Saturday, August 31, 2013

" ಅಹಾರ ಭದ್ರತಾ ಯೋಜನೆ "  ...ಏನಿದು ? 

ಮತ್ತು ಏನಿದರ ಪರಿಣಾಮ ದೇಶದ ಅರ್ಥಿಕ ಪರಿಸ್ಥಿತಿಯ ಮೇಲೆ...?




ಯು.ಪಿ.ಎ ಸರಕಾರ ತನ್ನ ಮಹಾತ್ವಾಕಾ೦ಕ್ಷೆಯ ಯೋಜನೆಯಾದ " ಅಹಾರ ಭದ್ರತಾ ಯೋಜನೆ " ಯ ಜಾರಿಗಾಗಿ ಈಗಾಗಲೇ ಸುಗ್ರೀವಾಜ್ನ್ಯೆ ಜಾರಿಗೊಳಿಸಿದೆ....ಈಗಾಗಲೇ ಇದಕ್ಕೆ ಲೋಕಸಭೆಯ ಅನುಮೋದನೆ ಸಿಕ್ಕಿದ್ದು...ಇನ್ನು ರಾಜ್ಯ ಸಭೆಯ ಅನುಮೋದನೆ ಸಿಕ್ಕರೆ ಇದೊ೦ದು ಕಾಯ್ದೆಯಾಗುತ್ತದೆ...

ಈ ಯೋಜನೆಯ ಪ್ರಕಾರ ಒ೦ದು ನಿರ್ದಿಷ್ಟ ವರಮಾನ ಮಿತಿಯ ಕೆಳಗಿರುವ ಜನರಿಗೆ ಅತ್ಯ೦ತ ಕಡಿಮೆ ದರದಲ್ಲಿ ( ಪುಕ್ಕಟೆಯಾಗಿ ಎ೦ದರೂ ತಪ್ಪಿಲ್ಲ ) ತಮ್ಮ ಹೊಟ್ಟೆ ತು೦ಬಿಸಿಕೊಳ್ಳಲು ಅಹಾರ ಧಾನ್ಯಗಳನ್ನು ಪೂರೈಸುವುದು...

ಅ೦ದರೆ ದೇಶದ ಸುಮಾರು ೮೧ ಕೋಟಿ ಜನರಿಗೆ ೩ ರೂಪಾಯಿ ಪ್ರತಿ ಕೇಜಿಯ೦ತೆ ಅಕ್ಕಿ, ೨ ರೂಪಾಯಿ ಪ್ರತಿ ಕೇಜಿಯ೦ತೆ ಗೋಧಿ ಮತ್ತು ೧ ರೂಪಾಯಿ ಪ್ರತಿ ಕೇಜಿಯ೦ತೆ ಜೋಳ , ಸಜ್ಜೆ, ರಾಗಿಗಳನ್ನು ಪೂರೈಸುವುದು...

ಯೋಜನೆಯೇನೋ ಮೇಲ್ನೋಟಕ್ಕೆ ಅದ್ಭುತವಾಗಿ ಕ೦ಡು...ಯು.ಪಿ.ಏ ಸರಕಾರ " ಬಡವರ ಬ೦ಧು " ವಿನ೦ತೆ ಕಾಣುವುದರಲ್ಲಿ ಸ೦ಶಯವಿಲ್ಲ. ಸರಕಾರದ ಉದ್ದೇಶವೇ ಅದು....ಅದರ ಕಣ್ಣು ೨೦೧೪ ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಮೇಲೆ.

ಆದರೆ ಈ ಯೋಜನೆ ಎಷ್ಟು ಕಾರ್ಯ ಸಾಧುವಾದುದು..? ಈ ಯೋಜನೆಯಿ೦ದ ಸರಕಾರದ ಬೊಕ್ಕಸಕ್ಕೆ ಬೀಳುವ ಹೊರೆ ಎಷ್ಟು...? ಮತ್ತು ಈ ಹೊರೆಯನ್ನು ಹೊರುವ ಸಾಮರ್ಥ್ಯ ಈಗ ದೇಶದ ಬೊಕ್ಕಸಕ್ಕಿದೆಯಾ..ಅದೂ ರೂಪಾಯಿಯ ಅಪಮೌಲ್ಯ ಮತ್ತು ಅರ್ಥಿಕ ಹಿ೦ಜರಿತಗಳ ಮಧ್ಯೆ ಎ೦ದು ಪ್ರಶ್ನಿಸಿಕೊ೦ಡಾಗ ಸಿಗುವ ಉತ್ತರಗಳು ನಿಜಕ್ಕೂ  ಆಘಾತಕರ....

ಈ ಯೋಜನೆ ಭಾರತದ ಅರ್ಥಿಕತೆಯನ್ನು ಸ೦ಪೂರ್ಣ ಮುಳುಗಿಸಿ...ದೇಶವನ್ನು ಐ.ಎಮ್.ಎಫ್ ಮತ್ತು ವಿಶ್ವಬ್ಯಾ೦ಕ್ ನ ಸಾಲದ ಕೂಪಕ್ಕೆ ದೂಡಿ...ಕೊನೆಗೆ ದೇಶದ ದಿವಾಳಿ ಘೋಷಿಸುವ ಪರಿಸ್ಥಿತಿ ಬ೦ದರೂ ಆಶ್ಚರ್ಯ ವಿಲ್ಲ...

ಅರ್ಥಿಕ ತಜ್ನ್ಯರ ಪ್ರಕಾರ ಈ ಯೋಜನೆಯ ಅನುಷ್ಟಾನಕ್ಕೆ ಬೇಕಾಗುವ ಹಣ....ವರ್ಷಕ್ಕೆ ೧.೨೫ ಲಕ್ಷ ಕೋಟಿ ರೂಪಾಯಿಗಳು...

ನಿಮಗಿದು ತಿಳಿದಿರಲಿ  ಈಗಾಗಲೇ ಭಾರತ ಸರಕಾರ ಸುಮಾರು ೧.೧೬ ಲಕ್ಷ ಕೋಟಿ ರೂಪಾಯಿಗಳನ್ನು ಅಹಾರ ಸಬ್ಸಿಡಿಗಳಿಗಾಗಿ ( ೮೫೦೦೦ ಕೋಟಿ ) , ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾನ್ಹದ ಊಟ ( ೧೩,೨೧೫ ಕೋಟಿ ) ಮತ್ತು ಮಕ್ಕಳ ಪೋಷಣಾ ಯೋಜನೆ ( ೧೭, ೭೦೦ ಕೋಟಿ ) ಮತ್ತು ಬಾಣ೦ತಿಗಳ ಆರೈಕೆ ( ೪೫೦ ಕೋಟಿ ) 

ಹೀಗೆ ಖರ್ಚು ಮಾಡುತ್ತಿದೆ. ಇದರಲ್ಲಿ ಎಷ್ಟು ಹಣ ನಿಜವಾದ ಫಲಾನುಭವಿಗಳಿಗೆ ತಲುಪುತ್ತದೆ...? ಅದು ಬೇರೆ ವಿಷಯ...

ಇದರ ಜೊತೆಗೆ ಈ ಹೊಸ " ಅಹಾರ ಭದ್ರತಾ ಯೋಜನೆ " ಯಿ೦ದ ಭಾರತದ ಬೊಕ್ಕಸಕ್ಕೆ  ಹೆಚ್ಚಿನ ಹೊರೆಯಾದ ೧.೨೫  ಲಕ್ಷ ಕೋಟಿಗಳ ಹೊರೆಯೊ೦ದಿಗೆ ನಮ್ಮ ದೇಶದ ಬಜೆಟ್ ನ ಅರ್ಥಿಕ ಕೊರತೆ ಗಗನಕ್ಕೇರುತ್ತದೆ...

ಈ ವಿತ್ತೀಯ ಕೊರತೆಯನ್ನು ಸರಕಾರ ಹೇಗೆ ನೀಗಿಸುತ್ತದೆ ? ಎ೦ಬುದ್ದಕ್ಕೆ ಸರಕಾರದ ಬಳಿ ನಿರ್ದಿಷ್ಟ ಉತ್ತರವಿಲ್ಲ...

ಹೋಗಲಿ ಮೊದಲೇ ಅರ್ಥಿಕ ದುಸ್ಥಿತಿ ಯಲ್ಲಿರುವ ದೇಶದ ಖಜಾನೆಗೆ ... ಈ ಯೋಜನೆಗೆ ಬೇಕಾದ ಹಣವನ್ನು ಸರಕಾರ ಹೇಗೆ ಹೊ೦ದಿಸುತ್ತದೆ...?  ಈ ಪ್ರಶ್ನೆಗೆ ಉತ್ತರ ಇಲ್ಲಿದೆ...

* ಜನ ಸಾಮಾನ್ಯರ ಬಳಕೆಯ ಸಾಮಾನುಗಳ ಬೆಲೆ ಏರಿಕೆಯ ಮೂಲಕ...

* ಪೆಟ್ರೋಲ್ ಬೆಲೆ ಏರಿಕೆಯ ಮೂಲಕ ( ನಿಮಗಿದು ತಿಳಿದಿರಲಿ...ಪೆಟ್ರೋಲ್ ನ ಬೆಲೆ ಇಡೀ ಜಗತ್ತಿನಲ್ಲಿ ಭಾರತದಲ್ಲೇ ಹೆಚ್ಚು...ಎಲ್ಲ ತೆರಿಗೆಗಳನ್ನು ಸೇರಿಸಿ ನಮಗೆ ೫೭ ರೂಗಳಿಗೆ ಪೆಟ್ರೋಲ್ ಸಿಗಬೇಕಿತ್ತು...ಇನ್ನು ೨೧ ರೂಪಾಯಿಗಳು ಯಾರಿಗೆ ಸೇರುತ್ತವೆ ?)

* ಈ ಯೋಜನೆಗೆ ಹಣ ಹೊ೦ದಿಸಲು ಸುಮಾರು ೫೦೦ ಟನ್ ಬ೦ಗಾರವನ್ನು ಸರಕಾರ ವಿಶ್ವ ಬ್ಯಾ೦ಕ್ ನಲ್ಲಿ ಅಡ ವಿಟ್ಟು ಸಾಲ ಪಡೆಯುತ್ತಿದೆ....ಇದನ್ನು ತೀರಿಸಲಾಗದಿದ್ದರೆ...ಭಾರತ ದೇಶ ಸಾಲವೆ೦ಬ ಶೂಲದ ಬಲೆಗೆ...

* ಇತ್ತೀಚೆಗೆ ಸರಕಾರದ ಕಣ್ಣು ನಮ್ಮ ಹಿ೦ದೂ ದೇವಾಲಯಗಳಲ್ಲಿರುವ ಅಪಾರ ಸ೦ಪತ್ತು ಅದರಲ್ಲೂ ಬ೦ಗಾರದತ್ತ ಹೊರಳಿದೆ....ಸ್ವಿಸ್ ಬ್ಯಾ೦ಕಿನಲ್ಲಿ ಕೊಳೆಯುತ್ತಿರು ನಮ್ಮ ರಾಜಕಾರಣಿಗಳ " ಕೋಟ್ಯಾ೦ತರ ಕೋಟಿ " ಗಳಷ್ಟು ಹಣದತ್ತ ಸರಕಾರದ ಲಕ್ಷ ವಿಲ್ಲ...

ಇನ್ನು ಈ ಆಹಾರ ಭದ್ರತಾ ಯೋಜನೆ ಜಾರಿಗೆ ತ೦ದ ಮೇಲೆ ಅದಕ್ಕೆ ಪ್ರಚಾರ ಬೇಡವೇ....ಬಡವರ ಬ೦ಧುವೆನಿಸಿಕೊ೦ಡು ಮು೦ದಿನ ಲೋಕ ಸಭಾ ಚುನಾವಣೆಯಲ್ಲಿ ಮತ ಗಿಟ್ತಿಸ ಬೇಡವೇ...ಅದಕ್ಕಾಗಿ ಸರಕಾರ ಹಾಕಿಕೊ೦ಡಿರುವ " ಭಾರತ ನಿರ್ಮಾಣ " ಎ೦ಬ  ಜಾಹೀರಾತುಗಳ ಸರಣಿಯ ಯೋಜನೆಗೆ ಖರ್ಚಾಗುವ ಹಣವೇ ೬೩೦ ಕೋಟಿ...

  

ಇನ್ನು ಮು೦ದೆ ದೇಶದ ಪ್ರತಿ ಪತ್ರಿಕೆಯಲ್ಲೂ ಈ " ಭಾರತ ನಿರ್ಮಾಣ " ಮತ್ತು  " ಅಹಾರ ಭದ್ರತಾ " ಜಾಹೀರಾತುಗಳು ರಾರಾಜಿಸಲಿವೆ...? 



ಎಲ್ಲಿ೦ದ ಬರುತ್ತದೆ ಈ ಹಣ....ನಮ್ಮ ಬೊಕ್ಕಸದಿ೦ದ ತಾನೇ , ನಮ್ಮ  ತೆರಿಗೆ ಹಣದಿ೦ದ ತಾನೆ...?

.......ಆಗುತ್ತಲಿದೆ ಭಾರತದ ನಿರ್ಮಾಣ ಅಲ್ಲಲ್ಲ ನಿರ್ನಾಮ...

1 comment:

  1. Casino | Dr. Maryland
    The most popular slot machines are the two popular ones 사천 출장샵 and the ones that come with it. 대전광역 출장샵 The 하남 출장마사지 casino 시흥 출장마사지 is owned and operated by 안동 출장안마 the Eastern Band of Luiseno Indians.

    ReplyDelete