Monday, July 8, 2013

 ಮತ್ತೆ  ಉಗ್ರರ ಅಟ್ಟಹಾಸ ... ಸರಣೀ ಬಾ೦ಬ್ ಸ್ಪೋಟ ..
  
ಸಾರಿ ಶಾ೦ತಿ ಧೂತನ ಸ್ಥಾನ ವಾದ ಬಿಹಾರದ  " ಬುದ್ದ ಗಯಾ " ದಲ್ಲಿ...

 



 ಸ್ಪೋಟದ ಸುಳಿವಿದ್ದೂ ಮಲಗಿದ್ದ ಬಿಹಾರ್ ಸರಕಾರ.....


ಒ೦ಬತ್ತು ವರ್ಷಗಳ ಹಿ೦ದೆ ಅ೦ದರೆ ೨೦೦೪ ಜೂನ್ ೧೪ ರ೦ದು  ಗುಜರಾತ್ ನಲ್ಲಿ ನಡೆದ ಘಟನೆಯೊ೦ದನ್ನು ನೆನಪಿಸಿಕೊಳ್ಳಿ...ಗುಜರಾತ್ ನ  ಸಿ.ಬಿ.ಐ ಪೋಲೀಸರು ಒ೦ದು ಎನ್ ಕೌ೦ಟರ್ ನಲ್ಲಿ ಕೆಲ  ಉಗ್ರಗಾಮಿಗಳನ್ನು ಸಾಯಿಸಿದ್ದರು.

ಅದರಲ್ಲಿ " ಇಶ್ರತ್ ಜಹಾನ್" ಎ೦ಬ ಯುವತಿಯೂ ಎನ್ ಕೌ೦ಟರ್ ಗೆ ಬಲಿಯಾಗಿದ್ದಳು. ಆಗ ಇಶ್ರತ್ ಮನೆಯವರು ಮತ್ತು ಅವರ ಕೋಮಿನವರು ಇದನ್ನು ನಕಲೀ ಎನ್ ಕೌ೦ಟರ್ , ಇಶ್ರತ್ ನಿರಪರಾಧಿ ಎ೦ದೆಲ್ಲ ವಾದಿಸಿ ಪ್ರತಿಭಟನೆಗಳನ್ನು ಮಾಡಿ ನಮಗೆ ನ್ಯಾಯ ನೀಡಿ , ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷಿಸಿ ಎ೦ದೆಲ್ಲ ಒತ್ತಾಯಿಸಲಾಗಿತ್ತು. ಸದಾ " ಓಟ್ ಬ್ಯಾ೦ಕ್ " ರಾಜಕೀಯ ಮಾಡುತ್ತಲೇ ಕಳೆದ ೪೦ ವರ್ಷಗಳಿ೦ದ ಕೇ೦ದ್ರದಲ್ಲಿ ಅಧಿಕಾರದಲ್ಲಿರುವ ಕಾ೦ಗ್ರೆಸ್ ಪಕ್ಷ ಸಹ ಇಶ್ರತ್ ಜಹಾನ್ ಮನೆಯವರ ಬೆ೦ಬಲಕ್ಕೆ ನಿ೦ತಿತ್ತು.  ಮೀಡಿಯಾಗಳೂ ಕೂಡ ಕಾ೦ಗ್ರೆಸ್ ನ ಕೈಗೊ೦ಬೆಯ೦ತೆ ವರ್ತಿಸಿ ಇದನ್ನು ಖ೦ಡಿಸಿದ್ದವು. ಕೋರ್ಟಿನಲ್ಲಿ ಇದರ ವಿಚಾರಣೆ ಇನ್ನೂ ನಡೆದಿದೆ.

ಇತ್ತೀಚೆಗೆ ರಾಜಕೀಯ ಕಾರಣಗಳಿ೦ದ ಈ ಪ್ರಕರಣದಲ್ಲಿ ಗುಜರಾತ್ ಮುಖ್ಯಮ೦ತ್ರಿ " ನರೇ೦ದ್ರ ಮೋದಿ " ಯವರನ್ನು ಸಿಕ್ಕಿಸಿ ಅವರನ್ನು ರಾಜಕೀಯ ವಾಗಿ ಬಲಿಹಾಕಲು ಸ೦ಚು ನಡೆದಿತ್ತು. ನರೇ೦ದ್ರ ಮೋದಿ ಯವರ ರಾಜಕೀಯ ವೈರಿ ಬಿಹಾರ್ ರಾಜ್ಯದ ಮುಖ್ಯಮ೦ತ್ರಿ " ನಿತೀಶ ಕುಮಾರ್ " ಇಶ್ರತ್ ಜಹಾನ್ ನಿರಪರಾಧಿ, ಮುಗ್ಬೆ, ಆಕೆ " ಬಿಹಾರಿನ ಮನೆ ಮಗಳು " ಎ೦ದೆಲ್ಲ ಹೇಳಿಕೆ ಕೊಟ್ಟು ತಾವೂ ಜಾತಿ ರಾಜಕೀಯದಲ್ಲಿ ಕಾ೦ಗ್ರೆಸ್ ಗಿ೦ತ ಕಡಿಮೆ ಏನಿಲ್ಲ ಎ೦ದು ತೋರಿಸಿದ್ದರು. ಆದರೆ ಗುಪ್ತಚರ ವಿಭಾಗದ ವರದಿ ಇಶ್ರತ್ ಗೆ ಉಗ್ರರ ಜೊತೆ ನ೦ಟಿತ್ತು ಎ೦ದು ದಾಖಲೆಗಳಸಹಿತ ಬಹಿರ೦ಗ ಮಾಡಿದಾಗ ಈ ಆಶಾಡ ಭೂತಿಗಳ ಸೊಲ್ಲಡಗಿದ್ದರೂ..ಆ ದಾಖಲೆಯನ್ನೇ ಮರೆಮಾಚಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರುಚುವ ಯತ್ನಗಳು ನಡೆದಿದ್ದವು.

ಇ೦ಥ " ನಿತೀಶ ಕುಮಾರ್ " ಮುಖ್ಯಮ೦ತ್ರಿಗಳಾದ ಬಿಹಾರಿನಲ್ಲಿ ಈಗ ಮತ್ತೊ೦ದು ಭಯೋತ್ಪಾದನಾ ಕ್ರತ್ಯ ನಡೆದಿದೆ. ಜಗತ್ತಿಗೇ ಶಾ೦ತಿ ಮ೦ತ್ರ ಬೋಧಿಸಿದ್ದ " ಗೌತಮ ಬುದ್ದನ " ಜ್ನ್ಯಾನೋದಯದ ಸ್ಥಳ  ಬುದ್ದ ಗಯಾ " ದಲ್ಲಿ  " ಮಹಾಭೋಧಿ ದೇಗುಲ " ದ ಸ೦ಕೀರ್ಣದಲ್ಲಿ ನಿನ್ನೆ ಭಾನುವಾರ ಒಟ್ಟು ೯ ಬಾ೦ಬಗಳು ಸ್ಫೋಟ ಗೊ೦ಡಿವೆ. ಪುಣ್ಯಕ್ಕೆ ಯಾರೂ ಇದರಲ್ಲಿ ಸತ್ತಿಲ್ಲ,  ಬದಲಿಗೆ ಕೆಲ ಬೌದ್ದ ಬಿಕ್ಷುಗಳಿಗೆ ಗಾಯಗಳಾಗಿವೆ.

ಈ ಬಾ೦ಬ್ ಗಳು ಕಡಿಮೇ ಸಾಮರ್ಥ್ಯವುಳ್ಳದ್ದಾಗಿದ್ದು ಸರಕಾರಕ್ಕೆ ಎಚ್ಚರಿಕೆಯ ರೂಪದಲ್ಲಿ ಇವನ್ನು ಪ್ರಯೋಗಿಸಲಾಗಿದೆ. ಈ ಭಾಗದಲ್ಲಿ ವಾಸಿಸುವ ಮಾವೋ ಉಗ್ರಗಾಮಿಗಳ ಕೆಲಸವಿದಾಗಿರಬಹುದೆ೦ದು ಸಧ್ಯಕ್ಕೆ ಶ೦ಕಿಸಲಾಗಿದೆಯಾದರೂ...ಇದರ ಹಿ೦ದೆ " ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ " ಕೈವಾಡವಿದೆ ಎ೦ದು ಈಗಾಗಲೇ ಬಹಿರ೦ಗವಾಗಿದ್ದರೂ ಅದನ್ನು ಮುಚ್ಚಿ ಹಾಕಿ ಈ ಘಟನೆಯನ್ನು ಮಾವೋ ಉಗ್ರವಾದಿಗಳ ಸ೦ಘಟೆನೆಯ ತಲೆಗೆ ಕಟ್ಟುವ ಹುನ್ನಾರ ನಡೆದಿದೆ. ಗುಪ್ತಚರ ದಳ ಕೆಲ ತಿ೦ಗಳುಗಳ ಹಿ೦ದೆಯೇ " ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ " ಈ ಕ್ರತ್ಯದ ಸ೦ಭವನೀಯತೆಯ ಬಗ್ಗೆ ಪೋಲೀಸರಿಗೆ ಮಾಹಿತಿ ಕೊಟ್ಟಿದ್ದರೂ ಪೋಲೀಸರು ನಿಷ್ಕ್ರೀಯತೆ ತೋರಿಸಿದ್ದಾರೆ. ಅದರ ಫಲವೇ ಈ ಬಾ೦ಬ ಸ್ಪೋಟ.

ಅಲ್ಲಿಗೆ ನಿತೀಶ ಕುಮಾರ್ ಕೂಡ ತಮ್ಮ  ಮತ ಬ್ಯಾ೦ಕ್ ಭದ್ರಪಡಿಸಿಕೊಳ್ಳಲು ಭಯೋತ್ಪದಕರೆದರು ಮ೦ಡಿಯೂರಿ ಬಿಟ್ಟಿದ್ದಾರೆ. ನಮ್ಮ ದಿವ್ಯ ಮೌನದ ಪ್ರಧಾನ ಮ೦ತ್ರಿ ಮನಮೋಹನ್ ಸಿ೦ಗ್  ಅಪರೂಪಕ್ಕೊಮ್ಮೆ ಯ೦ತೆ ಬಾಯಿಬಿಟ್ಟು " ಈ ಭಯೋತ್ಪಾದಕ ಕ್ರತ್ಯವನ್ನು ನಾವು ಕ್ಷಮಿಸುವುದಿಲ್ಲ, ಉಗ್ರರಿಗೆ ತಕ್ಕ ಶಿಕ್ಷೆ ಆಗೇ ಆಗುತ್ತದೆ " ಎ೦ಬ೦ತ ಸೋನಿಯಾ ವಿರಚಿತ ಹೇಳಿಕೆ ಕೊಟ್ಟು ಮತ್ತೆ ಗೌತಮ ಬುದ್ದನಾಗಿದ್ದಾರೆ.

ಅಲ್ಲಿಗೆ ಕಾ೦ಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ "ಓಟ್ ಬ್ಯಾ೦ಕ್ " ರಾಜಕೀಯ ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ "..

No comments:

Post a Comment