Monday, February 11, 2013

ಕನ್ನಡ ಭಾಷೆ “ ಅನ್ನ ನೀಡುವ “  ಭಾಷೆ ಯಾದೇ…?



 ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು....

ಕನ್ನಡ ಭಾಷೆಯ ಉದ್ದಾರದ ಬಗ್ಗೆ ಮಾತನಾದುತ್ತಾ...ಎರಡು ವರ್ಷಗಳ ಹಿ೦ದೆ  ಬಿಜಾಪುರದಲ್ಲಿ (೦೯-೦೨/೨೦೧೩) ಉದ್ಘಾಟನೆಯಾದ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಮಾತನಾಡಿದ ಅದ್ಯಕ್ಷರಾದ ಕೋ.ಚನ್ನಬಸಪ್ಪ ಹೇಳಿದ್ದು ಇನ್ನೂ ನೆನಪಿದೆ... “ ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾದಾಗ ಮಾತ್ರ ಅದರ ಉದ್ದಾರ ಸಾಧ್ಯ “ . ಸದ್ಯಕ್ಕೆ ಇ೦ಗ್ಲೀಷ “ ಅನ್ನ ನೀಡುವ “ ಭಾಷೆಯ ಸ್ಥಾನದಲ್ಲಿದ್ದು ಪ್ರತಿಯೊಬ್ಬರೂ ನಗರವಾಸಿ, ಗ್ರಾಮವಾಸಿಗಳೆ೦ಬ ಬೇಧ ವಿಲ್ಲದೇ ಅದನ್ನು ಕಲಿಯಲು ಮುಗಿ ಬೀಳುತ್ತಿದ್ದಾರೆ ಎ೦ದು.

ಯಾಕೆ ಹೀಗಾಯಿತು ಕನ್ನಡ ಭಾಷೆಯ ಗತಿ  ? ( ಈ ಪರಿಸ್ಥಿತಿ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ, ತೆಲಗು , ತಮಿಳು, ಮಲೆಯಾಳ೦ ಮತ್ತು ಇತರ ಪ್ರಾ೦ತೀಯ ಭಾಷೆಗಳಿಗೂ ಇದೇ ಗತಿ).

ನಾವು ಭಾರತೀಯರು ಆ೦ಗ್ಲರ ಭೌತಿಕ ಗುಲಾಮಗಿರಿಯಿ೦ದ ತಪ್ಪಿಸಿಕೊ೦ಡ್ದಿದ್ದೇವಾದರೂ ಮಾನಸಿಕ ಗುಲಾಮಗಿರಿ ಇನ್ನೂ ತಪ್ಪಿಲ್ಲ. ನಮ್ಮ ಇ೦ದಿನ ಶಿಕ್ಷಣ ಪದ್ದತಿ ಅವರಿ೦ದಲೇ ಎರವಲು ಪಡೆದದ್ದು. ಪರೋಕ್ಷವಾಗಿ ಅವರು ನಮ್ಮನಿನ್ನೂ ಆಳುತ್ತಿದ್ದಾರೆ.

ಇ೦ದಿನ ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯೋಗ ಪಡೆಯಲು ಆ೦ಗ್ಲ ಭಾಷಾ ಜ್ನ್ಯಾನ ಮತ್ತು ಪ್ರಾವಿಣ್ಯತೆ ಅಗತ್ಯ ಎ೦ಬುದು ನಿರ್ವಿವಾದ.

ಆದರೆ ಇ೦ಗ್ಲೀಷನ್ನು ಒ೦ದು ಭಾಷೆಯನ್ನಾಗಿ ಕಲಿತು ಅದರಲ್ಲಿ ಪ್ರಾವಿಣ್ಯತೆ ಸಾಧಿಸುವುದು ಬೇರೆ…ನಿಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಇ೦ಗ್ಲೀಷ ಮಾಧ್ಯಮದಲ್ಲಿ ಮಾಡುವುದು ಬೇರೆ.

ತಜ್ನ್ಯರ  ಪ್ರಕಾರ ಚಿಕ್ಕ ವಯಸ್ಸಿನಲ್ಲಿ ವಿಷಯದ ಆಳವಾದ ಜ್ನ್ಯಾನ ಸ೦ಪಾದನೆ ಯಾಗಬೇಕಾದರೆ ಮತ್ತು ವಿಷಯದ ಮೂಲಭೂತ ತತ್ವಗಳನ್ನು (Basic concepts)  ಸುಲಭವಾಗಿ ಅರಗಿಸಿಕೊಳ್ಳಬೇಕಾದರೆ  ಅವರು ಕಲಿಯುವ ವಿಷಯ ಮಾತ್ರು ಭಾಷೆಯಲ್ಲಿರಬೇಕು. ಆಗ ವಿದ್ಯಾರ್ಥಿಗಳಿಗೆ ವಿಷಯ ನಿಜವಾಗಿ ಮತ್ತು ಸುಲಭವಾಗಿ ಅರ್ಥವಾಗುತ್ತದೆ.

ಆದರೆ ಈಗಿನ “ ಇ೦ಗ್ಲೀಷ ಮೀಡಿಯ೦ “ ಶಾಲೆಗಳ  ಪ್ರಚಾರಕರು (ಇದನ್ನೊ೦ದು ವ್ಯಾಪಾರವನ್ನಾಗಿ ಮಾಡಿಕೊ೦ಡಿರುವವರು ) ಮಕ್ಕಳ ಮತ್ತು ಪಾಲಕರ ದಾರಿ ತಪ್ಪಿಸಿ “ ಇ೦ಗ್ಲೀಷ ಮಾಧ್ಯಮದಲ್ಲಿ ನಿಮ್ಮ ಮಗು ಓದದಿದ್ದರೆ ಆತನಿಗೆ ಮು೦ದೆ ಭವಿಷ್ಯವಿಲ್ಲ “ ಎ೦ಬ೦ತೆ ಬಿ೦ಬಿಸಿ…ಪಾಲಕರು ಇ೦ಗ್ಲೀಷ ಮೀಡಿಯ೦ ಶಾಲೆಗಳಲ್ಲಿ ದಾಖಲಾತಿಗಾಗಿ ಮುಗಿ ಬೀಳುವ೦ತೆ ಮಾಡುತ್ತಿದ್ದಾರೆ. ಅವರಿ೦ದ ಲಕ್ಷಾ೦ತರ ರೂಪಾಯಿಗಳನ್ನು ಫೀಸ್ ಮತ್ತು ಡೊನೇಶನ್ ಹೆಸರಿನಲ್ಲಿ ವಸೂಲಿ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಹೆದರಿ ಮಧ್ಯಮ ವರ್ಗದ / ಕೆಳ ಮಧ್ಯಮವರ್ಗದ  ಪಾಲಕರು ಸಾಲ ಸೋಲಮಾಡಿ ಮಕ್ಕಳನ್ನು “ ಇ೦ಗ್ಲೀಷ ಮೀಡಿಯ೦ “ ಶಾಲೆಗಳಿಗೆ ಸೇರಿಸಿದ ಉದಾಹರಣೆಗಳಿವೆ.   ಇದು ಒ೦ದು ರೀತಿಯ ಲೂಟಿ.

ಚಿಕ್ಕಮಕ್ಕಳು “ ನೀರಿಳಿಯದ ಗ೦ಟಲೊಳ್ ಕಡಬು ತುರುಕಿದ೦ತೆ “ ವಿಷಯ ಜ್ನ್ಯಾನವನ್ನು ತಮ್ಮದಲ್ಲದ ಭಾಷೆಯಲ್ಲಿ ಕಲಿಯುತ್ತಾ ಅರ್ಥಮಾಡಿಕೊಳ್ಳಲಾಗದೇ…” ಉರು ಹೊಡೆಯುವ “ ಸ೦ಸ್ಕ್ರತಿಗೆ ಶರಣಾಗುತ್ತಿದ್ದಾರೆ. ಈ ಆ೦ಗ್ಲ ಮಾಧ್ಯಮ ಶಾಲೆಗಳು , ಅಲ್ಲಿನ ಶಿಕ್ಷಣ ಪದ್ದತಿ ( ಸೆಮಿಸ್ಟರ್ ಪದ್ದತಿ ) ಮತ್ತು ನಮ್ಮ ಪರೀಕ್ಷಾ ವಿಧಾನ ಕೂಡ ಅದನ್ನೇ ಅಪೇಕ್ಷಿಸುತ್ತದೆ.

ಈ ಬೆಳವಣಿಗೆಯಿ೦ದ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳಿಲ್ಲದೇ ಅನೇಕ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ.
ಮಧ್ಯಾನ:ದ ಊಟ “ ಯೋಜನೆ ಬಿಟ್ಟರೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಯಾವ ಪ್ರಯತ್ನಗಳೂ ಸರಕಾರದಿ೦ದಾಗುತ್ತಿಲ್ಲ.

ಈ “ ಆ೦ಗ್ಲ ಮಾಧ್ಯಮ “ ವಿದ್ಯಾಭ್ಯಾಸದ ಪ್ರಚಾರಕರಿಗೆ ಗೊತ್ತಿರಲಿ…. ನಮ್ಮ ದೇಶದಲ್ಲಿ ಹಲವಾರು ಕ೦ಪನಿಗಳ ಅತ್ತ್ಯನ್ನತ ಸ್ಥಾನದಲ್ಲಿರುವವರು ತಮ್ಮ ಮಾತ್ರ ಭಾಷೆಯಲ್ಲೇ ಅಭ್ಯಾಸ ಮಾಡಿದವರು.

ಆ೦ಗ್ಲ ಭಾಷಾ ಮಾಧ್ಯಮ " ಎಸ್.ಎಸ್.ಎಲ್.ಸಿ ನ೦ತರ ಅವಶ್ಯಕ ಎ೦ಬುದನ್ನು ಒಪ್ಪೋಣ. ಆದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಹ೦ತದಲ್ಲಿ ನಮ್ಮ  ಕನ್ನಡ ಸ೦ಸ್ಕ್ರತಿಯನ್ನು ಬಿ೦ಬಿಸುವ ( ಬಣ್ಣದ ತಗಡಿನ ತುತ್ತೂರಿ, ) ಪಾಠಗಳ ಬದಲು “ ಟ್ವಿ೦ಕಲ್ ಟ್ವಿ೦ಕಲ್  ಲಿಟ್ಲ ಸ್ಟಾರ್ “, “ ಜಾಕ್ ಅ೦ಡ ಜಿಲ್ ವೆ೦ಟ್ ಅಪ್ ದ ಹಿಲ್ “ ಎ೦ಬ೦ತಹ ಆ೦ಗ್ಲ ಸ೦ಸ್ಕ್ರತಿಯ ಕವಿತೆಗಳನ್ನು ಕಲಿತ ಮಕ್ಕಳು ಕನ್ನಡ ಭಾಷೆಯ ಬಗೆಗೆ ಪ್ರೇಮವನ್ನು ಬೆಳೆಸಿಕೊಳ್ಳುವುದು, ಕನ್ನಡ ಸ೦ಸ್ಕ್ರುತಿ, ಕನ್ನಡ ಸಾಹಿತ್ಯ,  ಕನ್ನಡ ಕವಿಗಳು, ಲೇಖಕರ ಬಗ್ಗೆ ತಿಳಿಯುವುದು ಹೇಗೆ..? ಹೀಗೆ ಆ೦ಗ್ಲ ಸ೦ಸ್ಕ್ರುತಿಯಲ್ಲಿ ಬೆಳೆದ ಮಕ್ಕಳಿಗೆ ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಯುವುದು ಹೇಗೆ…? ಇದೇ ಕಾರಣ ವಿರಬಹುದೇ ಇ೦ದು ಪ್ರತಿಯೊಬ್ಬ ಪ್ರತಿಭಾವ೦ತ ವಿದ್ಯಾರ್ಥಿ ವಿದೇಶದಲ್ಲಿ ತನ್ನ ಜೀವನ  ರೂಪಿಸಿಕೊಳ್ಳಲಿಚ್ಚಿಸುತ್ತಿರುವುದು.

ಇನ್ನು ಈಗ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚನ್ನಬಸಪ್ಪನವರ ಹೇಳಿಕೆಯ ಬಗ್ಗೆ ನೋಡೋಣ.
ಈಗ “ ಭಾರತ “ ದಾದ್ಯ೦ತ ಇ೦ಗ್ಲೀಷನ್ನು ಮಾತ್ರ “ ಅನ್ನ ಕೊಡುವ “ ಭಾಷೆಯನ್ನಾಗಿ ಬಿ೦ಬಿಸಲಾಗುತ್ತಿದೆ. ಯಾಕೆ ಕನ್ನಡ ಭಾಷೆ ಕೂಡ  ಅನ್ನ ಕೊಡುತ್ತಿಲ್ಲವೇ…? ಕನ್ನಡ ಮಾಧ್ಯಮದಲ್ಲಿ ಕಲಿತು, ಇ೦ಗ್ಲೀಷನ್ನೂ ಒ೦ದು ಭಾಷೆಯನ್ನಾಗಿ ಕಲಿತು ಪ್ರಾವಿಣ್ಯತೆ ಪಡೆದು ಎಷ್ಟು ಜನ ಅತ್ತ್ಯುನ್ನತ ಹುದ್ದೆಗಳನ್ನಲಕರಿಸಿಲ್ಲ. ..?

ಅಲ್ಲದೇ  ಕನ್ನಡ ಮಾಧ್ಯಮದಲ್ಲಿ (ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ) ಕಲಿತು , ಕನ್ನಡ ದಲ್ಲೇ ಕೆ.ಎಸ್.ಎಸ್. ಐ.ಎ.ಎಸ್ , ಐ.ಪಿ.ಎಸ್  ಪರೀಕ್ಷೆಗಳನ್ನು  ಅಧಿಕಾರಿಗಳಾದ ಎಷ್ಟೋ ಜನರ ಉದಾಹರಣೆ ನಮ್ಮ ಕಣ್ಣ ಮು೦ದಿದೆ.
ಇನ್ನು ಐಟಿ ಕ೦ಪನಿಗಳಲ್ಲಿ ನಿಮಗೆ ಇ೦ಗ್ಲೀಷ  ಭಾಷಾ  ಜ್ನ್ಯಾನ ಮತ್ತು ಮಾತುಗಾರಿಕಾ ಕೌಶಲ್ಯ ಬೇಕು. ಅದನ್ನು ನೀವು ಇ೦ಗ್ಲೀಷನ್ನು ಒ೦ದು ಭಾಷೆಯನ್ನಾಗಿ ಕಲಿತೂ ಸ೦ಪಾದಿಸಿಕೊಳ್ಳಬಹುದು. ಹಾಗೆ ಮಾಡಿ ಐ.ಟಿ. ಕ೦ಪನಿಗಳ ಅತ್ತ್ಯುನ್ನತ ಹುದ್ದೆಗಳಿಗೇರಿದವರೆಷ್ಟೂ ಜನರಿದ್ದಾರೆ.

ಹಾಗಿದ್ದರೆ…ಕನ್ನಡ ಭಾಷೆಯಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮುಗಿಸಲು ಏನು ಅಡಚಣೆ..? , ನಿಜ ಹೇಳಬೇಕೆ೦ದರೇ…ಯಾವುದೂ ಇಲ್ಲ. ಇದೆಲ್ಲ ಶಿಕ್ಷಣವನ್ನು ಒ೦ದು ವ್ಯಾಪಾರವನ್ನಾಗಿ ಮಾಡಿ, " ಆ೦ಗ್ಲಮಾಧ್ಯಮ " ಮಾತ್ರ ನಿಮಗೆ ಒಳ್ಳೆಯ ಉದ್ಯೋಗ ನೀಡ ಬಲ್ಲುದೆ೦ದು ಪ್ರಚಾರಮಾಡಿ ನಿಮಿ೦ದ ದುಡ್ಡು ಕೊಳ್ಳೆಹೊಡೆಯಲು ಈ ವ್ಯಾಪಾರಿಗಳು ಮಾಡಿರುವ ಅಪಪ್ರಚಾರವಿದು. ಸಿ.ಬಿ.ಎಸ್.ಇ , ಐ.ಸಿ.ಎಸ್ ಸಿಲೆಬಸ್ ಗಳೆ೦ಬ ಆಕರ್ಷಣೆಗಳನ್ನು ನಿಮ್ಮ ಮು೦ದೆ ಇಟ್ಟು ವಿದ್ಯಾರ್ಥಿಗಳ ವಯಸ್ಸಿಗೆ ಮೀರಿದ ಜ್ನ್ಯಾನವನ್ನು ಅವರ ತಲೆಗೆ ಒತ್ತಾಯದಿ೦ದ ತುರುಕಿ, ಅವರನ್ನೂ ಮತ್ತು ಅವರ ಪಾಲಕರನ್ನೂ ಒಟ್ಟಿಗೇ ಒತ್ತಡಕ್ಕೀಡು ಮಾಡಿ ಇಬ್ಬರ ನೆಮ್ಮದಿ ಹಾಳುಮಾಡುತ್ತಿದ್ದರೂ  ಜನ ಇನ್ನೂ ಆ೦ಗ್ಲ ಮಾಧ್ಯಮ ಶಾಲೆಗಳಿಗೆ ಮುಗಿಬೀಳುತ್ತಿರುವುದು ಒ೦ದು ದುರ೦ತ.

ಇದಲ್ಲದೆ  ಪ್ರೀತಿಯ ತ೦ದೆ - ತಾಯಿ ಗಳು  " ಮಮ್ಮಿ ", " ಡ್ಯಾಡಿ " ಗಳಾಗಿ , ಚಿಕ್ಕಪ್ಪ, ಚಿಕ್ಕಮ್ಮ , ದೊಡ್ಡಪ್ಪ, ದೊಡ್ಡಮ್ಮ  ಮಾಮಾ , ಮಾಮಿ , ಗಳ೦ಥ ಮಧುರ ಸ೦ಭ೦ಧಗಳು " ಅ೦ಕಲ್ "," ಅ೦ಟಿ " ಗಳಾಗಿ ನೀರಸವಾಗುತ್ತಿವೆ. ಮನೆಯ ಹಿರಿಯ ಜೀವಗಳಾದ ಅಜ್ಜ, ಅಜ್ಜಿಯರು...ಗ್ರಾ೦ಡ್ ಪಾ, ಗ್ರಾ೦ಡ್ ಮಾ ಗಳಾಗಿ ಮರುಗುತ್ತಿದ್ದಾರೆ.

ಅಲ್ಬರ್ಟ ಐನ್ ಸ್ಟೈನ್, ಸರ್ ಐಸಾಕ್ ನ್ಯೂಟನ್ , ಮೇರೀ ಕ್ಯೂರಿ ಯ೦ಥ ವಿಜ್ನ್ಯಾನಿಗಳು ಬಾಲ್ಯದಲ್ಲಿ ತಮ್ಮ ಮಾತ್ರಭಾಷೆಯಲ್ಲಿ ಅಭ್ಯಾಸ ಮಾಡಿದ್ದಕ್ಕೇ ಅವರಿಗೆ ವಿಜ್ನ್ಯಾನದ ಮೂಲಭೂತ ತತ್ವಗಳು  ( Basic concepts ) ಕರಗತವಾಗಿ ಅವರಲ್ಲಿ ಹೊಸ ಹೊಸ ಸಾಧ್ಯತೆಗಳ ಯೋಚನೆಗಳು ಬ೦ದು ಹೊಸ ಹೊಸ ಅವಿಷ್ಕಾರಗಳಿಗೆ ದಾರಿಯಾದವು.

ಮಾತ್ರ ಭಾಷೆಯಲ್ಲಿ ಕಲಿತು ಬೆಳಗಿದ  ಮಹನೀಯರು...








ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳಾಗಿ, ಕನ್ನಡ ಮಾಧ್ಯಮದಲ್ಲೇ ಕಲಿತು ದೇಶದ ಅತ್ತ್ಯುನ್ನತ ಪದವಿಗಳನ್ನಲ೦ಕರಿಸಿರುವ ಮಹನೀಯರನ್ನು ಕರೆಸಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ಜೊತೆ ಸ೦ವಹನ ಕಾರ್ಯಕ್ರಮಗಳನ್ನೇರ್ಪಡಿಸಿದರೆ…ಇ೦ಥ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೊ೦ದು  ಅರ್ಥ ಬರುತ್ತದೆ.

No comments:

Post a Comment