" ಹಿ೦ದೂ " ಗಳನ್ನು ಜಾತಿ, ಉಪಜಾತಿಗಳ ಹೆಸರಲ್ಲಿ ಒಡೆದಾಳುವ ಕುಟಿಲ ನೀತಿಗೆ ನಲಗುತ್ತಿರುವ ಭಾರತ....!!!
ಈ ಕುಟಿಲ ನೀತಿಯನ್ನು ಸರಿಪಡಿಸುವವರಿಗೇ ನಿಮ್ಮ ಬೆ೦ಬಲ ವಿರಲಿ...
ಈ ಕುಟಿಲ ನೀತಿಯನ್ನು ಸರಿಪಡಿಸುವವರಿಗೇ ನಿಮ್ಮ ಬೆ೦ಬಲ ವಿರಲಿ...
ಸನಾತನ ಹಿ೦ದೂ ಧರ್ಮ , " ಸ್ವಾಮಿ ವಿವೇಕಾನ೦ದರು" ಯಾವ ಧರ್ಮದ ಬಗ್ಗೆ ಚಿಕ್ಯಾಗೋ ಸಭೆಯಲ್ಲಿ ಹೆಮ್ಮೆಯಿ೦ದ ಎದೆಯುಬ್ಬಿಸಿ ಭಾಷಣ ಮಾಡಿದರೋ ಆ ವಿಶ್ವಮಾನವತೆಯನ್ನು ಸಾರುವ ಹಿ೦ದೂ ಧರ್ಮ ಇ೦ದು ಒಡೆದಾಳುವವರ ಕುಟಿಲ ನೀತಿಗೆ ಸಿಕ್ಕಿ ನಲುಗುತ್ತಿದೆ.
ಹಿ೦ದೂ ಧರ್ಮದ " ವರ್ಣಾಶ್ರಮ " ನೀತಿಯ ಬಗ್ಗೆ ನೀವು ಕೇಳಿರಬಹುದು.
ವರ್ಣಾಶ್ರಮ ಪದ್ಧತಿಯು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಗಗಳನ್ನು ಹೊಂದಿದ ಹಿಂದೂ ಧರ್ಮದ ಒಂದು ಪದ್ಧತಿ.ಈ ವರ್ಗಾಚರಣೆಯನ್ನು ಸ್ಥೂಲವಾಗಿ ಬುದ್ಧಿ,ಪರಾಕ್ರಮ,ಸಂಪತ್ತು ಹಾಗೂ ಪರಿಶ್ರಮಗಳ ಆಧಾರದ ಮೇಲೆ ಮಾಡಿದ್ದು.ಪ್ರತಿಯೊಂದು ವರ್ಣದವರೂ ಕೂಡಾ ಒಂದೇ ಪುರುಷನ ಅಂದರೆ ಜಗದ ಕುಟುಂಬದ ವಿವಿಧ ಅಂಗಗಳೇ ಆಗಿದ್ದು ಯಾರು ಯಾರಿಗೆ ಮೇಲಾಗಲೀ ಕೀಳಾಗಲೀ ಆಗಿರುವುದಿಲ್ಲ ಮತ್ತು ಈ ವರ್ಗ ವಿಭಾಗಗಳನ್ನು ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ಮಾಡಲಾಗಿದೆ ಎಂಬುದನ್ನು ಹಿಂದೂ ಧರ್ಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಭಗವದ್ಗೀತೆಯಲ್ಲಿ ಬರುವ 'ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗತ:'ಎಂಬ ಶ್ಲೋಕ ಹಾಗೂ ಮಹಾಭಾರತದ ವನಪರ್ವದ ಒಂದು ಶ್ಲೋಕ "ನ ಯೋನಿ: ನಾಪಿ ಸಂಸ್ಕಾರೋ ನ ಶ್ರುತಂ ಚ ಸಂತತಿ:| ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ತು ಕಾರಣಮ್ ||" ಎಂದರೆ ಬ್ರಾಹ್ಮಣತ್ವದ ಕಾರಣವು ಜನ್ಮವಲ್ಲ,ಸಂಸ್ಕಾರವಲ್ಲ,ವೇದಾಧ್ಯಯನವಲ್ಲ,ಕುಲವೂ ಅಲ್ಲ.ಅದರ ಕಾರಣವು ಸದಾಚಾರ ಮಾತ್ರವಾಗಿರುತ್ತದೆ.ಆದುದರಿಂದ ಹಿಂದೂಧರ್ಮದ ಮೂಲ ವರ್ಣಾಶ್ರಮ ವಿಭಾಗವು ಈಗಿನ ಜಾತಿ ಪದ್ಧತಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತೆಂದು ತಿಳಿದುಬರುತ್ತದೆ.
SanatanDharma gave us the Varnashram, for decentralization of Power (division of labor) in society. It was never birth based. Chandragupta was Khsatriya by deeds, not by birth - and he forged the strongest nation that Bhratvarsha (Aryavart) has ever been.
Foreign invaders with the help from traitors amongst us,converted it to a rigid caste system (which is a western imposed Idea) and thus began the degradation of Indian society that we find today.
ಇದರರ್ಥ ಮನುಷ್ಯನ ವರ್ಣ ( ಅಥವಾ ಜಾತಿ ) ಆತನ ಹುಟ್ಟಿನಿ೦ದ ಬ೦ದುದಲ್ಲ...ಬದಲಿಗೆ ಆತ ಮಾಡುವ ಕರ್ಮ ಅ೦ದರೆ ಕೆಲಸ ದಿ೦ದ ಬ೦ದದ್ದು....ಉದಾಹರಣೆಗೆ " ಚ೦ದ್ರಗುಪ್ತ ಮೌರ್ಯ " ಕ್ಷತ್ರೀಯ " ನೆ೦ದು ಕರೆಸಿಕೊ೦ಡದ್ದು ಆತನ ವೀರತನದಿ೦ದಲೇ ಹೊರತು ಆತನ ಹುಟ್ಟಿನಿ೦ದಲ್ಲ. ಹೀಗೆಯೇ ಬೌದ್ದಿಕ ಬಲದಿ೦ದ ಬದುಕಿದವರಿಗೆ ಬ್ರಾಹ್ಮಣ ರೆ೦ದು, ವ್ಯಾಪಾರದಲ್ಲಿ ನಿಪುಣರಿದ್ದವರು ವೈಶ್ಯರೆ೦ದೂ , ಮತ್ತು ಕೆಳಹ೦ತದಲ್ಲಿ ಕೆಲಸಮಾಡುವವರು ಶೂದ್ರರೆ೦ದೂ ಕರೆಯಿಸಿಕೊ೦ಡರು. ಅ೦ದರೆ ಹಿ೦ದೂ ಧರ್ಮದ ವರ್ಣಾಶ್ರಮದ ಪ್ರಕಾರ " ಶೂದ್ರ " ಎಂಬುದು ಜೀತದಾರರ, ಕೂಲಿಗಳ ವರ್ಗ. ಇದು ವರ್ಣಾಶ್ರಮ ಪದ್ಧತಿಯಲ್ಲಿ ಕಡೆಯ ಸ್ಥಾನವನ್ನು ಹೊಂದಿದೆ.
ಚ೦ದ್ರಗುಪ್ತ ಮೌರ್ಯನಾಳಿದ ಬಲಾಢ್ಯ ಮತ್ತು ಅಖ೦ಡ ಭಾರತವರ್ಷದ ಈ ನಕಾಶೆ ( 265 B C )ಯನ್ನು ನೋಡಿದರೇ ನಿಮಗೆ ಅರ್ಥವಾಗುತ್ತದೆ...ಹಿ೦ದೆ ಹಿ೦ದೂ ಸಾಮ್ರಾಜ್ಯ ಎಷ್ಟು ಬಲಿಷ್ಟ ವಾಗಿತ್ತು ಎ೦ಬುದು...
ಅದಕ್ಕೇ ಕವಿಯೊಬ್ಬ ಕರೆಕೊಡುತ್ತಾನೆ..."ಜಾತಿ" ಎಂಬ ಕೊಳೆಯನ್ನೇ ಮೆತ್ತಿಕೊಂಡು ನಾವು ಬದುಕಿರುವಷ್ಟು ದಿನ "ಶೂದ್ರ"ರಾಗಿಯೇ ಇರುತ್ತೇವೆ. ಆ 'ಜಾತಿ'ಯ ಹೊಲಸು ವ್ಯಾಪಾರದಿಂದಲೇ 'ಲಾಭ' ಮಾಡಿಕೊಳ್ಳಬಹುದೆನ್ನುವ ನೀಚ 'ವೈಶ್ಯ' ಬುದ್ಧಿ ನಮಗೇಕೆ ಬಂತೋ ನಾನರಿಯೆ. ಈಗ ಅವಶ್ಯಕತೆಯಿರುವುದು ಆ 'ಜಾತಿ'ಯೆನ್ನುವ ಶತ್ರುವನ್ನು ಹೊಡೆದೋಡಿಸುವ "ಕ್ಷತ್ರಿಯ" ಮನಸ್ಸು. ನಮಗಿದೆಯೇ? ಈ ಆಶಯವನ್ನು ಬೆಳೆಸಿಕೊಂಡು "ಬ್ರಹ್ಮತ್ವ" ಪಡೆಯೋಣವೇ, ಸಾಧ್ಯವಾದಷ್ಟು ಮಟ್ಟಿಗೆ "ಬ್ರಾಹ್ಮಣ"ರಾಗೋಣ ಬನ್ನಿ ಎಲ್ಲಾ ತೊಳೆದು, ಎಲ್ಲ ಮಾರಿ, ಎಲ್ಲೆ ಮೀರಿ!...
ಇದರಲ್ಲೇ ತಿಳಿಯುತ್ತದೆ ಈ ಜಾತಿ ಪದ್ದತಿಯ ಉಗಮವಾಗಿದ್ದು ಹುಟ್ಟಿನಿ೦ದಲ್ಲ ... ಬದಲಿಗೆ ಅವರವರ ಕೆಲಸಗಳಿ೦ದ....ಎ೦ದು
ಆದರೆ ಮು೦ದೆ ಮನುಷ್ಯನ ದುರಾಸೆ ಮತ್ತು ಅಹ೦ ಗಳಿ೦ದ ಈ ವರ್ಣಗಳೆಲ್ಲ ಹುಟ್ಟಿನಿ೦ದ ಬ೦ದವುಗಳೆನ್ನಿಸಿಕೊಳ್ಳಹತ್ತಿದವು. ಶೂದ್ರರು ವೇದಾಧ್ಯಯನ ಮಾಡಬಾರದೆ೦ಬ ಕಟ್ಟಳೆ ಬ್ರಾಹ್ಮಣ ರೆನ್ನಿಸಿಕೊ೦ಡವರಿ೦ದಾರೆ, ವೈಶ್ಯರಿಗೆ ವ್ಯಾಪಾರ ರುಚಿಸಿ, ರಾಜ್ಯ ರಕ್ಷಣೆ ಮತ್ತು ರಾಷ್ಟ್ರ ರಕ್ಷಣೆಗಳ೦ತಹ ಸಾಹಸದ ಕೆಲಸಗಳೆಲ್ಲ ಕ್ಷತ್ರೀಯರ ಪಾಲಾದವು.
ಇದರ ಜೊತೆ ಭಾರತ ದೇಶವೆ೦ಬ ಬ್ರಹತ್ ಹಿ೦ದೂಗಳ ದೇಶವನ್ನು ಆಕ್ರಮಣಗಳ ಮೂಲಕ ಲ೦ಘಿಸಿ ಆಳಿದ ಮೊಗಲರು , ಮತ್ತು ಬ್ರಿಟೀಷರು ಈ ವರ್ಣ ಬೇಧನೀತಿಯನ್ನು ಮತ್ತಷ್ಟು ಉಜ್ವಲಗೊಳಿಸಿ ತಮ್ಮ ಬೇಳೆ ಬೇಯಿಸಿಕೊ೦ಡರು. ಅದಕ್ಕೆ " ಕೈ " ಗೂಡಿಸಿದವರು ನಮ್ಮವರೇ ಆದ ಕೆಲ " ಮೀರಸಾಧಕ " ರು. ಈ " ಮೀರಸಾಧಕರ " ಕ್ರಪೆಯಿ೦ದ ಇ೦ದು ಹಿ೦ದೂ ಧರ್ಮವೆ೦ಬುದು ನೂರಾರು ಜಾತಿ, ಉಪಜಾತಿಗಳ ಕಲಸ ಮೇಲೋಗರವಾಗಿ ತನ್ನ ಒಗ್ಗಟ್ಟನ್ನೂ , ಬಲವನ್ನೂ , ಕ್ಷಾತ್ರವನ್ನೂ ಕಳೆದುಕೊ೦ಡು ತನಗಿ೦ತ ೨೦೦೦ ವರ್ಷಗಳ ನ೦ತರ ಹುಟ್ತಿಕೊ೦ಡ ಕೆಲ ಧರ್ಮಗಳ ಹಿ೦ಬಾಲಕರಿಗೆ ಹೆದರಿ ಬಾಳುವ ಪರಿಸ್ಥಿತಿಗೆ ಬ೦ದಿದೆ. ಈ ರೀತಿ ಹಿ೦ದುತ್ವಕ್ಕೆ ಬೆ೦ಕಿಹಚ್ಚಿದ ಮೀರಸಾಧಕರು ಆ ಬೆ೦ಕಿಯಲ್ಲಿ ಮೈಕಾಯಿಸಿಕೊಳ್ಳುತ್ತಾ ಹಾಯಾಗಿ ರಾಜ್ಯಗಳನ್ನೂ ರಾಷ್ಟ್ರಗಳನ್ನೂ ಆಳುತ್ತಿದ್ದಾರೆ. ತಮ್ಮ ಆಡಳಿತಕ್ಕೆ ಭ೦ಗ ಬ೦ದಾಗಲೆಲ್ಲ ಈಗಾಗಲೇ ಒಡೆದಿರುವ ಹಿ೦ದುತ್ವವನ್ನು ಮತ್ತಷ್ಟು ಉಪಜಾತಿಗಳ ಹೆಸರಿನಲ್ಲಿ , ಮೀಸಲಾತಿಗಳ ಹೆಸರಿನಲ್ಲಿ ಒಡೆದಾಳುತ್ತ ಹೇ೦ಕಾರ ಮಾಡುತ್ತಿದ್ದಾರೆ.
ಹಾಗಿದ್ದರೆ ಹೀಗೆ ತನ್ನ ಒಗ್ಗಟ್ಟನ್ನೂ , ಕ್ಷಾತ್ರವನ್ನೂ ಕಳೆದುಕೊ೦ಡಿರುವ ಹಿ೦ದೂ ಧರ್ಮ ಮತ್ತೆ ಪುನರುಥ್ಹಾನ ವಾಗಿ ಮತ್ತೆ ವಿಶ್ವಭ್ರಾತತ್ವದ ಉದಾಹರಣೆಯಾಗಿ ಬಾಳುವುದು ಹೇಗೇ...?
ಅದಕ್ಕೆ ಸ್ವಾಮಿ ವಿವೇಕಾನ೦ದರ೦ಥ ಮತ್ತೊಬ್ಬ ವೀರ ಸನ್ಯಾಸಿಯ ಆಗಮನವೇ ಆಗಬೇಕು....
ಒಡೆದಾಳುವವರ " ಕೋಮುವಾದಿ " ಎ೦ಬ ಬೊಗಳೆಗೆ ಬಗ್ಗದೇ ಅಖ೦ಡ ಹಿ೦ದೂಗಳನ್ನು ಒ೦ದು ಗೂಡಿಸಿ ನಮ್ಮ ದೇಶವನ್ನು ನಿಜವಾದ ಅರ್ಥದಲ್ಲಿ " ಹಿ೦ದೂಸ್ತಾನ " ವನ್ನಾಗಿ ಮಾಡಬಲ್ಲ ಮಾನಸಿಕ ಶಕ್ತಿಯಿರುವ ವ್ಯಕ್ತಿಯೊಬ್ಬ ಈ ದೇಶದ ಸರ್ವೋಚ್ಚಸ್ಥಾನವನ್ನಲ೦ಕರಿಸ ಬೇಕು....
ಮು೦ದಿನ ಚುನಾವಣೆಯಲ್ಲಿ ಅದಾಗಬಹುದೇ ಎ೦ಬುದೇ ಈಗಿನ ಪ್ರಶ್ನೆ....
Play The Real Money Slot Machines - Trick-Taking Game - Trick-Taking
ReplyDeleteHow to Play. wooricasinos.info Play The https://tricktactoe.com/ Real Money Slot Machine. If you are searching for a fun, exciting casinosites.one game ventureberg.com/ to play online, dental implants we have you covered.