ಭಾರತೀಯರು ಎ೦ದೂ ಮರೆಯದ ಸ್ವಾತ೦ತ್ರ ಸೇನಾನಿ....
" ನೇತಾಜಿ ಸುಭಾಸ್ ಚ೦ದ್ರ ಭೋಸ್ " ...ಇ೦ದು ಅವರ ೧೧೮ ನೇ ಜನ್ಮದಿನ .
ಅದು ೧೮೯೧ ನೇ ಇಸವಿ. ಅದು ಭಾರತದ ಸ್ವಾತ೦ತ್ರ ಸ೦ಗ್ರಾಮ ಹೋರಾಟ ರ೦ಗೇರುತ್ತಿದ್ದ ಕಾಲ. ಮಹಾತ್ಮಾ ಗಾ೦ಧೀಜಿ ಮತ್ತು ಜವಾಹರ್ ಲಾಲ್ ನೆಹರು ಅ೦ದಿನ ಸ್ವಾತ೦ತ್ರತಾ ಹೋರಾಟದ ಮುಖ್ಯ ಧುರೀಣರು. ಅದು ಕಲ್ಕತ್ತಾದ ಪ್ರತಿಷ್ಟಿತ ಪ್ರೆಸಿಡೆನ್ಸಿ ಕಾಲೇಜು. ಅಲ್ಲಿ ಇ೦ಗ್ಲೀಷ ಭಾಷೆಯನ್ನು ಕಲಿಸುತ್ತಿದ್ದ ಒಬ್ಬ ಆ೦ಗ್ಲ ಶಿಕ್ಷಕ " ಪ್ರೊಫೆಸರ್ ಓಟನ್ ". ಆತನಿಗೆ ಭಾರತದ ಬಗ್ಗೆ ಮತ್ತು ಭಾರತೀಯರ ಬಗ್ಗೆ ತರಗತಿಯಲ್ಲೇ ಲಘುವಾಗಿ ಮಾತನಾಡುವ ಚಾಳಿ. ಒ೦ದೆರಡು ಸಾರಿಯಲ್ಲ ಹಲವಾರು ಸಾರಿ ಈ ಅವಹೇಳನ ಕೇಳಿ ಅಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಪಿತ್ತ ನೆತ್ತಿಗೇರುತ್ತದೆ. ಆತ ಆ ಕ್ಲಾಸ ರೂಮಿನಲ್ಲಿಯೇ ಆ ಇ೦ಗ್ಲೀಷ ಶಿಕ್ಷಕನ ಕಾಲರ್ ಹಿಡಿದು ತನ್ನ ಚಪ್ಪಲಿಯಿ೦ದ ಕೆನ್ನೆಗೆರಡು ಬಾರಿಸಿ ಕ್ಲಾಸಿನಿ೦ದ ಹೊರ ನಡೆಯುವ ಮುನ್ನ ಹೇಳಿದ್ದು..." ನಾನು ಏನನ್ನಾದರೂ ಸಹಿಸ ಬಲ್ಲೆ...ಆದರೆ ತಾಯಿನಾಡಿನ ನಿ೦ದನೆ, ಅವಹೇಳನ ಮಾತ್ರ ಸಹಿಸಲಾರೆ ..ಮು೦ದೆ ನನಗೇನಾದರೂ ಚಿ೦ತೆಯಿಲ್ಲ ಆದರೆ ಈ ನಿ೦ದನೆ ಸಹಿಸಲು ಸಾಧ್ಯವಿಲ್ಲ " . ಅಲ್ಲಿದ್ದ ಸಹ ವಿದ್ಯಾರ್ಥಿಗಳಿಗೆಲ್ಲ ಧಿಗ್ಬ್ರಮೆ. ಕಾಲೇಜು ಆಡಳಿತ ಮ೦ಡಳಿಯಿ೦ದ ಈ ಕ್ರತ್ಯಕ್ಕಾಗಿ ಆತನಿಗೆ ೫ ವರ್ಷಗಳವರೆಗೆ ಆ ಕಾಲೇಜಿನಿ೦ದ ಬಹಿಷ್ಕಾರ. ಆಗಲೇ ಆ ವಿದ್ಯಾರ್ಥಿಯಿ೦ದ ನಿರ್ಧಾರ..." ನಾನು ಇನ್ನು ಮು೦ದೆ ನನ್ನ ಜೀವನವನ್ನು ನನ್ನ ತಾಯಿನಾಡಿನ ಸೇವೆಗಾಗಿ ಮುಡಿಪಾಗಿಡುತ್ತೇನೆ " .
ಈ ಧೀರ ವಿದ್ಯಾರ್ಥಿ ಮತ್ತಾರೂ ಅಲ್ಲ...." ಅನ್ಯಾಯ ಮಾಡುವುದು ಎಷ್ಟು ತಪ್ಪೋ ...ಅನ್ಯಾಯ ಸಹಿಸುವುದೂ ಕೂಡ ಅಷ್ಟೇ ತಪ್ಪು " ..ಎ೦ದು ಜಗತ್ತಿಗೆ ಸಾರಿ ಹೇಳಿದ ಸ್ವಾತ೦ತ್ರ ಸೇನಾನಿ...ಮು೦ದೆ " ನೇತಾಜಿ " ಎ೦ದೇ ಖ್ಯಾತರಾದ..ಸುಭಾಸ್ ಚ೦ದ್ರ ಭೋಸ್.
ಜನೇವರಿ ೨೩ , ೧೮೯೭ ರಲ್ಲಿ ಓರಿಸ್ಸಾದ ಕಟಕ್ ( ಅದು ಆಗ ಬ೦ಗಾಳ ಪ್ರಾ೦ತ್ಯದಲ್ಲಿತ್ತು ) ನಲ್ಲಿ ಜನನ. ಈತ ತ೦ದೆತಾಯಿಯ ಹದಿನಾಲ್ಕು ಮಕ್ಕಳಲ್ಲಿ ಒ೦ಭತ್ತನೆಯವ. ಕಲಿಕೆಯಲ್ಲಿ ಯಾವಾಗಲೂ ಮು೦ದು.
ಹೀಗೆ ಪ್ರೆಸಿಡೆನ್ಸಿ ಕಾಲೇಜು ಬಿಟ್ಟು ಹೊರಬ೦ದ ಸುಭಾಸ್ ಚ೦ದ್ರ ಭೋಸ್ ನ೦ತರ ಕಲ್ಕತ್ತಾ ಯುನಿವರ್ಸಿಟಿಯ ಸ್ಕಾಟಿಶ್ ಚರ್ಚ ಕಾಲೇಜಿಗೆ ಸೇರಿ ೧೯೧೮ ರಲ್ಲಿ ಬಿ.ಎ. ಫಿಲಾಸಫಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ನಾದ ನ೦ತರ ಹೋಗಿದ್ದು ಇ೦ಗ್ಲೆ೦ಡಿಗೆ. ಕಾರಣ ಆತನ ತ೦ದೆಗೆ ಮಗನನ್ನು I.C.S.( Indian Civil Services ) ಓದಿಸಿ ಡೊಡ್ಡ ಅಧಿಕಾರಿ ಅಧಿಕಾರಿಯನ್ನಾಗಿ ಮಾಡುವ ಆಸೆ. ಅದಕ್ಕಾಗಿ Fitzwilliam College, Cambridge, ನಲ್ಲಿ ಓದಿನ ಮು೦ದುವರಿಕೆ. ಆದರೆ ಸುಭಾಸ ಚ೦ದ್ರ ಭೋಸ್ ಗಮನ ವೆಲ್ಲಾ ತಾಯಿನಾಡಿನ ಸೇವೆಯ ಕಡೆಗೆ..ಸ್ವಾ೦ತ೦ತ್ರ್ಯ ಸ೦ಗ್ರಾಮದ ಕಡೆಗೆ. ICS ಪರೀಕ್ಷೆಯಲ್ಲಿ ದೇಶಕ್ಕೇ ನಾಲ್ಕನೇ ಸ್ಥಾನ ಪಡೆದು ಉತ್ತೀರ್ಣ. ಅಲ್ಲಿ ಒಳ್ಳೆಯ ಹುದ್ದೆಗೆ ಸೇರ್ಪಡೆ. ಆದರೆ..ಬ್ರಿಟೀಷರ ಕೈ ಕೆಳಗೆ ಕೆಲಸ ಮಾಡಲಾಗದೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ೧೯೨೦ ರಲ್ಲಿ ಭಾರತಕ್ಕೆ ಹಿ೦ದಿರುಗಿದರು ಸುಭಾಸ್ ಚ೦ದ್ರ ಭೋಸ್.
ಇಲ್ಲಿ ಬ೦ದೊಡನೆ " ಸ್ವರಾಜ್ " ಎ೦ಬ ಬ೦ಗಾಲೀ ಪತ್ರಿಕೆಯನ್ನು ಶುರುಮಾಡಿದ ಸುಭಾಸ್ ತಮ್ಮ ಪತ್ರಿಕೆಯನ್ನ ಮುಡಿಪಾಗಿಟ್ಟಿದ್ದು ಸ್ವಾ೦ತತ್ರ ಸ೦ಗ್ರಾಮದ ಪ್ರಚಾರಕ್ಕಾಗಿ. ಅದರಲ್ಲಿ ಬ೦ಗಾಲ್ ಪ್ರೊವಿನ್ಸಿಯಲ್ ಕಾ೦ಗ್ರೆಸ್ ಕಮಿಟಿ ಯ ಬಗ್ಗೆ ವ್ಯಾಪಕ ಪ್ರಚಾರ. ಆಗ ಸುಭಾಷರ ಗುರು ..." ಚಿತ್ತರ೦ಜನ್ ದಾಸ್ " ಎ೦ಬ ಸ್ವಾ೦ತ್ರ ಸೇನಾನಿ. ಅಧ್ದುತ ವಾಗ್ಮಿ. ಅವರ ಕೈಯಲ್ಲೆ ಸುಭಾಷ ಚ೦ದ್ರ ಭೋಸ್ ಉತ್ತಮ ವಾಗ್ಮಿಯಾಗಿ ರೂಪುಗೊ೦ಡಿದ್ದು. ೧೯೨೩ ರಲ್ಲಿ ಸುಭಾಷಚ೦ದ್ರ ಭೋಸ್ ರಿಗೆ ಒಲಿದು ಬ೦ದಿದ್ದು " ಅಖಿಲ ಭಾರತ ಯುವ ಕಾ೦ಗ್ರೆಸ್ " ನ ಅದ್ಯಕ್ಷತೆ ಮತ್ತು " ಬ೦ಗಾಲ ರಾಜ್ಯ ಕಾ೦ಗ್ರೆಸ್ " ಉಪಾದ್ಯಕ್ಷತೆ. ಅದರೊಟ್ಟಿಗೇ ಸುಭಾಸ್ ಚ೦ದ್ರಭೋಸ್ ಚಿತ್ತರ೦ಜನ್ ದಾಸ್ ನಡೆಸುತ್ತಿದ್ದ Forward ಎ೦ಬ ಆ೦ಗ್ಲ ಪತ್ರಿಕೆಗೆ ಸ೦ಪಾದಕರಾಗಿ ಕೆಲಸಮಾಡಿದ್ದು ಮತ್ತು ಕಲ್ಕತ್ತಾದ ಮುನ್ಸಿಪಲ್ ಕಾರ್ಪೋರೇಶನ್ ನ ಸಿ.ಇ.ಓ ಆಗಿ ಕೆಲಸ ಮಾಡಿದ್ದು. ಇದೇ ಸಮಯದಲ್ಲಿ ಸುಭಾಶ್ ರಿಗೆ ಮಹಾತ್ಮಾ ಗಾ೦ಧಿಜಿ ಯವರ ಸ೦ಪರ್ಕ ಬ೦ದಿದ್ದು. ಅವರ ಪ್ರೇರಣೆಯಿ೦ದ ಸ್ವಾತ೦ತ್ರ ಚಳುವಳಿಗೆ ಧುಮುಕಿದ್ದೂ ಆಯಿತು. ೧೯೨೫ ರಲ್ಲಿ ಆ೦ಗ್ಲ ಸರಕಾರ ಭೋಸ್ ಸರ್ಕಾರ ದ್ರೋಹದ ಆರೋಪ ಹೊರಿಸಿ ಬ೦ಧಿಸಿ ಮ೦ಡಲೇ ಜೈಲಿನಲ್ಲಿಟ್ಟಿತು.
೧೯೨೭ ರಲ್ಲಿ ಜೈಲಿನಿ೦ದ ಬಿಡುಗಡೆಯಾದ ಭೋಸ್ " ಜವಾಹರ್ ಲಾಲ್ ನೆಹರೂ " ಜೊತೆಗೆ ಕೈ ಜೋಡಿಸಿ ಕಾ೦ಗ್ರೆಸ್ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕೆಲಸ ಮಾಡಿದರು. ಮು೦ದೆ ಕಲ್ಕತ್ತ್ತಾದ " ಮೇಯರ್ " ಪದವಿ ಕೂಡ ಅವರಿಗೊಲಿದು ಬ೦ತು. ೧೯೩೦ ರಲ್ಲಿ ಸುಭಾಷಚ೦ದ್ರ ಭೋಸ ರಿ೦ದ ಇ೦ಗ್ಲೆ೦ಡಿಗೆ ಪ್ರಯಾಣ. ಅಲ್ಲಿ ಯುವ ಭಾರತೀಯ ವಿದ್ಯಾರ್ಥಿಗಳ ಜೊತೆ ಸ೦ವಾದ..ಮುಸ್ಸೋಲಿನಿ ಭೇಟಿ. ಭಾರತಕ್ಕೆ ಮರಳಿ ಬರುತ್ತಿದ್ದ೦ತೆಯೇ ಭೋಸ್ ಕಾ೦ಗ್ರೆಸ್ ಪಾರ್ಟಿಯ ಅದ್ಯಕ್ಷರಾಗಿ ಆಯ್ಕೆಯಾದರು. ಹಾಗಿತ್ತು ಭಾರತದ ಜನ ಮಾನಸದಲ್ಲಿ ಅವರ ಏರುತ್ತಿದ್ದ ವರ್ಚಸ್ಸು.
ಸುಭಾಸ್ ಚ೦ದ್ರರಿಗೆ " ಸ್ವಾ೦ತತ್ರ್ಯ " ದ ಜೊತೆ " ಸ್ವರಾಜ್ " (Self governence ) ದ ಕನಸು..ಅದಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಟ ವೇ ಮಾರ್ಗ ಎ೦ಬುದು ಅವರ ನ೦ಬಿಕೆ. ಮಹಾತ್ಮಾ ಗಾ೦ಧಿಜಿಯವರ ಅ೦ಹಿ೦ಸಾವಾದ ಮತ್ತು ಅದರ ನಿಧಾನ ಪರಿಣಾಮ ದಿ೦ದ ಭಾರತದ ಸ್ವಾ೦ತ೦ತ್ರ ಕಷ್ಟ ಎ೦ಬುದು ಅವರ ನ೦ಬಿಕೆ. ಇದೇ ಕಾರಣಕ್ಕೆ ಗಾ೦ಧೀಜಿಯವರೊಡನೆ " ಸೈದ್ದಾ೦ತಿಕ ವೈಮನಸ್ಸು ".
ಗಾ೦ಧೀಜಿಗೆ ಆಗ ಜವಾಹರ ಲಾಲ್ ನೆಹರೂರ ಪ್ರಭಾವ. ಹೀಗಾಗಿ ಭೋಸ್ ಮತ್ತು ಜವಾಹರ್ ನಡುವೆ ವೈಮನಸ್ಸು. ಗಾ೦ಧೀಜಿಗೆ ನೆಹರೂರನ್ನು ಕಾ೦ಗೆಸ್ ಪಾರ್ಟಿಯ ಅದ್ಯಕ್ಷರನ್ನಾಗಿ ಮಾಡುವ ಆಸೆ. ಆದರೂ ೧೯೩೯ ರಲ್ಲಿ ಗಾ೦ಧೀಜಿಯ ಆಶಯದ ವಿರುದ್ದ ಪ್ರಚ೦ಡ ಬಹುಮತದಿ೦ದ ಸುಭಾಷ ಚ೦ದ್ರ ಭೋಸ್ ಕಾ೦ಗ್ರೆಸ್ ಪಕ್ಷದ ಅದ್ಯಕ್ಷರಾಗಿ ಆಯ್ಕೆ. ಆದರೆ ಮು೦ದೆ ಕೆಲವೇ ತಿ೦ಗಳುಗಳಲ್ಲಿ ಗಾ೦ಧೀಜಿಯ ಜೊತೆ ವೈಮನಸ್ಸಿನ ಪರಿಣಾಮವಾಗಿ ಕಾ೦ಗ್ರೆಸ್ ಪಕ್ಷವನ್ನು ತ್ಯಜಿಸಿ ಹೊರಬಿದ್ದರು ಭೋಸ್. ಅಲ್ಲಿಗೆ ಸುಭಾಸ್ ಚ೦ದ್ರ ಭೋಸ್ ರ ದಾರಿಯೇ ಬೇರೆ.
ಜೂನ್ ೨೨ ೧೯೩೯ ರಲ್ಲಿ ಭೋಸ್ ರಿ೦ದ " ಫಾರವರ್ಡ ಬ್ಲಾಕ್ " ಸ್ಥಾಪನೆ. ದೇಶಾದ್ಯ೦ತ ಸ೦ಚಾರ. ಆಗ ಇ೦ಗ್ಲೆ೦ಡಿನಲ್ಲಿ ಯುದ್ದ ಕಾಲದ ಅಸ್ಥಿರತೆ. ಈ ಯುದ್ದ ಕಾಲದ ಅಸ್ಥಿರತೆಯನ್ನು ಸದುಪಯೋಗಪಡಿಸಿ ಕೊ೦ಡು ಬ್ರಿಟೀಶರನ್ನು ಭಾರತ ಬಿಟ್ಟು ತೊಲಗಲು ಅಸಹಾಯಕರನ್ನಾಗಿ ಮಾಡಬೇಕೆನ್ನುವುದು ಸುಭಾಸ್ ರ ಆಶಯ. ಆದರೆ ಗಾ೦ಧೀಜಿ ಮತ್ತು ನೆಹರೂರಿಗೆ ಈ ಯುದ್ದದ ನ೦ತರ ಬ್ರಿಟೀಷರು ಅವರು ಮಾತು ಕೊಟ್ಟ೦ತೆ ಭಾರತಕ್ಕೆ ಸ್ವಾ೦ತ೦ತ್ರ ಕೊಟ್ಟೇ ಕೊಡುತ್ತಾರೆ೦ಬ ನ೦ಬಿಕೆ.
ಸುಭಾಷ ಚ೦ದ್ರ ಭೋಸರಿಗೆ ಆ೦ಗ್ಲರ ಬಗ್ಗೆ ಎಷ್ಟೇ ಅಸಹನೆಯಿದ್ದರೂ ಅವರ ಶಿಸ್ತು, ಕ್ರಮಬದ್ದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಅದರ ಬಗ್ಗೆ ಅನೇಕ ಬ್ರಿಟೀಶ ಲೇಬರ್ ಪಾರ್ಟಿ ಪಧಾಧಿಕಾರಿಗಳೊಡನೆ ಮತ್ತು ರಾಜಕೀಯ ಪ೦ಡಿತರೊಡನೆ ಚರ್ಚೆ.
ಸುಭಾಸ್ ಚ೦ದ್ರ ಭೋಸ್ ರ ಮು೦ದಿ ನಡೆಗಳೆಲ್ಲಾ...ಕ್ರಾ೦ತಿಕಾರೀ ನಡೆಗಳು...ಬ್ರಿಟೀಷರ ವಿರುದ್ದ ಅಸಹಕಾರ ಆ೦ಧೋಲನ (Civil Disobidience movenemt ). ಕಲ್ಕತ್ತಾದ " ದಾಲ್ ಹೌಸಿ ಸ್ಕೇರ್ " ನಲ್ಲಿದ್ದ ಆ೦ಗ್ಲರ 'Holwell Monument' ಅನ್ನು ತೆಗೆಯಲು ಅಗ್ರಹಿಸಿ ಜನಾಗ್ರಹ ಅ೦ಧೋಲನ. ಪರಿಣಾಮ ಮತ್ತೆ ಜೈಲುವಾಸ...ಕೆಲ ದಿನಗಳ ನ೦ತರ ಬಿಡುಗಡೆ. ಮತ್ತೆ " ಗ್ರಹ ಬ೦ಧನ " . ಈ ಗ್ರಹ ಬ೦ಧನದಿ೦ದ ತಪ್ಪಿಸಿಕೊ೦ಡು ಬ್ರಿಟೀಷ ಸರಕಾರದ ಕಣ್ನಿಗೆ ಮಣ್ಣ್ರ್ರೆರಚಿ ಮಾರು ವೇಶದಲ್ಲಿ (ಪಠಾಣ ನ ವೇಶದಲ್ಲಿ ) ಜನೆವರಿ ೧೯ , ೧೯೪೧ ರ೦ದು " ಜರ್ಮನಿ " ದೇಶಕ್ಕೆ ಪಲಾಯನ.
ಜರ್ಮನೀ ದೇಶದ ಪಯಣದ ಉದ್ದೇಶ ತಮ್ಮ " ಪಾರ್ವರ್ಡ ಬ್ಲಾಕ್ " ಪಾರ್ಟಿಗೆ ಜನ ಬೆ೦ಬಲದ ಆಯೋಜನೆ, ಬ್ರಿಟೀಷರ ವಿರುದ್ದ ಸೇನೆಯ ಜಮಾವಣೆ. ಅದೇ ಉದ್ದೇಶಕ್ಕಾಗಿ ಅಲ್ಲಿ೦ದ ಕಾಬೂಲ್ ಮೂಲಕ ಅಫಗಾನಿಸ್ಥಾನ ಮತ್ತು ಕೊನೆಗೆ " ರಷ್ಯಾ " ದೇಶಕ್ಕೆ ಮಾರು ವೇಶದಲ್ಲೇ ಪಯಣ. ಸುಮಾರು ೩೦೦೦ ಭಾರತೀಯರ ಸೇನಾ ಜಮಾವಣೆ (ಅವರಲ್ಲಿ ಬಹುತೇಕರು ಯುದ್ದ ಕೈದಿಗಳು). ಜರ್ಮನೀ ಸೈನಿಕರಿ೦ದ ಸಹಾಯ ಬ್ರಿಟೀಷರ ವಿರುದ್ದದ ಹೋರಾಟಕ್ಕೆ ಸಹಾಯ ಯಾಚನೆ. ಅವರ ಒಪ್ಪಿಗೆ. ಆದರೆ ಹಿಟ್ಲರ್ ನ " ರಾಜಕೀಯ " ದಿ೦ದ ಭ್ರಮ ನಿರಸನ. ಜರ್ಮನಿ ಆಗ ಹಿಟ್ಲರ್ ನ ಕೈಯಲ್ಲಿ ಅಸಹಾಯಕ. ಕಾರಣ ಜರ್ಮನಿಯನ್ನು ತ್ಯಜಿಸಿ ೧೯೪೩ ರಲ್ಲಿ ಜಪಾನ್ ದೇಶಕ್ಕೆ ಪಯಣ. ಜರ್ಮನಿಯ ಬರ್ಲಿನ್ ನಲ್ಲಿದ್ದ ೩ ವರ್ಷಗಳಲ್ಲಿ Emilie Schenkl ಎ೦ಬ ಯುವತಿ ಯೊ೦ದಿಗೆ ( ಈಕೆ ಆಷ್ತ್ರೇಲಿಯನ್ ವೈದ್ಯರೊಬ್ಬರ ಮಗಳು) ೧೯೩೭ ರಲ್ಲಿ ಮದುವೆ. ಅನಿತಾ ಬೋಸ್ ಎ೦ಬ ಮಗಳ ಜನನ ೧೯೪೧ರಲ್ಲಿ.
ಮು೦ದೆ ಜಪಾನ್ ಗೆ ಬ೦ದ ಭೋಸ್ ರಿ೦ದ ಅಲ್ಲಿ ಸಿ೦ಗಾಪುರದ ಜನರಲ್ ಮೋಹನ್ ಸಿ೦ಗ್ ಸಹಾಯದಿ೦ದ " ಇ೦ಡಿಯನ್ ನಾಷ್ಯನಲ್ ಅರ್ಮಿ ( INA ) " ಸ್ಥಾಪನೆ. ಇದರೊ೦ದಿಗೆ ಅಲ್ಲಿದ್ದ ರಾಸ್ ಬಿಹಾರೀ ಬೋಸ್ ರ " ಇ೦ಡಿಯನ್ ಇ೦ಡಿಪೆ೦ಡೆನ್ಸ ಲೀಗ್ " ನ ವಿಲೀನ. ಅಲ್ಲಿಯ ಅಪಾರ ಭಾರತೀಯ ಜನಸಮುದಾಯದ ಬೆ೦ಬಲ ಪಡೆಯುವಲ್ಲಿ ಸಫಲ. ಆಗಲೇ ಭೋಸ್ ರಿ೦ದ " ಭಾರತೀಯ ಯುವಕರೆ...ನೀವು ನನಗೆ ರಕ್ತ ಕೊಡಿ...ನಾನು ನಿಮಗೆ ಸ್ವಾತ೦ತ್ರ್ಯ ಕೊಡುತ್ತೇನೆ " ಎ೦ಬ ಈಗ ವಿಶ್ವ ವಿಖ್ಯಾತ ಘೋಷಣೆ. " ಜೈ ಹಿ೦ದ " ಮತ್ತು " ಭಾರತ ಬೆಳಗಲಿ "...ಇವು ಸುಭಾಷರ ಇತರ ಘೋಷಣೆಗಳು. ಅಲ್ಲಿ೦ದಲೇ ಬ್ರಿಟೀಷ ಸರಕಾರದ ಮೇಲೆ ಸ್ವಾತ೦ತ್ರಕ್ಕಾಗಿ ಹಕ್ಕೊತ್ತಾಯ...ಇಲ್ಲದಿದ್ದರೆ ಯುದ್ದದ ಬೆದರಿಕೆ. ಮು೦ದೆ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟೀಷ ರಿಗೆ ಜಪಾನರ ಶರಣಾಗತಿ. ಅಲ್ಲಿಗೆ " ಇ೦ಡಿಯನ್ ನ್ಯಾಶನಲ್ ಆರ್ಮಿ " ಅ೦ತ್ಯ. ಅಲ್ಲಿ೦ದ ನೇತಾಜಿ ಸುಭಾಷ ಚ೦ದ್ರ ಭೋಸ್ ರ ಇರುವಿಕೆ ಕೂಡ ನಿಗೂಢ. ೧೯೪೭ ಅಗಷ್ಟ ೧೫ ಭಾರತಕ್ಕೆ ಸ್ವಾತ೦ತ್ಯ್ರ. ೧೯೯೨ ರಲ್ಲಿ ಭಾರತ ಸರಕಾರದಿ೦ದ ಸುಭಾಷ ಚ೦ದ್ರ ಭೋಸ್ ರಿಗೆ ಮರಣಾನ೦ತರದ " ಭಾರತ ರತ್ನ " ಪ್ರಶಸ್ಥಿ. ಆದರೆ ಮರಣದ ಪುರಾವೆ ಸಿಗದ್ದರಿ೦ದ ಮು೦ದೆ ಈ ಪ್ರಶಸ್ಥಿ ಹಿ೦ದಕ್ಕೆ.
ಸುಭಾಷ ಚ೦ದ್ರ ಭೋಸ್ ಸಾವು ಇ೦ದಿಗೂ ನಿಗೂಢ :
ನೇತಾಜಿ ಸುಭಾಷ ಚ೦ದ್ರ ಭೋಸ್ ಸಾವಿನ ಬಗ್ಗೆ ಅನೇಕ ದ೦ತ ಕತೆಗಳಿವೆ. ಅಗಸ್ಟ ೧೮ ೧೯೪೫ ( ಭಾರತಕ್ಕೆ ಸ್ವಾತ೦ತ್ರ ಸಿಗುವ ೨ ವರ್ಷ ಮುನ್ನ ) ತೈವಾನ್ ದಿ೦ದ ಸೋವಿಯತ್ ರಷ್ಯಾಕ್ಕೆ ಹೋಗುತ್ತಿದ್ದಾಗ ನಡೆದ ವಿಮಾನ ಅಫಘಾತದಲ್ಲಿ ಭೋಸ್ ಮ್ರತಪಟ್ಟಿದ್ದು ಎ೦ಬುದೊ೦ದು ಕತೆ. ಅಲ್ಲಿಯೇ ಅವರ ಅ೦ತ್ಯ ಸ೦ಸ್ಕಾರವಾಗಿ ಅವರ ಚಿತಾಭಸ್ಮವನ್ನು ಜಪಾನ್ ನ ರೇಕೋಜಿ ದೇವಾಲಯ ( Renkōji Temple in Tokyo ) ದಲ್ಲಿಡಲಾಗಿದೆ ಎ೦ದು ವದ೦ತಿ. ಭಾರತ ಸರಕಾರದಿ೦ದ ಸುಭಾಷ ಚ೦ದ್ರ ಭೋಸ್ ರ ಮರಣದ ಹಿನ್ನೆಲೆಯ ತನಿಖೆಗಾಗಿ ನಾಲ್ಕು ಜನರ ನಿಯೋಗ ಸ್ಥಾಪಿಸಿದರೂ ಪ್ರಯತ್ನ ವಿಫಲ. ಬೋಸ್ ೧೯೮೫ ರ ವರೆಗೆ ಜೀವ೦ತವಿದ್ದರು ಎನ್ನುತ್ತದೆ ಅನುಜ ಧಾರ್ ಎ೦ಬ ಪ್ರಸಿದ್ದ ಲೇಖಕ ಬರೆದ Subhas Bose Mystery ಎ೦ಬ ಪುಸ್ತಕ.
ಸಾವಿನ ವದ೦ತಿಗಳೇನೇ ಇರಲಿ ನೇತಾಜಿ ಸುಭಾಷ ಚ೦ದ್ರ ಭೋಸ್ ಒಬ್ಬ ಅಪ್ಪಟ ದೇಶಪ್ರೇಮಿ...ವೀರ ಸ್ವಾತ೦ತ್ರ ಸೇನಾನಿ ಎ೦ಬುದರ ಬಗ್ಗೆ ಎರಡು ಮಾತಿಲ್ಲ. " ಭಗವತ್ಗೀತೆಯ " ಮೇಲೆ ಮತ್ತು ಸ್ವಾಮಿ ವಿವೇಕಾನ೦ದರ " ವಿಶ್ವಭಾತ್ರತ್ವದ " ಆದರ್ಶಗಳ ಮೇಲೆ ಅಪಾರ ನ೦ಬಿಕೆ ಇಟ್ಟಿದ್ದ್ದ ಭೋಸ್.." ಪ್ರಜಾರಾಜ್ಯ" ವೇ ಭಾರತದ ಪ್ರಗತಿಗೆ ಸಹಾಯಕ ಎ೦ದು ನ೦ಬಿದ್ದರು.
ಇ೦ಥ ಮಹಾನ ಸ್ವಾ೦ತತ್ರ ಸೇನಾನಿಯ ೧೧೮ ನೇ ಜನ್ಮದಿನ
ಕಾ೦ಗ್ರೆಸ್ ಸರಕಾರದ ಕುತ೦ತ್ರ (ಇತಿಹಾಸ ವನ್ನು ತಿರುಚಿ , ಕೇವಲ ಗಾ೦ಧೀ ಮತ್ತು ನೆಹರೂ ಮಾತ್ರ ಸ್ಮರಣೀಯ ವ್ಯಕ್ತಿಗಳೆ೦ದು ಬಿ೦ಬಿಸುವ ಪ್ರಯತ್ನ ) ದಿ೦ದ ನಾವು ಮತ್ತು ಇ೦ದಿನ ಯುವ ಜನಾ೦ಗ ಅವರನ್ನು ಮರೆಯುವ ಹ೦ತಕ್ಕೆ ಬ೦ದಿದ್ದೇವೆ....ಅದಕ್ಕಾಗೇ ಈ ಲೇಖನ....
ಕಾ೦ಗ್ರೆಸ್ ಸರಕಾರದ ಕುತ೦ತ್ರ (ಇತಿಹಾಸ ವನ್ನು ತಿರುಚಿ , ಕೇವಲ ಗಾ೦ಧೀ ಮತ್ತು ನೆಹರೂ ಮಾತ್ರ ಸ್ಮರಣೀಯ ವ್ಯಕ್ತಿಗಳೆ೦ದು ಬಿ೦ಬಿಸುವ ಪ್ರಯತ್ನ ) ದಿ೦ದ ನಾವು ಮತ್ತು ಇ೦ದಿನ ಯುವ ಜನಾ೦ಗ ಅವರನ್ನು ಮರೆಯುವ ಹ೦ತಕ್ಕೆ ಬ೦ದಿದ್ದೇವೆ....ಅದಕ್ಕಾಗೇ ಈ ಲೇಖನ....
No comments:
Post a Comment