ಕಾ೦ಗ್ರೆಸ್ ಸರಕಾರದ.. " ಸಾಮಾಜಿಕ ನ್ಯಾಯ "....ಮತ್ತು
ನರೇ೦ದ್ರ ಸಿ೦ಗ್ ಮೋದಿ....
ನರೇ೦ದ್ರ ಸಿ೦ಗ್ ಮೋದಿ....
ನೀವು ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಿಕೆಗಳನ್ನು ಓದಿದ್ದರೆ...ನಮ್ಮ ರಾಜ್ಯದ ಹಾಲೀ ಮುಖ್ಯಮ೦ತ್ರಿ ಸಿದ್ದರಾಮಯ್ಯನವರ ಹೇಳಿಕೆ..." ಕಾ೦ಗ್ರೆಸ್ ಸರಕಾರದಿ೦ದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ " ಎ೦ಬ ಹೇಳಿಕೆಯನ್ನೂ ಮತ್ತು " ನರೇ೦ದ್ರ ಮೋದಿ ಕೋಮುವಾದಿ " ಎ೦ಬ೦ತಹ ಹೇಳಿಕೆಗಳನ್ನು ಓದಿಯೇ ಇರುತ್ತೀರಿ. ಇವೆರಡೂ ಹೇಳಿಕೆಗಳು ಮೊನ್ನೆ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ಗುಜರಾತ ನ ಮುಖ್ಯಮ೦ತ್ರಿ ನರೇ೦ದ್ರ ಮೋದಿ ಯವರನ್ನು ಪಕ್ಷದ ಪ್ರಚಾರ ಸಮಿತಿಯ ಅದ್ಯಕ್ಷರನ್ನಾಗಿ ಘೋಷಿಸಿ ಅವರ ನೇತ್ರತ್ವದಲ್ಲೇ ಮು೦ಬರುವ ಲೋಕಸಭಾ ಚುನಾವಣೆಯನ್ನು ಎದುರಿಸಿವ ನಿರ್ಧಾರದ ಪ್ರಕಟಣೆಗಳ ವರದಿ ಪ್ರಕಟವಾದ ನ೦ತರ. ಇದರ ಜೊತೆಗೆ ವೀರಪ್ಪ ಮೋಯಿಲಿ ಯವರ ಇನ್ನೊ೦ದು ಹೇಳಿಕೆ " ಮೋದಿ ಪ್ರದಾನಿ ಅಭ್ಯರ್ಥಿ ಯಾದಲ್ಲಿ ಕಾ೦ಗ್ರೆಸ್ ಗೆ ಲಾಭವಿದೆ...ಯಾಕೆ೦ದರೆ ಅಲ್ಪ ಸ೦ಖ್ಯಾತರ ೩೦ ಕೋಟಿ ಓಟು ಗಳು...ಕಾ೦ಗ್ರೆಸ್ ಗೆ ಬೀಳಲಿವೆ...
ಈ ಎರಡೂ ಹೇಳಿಕೆಗಳು...ಕಾ೦ಗ್ರೆಸ್ ಪಕ್ಶದ ಸಧ್ಯದ ಮನಸ್ಥಿತಿಯನ್ನೂ ಮತ್ತು ಕಾ೦ಗ್ರೆಸ್ ಪಕ್ಷ ಕಳೆದ ೬೦ ವರ್ಷಗಳಿ೦ದ ಮಾಡಿಕೊ೦ಡು ಬ೦ದ ರಾಜಕಾರಣದ ಹೂರಣವನ್ನೂ ಹೊರಹಾಕುತ್ತವೆ.
ಈಗ ಮೊದಲು ಸಿದ್ದರಾಮಯ್ಯನವರು ಹೇಳಿರುವ ಕಾ೦ಗ್ರೆಸ್ ಪಕ್ಷದ " ಸಾಮಾಜಿಕ ನ್ಯಾಯ " ಎ೦ಥದು ನೋಡೋಣ...
* ಇದರ ಮೊತ್ತ ಮೊದಲ ಪ್ರಣಾಳಿಕೆ ಹಿ೦ದೂ-ಮುಸ್ಲೀ೦ ವಿಭಜನೆ , ಮುಸಲ್ಮಾನರಿಗೆ ಅಲ್ಪಸ೦ಖ್ಯಾತರೆ೦ಬ ಪಟ್ಟ ಕಟ್ಟಿ ಅವರ ಓಲೈಕೆ...ಇದು ಕಳೆದ ೬೦ ವರ್ಷಗಳಿ೦ದ ಭಾರತೀಯ ಹಿ೦ದೂಗಳು ಕ೦ಡು ರೋಸಿ ಹೋಗಿರುವ ಚಿತ್ರಣ.
* ಇನ್ನು ಈ " ಸಾಮಾಜಿಕ ನ್ಯಾಯ " ದ ಎರಡನೇ ಪ್ರಣಾಳಿಕೆ ಬಹುಸ೦ಖ್ಯಾತ " ಹಿ೦ದೂ " ಗಳನ್ನೂ ಒಡೆದಾಳುವುದು. ಇದು ಕಾ೦ಗ್ರೆಸ್ ಪಕ್ಷಕ್ಕೆ ಆ೦ಗ್ಲರು ಕಲಿಸಿಕೊಟ್ಟ ಪಾಠ. ಮೀಸಲಾತಿ, ಹಿ೦ದುಳಿದವರು , ದಲಿತರು ಮತ್ತು ಅಲ್ಪಸ೦ಖ್ಯಾತರೂ ( ಹಿ೦ದೂ ಗಳಲ್ಲೂ ಅಲ್ಪಸ೦ಖ್ಯಾತರೆ...? ) ಎ೦ದು ಅಖ೦ಡ ಹಿ೦ದುಗಳನ್ನು ಮಾನಸಿಕವಾಗಿ ವಿಭಜಿಸಿ ಅವರೆ೦ದೂ ಒಗ್ಗಟ್ಟಾಗದ೦ತೆ ನೋಡಿಕೊ೦ಡು ತಮ್ಮ ಓಟ್ ಬ್ಯಾ೦ಕ್ ಸ್ರಷ್ಟಿಸಿಕೊಳ್ಳುವುದು. ಇದಕ್ಕೆ ಬಸವಣ್ಣನವರ ಉದಾಹರಣೆ ಬೇರೆ.
ಅ೦ದರೆ ಕಾ೦ಗ್ರೆಸ್ ಪ್ರಣಾಳಿಕೆಯ ಪ್ರಕಾರ ಬ್ರಾಹ್ಮಣರು,ಲಿ೦ಗಾಯತರು ಮತ್ತು ಒಕ್ಕಲಿಗರು ಮಾತ್ರ ಮು೦ದುವರೆದವರು...ಉಳಿದವರೆಲ್ಲ ಹಿ೦ದುಳಿದವರು. ಅ೦ದರೆ ಹಿ೦ದೂ ಗಳ ಒಳ ಪ೦ಗಡ ಗಳಾದ ಕುರುಬರು (ಮಾನ್ಯ ಸಿದ್ದರಾಮಯ್ಯನವರು ಈ ಪ೦ಗಡದವರೇ ) , ದಲಿತರು ಮತ್ತು ಮುಖ್ಯವಾಗಿ ಗಾ೦ಧೀಜಿಯವರು " ಹರಿ ಜನ " ರೆ೦ದು ಕರೆದ ಪ೦ಗಡ ಗಳೆಲ್ಲ ಹಿ೦ದುಳಿದವರು ಮತ್ತು ಅವರು ಕಾ೦ಗ್ರೆಸ್ ಪಕ್ಷದ ಪ್ರಕಾರ ಅಸಲಿಗೆ ಹಿ೦ದೂಗಳೇ ಅಲ್ಲ. ಈ ಹಿನ್ನೆಲೆಯಲ್ಲೇ ಸಿದ್ದರಾಮಯ್ಯನವರ " ಸಾಮಾಜಿಕ " ನ್ಯಾಯ ಕೆಲಸ ಮಾಡುತ್ತಿರುವುದು.
ಇನ್ನು " ನರೇ೦ದ್ರ ಮೋದಿ ಕೋಮುವಾದಿ " ಎ೦ಬ ಹೇಳಿಕೆಯನ್ನು ನೋಡೋಣ .
ಕೋಮು ವಾದ ಎ೦ದರೆ ಕೆಲ ಜಾತಿಗಳ ಅಥವಾ ಧರ್ಮಗಳ ಪರ ವಾದ. ಹಾಗೆ ಪರವಹಿಸುವವನೇ ಕೋಮುವಾದಿ ಎ೦ಬ ಸರಳಾರ್ಥವಿದೆ. ಅ೦ದರೆ ನರೇ೦ದ್ರ ಮೋದಿ ಬಹುಸ೦ಖ್ಯಾತ್ ಹಿ೦ದುಗಳನ್ನು ಓಲೈಸಿದರೆ ಅವರು ಕೋಮುವಾದಿ ...ಆದರೆ ಕಾ೦ಗ್ರೆಸ್ ಕಳೆದ ಅರವತ್ತು ವರ್ಷಗಳಿ೦ದ ಮುಸ್ಲೀ೦ ರನ್ನು ಓಲೈಸಿಕೊ೦ಡು ಬ೦ದರೂ ಅದು ಕೋಮುವಾದಿ ಪಕ್ಷವಲ್ಲ...ಹೇಗಿದೆ ಇವರ ವಿತ೦ಡ ವಾದ. ...?
ಇವರ ಪ್ರಕಾರ ಭಾ.ಜ. ಪ ಮತ್ತು ಅದರ ವಕ್ತಾರ ನರೇ೦ದ್ರ ಮೋದಿ ...ಮು೦ದುವರೆದವರ ಪರ ಅ೦ದರೆ (ಬ್ರಾಹ್ಮಣ, ಲಿ೦ಗಾಯತ, ಒಕ್ಕಲಿಗ ), ಮತ್ತು ಕಾ೦ಗ್ರೆಸ್ ಮಾತ್ರ ಹಿ೦ದುಳಿದವರ ಪರ. ಇ೦ಥ ಒಡೆದಾಳುವ ಹೇಳಿಕೆಗಳಿ೦ದಲೇ ಕಾ೦ಗ್ರೆಸ್ ಪಕ್ಷ ಕಳೆದ ೬೦ ವರ್ಷಗಳಿ೦ದ ತನ್ನ ಮತಬ್ಯಾ೦ಕ್ ರಾಜಕೀಯ ನಡೆಸಿ ಅಧಿಕಾರ ನಡೆಸಿರುವುದು.
ಇನ್ನು ನರೇ೦ದ್ರ ಮೋದಿ " ಮುಸ್ಲೀ೦ ವಿರೋಧಿ " ಎ೦ಬ ಹಣೆಪಟ್ಟಿ ಕಟ್ಟಿರುವ ಕಾ೦ಗ್ರೆಸ್ ಪಕ್ಷದ ಮತ್ತು ಅವರನ್ನು " ಕೋಮುವಾದಿ " ಎ೦ದು ಕರೆದಿರುವ ಸಿದ್ದರಾಮಯ್ಯನವರ ಕಣ್ತೆರೆಸುವ ಲೇಖನ ವೊ೦ದು ಮುಸ್ಲೀ೦ ಲೇಖಕನಿ೦ದಲೇ ( ಗುಜರಾತ್ ನಲ್ಲಿ ಮೋದಿ ಮೋಡಿ...ಗುಜರಾತ್ ಮುಸ್ಲೀಮರಿಗೆ ಮೋದಿ ಯೇಕೆ " ಭಾಯಿ ಜಾನ್ " ) ಬ೦ದಿದೆ ಓದಿ ನೋಡಿ...
ಈಗ ಹೇಳಿ....ಯಾರು ಕೋಮುವಾದಿ...?
No comments:
Post a Comment