ಎ೦ದು ನಿಲ್ಲುವುದೀ ಅಮಾನುಷ ಮಾರಣ ಹೋಮ ?
" ಅಪ್ಜಲ್ ಗುರು " ಗಲ್ಲಿನ " ಸೇಡಿನ ಕಿಡಿ " ಯಲ್ಲಿ ನಲುಗಿದ ಮುಗ್ದರು
“ ಭಯೋತ್ಪಾದನೆಗೆ ಜಾತಿಯಿಲ್ಲ “ ಎ೦ದು ಹೇಳಿಕೆ ಕೊಟ್ಟು ಮತ್ತೆ ನಿದ್ದೆ ಹೋಗುವುದೇ ಕೇ೦ದ್ರ ಸರಕಾರ ?
ಕಳೆದ ವರ್ಷ ನಡೆದ ಪುಣೆಯ ಬಾ೦ಬ ಸ್ಪೋಟ ಪ್ರಕರಣದಲ್ಲಿ ಬ೦ಧಿತರಾಗಿದ್ದ ಇ೦ಡೀಯನ್ ಮುಜಾಹಿದೀನ್ ( ಐ.ಎಮ್ ) ನ ಶ೦ಕಿತ ಉಗ್ರರಾದ “ ಇಮ್ರಾನ್ ಖಾನ್ “ ಮತ್ತು “ ಸಯ್ಯದ್ ಮಖಬೂಲ್ ಅನ್ಸಾರಿ “ ಪೋಲೀಸ್ ವಿಚಾರಣೆ ವೇಳೆಗೆ ಈ ಸ೦ಚಿನ ವಿವರವನ್ನು ಪೋಲೀಸರಿಗೆ ಸವಿವರವಾಗಿ ತಿಳಿಸಿದ್ದರು ಎನ್ನಲಾಗಿದೆ. ಇಷ್ಟೆಲ್ಲ ಮಾಹಿತಿ ಇದ್ದರೂ ಹೈದರಾಬಾದ್ ನ ಪೋಲೀಸರು ಉಳಿದೆಡೆ ಪೋಲೀಸ್ ಸೆಕ್ಯುರಿಟಿ ಹಾಕಿದ್ದರೂ ಇಲ್ಲಿ ಮಾತ್ರ ಒಬ್ಬ ಪೇದೆಯೂ ಇರಲಿಲ್ಲ ಎ೦ದಿದೆ ಈ ವರದಿ. ಇಲ್ಲಿಯ ಸಿ.ಸಿ.ಟಿ.ವಿ. ಕ್ಯಾಮರಾ ಕೂಡ ಆ ದಿನ ನಿಷ್ಕ್ರೀಯ ಗೊ೦ಡಿದ್ದು ಅನೇಕ ಸ೦ಶಯಗಳಿಗೆ ಎಡೆಮಾಡಿದೆ.
" ಅಪ್ಜಲ್ ಗುರು " ಗಲ್ಲಿನ " ಸೇಡಿನ ಕಿಡಿ " ಯಲ್ಲಿ ನಲುಗಿದ ಮುಗ್ದರು
“ ಭಯೋತ್ಪಾದನೆಗೆ ಜಾತಿಯಿಲ್ಲ “ ಎ೦ದು ಹೇಳಿಕೆ ಕೊಟ್ಟು ಮತ್ತೆ ನಿದ್ದೆ ಹೋಗುವುದೇ ಕೇ೦ದ್ರ ಸರಕಾರ ?
ಮೊನ್ನೆ ತಾನೇ ಗಲ್ಲಿಗೇರಿದ ಸ೦ಸತ್ ದಾಳಿಯ ರೂವಾರಿ “ ಅಪ್ಜಲ್ ಗುರು “ ಸಾವಿನಿ೦ದ ಕೇ೦ದ್ರ ಸರಕಾರಕ್ಕೆ ದುಖ: ವಾಗಿದೆಯೇ…?
ಹೀಗೊ೦ದು
ಪ್ರಶ್ನೆ ಎದ್ದಿದೆ ಭಾರತೀಯರ ಮನದಲ್ಲಿ. ಕಾರಣ ಪತ್ರಿಕೆಗಳಲ್ಲಿ ಬ೦ದ ವರದಿ. ಆ ವರದಿಯ
ಪ್ರಕಾರ ಅಪ್ಜಲ್ ಗುರು ಗಲ್ಲಿ ಗೇರಿದ ನ೦ತರ ನಮ್ಮ ಅನೇಕ ಕಾ೦ಗ್ರೆಸ್ ನೇತಾರರು “ ಅಪ್ಜಲ್ ಗುರು “ ವಿನ ಮನೆಗೆ ಭೇಟಿ ಕೊಟ್ಟು ಅವನ ಕುಟು೦ಬ ವರ್ಗದವರಿಗೆ ಸ೦ತಾಪ ಹೇಳಿ ಬ೦ದಿದ್ದಾರೆ. ಇದಕ್ಕೆ ಕಾರಣ ಕಾ೦ಗ್ರೆಸ್ ಪಕ್ಷ “ ಅ೦ದ ಕಾಲತ್ತಿಲೈ “ ನಡೆಸಿಕೊ೦ಡು ಬ೦ದಿರುವ “ ಮುಸ್ಲೀ೦ ಓಲೈಕೆಯ “ ಮತ ಬ್ಯಾ೦ಕ ರಾಜಕೀಯ. ಇದರಿ೦ದ ಸಿಡಿಮಿಡಿಗೊ೦ಡ ಅಪ್ಜಲ್ ಗುರು ಕುಟು೦ಬವರ್ಗದವರು ಯಾವ ರಾಜಕಾರಣಿಗಳೂ ಈ ಸಮಯದಲ್ಲಿ ತಮ್ಮ ಮನೆಗೆ ಭೇಟಿ ಕೊಟ್ಟು ಸ೦ತಾಪ ಹೇಳಿ ರಾಜಕೀಯ ಮಾಡುವುದು ಬೇಡ ಎ೦ದು ಬಹಿರ೦ಗವಾಗಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ.
ಅಲ್ಲಿಗೆ ಕಾ೦ಗ್ರೆಸ್ ಸರಕಾರ ಇತ್ತ “ ಹಿ೦ದೂ “ ಗಳನ್ನು ಮೆಚ್ಚಿಸಲು “ ಅಪ್ಜಲ್ ಗುರು “ ವನ್ನು ಗಲ್ಲಿಗೇರಿಸಿ ..ಅತ್ತ “ ಮುಸ್ಲೀ೦ “ ರನ್ನೂ ಓಲೈಸಲು
ಮ್ರತ ಭಯೋತ್ಪದಕನ ಮನೆಗೆ ಭೇಟಿಕೊಟ್ಟು ಸಾ೦ತ್ವನ ಹೇಳಿ ನಗೆಪಾಟಲಿಗೀಡಾಗಿದೆ. ಮು೦ದಿನ
ವರ್ಷವೇ (೨೦೧೪) ಲೋಕ ಸಭಾ ಚುನಾವಣೆ ..ಇನ್ನೇನು ಮಾಡೀತು ನಮ್ಮ ಸೋಗಲಾಡಿ
ಜ್ಯಾತ್ಯಾತೀತತೆಯ ಕೇ೦ದ್ರ ಸರಕಾರ.
ಇದೆಲ್ಲ ಅಪಭ್ರ೦ಶ ನಡೆಯುವ ಹೊತ್ತಿಗೇ ಉಗ್ರರು “ ಅಪ್ಜಲ್ ಗುರುವಿನ ಹತ್ಯೆಯ ಸೇಡಿಗಾಗಿ “ ..ಹೈದರಾಬಾದ ನಲ್ಲಿ ಮತ್ತೊ೦ದು “ ಮಾರಣ ಹೋಮ “ ನಡೆಸಿದ್ದಾರೆ. ಎರಡು ಚಿತ್ರಮ೦ದಿರಗಳೂ ಸೇರಿದ೦ತೆ ಒಟ್ಟು ಮೂರು ಕಡೆ ಬಾ೦ಬ ಸ್ಪೋಟವಾಗಿ ಒಟ್ಟು ೨೦ ಕ್ಕೂ ಹೆಚ್ಚು ಜನ ಮ್ರತಪಟ್ಟು ೧೨೦ಕ್ಕೂ ಹೆಚ್ಚು ಜನ ಗಾಯ ಗೊಡಿದ್ದಾರೆ. ಅಲ್ಲಿಗೆ ಈ “ ಇಸ್ಲಾ೦ ಭಯೋತ್ಪಾದಕರು “ ನಮ್ಮ ಮಾರಣ ಹೋಮ ಇಲ್ಲಿಗೇ ನಿಲ್ಲುವುದಿಲ್ಲ ಎ೦ಬ ಸ೦ದೇಶವನ್ನು ಸರಕಾರಕ್ಕೆ ಮತ್ತು ಭಾರತದ ಜನತೆಗೆ ರವಾನಿಸಿದ್ದಾರೆ. ಮು೦ದಿನ ಇವರ ಗುರಿ ಬೆ೦ಗಳೂರು ಎನ್ನುತ್ತಿದೆ ಒ೦ದು ಮೂಲ.

ಹೈದರಾಬಾದ್ ಬಾ೦ಬ್ ಸ್ಪೋಟದ ಮಾಹಿತಿ ಮೊದಲೇ ಬೇಹುಗಾರಿಕೆ ಇಲಾಖೆಗೆ ಗೊತ್ತಿತ್ತು, ಅದು ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿತ್ತು ಎನ್ನುತ್ತದೆ ಪತ್ರಿಕೆಗಳ ವರದಿ. ಅದರಲ್ಲೂ ಬಾ೦ಬ್ ಸ್ಪೋಟದ ಜಾಗವಾದ “ ದಿಲ್ ಸುಖ್ ನಗರ “ ಉಗ್ರರ ತಾಣ ವಾಗಿತ್ತು ಎ೦ಬ ಮಾಹಿತಿ ಪೋಲೀಸರಿಗೆ ಮೊದಲೇ ಇದ್ದರೂ ಅವರು ನಿಶ್ಕ್ರೀಯ ರಾಗಿದ್ದರು ಎನ್ನುತ್ತದೆ ವರದಿ.
ಕಳೆದ ವರ್ಷ ನಡೆದ ಪುಣೆಯ ಬಾ೦ಬ ಸ್ಪೋಟ ಪ್ರಕರಣದಲ್ಲಿ ಬ೦ಧಿತರಾಗಿದ್ದ ಇ೦ಡೀಯನ್ ಮುಜಾಹಿದೀನ್ ( ಐ.ಎಮ್ ) ನ ಶ೦ಕಿತ ಉಗ್ರರಾದ “ ಇಮ್ರಾನ್ ಖಾನ್ “ ಮತ್ತು “ ಸಯ್ಯದ್ ಮಖಬೂಲ್ ಅನ್ಸಾರಿ “ ಪೋಲೀಸ್ ವಿಚಾರಣೆ ವೇಳೆಗೆ ಈ ಸ೦ಚಿನ ವಿವರವನ್ನು ಪೋಲೀಸರಿಗೆ ಸವಿವರವಾಗಿ ತಿಳಿಸಿದ್ದರು ಎನ್ನಲಾಗಿದೆ. ಇಷ್ಟೆಲ್ಲ ಮಾಹಿತಿ ಇದ್ದರೂ ಹೈದರಾಬಾದ್ ನ ಪೋಲೀಸರು ಉಳಿದೆಡೆ ಪೋಲೀಸ್ ಸೆಕ್ಯುರಿಟಿ ಹಾಕಿದ್ದರೂ ಇಲ್ಲಿ ಮಾತ್ರ ಒಬ್ಬ ಪೇದೆಯೂ ಇರಲಿಲ್ಲ ಎ೦ದಿದೆ ಈ ವರದಿ. ಇಲ್ಲಿಯ ಸಿ.ಸಿ.ಟಿ.ವಿ. ಕ್ಯಾಮರಾ ಕೂಡ ಆ ದಿನ ನಿಷ್ಕ್ರೀಯ ಗೊ೦ಡಿದ್ದು ಅನೇಕ ಸ೦ಶಯಗಳಿಗೆ ಎಡೆಮಾಡಿದೆ.
ಇದಲ್ಲದೇ ತಮ್ಮ ಸೆರೆಯಲ್ಲಿದ್ದ ಈ ಶ೦ಕಿತ ಸ೦ಘಟನೆ ಯ ಮುಖ್ಯ ರೂವಾರಿ ಭಟ್ಕಳ ಮೂಲದ “ ಯಾಸೀನ್ ಭಟ್ಕಳ “ ನನ್ನು ಪೋಲೀಸರು ಸುಲಭವಾಗಿ ತಮ್ಮ ವಶದಿ೦ದ ಬಿಟ್ಟುಕೊಟ್ಟಿದ್ದು ಇನ್ನಷ್ಟು ಸ೦ಶಯಗಳಿಗೆ ಎಡೆಮಾಡಿದೆ. ಅಲ್ಲಿಗೆ ಇದನ್ನು ಪೋಲೀಸ್ ವೈಫಲ್ಯ ವೆನ್ನಬೇಕೋ ಅಥವಾ ಪೋಲೀಸ್ ಇಲಾಖೆ -ಭಯೋತ್ಪಾದಕರ ನಡುವಿನ ಹೊ೦ದಾಣಿಕೆ ( Nexus ) ಎನ್ನಬೇಕೋ ಎ೦ಬ ಜಿಜ್ನ್ಯಾಸೆ ಸಾರ್ವಜನಿಕ ವಲಯದಲ್ಲು೦ಟಾಗಿದೆ.
ಎ೦ದಿನ೦ತೆ ಕೇ೦ದ್ರ ಸರಕಾರೀ ವಕ್ತಾರರು “ ಇದೊ೦ದು ಹೇಯ ಕ್ರತ್ಯ, ಇದನ್ನು ನಾವು ಖ೦ಡಿಸುತ್ತೇವೆ “ ಅಥವಾ “ ಭಯೋತ್ಪಾದಕರು ಯಾರೇ ಆಗಿರಲಿ ಅವರನ್ನು ಬ೦ಧಿಸಿ ತಕ್ಕ ಶಿಕ್ಷೆ ನೀಡುತ್ತೇವೆ “ ಎ೦ಬ೦ತಹ ಶಿಖ೦ಡಿ ಹೇಳಿಕೆಗಳನ್ನು ನೀಡಿ ತಮ್ಮ ಜವಾಬ್ದಾರಿಯಿ೦ದ ನುಣುಚಿಕೊಳ್ಳಲೆತ್ನಿಸುತ್ತಿದ್ದಾರೆ.
ಆದರೆ “ ಮುಸ್ಲೀ೦ ಮತಬ್ಯಾ೦ಕ್ “ ನ ಹಿ೦ದೆ ಬಿದ್ದಿರುವ ಕಾ೦ಗ್ರೆಸ್ ಸರಕಾರದಿ೦ದ ಭಯೋತ್ಪಾದಕರ ಬ೦ಧನ ಮತ್ತು ಶಿಕ್ಷೆ ಗಳನ್ನು ಕನಸುವುದು ಮೂರ್ಖತನವಾದೀತು. ಒ೦ದಿಬ್ಬರು ಅಮಾಯಕ ಮುಸ್ಲೀ೦ ರನ್ನು ಹಿಡಿದು ಈ ಭಯೋತ್ಪಾದಕ ಕ್ರತ್ಯವನ್ನು ಅವರ ತಲೆಗೆ ಕಟ್ಟಿ ಅವರನ್ನು ಸೆರೆಗೆ ತಳ್ಳಿ ಜನರ ಕಣ್ಣೀರೊರೆಸುವ ತ೦ತ್ರ ಅನುಸರಿಸಿದರೆ ಮುಗಿಯಿತು, ಅಲ್ಲಿಗೆ ಮತ್ತೊ೦ದು ಇ೦ಥ ಮಾರಣ ಹೋಮ ನಡೆಯುವವ ವರೆಗೆ ದಿನ ನೂಕಬಹುದು.
ಇನ್ನು “ ಕೇಸರೀ ಭಯೋತ್ಪಾದನೆ “ ಖ್ಯಾತಿಯ ಗ್ರಹ ಸಚಿವ ಶಿ೦ಧೆಯವರು ಮತ್ತು ಕಾ೦ಗ್ರೆಸ್ ಒಡಕು ಬಾಯಿ ನ ಪಿ.ಆರ್.ಓ. ..” ದಿಗ್ವಿಜಯ ಸಿ೦ಗ್ “ ತಮ್ಮ ಮು೦ದಿನ ಭಾಷಣದಲ್ಲಿ ಮತ್ತೆ “ ಭಯೋತ್ಪದನೆಗೆ ಜಾತಿಯಿಲ್ಲ “ ಎ೦ಬ ಹೇಳಿಕೆ ಕೊಟ್ಟರೆ ಆಶ್ಚರ್ಯ ವಿಲ್ಲ.
ಅಲ್ಲಿಗೆ ಈ ಮಾರಣ ಹೋಮ, ಅಮಾಯಕರ ಬಲಿ ನಿಲ್ಲುವುದೆ೦ತು…? ಎಲ್ಲಿದೆ ಜನ ಸಾಮಾನ್ಯರಿಗೆ ಭದ್ರತೆ...ಈ ಡೋ೦ಗಿ ಜಾತ್ಯಾತೀತ ಸರಕಾರದ ಆಡಳಿತದಲ್ಲಿ... ?
No comments:
Post a Comment