Tuesday, January 29, 2013

" ಶಾರೂಖ ಖಾನ್ " ಗೆ ಭಾರತ ದೇಶದಲ್ಲಿ ಅಭದ್ರತೆ ಕಾಡುತ್ತಿದೆಯ೦ತೆ...!!!
ಭಾರತ ದೇಶವನ್ನೇ ಮುಜುಗರಕ್ಕೀಡುಮಾಡಿದ ಈ ಬಾಲಿವುಡ್ ನ..  

 

ಬಾಲಿವುಡ್..ಬಾದಶಾಹ್ ಎ೦ದು ತನ್ನ ಅಭಿಮಾನಿಗಳಿ೦ದ ಮತ್ತು ಮೀಡಿಯಾಗಳಿ೦ದ ಕರೆಯಿಸಿಕೊಳ್ಳುತ್ತಿರುವ  “ ಶಾರೂಖ ಖಾನ್ “ ಗೆ  ತನ್ನ ದೇಶವಾದ ಭಾರತದಲ್ಲಿ ಅಭದ್ರತೆ ಕಾಡುತ್ತಿದೆಯ೦ತೆ….ಕಾರಣ ತಾನು ಇಸ್ಲಾ೦ ಧರ್ಮಕ್ಕೆ  ಸೇರಿದವರಾಗಿದ್ದುದು. 

ಇತ್ತೀಚೆಗೆ ಪರದೇಶದಲ್ಲಿ ಪ್ರಕಟವಾಗುವ “ ಔಟ್ ಲುಕ್  ಟರ್ನಿ೦ಗ್ ಪಾಯಿ೦ಟ್ “ ಪತ್ರಿಕೆಯ ಸ೦ದರ್ಶನದಲ್ಲಿ ಶಾರೂಖ ಖಾನ್ ಹೇಳಿದ್ದು…” (“I sometimes become the inadvertent  object of political leaders and media who choose to make me a symbol of all that they think is wrong and unpatriotic about Muslims in India…. “There have been occasions when I have been accused of bearing allegiance to our neighboring nation rather than my own country – this even though I am an Indian, whose father fought for the freedom of India,” SRK added.) 

ನಾನು ಕೆಲವೊಮ್ಮೆ ಭಾರತದ ರಾಜಕಾರಣಿಗಳಿಗೆ ಮತ್ತು ಮೀಡಿಯಾಗಳಿಗೆ ಭಾರತದಲ್ಲಿಅನೇಕ ಅವಘಡಗಳಿಗೆ ಕಾರಣವಾದ ಮತ್ತು ದೇಶಪ್ರೇಮ ವಿಲ್ಲದವರೆ೦ದು ತಪ್ಪಾಗಿ ಅರ್ಥೈಸಲ್ಪಟ್ಟ  ಭಾರತದ  ಎಲ್ಲ ಮುಸಲ್ಮಾನರ ಪ್ರತಿನಿಧಿಯಾಗಿ ಕಾಣಿಸುತ್ತಿದ್ದೇನೆ ಮತ್ತು ನನ್ನನ್ನು ಕೆಲವೊಮ್ಮೆ  ನನ್ನ ದೇಶವಾದ ಭಾರತಕ್ಕಿ೦ತ " ನೆರೆಯ ದೇಶ " ದ ಜೊತೆ ಹೆಚ್ಚು ಸ೦ಭ೦ಧ / ಮೆಚ್ಚುಗೆ ಹೊ೦ದಿರುವ೦ತೆ  ಬಿ೦ಬಿಸಲಾಗುತ್ತಿದೆ, ನಾನು ಅಪ್ಪಟ ಭಾರತೀಯ ನಾಗಿದ್ದರೂ ಕೂಡ ಮತ್ತು ನನ್ನ ತ೦ದೆ ಸ್ವಾತ೦ತ್ಯ ಸ೦ಗ್ರಾಮದಲ್ಲಿ ಭಾಗವಹಿಸಿದ್ದರೂ ಕೂಡ “ ಎ೦ದು ಶಾರೂಖ ಖಾನ್ ಅಲವತ್ತು ಕೊ೦ಡಿದ್ದಾನೆ “ . ಈ ಕಾರಣದಿ೦ದ ಆತನಿಗೆ ಭಾರತದಲ್ಲಿ ಅಭದ್ರತೆ ಕಾಡುತ್ತಿದೆಯ೦ತೆ. 


ಇದನ್ನು ಓದಿದ ಪಾಕಿಸ್ತಾನದ   " ಲಶ್ಕರ್- - ತೋಯ್ಬಾ " ಸ೦ಘಟನೆಯ ಮುಖ್ಯಸ್ಥ ಹಫೀಸ್ ಸಯ್ಯದ..ಶಾರೂಖ ಖಾನ್ ಗೆ …ಪಾಕಿಸ್ತಾನದಲ್ಲಿ ಬ೦ದು ನೆಲೆಸಲು ಆಹ್ವಾನ ವಿತ್ತಿದ್ದಾನೆ ( ಇದೇ ಮಹಾನುಭಾವ ಭಾರತದ ಗ್ರಹಮ೦ತ್ರಿ ಶಿ೦ಧೆ ಯ “ ಕೇಸರೀ ಭಯೋತ್ಪದನೆ “ ಯ ಭಾಷಣ ಕೇಳಿ ಖುಷಿಗೊ೦ಡು ಆತನನ್ನು ಹೊಗಳಿದ್ದಲ್ಲದೇ ಭಾರತವನ್ನು “ ಭಯೋತ್ಪಾದಕ ರಾಷ್ಟ್ರ “ ವೆ೦ದು ಘೋಷಿಸಲು ವಿಶ್ವ ಸ೦ಸ್ಥೆಗೆ ಸಲಹೆ ಮಾಡಿದ್ದ ). 

ಷ್ಟೇ ಅಲ್ಲಾಕಿಸ್ತಾನಿದಾ೦ಗ೦ತ್ರಿ ಾರಾರಕ್ಕೆ  ಾರಾನಿಗಾರಲ್ಲಿ ಸೂಕ್ತ ದ್ರೆ ನೀಡುವ೦ತ ಿಟ್ಟೀ ಸೆಯೊ೦ದನ್ನು ನೀಡಿದ್ದಾರೆ...ಅಲ್ಲಿಗಾರಾರತ್ತಾರೆ ಏಕಾಲಕ್ಕೆ ಮುಜುಗಕ್ಕೊಳಾಗಿದ್ದಾರೆ.

ಶಾರೂಖ ಖಾನ್ ನ ಈ ಹೇಳಿಕೆಯಿ೦ದ ಗಾಬರಿ ಬಿದ್ದ ಮು೦ಬೈ  ಪೋಲಿಸರು...Shah Rukh Khan is safe in Mumbai, ಎ೦ಬ ಹೇಳಿಕೆಯನ್ನೂ ಇ೦ದಿನ ಇ೦ಗ್ಲೀಷ ಪತ್ರಿಕೆಗಳಲ್ಲಿ ನೀಡಿಯಾಗಿದೆ.


www.thehindu.com/news/states/other-states/shah-rukh-khan-is-safe-in-mumbai-say-police/article4358250.ece

ಭಾರತೀಯ ಪ್ರಕ್ಷಕರ ಅಪಾರ ಅಭಿಮಾನ ಗಳಿಸಿದ ಶಾರೂಖ ಖಾನ್ ನ೦ತಹ ಚಿತ್ರ ನಟನಿಗೆ ಇವೆಲ್ಲಾ ಬೇಕಿತ್ತಾ…?

ಭಾರತದ ಹಿ೦ದೂಗಳಿಗೆ ಒಟ್ಟಾರಮುಸಲ್ಮಾನರ ಬಗ್ಗೆ ಏನೇ ಅಭಿಪ್ರಾಯ ಗಳಿರಲಿ , ಆದರೆ ಚಿತ್ರ ನಟರ ಮತ್ತು ಕ್ರಿಕೆಟ್ ಪಟುಗಳ ವಿಷಯ ಬ೦ದಾಗ ಜಾತಿಯ / ಧರ್ಮದ ಹ೦ಗಿಲ್ಲದೇ ತಮ್ಮ ನೆಚ್ಚಿನ ನಟ / ಕ್ರೀಡಾಪಟು ಗಳಿಗೆ ಅಭಿಮಾನದ ಹೊಳೆಯನ್ನೇ ಹರಿಸಿದ್ದಾರೆ ಮತ್ತು ಈಗಲೂ ಹರಿಸುತ್ತಿದ್ದಾರೆ. 

ಬಾಲಿವುಡ್ ನ ಇತಿಹಾಸದಲ್ಲಿ ಬಹುಷ್ಯ ಒಬ್ಬ  “ ಯೂಸೂಫ ಖಾನ್ “ … “ ದಿಲೀಪ್ ಕುಮಾರ್ “ ಆದ ಇತಿಹಾಸ ಬಿಟ್ಟರೆ ಉಳಿದೆಲ್ಲ “ ಖಾನ್ “ ಗಳು ತಮ್ಮ ಅಸಲೀ ಹೆಸರಿನಲ್ಲೇ ಹಿ೦ದೀ ಚಿತ್ರರ೦ಗವನ್ನಾಳಿದ್ದಾರೆ.  ಬಹುಷ್ಯ  “ ರಾಜೇಶ್ ಖನ್ನಾ “ ಮತ್ತು “ ಅಮಿತಾಭ ಬಚ್ಚನ್ “ ರನ್ನು ಬಿಟ್ಟರೆ …ಈ  " ಖಾನ್ "  ಗಳ  ಜನಪ್ರೀಯತೆ ಬೇರಾವ ಹಿ೦ದೂ ನಟರಿಗೂ ಇಲ್ಲ. ಇ೦ಥ ಸ೦ಧರ್ಬದಲ್ಲಿ  ಶಾರೂಖ ಖಾನ್ ನ ಈ ಮಾತುಗಳು “  ಗೋಡೆಯ ಮೇಲಿನ ಇರುವೆಯನ್ನು ಮೈಮೇಲೆ  ಬಿಟ್ಟುಕೊ೦ಡ೦ತೆ “  ಆಗಿದೆ

ಶಾರೂಖ ಖಾನ್  ನ ಇ೦ಥ ವರ್ತನೆ ಇದೇ ಮೊದಲಲ್ಲ. ಪಾಕಿಸ್ತಾನದ ಬ್ರಾ೦ಡ ಅ೦ಬ್ಯಾಸಿಡರ್ ಗಳ ತರಹ ಪಾಕಿಸ್ತಾನ ಪರವಾದ ಆತನ ಅನೇಕ ಹೇಳಿಕೆಗಳು ವಿವಾದಕ್ಕೀಡಾಗಿ, ಶಿವಸೇನೆ ಯ೦ಥ ಹಿ೦ದೂ ಸ೦ಘಟನೆಗಳ ಕೆ೦ಗಣ್ಣಿಗೆ ಗುರಿಯಾಗಿವೆ. ಇತ್ತೀಚೆಗೆ ತಳಕಚ್ಚುತ್ತಿರುವ ತನ್ನ ಜನಪ್ರೀಯತೆಯನ್ನು ಮತ್ತೆ ಗಳಿಸಿ ಸದಾ ಪ್ರಚಾರದಲ್ಲಿರಲು ಶಾರೂಖ ಖಾನ್ ಇ೦ಥ  ವಿವಾದಗಳನ್ನು ಸ್ಪಷ್ಟಿಸುತ್ತಲೇ  ಇರುತ್ತಾನೆ. ತನ್ನದೇ ಧರ್ಮದ ಮತ್ತು ತನ್ನ ಜೊತೆಗಾರರಾದ ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ರ  ಜೊತೆ ಕೂಡ ಅವನ ಸ೦ಭ೦ಧ ಹಳಸಿ ದಶಕಗಳ  ಮೇಲಾಯಿತು. 

ಅಮೇರಿಕೆಯ ಏರ್ ಪೋರ್ಟ ನಲ್ಲಿ ತನ್ನನ್ನು ತಪಾಸಣೆಗಾಗಿ ನಿಲ್ಲಿಸಿಕೊ೦ಡಿದ್ದನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ ಶಾರೂಖ ಖಾನ್ ತಾನೇನೋ ಭಾರತದ ರಾಷ್ಟ್ರಪತಿ , ತನ್ನ ತಪಾಸಣೆಯಿ೦ದ ಭಾರತದ ಮಾನ ಹಾಳಾಯಿತು ಎ೦ಬ೦ತೆ ವರ್ತಿಸಿದ. ೯/ ೧೧ ಘಟನೆಯ ನ೦ತರ ಅಮೇರಿಕೆಯವರು ಪ್ರತಿಯೊಬ್ಬ ಮುಸಲ್ಮಾನನನ್ನು ಅವನು ಯಾವುದೇ ದೇಶದವನಿರಲಿ ಅನುಮಾನದ ಕಣ್ಣಿ೦ದ ನೋಡುತ್ತಾರೆ ಎ೦ಬ ಸಣ್ಣ ಸ೦ಗತಿ ಶಾರೂಖ ಖಾನ್ ಗೆ ಅರ್ಥವಾಗಲಿಲ್ಲ. 

ತಾನು ಹಿ೦ದೂ ಪತ್ನಿಯನ್ನು ಹೊ೦ದಿರುವುದೇ ಮಹಾನ್ ಸಾಧನೆ ಎ೦ಬ೦ತೆ ಹೇಳಿಕೊಳ್ಳುವ ಶಾರೂಖ ನಿಗೆ..ಬಾಲಿವುಡ್ ನಲ್ಲಿ ಇ೦ಥ ಅ೦ತರ್ಜಾತೀಯ ವಿವಾಹಗಳು ಮಾಮೂಲು ಎ೦ಬುದು ಗೊತ್ತಿಲ್ಲದ ವಿಶಯವೇನಲ್ಲ. 

ಅಮಿತಾಭ ಮತ್ತು ಅಮೀರ ಖಾನ್ ರಷ್ಟು  ಪ್ರತಿಭೆ ಇಲ್ಲದಿದ್ದರೂ.. “ ರಾಜೇಶ ಖನ್ನಾ “ ನ೦ತೆ ತನ್ನ  ವಿಚಿತ್ರ ಮ್ಯಾನರಿಸ೦ ಗಳಿ೦ದಲೇ ಅತೀ ಹೆಚ್ಚು ಜನಪ್ರೀಯತೆಗಳಿಸಿದ  ನಟ ಈ ಶಾರೂಖ ಖಾನ್.  ಶಾರೂಖ ಖಾನ್ ರ ಈ ಜಪ್ರೀಯತೆಯ ಹಿ೦ದೆ “ ಯಶ ಚೋಪ್ರಾ “ ಮತ್ತು “ ಕರಣ ಜೋಹರ್ “ ಎ೦ಬ ಬಾಲಿವುಡ್ ನ ದೊಡ್ಡ  ನಿರ್ಮಾಪಕ / ನಿರ್ದೇಶಕರ  ಸಹಾಯ ಬಹಳವಿದೆ. ಇದೇ ಶಾರೂಖ ಖಾನ್ ಸ್ನೇಹದಲ್ಲಿ  ಕರಣ ಜೋಹರ್ “ ಮೈ ನೇಮ್ ಈಸ್ ಖಾನ್ “  ಮತ್ತು “ ಖುರ್ಬಾನ್ “ ನ೦ತಹ ಚಿತ್ರಗಳನ್ನು ನಿರ್ಮಿಸಿದ. ಈ ಚಿತ್ರಗಳ ಕಥಾ ಸಾರಾ೦ಶ “ ಎಲ್ಲ ಮುಸಲ್ಮಾನರೂ ಭಯೋತ್ಪಾದಕ ರಲ್ಲ “ (ಅದರಲ್ಲಿ ಶಾರೂಖ ಖಾಯ್ ” ಮೈ ನೇಮ್ ಈಸ್ ಖಾನ್ , ಐ ಆಮ್ ನಾಟ್ ಎ ಟೆರರಿಸ್ಟ “ ಎ೦ದು ಹೇಳಿಕೊ೦ದು ಓಡಾಡುವ ದ್ರಶ್ಯಗಳಿವೆ )  . ಅದು ನಿಜವೂ ಹೌದು. 

ಇ೦ಥ  ಶಾರೂಖ ಖಾನ್  ಗಿ೦ತ  ಈಗ  ಜನಪ್ರೀಯತೆಯಲ್ಲಿ ಮು೦ದಿರುವ   ಅಮೀರ್ ಖಾನ್  ಮತ್ತು  ಸಲ್ಮಾನ್ ಖಾನ್  ಗಿಲ್ಲದ ಅಭದ್ರತೆ…ಈ ಶಾರೂಖ ಖಾನ್ ಗೇಕೆ ಬ೦ತು…? 

ಇ೦ಥ ವಿವಾದಗಳಿ೦ದ ಈತ ನಗೆ ಗೀಡಾಗಬಹುದೇ ಹೊರತು ಬೇರೇನೂ ಸಾಧಿಸಲು ಸಾಧ್ಯವಿಲ್ಲ. 

ಾನ್ ಗೆ ಒ೦ದು ಮಾತು ತಿಳಿದಿರಿ : ಪಾಕಿಸ್ತಾನಕ್ಕಿ೦ತೆಚ್ಚಿನುಸಲ್ಮಾನು ಹಿ೦ದೂಸ್ತಾನಲ್ಲಿದ್ದಾರೆ...ಮತ್ತು ಅವು ಇಲ್ಲಿ ಅಲ್ಲಿಗಿ೦ತೆಮ್ಮಿಯಾಗಿ, ಸದ್ರಾಗಿ ಬುಕುತಿದ್ದಾರೆ.

ಶಾರೂಖ ಖಾನ್ ನ ಈ ವಿವಾದದ ನ೦ತರ..ಕೆ.ಎ. ಕೌಲ್ ಎ೦ಬ ಕಾಶ್ಮೀರಿ ಹಿ೦ದೂ ಬರೆದಿರುವ ಈ ಪತ್ರವನ್ನೊಮ್ಮೆ ಓದಿ…


"My name is not Khan, I am Mr Kaul "

I am not Khan. My name bears a different set of four letters starting with a K: K A U L. Kaul. As those who know Indian names would understand I happen to have been born in a family that was called "Hindu" by others, belonging to a land that was once our own. Hence, we were sure, we would never get a friend like Karan Johar ("KJ") to make a movie on our humiliations, and our contemptuous and forced exile from our homeland. It's not fashionable, you see. It's fashionable to get a Khan as a friend instead and portray his agony and pains and sufferings when he is asked by a US airline to take off his shoes and show his socks. Natural and quite justifiable that Khan must feel insulted and enraged. 

Enough Masala to make a movie!

But unfortunately I am a Kaul. I am not a Khan.

Hence when my sisters and mothers were raped and killed, when six-year-old Seema was witness to the brutal slaughtering of her brother, mother and father with a butcher's knife by a Khan, nobody ever came to make a movie on my agony, pain and anguish, and tears.

No KJ would make a movie on Kashmiri Hindus. Because we are not Khans. We are Kauls.

When we look at our own selves as Kauls, we also see a macabre dance of leaders who people Parliament. Some of them were really concerned about us. They got the bungalows and acres of greenery, and had their portraits worshipped by the gullible devotees of patriotism. They made reservations in schools and colleges for us. But never did they try that we go back to our homes. They have other priorities and ' love your jihadi neighborhood' programmes

They could play with me and my emotions  because my name is Kaul. And not Mr Khan.

I saw the trailer of  this fabulous movie, which must do good business at the box office. There was not even a hint that terror is bad and it is worse if it is perpetuated in the name of a religion that self-congratulating and self-promo tingly calls itself as the "Religion of Peace". (Peace be upon all its followers and all other creatures too.)

So you make a movie on the humiliation of taking off shoes for a foreign police force that has decided not to allow another 9/11. The humiliation of taking off the shoes and the urge to show that you are innocent is really too deep. But what about the humiliation of leaving your home and hearth and wife and mother and father and relatives and the world? And being forced to live in shabby tents, at the mercy of nincompoop leaders encashing your misery and bribe-seeking babus? And seeing your daughters growing up all too suddenly? And yet finding no place to hide your shame?


No KJ would ever come forward to make a movie, a telling and spine-chilling narration on the celluloid, of five-year-old Seema, who saw her parents and brother being slaughtered by a butcher's knife in Doda. Because her dad was not Mr Khan. He was one Mr Kaul.

Sorry, Mr Kaul and your entire ilk. I can't help you.

It's not fashionable to side with those who are Kauls. And Rainas. And Bhatts. Dismissively called KPs. KPs means Kashmiri Pandits. You see, they are a bunch of communalists. They were the agents of one Mr Jagmohan who actually planned their exodus so that the Khans can be blamed falsely! In fact, a movie can be made on how these evil KPs conspired their own exile to give a bad name to the loving and affectionate Khan brothers of the valley!

To voice the woes of Kauls is sinful. The right course to get counted in the lists of the Prime Minister's banquets and the President's parties is to announce from the roof top: hey, ladies and gentlemen, I am Mr Khan.

The biggest apartheid the state observes is to exclude those who cry for Kauls, wear the colours of Ayodhya, love the wisdom of our civilizational heritage, dare to assert as Hindus in a land which is known as Hindustan and struggle to live with dignity as Kauls. They are out and exiled. You can see any list of honours and invites to summits and late-evening gala parties to toast a new brand. All that the Kauls are allowed is a space at Jantar Mantar: shout, weep and go back to your tents after a tiring demonstration.


Mr Kaul, you have the wrong name. A dozen KJs would fly to take you atop the glory-posts and gardens of sympathies if only you accept to wear a Khan name and love a Sunita, Pranita, Komal or a Kamini instead. Well, here you have a sweetheart in Mandira. That goes well with the story.
And you pegged the movie plot on autism.


I wept. It was too much. I wept as a father of a son who needed a story as an Indian. Who cares for his autistic son, his relationship with the western world, his love affair with a young sweet something as a human, as someone whose heart goes beyond being a Hindu, a Muslim or some proselytizing Vatican-centric aggressive soul. Not the one who would declare in newspaper interviews: "I think I am an ambassador for Islam".

Shah Rukh is Shah Rukh, not because he is an ambassador for Islam. If that was true, he could have found a room in Deoband. Fine enough. But he became a heartthrob and a famous star because he is a great actor. He owes everything he has to Indians and not just to Muslims. We love him not because he is some Mr Khan. We love him because he has portrayed the dreams, aspirations, pains, anguish and ups and downs of our daily life. As an Indian. As one of us.


If he wants to use our goodwill and love for strengthening his image as an ambassador for Islam, will we have to think to put up an ambassador for Hindus as well? That, at least to me, would be unacceptable because I trust everyone: a Khan or a Kaul or a Singh or a Victor. 

Who represents India represents us all too, including Hindus. My best ambassadorship would be an ambassadorship for the tricolour and not for anything else because I see my Ram and Dharma in that. I don't think even an Amitabh or a Hrithik would ever think in terms of what Shah Rukh has chosen for himself. But shouldn't these big, tall, successful Indians who wear Hindu names make a movie on why Kauls were ousted? 

Why Godhra occurred in the first place? Why nobody, yes, not a single Muslim, comes forward to take up the cause of the exiled and killed and contemptuously marginalized Kauls whereas every Muslim complainant would have essentially a Hindu advocate to take on Hindus as fiercely as he can?


If you are Mr Khan and were found dead on the railway tracks, the entire nation would be shaken. And he was also a Rizwan. May be just a coincidence that our Mr Khan in the movie is also a Rizwan. Rizwan's death saw the police commissioner punished and cover stories written by missionary writers. 

But if you are a Sharma or a Kaul and happened to love an Ameena Yusuf in Srinagar, you would soon find your corpse inside the police thana and NONE, not even a small-time local paper, would find it worthwhile to waste a column on you. No police constable would be asked to explain how a wrongly detained person was found dead in police custody. Because the lover found dead inside a police thana was not Mr Khan.


No KJ would ever come forward to make a movie on 'My name is Kaul. And I am terror-struck by Khans.'

Give me back my identity as an Indian, Mr Khan and I would have no problem even wearing your name and appreciating the tender love of an autistic son.

ತನ್ನ ಅಭದ್ರತೆಯ ಬಗ್ಗೆ ಮಾತನಾಡುವ ಶಾರೂಖ ಖಾನ್ ಗೊ೦ದು ಪ್ರಶ್ನೆ....ಈ  ಕೌಲ್ ಎ೦ಬ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸುವ  ಧೈರ್ಯವಿದೆಯಾ  ನಿನಗೆ...?       

Saturday, January 26, 2013


ಯಾರು  ಹಿತವರು  ನಿಮಗೆ  ಈ  ಇಬ್ಬರಲ್ಲಿ....?





ಮು೦ದಿನ ವರ್ಷ ..೨೦೧೪. ಲೋಕಸಭಾ ಚುನಾವಣೆ ನಡೆಯಲಿದೆ. ಕಾ೦ಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷಗಳು ಪ್ರಭಲ ಪ್ರತಿಸ್ಪರ್ದಿಗಳು.

 
ಕಾ೦ಗ್ರೆಸ್ ಪಕ್ಷ ಈಗಾಗಲೇ  " ರಾಹುಲ್ ಗಾ೦ಧಿ " ಯನ್ನು ಭಾರತದ " ಭಾವಿ ಪ್ರಧಾನಿ " ಯನ್ನಾಗಿ ಬಿ೦ಬಿಸಿ..ಚುನಾವಣೆಯನ್ನೆದುರಿಸಲು ಸಿದ್ದತೆ ನಡೆಸಿದೆ. ಇತ್ತ ಬಿ.ಜೆ.ಪಿ. ಪಕ್ಷದಲ್ಲಿ ಕಾ೦ಗ್ರೆಸ್ ಪಕ್ಷದ ಸ್ಪಷ್ಟತೆ ಇಲ್ಲದಿದ್ದರೂ ಹಳೆಯ ಹುಲಿ ಲಾಲಕ್ರಿಷ್ಣ ಆದ್ವಾನಿ ಯವರ ನಿರುತ್ಸಾಹ ದ ಹಿನ್ನೆಲೆಯಲ್ಲಿ ಮೊನ್ನೆ ತಾನೇ ನಡೆದ ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷವನ್ನು ಅಧಿಕಾರಕ್ಕೆ ತ೦ದು ಮುಖ್ಯಮ೦ತ್ರೀ ಪಟ್ಟವನ್ನೇರಿದ... " ನರೇ೦ದ್ರ ಮೋದಿ " ಯವರ ನೇತ್ರತ್ವದಲ್ಲೇ ಚುನಾವಣೆ ಎದುರಿಸಲಿದೆ.

ಈಗ ನಮ್ಮ ಮು೦ದೆ ಇರುವ ಪ್ರಶ್ನೆ...ಅದರಲ್ಲೂ " ಹಿ೦ದೂ " ಗಳ ಮು೦ದಿರುವ ಪ್ರಶ್ನೆ....ಯಾರು ಹಿತವರು ನಮಗೆ ಈ ಇಬ್ಬರೊಳಗೆ....? 

ಇಲ್ಲಿ " ಹಿ೦ದೂ " ಎ೦ಬ ಪದಕ್ಕೆ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ. ಕಾ೦ಗ್ರೆಸ್ ಪಕ್ಷ ತನ್ನ ಬೇಳೆ ಬೇಯಿಸಿ ಕೊಳ್ಳಲು..ಹಿ೦ದುಗಳನ್ನು ಮಾನಸಿಕ ವಾಗಿ...ಮು೦ದುವರಿದವರು ( ಬ್ರಾಹ್ಮಣ , ಲಿ೦ಗಾಯಿತ, ಗುಜರಾತಿ, ಸಿಖ, ಜೈನ , ಪಾರ್ಸಿ ...ಮು೦ )  ಮತ್ತು ಹಿ೦ದುಳಿದವರು  ( ದಲಿತ, ಹರಿಜನ, ಅಲ್ಪ ಸ೦ಖ್ಯಾತ, ಪರಿಶಿಷ್ಟ ಜಾತಿ, ಪ೦ಗಡ ) ಎ೦ದೆಲ್ಲಾ ವಿಭಾಜಿಸಿ ಅವರಲ್ಲಿ ಹಿ೦ದುಳಿದವರಿಗೆ ಸರ್ಕಾರಿ ಸೌಲಭ್ಯಗಳನ್ನು, ಮೀಸಲಾತಿಯನ್ನು ನೀಡಿ ಅವರು ಹಿ೦ದುಗಳಲ್ಲ ಹೀಗಾಗಿ ಅವರ ಉದ್ದಾರ ಕಾ೦ಗ್ರೆಸ್ ಪಕ್ಷ ಮಾತ್ರ ಮಾಡಲು ಸಾಧ್ಯ..ಬಿ.ಜೆ.ಪಿ. ಮು೦ದುವರೆದಿರುವ ಜಾತಿಗಳ ಪರವಾಗಿರುವ  ಪಕ್ಷ ಎ೦ದೆಲ್ಲಾ ಅವರ ತಲೆಗೆ ತು೦ಬಿದೆ.  ಅದಕ್ಕೇ  ಅವರನ್ನು " ಚಡ್ಡಿ " ಗಳೆ೦ದು ಜರಿದದ್ದು. ಆದರೆ ದೇಶ ಹಿ೦ದೆ೦ದೂ  ಕಾಣರಿಯದ ಭ್ರಷ್ಟಾಚಾರಗಳ ಹಗರಣಗಳಲ್ಲಿ ಸಿಲುಕಿ , ಹುಸಿ ಜ್ಯಾತ್ಯಾತೀತತೆಯ ಸೋಗಿನಲ್ಲಿ ಬೆತ್ತಲೆಯಾಗಿ ನಿ೦ತವರ ಮು೦ದೆ...ಚೆಡ್ಡಿ ಧಾರಿಗಳೇ  ವಾಸಿಯಲ್ಲವೇ..?

ಇಲ್ಲಿ " ಹಿ೦ದೂ " ಎ೦ದರೆ...ಹಿ೦ದೂ ಧರ್ಮದ ರೀತಿ ನೀತಿ ಪಾಲಿಸುವವರು ಮತ್ತು ಹಿ೦ದೂ ದೇವಾನು ದೇವತೆಗಳನ್ನು ಪೂಜಿಸುವವರು ಎಲ್ಲರೂ ಸೇರುತ್ತಾರೆ.  ಇಸ್ಲಾ೦ ಮತ್ತು ಕ್ರಿಶ್ಚಿಯನ್ನರಿಗೆ ಅವರದೇ ಆದ ರೀತಿ, ನೀತಿ ಮತ್ತು ದೇವರ ಕಲ್ಪನೆಗಳಿವೆ.

ಒ೦ದು ವಿಷಯ ಗಮನಿಸಿ......

ಇಸ್ಲಾ೦ ಧರ್ಮದ ಹಿ೦ಬಾಲಕರಿಗಾಗಿ ಜಗತ್ತಿನಲ್ಲಿ ಒಟ್ಟು ೫೫ ದೇಶಗಳಿವೆ ( ಅ೦ದರೆ ಇಸ್ಲಾ೦ ಧರ್ಮದ ಪ್ರಾಭಲ್ಯವಿರುವ ದೇಶಗಳು ). http://en.wikipedia.org/wiki/List_of_Muslim-majority_countries

ಕ್ರಿಶ್ಚಿಯನ್ ಧರ್ಮದ ಹಿ೦ಬಾಲಕರಿಗಾಗಿ ಜಗತ್ತಿನಲ್ಲಿ ಉಳಿದೆಲ್ಲ ದೇಶಗಳಿವೆ.

ಆದರೆ...ಹಿ೦ದೂ ಗಳಿಗಿರುವುದೊ೦ದೇ ದೇಶ...ಅದು  " ಹಿ೦ದೂಸ್ತಾನ ".  ಹಿ೦ದು ಗಳು ಜಗತ್ತಿನ ಅನೇಕ ದೇಶಗಳಲ್ಲಿ ಹರಡಿರಬಹುದು. ಆದರೆ ಅವರ ಮೊಲ ವಿರುವುದು ಹಿ೦ದೂಸ್ತಾನದಲ್ಲಿ ಮಾತ್ರ. ಉಳಿದೆಡೆಯಲ್ಲಿ ಅವರು ಅಲ್ಪ ಸ೦ಖ್ಯಾತರು.

ಆದ್ದರಿ೦ದ....ನಮ್ಮ ಮು೦ಬರುವ ಪ್ರಧಾನಿ ಮಾಡಬೇಕಾದ ಮೊದಲ ಕೆಲಸ...." ಹಿ೦ದೂಸ್ತಾನ " ವನ್ನು ಹಿ೦ದೂ ಗಳ ದೇಶ ವೆ೦ದು ಸಾರುವುದು ಮತ್ತು ಅವರು ನೆಮ್ಮದಿಯ ಜೀವನ ಸಾಗಿಸಲು ಸುಭದ್ರತೆಯನ್ನು ಕಲ್ಪಿಸುವುದು. ಇನ್ನು ಉಳಿದ ಧರ್ಮದ  ಜನರ ಬಗ್ಗೆ...ಹಿ೦ದೂ ಧರ್ಮ ದಲ್ಲಿ " ವಿಶ್ವ ಭಾತ್ರತ್ವದ ".." ಕೂಡಿ ಬಾಳುವಿಕೆಯ " ಸ೦ದೇಶವಿದೆ. ಅದಕ್ಕೇ ಹಿ೦ದು ಗಳು ಎಲ್ಲ ಬೇರೆ ಜಾತಿಯವರನ್ನೂ ತಮ್ಮ ದೇಶದಲ್ಲಿರಲು ಸ್ವಾಗತಿಸಿದ್ದಾರೆ ಮತ್ತು ಮು೦ದೆಯೂ ಸ್ವಾಗತಿಸುತ್ತಾರೆ. ಆದರೆ " ಜಾತ್ಯಾ ತೀತತೆ " ಯ ಹೆಸರಿನಲ್ಲಿ  ಹಿ೦ದು ಗಳ ನೆಮ್ಮದಿಯನ್ನೇ ಹಾಳುಮಾಡುವ ಭಯೋತ್ಪಾದಕ ಕ್ರತ್ಯಗಳನ್ನು , ಜಿಹಾದ್ ಹೆಸರಿನ ಧರ್ಮಯುದ್ದ (?) ಗಳನ್ನು, ಮತಾ೦ತರಗಳನ್ನು ಸಹಿಸಿಕೊಳ್ಳುವುದೇಕೆ...? ನಮ್ಮ ದೇಶದಲ್ಲಿ ನಮ್ಮನ್ನೇ ನೆಮ್ಮದಿಯಾಗಿ ಇರಗೊಡದ ಇ೦ಥ ಪೊಳ್ಳು ಜಾತ್ಯಾತೀತತೆ ( ಇದು ಕಾ೦ಗ್ರೆಸ್ ಕ್ರಪಾ ಪೋಷಿತ ಜಾತ್ಯಾತೀತತೆ ) ನಮಗೇಕೆ...?

ಈಗ ಹೇಳಿ....ಈ ಕೆಲಸ " ರಾಹುಲ್ ಗಾ೦ಧಿ "  ಯಿ೦ದ ಸಾಧ್ಯವಾ....ಅಥವಾ " ನರೇ೦ದ್ರ ಮೋದಿ " ಯಿ೦ದ ಸಾಧ್ಯವಾ...?  ಯೋಚಿಸಿ.

ಅದಕ್ಕೇ " ನರೇ೦ದ್ರ ಮೋದಿ " ತಮ್ಮ ಪ್ರತೀ ಭಾಷಣದಲ್ಲೂ ಹೇಳುವುದು...ಹಿ೦ದೂಸ್ತಾನದಲ್ಲಿ ಮೊದಲು ಹಿ೦ದುಗಳ ಸುರಕ್ಷೆ...ನ೦ತರ ಉಳಿದವರದು...

 ಇನ್ನು   ಎರಡನೇ ಪ್ರಶ್ನೆ...ಈ ಇಬ್ಬರಲ್ಲಿ ಪ್ರಧಾನಿಯಾಗುವ ಅರ್ಹತೆ ಅನುಭವ ಯಾರಿಗೆ ಹೆಚ್ಚಿದೆ....?

ಮೊನ್ನೆ  ತಾನೇ  ND TV  ದೇಶಾದ್ಯ೦ತ  ಈ ಪ್ರಶ್ನೆಯನ್ನೆತ್ತಿ  ಒ೦ದು ಸಾರ್ವಜನಿಕರ ಅಭಿಪ್ರಾಯ ಸ೦ಗ್ರಹ  ಮಾಡಿತು. ಅದರಲ್ಲಿ ಬಹುತೇಕ ಜನ ಕೇಳಿದ ಪ್ರಶ್ನೆ...ರಾಜೀವ ಗಾ೦ಧಿ ಪುತ್ರ...ಎ೦ಬುದನ್ನು ಬಿಟ್ಟರೆ ರಾಹುಲ್ ಗೆ ಏನಿದೆ ಅರ್ಹತೆ...ಪ್ರಧಾನಿ ಪಟ್ಟ ವನ್ನಲ೦ಕರಿಸಲು...?

ಹೀಗಾಗಿ...ಈ ಅಭಿಪ್ರಾಯ ಸ೦ಗ್ರಹದಲ್ಲಿ ಜನ ಪ್ರಧಾನಿ ಪಟ್ಟಕ್ಕಾಗಿ ಆರಿಸಿದ್ದ್ದು...." ನರೇ೦ದ್ರ ಮೋದಿ " ಯವರನ್ನು ( ಶೇಕಡಾ ೮೫ % ) .

ಇದು ಕಾ೦ಗ್ರೆಸ್ ಪಕ್ಷ ವನ್ನು ಇರಿಸು ಮುರಿಸಿ ಗೀಡು ಮಾಡಿದೆ. ಈಗ ಅದಕ್ಕಿರುವ ಒ೦ದೇ ಮಾರ್ಗವೆ೦ದರೆ ನರೇ೦ದ್ರ ಮೋದಿ ಯವರನ್ನು ದಲಿತ ವಿರೋಧಿ, ಅಲ್ಪ ಸ೦ಖ್ಯಾತ ವಿರೋಧಿ, ಮು೦ದು ವರೆದವರ ಜಾತಿಗಳವರ ಪಕ್ಷಪಾತಿ ಎ೦ದೆಲ್ಲ ಲೇಬಲ್ ಅ೦ಟಿಸಿ ದಲಿತರ ಮತ್ತು ಅಲ್ಪಸ೦ಖ್ಯಾತರ ಮತಗಳನ್ನು ಒಡೆಯುವುದು.

ಆದರೆ ಗುಜರಾತ ರಾಜ್ಯಕ್ಕೊಮ್ಮೆ ಹೋಗಿ ಬನ್ನಿ, ದಲಿತರು ಅಲ್ಲಿ ಉಳಿದ ರಾಜ್ಯಗಳಲ್ಲಿರುವಷ್ಟೇ ಚನ್ನಾಗಿದ್ದಾರೆ. ಅಲ್ಲಿರುವ ಮುಸ್ಲೀ೦ ರಲ್ಲಿಯೂ ಸಹ ನರೇ೦ದ್ರ ಮೋದಿ ಯ ಬಗ್ಗೆ ಕಾ೦ಗ್ರೆಸ್ ಪಕ್ಷಕ್ಕಿರುವ ಅಸಹನೆ ಇಲ್ಲ.

ಇದು ಅಖ೦ಡ ೫೦ ವರ್ಷಗಳಿ೦ದ ಭಾರತವನ್ನಾಳಿದ " ಕಾ೦ಗ್ರೆಸ್ ಪಕ್ಷ " ತಾನು ಅಧಿಕಾರದಲ್ಲಿರಲು ಕ೦ಡು ಕೊ೦ಡ ವಾಮ ಮಾರ್ಗ.

ಇನ್ನು " ನರೇ೦ದ್ರ ಮೋದಿ " ಯವರಿಗೆ ಪ್ರಧಾನಿಯಾಗಲಿರುವ ಅರ್ಹತೆ...ಅವರು ಗುಜರಾತ್ ರಾಜ್ಯದಲ್ಲಿ ಮಾಡಿರುವ ಆಡಳಿತ ಮತ್ತು ಆ ರಾಜ್ಯದ ಬೆಳವಣಿಗೆ ಯೇ ಹೇಳುತ್ತದೆ. ಇವತ್ತು ಯಾವುದೇ ಕಾ೦ಗ್ರೆಸ್ ಪಕ್ಷದ ಆಡಳಿತ ವಿರುವ ರಾಜ್ಯಕ್ಕಿ೦ತ ಗುಜರಾತ್ ಉತ್ತಮ ಸ್ಥಿತಿಯಲ್ಲಿದೆ...ದೇಶಕ್ಕೆ ಮಾದರಿಯಾಗಿದೆ. ಮೇಲ್ನೋಟಕ್ಕೆ " ನರೇ೦ದ್ರ ಮೋದಿ " ಅಹ೦ಕಾರಿ ಎನ್ನಿಸಬಹುದು. ಆದರೆ ಆ ಅಹ೦ಕಾರ ಹಿ೦ದು ಗಳಿಗೆ ಒಳ್ಳೆಯದನ್ನೇ ಮಾಡಲಿದೆ ಎ೦ದು ನನ್ನ ಅನಿಸಿಕೆ.

ಇದನ್ನು ಸಹಿಸಲಾಗದೇ...ಸೋನಿಯಾ ಗಾ೦ದಿ...ನರೇ೦ದ್ರ ಮೋದಿಗೆ " ಭಯೋತ್ಪಾದಕ " ನ ಪಟ್ಟ ಕಟ್ಟಿದ್ದು. ಇವರಿಗೆ ನೂರಾರು  ಶ್ರೀ ರಾಮ ಸೈನಿಕರನ್ನು ಜೀವ೦ತ ದಹಿಸಿದ ಗೋದ್ರಾ  ರೈಲು ಹತ್ಯಾಕಾ೦ಡದ ರೂವಾರಿಗಳಿಗಿ೦ತ ಅದರ ಸೇಡಿಗಾಗಿ ಮುಸ್ಲಿ೦ ರನ್ನು ಹತ್ಯೆಗೈದ " ಹಿ೦ದೂ " ಗಳೇ ಮಹಾಪರಾಧಿಗಳಾಗಿ ಕ೦ಡರು. ಯಾಕೆ೦ದರೆ...ಹಿ೦ದೂ ಗಳು ತಮ್ಮ ಮೇಲೆ ಏನೇ ಅನ್ಯಾಯ, ದಬ್ಬಾಳಿಕೆಗಳಾದರೂ, ಹಿ೦ಸೆಗಳಾದರೂ  ಬಾಯಿಮುಚ್ಚಿಕೊ೦ಡು ಸುಮ್ಮ ನಿರಬೇಕು..ಉಸಿರೆತ್ತಬಾರದು. ಅದು ಕಾ೦ಗ್ರೆಸ್ ನ " ಹಿ೦ದುತ್ವ ". ಇ೦ಥ ನ೦ಪು೦ಸಕ ಹಿ೦ದುತ್ವ ನಮಗೆ ಬೇಕಾ...?

ಎಲ್ಲ ಜಾತಿ, ಧರ್ಮ ದವರಿಗೆ (ಹಿ೦ದೂ, ಇಸ್ಲಾ೦ , ಕ್ರಿಸ್ಚಿಯನ್ ) ಸಮಾನತೆ ಇರುವ  " ಹಿ೦ದೂ ರಾಷ್ಟ್ರ "  ಕಟ್ಟ ಬಯುಸುವಿರಾ...ನರೇ೦ದ್ರ ಮೋದಿ ಯನ್ನು ಬೆ೦ಬಲಿಸಿ...ಪೊಳ್ಳು ಜ್ಯಾತ್ಯಾತೀತತೆಯಲ್ಲಿ  ಬಹುಸ೦ಖ್ಯಾತ  ಹಿ೦ದೂ ಗಳನ್ನೇ ತುಳಿಯುವ ಸರ್ಕಾರ ಬೇಕಾ..." ರಾಹುಲ್ ಗಾ೦ಧಿ " ಗೆ ನಿಮ್ಮ ಮತ ನೀಡಿ.





Disclaimer :  ಬಿ.ಜೆ.ಪಿ. ಪಕ್ಷವೇನೂ ನಿಷ್ಕಳ೦ಕ ಪಕ್ಷವಲ್ಲ . ಅದೂ ಅದರದೇ ಆದ ಹಗರಣ, ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕಿ ಹಾಕಿಕೊ೦ಡು  ನರಳುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ..ಕುರುಡು ಗಣ್ಣಲ್ಲಿ..ಮೆಳ್ಳೆಗಣ್ಣು ಶ್ರೇಷ್ಟ ಎ೦ಬ೦ತೆ..ಹಿ೦ದೂಗಳ ಸುಭದ್ರತೆಯ ಪ್ರಶ್ನೆ ಬ೦ದಾಗ ಬಿ.ಜೆ.ಪಿ. ಪಕ್ಷವೇ  ವಾಸಿ ಎ೦ಬದು ನನ್ನ ಭಾವನೆ.

Wednesday, January 23, 2013

ಭಾರತೀಯರು ಎ೦ದೂ ಮರೆಯದ ಸ್ವಾತ೦ತ್ರ ಸೇನಾನಿ....  
" ನೇತಾಜಿ ಸುಭಾಸ್ ಚ೦ದ್ರ ಭೋಸ್ " ...ಇ೦ದು  ಅವರ ೧೧ ನೇ ಜನ್ಮದಿನ .


                                               

ಅದು ೧೮೯೧ ನೇ ಇಸವಿ. ಅದು ಭಾರತದ ಸ್ವಾತ೦ತ್ರ ಸ೦ಗ್ರಾಮ ಹೋರಾಟ ರ೦ಗೇರುತ್ತಿದ್ದ ಕಾಲ. ಮಹಾತ್ಮಾ ಗಾ೦ಧೀಜಿ ಮತ್ತು ಜವಾಹರ್ ಲಾಲ್ ನೆಹರು ಅ೦ದಿನ ಸ್ವಾತ೦ತ್ರತಾ ಹೋರಾಟದ ಮುಖ್ಯ ಧುರೀಣರು. ಅದು ಕಲ್ಕತ್ತಾದ ಪ್ರತಿಷ್ಟಿತ ಪ್ರೆಸಿಡೆನ್ಸಿ ಕಾಲೇಜು. ಅಲ್ಲಿ ಇ೦ಗ್ಲೀಷ ಭಾಷೆಯನ್ನು ಕಲಿಸುತ್ತಿದ್ದ  ಒಬ್ಬ ಆ೦ಗ್ಲ  ಶಿಕ್ಷಕ  " ಪ್ರೊಫೆಸರ್ ಓಟನ್ ". ಆತನಿಗೆ   ಭಾರತದ ಬಗ್ಗೆ ಮತ್ತು ಭಾರತೀಯರ  ಬಗ್ಗೆ  ತರಗತಿಯಲ್ಲೇ ಲಘುವಾಗಿ ಮಾತನಾಡುವ ಚಾಳಿ. ಒ೦ದೆರಡು ಸಾರಿಯಲ್ಲ ಹಲವಾರು ಸಾರಿ ಈ ಅವಹೇಳನ ಕೇಳಿ  ಅಲ್ಲಿ  ಓದುತ್ತಿದ್ದ   ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಪಿತ್ತ ನೆತ್ತಿಗೇರುತ್ತದೆ. ಆತ  ಆ ಕ್ಲಾಸ ರೂಮಿನಲ್ಲಿಯೇ ಆ ಇ೦ಗ್ಲೀಷ ಶಿಕ್ಷಕನ ಕಾಲರ್ ಹಿಡಿದು ತನ್ನ ಚಪ್ಪಲಿಯಿ೦ದ  ಕೆನ್ನೆಗೆರಡು ಬಾರಿಸಿ ಕ್ಲಾಸಿನಿ೦ದ ಹೊರ ನಡೆಯುವ ಮುನ್ನ  ಹೇಳಿದ್ದು..." ನಾನು ಏನನ್ನಾದರೂ ಸಹಿಸ ಬಲ್ಲೆ...ಆದರೆ ತಾಯಿನಾಡಿನ ನಿ೦ದನೆ, ಅವಹೇಳನ ಮಾತ್ರ ಸಹಿಸಲಾರೆ ..ಮು೦ದೆ ನನಗೇನಾದರೂ ಚಿ೦ತೆಯಿಲ್ಲ ಆದರೆ ಈ ನಿ೦ದನೆ ಸಹಿಸಲು ಸಾಧ್ಯವಿಲ್ಲ " . ಅಲ್ಲಿದ್ದ ಸಹ ವಿದ್ಯಾರ್ಥಿಗಳಿಗೆಲ್ಲ ಧಿಗ್ಬ್ರಮೆ. ಕಾಲೇಜು ಆಡಳಿತ ಮ೦ಡಳಿಯಿ೦ದ  ಈ ಕ್ರತ್ಯಕ್ಕಾಗಿ ಆತನಿಗೆ ೫ ವರ್ಷಗಳವರೆಗೆ ಆ ಕಾಲೇಜಿನಿ೦ದ  ಬಹಿಷ್ಕಾರ. ಆಗಲೇ ಆ ವಿದ್ಯಾರ್ಥಿಯಿ೦ದ ನಿರ್ಧಾರ..." ನಾನು  ಇನ್ನು  ಮು೦ದೆ ನನ್ನ ಜೀವನವನ್ನು ನನ್ನ ತಾಯಿನಾಡಿನ ಸೇವೆಗಾಗಿ ಮುಡಿಪಾಗಿಡುತ್ತೇನೆ " .

ಈ  ಧೀರ  ವಿದ್ಯಾರ್ಥಿ ಮತ್ತಾರೂ ಅಲ್ಲ...." ಅನ್ಯಾಯ ಮಾಡುವುದು ಎಷ್ಟು ತಪ್ಪೋ ...ಅನ್ಯಾಯ ಸಹಿಸುವುದೂ ಕೂಡ ಅಷ್ಟೇ  ತಪ್ಪು " ..ಎ೦ದು ಜಗತ್ತಿಗೆ  ಸಾರಿ  ಹೇಳಿದ  ಸ್ವಾತ೦ತ್ರ ಸೇನಾನಿ...ಮು೦ದೆ  " ನೇತಾಜಿ " ಎ೦ದೇ ಖ್ಯಾತರಾದ..ಸುಭಾಸ್ ಚ೦ದ್ರ ಭೋಸ್.

ಜನೇವರಿ ೨೩ , ೧೮೯೭ ರಲ್ಲಿ ಓರಿಸ್ಸಾದ ಕಟಕ್ ( ಅದು ಆಗ ಬ೦ಗಾಳ ಪ್ರಾ೦ತ್ಯದಲ್ಲಿತ್ತು ) ನಲ್ಲಿ ಜನನ. ಈತ ತ೦ದೆತಾಯಿಯ ಹದಿನಾಲ್ಕು ಮಕ್ಕಳಲ್ಲಿ ಒ೦ಭತ್ತನೆಯವ. ಕಲಿಕೆಯಲ್ಲಿ ಯಾವಾಗಲೂ ಮು೦ದು.

ಹೀಗೆ ಪ್ರೆಸಿಡೆನ್ಸಿ ಕಾಲೇಜು ಬಿಟ್ಟು ಹೊರಬ೦ದ ಸುಭಾಸ್ ಚ೦ದ್ರ ಭೋಸ್ ನ೦ತರ ಕಲ್ಕತ್ತಾ ಯುನಿವರ್ಸಿಟಿಯ ಸ್ಕಾಟಿಶ್ ಚರ್ಚ ಕಾಲೇಜಿಗೆ ಸೇರಿ ೧೯೧೮ ರಲ್ಲಿ ಬಿ.ಎ. ಫಿಲಾಸಫಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ನಾದ ನ೦ತರ ಹೋಗಿದ್ದು ಇ೦ಗ್ಲೆ೦ಡಿಗೆ. ಕಾರಣ ಆತನ ತ೦ದೆಗೆ ಮಗನನ್ನು I.C.S.( Indian Civil Services )  ಓದಿಸಿ ಡೊಡ್ಡ ಅಧಿಕಾರಿ ಅಧಿಕಾರಿಯನ್ನಾಗಿ ಮಾಡುವ ಆಸೆ. ಅದಕ್ಕಾಗಿ  Fitzwilliam College, Cambridge, ನಲ್ಲಿ ಓದಿನ ಮು೦ದುವರಿಕೆ. ಆದರೆ ಸುಭಾಸ  ಚ೦ದ್ರ ಭೋಸ್ ಗಮನ ವೆಲ್ಲಾ ತಾಯಿನಾಡಿನ ಸೇವೆಯ ಕಡೆಗೆ..ಸ್ವಾ೦ತ೦ತ್ರ್ಯ ಸ೦ಗ್ರಾಮದ ಕಡೆಗೆ. ICS ಪರೀಕ್ಷೆಯಲ್ಲಿ ದೇಶಕ್ಕೇ ನಾಲ್ಕನೇ ಸ್ಥಾನ ಪಡೆದು ಉತ್ತೀರ್ಣ. ಅಲ್ಲಿ  ಒಳ್ಳೆಯ ಹುದ್ದೆಗೆ ಸೇರ್ಪಡೆ. ಆದರೆ..ಬ್ರಿಟೀಷರ ಕೈ ಕೆಳಗೆ ಕೆಲಸ ಮಾಡಲಾಗದೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ೧೯೨೦ ರಲ್ಲಿ ಭಾರತಕ್ಕೆ ಹಿ೦ದಿರುಗಿದರು ಸುಭಾಸ್ ಚ೦ದ್ರ ಭೋಸ್.

ಇಲ್ಲಿ ಬ೦ದೊಡನೆ " ಸ್ವರಾಜ್ " ಎ೦ಬ ಬ೦ಗಾಲೀ ಪತ್ರಿಕೆಯನ್ನು ಶುರುಮಾಡಿದ ಸುಭಾಸ್ ತಮ್ಮ ಪತ್ರಿಕೆಯನ್ನ ಮುಡಿಪಾಗಿಟ್ಟಿದ್ದು  ಸ್ವಾ೦ತತ್ರ ಸ೦ಗ್ರಾಮದ ಪ್ರಚಾರಕ್ಕಾಗಿ. ಅದರಲ್ಲಿ ಬ೦ಗಾಲ್ ಪ್ರೊವಿನ್ಸಿಯಲ್ ಕಾ೦ಗ್ರೆಸ್ ಕಮಿಟಿ ಯ  ಬಗ್ಗೆ ವ್ಯಾಪಕ ಪ್ರಚಾರ. ಆಗ ಸುಭಾಷರ ಗುರು ..." ಚಿತ್ತರ೦ಜನ್ ದಾಸ್ "  ಎ೦ಬ ಸ್ವಾ೦ತ್ರ ಸೇನಾನಿ. ಅಧ್ದುತ ವಾಗ್ಮಿ. ಅವರ ಕೈಯಲ್ಲೆ ಸುಭಾಷ ಚ೦ದ್ರ ಭೋಸ್ ಉತ್ತಮ ವಾಗ್ಮಿಯಾಗಿ ರೂಪುಗೊ೦ಡಿದ್ದು. ೧೯೨೩ ರಲ್ಲಿ ಸುಭಾಷಚ೦ದ್ರ ಭೋಸ್ ರಿಗೆ ಒಲಿದು ಬ೦ದಿದ್ದು  " ಅಖಿಲ ಭಾರತ ಯುವ ಕಾ೦ಗ್ರೆಸ್ "  ನ ಅದ್ಯಕ್ಷತೆ ಮತ್ತು " ಬ೦ಗಾಲ ರಾಜ್ಯ ಕಾ೦ಗ್ರೆಸ್ " ಉಪಾದ್ಯಕ್ಷತೆ.  ಅದರೊಟ್ಟಿಗೇ ಸುಭಾಸ್ ಚ೦ದ್ರಭೋಸ್  ಚಿತ್ತರ೦ಜನ್ ದಾಸ್ ನಡೆಸುತ್ತಿದ್ದ   Forward ಎ೦ಬ ಆ೦ಗ್ಲ ಪತ್ರಿಕೆಗೆ ಸ೦ಪಾದಕರಾಗಿ ಕೆಲಸಮಾಡಿದ್ದು ಮತ್ತು ಕಲ್ಕತ್ತಾದ ಮುನ್ಸಿಪಲ್ ಕಾರ್ಪೋರೇಶನ್ ನ ಸಿ.ಇ.ಓ ಆಗಿ ಕೆಲಸ ಮಾಡಿದ್ದು.  ಇದೇ ಸಮಯದಲ್ಲಿ ಸುಭಾಶ್ ರಿಗೆ ಮಹಾತ್ಮಾ ಗಾ೦ಧಿಜಿ ಯವರ ಸ೦ಪರ್ಕ ಬ೦ದಿದ್ದು. ಅವರ ಪ್ರೇರಣೆಯಿ೦ದ ಸ್ವಾತ೦ತ್ರ ಚಳುವಳಿಗೆ ಧುಮುಕಿದ್ದೂ ಆಯಿತು.  ೧೯೨೫ ರಲ್ಲಿ ಆ೦ಗ್ಲ ಸರಕಾರ ಭೋಸ್ ಸರ್ಕಾರ ದ್ರೋಹದ ಆರೋಪ ಹೊರಿಸಿ  ಬ೦ಧಿಸಿ ಮ೦ಡಲೇ ಜೈಲಿನಲ್ಲಿಟ್ಟಿತು. 

೧೯೨೭ ರಲ್ಲಿ ಜೈಲಿನಿ೦ದ ಬಿಡುಗಡೆಯಾದ ಭೋಸ್ " ಜವಾಹರ್ ಲಾಲ್ ನೆಹರೂ " ಜೊತೆಗೆ ಕೈ ಜೋಡಿಸಿ ಕಾ೦ಗ್ರೆಸ್ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕೆಲಸ ಮಾಡಿದರು. ಮು೦ದೆ ಕಲ್ಕತ್ತ್ತಾದ " ಮೇಯರ್ " ಪದವಿ ಕೂಡ ಅವರಿಗೊಲಿದು ಬ೦ತು.  ೧೯೩೦ ರಲ್ಲಿ ಸುಭಾಷಚ೦ದ್ರ ಭೋಸ ರಿ೦ದ ಇ೦ಗ್ಲೆ೦ಡಿಗೆ ಪ್ರಯಾಣ. ಅಲ್ಲಿ ಯುವ ಭಾರತೀಯ ವಿದ್ಯಾರ್ಥಿಗಳ ಜೊತೆ ಸ೦ವಾದ..ಮುಸ್ಸೋಲಿನಿ ಭೇಟಿ. ಭಾರತಕ್ಕೆ ಮರಳಿ ಬರುತ್ತಿದ್ದ೦ತೆಯೇ ಭೋಸ್ ಕಾ೦ಗ್ರೆಸ್ ಪಾರ್ಟಿಯ ಅದ್ಯಕ್ಷರಾಗಿ ಆಯ್ಕೆಯಾದರು. ಹಾಗಿತ್ತು ಭಾರತದ ಜನ ಮಾನಸದಲ್ಲಿ  ಅವರ ಏರುತ್ತಿದ್ದ ವರ್ಚಸ್ಸು.

ಸುಭಾಸ್ ಚ೦ದ್ರರಿಗೆ " ಸ್ವಾ೦ತತ್ರ್ಯ " ದ ಜೊತೆ  " ಸ್ವರಾಜ್ " (Self governence ) ದ ಕನಸು..ಅದಕ್ಕಾಗಿ ಬ್ರಿಟೀಷರ ವಿರುದ್ದ  ಹೋರಾಟ ವೇ ಮಾರ್ಗ ಎ೦ಬುದು ಅವರ ನ೦ಬಿಕೆ. ಮಹಾತ್ಮಾ ಗಾ೦ಧಿಜಿಯವರ ಅ೦ಹಿ೦ಸಾವಾದ ಮತ್ತು ಅದರ ನಿಧಾನ ಪರಿಣಾಮ ದಿ೦ದ ಭಾರತದ  ಸ್ವಾ೦ತ೦ತ್ರ ಕಷ್ಟ ಎ೦ಬುದು ಅವರ ನ೦ಬಿಕೆ. ಇದೇ ಕಾರಣಕ್ಕೆ ಗಾ೦ಧೀಜಿಯವರೊಡನೆ " ಸೈದ್ದಾ೦ತಿಕ ವೈಮನಸ್ಸು ".

ಗಾ೦ಧೀಜಿಗೆ ಆಗ ಜವಾಹರ ಲಾಲ್ ನೆಹರೂರ ಪ್ರಭಾವ. ಹೀಗಾಗಿ ಭೋಸ್ ಮತ್ತು ಜವಾಹರ್ ನಡುವೆ ವೈಮನಸ್ಸು. ಗಾ೦ಧೀಜಿಗೆ ನೆಹರೂರನ್ನು ಕಾ೦ಗೆಸ್ ಪಾರ್ಟಿಯ ಅದ್ಯಕ್ಷರನ್ನಾಗಿ ಮಾಡುವ ಆಸೆ. ಆದರೂ ೧೯೩೯ ರಲ್ಲಿ ಗಾ೦ಧೀಜಿಯ ಆಶಯದ ವಿರುದ್ದ ಪ್ರಚ೦ಡ ಬಹುಮತದಿ೦ದ ಸುಭಾಷ ಚ೦ದ್ರ ಭೋಸ್ ಕಾ೦ಗ್ರೆಸ್ ಪಕ್ಷದ ಅದ್ಯಕ್ಷರಾಗಿ ಆಯ್ಕೆ. ಆದರೆ ಮು೦ದೆ ಕೆಲವೇ ತಿ೦ಗಳುಗಳಲ್ಲಿ ಗಾ೦ಧೀಜಿಯ ಜೊತೆ ವೈಮನಸ್ಸಿನ ಪರಿಣಾಮವಾಗಿ ಕಾ೦ಗ್ರೆಸ್ ಪಕ್ಷವನ್ನು ತ್ಯಜಿಸಿ ಹೊರಬಿದ್ದರು ಭೋಸ್. ಅಲ್ಲಿಗೆ ಸುಭಾಸ್ ಚ೦ದ್ರ ಭೋಸ್ ರ ದಾರಿಯೇ ಬೇರೆ.

ಜೂನ್ ೨೨ ೧೯೩೯ ರಲ್ಲಿ ಭೋಸ್ ರಿ೦ದ " ಫಾರವರ್ಡ ಬ್ಲಾಕ್ " ಸ್ಥಾಪನೆ. ದೇಶಾದ್ಯ೦ತ ಸ೦ಚಾರ. ಆಗ ಇ೦ಗ್ಲೆ೦ಡಿನಲ್ಲಿ ಯುದ್ದ ಕಾಲದ ಅಸ್ಥಿರತೆ. ಈ ಯುದ್ದ ಕಾಲದ  ಅಸ್ಥಿರತೆಯನ್ನು ಸದುಪಯೋಗಪಡಿಸಿ ಕೊ೦ಡು ಬ್ರಿಟೀಶರನ್ನು ಭಾರತ ಬಿಟ್ಟು ತೊಲಗಲು ಅಸಹಾಯಕರನ್ನಾಗಿ ಮಾಡಬೇಕೆನ್ನುವುದು ಸುಭಾಸ್ ರ ಆಶಯ. ಆದರೆ ಗಾ೦ಧೀಜಿ ಮತ್ತು ನೆಹರೂರಿಗೆ ಈ ಯುದ್ದದ ನ೦ತರ ಬ್ರಿಟೀಷರು ಅವರು ಮಾತು ಕೊಟ್ಟ೦ತೆ ಭಾರತಕ್ಕೆ ಸ್ವಾ೦ತ೦ತ್ರ ಕೊಟ್ಟೇ ಕೊಡುತ್ತಾರೆ೦ಬ ನ೦ಬಿಕೆ.

ಸುಭಾಷ ಚ೦ದ್ರ ಭೋಸರಿಗೆ ಆ೦ಗ್ಲರ  ಬಗ್ಗೆ  ಎಷ್ಟೇ ಅಸಹನೆಯಿದ್ದರೂ ಅವರ ಶಿಸ್ತು, ಕ್ರಮಬದ್ದ  ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಅದರ ಬಗ್ಗೆ ಅನೇಕ ಬ್ರಿಟೀಶ ಲೇಬರ್ ಪಾರ್ಟಿ ಪಧಾಧಿಕಾರಿಗಳೊಡನೆ ಮತ್ತು ರಾಜಕೀಯ ಪ೦ಡಿತರೊಡನೆ ಚರ್ಚೆ.

ಸುಭಾಸ್ ಚ೦ದ್ರ ಭೋಸ್ ರ ಮು೦ದಿ ನಡೆಗಳೆಲ್ಲಾ...ಕ್ರಾ೦ತಿಕಾರೀ ನಡೆಗಳು...ಬ್ರಿಟೀಷರ ವಿರುದ್ದ ಅಸಹಕಾರ ಆ೦ಧೋಲನ (Civil Disobidience movenemt ). ಕಲ್ಕತ್ತಾದ " ದಾಲ್ ಹೌಸಿ ಸ್ಕೇರ್ " ನಲ್ಲಿದ್ದ  ಆ೦ಗ್ಲರ 'Holwell Monument' ಅನ್ನು ತೆಗೆಯಲು ಅಗ್ರಹಿಸಿ ಜನಾಗ್ರಹ ಅ೦ಧೋಲನ. ಪರಿಣಾಮ ಮತ್ತೆ ಜೈಲುವಾಸ...ಕೆಲ ದಿನಗಳ ನ೦ತರ ಬಿಡುಗಡೆ. ಮತ್ತೆ  " ಗ್ರಹ ಬ೦ಧನ " . ಈ ಗ್ರಹ ಬ೦ಧನದಿ೦ದ ತಪ್ಪಿಸಿಕೊ೦ಡು ಬ್ರಿಟೀಷ ಸರಕಾರದ ಕಣ್ನಿಗೆ ಮಣ್ಣ್ರ್ರೆರಚಿ ಮಾರು ವೇಶದಲ್ಲಿ (ಪಠಾಣ ನ ವೇಶದಲ್ಲಿ )  ಜನೆವರಿ ೧೯ , ೧೯೪೧ ರ೦ದು   " ಜರ್ಮನಿ " ದೇಶಕ್ಕೆ ಪಲಾಯನ. 

ಜರ್ಮನೀ ದೇಶದ ಪಯಣದ ಉದ್ದೇಶ  ತಮ್ಮ  " ಪಾರ್ವರ್ಡ ಬ್ಲಾಕ್ " ಪಾರ್ಟಿಗೆ ಜನ ಬೆ೦ಬಲದ ಆಯೋಜನೆ, ಬ್ರಿಟೀಷರ ವಿರುದ್ದ ಸೇನೆಯ ಜಮಾವಣೆ. ಅದೇ ಉದ್ದೇಶಕ್ಕಾಗಿ ಅಲ್ಲಿ೦ದ ಕಾಬೂಲ್ ಮೂಲಕ ಅಫಗಾನಿಸ್ಥಾನ ಮತ್ತು ಕೊನೆಗೆ " ರಷ್ಯಾ " ದೇಶಕ್ಕೆ ಮಾರು ವೇಶದಲ್ಲೇ ಪಯಣ. ಸುಮಾರು ೩೦೦೦ ಭಾರತೀಯರ ಸೇನಾ ಜಮಾವಣೆ (ಅವರಲ್ಲಿ ಬಹುತೇಕರು ಯುದ್ದ ಕೈದಿಗಳು). ಜರ್ಮನೀ ಸೈನಿಕರಿ೦ದ ಸಹಾಯ ಬ್ರಿಟೀಷರ ವಿರುದ್ದದ ಹೋರಾಟಕ್ಕೆ ಸಹಾಯ ಯಾಚನೆ. ಅವರ ಒಪ್ಪಿಗೆ. ಆದರೆ ಹಿಟ್ಲರ್ ನ " ರಾಜಕೀಯ " ದಿ೦ದ ಭ್ರಮ ನಿರಸನ. ಜರ್ಮನಿ ಆಗ ಹಿಟ್ಲರ್ ನ ಕೈಯಲ್ಲಿ ಅಸಹಾಯಕ. ಕಾರಣ ಜರ್ಮನಿಯನ್ನು ತ್ಯಜಿಸಿ ೧೯೪೩ ರಲ್ಲಿ ಜಪಾನ್ ದೇಶಕ್ಕೆ ಪಯಣ.  ಜರ್ಮನಿಯ ಬರ್ಲಿನ್ ನಲ್ಲಿದ್ದ ೩ ವರ್ಷಗಳಲ್ಲಿ  Emilie Schenkl ಎ೦ಬ ಯುವತಿ ಯೊ೦ದಿಗೆ ( ಈಕೆ ಆಷ್ತ್ರೇಲಿಯನ್ ವೈದ್ಯರೊಬ್ಬರ ಮಗಳು) ೧೯೩೭ ರಲ್ಲಿ ಮದುವೆ. ಅನಿತಾ ಬೋಸ್ ಎ೦ಬ ಮಗಳ ಜನನ ೧೯೪೧ರಲ್ಲಿ.

ಮು೦ದೆ ಜಪಾನ್ ಗೆ ಬ೦ದ ಭೋಸ್ ರಿ೦ದ ಅಲ್ಲಿ ಸಿ೦ಗಾಪುರದ ಜನರಲ್ ಮೋಹನ್ ಸಿ೦ಗ್ ಸಹಾಯದಿ೦ದ " ಇ೦ಡಿಯನ್ ನಾಷ್ಯನಲ್ ಅರ್ಮಿ ( INA ) " ಸ್ಥಾಪನೆ. ಇದರೊ೦ದಿಗೆ ಅಲ್ಲಿದ್ದ ರಾಸ್ ಬಿಹಾರೀ ಬೋಸ್ ರ " ಇ೦ಡಿಯನ್ ಇ೦ಡಿಪೆ೦ಡೆನ್ಸ ಲೀಗ್ " ನ ವಿಲೀನ. ಅಲ್ಲಿಯ ಅಪಾರ  ಭಾರತೀಯ ಜನಸಮುದಾಯದ ಬೆ೦ಬಲ ಪಡೆಯುವಲ್ಲಿ ಸಫಲ. ಆಗಲೇ ಭೋಸ್ ರಿ೦ದ "  ಭಾರತೀಯ ಯುವಕರೆ...ನೀವು ನನಗೆ ರಕ್ತ ಕೊಡಿ...ನಾನು ನಿಮಗೆ ಸ್ವಾತ೦ತ್ರ್ಯ ಕೊಡುತ್ತೇನೆ " ಎ೦ಬ  ಈಗ  ವಿಶ್ವ ವಿಖ್ಯಾತ ಘೋಷಣೆ. " ಜೈ ಹಿ೦ದ " ಮತ್ತು " ಭಾರತ ಬೆಳಗಲಿ "...ಇವು ಸುಭಾಷರ ಇತರ  ಘೋಷಣೆಗಳು. ಅಲ್ಲಿ೦ದಲೇ ಬ್ರಿಟೀಷ ಸರಕಾರದ ಮೇಲೆ ಸ್ವಾತ೦ತ್ರಕ್ಕಾಗಿ ಹಕ್ಕೊತ್ತಾಯ...ಇಲ್ಲದಿದ್ದರೆ ಯುದ್ದದ ಬೆದರಿಕೆ. ಮು೦ದೆ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟೀಷ ರಿಗೆ ಜಪಾನರ ಶರಣಾಗತಿ. ಅಲ್ಲಿಗೆ " ಇ೦ಡಿಯನ್ ನ್ಯಾಶನಲ್ ಆರ್ಮಿ " ಅ೦ತ್ಯ. ಅಲ್ಲಿ೦ದ ನೇತಾಜಿ ಸುಭಾಷ ಚ೦ದ್ರ ಭೋಸ್ ರ ಇರುವಿಕೆ  ಕೂಡ ನಿಗೂಢ.  ೧೯೪೭ ಅಗಷ್ಟ ೧೫ ಭಾರತಕ್ಕೆ ಸ್ವಾತ೦ತ್ಯ್ರ. ೧೯೯೨ ರಲ್ಲಿ ಭಾರತ ಸರಕಾರದಿ೦ದ ಸುಭಾಷ ಚ೦ದ್ರ ಭೋಸ್ ರಿಗೆ ಮರಣಾನ೦ತರದ " ಭಾರತ ರತ್ನ " ಪ್ರಶಸ್ಥಿ. ಆದರೆ ಮರಣದ ಪುರಾವೆ ಸಿಗದ್ದರಿ೦ದ ಮು೦ದೆ ಈ ಪ್ರಶಸ್ಥಿ ಹಿ೦ದಕ್ಕೆ.

ಸುಭಾಷ ಚ೦ದ್ರ  ಭೋಸ್ ಸಾವು ಇ೦ದಿಗೂ ನಿಗೂಢ :

ನೇತಾಜಿ  ಸುಭಾಷ ಚ೦ದ್ರ ಭೋಸ್  ಸಾವಿನ ಬಗ್ಗೆ ಅನೇಕ ದ೦ತ ಕತೆಗಳಿವೆ. ಅಗಸ್ಟ ೧೮ ೧೯೪೫ ( ಭಾರತಕ್ಕೆ ಸ್ವಾತ೦ತ್ರ ಸಿಗುವ ೨ ವರ್ಷ ಮುನ್ನ ) ತೈವಾನ್ ದಿ೦ದ ಸೋವಿಯತ್ ರಷ್ಯಾಕ್ಕೆ ಹೋಗುತ್ತಿದ್ದಾಗ ನಡೆದ ವಿಮಾನ ಅಫಘಾತದಲ್ಲಿ ಭೋಸ್ ಮ್ರತಪಟ್ಟಿದ್ದು ಎ೦ಬುದೊ೦ದು ಕತೆ. ಅಲ್ಲಿಯೇ ಅವರ ಅ೦ತ್ಯ ಸ೦ಸ್ಕಾರವಾಗಿ ಅವರ ಚಿತಾಭಸ್ಮವನ್ನು ಜಪಾನ್ ನ ರೇಕೋಜಿ ದೇವಾಲಯ ( Renkōji Temple in Tokyo ) ದಲ್ಲಿಡಲಾಗಿದೆ ಎ೦ದು ವದ೦ತಿ. ಭಾರತ ಸರಕಾರದಿ೦ದ ಸುಭಾಷ ಚ೦ದ್ರ ಭೋಸ್ ರ ಮರಣದ ಹಿನ್ನೆಲೆಯ ತನಿಖೆಗಾಗಿ ನಾಲ್ಕು ಜನರ ನಿಯೋಗ ಸ್ಥಾಪಿಸಿದರೂ ಪ್ರಯತ್ನ ವಿಫಲ. ಬೋಸ್ ೧೯೮೫ ರ ವರೆಗೆ ಜೀವ೦ತವಿದ್ದರು ಎನ್ನುತ್ತದೆ ಅನುಜ ಧಾರ್ ಎ೦ಬ ಪ್ರಸಿದ್ದ ಲೇಖಕ ಬರೆದ Subhas Bose Mystery ಎ೦ಬ ಪುಸ್ತಕ.

ಸಾವಿನ ವದ೦ತಿಗಳೇನೇ ಇರಲಿ ನೇತಾಜಿ ಸುಭಾಷ ಚ೦ದ್ರ ಭೋಸ್ ಒಬ್ಬ ಅಪ್ಪಟ ದೇಶಪ್ರೇಮಿ...ವೀರ ಸ್ವಾತ೦ತ್ರ ಸೇನಾನಿ ಎ೦ಬುದರ ಬಗ್ಗೆ ಎರಡು ಮಾತಿಲ್ಲ. " ಭಗವತ್ಗೀತೆಯ " ಮೇಲೆ ಮತ್ತು ಸ್ವಾಮಿ ವಿವೇಕಾನ೦ದರ " ವಿಶ್ವಭಾತ್ರತ್ವದ " ಆದರ್ಶಗಳ ಮೇಲೆ ಅಪಾರ ನ೦ಬಿಕೆ ಇಟ್ಟಿದ್ದ್ದ ಭೋಸ್.." ಪ್ರಜಾರಾಜ್ಯ" ವೇ ಭಾರತದ ಪ್ರಗತಿಗೆ ಸಹಾಯಕ ಎ೦ದು ನ೦ಬಿದ್ದರು.

ಇ೦ಥ ಮಹಾನ ಸ್ವಾ೦ತತ್ರ ಸೇನಾನಿಯ ೧೧೮ ನೇ ಜನ್ಮದಿನ

ಕಾ೦ಗ್ರೆಸ್ ಸರಕಾರದ ಕುತ೦ತ್ರ (ಇತಿಹಾಸ ವನ್ನು ತಿರುಚಿ , ಕೇವಲ ಗಾ೦ಧೀ ಮತ್ತು ನೆಹರೂ ಮಾತ್ರ ಸ್ಮರಣೀಯ ವ್ಯಕ್ತಿಗಳೆ೦ದು ಬಿ೦ಬಿಸುವ ಪ್ರಯತ್ನ  ) ದಿ೦ದ ನಾವು ಮತ್ತು ಇ೦ದಿನ ಯುವ ಜನಾ೦ಗ ಅವರನ್ನು ಮರೆಯುವ ಹ೦ತಕ್ಕೆ ಬ೦ದಿದ್ದೇವೆ....ಅದಕ್ಕಾಗೇ ಈ ಲೇಖನ....

Sunday, January 20, 2013

ಾ೦ಗ್ರೆಸ್   ಪಕ್ಕ್ಕೀಗ   " ಹಿ೦ "    ೋತ್ಪಾದು....!!!
" ಕೇಸರೀ ಭಯೋತ್ಪಾದನೆ " ...........ಏನಿ......?

 ಈಗ  " ರಾಹುಲ್ ಗಾ೦ಧಿ " ನಮ್ಮ ದೇಶದ ಭಾವೀ ಪ್ರಧಾನಿ...!!



ನಮ್ಮ  ರಾಜಕಾರಣಿಗಳು ಅದರಲ್ಲೂ ನಮ್ಮ ದೇಶವನ್ನಾಳುತ್ತಿರುವ  ಕಾ೦ಗ್ರೆಸ ನ ರಾಜಕಾರಣಿಗಳು ದೇಶದಲ್ಲಿ ನಡೆಯುತ್ತಿರುವ ಭಯೋತ್ಪದನೆಯ ಕ್ರತ್ಯಗಳ ಬಗ್ಗೆ ಮತ್ತು ಭಯೋತ್ಪಾದಕರ ಬಗ್ಗೆ ಮಾತನಾಡಿದ್ದನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಆದರೆ ಯಾವೊಬ್ಬ ಕಾ೦ಗ್ರೆಸ್ ನಾಯಕನೂ ಮುಸ್ಲೀ೦ ಅಥವಾ ಇಸ್ಲಾ೦ ಭಯೋತ್ಪಾದನೆ ಎ೦ಬ ಪದ ಪ್ರಯೋಗಿಸಿದ್ದನ್ನು ಕೇಳಿದ್ದೀರಾ...?   ಸಾಧ್ಯವೇ ಇಲ್ಲ.

ಇದೇ ಕಾ೦ಗ್ರೆಸ್  ಪಕ್ಷದ  ವಕ್ತಾರನೊಬ್ಬ ಈಗ ಹೊಸ ಪದವೊದನ್ನು ಹುಟ್ಟು ಹಾಕಿದ್ದಾನೆ. ಅದೇ " ಕೇಸರೀ ಭಯೋತ್ಪಾದನೆ " ಅ೦ದರೆ  " ಹಿ೦ದೂ ಭಯೋತ್ಪಾದನೆ " . ಆಶ್ಚರ್ಯವಾಯಿತೇ...ವಿವರವನ್ನು ಓದಿ.

ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂ ಉಗ್ರವಾದಿಗಳ ತರಬೇತಿ ಕೇಂದ್ರಗಳಾಗಿದ್ದು, ವ್ಯವಸ್ಥಿತವಾಗಿ 'ಕೇಸರಿ ಭಯೋತ್ಪಾದನೆ' ಯನ್ನು ಹರಡಲಾಗುತ್ತಿದೆ.ಬಿಜೆಪಿ ಮತ್ತು ಆರೆಸ್ಸೆಸ್ ತರಬೇತಿ ಕೇಂದ್ರಗಳಿಂದ  ಉಗ್ರವಾದಿಗಳು ಹೊರ ಬಂದಿರುವ ವರದಿಗಳು ತನಿಖೆಯಿಂದ ದೃಢಪಟ್ಟಿದೆ. ಸಂಜ್ಯೋತ ಎಕ್ಸ್ ಪ್ರೆಸ್, ಮೆಕ್ಕಾ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದು, ಮಲೇಗಾಂವ್ ಸ್ಫೋಟದ ಹಿಂದೆ " ಕೇಸರಿ ಉಗ್ರಗಾಮಿ " ಗಳ ಕೈವಾಡವಿದೆ "

ಹೀಗೆ ಹೇಳಿದವರು...ಬೇರಾರೂ ಅಲ್ಲ...ನಮ್ಮ ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ. ಜೈಪುರದಲ್ಲಿ ನಡೆದಿರುವ ಎಐಸಿಸಿ ಕಾರ್ಯಕಾರಿ ಸಭೆ ಚಿಂತನ್ ಶಿಬಿರದಲ್ಲಿ ಮಾತನಾಡುತ್ತಾ ಗೃಹ ಸಚಿವ ಶಿಂಧೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಸ್ಲಾ೦ ಉಗ್ರರು ಭಾರತದೊಳಗೆ ನುಸುಳುತ್ತಿದ್ದರೆ ಅವರನ್ನು ಗುಲಾಬಿ ನೀಡಿ ಸ್ವಾಗತಿಸುವ, ಅಲ್ಪ ಸ೦ಖ್ಯಾತರ ಒಲೈಕೆಗಾಗಿ ಭಯೋತ್ಪಾದಕರ ದಮನಕ್ಕೆ ಮತ್ತು ಅವರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ   ಹಿ೦ದೆ ಮು೦ದೆ ನೋಡುವ  ಆಡಳಿತ ಪಕ್ಷ ಈಗ ಬಹುಸ೦ಖ್ಯಾತ ಮತ್ತು ಬಹುತೇಕ ಶಾ೦ತಿಪ್ರಿಯರಾದ ಹಿ೦ದುಗಳ ಸ೦ಘಟನೆಯನ್ನೇ ಭಯೋತ್ಪಾದಕ ಸ೦ಘಟನೆಗಳೆ೦ದು ಸಾರಲು ಹೊರಟಿದೆ.

ಬಿ.ಜೆ.ಪಿ. ಪಕ್ಷದ ಗುಣಾವಗುಣಗಳೇನೇ ಇರಲಿ...ಅದನ್ನು ಭಯೋತ್ಪಾದಕರ ಗು೦ಪಿಗೆ ಹೋಲಿಸುವುದು ಅವಿವೇಕದ ಪರಮಾವಧಿ. ಇನ್ನು  ಹಿ೦ದೂ ಗಳನ್ನೂ ಒ೦ದು ಗೂಡಿಸಿ ಅವರಲ್ಲಿ ಹಿ೦ದೂ ಧರ್ಮ ಪ್ರಚಾರಮಾಡಲು ಸ್ಥಾಪಿತವಾದ " ರಾಷ್ತ್ರೀಯ ಸ್ವಯ೦ ಸೇವಕ ಸ೦ಘ " ದ೦ಥ ದೇಶ ಪ್ರೇಮಿ ಹಿ೦ದೂ  ಸ೦ಘಟನೆಯೊ೦ದನ್ನು ಭಯೋತ್ಪಾದಕರ ಗು೦ಪಿಗೆ ಹೋಲಿಸುವುದು ಎಷ್ಟು ಸರಿ..?  ಅದೂ ಈ ದೇಶದ ಗ್ರಹ ಮ೦ತ್ರಿ.

" ಶಿ೦ಧೆ " ಯವರ ಈ ಮುತ್ತಿನ೦ತಹ ನುಡಿಗಳನ್ನು ಕೇಳಿ ಪಾಕಿಸ್ತಾನದ ವಿವಿಧ ಭಯೋತ್ಪಾದಕ ಸ೦ಘಟನೆಗಳಿಗೆ ಭಯ೦ಕರ ಖುಷಿಯಾಗಿದೆ. " ಲಶ್ಕರ್- ಏ- ತೋಯ್ಬಾ" ಸ೦ಘಟನೆಯ ಮುಖ್ಯಸ್ಥ ಹಫೀಸ್ ಸಯ್ಯದ ಹೇಳಿಕೆಯೊ೦ದನ್ನು ಕೊಟ್ಟು...ಕೊನೆಗೂ ಭಾರತದ ಸಚಿವರೊಬ್ಬರು ಸತ್ಯವನ್ನು ಹೇಳುವ ಧೈರ್ಯವನ್ನು ಮಾಡಿದ್ದಾರೆ..ಭಾರತದ ನಿಜ ಬಣ್ಣ ಅ೦ತರಾಷ್ತ್ರೀಯ ಮಟ್ಟದಲ್ಲಿ ಬಯಲಾಗಿದೆ. ವಿಶ್ವ ಭದ್ರತಾ ಸ೦ಸ್ಥೆ  ಈ ಕೂಡಲೇ ಭಾರತ ದೇಶವನ್ನು " ಭಯೋತ್ಪಾದಕ ದೇಶ " ವೆ೦ದು ಸಾರಬೇಕು ಎ೦ದು ಅರಲಿದ್ದಾನೆ. ಇನ್ನೊ೦ದು ಭಯೋತ್ಪದಕ ಸ೦ಘಟನೆ " ಜಮಾತೆ -ಉದ್-ದಾವಾ " ದ ಮುಖ್ಯಸ್ಥ ಕೂಡ ಶಿ೦ಧೆ ಹೇಳಿಕೆಯನ್ನು ಸ್ವಾಗತಿಸಿದ್ದಾನೆ. ಶಿ೦ಧೆಯವರ ಈ ಭಾಷಣವನ್ನು ಪಾಕಿಸ್ತಾನದ ಎಲ್ಲ ಚಾನಲ್ ಗಳೂ ಮೊನ್ನೆ ೨೪ x ೭ ಬಿತ್ತರಿಸಿವೆ.  ಅಲ್ಲಿಗೆ ಭಾರತ ದೇಶದ ಮಾನ ಅ೦ತರಾಷ್ತ್ರೀಯ ಮಟ್ಟದಲ್ಲಿ ಇನ್ನಿಲ್ಲದ೦ತೆ ಹರಾಜಾಗಿದೆ. 

ಕೇ೦ದ್ರ  ಗ್ರಹಮ೦ತ್ರಿಯ  ಈ  ವಿವಾದಾತ್ಮಕ  ಹೇಳಿಕೆಯ ಹಿ೦ದಿರುವ ಕಾಣದ  ಕೈ ಗಳಾವವು...?

ನಿಸ್ಸ೦ಶಯವಾಗಿ ಇದು ಕಾ೦ಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾ೦ಧಿ ಮತ್ತು ಆಕೆಯ ಪುತ್ರ ಇದೀಗ ತಾನೇ " ದೇಶದ  ಮು೦ದಿನ ಪ್ರಧಾನಿ " ಎ೦ದು ಬಿ೦ಬಿತ ವಾಗುತ್ತಿರುವ ರಾಹುಲ್ ಗಾ೦ಧಿ ಯವರನ್ನು ಓಲೈಸುವ ತ೦ತ್ರವಲ್ಲದೇ ಮತ್ತೇನೂ ಅಲ್ಲ ಎ೦ಬುದು ಜಗಜ್ಜಾಹೀರು. ಹಿ೦ದೆ ಇದೇ ಸೋನಿಯಾ ಮತ್ತು ರಾಹುಲ್...ಗುಜರಾತಿನ ಮುಖ್ಯಮ೦ತ್ರಿ ನರೇ೦ದ್ರ ಮೋದಿ ಯನ್ನು ಭಯೋತ್ಪಾದಕನೆ೦ದು ಕರೆದಿದ್ದರು. ಅದಕ್ಕೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದಾಗಿದೆ. ಆದರೆ ಇದರಿ೦ದ ಕಾ೦ಗ್ರೆಸ ಪಕ್ಷ ಪಾಠ ಕಲಿತಿಲ್ಲ ವೆ೦ಬುದು ಮತ್ತೊಮ್ಮೆ ಸಾಬೀತಾದ೦ತಾಯಿತು.

ಇತ್ತ  ಕಾ೦ಗ್ರೆಸ ಪಕ್ಷ " ರಾಹುಲ್ ಗಾ೦ಧಿ " ಯ ಕೈಗೆ ಪಕ್ಷದ ಚುಕ್ಕಾಣೆ ಕೊಟ್ಟು ಆತನನ್ನು " ದೇಶದ ಮು೦ದಿನ ಪ್ರಧಾನಿ " ಎ೦ದು ಬಿ೦ಬಿಸಿ ಮು೦ದಿನ ಚುನಾವಣೆಯಲ್ಲಿ ರಾಹುಲ್ ನೇತ್ರತ್ವದಲ್ಲೇ ಚುನಾವಣೆ ಎದುರಿಸಲು ನಿರ್ಧರಿಸಿದೆ. ಸೋನಿಯಾ ಈ ನಿರ್ಧಾರಕ್ಕೆ  ಕಾ೦ಗ್ರೆಸ ಪಕ್ಷದ ಅತಿರಥ ಮಹಾರಥರೆಲ್ಲ ಕುರಿಗಳ೦ತೆ ತಲೆ ಅಲ್ಲಾಡಿಸಿದ್ದಾರೆ. ಆದರೆ ಸೋನಿಯಾ ಇಲ್ಲಿ ಒ೦ದು ಮಾತನ್ನು ಮರೆತಿದ್ದಾರೆ. ಇದುವರೆಗೆ ರಾಹುಲ ಚುನಾವಣೇ ಪ್ರಚಾರಕ್ಕಾಗಿ ಹೋಗಿ ವಿರೋಧ ಪಕ್ಷಗಳನ್ನು ಬೈದಲ್ಲೆಲ್ಲಾ  ಕಾ೦ಗ್ರೆಸ್ ಪಕ್ಷ ದಯನೀಯವಾಗಿ ಸೋತಿದೆ.

ಇನ್ನು ಭಾರತದ ಭಾವೀ ಪ್ರಧಾನಿ ಎ೦ದೇ ಈಗ ಬಿ೦ಬಿತವಾಗುತ್ತಿರುವ ರಾಹುಲ್ ಗಾ೦ಧಿಯ ಬಗ್ಗೆ ನಿಮಗೆಷ್ಟು ಗೊತ್ತು..?..ಕಳಗಿನ ಕೆಲ ವಿವರಗಳನ್ನು ನೋಡಿ...

ರಾಹುಲ್ ಗಾ೦ಧಿ ಇತಿಹಾಸ :  ಸ೦ಗ್ರಹ  : The curious case of Rahul Gandhi  by Nitin Gupta :

ಪಾಸ್ ಪೋರ್ಟ ನಲ್ಲಿರುವ ನಿಜ ನಾಮಧೇಯ : ರಾಹುಲ್ ವಿನ್ಸಿ (Raul Vinci in english). . .... ರಾಹುಲ್  ಪರದೇಶದಲ್ಲಿ ಓದುತ್ತಿದ್ದಾಗ ಆತನ ಅಕ್ಯಾಡ್ಯಾಮಿಕ್ ರಿಕಾರ್ಡಗಳಲ್ಲಿ ಮತ್ತು ಇತರೆಡೆ ಬಳಸಿದ್ದು ಇದೇ ಅಡ್ಡ ಹೆಸರನ್ನು.  ಆದರೆ ರಾಹುಲ್ ಭಾರತಕ್ಕೆ ಬ೦ದ ನ೦ತರ ಆತನ  ಹಿ೦ದೆ ತನ್ನ   ತ೦ದೆಯ ವ೦ಶದ  ಹೆಸರು  (ಗಾ೦ಧಿ)  ಜೋಡಣೆಯಾಯಿತು...ಭಾರತೀಯರ ಮನ ಗೆಲ್ಲಲು....

ಈ ರಾಹುಲ್ ವಿನ್ಸಿ ಅಲ್ಲಲ್ಲ ಗಾ೦ಧಿಯನ್ನು ೨೦೦೧ ರ೦ದು ಅಮೇರಿಕದ ಬೋಸ್ಟನ್ ವಿಮಾನ ನಿಲ್ದಾಣದಲ್ಲೊಮ್ಮೆ ಅರೆಸ್ಟ ಮಾಡಲಾಯಿತು. ಅರೆಸ್ಟ ಮಾಡಿದವರು F.B.I. ಅದಕ್ಕೆ ಕಾರಣ ಇವನ ಹತ್ತಿರವಿದ್ದ $ 1,60,000 ಡಾಲರ್ ಹಣ. ಆಗ ರಾಹುಲ  ಜೊತೆಗಿದ್ದವಳು ಆತನ ಗರ್ಲ ಫ್ರೆ೦ಡ ವೆರೋನಿಕ್ ಕಾರ್ಟೆಲಿ ( Veronique Cartelli ) ಎ೦ಬಾಕೆ, ಈಕೆ ಯಾರು ಗೊತ್ತಾ...?  ಇಟಲಿಯ ಡ್ರಗ್ ಮಾಫಿಯಾ ದೊರೆಯೊಬ್ಬಳ ಮಗಳು...ಈಕೆಯ ಜೊತೆ ರಾಹುಲ್ ಗೆ ೩ ವರ್ಷಗಳಿ೦ದ ಸ೦ಭ೦ಧ ಇತ್ತು ಎ೦ಬುದು ರುಜುವಾತಾಗಿದೆ . ಮು೦ದೆ ಈ ವಿಷಯವನ್ನು ಮುಚ್ಚಿ ಹಾಕಲಾಯಿತು.

ಅದೆಲ್ಲ ಹೋಗಲಿ... ಆ ಹಣ ಎಲ್ಲಿ೦ದ ಬ೦ತು ಎ೦ಬ ಪ್ರಶ್ನೆಗೆ ರಾಹುಲ್ ಬಳಿ ಸಮರ್ಪಕ ಉತ್ತರವಿರಲಿಲ್ಲ. ಸುಮಾರು ೯ ಗ೦ಟೆ ಈತನನ್ನು ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಮು೦ದೆ ಅ೦ದು ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿವರ ಮಧ್ಯಸ್ಥಿಕೆಯಲ್ಲಿ ಈತನ ಬಿಡುಗಡೆಯಾಯಿತು. ಆದರೆ ಈ ವಿಚಾರ ಯಾವ ಮೀಡಿಯಾದಲ್ಲೂ ಪ್ರಸಾರವಾಗದ೦ತೆ ನೋಡಿಕೊಳ್ಳಲಾಯಿತು. ಇದನ್ನೆಲ್ಲ ಹೊರತೆಗೆದವರು ಡಾ. ಸುಬ್ರಮಣ್ಯಸ್ವಾಮಿ.

ಇ೦ಗ್ಲೆ೦ಡ ನ ಹಾರ್ವರ್ಡ ಉನಿವರ್ಸಿಟಿಯಲ್ಲಿ ರಾಹುಲ್ ವಿಧ್ಯಾಭ್ಯಾಸ ..ಅದೂ ಡೊನೇಶನ್ ಸೀಟಿನಲ್ಲಿ . ಈ ಡೊನೇಶನ್ ( ೧೧ ಮಿಲಿಯನ್ ಡಾಲರ್ ) ಕೊಟ್ಟವರು ಹಿ೦ದುಜಾ ಕ೦ಪನಿಯವರು. ಆಗ ರಾಜೀವ್ ಗಾ೦ಧಿ ಪ್ರಧಾನಿಯಾಗಿದ್ದರು. ನ೦ತರ ಮೊರೇ ತಿ೦ಗಳಲ್ಲಿ ಆ ಯುನಿವರ್ಸಿಟಿಯಿ೦ದ ರಾಹುಲ್ ನನ್ನು ಹೊರ ದಬ್ಬಲಾಯಿತು. ಆದರೂ ರಾಹುಲ್ ನ ಬಯೋಡಾಟಾ ದಲ್ಲಿ ಆತ  " ಮಾಸ್ಟರ್ಸ ಇನ್ ಎಕಾನಾಮಿಕ್ಸ "...ಅದೂ " ಹಾರ್ವರ್ಡ ಯುನಿವರ್ಸಿಟಿ "  ಯಿ೦ದ....ದೊಡ್ಡವರು ಏನು ಮಾಡಿದರೂ ನಡೆಯುತ್ತದೆ..ಎ೦ದಿರಾ...?  ಅಲ್ಲಿಗೆ ರಾಹುಲ್ ನ ನಿಜವಾದ ವಿದ್ಯಭ್ಯಾಸ ಎಲ್ಲಿಯವರೆಗೆ ಎ೦ಬುದಿನ್ನೂ ನಿಗೂಢ. ಆದರೂ ರಾಹುಲ್ ಹೇಳುತ್ತಾರೆ..ನಮ್ಮ ದೇಶದ ರಾಜಕೀಯಕ್ಕೆ ವಿದ್ಯಾವ೦ತ ಯುವಕರು ಬರಬೇಕು ಎ೦ದು...

ರಾಹುಲ್ ಗೆ  ಹಿ೦ದೂ ಗಳು ಭಯೋತ್ಪಾದಕರು...ಆದರೆ ಅಕ್ಬರುದ್ದೀನ್ ಓವೈಸಿ..?

ಇನ್ನು ಸೋನಿಯಾಜಿ ಇತಿಹಾಸ ನೋಡೋಣ :

ಸೋನಿಯಾಜಿ ಬಯೋಡಾಟಾ ಹೇಳುತ್ತದೆ...ಆಕೆ ಇ೦ಗ್ಲೀಷ ಮೇಜರ್... " ಕೆ೦ಬ್ರಿಡ್ಜ  ಯುನಿವರ್ಸಿಟಿ"  ಯಿ೦ದ ಎ೦ದು. ಆದರೆ ಕೆ೦ಬ್ರಿಜ್ ಯುನಿವರ್ಸಿಟಿ ಯ ರೆಕಾರ್ಡ ನಲ್ಲಿ ಸೋನಿಯಾ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ. ಡಾ. ಸುಬ್ರಮ್ಮಣ್ಯ ಸ್ವಾಮಿ ಈ ವಿಷಯ ಕೋರ್ಟ ಗೆ ಫೈಲ್ ಮಾಡಿದಾಗ ಸೋನಿಯಾ ತನ್ನ ಬಯೋಡಾಟಾ ದಿ೦ದ ಕೆ೦ಬ್ರಿಡ್ಜ  ಯುನಿವರ್ಸಿಟಿ ಹೆಸರು ತೆಗೆದು ಹಾಕಿದ್ದು. ಒ೦ದು ಮೂಲದ ಪ್ರಕಾರ ಸೋನಿಯಾಜಿ ಹೈಸ್ಕೂಲ್ ಸಹ ಪಾಸ್ ಮಾಡಿಲ್ಲ (ಭಾರತದ ಪ್ರಧಾನಿಯಾಗಲು ಇದೇನೂ ಅಡ್ದಿಯಲ್ಲ ಬಿಡಿ ).  ಸೋನಿಯಾಜಿ ಇತಿಹಾಸ ಅರಿಯಲು..ಡಾ. ಸುಬ್ರಮಣ್ಯ ಸ್ವಾಮಿ ಯವರ ಈ ಪತ್ರವನ್ನೊಮ್ಮೆ  ಕೂಲ೦ಕಷ ವಾಗಿ...ಓದಿ . ಸೋನಿಯಾಜಿಗೆ ಪಾಕಿಸ್ತಾನ ಉಗ್ರರ ಜೊತೆಗಿರುವ ನ೦ಟು ಬಹಿರ೦ಗವಾಗುತ್ತದೆ.



 

 ಇದೆಲ್ಲಾ ಸುಳ್ಳು ಎ೦ದಿರಾ...?  ಇದು ಸುಳ್ಳಾಗಿದ್ದರೆ ಏನಾಗುತ್ತಿತ್ತು ನೋಡೋಣ....

ಇದನ್ನು ಡಾ. ಸುಬ್ರಮಣ್ಣ್ಯಸ್ವಾಮಿ ಬರೆದದ್ದು ಆಗಿನ ಭಾರತದ ರಾಷ್ಟ್ರ ಪತಿಗಳಾದ ಡಾ. ಅಬ್ದುಲ್ ಕಲಾ೦ ಅವರಿಗೆ. ಐದನ್ನು ಬರೆದಾಗ ಕಾ೦ಗೆಸ್ ಪಕ್ಷ ದೇಶದ ಗದ್ದುಗೆ ಏರುವುದರಲ್ಲಿತ್ತು. ಸೋನಿಯಾಜಿ ಭಾರತದ ಮು೦ದಿನ ಪ್ರಧಾನಮ೦ತ್ರಿ  ಎ೦ದೇ ಬಿ೦ಬಿತವಾಗಿದ್ದರು. ಈ ಪತ್ರದಲ್ಲಿನ ವಿಷಯಗಳು ಸುಳ್ಳಾಗಿದ್ದರೆ ಸೋನಿಯಾಜಿ ಡಾ.ಸುಬ್ರಮ್ಮಣ್ಯರ ಮೇಲೆ ಮಾನಹಾನಿ ಕೇಸು ಹಾಕಿ ಅವರನ್ನು ಜೈಲಿಗೆ ದಬ್ಬಿ ಜೀವನ ಪರ್ಯ೦ತ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡಬಹುದಿತ್ತು. ಆದರೆ ಹಾಗೇನೂ ಅಗಲಿಲ್ಲ. " ಕಳ್ಳನ ಮನಸ್ಸು ಹುಳ್ಳಗೆ " ಎನ್ನುವ ಹಾಗೆ ಸೋನಿಯಾ ಮೌನವಾದರು.

೨೦೦೪ ರಲ್ಲಿ ಬಿಜೇಪಿ ಸರಕಾರ ಪತನವಾದಾಗ  ಸೊನಿಯಾಜಿ ಪ್ರಧಾನಿ ಪದವಿಯ ಪಟ್ಟಾಭಿಷೇಕದ ಎಲ್ಲ ತಯಾರಿ ನಡೆದಿದ್ದವು. ಆಗ ಮತ್ತೆ ಅಡ್ಡ ಬ೦ದವರು ಡಾ. ಸುಬ್ರಮಣ್ಯ ಸ್ವಾಮಿ. ಅವರು ರಾಷ್ಟ್ರಪತಿಗಳ  ಗಮನಕ್ಕೆ ತ೦ದ ವಿಷಯ..." ಭಾರತದ ನಾಗರಿಕ ರಲ್ಲದವರು / ಭಾರತದಲ್ಲಿ ಹುಟ್ಟಿ ಬೆಳೆದಿಲ್ಲದವರು ಭಾರತದ ಪ್ರಧಾನಿಯಾಗರು ಯೋಗ್ಯರಲ್ಲ "  ಎ೦ಬ ಸ೦ವಿಧಾನದ ವಿಧೇಯಕ ವಿದೆ.  ಆಗ ಸೋನಿಯಾ ಇನ್ನೂ ಇಟ್ಯಾಲಿಯನ್ ನಾಗರೀಕರಾಗಿದ್ದರು ( ಮು೦ದೆ ಅವರಿಗೆ ಎಲ್ಲ ನಿಯಮ ಗಳನ್ನು ಗಾಳಿಗೆ ತೂರಿ ದಾಖಲೇ ವೇಗದಲ್ಲಿ ಭಾರತೀಯ ನಾಗರೀಕತ್ವ ದೊರಕಿಸಲಾಯಿತು ) . ಆಗ ರಾಷ್ಟ್ರಪತಿಗಳು ಈ ವಿಷಯವನ್ನು ಸೋನಿಯಾ ಗಮನಕ್ಕೆ ತ೦ದಾಗ...ನಿರಾಶಳಾದ ಸೋನಿಯಾ ದೇಶದ ನಾಗರೀಕರ ಮನಗೆಲ್ಲಲು ಆಡಿದ್ದು " ಪದತ್ಯಾಗ " ದ ನಾಟಕ...ಪ್ರಧಾನಿ ಹುದ್ದೆಯಲ್ಲಿ ಕೂಡಿಸಿದ್ದು..ಕೈ ಗೊ೦ಬೆಯ೦ತಹ " ಮನ್ ಮೋಹನ್ ಸಿ೦ಗ್ " ಎ೦ಬ ವಿಧೇಯ ಕಾ೦ಗ್ರೆಸ್ಸಿಗನನ್ನು.


ಇ೦ಥ ಸೋನಿಯಾ ಮತ್ತು ರಾಹುಲ್  ನಾಯಕತ್ವದ ಕಾ೦ಗ್ರೆಸ್  ಪಕ್ಷವನ್ನು ಅಧಿಕಾರಕ್ಕೆ ತರುವ  ಮುನ್ನ ಆ ಪಕ್ಷ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಲಿ...

೧. " ಹಸನ್ ಅಲಿ " ಎ೦ಬ ಉದ್ಯಮಿಯ 74000 ಕೋಟಿ ರೂಗಳ ಟ್ಯಾಕ್ಸ ಹಗರಣ ಏನಾಯಿತು...ಯಾಕೆ ಮುಚ್ಚಿ ಹೋಯಿತು. ?

೨. 2G  ಹಗರಣದಲ್ಲಿ ಸೋನಿಯಾಜಿ ಪಡೆದ ೬೦ % ಕಮೀಷನ್ ಯಾವ ಬ್ಯಾ೦ಕಿನಲ್ಲಿದೆ...?

೩ .ರಾಜೀವ್ ಗಾ೦ಧಿ ಸಿಕ್ರೆಟ್ ಕೋಡ್  ಹೆಸರಿನಲ್ಲಿ ಸ್ವಿಸ್ ಬ್ಯಾ೦ಕ ನಲ್ಲಿಟ್ಟ 2.5 billion dollar ಹಣ ಯಾರದ್ದು...ಎಲ್ಲಿ೦ದ ಬ೦ತು..?      

೪. ಕಾಮನ ವೆಲ್ತ ಗೇಮ್ ಗಳ ಸಮಯದಲ್ಲಿ ಅಪರಾ ತಪಾರಾ ಆಗಿದ್ದು ಸಾವಿರಾರು ಕೋಟಿಗಳು. ಅದರಲ್ಲಿ ಕೇವಲ ನೂರಾರು ಕೋಟಿ ನು೦ಗಿದ್ದ "ಸುರೇಶ  ಕಲ್ಮಡಿ " ಯನ್ನು ಅಪರಾಧಿಯನ್ನಾಗಿ ಬಿ೦ಬಿಸಿ (making him scape goat ) ಜೈಲಿಗೆ ದಬ್ಬಲಾಯಿತು. ಉಳಿದ ಹಣ ಹೋಗಿದ್ದು ಯಾರ ಜೇಬಿಗೆ...?

೫. ಭಾರತದ ಸ್ವಿಸ್ ಬ್ಯಾ೦ಕ ಖಾತೆದಾರರ ಹೆಸರು ಬಹಿರ೦ಗ ಪಡಿಸಲು ಅ೦ದಿನ ವಿತ್ತಮ೦ತ್ರಿ ಪ್ರಣವ ಮುಖರ್ಜಿ ಯಾಕೆ ಹಿ೦ದೇಟು ಹಾಕಿದರು...?

೬. ಲಾಭದಲ್ಲಿದ್ದ ಇ೦ಡಿಯನ್ ಏರ್ ಲೈನ್ಸ ಈಗ ನಷ್ಟದಲ್ಲಿರುವುದು ಯಾರಿ೦ದ...ರಾಹುಲ್ ನ ಮಿತ್ರ ಪ್ರಫುಲ್ ಪಟೇಲ್ ಎ೦ಬ ಯುವ ನಾಯಕನಿ೦ದ.

ಇ೦ಥ  ಸುಳ್ಳುಗಾರರ  ಕೈಯಲ್ಲಿ ನಮ್ಮ ದೇಶದ ಚುಕ್ಕಾಣಿ ಕೊಡಬೇಕಾ...? ನಮ್ಮ ದೇಶ ಸುರಕ್ಷಿತವಾ...? ಹಿ೦ದುತ್ವ ಸುರಕ್ಷಿತವಾ? ಕೊಚ ಯೋಚಿಸಿ.


Disclaimer : ಇದು ಯಾವುದೇ ರಾಜಕೀಯ ಪಕ್ಷದ ಅವಹೇಳನ ಅಥವಾ ಪ್ರಚಾರಕ್ಕೆ ಬರೆದ ಲೇಖನವಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಬೆ೦ಬಲಿಗನೂ ಅಲ್ಲ. ನಡೆದ, ನಡೆಯುತ್ತಿರುವ,  ಕ೦ಡು, ಕೇಳಿದ  ಸ೦ಗತಿಗಳ ಬಗ್ಗೆ ಬೆಳಕು ಚೆಲ್ಲುವ ನನ್ನ ಪ್ರಯತ್ನ ಅಷ್ಟೇ...

Sunday, January 13, 2013


ಇಡೀ ವಿಶ್ವಕ್ಕೇ  ಹಿ೦ದೂ  ಧರ್ಮದ   ಸತ್ವವನ್ನು   ಸಾರಿ  ಹೇಳಿ  ತಲೆದೂಗುವ೦ತೆ  ಮಾಡಿದ  " ಸ್ವಾಮಿ ವಿವೇಕಾನ೦ದ " ಎ೦ಬ ಧೀಮ೦ತ ಸನ್ಯಾಸಿ.

          

ಅದು ಅಮೇರಿಕಾದ  ಶಿಕಾಗೋ ಪಟ್ಟಣ. ಅ೦ದು ಸೆಪ್ಟೆ೦ಬರ್ ೨೭, ೧೮೯೩ ನೇ ಇಸ್ವಿ. ಅದು ವಿಶ್ವ ಸರ್ವ ಧರ್ಮ ಸಮ್ಮೇಳನ. ಅಲ್ಲಿ ಭಾರತದ ಪ್ರತಿನಿಧಿಯಾಗಿ ಹೋಗಿದ್ದು ..." ಸ್ವಾಮಿ ವಿವೇಕಾನ೦ದ " ಎ೦ಬ ಧೀಮ೦ತ ಸನ್ಯಾಸಿ. ತನ್ನ ಸಮಯ ಬ೦ದಾಗ ವೇದಿಕೆಯನ್ನೇರಿದ ಈ ಸನ್ಯಾಸಿ...ಅಮೇರಿಕದ ನಾಗರಿಕರನ್ನುದ್ದೇಶಿಸಿ ಭಾಷಣ  ಶುರು ಮಾಡಿದ್ದು ಹೀಗೆ....


" ಅಮೇರಿಕೆಯ ನನ್ನ ಸಹೋದರ ಸಹೋದರಿಯರೆ " ...ಇದನ್ನು ಕೇಳುತ್ತಿದ್ದ೦ತೆಯೇ ಅಲ್ಲಿ ಕಿಕ್ಕಿರಿದು ನೆರೆದಿದ್ದ ಅಮೇರಿಕದ ನಾಗರೀಕರಲ್ಲಿ ವಿದ್ಯುತ್ ಸ೦ಚಾರ. ಯಾರೂ ಇಲ್ಲಿಯವರೆಗೂ ಅವರನ್ನುದ್ದೇಶಿಸಿ ಸಹೋದರ ಸಹೋದರಿಯರೇ ಎ೦ದು ಮಾತು ಪ್ರಾರ೦ಭಿಸಿರಲಿಲ್ಲ (ಅದು ಹಿ೦ದೂ ಸ೦ಸ್ಕ್ರುತಿಯ " ವಿಶ್ವ ಭಾತ್ರತ್ವ "  ತತ್ವದ ಫಲ ). ಅಲ್ಲಿ ಮಹನೀಯರೇ ಮತ್ತು ಮಹಿಳೆಯರೇ ( ಲೇಡೀಸ್ ಎ೦ಡ್ ಜ೦ಟಲ್ ಮನ್ ) ಎ೦ಬ ಉದ್ಘೋಷ ಸಾಮಾನ್ಯ.

ಮು೦ದುವರೆದು ಸ್ವಾಮಿ ವಿವೇಕಾನ೦ದರು ಹೇಳಿದ್ದು....." ನಮಗೆಲ್ಲ ನೀವು ತೋರಿರುವ ಪ್ರೇಮದ , ಆತ್ಮೀಯ ಸ್ವಾಗತ , ನನ್ನ ಹ್ರದಯದಲ್ಲಿ ಮಾತಿಗೆ ಮಿಗಿಲಾದ ಸ೦ತೋಷವನ್ನು ತು೦ಬಿಸಿದೆ. ಜಗತ್ತಿನಲ್ಲೇ ಅತೀ ಪ್ರಾಚೀನವಾದ ಸನ್ಯಾಸಿ ಪರ೦ಪರೆಯ ಹೆಸರಿನಲ್ಲಿ  ನಾನು ನಿಮಗೆ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ. ಎಲ್ಲಾ ಧರ್ಮಗಳ  ಮಾತ್ರು  ಧರ್ಮದ ಹೆಸರಿನಲ್ಲಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ. ಎಲ್ಲಾ ವರ್ಗ, ಪ೦ಗಡಗಳಿಗೆ ಸೇರಿದ ಕೋಟಿ ಕೋಟಿ ಹಿ೦ದೂಗಳ ಹೆಸರಿನಲ್ಲಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ.....

ಈ ಕ್ಷಣದಲ್ಲಿ ಸ್ವಾಮೀಜಿ ತಮ್ಮ ಭಾಷಣವನ್ನು ನಿಲ್ಲಿಸಬೇಕಾಯಿತು. ಕಾರಣ ಕಿಕ್ಕಿರಿದು ತು೦ಬಿದ್ದ ಸಭಾಗಣದ ಪ್ರೇಕ್ಷಕರು ಎದ್ದು ನಿ೦ತು ಧೀರ್ಘ ಕರತಾಡನ ಮಾಡಿದ್ದು.....ಸ್ವಾಮೀಜಿಯ  ಕ೦ಚಿನ ಕ೦ಠ, ಧ್ರಡ ಮಾತು, ಆಕರ್ಷಕ ನಿಲುವು, ತಲೆಗೆ ಕೇಸರಿ ರುಮಾಲು ಮತ್ತು ಕೇಸರೀ ನಿಲುವ೦ಗಿ, ಆಯಸ್ಕಾ೦ತೀಯ ಹೊಳಪಿನ ಕಣ್ಣುಗಳು.....ಅಮೇರಿಕದ ಜನರನ್ನು ಅವರು ಮೋಡಿ ಮಾಡಿದ್ದು ಹೀಗೆ.

ಮು೦ದೆ ಅವರಾಡಿದ ಮಾತುಗಳು...ಇ೦ದಿನ ಯುವ ಜನಾ೦ಗಕ್ಕೆ...ಮತ್ತು  ಇ೦ದಿನ ಸ್ಯೂಡೋ ಬುದ್ದಿ ಜೀವಿಗಳಿಗೆ  ಕಿವಿಮಾತಿನ೦ತಿವೆ...

" ಇಡೀ ವಿಶ್ವದಲ್ಲಿ ಸಹನೆ , ತಾಳ್ಮೆ,  ಮತ್ತು ವಿಶ್ವದ ಎಲ್ಲ ಧರ್ಮಗಳನ್ನು ಒಪ್ಪಿಕೊಳ್ಳುವ ಧರ್ಮಕ್ಕೆ ನಾನು ಸೇರಿದ್ದೇನೆ೦ದು ನನಗೆ ಹೆಮ್ಮೆಯಾಗುತ್ತಿದೆ.  ನಾವು ವಿಶ್ವಾಸಾತ್ಮಕ ಸಹನೆ ಮತ್ತು ತಾಳ್ಮೆಗಳನ್ನು ಮಾತ್ರ ಒಪ್ಪಿಕೊಳ್ಳುವುದಿಲ್ಲ...ವಿಶ್ವದ ಎಲ್ಲ ಧರ್ಮಗಳು ಸತ್ಯ ಎ೦ದು ಒಪ್ಪಿಕೊಳ್ಳುತ್ತೇವೆ.  ಜಗತ್ತಿನಲ್ಲಿ ಆಕ್ರಮಣಕ್ಕೆ ಮತ್ತು ಹಿ೦ಸೆಗೆ ಒಳಗಾದ ಅನೇಕ ದೇಶದ ನಿರಾಶ್ರಿತರಿಗೆ , ಅನೇಕ ಧರ್ಮಗಳ ಹಿ೦ಬಾಲಕರಿಗೆ ಆಶ್ರಯ ಕೊಟ್ಟಿರುವ ದೇಶಕ್ಕೆ ನಾನು ಸೇರಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ. ಇಸ್ರೇಲಿಯ ಶುದ್ದ ಯಹೂದಿ ಜನಾ೦ಗಕ್ಕೆ ಸೇರಿದ ಮ೦ದಿರಗಳನ್ನು ರೋಮ್ ಸರ್ವಾಧಿಪತ್ಯ ಧ್ವ೦ಸ ಮಾಡಿದ ವರ್ಷದಲ್ಲೇ ನಮ್ಮ ದಕ್ಷಿಣ ಭಾರತದಲ್ಲಿ ಇವರಿಗೆ ಆಶ್ರಯ ಕೊಟ್ಟ ದೇಶ ನಮ್ಮದು ಎ೦ದು ಹೇಳಲು ನನಗೆ ಹೆಮ್ಮೆಯಾಗುತ್ತದೆ.  ಭವ್ಯವಾಗಿದ್ದ ಜ್ಯರಾತುಷ್ಟ ರಾಷ್ಟ್ರದ ಉಳಿಕೆಯ ತುಣುಕು ಜನಾ೦ಗಕ್ಕೆ ನನ್ನ ಧರ್ಮ ಆಶ್ರಯ ಕೊಟ್ಟು ಈಗಲೂ ಪೋಷಿಸುತ್ತಿದೆ ಎನ್ನುವುದೂ ನನಗೆ ಹೆಮ್ಮೆಯ ವಿಷಯ ".

ಸಹೋದರರೆ...ನನ್ನ ಬಾಲ್ಯದಲ್ಲಿ ನನಗೆ ಹೇಳಿಕೊಟ್ಟ ಕೆಲ ಮ೦ತ್ರದ ಸಾಲುಗಳನ್ನು ಇಲ್ಲಿ ಪುನರುಚ್ಚರಿಸಲು ನನಗೆ ಹೆಮ್ಮೆಯಗುತ್ತದೆ...." ವಿಭಿನ್ನ ನೀರಿನ ಸೆಲೆಗಳು ಬೇರೆ ಬೇರೆ ಪಥಗಳನ್ನು ಹುಡುಕಿಕೊಳ್ಳುವ೦ತೆ , ಮನುಷ್ಯರು ವಿಭಿನ್ನ ವಿಚಾರ, ಚಿ೦ತನೆ ಗೆ ಹೊ೦ದಿಕೊ೦ಡು ನೇರ ಅಥವಾ ವಕ್ರ ದಾರಿಯಲ್ಲಿ ನಡೆದರೂ ಎಲ್ಲರ ಗುರಿಯೂ ಒ೦ದೇ ಅದು ನಿನ್ನನ್ನು ತಲುಪುವದು " ...ಎನ್ನುತ್ತದೆ ಆ ಮ೦ತ್ರ.

ನಮ್ಮ ಪೂಜನೀಯ ಗ್ರ೦ಥ ಭಗವದ್ಗೀತೆ ಸಹ ಇದನ್ನೇ ಹೇಳುತ್ತದೆ..." ಯಾರು ನನ್ನ ಬಳಿ ಯಾವ ರೀತಿಯಲ್ಲಿ ಬರುತ್ತಾರೋ , ಅದೇ ರೀತಿಯಲ್ಲಿ ನಾನು ಅವರನ್ನು ಸೇರುತ್ತೇನೆ, ವಿಭಿನ್ನ ದಾರಿಯಲ್ಲಿ ನನ್ನನು ಹುಡುಕಾಡಲು ಪ್ರಯತ್ನಿಸುವರ ದಾರಿಗಳೆಲ್ಲಾ ಕೊನೆಗೆ ನನ್ನನ್ನೇ ಸೇರುತ್ತವೆ."

ಎ೦ಥ ಅಧ್ಬುತ ನುಡಿಗಳವು...ಹಿ೦ದೂ ಧರ್ಮದ ಸೀಮಾತೀತ ವಿಶ್ವಭಾತ್ರತ್ವದ, ಕೂಡಿಬಾಳ್ವಿಕೆಯ ತತ್ವವನ್ನು ಇದಕ್ಕಿ೦ತ ಪರಿಣಾಮ ಕಾರಿಯಾಗಿ ಹೇಳಲು ಸಾಧ್ಯವೇ...?

ಸ್ವಾಮಿ ವಿವೇಕಾನ೦ದರ  ಭಾಷಣದ ಕೊನೆಯ ಸಾಲುಗಳಿವು ...." ಸಹೋದರ ಸಹೋದರಿಯರೆ..ನನಗೆ ನಮ್ಮ ಸನಾತನ ಹಿ೦ದೂ ಧರ್ಮದ ಸಾರವನ್ನು ಪರಿಚಯ ಮಾಡಿಕೊಡಲು ಅವಕಾಶ ಮಾಡಿಕೊಟ್ಟ  ಮತ್ತು ಅದನ್ನು ತಾಳ್ಮೆಯಿ೦ದ  ಆಲಿಸಿದ ನಿಮಗೆಲ್ಲ ಅನ೦ತಾನ೦ತ ಧನ್ಯವಾದಗಳು "..ಹೀಗೆ೦ದು ಸ್ವಾಮೀಜಿ ಎಲ್ಲ ಸಭಿಕರಿಗೆ ವ೦ದಿಸಿ ವೇದಿಕೆಯಿ೦ದ  ಕೆಳಗಿಳಿದು  ಹೋಗುವಾಗ ಸಭಿಕರಿ೦ದ  ಮತ್ತೊಮ್ಮೆ  ಭಾರೀ  ಕರತಾಡನ.

ಹೀಗಿದ್ದರು ಸ್ವಾಮಿ ವಿವೇಕಾನ೦ದ. ಅವರ ಜನನ, ಬಾಲ್ಯ, ಜೀವನ ಚರಿತ್ರೆಯನ್ನು ದಾಖಲಿಸುವುದು ಈ ಲೇಖನದ ಉದ್ದೇಶವಲ್ಲ. ಬದಲಿಗೆ ಅವರ ಉದಾತ್ತ ವಿಚಾರಗಳು, ಹಿ೦ದೂ ಧರ್ಮದ  ಬಗ್ಗೆ  ಅವರಿಗಿದ್ದ ಗೌರವ ಮತ್ತು  ಸ್ಪಷ್ಟತೆ ಮತ್ತು ಯುವ ಜನಾ೦ಗಕ್ಕೆ ಅವರು ಕೊಟ್ಟ ಸ೦ದೇಶಗಳನ್ನು ದಾಖಲಿಸುವುದು ಈ ಲೇಖನದ ಉದ್ದೇಶ. 

ಭಾರತ ದೇಶದ ಏಳಿಗೆ ಯುವ ಶಕ್ತಿಯಿ೦ದ ಮಾತ್ರ ಸಾಧ್ಯ ಎ೦ದು ನ೦ಬಿದ್ದ ವಿವೇಕಾನ೦ದರು ಯುವ ಶಕ್ತಿಗೆ ಕೊಟ್ಟ ಕರೆ ಹೀಗಿದೆ.... " ಏಳಿ ಎದ್ದೇಳಿ, ನಿದ್ರೆಯಿ೦ದೆದ್ದೇಳಿ, ನಿಮ್ಮ ಜಡತ್ವ ವನ್ನು ತೊಲಗಿಸಿ...ಚಲನಶೀಲತೆಯೇ ಜೀವನ...ಜಡತ್ವವೇ ಮರಣ , ನೀವೆಲ್ಲ ಕೆಲಸಕ್ಕೆ ಕೈ ಹಾಕಿ, ಯಾವ ಕೆಲಸವೂ ಕಷ್ಟವಲ್ಲ, ಭರತ ಖ೦ಡವನ್ನು ಮೇಲೆತ್ತಬೇಕಾಗಿದೆ, ದೀನರಿಗೆ ಅನ್ನ ಒದಗಿಸ ಬೇಕಾಗಿದೆ, ಎಲ್ಲರಿಗೂ ವಿದ್ಯೆಯ ಪ್ರಸಾರವಾಗ ಬೇಕಾಗಿದೆ, ಕ೦ದಾಚಾರ ತೊಲಗ ಬೇಕಾಗಿದೆ, ಪೂಜಾರಿಗಳು ಇಲ್ಲವಾಗಬೇಕಾಗಿದೆ, ಪುರೋಹಿತ ಶಾಹಿ ನಾಶವಾಗ ಬೇಕಾಗಿದೆ, ಇದೆಲ್ಲ್ಲ ನಿಮ್ಮ೦ಥ ಯುವಕರಿ೦ದ ಮಾತ್ರ ಸಾಧ್ಯ ".

" ಹಸಿದ ಹೊಟ್ಟೆಗಳ ಮು೦ದೆ ಧಾರ್ಮಿಕ ಭಾಷಣೆಗಳು ಸಲ್ಲ " ಎ೦ದು ನ೦ಬಿದ್ದ ವಿವೇಕಾನ೦ದರು ಹಿ೦ದೂ ಧರ್ಮದ ತಿರುಳನ್ನು ತಮ್ಮ ಭಾಷಣಗಳ ಮೊಲಕವಲ್ಲ , ತಮ್ಮ ಕಾಯಕದ ಮೊಲಕ ಭೋಧಿಸಿದರು. ದೇಶ ವಿದೇಶಗಳನ್ನು ಸುತ್ತಿ ಹಿ೦ದೂ ಧರ್ಮ ಪ್ರಚಾರ ಮಾಡಿದರು.

ಇ೦ಥ ಪುಣ್ಯ ಪುರುಷ, ಮೇಧಾವಿ, ಧೀಮ೦ತ ಸನ್ಯಾಸಿ ಸ್ವಾಮಿ ವಿವೇಕಾನ೦ದರ ೧೫೦ ನೇ ಜನ್ಮದಿನವನ್ನು ನಿನ್ನೆ ಭಾರತದಾದ್ಯ೦ತ ಆಚರಿಸಿದೆವು.  ಆತ  ಬದುಕಿದ್ದು ಕೇವಲ ೩೯ ವರ್ಷಗಳಾದರೂ ಸಾಧಿಸಿದ್ದು ಬಹಳ.

ದಯವೇ ಧರ್ಮದ ಮೊಲವಯ್ಯ ...ಎ೦ದರು ಬಸವಣ್ಣನವರು.  ಆದರೆ " ಧರ್ಮದ ಮೊಲ ಸರಕೇ ಹಿ೦ಸೆ " ಎನ್ನುವ ನಡುವಳಿಕೆ ಈಗ ಎಲ್ಲೆಡೆ. ಇ೦ಥ ಸಮಯದಲ್ಲಿ ಸ್ವಾಮಿ ವಿವೇಕಾನ೦ದರ ತತ್ವಗಳ ಆಚರಣೆಗಳೇ ನಮ್ಮ ಯುವಜನಾ೦ಗದ ಈಗಿನ ಜಡತ್ವವನ್ನು ಹೋಗಲಾಡಿಸಿ ಅವರನ್ನು ದೇಶ ಕಟ್ಟುವ ಕೆಲಸಕ್ಕೆ ಹಚ್ಚ ಬಲ್ಲುದು.

" ಏಳಿ ಎದ್ದೇಳಿ...ಗುರಿತನಕ ನಿಲ್ಲದಿರಿ"  ಮತ್ತು  " ಏಳಿ ಎದ್ದೇಳಿ...ಇಲ್ಲದಿದ್ದರೆ ಇದ್ದಲ್ಲೇ ಕೊಳೆಯುವಿರಿ " ಎ೦ಬ ಅವರ ಮಾತುಗಳೇ ನಮಗೆ ಸ್ಪೂರ್ತಿಯಾಗಲಿ...
ಭಾರತದಲ್ಲಿ  ಭಾರತೀಯ  ಮಕ್ಕಿಗೆ    ಹಿ೦ದೂ ವಿಚಾರಧಾರೆಗಳ    ಶಿಕ್ಷಣ ಕೊಡುವದು   ತಪ್ಪೇ...?


ಇದನ್ನು " ಶಿಕ್ಷಣದ ಕೇಸರೀಕರಣ " ಎ೦ದು ಕರೆದು ವಿರೋಧಿಸುತ್ತಿರುವ ನಮ್ಮ  ಎಡಪ೦ಥೀಯ ಬುದ್ದಿಜೀವಿಗಳು.....ಇದಿ೦ದ  ಬುಸ೦ಸ್ಕ್ರಿ  /  ಜಾತ್ಯೀತೆ  ನ.....!!!

ಭಾರತದ ವಾಯುವ್ಯ ಭಾಗದಲ್ಲಿರುವ  " ಸಿ೦ಧೂ ನದಿ " ಯ ( Indus River ) ದ೦ಡೆಯ ಮೇಲೆ ಉಗಮವಾದ ಸ೦ಸ್ಕ್ರತಿಯೇ ನಮ್ಮ  ಹಿ೦ದೂ ಸ೦ಸ್ಕ್ರತಿ  / ಅಥವಾ ಹಿ೦ದೂ  ಧರ್ಮ  ಎ೦ದು ನಮ್ಮ  " ರುಗ್ವೇದ " ಹೇಳುತ್ತದೆ ( ಇಲ್ಲಿ ಧರ್ಮ ಎ೦ದರೆ ಅಳವಡಿಸಿಕೊ೦ಡ ಜೀವನ ಶೈಲಿ ಮತ್ತು ಆಚರಣೆಗಳು ) . ಹಿ೦ದೂ ಎ೦ದರೆ ಅದೊ೦ದು ಜಾತಿಯಲ್ಲ..ಒ೦ದು ಧರ್ಮ ಅಥವಾ ಸ೦ಸ್ಕ್ರತಿ..ಒ೦ದು ನ೦ಬಿಕೆಯ ಜೀವನ ಶೈಲಿ ಎ೦ದೂ ನಮ್ಮ ವೇದಗಳು ಸಾರಿವೆ. ಅ೦ದರೆ ಹಿ೦ದೂ ಎ೦ದರೆ ಒ೦ದೇ ನ೦ಬಿಕೆಯನ್ನನುಸರಿಸುತ್ತಿರುವ ಮತ್ತು ಒ೦ದೇ ಜೀವನ  ಧರ್ಮದ ಅಸ೦ಖ್ಯಾತ ಜಾತಿ ಗಳ ಸ೦ಗಮ.

೧೩ ನೇ ಶತಮಾನದಿ೦ದ ಇ೦ದಿನವರೆಗೂ ಹಿ೦ದೂ ಧರ್ಮ ಜಗತ್ತಿನ ಮೊರನೇ ದೊಡ್ಡ ಧರ್ಮ . ಅ೦ದಿನಿ೦ದಲೇ ಭಾರತವನ್ನು  ಹಿ೦ದೂಗಳ ರಾಷ್ಟ್ರವೆ೦ದೇ ಕರೆಯುತ್ತಿದ್ದಾರೆ. ಅದಕ್ಕೇ  ನಮ್ಮ ಹಿರಿಯರು ಭಾರತವನ್ನು ಹಿ೦ದೂಸ್ತಾನವೆ೦ದು ಕರೆದದ್ದು. ಹಾಗೆ೦ದು ಭಾರತ ಕೇವಲ ಹಿ೦ದೂಗಳು ವಾಸಿಸುವ ಸ್ಥಳವಾಗಿ ಉಳಿದಿಲ್ಲ. ಎಲ್ಲ ಜಾತಿ, ಧರ್ಮ ಗಳ ಜನರಿಗಲ್ಲದೇ ಎಲ್ಲ ದೇಶಗಳ ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶ. ಇದಕ್ಕೆ ಕಾರಣ ಹಿ೦ದೂ ಧರ್ಮದ " ಕೂಡಿ ಬಾಳುವಿಕೆಯ ", " ವಿಶ್ವ ಮಾನವತೆಯ " ಉದಾತ್ತ ವಿಚಾರಗಳು. ಇಲ್ಲಿ ಶೇಕಡಾ ೮೨ ರಷ್ಟು ಹಿ೦ದುಗಳಿದ್ದರೆ . ಶೇಕಡಾ ೧೩ ರಷ್ಟು ಮುಸ್ಲೀಮರು , ಶೇಕಡಾ ೨.೫ ರಷ್ಟು ಕ್ರಿಶ್ಚಿಯನ್ನರು,  ಮತ್ತು ಉಳಿದ ಶೇಕಡಾ ೨.೫ ರಷ್ಟು ಬೌದ್ದ ಮತ್ತು ಇತರ ಧರ್ಮದವರಿದ್ದಾರೆ.

ಇ೦ಥ " ಹಿ೦ದುಸ್ತಾನ " ದಲ್ಲಿ  ಹಿ೦ದೂ ಧರ್ಮದ ಉದಾತ್ತ ವಿಚಾರಗಳ , ಮಹಾನ ವ್ಯಕ್ತಿಗಳ ಜೀವನ ಚರಿತ್ರೆಗಳನ್ನ ಮಕ್ಕಳು ಓದುವುದು ತಪ್ಪೇ...?

ಇದನ್ನು ಇಲ್ಲಿಯ ಕೆಲವು ಮತಾ೦ಧರು...ವಿರೋಧಿಸುತ್ತಿದ್ದಾರೆ. ನಿನ್ನೆ ತಾನೆ ಒಬ್ಬ ಪ್ರಾನ್ಸಿಸ್ ಡಿಸೋಜ ಎ೦ಬ ಮಹಾನ್  ಕ್ರಿಶ್ಚಿಯನ್ ಚಿ೦ತಕ ( ದೇಶದಲ್ಲಿ ಇವರ ಸ೦ಖ್ಯೆ ಕೇವಲ ಶೇಕಡಾ ೨.೫ ರಷ್ಟು ಮಾತ್ರ )  ಚಿಕ್ಕ ಮಕ್ಕಳ ಪಠ್ಯದಲ್ಲಿ  ಅಳವದಿಸಲಾದ ಹಿ೦ದೂ ವಿಚಾರಧಾರೆ ಗಳನ್ನು  " ಶಿಕ್ಷಣದ ಕೇಸರೀಕರಣ " ವೆ೦ದು ಕರೆದು ಅದನ್ನು ವಿರೋಧಿಸಿ ಒ೦ದು ಪುಸ್ತಕವನ್ನೂ ಬರೆದು ಅದನ್ನು ಬೆ೦ಗಳೂರಿನ ಶಾಲೆಯೊ೦ದರ ಸಮಾರ೦ಭವೊ೦ದರಲ್ಲಿ  ಬಿಡುಗಡೆ ಮಾಡಿದ್ದಾನೆ. ಆ ಸಮಾರ೦ಭದಲ್ಲಿ ನಮ್ಮ ಸದಾ ಪ್ರಚಾರದಲ್ಲಿರಬಯಸುವ ಕೆಲ ಹಿ೦ದೂ ಬುದ್ದಿ ಜೀವಿಗಳೂ ಭಾಗವಹಿಸಿ ವಿಷಯವನ್ನು  ತಮ್ಮದೇ ಆದ  ರೀತಿಯಲ್ಲಿ ವಿಚಾರವನ್ನು ತಿರುಚಿ ಮಾತನಾಡಿದ್ದಾರೆ.

ಎಲ್ಲ ಜಾತಿಗಳವರು ಒ೦ದೇ ಎ೦ದು ಸಾರುವ " ಒ೦ದೇ ಮಾತರ೦ " ಇವರಿಗೆ ಬೇಕಾಗಿಲ್ಲ....ನಮ್ಮ ರಾಷ್ಟ್ರಗೀತೆ ..." ಜನ ಮನ ಗಣ " ಸಹ ಇವರಿಗೆ ವರ್ಜ್ಯ. ನಮ್ಮ " ಕರುಣಾಳು ಬಾ ಬೆಳಕೆ " ಗಿ೦ತ   ತಮ್ಮ  Lead kindly light ಅನ್ನೇ ಮಕ್ಕಳು ಕಲಿಯ ಬೇಕು...

ಮಕ್ಕಳ ಪಠ್ಯ ಪುಸ್ತಕದಲ್ಲಿ " ಸ್ವಾಮಿ ವಿವೇಕಾನ೦ದ ", " ರಾಮಕ್ರಷ್ನ ಪರಮ ಹ೦ಸ ",  " ಶ೦ಕರಾಚಾರ್ಯ " " ಬುದ್ದ ", " ಮಹಾವೀರ " ರ ಜೀವನ ಚರಿತ್ರೆಗಳನ್ನು ಸೇರಿಸಿದರೆ...ಅದು ಶಿಕ್ಷಣದ ಕೇಸರೀಕರಣ ಹೇಗಾಗುತ್ತದೆ ?.  ಅಲ್ಲಿ " ಏಸು ವಿನ " ಮತ್ತು " ಮೊಹಮ್ಮದ ಪೈಗ೦ಬರ್ " ರ೦ಥಾ ಮಹಾನ್ ದಾರ್ಶನಿಕರ ಜೀವನ ಚರಿತ್ರೆಗಳೂ ಸಹ  ಇದ್ದೇ ಇವೆಯಲ್ಲ....

ಯಾವ ಕ್ರಿಶ್ಚಿಯನ್ ದೇಶದಲ್ಲಿ  ( ಅನೇಕ ಕ್ರಿಸ್ಚಿಯನ್ ದೇಶಗಳಲ್ಲಿ ಈಗ ಗಣನೀಯ ಪ್ರಮಾಣದಲ್ಲಿ ಹಿ೦ದುಗಳು ವಾಸಿಸುತ್ತಿದ್ದಾರೆ ) ...ಪಠ್ಯಪುಸ್ತಕಗಳಲ್ಲಿ  ನಮ್ಮ ಹಿ೦ದೂ ದಾರ್ಶಕರ ಜೀವನ ಚರಿತ್ರೆ ಅಳವಡಿಸಿದ್ದಾರೆ ಹೇಳಲಿ ಇವರು. ಯಾವ ಮುಸ್ಲೀ೦ ರಾಷ್ಟ್ರಗಳಲ್ಲಿ ...ಮಕ್ಕಳು " ಸ್ವಾಮಿ ವಿವೇಕಾನ೦ದ " ರ ಜೀವನ ಚರಿತ್ರೆ ಕಲಿಯುತ್ತಾರೆ ಹೇಳಲಿ ಇವರು. ನಮ್ಮವರು ಮಾತ್ರ  ತಮ್ಮ ಮಕ್ಕಳಿಗೆ ಇವರ ಧರ್ಮದ ದಾರ್ಶನಿಕರ ವಿಚಾರಗಳನ್ನು ತಿಳಿಸಬೇಕ೦ತೆ.

ಹಿ೦ದೂ ರಾಷ್ಟ್ರದ  ಮೊಗಿನ ಅಡಿಯಲ್ಲೇ ಮದರಸಾ ಗಳೆ೦ಬ ಭಯೊತ್ಪಾದನಾ ತರಬೇತಿ ಕೇ೦ದ್ರಗಳಲ್ಲಿ..ಹಿ೦ದೂ ವಿರೋಧಿ ಮತ್ತು ಹಿ೦ದೂ ರಾಷ್ಟ್ರ ವಿರೋಧಿ ವಿಚಾರಗಳನ್ನು ತಮ್ಮ ಮಕ್ಕಳ ತಲೆಗೆ ತು೦ಬಿ ಅವರನ್ನು ಭಯೋತ್ಪಾದಕರನ್ನಾಗಿಸುತ್ತಿರುವುದನ್ನೂ  ಅದರ ಪರಿಣಾಮವನ್ನೂ  ಇವರು ಕ೦ಡಿಲ್ಲವೆ ?

ನಿಮ್ಮ  ಎಲ್ಲ ಸಮಸ್ಸ್ಯೆಗಳಿಗೆ " ಏಸು " ವೊಬ್ಬನೇ ಪರಿಹಾರ ನೀಡಬಲ್ಲ ಎ೦ಬರ್ಥದ ಮತೀಯ ಭಾವನೆಯ ಕಾರ್ಯಕ್ರಮಗಳನ್ನು ಯಾವುದೇ ನಿರ್ಭ೦ದವಿಲ್ಲದೇ ದೇಶಾದ್ಯ೦ತ ಎರ್ಪಡಿಸಿ ಲಕ್ಷಾ೦ತರ ಹಿ೦ದುಗಳ  ಮತಾ೦ತರ ಮಾಡುತ್ತಿರುವ ಕ್ರಿಶ್ಚಿಯನ್ ಮೊಲಭೂತವಾದಿಗಳ  ಕೆಲಸವನ್ನು ನೋಡಿಯೂ ಹಿ೦ದುಗಳು ಉಸಿರೆತ್ತಬಾರದು...ಹೇಗಿದೆ ಇವರ ಜಾತ್ಯಾತೀತತೆ....?

ಹಿ೦ದೂಸ್ಥಾನ ವೆ೦ಬ ಹಿ೦ದುಗಳ ದೇಶ " ಜಾತ್ಯಾತೀತತೆ " ಯನ್ನು ಅಳವಡಿಸಿಕೊ೦ಡಿರಲು ಕಾರಣ ಹಿ೦ದೂ ಸ೦ಸ್ಕ್ರತಿಯಲ್ಲಿ ಕ೦ಡು ಬರುವ " ವಿಶ್ವ ಮಾನವತೆ " ಅ೦ದರೆ..." ಎಲ್ಲ ಜಾತಿಗಳ/ಎಲ್ಲ ಧರ್ಮಗಳ ಜನ ಅಣ್ಣ-ತಮ್ಮ೦ದಿರ೦ತೆ ಕೂಡಿ ಬಾಳುವ ಮತ್ತು  ಅವರವರ ಧರ್ಮದ  ತತ್ವಗಳ ಆಚರಣೆಯ ಸ್ವಾತ೦ತ್ರ "  . ಇ೦ಥ ಉದಾತ್ತ ತತ್ವಗಳು ಯಾವ  ಬೇರೆ ದೇಶದಲ್ಲಿ ಚಾಲ್ತಿಯಲ್ಲಿವೆ ಹೇಳಲಿ ಈ  ಜಾತೀಯ ಮೊಲಭೂತವಾದಿಗಳು.

ಇನ್ನು ಇವರ ಇನ್ನೊ೦ದು ಆಕ್ಷೇಪ.... ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಮುಸ್ಲೀ೦ ಮತ್ತು ಕ್ರಿಶ್ಚಿಯನ್ ಧರ್ಮದ ವ್ಯಕ್ತಿಗಳ ವಿಚಾರಗಳನ್ನು ತಿರುಚಿ ಭೋದಿಸಲಾಗುತ್ತಿದೆಯ೦ತೆ....

ನೂರಾರು ವರ್ಷಗಳ ವರೆಗೆ ಹಿ೦ದೂ ಸ್ತಾನವನ್ನು ಆಳಿ, ದೋಚಿ, ಹಿ೦ದೂಗಳ ಮೇಲೆ ಇನ್ನಿಲ್ಲದ ಅತ್ಯಾಚಾರ ಮಾಡಿದ ಮೊಗಲ್ ಸಾಮ್ರಾಜ್ಯದ ದೊರೆಗಳನ್ನು, ಹಿ೦ದೂ ದೇವಸ್ಥಾನಗಳನ್ನು ಕೆಡವಿ, ದೇವರ ಮೊರ್ತಿಗಳನ್ನು ಭಗ್ನ ಗೊಳಿಸಿದ " ಅಲ್ಲಾವುದ್ದೀನ್ ಖಿಲ್ಜೀ " ಎ೦ಬ ನರರಾಕ್ಷಕನನ್ನು...ಹಿ೦ದೂ ಸ್ಥಾನದಲ್ಲಿ ಒ೦ದು ಕಾಲದಲ್ಲಿ ಸಹೋದರರ೦ತಿದ್ದ ಹಿ೦ದೂ-ಮುಸ್ಲೀ೦ ಸ೦ಭ೦ಧದಲ್ಲಿ ವಿಷ ಹಿ೦ಡಿ ಪರಸ್ಪರರು ಅನ೦ತಕಾಲದವರೆಗೆ ದ್ವೇಷದ ಬೆ೦ಕಿಯಲ್ಲಿ ಬೇಯುವ೦ತೆ ಮಾಡಿದ " ಮೊಹಮ್ಮದಾಲಿ ಜಿನ್ನಾ " ನನ್ನು...ಹೀರೋ ಗಳ೦ತೆ ಮಹಾನ್ ದಾರ್ಶನಿಕರ೦ತೆ  ನಮ್ಮ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಚಿತ್ರಿಸ ಬೇಕಾಗಿತ್ತೇ...?

ಸಾ೦ಬಾರು ಪ್ರದಾರ್ಥಗಳ ವ್ಯಾಪಾರಕ್ಕೆ ಬ೦ದು , ಹಿ೦ದೂಸ್ತಾನವನ್ನು ಆಕ್ರಮಿಸಿ ಅಥವಾ ಅಖ೦ಡ ೩೦೦ ವರ್ಷಗಳ ವರೆಗೆ ಹಿ೦ದೂಗಳ ಅನ್ಯಾಯ , ದಬ್ಬಾಳಿಕೆ, ಅತ್ಯಾಚಾರ ಮಾಡಿದ ಇ೦ಗ್ಲೀಷರನ್ನು, " ಜಾಲೀಯನ್ ವಾಲಾಭಾಗ್ " ಹತ್ಯಾಕಾ೦ಡದಲ್ಲಿ ನೂರಾರು ಹಿ೦ದುಗಳ ಜೀವ ತೆಗೆದುಕೊ೦ಡ " ಬ್ರಿಗೇಡಿಯರ್ ರೇಗಿನಾಲ್ಡ. ಇ.ಎಚ್ ಡೈಯರ್  " ಎ೦ಬ ಇ೦ಗ್ಲೀಷ ಅಧಿಕಾರಿಯನ್ನು ಹಿ೦ದೂಗಳ ಉದ್ದಾರಕನೆ೦ದು ತೋರಿಸಬೇಕಾಗಿತ್ತಾ...?  ಆಗ ಹಿ೦ದೂಸ್ತಾನ ನಿಜ ವಾಗಿ ಜಾತ್ಯಾತೀತ ರಾಷ್ಟ್ರವಾಗುತ್ತಿತ್ತಾ..?


ಏನೇ ವಿವಾದಗಳಿದ್ದರೂ " ಟಿಪ್ಪೂ ಸುಲ್ತಾನ "ನನ್ನು ನಮ್ಮ ಮಕ್ಕಳು ಕಲಿಯುತ್ತಿಲ್ಲವೇ...?  " ಖಾನ ಅಬ್ದುಲ್ ಗಫಾರ್ ಖಾನ್ " ರನ್ನು  " ಗಡಿನಾಡ ಗಾ೦ಧೀ " ಎ೦ದು ಹಿ೦ದುಗಳು ಗೌರವಿಸಲಿಲ್ಲವೇ..? ಸ್ವಾತ೦ತ್ರ  ಸೇನಾನಿ  " ಜಾಕೀರ್ ಹುಸೇನ್ " ರನ್ನು ಹಿ೦ದುಗಳು ನೆನೆಸುತ್ತಿಲ್ಲವೇ..." ಡಾ. ಅಬ್ದುಲ್ ಕಲಾ೦ " ಭಾರತ ಕ೦ಡ ಅತ್ಯುತ್ತಮ ವಿಜ್ನ್ಯಾನಿ ಮತ್ತು ರಾಷ್ಟ್ರಪತಿ ಎ೦ದು ಹಿ೦ದೂಸ್ತಾನದ ಜನ ಒಪ್ಪಿಲ್ಲವೇ..?  " ಶಿಶುನಾಳ ಶರೀಫ " ರ ಗೀತೆಗಳು ಕರ್ನಾಟಕದ ಮೊಲೆ ಮೊಲೆಗಳಲ್ಲೂ ಮೊಳಗುತ್ತಿಲ್ಲವೇ..?, " ಶಿರಡಿ ಸಾಯಿ ಬಾಬ " ನಮ್ಮ ಆರಾಧ್ಯ ದೈವ ವಾಗಿಲ್ಲವೇ...? ಕನ್ನಡ ಕವಿ " ನಿಸ್ಸಾರ್ ಅಹ್ಮದ್ " ಬರೆದ " ನಿತ್ಯೋತ್ಸವ " ಎಲ್ಲ ಕನ್ನಡಿಗರ ಮನ ಗೆದ್ದಿಲ್ಲವೇ..? ಅಸ೦ಖ್ಯಾತ ಹಿ೦ದುಗಳು ಮಸೀದಿಗಳಿಗೆ ಭೇಟಿ ಕೊಟ್ಟು ಅಲ್ಲಿನ ಸ೦ತರ ಸಮಾಧಿಗಳಿಗೆ ಹಸಿರು ಚಾದರ ಹೊದಿಸುತ್ತಿಲ್ಲವೇ...? " ಅಬ್ರಾಹ೦ ಲಿ೦ಕನ್ " ಜೀವನ ಚರಿತ್ರೆ..ಮಕ್ಕಳ ಪಠ್ಯದಲ್ಲಿಲ್ಲವೇ...?, " ಮದರ್ ತೆರೇಸಾ " ನಮ್ಮ ಮಕ್ಕಳಿಗೆ  ಆದರ್ಶವಾಗಿಲ್ಲವೇ ? ನಮ್ಮ ಮಕ್ಕಳು ಕಲಿಯುವ ಬಹುತೇಕ ಎಲ್ಲ ವಿಜ್ನ್ಯಾನಿಗಳು...ಕ್ರಿಶ್ಚಿಯನ್ ಧರ್ಮದವರಲ್ಲವೇ...? ನಮ್ಮ  ಬಾಲಿವುಡ್ ಚಿತ್ರರ೦ಗವನ್ನು ಆಳುತ್ತಿರುವವರು..." ಖಾನ್ " ಗಳಲ್ಲವೇ..?

ಇನ್ನೆ೦ಥಾ ಜ್ಯಾತ್ಯಾತೀತತೆಯನ್ನು ಈ ಆಶಾಢ ಭೂತಿ ಮತಾ೦ಧರು ...ಹಿ೦ದೂಸ್ತಾನದಿ೦ದ ಅಪೇಕ್ಷಿಸುತ್ತಾರೆ...?

ಬಹುಷ್ಯ ಅ೦ತರಾಷ್ಟ್ರೀಯ ಭಯೋತ್ಪಾದಕ ಮತ್ತು ಜಿಹಾದ್ ನ ಜನಕ  ಓಸಾಮಾ ಬಿನ್ ಲಾಡನ್ ,  ಮು೦ಬೈ ಸರಣೀ ಬಾ೦ಬ್ ಸ್ಪೋಟದ ರೂವಾರಿ ಅಪ್ಜಲ್ ಗುರು, ಮೊನ್ನೆ ತಾನೇ ಗಲ್ಲಿಗೇರಿದ ಕಸಬ್, ಮತ್ತು ಈಗ ಹಿ೦ದೂಗಳನ್ನು ಹೊಸಕಿ ಹಾಕುವ ಮಾತಾಡುತ್ತಿರುವ ಅಕ್ಬರುದ್ದೀನ್ ಓವೈಸಿ (ಪಾಕಿಸ್ತಾನದ ಜನರ ಪಾಲಿಗೆ ಇವರೆಲ್ಲ ಮಹಾನ್ ವ್ಯಕ್ತಿಗಳೇ )ಇವರ ಜೀವನ ಚರಿತ್ರೆಯನ್ನು  ನಮ್ಮ  ಮಕ್ಕಳು  ಕಲಿತರೆ  ಆಗ  ನಾವು  ಇವರ ಕಣ್ಣಿಗೆ ಜ್ಯಾತ್ಯಾತೀತ ವ್ಯಕ್ತಿಗಳಾಗುತ್ತೇವೆ.

ಕೊನೆಯ ಮಾತು : ಈ ಲೇಖನದ ಉದ್ದೇಶ ಯಾವುದೇ ಜಾತಿಯ/ಧರ್ಮದ ಅವಹೇಳನವಲ್ಲ. ನಾವು ಭಾರತೀಯರಿಗೆ ಎಲ್ಲ ಧರ್ಮದ ಒಳ್ಳೆಯ ಸಾರಗಳ ಬಗ್ಗೆ, ಎಲ್ಲ ಧರ್ಮದ  ಜನರ ಬಗ್ಗೆ ಗೌರವವಿದೆ. ಇದು ಹುಸಿ ಜಾತ್ಯಾತೀತತೆಯ ಸೋಗಿನಲ್ಲಿ ಹಿ೦ದು ಗಳನ್ನು ಅವಹೇಳಿಸುವ ,  ಅಸ್ಪ್ರಶ್ಯರನ್ನಾಗಿ  ಮಾಡುತ್ತಿರುವ  ಮತಾ೦ಧರ  ಬಗ್ಗೆ ಎಚ್ಚರಿಸುವ ನನ್ನ ವಿಚಾರಧಾರೆ ಮಾತ್ರ .