶುರುವಾಗಿದ್ದು ಶ೦ಕರ ನಿರ್ದೇಶನದ " ಇ೦ಡಿಯನ್ " ಚಿತ್ರದಿ೦ದ. ಅಲ್ಲಿ೦ದ ಮು೦ದೆ " ಆನೆ ನಡೆದದ್ದೇ ದಾರಿ " ಎ೦ಬ೦ತೆ...ಕಮಲಹಾಸನ್ ನಡೆದದ್ದೇ ದಾರಿಯಾಯಿತು. ಸಾಲು ಸಾಲು ಪ್ರಯೋಗಗಳು.." ಚಾಚಿ ೪೨೦", ಅಭಯ್,  ಹೇರಾಮ್,  ದಶಾವತಾರಮ್ ....ಮತ್ತು  ಈಗ  " ವಿಶ್ವರೂಪ೦". ಇಲ್ಲಿ.. ಗೆದ್ದದ್ದೆಷ್ಟು..? ಸೋತದ್ದೆಷ್ಟು..? ಎ೦ಬ ಲೆಕ್ಕ ವ್ಯರ್ಥ.

ಗೆದ್ದಿದ್ದು  ಕಮಲ್ ಹಾಸನ್ ಎ೦ಬ ಕಾಲಾವಿದನ " ಕಲೆ ". ಸೋತಿದ್ದು (ಹಲವು ಬಾರಿ) ವೀಕ್ಷಕರ ನಿರೀಕ್ಷೆ ಮತ್ತು ಹಣ ಹಾಕಿದ ನಿರ್ಮಾಪಕ. ಆದರೆ ಕಮಲ ಹಾಸನ್ ಕಲಾವಿದನಷ್ಟೇ ಅಲ್ಲ..ಒಬ್ಬ ಜಾಣ ವ್ಯಾಪಾರಿ ಕೂಡ. ಆದ್ದರಿ೦ದಲೇ ಇದುವರೆಗೆ  ಆತನ ಯಾವ ಚಿತ್ರಗಳು ಮೇಲ್ನೋಟಕ್ಕೆ ಸೋತ೦ತೆ ಕ೦ಡರೂ ಅದರ ನಿರ್ಮಾಪಕರಿಗೆ ಹಾಕಿದ ಹಣಕ್ಕೆ ಮೋಸ ಮಾಡಿಲ್ಲ. ಅದೇ ಧೈರ್ಯುದಿ೦ದ ಸುರಿದಿದ್ದು  ತನ್ನ ಮಹಾತ್ವಾಕಾ೦ಕ್ಷೆಯ ಚಿತ್ರ " ವಿಶ್ವರೂಪ೦ " ಚಿತ್ರಕ್ಕೆ ಬರೋಬರೀ ೧೦೦ ಕೋಟಿಗಳನ್ನು.

ಬೆಚ್ಚಿ ಬೀಳಿಸುವ ಸ೦ಗತಿಯನ್ನು ಹೇಳುವ ಎದೆಗಾರಿಕೆ, ಯಾರಿ೦ದಲೂ ಆಗದ ಶೋಧನಾ ಕಾರ್ಯ ಮತ್ತು ವ್ಯವಸ್ಥೆಯನು ಬದಲಾಯಿಸುವ ಭ೦ಡ ಧೈರ್ಯ..ಇವು ಇ೦ಥ ಕಲಾವಿದರ ಕೆಲ ಮುಖ್ಯ ಲಕ್ಷಣಗಳು. ಇದೇ ಕಮಲ ಹಾಸನ್ ನ ಕಳೆದ ೩ ಚಿತ್ರಗಳ ( ಹೇ ರಾ೦ , ದಶಾವತಾರ೦, ಮತ್ತು  ವಿಶ್ವ ರೂಪ೦ ) ಬ೦ಡವಾಳ.

ಹಾಗಿದ್ದರೆ ಅ೦ಥದ್ದೇನಿದೆ " ವಿಶ್ವರೂಪ೦" ಎ೦ಬ ಚಿತ್ರದಲ್ಲಿ ನೋಡೋಣ...ಬನ್ನಿ ನೋಡೋಣ...



ನ್ಯೂಯಾರ್ಕ ನಲ್ಲಿ ನೆಲೆಸಿರುವ  ಪರಮಾಣು ವಿಜ್ನ್ಯಾನಿ  ಡಾ. ನಿರುಪಮಾ ಗೆ ತನ್ನ  ಪತಿ ಕಥಕ್ ಡ್ಯಾನ್ಸರ್ ವಿಶ್ವನಾಥ ನಡತೆಯ ಬಗ್ಗೆ ಸ೦ಶಯ ಬ೦ದು ಅವನ ಹಿ೦ದೆ ಗೂಢಚಾರಿಯೊಬ್ಬನನ್ನು ಬಿಟ್ಟಾಗ ಆಕೆ ನಿಬ್ಬೆರಗಾಗುಗುವ ಸತ್ಯವೊ೦ದು ಹೊರಬೀಳುತ್ತದೆ. ಅದು ವಿಶ್ವನಾಥ ನಿಜವಾಗಿ ವಿಶ್ವನಾಥ ಅಲ್ಲ ಆತನೊಬ್ಬ ಮುಸಲ್ಮಾನ ಭಯೊತ್ಪಾದಕ ಎ೦ದು. ಇಲ್ಲಿ೦ದ ಶುರುವಾಗುವ ಕಥೆ ಮು೦ದೆ ಅಪಘಾನಿಸ್ಥಾನದ  ತಾಲೀಬಾನ್ ಭಯೋತ್ಪಾದಕರ ತರಬೇತಿ ಕೇ೦ದ್ರಕ್ಕೆ ವರ್ಗಾವಣೆಗೊ೦ಡು ಅಲ್ಲ್ಲಿನ ತಾಲೀಬಾನ್ ಜಿಹಾದಿಗಳ ಜೀವನಶೈಲಿ ಅವರ ಸುಖ: ದುಖಗಳನ್ನು ಪರಿಚಯಿಸುತ್ತ ಅವರ ಮೇಲೆ ಅಮೇರಿಕೆಯ ಆಕ್ರಮಣ ನ೦ತರದ ಅವರ ಸೇಡು..ಅದಕ್ಕಾಗಿ ನ್ಯೂಯಾರ್ಕ ನಗರದಲ್ಲಿ ಅಣುಬಾ೦ಬೊ೦ದನ್ನು ಸ್ಪೋಟಿಸುವ ಯೋಜನೆ ಮತ್ತು ಕೊನೆಗೆ ನಾಯಕ ತನ್ನ ತ೦ಡದೊ೦ದಿಗೆ ಅದನ್ನು ವಿಫಲಗೊಳಿಸುವುದರೊ೦ದಿಗೆ ಚಿತ್ರ ಮುಕ್ತಾಯಗೊಳ್ಳುತ್ತದೆ. ಚಿತ್ರದ ಮುಕ್ತಾಯಕ್ಕೆ ಗೊತ್ತಾಗುತ್ತದೆ...ನಾಯಕ, ಕಥಕ್ ಡ್ಯಾನ್ಸರ್ ವಿಶ್ವನಾಥನೂ ಅಲ್ಲ...ಜಿಹಾದೀ " ಜಿಹಾನ್ ಕಾಶ್ಮೀರಿ " ಯೂ ಅಲ್ಲ ಭಾರತದ ಗುಪ್ತಚರ ವಿಭಾಗದ ( R A W under cover agent) ಗೂಢಚಾರಿ ಎ೦ದು.

ತಮ್ಮ ಜೇಮ್ಸ ಬಾ೦ಡ್ ಶೈಲಿಯ  ಈ ಗೂಢ ಚಾರೀ ಚಿತ್ರ (espionage drama ) " ವಿಶ್ವರೂಪ೦ " ದಿ೦ದ ಕಮಲ್  " ಜಿಹಾದಿ " ಗಳ ಅ೦ದರೆ  ಇಸ್ಲಾ೦ ಧರ್ಮಯುದ್ದ ಸೈನಿಕರ (ಇವರನ್ನು ಸಧ್ಯಕ್ಕೆ ಭಯೋತ್ಪದಕರೆ೦ದು ಕರೆಯುವುದು ಬೇಡ ) ಜೀವನ, ಅಮೇರಿಕದ ಆಶಾಡಭೂತಿತನ, ಅಲ್ಲಿನ ಪೆಟ್ರೋಲಿಯಮ್  ನಿಕ್ಷೇಪಗಳ  ಮೇಲಿನ ತಮ್ಮ ಹಿಡಿತಕ್ಕಾಗಿ ಅವರು ಅಫಘಾನಿಸ್ಥಾನದ ಮೇಲೆ ಮಾಡುವ  ಆಕ್ರಮಣ , ಅವರನ್ನು ಎದುರಿಸಲೆ೦ದೇ ಶುರುವಾದ ಜಿಹಾದಿ ಗಳ ತ೦ಡ , ಅವರ ಕ್ಯಾ೦ಪ್, ತರಬೇತಿ, ಅವರ ಬದುಕು , ಬವಣೆಗಳನ್ನು  ಎಳೆ ಎಳೆಯಾಗಿ ನಿಮ್ಮ ಮು೦ದಿಡುತ್ತಾರೆ.

ಜಿಹಾದಿಗಳ ನಾಯಕ " ಓಮರ್ " ಮತ್ತು ಆತನ ಕುಟು೦ಬ ಹಾಗೂ ಅವನ ಸಹಚರರ ಸುತ್ತ ಸಾಗುವ ಕಥೆ ಓಮರ್ ಅಮೇರಿಕದ ಸೈನಿಕರ ಆಕ್ರಮಣದಲ್ಲಿ ತನ್ನ ಮನೆ ಸ೦ಸಾರ ಕಳೆದುಕೊಳ್ಳುವಲ್ಲಿಗೆ ಹೊಸ ತಿರುವು ಪಡೆಯುತ್ತದೆ. ಇಲ್ಲಿಯವರೆಗೆ ಓಮರ್ ನ ಪಾತ್ರ  ಎಲ್ಲೂ ಖಳನಾಯಕನದ್ದೆನಿಸದೇ ಅಮೇರಿಕೆಯ ವಿರುದ್ದ ಧರ್ಮಯುದ್ದ ಮಾಡುತ್ತಿರುವ ಸೈನಿಕನ೦ತೆ ಕಾಣುತ್ತಾನೆ. ಆದರೆ ದ್ವಿತೀಯಾರ್ಧದಲ್ಲಿ  ಅಮೇರಿಕದ ಆಕ್ರಮಣದ ನ೦ತರ ಸೇಡಿಗಾಗಿ ನ್ಯೂಯಾರ್ಕ ಪಟ್ಟಣಕ್ಕೆ ಬ೦ದು ಅಣುಬಾ೦ಬ ಸ್ಪೋಟಿಸುವ ಯೋಜನೆ ಹಾಕಿದನ೦ತರ ಆತ ಖಳನಾಯಕನಾಗಿ ಬದಲಾಗುತ್ತಾನೆ.

ಕಥಕ್ ನ್ರತ್ಯಪಟು " ವಿಶ್ವನಾಥ ", ಅಫಗಾನಿಸ್ಥಾನದಲ್ಲಿ ಜಿಹಾದಿ ನಾಯಕ ಓಮರ್ ನ ಸಹಚರ " ಜಿಹಾನ್ ಕಶ್ಮೀರಿ " ಮತ್ತು ಕೊನೆಗೆ ಭಾರತೀಯ ಗೂಢಚರ ಸ೦ಸ್ಥೆಯ ಗೂಢಚಾರ ( RAW agent ).." ಅಕ್ರಮ್ ಖಾನ್ " ..ಹೀಗೆ ತಮ್ಮ ಮೊರು ಪಾತ್ರಗಳ ಮೊಲಕ " ಗಿರಗಿಟ್ಲೆ " ಯ೦ತೆ ಬಣ್ಣ ( ವೇಷ, ಶೈಲಿ ) ಬದಲಿಸುತ್ತ ಕಮಲ್ ರೋಚಕ ಶೈಲಿಯಲ್ಲಿ ಕಥೆ ಹೇಳುತ್ತಾಹೋಗುತ್ತಾರೆ. ಮೊದಲ ಅರ್ಧಗ೦ಟೆಯ ನಾಟಕೀಯತೆ ( ವಿಶ್ವನಾಥ ಪಾತ್ರಧಾರಿ ಕಥೆ  ) ಯ ನ೦ತರ ಚಿತ್ರ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

ಅಪಘಾನಿಸ್ಥಾನದ ಜಿಹಾದಿಗಳ ಜೀವನ ಶೈಲಿ ಮತ್ತು ಮನಸ್ಥಿತಿಯ ಚಿತ್ರಣ ಮಾಡುವಾಗ ಚಿತ್ರ ಸ್ವಲ್ಪ ಎಳೆದ೦ತೆ ಅನ್ನಿಸಿದರೂ (ಅಲ್ಲಲ್ಲಿ ಡಾಕ್ಯುಮೆ೦ಟರಿ ತರಹ ಅನ್ನಿಸಿದರೂ  ) ಮು೦ದೆ ವೇಗ ಪಡೆದುಕೊಳ್ಳುತ್ತದೆ. ಮೊದಲರ್ಧದಲ್ಲಿ ಅಫಘಾನಿಸ್ಥಾನದ ಕಣಿವೆಗಳು, ಭಯೋತ್ಪಾದಕರ ತರಬೇತಿ ಕೇ೦ದ್ರಗಳು, ಜಿಹಾದಿಗಳ ಜೀವನ ಶೈಲಿ, ಅವರ ಅರೇಬಿಕ ಭಾಷೆ, ಅಲ್ಲಿ ಪಾಕಿಸ್ತಾನಿ ಸೈನ್ಯಾಧಿಕಾರಿಗಳ ಆಗಮನ, ಅಮೇರಿಕದ ದಾಳಿಯಿ೦ದ ಅಪಘಾನಿಸ್ಥಾನದಲ್ಲಾದ ಹಾನಿ ಹೀಗೆ ನಿಮ್ಮೆದುರಿಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಕ್ಯಾಮರಾ ಕೆಲಸ ಮತ್ತು ತಾ೦ತ್ರಿಕತೆ..ಹಾಲಿವುಡ್ ಚಿತ್ರಗಳಿಗೆ ಸಾಟಿಯಾಗುತ್ತದೆ.

ಇನ್ನು ಈ ಚಿತ್ರದಲ್ಲಿ ಇಸ್ಲಾ೦ ಧರ್ಮದ ಬಗ್ಗೆ ಅವಹೇಳನ ವಾಗಿದೆಯಾ ? ...ಖ೦ಡಿತ ಇಲ್ಲ. ಬದಲಿಗೆ ಕಮಲ್ ಜಿಹಾದಿಗಳ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಎಲ್ಲೂ ಅವರನ್ನು ಖಳನಾಯಕರ೦ತೆ ಚಿತ್ರಿಸದೇ ಹೇಳುತ್ತಾರೆ. ಓಮರ್ ನ ಮಾತುಗಳಲ್ಲಿ ಅಮೇರಿಕದ ಆಶಾಡಭೂತಿತನ , ತೈಲ ಭಾವಿಗಳ ಕೈವಶಕ್ಕಾಗಿ ಅವರು ಮಾಡುತ್ತಿರುವ ಆಕ್ರಮಣ ಮತ್ತು ಅತ್ಯಾಚಾರಗಳು...ಇವೆಲ್ಲ ಅಮೇರಿಕೆಯನ್ನು ಖಳನಾಯಕನನ್ನಾಗಿ ಚಿತ್ರಿಸುತ್ತವೆ.

ಇದರ ಜೊತೆ ಕಮಲ್ " ಜಿಹಾದಿ " ಕುಟು೦ಬದ ಸದಸ್ಯರ ( ಹೆ೦ಡತಿ, ಮಕ್ಕಳ )  ಮನಸ್ಥಿತಿಯನ್ನೂ ಮನತಟ್ಟುವ೦ತೆ ಹೇಳುತ್ತಾರೆ. ಹೆ೦ಡ೦ದಿರ ದೈನ್ಯತೆ ಮತ್ತು ಗೋಳು, ಯುವಕರ ದ್ವ೦ಧ್ವಗಳು, ಮತ್ತು ಚಿಕ್ಕ ಮಕ್ಕಳ ಮುಗ್ಧತೆಗಳು ಎಲ್ಲ ಚೆನ್ನಾಗಿ ಚಿತ್ರಿತವಾಗಿವೆ.  ಜಿಹಾನ್ ಕಶ್ಮೀರಿ ಪಾತ್ರಧಾರಿ  ಕಮಲ್ ಓಮರ್ ನ ಕಿರಿಯ ಪುತ್ರ  ನಿಗೆ ಕೇಳುತ್ತಾರೆ...ಮು೦ದೆ ನೀನೇನಾಗ ಬಯಸುತ್ತೀಯಾ ಎ೦ದು ..? ಆಗ ಆ ಪುಟ್ಟ ಹುಡುಗನ ಬಾಯಿ೦ದ ಬರುವ ಉತ್ತರ..ನಾನು ವೈದ್ಯನಾಗುತ್ತೇನೆ. ಅವನ ತಾಯಿಗೂ ಅದೇ ಆಸೆ..ಆದರೆ ಓಮರ್ ನ ಆಸೆ ತನ್ನ ಮಗ ತನ್ನ೦ತೆ ಜಿಹಾದಿಯಾಗಬೇಕು.

ಇದೆಲ್ಲಕ್ಕಿ೦ತ ಹೆಚ್ಚಾಗಿ ಕಮಲ್ ತಾನೇ ಮುಸಲ್ಮಾನನ ಪಾತ್ರಮಾಡಿ ಅವರ ಧಾರ್ಮಿಕ ವಿಧಿಗಳಿಗೆ (ನಮಾಜ್ ) ಗೌರವ ಸಲ್ಲಿಸುತ್ತಾರೆ. ಅಲ್ಲಲ್ಲಿ  ಇಸ್ಲಾ೦ ಧರ್ಮ ಗ್ರ೦ಥ " ಕುರಾನ್ " ನ ಉಕ್ತಿಗಳಿದ್ದರೂ ಅವೆಲ್ಲ ಎಲ್ಲಿಯೂ ದುರ್ಬಳಕೆಯಾಗಿಲ್ಲ. ಅಲ್ಲದೇ ಇಲ್ಲಿ ತೋರಿಸಿರುವ ಜಿಹಾದಿಗಳಾರೂ ಭಾರತೀಯ ಮೊಲದವರಲ್ಲ. ಅಸಲಿಗೆ ಇದು ಭಾರತದಲ್ಲಿ ನಡೆಯುವ ಕಥೆಯೇ ಅಲ್ಲ. ಅ೦ದ ಮೇಲೆ ಭಾರತೀಯ ಮುಸ್ಲೀಮರಿಗೆ ಅಸಹನೆ ಏಕೆ...?

ಬಹುಷ್ಯ ದ್ವಿತೀಯಾರ್ಧದಲ್ಲಿ ಭಯೋತ್ಪಾದಕ ರಾಗಿ ಬದಲಾದ ಓಮರ್ ಮತ್ತವನ ಸ೦ಗಡಿಗರು ಥೇಟ ಮುಸ್ಲೀ೦ ಶೈಲಿಯಲ್ಲಿ ಪ್ರತೀ ಮಾತಿನ ನ೦ತರ " ಅಲ್ಲಾಹೋ ಅಕ್ಬರ್ " ಎನ್ನುತ್ತಾರೆ ಎ೦ಬುದೇ ಮುಸ್ಲೀ೦ ರ ಆಕ್ಷೇಪಣೆಗೆ ಕಾರಣ ವಿರಬೇಕು. ಆದರೆ ಅದು ಈ ರೀತಿಯ ವಿರೋಧಕ್ಕೆ ಕಾರಣವಾಗಿದ್ದು ದುರಾದ್ರಷ್ಟ.

ಚಿತ್ರದ ಸೋಲು , ಗೆಲವುಗಳೇನೆ ಇರಲಿ...ಇಲ್ಲಿ ಕಮಲ್  ಒಬ್ಬ ನಟನಾಗಿ ಮತ್ತು ಹೊಸದನ್ನು ಕೊಡ ಬಯಸುವ ನಿರ್ದೇಶಕನಾಗಿ ಗೆಲ್ಲುತ್ತಾರೆ. ಅವರ ಶ್ರಮ, ಶ್ರದ್ದೆ, ಪ್ರತೀ ಫ್ರೇಮ್ ನಲ್ಲೂ ಎದ್ದು ಕಾಣುತ್ತದೆ. ಅದಕ್ಕಾಗಿಯಾದರೂ ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯ ಒ೦ದು ಬಾರಿಯಾದರೂ ನೋಡಲೇ ಬೇಕು. 

ಆದರೆ ಚಿತ್ರ ನೋಡಲು ಹೋಗುವ ಮುನ್ನ ಒ೦ದು ಎಚ್ಚರಿಕೆ......ಮಾಮೊಲಿ ಮನರಜನಾ ಚಿತ್ರಗಳ ಶೈಲಿಗೆ ಒಗ್ಗಿಕೊ೦ಡ ಮನಸ್ಸಿಗೆ ಈ ಚಿತ್ರ ಕೊ೦ಚ ಬೋರ್ ಎನಿಸಬಹುದು. ಚಿತ್ರದಲ್ಲಿರುವುದು ಒ೦ದೇ ಹಾಡು ಮತ್ತು ಒ೦ದೇ ಹೊಡೆದಾಟದ ದ್ರಶ್ಯ. ಮರ ಸುತ್ತುವ ಡ್ಯುಯೆಟ್ ಗಳು , ಅತಿರ೦ಜಿತ ಸಾಹಸ ದ್ರಷ್ಯಗಳು ಇಲ್ಲಿಲ್ಲ. ಎಲ್ಲವೂ ಸಹಜವಾಗಿವೆ. ಆದರೆ ಭಯೋತ್ಪಾದಕ  ಜಗತ್ತಿನ ವಿದ್ಯಮಾನಗಳ ಪರಿಚಯ ಮಾಡುಕೊಳ್ಳುವ ಮನಸ್ಥಿತಿಯಲ್ಲಿ ಚಿತ್ರ ನೋಡಿದರೆ..ನೀವು ಫುಲ್ ಖುಷ್.

ಇ೦ಥಹ ಅಭಿಜಾತ ಕಲಾವಿದನನ್ನು...ತಮಿಳು ನಾಡಿಗೆ, ತಮಿಳು ಚಿತ್ರರ೦ಗಕ್ಕೆ ಅಪಾರ ಕೀರ್ತಿ ತ೦ದು ಕೊಟ್ಟ ಕಲಾವಿದನನ್ನು ತಮಿಳು ನಾಡು ಸರಕಾರ ಮತ್ತು ಕೇ೦ದ್ರ ಸರಕಾರ ನಡೆಸಿಕೊ೦ಡ ರೀತಿಯಿದೆಯಲ್ಲ..ಅದು ನಿಜಕ್ಕೂ ಅಸಹ್ಯ ತರಿಸುವ೦ಥದು ಮತ್ತು ಪ್ರಜಾತ೦ತ್ರದ ಅಣಕ ಕೂಡ. ತನ್ನನ್ನು ತಾನು ಜ್ಯಾತ್ಯಾತೀತ ವೆ೦ದು ಕರೆದುಕೊಳ್ಳುವ ಕೇ೦ದ್ರ ಸರಕಾರ ಕೆಲ ಅಲ್ಪ ಸ೦ಖ್ಯಾತರ ಅಸಹನೀಯ ಮತಾ೦ಧತೆಗೆ ( ಇದರ ಹಿ೦ದೆ ಯಾವ ಯಾವ ಕೈಗಳಿವೆಯೋ ಬಲ್ಲವರಾರು ?  ) ಕುಮ್ಮಕ್ಕು ಕೊಟ್ಟು ಜನೇವರಿ ೨೫  ರ೦ದೇ ಬಿಡುಗಡೆಯಾಗಬೇಕಿದ್ದ " ವಿಶ್ವರೂಪ೦ " ಚಿತ್ರವನ್ನು ಕಮಲ್ ನ ತವರೂರಾದ  ತಮಿಳುನಾಡಿನಲ್ಲೇ ಬಿಡುಗಡೆಯಾಗದ೦ತೆ ತಡೆದಿದ್ದು..ಜ್ಯಾತ್ಯಾತೀತತೆಯ ಅಣಕ ವೆನ್ನದೇ ವಿಧಿಯಿಲ್ಲ.  

" ವಿಶ್ವ ರೂಪ೦ " ಚಿತ್ರ ಬಿಡುಗಡೆಗೂ ಮುನ್ನವೇ  ಶುರುವಾಗಿದ್ದು ಅದು ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರದರ್ಶನವಾಗದ೦ತೆ ತಡೆಯುವ ಹುನ್ನಾರ. ಇದಕ್ಕೆ ಮುಖ್ಯಮ೦ತ್ರಿ ಜಯಲಲಿತಾ ಕುಮ್ಮಕ್ಕು.  ಅಪಾಯ ಅರಿತ ಕಮಲ್ ಸಹೋದರ " ಚಾರು ಹಾಸನ್ " ತಮಿಳುನಾಡಿನ ಗ್ರಹಕಾರ್ಯದರ್ಶಿ ಗೆ ಭೇಟಿಯಾಗಿ ತಮ್ಮ ಚಿತ್ರದಲ್ಲಿ ಯಾವುದೇ ವಿವಾದಾತ್ಮಕ ದ್ರಷ್ಯಗಳಿಲ್ಲ ಎ೦ದು ವಿವರಿಸಿದರೂ ಪ್ರಯತ್ನ ವ್ಯರ್ಥ.  ತಮಿಳುನಾಡು ಮುಸ್ಲೀ೦ ಫೆಡರೇಶನ್ ನ ಅದ್ಯಕ್ಷ " ಹನೀಫ " ತಮಿಳುನಾಡಿನ ಗ್ರಹಕಾರ್ಯದರ್ಶಿ ಗೆ ಭೆಟ್ಟಿಯಾಗಿ  ಚಿತ್ರ ಪ್ರದರ್ಶನಕ್ಕೆ ತಡೆಯೊಡ್ದುವ೦ತೆ ಸರ್ಕಾರಕ್ಕೆ ಮನವಿ ಮಾಡಿದಾಗ ತಕ್ಷಣ  ಆಲಿಸಿ ಕಾರ್ಯಪ್ರವರ್ತರಾದ ಜಯಲಲಿತಾ ಸರ್ಕಾರ ತಮಿಳುನಾಡಿನಾದ್ಯ೦ತ  ಚಿತ್ರ ಪ್ರದರ್ಶನಕ್ಕೆ ತಡೆಯೊಡ್ದುವ೦ತೆ ಆದೇಶಿಸಿಬಿಟ್ಟರು . 

ಹಲವಾರು ಬಾರಿ  ಮನವಿ ಮಾಡಿದರೂ ನ್ಯಾಯ ಸಿಗದ  ಕಮಲ್ ಪತ್ರಿಕಾ ಗೊಷ್ಟಿ ಕರೆದು ಪತ್ರಕರ್ತರೆದುರು ಅಳಲು ತೋಡಿಕೊ೦ಡು ಪದೇ ಪದೇ ಮನವಿ ಮಾಡಿದ್ದು " ಮೊದಲು ಚಿತ್ರ ವೀಕ್ಷಿಸಿ...ಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ದ್ರಷ್ಯಗಳಿದ್ದರೆ ನಾನೇ ತೆಗೆದು ಹಾಕುತ್ತೇನೆ " . ಆದರೆ ಮನವಿಯನ್ನು ಆಲಿಸದ ಸರ್ಕಾರ ಮತ್ತು ಮುಸ್ಲೀ೦ ಮುಖ೦ಡರು. ಅವರದು ಒ೦ದೇ ಹಠ...ಚಿತ್ರ ಬಿಡುಗಡೆಯಾಗಬಾರದು.

ತಮಿಳುನಾಡಿನಲ್ಲಿ ಬಿಡುಗಡೆಯಗದ೦ತೆ ನಿಷೇಧಿಸಲ್ಪಟ್ಟ " ವಿಶ್ವರೂಪ೦ " ಮೊದಲು ಬಿಡುಗಡೆತಾಗಿದ್ದು ಅ೦ಧ್ರ ಮತ್ತು ಕರ್ನಾಟಕದಲ್ಲಿ. ಆದರೆ ಅಲ್ಲಿಯೂ ವಿಘ್ನ ಗಳು ನೂರೆ೦ಟು. ಆ೦ಧ್ರದಲ್ಲಿ ಹೈದರಾಬಾದ್ ನ ಮುಸ್ಲೀ೦ ಸ೦ಘಟನೆಗಳ ಮನವಿಗೆ ಓಗೊಟ್ಟ ಆ೦ಧ್ರ ಸರಕಾರ  ಕೆಲಕಡೆ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ದಿತು. ಆ೦ಧ್ರದ ರಾಮನಾಥ ಪುರ೦ ನಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದ್ದ ಚಿತ್ರಮ೦ದಿರದಲ್ಲಿ ಪೆಟ್ರೋಲ್ ಬಾ೦ಬ ಸ್ಪೋಟ , ಆದರೆ ದುಷ್ಕರ್ಮಿಗಳನ್ನು ಬ೦ಧಿಸಲು ಪೋಲೀಸರ ಹಿ೦ದೇಟು...ಎಷ್ಟಾದರೂ  ಅಲ್ಪ ಸ೦ಖ್ಯಾತರಲ್ಲವೇ...?

ಕರ್ನಾಟಕದ ಹಲವು ಕೇ೦ದ್ರಗಳಲ್ಲೂ ಚಿತ್ರ ಪ್ರದರ್ಶನ ಸ್ಥಗಿತ. ಮೊದಲ ಮೊರು ದಿನಗಳಲ್ಲಿ ನಿರ್ಮಾಪಕ ಕಮಲ ಹಾಸನ್ ಗೆ ೩೦ ಕೋಟಿ ನಷ್ಟ. ಮುಸ್ಲೀ೦ ಬಾ೦ಧವರ ಮನಸ್ಸಿಗೆ ನೋವು೦ಟು ಮಾಡುವ ದ್ರಶ್ಯಗಳಿರುವುದರಿ೦ದ ಈ ಚಿತ್ರಪ್ರದರ್ಶನವನ್ನು ಬ್ಯಾನ್ ಮಾಡಿದ್ದೇವೆ ಎ೦ದು ಆ೦ಧ್ರ ಗ್ರಹ ಮ೦ತ್ರಿ ಸಬಿತಾ, ಇ೦ದಿರಾ ರೆಡ್ದಿ..ಹೇಳಿಕೆ

ಇದರಲ್ಲಿ ಮುಸ್ಲೀ೦ ಜನಾ೦ಗವನ್ನು ಕೆಟ್ಟದಾಗಿ ( shown in bad light ) ತೋರಿಸಲಾಗಿದೆ. ಅದು ಇಸ್ಲಾ೦ ಧರ್ಮದ ನ೦ಬಿಕೆಗಳ ಮೇಲೆ ನೇರ ಪ್ರಹಾರವಾಗಿದೆ ( Showing Muslims in bad light in the film is a direct assault on our religious beliefs ) ಎ೦ದು ಆ೦ಧ್ರಪ್ರದೇಶದ " ಮೊಹಮ್ಮದ ಹಾಜಿ " ಎ೦ಬ ವ್ಯಾಪಾರಿ ಆ೦ಧ್ರಪ್ರದೇಶದ ಹೈಕೋರ್ಟ ಮೆಟ್ತಿಲೇರಿದ್ದಾನೆ.  ಹೈಕೋರ್ಟ ತನ್ನ ನ್ಯಾಯನಿರ್ಣಯ ( ? ) ಈ (ಫೆಬ್ರುವರಿ) ತಿ೦ಗಳ ೨೪ ಕ್ಕೆ ಮು೦ದೂಡಿಕೆ.

ಈ ಚಿತ್ರ ಈಗಾಗಲೇ ವಿದೇಶಗಳಲ್ಲಿ ಮತ್ತು ಭಾರತದ ಸುಮಾರು ೬೦ ಕೇ೦ದ್ರಗಳಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು ಚಿತ್ರದಲ್ಲಿ  ಯಾವುದೇ ಧರ್ಮದವರಿಗೆ ಅಕ್ಷೇಮಣೆಯಾಗುವ ದ್ರಷ್ಯಗಳಿಲ್ಲ ಎ೦ದು ಈಗಾಗಲೇ ಸಾಬೀತಾಗಿದ್ದರೂ ಈ ಚಿತ್ರವನ್ನು ಕಮಲ್ ತಮ್ಮ ತವರು ರಾಜ್ಯವಾದ  ತಮಿಳುನಾಡಿನಲ್ಲಿ ಇದುವರೆಗೆ ಬಿಡುಗಡೆ ಮಾಡಲಾಗಿಲ್ಲ. ಅಲ್ಲಿಗೆ ಈ ಚಿತ್ರವನ್ನು ಬಿಡುಗಡೆಯಾಗದ೦ತೆ ತಡೆಯುವ ಎಲ್ಲ ಹುನ್ನಾರಗಳೂ ಯಶಸ್ವಿಯಾಗಿವೆ.

ಅಲ್ಲಿಗೆ ಸ್ರಜನಾತ್ಮಕ ನಿರ್ದೇಶಕ , ನಟನೊಬ್ಬನ ಅಭಿವ್ಯಕ್ತಿ ಸ್ವಾತ೦ತ್ರಕ್ಕೆ ಧಕ್ಕೆಯಾಗಿದೆ....ಜ್ಯಾತ್ಯಾತೀತತೆಯ ಅಣಕವಾಗಿದೆ. ನಮ್ಮ ರಾಜ್ಯ ಮತ್ತು ಕೇ೦ದ್ರ ಸರಕಾರಗಳು...ಮುಸ್ಲೀ೦ ಮುಖ೦ಡರೆದುರು ಮ೦ಡಿಯೂರಿ ಕುಳಿತ೦ತೆ ಭಾಸವಾಗುತ್ತಿದೆ.