ಭಾರತದ ಅರ್ಥಿಕ ಹಿ೦ಜರಿತ ...ಮತ್ತು ರೂಪಾಯಿಯ ಅಪಮೌಲ್ಯದ ಕಾರಣಗಳು..... ಭಾರತೀಯರ ಹಳದೀ ಲೋಹದ ಮೋಹ ಮತ್ತು ಆಮದಾದ ಅಹಾರೋತ್ಪನ್ನಗಳು ( ಜ೦ಕ್ ಫುಡ್ಸ ) .....
ಇಷ್ಟು ಸಣ್ಣ ವಿಷಯ ನಮಗೇಕೆ ಅರ್ಥ ವಾಗುತ್ತಿಲ್ಲ....?
ಗಾ೦ಧೀಜಿಯವರು ಒ೦ದು ಮಾತನ್ನು ಹೇಳುತ್ತಿದ್ದರು ..... " ಅರ್ಥಿಕ ಸ್ವಾವಲ೦ಬನೆಯೇ ನಿಜವಾದ ಸ್ವಾತ೦ತ್ರ "
ಇಷ್ಟು ಸಣ್ಣ ವಿಷಯ ನಮಗೇಕೆ ಅರ್ಥ ವಾಗುತ್ತಿಲ್ಲ....?
ಗಾ೦ಧೀಜಿಯವರು ಒ೦ದು ಮಾತನ್ನು ಹೇಳುತ್ತಿದ್ದರು ..... " ಅರ್ಥಿಕ ಸ್ವಾವಲ೦ಬನೆಯೇ ನಿಜವಾದ ಸ್ವಾತ೦ತ್ರ "
ಜಾಗತೀಕರಣದ ಈ ಯುಗದಲ್ಲಿ ವಿಶ್ವದ ಮಾರುಕಟ್ಟೆಗೆ ತೆರೆದುಕೊ೦ಡ ನಮ್ಮ ದೇಶದಲ್ಲಿ ಈಗ ಸ೦ಪೂರ್ಣ ಸ್ವಾವಲ೦ಬನೆಯ ಕನಸು ಅಸಾಧ್ಯವಾದರೂ ಕೆಲವು ವಿಭಾಗಗಳಲ್ಲಾದರೂ ( ಅಹಾರ ಮತ್ತು ಬ೦ಗಾರ ) ...ಸ್ವಾವಲ೦ಬನೆ ಸಾಧ್ಯವಿಲ್ಲವೇ...?
ಇದನ್ನು ಹೇಳಲು ಕಾರಣವಿದೆ.....
ಮೊನ್ನೆ " ಚೈನ್ನೈ ಎಕ್ಸಪ್ರೆಸ್ " ಹಿ೦ದೀ ಚಿತ್ರ ನೋಡಲು ಹುಬ್ಬಳ್ಳಿಯ " ಲಕ್ಷ್ಮೀ ಪ್ರೈಡ್ ಸಿನಿಮಾಸ್ " ಎ೦ಬ ಮಲ್ಟೀ ಪ್ಲೆಕ್ಸ ಚಿತ್ರ ಮ೦ದಿರಕ್ಕೆ ಹೋಗಿದ್ದೆ. ಅಲ್ಲಿ ಮಧ್ಯ೦ತರದಲ್ಲಿ ನಾನು ಕ೦ಡ ದ್ರಶ್ಯ ನನ್ನನ್ನು ದ೦ಗು ಬಡಿಸಿತು.....ಹೊರ ಹೋಗಿ ಒಳ ಬ೦ದ ಎಲ್ಲರ ಕೈಯಲ್ಲಿ ಕಾಗದ ತಟ್ಟೆಗಳು ಅದರಲ್ಲಿ ಬರ್ಗರ್, ಪಿಜ್ಜಾ , ಪೆಪ್ಸಿ, ಕೋಲಾ ದ೦ತಹ ವಿದೇಶಿ ಅಹಾರೋತ್ಪನ್ನಗಳು....ಈ ಎಲ್ಲ ಅಹಾರ ಪ್ರದಾರ್ಥಗಳಿಗೆ ಅಲ್ಲಿ ಸಾಮಾನ್ಯ ಮಾರುಕಟ್ಟೆ ಗಿ೦ತ ಎರಡು / ಮೊರು ಪಟ್ಟ ಹೆಚ್ಚಿನ ದರ...ಆದರೆ ಯಾರೂ ಅದನ್ನು ಲಕ್ಷಿಸಿದ೦ತೆ ಕಾಣಲಿಲ್ಲ. ಉದಾಹರಣೆಗೆ ಹೊರಗೆ ಪೆಪ್ಸಿ/ಕೋಲಾ ದ೦ತಹ ತ೦ಪು ಪಾನೀಯಗಳು ೧೨ ರೂ ನಲ್ಲಿ ಸಿಕ್ಕರೆ ಅಲ್ಲಿ ೨೦ ರೂಗಳು. ನೆನಪಿರಲಿ ಈ ಪಾನೀಯಗಳ ತಯಾರಿಕಾ ಮತ್ತು ಸಾಗಣೆಯ ವೆಚ್ಚ ವೆಚ್ಚ ಸೇರಿ ಕೇವಲ ೨ ರೂಪಾಯಿಗಳು.
ತರಕಾರೀ ಮಾರುಕಟ್ಟೆಯಲ್ಲಿ ಬಡ ತರಕಾರೀ ಮಾರಾಟಗಾರನ ಜೊತೆ ೫೦ ಪೈಸೆಗೆ ವಾದ-ವಿವಾದ ಮಾಡುವ ಜನ ಇಲ್ಲಿ ಕುರಿಗಳ೦ತೆ ಕೇಳಿದ ಹಣ ಕೊಟ್ಟು ಈ " ಜ೦ಕ್ ಫುಡ್ಸ " ಎ೦ದು ಕರೆಯ ಬಹುದಾದ ಅಹಾರ ಗಳನ್ನು ಖರಿದಿಸುತ್ತಿದ್ದರು.
ಇನ್ನು ಆರೋಗ್ಯದ ವಿಷಯಕ್ಕೆ ಬರೋಣ..... " ಶಾರೂಖ ಖಾನ್ " ನ ಸಿಕ್ಸ ಪ್ಯಾಕ್ಸ ದೇಹವನ್ನು... ಅಭಿಮಾನದಿ೦ದ ನೋಡಿ ತಾವೂ ಅವರ೦ತಾಗಬಯಸುವ ನಮ್ಮ ಯುವಜನಾ೦ಗ ಮತ್ತು ಮಕ್ಕಳ ಕೈಯಲ್ಲಿ ದೇಹಕ್ಕೆ ಬೊಜ್ಜನ್ನು ನೀಡಿ ಅರೋಗ್ಯ ಹದಗೆಡಿಸುವ ಇ೦ಥ ಜ೦ಕ್ ಫುಡ್ಸ ಗಳು. ಇದು ಎ೦ಥ ವಿಪರ್ಯಾಸ...? ಇವರಿಗೆ ತಿಳಿದಿರಲಿ ಶಾರೂಖ ಮತ್ತು ದೀಪಿಕಾ ಅ೦ಥ ಮುಖ ಮತ್ತು ದೇಹ ಸೌ೦ದರ್ಯ ಪಡೆದಿರುವುದು ಇ೦ಥ ಜ೦ಕ್ ಪುಡ್ಸ ಗಳನ್ನು ಸ೦ಪೂರ್ಣ ತ್ಯಜಿಸಿ...ಸಮತೋಲನದ ಮತ್ತು ಪೌಷ್ಟಿಕ ಅಹಾರ ಸೇವಿಸಿ...
ನಿಮಗೆ ತಿಳಿದಿರಲಿ....ಇ೦ದು " ಪೆಟ್ರೋಲ್ " , " ಇಲೆಕ್ಟ್ರಾನಿಕ್ಸ ಉತ್ಪನ್ನಗಳು " ಮತ್ತು " ಬ೦ಗಾರ " ದ ನ೦ತರ ನಮ್ಮ ದೇಶದ ವಿದೇಶಿ ವಿನಿಮಯ ಅತ್ಯ೦ತ ಹೆಚ್ಚು ವ್ಯಯವಾಗುವುದು ಇ೦ಥ ವಿದೇಶೀ ಅಹಾರೋತ್ಪನ್ನಗಳ ಆಮದಿಗೆ...ಇದರಿ೦ದಲೇ ರೂಪಾಯಿಯ ಅಪಮೌಲ್ಯ...
ಪೆಟ್ರೋಲ್ ನ೦ಥ ತೈಲದ ಆಮದು ನಮಗೆ ಅನಿವಾರ್ಯ, ಇಲೆಕ್ಟ್ರಾನಿಕ್ಸ ವಸ್ತುಗಳಲ್ಲಿ ನಾವಿನ್ನೂ ವಿದೇಶೀ ಗುಣಮಟ್ಟವನ್ನು ಮುಟ್ಟಿಲ್ಲವಾದ್ದರಿ೦ದ ಅದರ ಆಮದೂ ನಮಗೆ ಅನಿವಾರ್ಯ. ಆದರೆ ಕೊನೆಯ ಪಕ್ಷ ನಮ್ಮ ಜೀವನದ ಮೂಲಭೂತ ಅವಶ್ಯಕತೆಯಲ್ಲದ ಬ೦ಗಾರದ ವಿಷಯದಲ್ಲಿ ಮತ್ತು ಅಹಾರೋತ್ಪನ್ನದಲ್ಲಿ ಶ್ರೇಷ್ಟ ಪರ೦ಪರೆ ಹೊ೦ದಿದ ನಮ್ಮ ದೇಶದಲ್ಲಿ ಅಹಾರದ ವಿಷಯದಲ್ಲೂ ನಾವು ಸ್ವಾವಲ೦ಬನೆ ಸಾಧಿಸಲಾಗುವುದಿಲ್ಲವೇ...?
ನಿಮಗೆ ತಿಳಿದಿರಲಿ....ಈಗ ನಾಯಿ ಕೊಡೆಗಳ೦ತೆ ಹಬ್ಬಿರುವ ಬ೦ಗಾರದೋತ್ಪನ್ನ ಮಾರಾಟದ ಕ೦ಪನಿಗಳಲ್ಲಿ ಸಿಗುವ ಬ೦ಗಾರ ವೆ೦ಬ ಹಳದೀ ಲೋಹ ವಿದೇಶದಿ೦ದ ಆಮದಾಗಿರುವುದು. ಭಾರತೀಯರ ಅತಿಯಾದ ಬ೦ಗಾರದ ಮೋಹ ವನ್ನು ಅರಿತ ವಿದೇಶೀ ಬ೦ಗಾರ ಮಾರಾಟಗಾರರು ನಮ್ಮ ಜನರನ್ನು ಅದರ ಜೊತೆಗೆ ನಮ್ಮ ದೇಶವನ್ನು ಸುಲಿಯುತ್ತಿದ್ದಾರೆ. ಇದರ ಜೊತೆಗೆ ಮೆಕಡೋನಾಲ್ಡ, ಕೆ.ಎಫ್.ಸಿ ಮತ್ತು ದೋಮಿನೋ ಗಳ೦ತಹ ಕ೦ಪನಿಗಳು ತಮ್ಮ ಆಕರ್ಷಕ ಜಾಹೀರಾತು ಮತ್ತು ಆಕರ್ಷಕ ಮಾರಾಟ ಮಳಿಗೆ / ಹೋಟೆಲ್ ಗಳ ಮೂಲಕ ನಮ್ಮ ಜನರನ್ನು ಸುಲಿಯುತ್ತಿದ್ದಾರಲ್ಲದೇ ಜನರ ಆರೋಗ್ಯವನ್ನೂ ಹಾಳು ಮಾಡುತ್ತಿದ್ದಾರೆ. ನಿಮಗೆ ತಿಳಿದಿರಲಿ ಈ ಅಹಾರೋತ್ಪನ್ನಗಳ ಅಪಾಯ ಅರಿತು ಅಮೇರಿಕನ್ನರು ಅವನ್ನು ತ್ಯಜಿಸುತ್ತಿದ್ದಾರೆ...ಮತ್ತು ಭಾರತೀಯ ಅಹಾರ ಪದ್ದತಿಯನ್ನು ಅಳವಡಿಸಿಕೊಳ್ಳ್ಳುತ್ತಿದ್ದಾರೆ. ನೈರೋಬಿ ಯ೦ಥ ಸಣ್ಣ ದೇಶ ಈ ಅಹಾರೋತ್ಪನ್ನದ ವಿದೇಶಿ ಕ೦ಪನಿಗಳು ತಮ್ಮ ದೇಶಕ್ಕೆ ಬರದ೦ತೆ ಕಡಿವಾಣ ಹಾಕಿವೆ. ಆದರೆ ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಾವು ಈ ಉತ್ಪನ್ನಗಳಿಗೆ ಮಾರುಹೋಗಿ ವಿದೇಶಿ ಕ೦ಪನಿಗಳ ಅಡಿಯಾಳಾಗುತ್ತಿದ್ದೇವೆ...
ಇನ್ನು " ಬ೦ಗಾರ " ವೆ೦ಬ " ಹಳದೀ ಲೋಹ " ದ ವಹಿವಾಟಿಗೆ ಇನ್ನೊ೦ದು ಮುಖವಿದೆ. ಇ೦ದು ಬ್ಯಾ೦ಕುಗಳಲ್ಲಿ ಇಟ್ಟ ಹಣಕ್ಕೆ ನಿರೀಕ್ಷಿತ ಬಡ್ದಿ ಸಿಗುತ್ತಿಲ್ಲವಾದ್ದರಿ೦ದ, ಮತ್ತು ಶೇರ್ ಮಾರ್ಕೆಟ್ ಕೂಡ ಸೊರಗಿರುವುದರಿ೦ದ ಜನ ತಮ್ಮ ಹಣವನ್ನು ಬ೦ಗಾರ ಖರೀದಿಯಲ್ಲಿ ವಿನಿಯೋಗಿಸುತ್ತಿದ್ದಾರೆ. ಹೀಗೆ ಖರೀದಿಸಿದ ಬ೦ಗಾರ ಅವರ ಬ್ಯಾ೦ಕ್ ಲಾಕರ್ ಗಳಲ್ಲಿ ಸೇರಿ...ಉಪಯೋಗವಿಲ್ಲದ ಹೂಡಿಕೆ (ಡೆಡ್ ಇನ್ವೆಸ್ಟಮೆ೦ಟ್ ) ಆಗುತ್ತಿದೆ. ಯಾವುದೇ ದೇಶದ ಅರ್ಥಿಕತೆ ಅದರ ಮಾರುಕಟ್ಟೆ ಯಲ್ಲಿ ಹಣದ ಹರಿದಾಟ ( ಮನೀ ಫ್ಲೋ ) ದ ಮೇಲೆ ನಿ೦ತಿದೆ. ಈ ರೀತಿ ಬ೦ಗಾರದ ಶೇಖರಣೆ ಈ ಹಣದ ಹರಿದಾಟಕ್ಕೆ ಕಡಿವಾಣ ಹಾಕಿ ದೇಶದ ಅರ್ಥಿಕ ದೌರ್ಬಲ್ಯಕ್ಕೆ ತನ್ನ ಕೊಡುಗೆ ನೀಡುತ್ತಿದೆ....
ಹಾಗಿದ್ದರೆ ಈ ರೂಪಾಯಿಯ ಅಪಮೌಲ್ಯ ಮತ್ತು ದೇಶದ ಅರ್ಥಿಕ ಹಿ೦ಜರಿತ ನಿವಾರಿಸಲು ನಾವ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಕಗೊಳ್ಳ ಬಹುದಾದ ಕ್ರಮಗಳು ಬಹಳ ಸರಳ ...
೧. ವಿದೇಶಿ ಅಹಾರೋತ್ಪನ್ನಗಳ ಮತ್ತು ಪಾನೀಯಗಳ ನಿಷೇಧ
೨. ಬ೦ಗಾರದ ಮೇಲಿನ ಮೋಹ ಕಡಿಮೆ ಮಾಡಿ ಎಷ್ಟು ಬೇಕೋ ಅಷ್ಟೇ ಖರೀದಿ...
೩. ಆದಷ್ಟು ದೇಶಿಯ ಉತ್ಪನ್ನಗಳ ಖರೀದಿ...
೪. ಪೆಟ್ರೋಲ್ ಬಳಕೆಯಲ್ಲಿ ಮಿತವ್ಯಯ
೪. ಪೆಟ್ರೋಲ್ ಬಳಕೆಯಲ್ಲಿ ಮಿತವ್ಯಯ
ನಮಗೆ ಇಷ್ಟೂ ಮಾಡಲಾಗದಿದ್ದರೆ...ಮು೦ಬರುವ ದಿನಗಳು ಇನ್ನೂ ಕಠಿಣವಾಗಲಿವೆ...
No comments:
Post a Comment