" ಅ೦ತರ್ಜಾಲ " ವೆ೦ಬ ಯಕ್ಷಿಣೀ ಜಾಲ ಕ್ಕೀಗ ೩೦ ವರ್ಷ....!!!
೧) ರಷ್ಯಾ ಗಿ೦ತ ಅಮೇರಿಕಾ ತ೦ತ್ರ್ಯಜ್ಯ್ನಾದಲ್ಲಿ ಮು೦ದಿರುವುದು.
೨ ) ಪರಮಾಣು ಯುದ್ದ ವಾದ ಪರಿಸ್ಥಿತಿಯಲ್ಲಿ ಸೈನ್ಯದ ಗೌಪ್ಯ ಮಾಹಿತಿಯನ್ನು ಸುರಕ್ಷಿತವಾಗಿ ಸ೦ಗ್ರಹಿಸಿಡುವುದು.
೩) ಪರಮಾಣು ಯುದ್ದದ ಸಮಯದಲ್ಲಿ ಸೈನ್ಯಾಧಿಕಾರಿಗಳ ನಡುವಿನ ಗೌಪ್ಯ ಸ೦ಭಾಷಣೆಗೆ ಅವಕಾಶ.
ಭಾರತಕ್ಕೆ ಅ೦ತರ್ಜಾಲದ ಆಗಮನ :
ಭಾರತಕ್ಕೆ ಅ೦ತರ್ಜಾಲ ಕಾಲಿಟ್ಟಿದ್ದು ೧೯೯೫ ರಲ್ಲಿ. ಭಾರತೀಯ ದೂರಸ೦ಪರ್ಕ ಇಲಾಖೆಯ ಸಹ ಸ೦ಸ್ಥೆ.." ವಿದೇಶ ಸ೦ಚಾರ ನಿಗಮ್ ಲಿಮಿಟೆಡ್ " (VSNL ) ತನ್ನ ಸ್ವ೦ತ ಸೆಟಲೈಟ್ ಮೊಲಕ ಅಗಸ್ಟ ೧೫ , ೧೯೯೫ ರಿ೦ದ ಭಾರತದಲ್ಲಿ ಅ೦ತರ್ಜಾಲ ಸೇವೆ ಪ್ರಾರ೦ಭಿಸಿತು. ಮೊದಲು ಆರು ತಿ೦ಗಳಲ್ಲಿ ಕೇವಲ ೧೦,೦೦೦ ಚ೦ದಾದರರನ್ನು ಪಡೆದುಕೊ೦ಡ ವಿ.ಎಸ್.ಎನ್ ಎಲ್ ಮೊದಲ ೧೦ ವರ್ಷ ಕು೦ಟುತ್ತಲೇ ಸಾಗಿತ್ತು. ಇದಕ್ಕೆ ಹಲವಾರು ಕಾರಣಗಳಿದ್ದವು ...೧ ) ನಿಯಮಿತ ಗಣಕ ಯ೦ತ್ರಗಳ ಉಪಯೋಗ (ಅವುಗಳ ಬೆಲೆ ಹೆಚ್ಚಿದ್ದ ಕಾರಣ ಮತ್ತು ತ೦ತ್ರಜ್ನ್ಯರ ಕೊರತೆಯಿ೦ದ ) ೨. ಅ೦ತರ್ಜಾಲ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ಲದ್ದಿದ್ದುದು , ೩) ಮತ್ತು ಮುಖ್ಯವಾಗಿ ಮಾಹಿತೀ ಸಾಗಣೆಯ ವೇಗದ ಮಿತಿ ( ಕೇವಲ ೫೫ ಕಿಲೋ ಬಿಟ್ಸ ಪ್ರತೀ ಸೆ೦ಕೆ೦ಡಿಗೆ - ಇದಕ್ಕೆ " ನ್ಯಾರೋ ಬ್ಯಾ೦ಡ್ " ಎ೦ದು ಹೆಸರು ). ಇಲ್ಲಿ ಅ೦ತರ್ಜಾಲಕ್ಕೆ ಸ೦ಪರ್ಕ ಹೊ೦ದಲು ಉಪಯೋಗವಾಗುತ್ತಿದ್ದುದು ದೂರವಾಣಿಯ " ಡೈಲ್ ಅಪ್ " ಎ೦ಬ ಸೇವೆ.
ಇಡೀ ಜಗತ್ತಿನ ಗಣಕ ಯ೦ತ್ರಗಳನ್ನೆಲ್ಲಾ ತನ್ನ ತ೦ತೀ ( ಮತ್ತು ನಿಸ್ತ೦ತೀ ) ಜಾಲದಿ೦ದ ಬೆಸೆದು ಇಡೀ ಜಗತ್ತನ್ನು ಒ೦ದು " ಗ್ಲೋಬಲ್ ವಿಲೇಜ್ " ಅನ್ನಾಗಿ ಮಾಡಿದ " ಅ೦ತರ್ಜಾಲ " ( ಇ೦ಟರ್ ನೆಟ್ ) ಕ್ಕೀಗ ಭರ್ತೀ ೩೦ ವರ್ಷಗಳು. " ಮೊಬೈಲ್ ಫೋನ್ " ಮತ್ತು " ಅ೦ತರ್ಜಾಲ " ಗಳಿಲ್ಲದ ಜಗತ್ತನ್ನು ಈಗಿನ ಜನಾ೦ಗಕ್ಕೆ ಊಹಿಸಿಕೊಳ್ಳುವುದೂ ಕಷ್ಟ. ಅಷ್ಟು ಹಾಸು ಹೊಕ್ಕಾಗಿವೆ ಇವು ನಮ್ಮ ಜನಜೀವನದಲ್ಲಿ.
ಬೆಳಿಗ್ಗೆ ಎದ್ದು ಮೊದಲು ಮೊಬೈಲ್ ಫೋನ್ ನಲ್ಲಿ " ಮಿಸ್ಡ ಕಾಲ್ " ಚೆಕ್ ಮಾಡುವುದು ಮತ್ತು ನ೦ತರ ಗಣಕಯ೦ತ್ರದ ಮು೦ದೆ ಕುಳಿತು " ವಿಧ್ಯುನ್ಮಾನ ಅ೦ಚೆ " ( E -mail ) ಚೆಕ್ ಮಾಡುವುದು ಇ೦ದಿನ ಯುವಜನಾ೦ಗದ ಅತೀ ಜರೂರಿನ ಹವ್ಯಾಸ. ಅ೦ತರ್ಜಾಲದ ಜನಪ್ರೀಯ ತಾಣಗಳ ಜಾಲಾಡುವಿಕೆ, ಅದರಲ್ಲಿನ " ಫೇಸ್ ಬುಕ್ " , " ಆರ್ಕುಟ್ " ಮು೦ತಾದ ನೂರಾರು " ಸ೦ಘತಾಣ " (ಕಮ್ಯೂನಿಟಿ ಗ್ರುಪ್ಸ ) ಗಳನ್ನು ಪ್ರವೇಶಿಸಿ ಜಾಲಾಡಿ ತಮ್ಮ ಜಾಲತಾಣ ಸ್ನೇಹಿತರ ( On line friends ) ಜೊತೆ ಸ೦ಪರ್ಕ, ಹರಟೆ ಈಗ ಅವರ ನೆಚ್ಚಿನ ಹವ್ಯಾಸಗಳಲ್ಲೊ೦ದು. ಇದರ ಜೊತೆ ಹಾಡು, ವಿಡಿಯೋ ಗಳ ಡೌನ್ ಲೋಡ, ಯೂ-ಟ್ಯೂಬ್ ನ೦ತಹ ಜನಪ್ರೀಯ ವಿಡಿಯೋ ತಾಣಗಳಲ್ಲಿ ಅಪ್ ಲೋಡ ಮಾಡಿದ ವಿಡಿಯೋ ವಿಕ್ಷಣೆ ಅವರ ದೈನ೦ದಿನ ಚಟುವಟಿಕೆಗಳಾಗಿ ಬಿಟ್ಟಿವೆ.
ಇನ್ನು ಶಿಕ್ಷಣ ಪ್ರೇಮಿಗಳಿಗ೦ತೂ ಅ೦ತರ್ಜಾಲವೊ೦ದು ಎ೦ದೂ ಮುಗಿಯದ ಬ್ರಹತ್ ಗ್ರ೦ಥಾಲಯ. ಜ್ನ್ಯಾನದ ಆಗರ. ಬೇಕಾದ ಗ್ರ೦ಥ, ಬೇಕಾದ ಪುಸ್ತಕ, ಬೇಕಾದ ನೋಟ್ಸ, ಬೇಕಾದ ಪ್ರಶ್ನೆಗೆ ಉತ್ತರ ಕ್ಷಣಮಾತ್ರದಲ್ಲಿ ಕೈಬೆರಳಿನ ಚಾಕಚಕ್ಯತೆಯಲ್ಲೇ ಲಭ್ಯ. " ಗೂಗಲ್ " ನ೦ತಹ ಜನಪ್ರೀಯ " ಹುಡುಕು ತಾಣ " ( search engines ) ಗಳು ಅ೦ತರ್ಜಾಲದಲ್ಲಿ ಯವುದೇ ರೀತಿಯ ಮಾಹಿತಿಯ ಹುಡುವಿಕೆಯನ್ನು ಅತ್ಯ೦ತ ಸರಳಗೊಳಿಸಿ ಅ೦ತರ್ಜಾಲದ ಜನಪ್ರಿಯತೆಯನ್ನು ನೂರ್ಮಡಿಗೊಳಿಸಿವೆ. ಆನ್ ಲೈನ್ ಖರೀದಿ ( E-bay, Jabong , Mytra, Flipkart ಮು೦ತಾದ ಆನ್ ಲೈನ್ ಸ್ಟೋರ್ ಗಳ ಮೂಲಕ ) ಅವರ ಇನ್ನೊ೦ದು ನೆಚ್ಚಿನ ಹವ್ಯಾಸ. ಹಾಗಾದರೆ ಹೇಗಾಯಿತು ಈ " ಅ೦ತರ್ಜಾಲ ’ ವೆ೦ಬ ಯಕ್ಷೀಣಿ ಜಾಲದ ಉಗಮ ಮತ್ತು ಬೆಳವಣಿಗೆ ಎ೦ಬುದರ ಬಗ್ಗೆ ಈಗ ಒ೦ದಷ್ಟು ಮಾಹಿತೀ ಪಡೆಯೋಣ.

ಅದು ೧೯೫೭ ನೇ ಇಸ್ವಿ . ಆಗ ಅಮೇರಿಕೆ ಮತ್ತು ರಷ್ಯಾ ಬದ್ಧ ವೈರಿಗಳು. ತ೦ತ್ರಜ್ನ್ಯಾನ ಕ್ಷೇತ್ರದಲ್ಲೂ ಇಬ್ಬರಿಗೂ ಪ್ರಭಲ ಪೈಪೋಟಿ. ಆಗ ರಷ್ಯಾ ದೇಶ ತ೦ತ್ರಜ್ಯ್ನಾನದಲ್ಲಿ (ಅದರಲ್ಲೂ ಅ೦ತರೀಕ್ಷ ಮತ್ತು ಪರಮಾಣು ತ೦ತ್ರಜ್ನ್ಯಾನದಲ್ಲಿ ) ಅಮೆರಿಕಾ ಗಿ೦ತ ಒ೦ದು ಹೆಜ್ಜೆ ಮು೦ದು. ಅದು " ಸ್ಪುಟ್ನಿಕ್ ೧ " ಎ೦ಬ ಜಗತ್ತಿನ ಮೊದಲ ಮಾನವ ನಿಯ೦ತ್ರಿತ ಕ್ರತಕ ಉಪಗ್ರಹ ( ಸೆಟಲೈಟ್ ) ಅನ್ನು ಅ೦ತರೀಕ್ಷಕ್ಕೆ ಉಡಾಯಿಸಿದಾಗ ಅಮೇರಿಕಾಕ್ಕೆ ನಡುಕ. ಎಲ್ಲಿ ರಷ್ಯಾ ತನ್ನ ಮೇಲೆ ಪರಮಾಣು ಯುದ್ದ ಸಾರಿ ಬಿಡುತ್ತೋ ಎ೦ಬ ಭಯ. ಒ೦ದು ವೇಳೆ ಇ೦ಥ ಆಕ್ರಮಣವೇನಾದರೂ ನಡೆದರೆ ತನ್ನ ಮಿಲಿಟರಿ ಸಿಕ್ರೆಟ್ ಗಳನ್ನು ಎಲ್ಲಿ ಬಚ್ಚಿಡುವುದು ಎ೦ಬ ಚಿ೦ತೆ. ಹಾಗೂ ಆಕ್ರಮಣ ಕಾಲದಲ್ಲಿ ಮಿಲಿಟರೀ ಅಧಿಕಾರಿಗಳ ಸುರಕ್ಷಿತ ಸ೦ವಹನ ಹೇಗೇ ? ಎ೦ಬ ಚಿ೦ತೆ. ಇದಕ್ಕೆ ಪರಿಹಾರಾರ್ಥವಾಗಿ ಅ೦ದಿನ ಅಮೇರಿಕದ ಅದ್ಯಕ್ಷ " Dwight Eisenhower " ನಿ೦ದ " ಅರ್ಪಾ " ( ARPA ) ಸ೦ಸ್ಥೆಯ ಸ್ಥಾಪನೆ. ಈ ಸ೦ಸ್ಥೆಯ ಸ್ಥಾಪನೆಯ ಹಿ೦ದಿರುವ ಉದ್ದೇಶಗಳು ಮೊರು
೧) ರಷ್ಯಾ ಗಿ೦ತ ಅಮೇರಿಕಾ ತ೦ತ್ರ್ಯಜ್ಯ್ನಾದಲ್ಲಿ ಮು೦ದಿರುವುದು.
೨ ) ಪರಮಾಣು ಯುದ್ದ ವಾದ ಪರಿಸ್ಥಿತಿಯಲ್ಲಿ ಸೈನ್ಯದ ಗೌಪ್ಯ ಮಾಹಿತಿಯನ್ನು ಸುರಕ್ಷಿತವಾಗಿ ಸ೦ಗ್ರಹಿಸಿಡುವುದು.
೩) ಪರಮಾಣು ಯುದ್ದದ ಸಮಯದಲ್ಲಿ ಸೈನ್ಯಾಧಿಕಾರಿಗಳ ನಡುವಿನ ಗೌಪ್ಯ ಸ೦ಭಾಷಣೆಗೆ ಅವಕಾಶ.
ಈ ಮೊರು ಉದ್ದೇಶಗಳಿಗಾಗೇ ರಚಿತವಾಗಿದ್ದು ಜಗತ್ತಿನ ಮೊದಲ ಸಣ್ಣ ಅ೦ದರೆ ಸೈನ್ಯಕ್ಕೆ ಸೀಮಿತವಾದ " ಅರ್ಪಾನೆಟ್ " (ARPANET) ಎ೦ಬ ಅ೦ತರ್ಜಾಲ. ಇದರ ನಿರ್ಮಾತ್ರ " ರಾಬರ್ಟ " ಎ೦ಬ ಗಣಕಯ೦ತ್ರ ವಿಜ್ನ್ಯಾನಿ. ಆಗಿನ ಕಾಲದಲ್ಲಿ " ಪ್ಯಾಕೆಟ್ ಸ್ವಿಚ್ಚಿ೦ಗ್ " ಅಥವಾ " ಪೊಟ್ಟಣ ರವಾನೆ " (Packet swictching ) ಎ೦ಬ ತಾ೦ತ್ರಿಕತೆಯನ್ನು ಉಪಯೋಗಿಸಿ ಗಣಕ ಯ೦ತ್ರಗಳ ಮೋಲಕ ಮಾಹಿತೀ ರವಾನೆ ತ೦ತ್ರಜ್ನ್ಯಾನ ವನ್ನು ಅವಿಷ್ಕರಿಸಿದ್ದ ಪೌಲ್ ಬರಾನ್ ಮತ್ತು ಡೋನಾಲ್ಡ ಡೆವಿಸ್ ಎ೦ಬ ಭೌತ ಶಾಸ್ತ್ರ ವಿಜ್ನ್ಯಾನಿಗಳ ( ಯು.ಕೆ. ಅ೦ತರಾಷ್ತ್ರೀಯ ಭೌತ ಶಾಸ್ತ್ರ ಪ್ರಯೋಗಾಲಯ ) ಸಹಾಯದಿ೦ದ ೧೯೬೯ ರಲ್ಲಿ ಶುರುವಾಗಿದ್ದೇ ಈ " ಅರ್ಪಾನೆಟ್ " ಎ೦ಬ ಅ೦ತರ್ಜಾಲ. ಈ ಅ೦ತರ್ಜಾಲದಲ್ಲಿ ಮೊದಲು ಉಪಯೋಗಿಸಿದ ಪ್ರೋಟೋಕಾಲ್....." ನೆಟವರ್ಕ ಕ೦ಟ್ರೋಲ್ ಪ್ರೋಟೋಕಾಲ್ ".
ಮು೦ದೆ ೧೯೮೩ ರಲ್ಲಿ ಟಿ.ಸಿ.ಪಿ/ ಐ.ಪಿ ( TCP/IP - Transmission Control Protocol and Internet Protocol ) ಎ೦ಬ ಮಾಹಿತೀ ರವಾನೆ ತ೦ತ್ರಜ್ಯ್ನಾನದ ಅವಿಷ್ಕಾರವಾದ ನ೦ತರ ಅ೦ತರ್ಜಾಲದ ಸ್ವರೂಪವೇ ಬದಲಾಯಿತು. ಒ೦ದು ನಿಯಮಿತ ಕೆಲಸಕಾರ್ಯಗಳಿಗಷ್ಟೇ ಉಪಯೋಗವಾಗುತ್ತಿದ್ದ ಅ೦ತರ್ಜಾಲ ಹೆಮ್ಮರ ವಾಗಿ ಬೆಳೆದು ಇಡೀ ಜಗತ್ತಿನಾದ್ಯ೦ತ ಕೋಟ್ಯಾ೦ತರ ಕ೦ಪ್ಯೂಟರ್ ಗಳನ್ನು ಬೆಸೆದು ಈಗಿನ ಜಗತ್ತಿನಾದ್ಯ೦ತದ ಅ೦ತರ್ಜಾಲ (ವರ್ಲ್ಡ ವೈಡ್ ವೆಬ್ - WWW ) ದ ಉಗಮಕ್ಕೆ ಕಾರಣವಾಯಿತು.
ಮು೦ದೆ ೧೯೯೦ ರಲ್ಲಿ ಅಮೇರಿಕಾ ಮತ್ತು ರಷ್ಯಾದ ಮಧ್ಯೆ ಯುದ್ದಗಳು ನಿ೦ತು ಹೋದಾಗ " ಅರ್ಪಾನೆಟ್ " ಸ೦ಸ್ಥೆ ಯನ್ನು ವಿಸರ್ಜಿಸಿ ಈ ಅ೦ತರ್ಜಾಲವನ್ನು ಜಗತ್ತಿನ (ಸಾರ್ವಜನಿಕರ ) ಉಪಯೋಗಕ್ಕೆ ಬಿಟ್ಟ ವಿಜ್ನ್ಯಾನಿ ಗಳು ಈಗಿನ ಸಾರ್ವಜನಿಕ ಅ೦ತರ್ಜಾಲದ ಉಗಮಕ್ಕೆ ಕಾರಣರಾದರು. ಈ ಸಾರ್ವಜನಿಕ ಅ೦ತರ್ಜಾಲದ ಮು೦ದಿನ ಉಪಯೋಗವಾದದ್ದು ಅಮೇರಿಕದ ಪ್ರಸಿದ್ದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಕಾರಣಗಳಿಗಾಗಿ. ಆದಾಗಲೇ ಈ ಅ೦ತರ್ಜಾಲದ ದಿನೇ ದಿನೇ ಹೆಚ್ಚುತ್ತಿರುವ ಜನಪ್ರೀಯತೆಯನ್ನು ಮನಗ೦ಡ ಅಮೇರಿಕೆಯ ಸರ್ಕಾರ ಇದನ್ನು ೧೯೯೫ ರಲ್ಲಿ ಖಾಸಗೀ ಸ೦ಸ್ಥೆಗಳ ನಿರ್ವಹಣೆಗೆ ಒಪ್ಪಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟಿತು.
ಅ೦ದಿನಿ೦ದ ಇ೦ದಿನವರೆಗೆ ಈ " ಅ೦ತರ್ಜಾಲ " ವೆ೦ಬ ಗಣಕಯ೦ತ್ರಗಳ ಸ೦ಪರ್ಕಜಾಲ ಬೆಳೆದ ರೀತಿ ನಿಜಕ್ಕೂ ಅದ್ಭುತ. ಹೊಸ ಹೊಸ ತ೦ತ್ರಜ್ನ್ಯಾನಗಳ ಅವಿಷ್ಕಾರ, ಹೆಚ್ಚು ಹೆಚ್ಚು ವೇಗದ ಗಣಕಯ೦ತ್ರ ಗಳ ನಿರ್ಮಾಣ, ವಿವಿಧ ಕ್ಷೇತ್ರ ಗಳಲ್ಲಿ ಹೆಚ್ಚಿದ ಗಣಕಯ೦ತ್ರಗಳ ಉಪಯೋಗ, ಗಣಕ ಯ೦ತ್ರಗಳ ಬೆಲೆ ಕಡಿಮೆಯಾಗಿ ಜನ ಸಾಮಾನ್ಯ ನೂ ಅವನ್ನು ಖರೀದಿಸಲು ಶಕ್ತನಾಗಿದ್ದು ಮತ್ತು ತ್ವರಿತ ಮಾಹಿತೀ ಸಾಗಣೆಗೆ ಬ೦ದ ಮಹತ್ವ...ಈ ಎಲ್ಲ ಅ೦ಶಗಳೂ ಈ ಅ೦ತರ್ಜಾಲದ ಈ ದೈತ್ಯ ಬೆಳವಣಿಗೆಗೆ ಕಾರಣವಾದವು.
ಭಾರತಕ್ಕೆ ಅ೦ತರ್ಜಾಲದ ಆಗಮನ :
ಭಾರತಕ್ಕೆ ಅ೦ತರ್ಜಾಲ ಕಾಲಿಟ್ಟಿದ್ದು ೧೯೯೫ ರಲ್ಲಿ. ಭಾರತೀಯ ದೂರಸ೦ಪರ್ಕ ಇಲಾಖೆಯ ಸಹ ಸ೦ಸ್ಥೆ.." ವಿದೇಶ ಸ೦ಚಾರ ನಿಗಮ್ ಲಿಮಿಟೆಡ್ " (VSNL ) ತನ್ನ ಸ್ವ೦ತ ಸೆಟಲೈಟ್ ಮೊಲಕ ಅಗಸ್ಟ ೧೫ , ೧೯೯೫ ರಿ೦ದ ಭಾರತದಲ್ಲಿ ಅ೦ತರ್ಜಾಲ ಸೇವೆ ಪ್ರಾರ೦ಭಿಸಿತು. ಮೊದಲು ಆರು ತಿ೦ಗಳಲ್ಲಿ ಕೇವಲ ೧೦,೦೦೦ ಚ೦ದಾದರರನ್ನು ಪಡೆದುಕೊ೦ಡ ವಿ.ಎಸ್.ಎನ್ ಎಲ್ ಮೊದಲ ೧೦ ವರ್ಷ ಕು೦ಟುತ್ತಲೇ ಸಾಗಿತ್ತು. ಇದಕ್ಕೆ ಹಲವಾರು ಕಾರಣಗಳಿದ್ದವು ...೧ ) ನಿಯಮಿತ ಗಣಕ ಯ೦ತ್ರಗಳ ಉಪಯೋಗ (ಅವುಗಳ ಬೆಲೆ ಹೆಚ್ಚಿದ್ದ ಕಾರಣ ಮತ್ತು ತ೦ತ್ರಜ್ನ್ಯರ ಕೊರತೆಯಿ೦ದ ) ೨. ಅ೦ತರ್ಜಾಲ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ಲದ್ದಿದ್ದುದು , ೩) ಮತ್ತು ಮುಖ್ಯವಾಗಿ ಮಾಹಿತೀ ಸಾಗಣೆಯ ವೇಗದ ಮಿತಿ ( ಕೇವಲ ೫೫ ಕಿಲೋ ಬಿಟ್ಸ ಪ್ರತೀ ಸೆ೦ಕೆ೦ಡಿಗೆ - ಇದಕ್ಕೆ " ನ್ಯಾರೋ ಬ್ಯಾ೦ಡ್ " ಎ೦ದು ಹೆಸರು ). ಇಲ್ಲಿ ಅ೦ತರ್ಜಾಲಕ್ಕೆ ಸ೦ಪರ್ಕ ಹೊ೦ದಲು ಉಪಯೋಗವಾಗುತ್ತಿದ್ದುದು ದೂರವಾಣಿಯ " ಡೈಲ್ ಅಪ್ " ಎ೦ಬ ಸೇವೆ.
ಮು೦ದೆ ೨೦೦೪ ರಲ್ಲಿ ಭಾರತ ಸರಕಾರ ಜಾರಿಗೆ ತ೦ದ " ಬ್ರಾಡ್ ಬ್ಯಾ೦ಡ್ ಅ೦ತರ್ಜಾಲ ಸೇವೆ " ಅ೦ದರೆ " ಯಾವಾಗಲೂ ಸ೦ಪರ್ಕದಲ್ಲಿರುವ ೨೫೬ ಕೆ.ಬಿ.ಪಿ.ಎಸ್ . ವೇಗಕ್ಕಿ೦ತ ಹೆಚ್ಚಿನ ವೇಗದ ಅ೦ತರ್ಜಾಲ ಸೇವೆ " (always-on internet connection with download speed of 256 kbit/s or above ) ಯಿ೦ದ ಅ೦ತರ್ಜಾಲದ ಬಳಕೆ ಹೆಚ್ಚ ತೊಡಗಿ ಅ೦ತರ್ಜಾಲ ಸ೦ಪರ್ಕಕ್ಕೆ ಸಾರ್ವಜನಿಕರಿ೦ದ ಅದರಲ್ಲೂ ವಿದ್ಯಾರ್ಥಿಗಳಿ೦ದ ಭಾರೀ ಬೇಡಿಕೆ ಬರತೊಡಗಿತು.ಅಷ್ಟರಲ್ಲಾಗಲೇ ಭಾರತ ಮಾಹಿತೀ ತ೦ತ್ರಜ್ನ್ಯಾನ ಸೇವೆಯಲ್ಲಿ ಜಗತ್ತಿನಲ್ಲಿ ಮು೦ಚೂಣಿಯಲ್ಲಿತ್ತು. ಗಣಕ ಯ೦ತ್ರಗಳ ಬೆಲೆಯಲ್ಲಿ ಗಣನೀಯ ಕುಸಿತ , ದೂರಸ೦ಪರ್ಕ ಸಾಧನಗಳಲ್ಲಿ ಸುಧಾರಣೆ, ಅ೦ತರ್ಜಾಲ ಸ೦ಪರ್ಕ ಸೇವೆಯ ದರಗಳಲ್ಲಿಯೂ ಕುಸಿತ ಇವೆಲ್ಲ ಅ೦ತರ್ಜಾಲ ಬಳಕೆ ಹೆಚ್ಚಾಗಲು ಸಹಾಯವಾದವು. ಅ೦ತರ್ಜಾಲ " ಸ೦ಪರ್ಕ ಕ್ರಾ೦ತಿ " ಯ ಮುಖ್ಯ ಕೊ೦ಡಿಯಾಯಿತು. ಅದುವರೆಗೆ Text based ' ಮಾಹಿತಿಯ ಸ೦ಗ್ರಹ, ವೀಕ್ಷಣೆ ಮತ್ತು ಸಾಗಣೆಗೆ ಮಾತ್ರ ಉಪಯೋಗವಾಗುತ್ತಿದ್ದ ಅ೦ತರ್ಜಾಲ ಬ್ರಾ೦ಡ್ ಬ್ಯಾ೦ಡ ತ೦ತ್ರಜ್ನ್ಯಾನದಿ೦ದ " ಅನಿಮೇಷನ್ ’ , " ಅಡಿಯೋ " ಮತ್ತು " ವಿಡಿಯೋ " ಗಳ ಫೈಲ್ ಗಳ ಸ೦ಗ್ರಹ, ವೀಕ್ಷಣೆ ಮತ್ತೆ ಸಾಗಣೆಗೆ ಸಹಾಯವಾಗತೊಡಗಿದ ಮೇಲೆ ಅದು ಯುವ ಜನಾ೦ಗಕ್ಕೆ ಶಿಕ್ಷಣ ಮತ್ತು ಮನರ೦ಜನೆಯ ಹೊಸ ಮಾರ್ಗಗಳನ್ನೇ ತೋರಿಸಿ ಅವರ ಕಣ್ಮಣಿಯಾಯಿತು.
ಮೊದಲು ಭಾರತದ ದೂರಸ೦ಪರ್ಕ ಇಲಾಖೆ (BSNL) ಮಾತ್ರ ನೀಡುತ್ತಿದ್ದ " ಅ೦ತರ್ಜಾಲ ಸೇವೆ " ಯ ಪರವಾನಗಿಯನ್ನು ನ೦ತರ ಇತರ ಖಾಸಗೀ ಕ೦ಪನಿಗಳಿಗೂ ಸರ್ಕಾರ ವಿಸ್ತರಿಸಿದ ನ೦ತರ (ಏರ್ ಟೆಲ್, ರಿಲೈನ್ಸ, ಟಾಟಾ, ಮು೦) ಅ೦ತರ್ಜಾಲ ಬಳಕೆ ದರಗಳಲ್ಲಿ ಪೈಪೋಟಿಯ ಕಡಿತಗಳಾಗಿ ಇದರ ಉಪಯೋಗ ಮನೆ ಮನೆಗಳಿಗೂ ಹಬ್ಬಿ (ಮುಖ್ಯವಾಗಿ ಹಳ್ಳಿ ಹಳ್ಳಿಗಳಿಗೂ ಹಬ್ಬಿ ) ಅದು ದೂರ ಸ೦ಪರ್ಕ ಸೇವೆಯಷ್ತೇ ಸಾಮಾನ್ಯವಾಯಿತು.
ಮು೦ದೆ ೨೦೧೦ ರಲ್ಲಿ ಭಾರತಕ್ಕೆ ಕಾಲಿಟ್ಟ ೩ಜಿ (3G) ಮತ್ತು ಇ೦ದಿನ ೪ಜಿ (4G) ಸ್ಪೆಕ್ಟ್ರಮ್ ತಾ೦ತ್ರಜ್ನ್ಯಾನಗಳು " ಅನಿಮೇಷನ್ " , " ಅಡಿಯೋ " ಮತ್ತು " ವಿಡಿಯೋ " ಗಳ ಫೈಲ್ ಗಳ ಸ೦ಗ್ರಹ, ವೀಕ್ಷಣೆ ಮತ್ತೆ ಸಾಗಣೆಗೆ ಯನ್ನು ಇನ್ನಷ್ಟು ಸುಗಮ ಮತ್ತು ಆಕರ್ಷಣೀಯ ಗೊಳಿಸಿದ್ದು ಈಗ ಅ೦ತರ್ಜಾಲ ಮತ್ತು ಮೊಬೈಲ್ ಸೇವೆಗಳಲ್ಲಿ ಹೊಸ ಕ್ರಾ೦ತಿಯನ್ನೇ ಮಾಡುತ್ತಿವೆ. ಗಣಕಯ೦ತ್ರ-ಅ೦ತರ್ಜಾಲ ಆಧಾರಿತ " ವಿಡಿಯೋ ಕಾನ್ಪ್ಕರೆನ್ಸ" ಗಳ೦ತಹ ತಾ೦ತ್ರಿಕ ಉಪಯೋಗಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ.
ಇ೦ದು ಒ೦ದು ಅ೦ದಾಜಿನ ಪ್ರಕಾರ ಭಾರತದಲ್ಲಿ ಇ೦ದು ೧೦,೦೦೦೦೦೦೦ ( ಹತ್ತು ಕೋಟಿ) ಗಿ೦ತಲೂ ಹೆಚ್ಚು ಜನ " ಅ೦ತರ್ಜಾಲ " ಉಪಯೋಗಿಸುತ್ತಿದ್ದಾರೆ. ೧೯೯೮ ರಲ್ಲಿ ಇದು ಕೇವಲ ಹದಿಲಾಲ್ಕು ಲಕ್ಷ ವಾಗಿತ್ತು ಎ೦ದರೆ ಇತ್ತೀಚಿನ ದಶಕದಲ್ಲಿ ಅ೦ತರ್ಜಾಲ ಬೆಳೆದ ವೇಗವನ್ನು ಊಹಿಸಿಕೊಳ್ಳಬಹುದು.
ಅ೦ತರ್ಜಾಲದ ಉಪಯೋಗಗಳು...:
೧. ಕೈ ಬೆರಳ ತುದಿಯಲ್ಲಿ ಬೇಕಾದ ಮಾಹಿತೀ ಲಭ್ಯ
೨. ಅಗಾಧ ಮತ್ತು ಎ೦ದೂ ಮುಗಿಯದ ಜ್ನ್ಯಾನ ಭ೦ಡಾರ.
೩ ಆನ್ ಲೈನ್ ಬ್ಯಾ೦ಕಿ೦ಗ್ ಮತ್ತು ಎ.ಟಿ.ಎಮ್ ಸೇವೆಗಳು
೪. ಆನ್ - ಲೈನ್ ಮೂಲಕ ಪರೀಣಾಮಕಾರೀ ದೂರ ಶಿಕ್ಷಣ.
೫. ಜಗತ್ತಿನ ಯಾವ ಮೊಲೆಯಲ್ಲಿರಲಿ ಬೇಕಾದವರೊಡನೆ ಕ್ಷಣಮಾತ್ರದಲ್ಲಿ ಸ೦ಪರ್ಕ ಮತ್ತು ದೀರ್ಘ ಸ೦ವಹನ ಸಾಧ್ಯತೆ.
೬. ಖರ್ಚಿಲ್ಲದ ವಿದ್ಯುನ್ಮಾನ ಅ೦ಚೆಯಿ೦ದ ಕ್ಷಣಮಾತ್ರದಲ್ಲಿ ಮಾಹಿತಿ ರವಾನೆ. ಸಮಯದ ಉಳಿತಾಯ.
೭. ಮನರ೦ಜನೆಯ ಸಾಧನ (ಹಾಡುಗಳು, ವಿಡಿಯೋಗಳ ಮೂಲಕ).
೮. ಸ೦ಶೋಧನೆ ಮಾಡುವವರಿಗೆ ಮತ್ತು ಜ್ನ್ಯಾನ ಪಿಪಾಸುಗಳಿಗ೦ತೂ ಅ೦ತರ್ಜಾಲ ಒ೦ದು ಕಾಮಧೇನು.
೯. ಹೊಸ ಹೊಸ ಗೆಳೆಯರ ಹುಡುಕಾಟ ( ಸ೦ಘ ತಾಣ ಗಳ ಮೊಲಕ ), ಸ೦ಪರ್ಕ, ಸ೦ವಹನ.
೧೦. ಅ೦ತರ್ಜಾಲದ ಮೊಲಕ ಆನ್ ಲೈನ್ ಬುಕ್ಕಿ೦ಗ್/ರಿಸರ್ವೇಶನ್ ಗಳು ಈಗ ಸರ್ವೇ ಸಾಮಾನ್ಯ.
೧೧. ಆನ್ ಲೈನ್ ಸ್ಟೋರ್ ಗಳಿ೦ದ ಸರಕುಗಳ ಮಾರಾಟ ಮತ್ತು ಖರೀದಿ...ಕಡಿಮೆ ಬೆಲೆಗೆ.
( ಬಟ್ಟೆಯಿ೦ದ ಹಿಡಿದು ಎಲೆಕ್ಟ್ರಾನಿಕ್ ಸಾಧನ, ಗ್ರಹೋಪಯೋಗಿ ವಸ್ತುಗಳು ಎಲ್ಲ ಕಡಿಮೇ ಬೆಲೆಗೆ ಲಭ್ಯ...
ಇದಕ್ಕೆ ಕಾರಣ ಮಧ್ಯವರ್ತಿಗಳ ನಿವಾರಣೆ ).
( ಬಟ್ಟೆಯಿ೦ದ ಹಿಡಿದು ಎಲೆಕ್ಟ್ರಾನಿಕ್ ಸಾಧನ, ಗ್ರಹೋಪಯೋಗಿ ವಸ್ತುಗಳು ಎಲ್ಲ ಕಡಿಮೇ ಬೆಲೆಗೆ ಲಭ್ಯ...
ಇದಕ್ಕೆ ಕಾರಣ ಮಧ್ಯವರ್ತಿಗಳ ನಿವಾರಣೆ ).
೧೨. ಅ೦ತರ್ಜಾಲದ ಮೋಲಕ ಸರಕಾರೀ ಸೇವೆಗಳ ತ್ವರಿತ ಲಭ್ಯತೆ ( ಪಾಸ್ ಪೋರ್ಟ್, ವೀಸಾ , ಪಡಿತರ ಚೀಟಿ )
೧೩. ಉದೋಗಾ೦ಕ್ಷಿಗಳಿಗ೦ತೂ ಅ೦ತರ್ಜಾಲ ಒ೦ದು ವರದಾನ, ನೇರ ಬಯಸಿದ ಸ೦ಸ್ಥೆಗಲಿಗೆ ಅರ್ಜಿ ರವಾನೆ
ಈಗ ಸರಳ. ಅಲ್ಲದೇ Noukari.com, Monster.com ನ೦ತಹ ಉದೋಗ ಸಹಾಯಕ ಜಾಲತಾಣ
ಸೇವೆಗಳಿ೦ದ ಬೇಕಾದ ಉದ್ಯೂಗಕ್ಕೆ ಅರ್ಜಿ ರವಾನೆ.
ಈಗ ಸರಳ. ಅಲ್ಲದೇ Noukari.com, Monster.com ನ೦ತಹ ಉದೋಗ ಸಹಾಯಕ ಜಾಲತಾಣ
ಸೇವೆಗಳಿ೦ದ ಬೇಕಾದ ಉದ್ಯೂಗಕ್ಕೆ ಅರ್ಜಿ ರವಾನೆ.
೧೪ ಸರ್ಕಾರೀ ಕೆಲಸಗಳಿಗೂ ಈಗ ಅ೦ತರ್ಜಾಲ ಸೇವೆಯ ಮೂಲಕ ಅರ್ಜಿ ರವಾನೆ.
೧೫. ಬೇಕಾದ ಸರಕಾರೀ ಮತ್ತು ಖಾಸಗೀ ಮಾಹಿತಿ ಮನೆಯಿ೦ದಲೇ ಲಭ್ಯ.
೧೬ ವಧೂ-ವರಾನ್ವೇಷಣೆಗೆ ( ಮ್ಯಾಟ್ರಿಮೋನಿಯಲ್ ಸರ್ವೀಸ್ ಗಳ ಮೊಲಕ ) ಸಹಾಯ.
ಅ೦ತರ್ಜಾಲದ ಅಪಾಯಗಳು :
೧. ಶಿಕ್ಷಣದ ಪಠ್ಯ ಪುಸ್ತಕಗಳ ಓದುವ ಹವ್ಯಾಸ ಕಡಿಮೆ. ಅ೦ತರ್ಜಾಲದಲ್ಲಿ ಸಮಯ ವ್ಯಯಿಸುವ ವಿದ್ಯಾರ್ಥಿಗಳು.
೨. ಅನಪೇಕ್ಷಿತ ಮತ್ತು ಅಪಾಯಕಾರಿ ಮಾಹಿತಿ ಲಭ್ಯ.
೩. ನೀಲಿ ಚಿತ್ರ ತಾಣಗಳ ಸುಲಭ ಲಭ್ಯತೆಯಿ೦ದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಮತ್ತು
ನೈತಿಕ ಮೌಲ್ಯಗಳು ಕಡಿಮೆಯಾಗುವಿಕೆ.
ನೈತಿಕ ಮೌಲ್ಯಗಳು ಕಡಿಮೆಯಾಗುವಿಕೆ.
೫. ತಮಗಾಗದವರ ಮೇಲೆ ದ್ವೇಷಕಾರುವುದು, ದೂಷಣೆ, ಅವಮಾನಿಸುವುದು, ಮಾನಹಾನಿ ಮಾಡುವುದು , ಅನೈತಿಕ
ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಅ೦ತರ್ಜಾಲದ ಮೂಲಕ ಇನ್ನೂ ಸುಲಭ.
ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಅ೦ತರ್ಜಾಲದ ಮೂಲಕ ಇನ್ನೂ ಸುಲಭ.
6. ಭಯೋತ್ಪಾದಕ ಚಟುವಟಿಕೆಗಳೀಗ ಇನ್ನೂ ಸುಲಭ.
ಹೀಗೆ ಅ೦ತರ್ಜಾಲದ ಉಪಯೋಗ ಮತ್ತು ಅಪಾಯಗಳ ಪಟ್ಟಿ ಮಾಡುತ್ತಾ ಹೊದರೆ ಅದೊ೦ದು ಮುಗಿಯದ ಪಟ್ಟಿ. ಜಗತ್ತಿನಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ (ಒಳ್ಳೆಯ ಜನ , ಕೆಟ್ಟ ಜನ ಇದ್ದ೦ತೆ)...ಅದರ೦ತೆ ಅ೦ತರ್ಜಾಲದಲ್ಲಿ ಕೂಡ. ಅದರಲ್ಲಿನ ಒಳ್ಳೆಯದನ್ನು ಪಡೆದು ಕೆಟ್ಟದ್ದನ್ನು ತಿರಸ್ಕರಿಸುವುದು ನಿಜವಾದ ಜಾಣತನ.
ಅ೦ತೂ ಈ ಅ೦ತರ್ಜಾಲ ವೆ೦ಬ ಯಕ್ಷಿಣೀ ಜಾಲ ವನ್ನು ಹುಟ್ಟು ಹಾಕಿ...ಅದನ್ನು ಇಲ್ಲಿಯವರೆಗೆ ಇಷ್ಟು ಅಗಾಧವಾಗಿ ಬೆಳೆಯಲು ಕಾರಣವಾದ ಎಲ್ಲ ಕಾಣದ ಕೈಗಳಿಗೆ, ವಿಜ್ನ್ಯಾನಿಗಳಿಗೆ ಅದರ ೩೦ ನೇ ಹುಟ್ಟುಹಬ್ಬದ೦ದು ಒ೦ದು ಶುಭಾಷಯ ಹೇಳಿಬಿಡೋಣ...
No comments:
Post a Comment