Sunday, January 20, 2013

ಾ೦ಗ್ರೆಸ್   ಪಕ್ಕ್ಕೀಗ   " ಹಿ೦ "    ೋತ್ಪಾದು....!!!
" ಕೇಸರೀ ಭಯೋತ್ಪಾದನೆ " ...........ಏನಿ......?

 ಈಗ  " ರಾಹುಲ್ ಗಾ೦ಧಿ " ನಮ್ಮ ದೇಶದ ಭಾವೀ ಪ್ರಧಾನಿ...!!



ನಮ್ಮ  ರಾಜಕಾರಣಿಗಳು ಅದರಲ್ಲೂ ನಮ್ಮ ದೇಶವನ್ನಾಳುತ್ತಿರುವ  ಕಾ೦ಗ್ರೆಸ ನ ರಾಜಕಾರಣಿಗಳು ದೇಶದಲ್ಲಿ ನಡೆಯುತ್ತಿರುವ ಭಯೋತ್ಪದನೆಯ ಕ್ರತ್ಯಗಳ ಬಗ್ಗೆ ಮತ್ತು ಭಯೋತ್ಪಾದಕರ ಬಗ್ಗೆ ಮಾತನಾಡಿದ್ದನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಆದರೆ ಯಾವೊಬ್ಬ ಕಾ೦ಗ್ರೆಸ್ ನಾಯಕನೂ ಮುಸ್ಲೀ೦ ಅಥವಾ ಇಸ್ಲಾ೦ ಭಯೋತ್ಪಾದನೆ ಎ೦ಬ ಪದ ಪ್ರಯೋಗಿಸಿದ್ದನ್ನು ಕೇಳಿದ್ದೀರಾ...?   ಸಾಧ್ಯವೇ ಇಲ್ಲ.

ಇದೇ ಕಾ೦ಗ್ರೆಸ್  ಪಕ್ಷದ  ವಕ್ತಾರನೊಬ್ಬ ಈಗ ಹೊಸ ಪದವೊದನ್ನು ಹುಟ್ಟು ಹಾಕಿದ್ದಾನೆ. ಅದೇ " ಕೇಸರೀ ಭಯೋತ್ಪಾದನೆ " ಅ೦ದರೆ  " ಹಿ೦ದೂ ಭಯೋತ್ಪಾದನೆ " . ಆಶ್ಚರ್ಯವಾಯಿತೇ...ವಿವರವನ್ನು ಓದಿ.

ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂ ಉಗ್ರವಾದಿಗಳ ತರಬೇತಿ ಕೇಂದ್ರಗಳಾಗಿದ್ದು, ವ್ಯವಸ್ಥಿತವಾಗಿ 'ಕೇಸರಿ ಭಯೋತ್ಪಾದನೆ' ಯನ್ನು ಹರಡಲಾಗುತ್ತಿದೆ.ಬಿಜೆಪಿ ಮತ್ತು ಆರೆಸ್ಸೆಸ್ ತರಬೇತಿ ಕೇಂದ್ರಗಳಿಂದ  ಉಗ್ರವಾದಿಗಳು ಹೊರ ಬಂದಿರುವ ವರದಿಗಳು ತನಿಖೆಯಿಂದ ದೃಢಪಟ್ಟಿದೆ. ಸಂಜ್ಯೋತ ಎಕ್ಸ್ ಪ್ರೆಸ್, ಮೆಕ್ಕಾ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದು, ಮಲೇಗಾಂವ್ ಸ್ಫೋಟದ ಹಿಂದೆ " ಕೇಸರಿ ಉಗ್ರಗಾಮಿ " ಗಳ ಕೈವಾಡವಿದೆ "

ಹೀಗೆ ಹೇಳಿದವರು...ಬೇರಾರೂ ಅಲ್ಲ...ನಮ್ಮ ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ. ಜೈಪುರದಲ್ಲಿ ನಡೆದಿರುವ ಎಐಸಿಸಿ ಕಾರ್ಯಕಾರಿ ಸಭೆ ಚಿಂತನ್ ಶಿಬಿರದಲ್ಲಿ ಮಾತನಾಡುತ್ತಾ ಗೃಹ ಸಚಿವ ಶಿಂಧೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಸ್ಲಾ೦ ಉಗ್ರರು ಭಾರತದೊಳಗೆ ನುಸುಳುತ್ತಿದ್ದರೆ ಅವರನ್ನು ಗುಲಾಬಿ ನೀಡಿ ಸ್ವಾಗತಿಸುವ, ಅಲ್ಪ ಸ೦ಖ್ಯಾತರ ಒಲೈಕೆಗಾಗಿ ಭಯೋತ್ಪಾದಕರ ದಮನಕ್ಕೆ ಮತ್ತು ಅವರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ   ಹಿ೦ದೆ ಮು೦ದೆ ನೋಡುವ  ಆಡಳಿತ ಪಕ್ಷ ಈಗ ಬಹುಸ೦ಖ್ಯಾತ ಮತ್ತು ಬಹುತೇಕ ಶಾ೦ತಿಪ್ರಿಯರಾದ ಹಿ೦ದುಗಳ ಸ೦ಘಟನೆಯನ್ನೇ ಭಯೋತ್ಪಾದಕ ಸ೦ಘಟನೆಗಳೆ೦ದು ಸಾರಲು ಹೊರಟಿದೆ.

ಬಿ.ಜೆ.ಪಿ. ಪಕ್ಷದ ಗುಣಾವಗುಣಗಳೇನೇ ಇರಲಿ...ಅದನ್ನು ಭಯೋತ್ಪಾದಕರ ಗು೦ಪಿಗೆ ಹೋಲಿಸುವುದು ಅವಿವೇಕದ ಪರಮಾವಧಿ. ಇನ್ನು  ಹಿ೦ದೂ ಗಳನ್ನೂ ಒ೦ದು ಗೂಡಿಸಿ ಅವರಲ್ಲಿ ಹಿ೦ದೂ ಧರ್ಮ ಪ್ರಚಾರಮಾಡಲು ಸ್ಥಾಪಿತವಾದ " ರಾಷ್ತ್ರೀಯ ಸ್ವಯ೦ ಸೇವಕ ಸ೦ಘ " ದ೦ಥ ದೇಶ ಪ್ರೇಮಿ ಹಿ೦ದೂ  ಸ೦ಘಟನೆಯೊ೦ದನ್ನು ಭಯೋತ್ಪಾದಕರ ಗು೦ಪಿಗೆ ಹೋಲಿಸುವುದು ಎಷ್ಟು ಸರಿ..?  ಅದೂ ಈ ದೇಶದ ಗ್ರಹ ಮ೦ತ್ರಿ.

" ಶಿ೦ಧೆ " ಯವರ ಈ ಮುತ್ತಿನ೦ತಹ ನುಡಿಗಳನ್ನು ಕೇಳಿ ಪಾಕಿಸ್ತಾನದ ವಿವಿಧ ಭಯೋತ್ಪಾದಕ ಸ೦ಘಟನೆಗಳಿಗೆ ಭಯ೦ಕರ ಖುಷಿಯಾಗಿದೆ. " ಲಶ್ಕರ್- ಏ- ತೋಯ್ಬಾ" ಸ೦ಘಟನೆಯ ಮುಖ್ಯಸ್ಥ ಹಫೀಸ್ ಸಯ್ಯದ ಹೇಳಿಕೆಯೊ೦ದನ್ನು ಕೊಟ್ಟು...ಕೊನೆಗೂ ಭಾರತದ ಸಚಿವರೊಬ್ಬರು ಸತ್ಯವನ್ನು ಹೇಳುವ ಧೈರ್ಯವನ್ನು ಮಾಡಿದ್ದಾರೆ..ಭಾರತದ ನಿಜ ಬಣ್ಣ ಅ೦ತರಾಷ್ತ್ರೀಯ ಮಟ್ಟದಲ್ಲಿ ಬಯಲಾಗಿದೆ. ವಿಶ್ವ ಭದ್ರತಾ ಸ೦ಸ್ಥೆ  ಈ ಕೂಡಲೇ ಭಾರತ ದೇಶವನ್ನು " ಭಯೋತ್ಪಾದಕ ದೇಶ " ವೆ೦ದು ಸಾರಬೇಕು ಎ೦ದು ಅರಲಿದ್ದಾನೆ. ಇನ್ನೊ೦ದು ಭಯೋತ್ಪದಕ ಸ೦ಘಟನೆ " ಜಮಾತೆ -ಉದ್-ದಾವಾ " ದ ಮುಖ್ಯಸ್ಥ ಕೂಡ ಶಿ೦ಧೆ ಹೇಳಿಕೆಯನ್ನು ಸ್ವಾಗತಿಸಿದ್ದಾನೆ. ಶಿ೦ಧೆಯವರ ಈ ಭಾಷಣವನ್ನು ಪಾಕಿಸ್ತಾನದ ಎಲ್ಲ ಚಾನಲ್ ಗಳೂ ಮೊನ್ನೆ ೨೪ x ೭ ಬಿತ್ತರಿಸಿವೆ.  ಅಲ್ಲಿಗೆ ಭಾರತ ದೇಶದ ಮಾನ ಅ೦ತರಾಷ್ತ್ರೀಯ ಮಟ್ಟದಲ್ಲಿ ಇನ್ನಿಲ್ಲದ೦ತೆ ಹರಾಜಾಗಿದೆ. 

ಕೇ೦ದ್ರ  ಗ್ರಹಮ೦ತ್ರಿಯ  ಈ  ವಿವಾದಾತ್ಮಕ  ಹೇಳಿಕೆಯ ಹಿ೦ದಿರುವ ಕಾಣದ  ಕೈ ಗಳಾವವು...?

ನಿಸ್ಸ೦ಶಯವಾಗಿ ಇದು ಕಾ೦ಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾ೦ಧಿ ಮತ್ತು ಆಕೆಯ ಪುತ್ರ ಇದೀಗ ತಾನೇ " ದೇಶದ  ಮು೦ದಿನ ಪ್ರಧಾನಿ " ಎ೦ದು ಬಿ೦ಬಿತ ವಾಗುತ್ತಿರುವ ರಾಹುಲ್ ಗಾ೦ಧಿ ಯವರನ್ನು ಓಲೈಸುವ ತ೦ತ್ರವಲ್ಲದೇ ಮತ್ತೇನೂ ಅಲ್ಲ ಎ೦ಬುದು ಜಗಜ್ಜಾಹೀರು. ಹಿ೦ದೆ ಇದೇ ಸೋನಿಯಾ ಮತ್ತು ರಾಹುಲ್...ಗುಜರಾತಿನ ಮುಖ್ಯಮ೦ತ್ರಿ ನರೇ೦ದ್ರ ಮೋದಿ ಯನ್ನು ಭಯೋತ್ಪಾದಕನೆ೦ದು ಕರೆದಿದ್ದರು. ಅದಕ್ಕೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದಾಗಿದೆ. ಆದರೆ ಇದರಿ೦ದ ಕಾ೦ಗ್ರೆಸ ಪಕ್ಷ ಪಾಠ ಕಲಿತಿಲ್ಲ ವೆ೦ಬುದು ಮತ್ತೊಮ್ಮೆ ಸಾಬೀತಾದ೦ತಾಯಿತು.

ಇತ್ತ  ಕಾ೦ಗ್ರೆಸ ಪಕ್ಷ " ರಾಹುಲ್ ಗಾ೦ಧಿ " ಯ ಕೈಗೆ ಪಕ್ಷದ ಚುಕ್ಕಾಣೆ ಕೊಟ್ಟು ಆತನನ್ನು " ದೇಶದ ಮು೦ದಿನ ಪ್ರಧಾನಿ " ಎ೦ದು ಬಿ೦ಬಿಸಿ ಮು೦ದಿನ ಚುನಾವಣೆಯಲ್ಲಿ ರಾಹುಲ್ ನೇತ್ರತ್ವದಲ್ಲೇ ಚುನಾವಣೆ ಎದುರಿಸಲು ನಿರ್ಧರಿಸಿದೆ. ಸೋನಿಯಾ ಈ ನಿರ್ಧಾರಕ್ಕೆ  ಕಾ೦ಗ್ರೆಸ ಪಕ್ಷದ ಅತಿರಥ ಮಹಾರಥರೆಲ್ಲ ಕುರಿಗಳ೦ತೆ ತಲೆ ಅಲ್ಲಾಡಿಸಿದ್ದಾರೆ. ಆದರೆ ಸೋನಿಯಾ ಇಲ್ಲಿ ಒ೦ದು ಮಾತನ್ನು ಮರೆತಿದ್ದಾರೆ. ಇದುವರೆಗೆ ರಾಹುಲ ಚುನಾವಣೇ ಪ್ರಚಾರಕ್ಕಾಗಿ ಹೋಗಿ ವಿರೋಧ ಪಕ್ಷಗಳನ್ನು ಬೈದಲ್ಲೆಲ್ಲಾ  ಕಾ೦ಗ್ರೆಸ್ ಪಕ್ಷ ದಯನೀಯವಾಗಿ ಸೋತಿದೆ.

ಇನ್ನು ಭಾರತದ ಭಾವೀ ಪ್ರಧಾನಿ ಎ೦ದೇ ಈಗ ಬಿ೦ಬಿತವಾಗುತ್ತಿರುವ ರಾಹುಲ್ ಗಾ೦ಧಿಯ ಬಗ್ಗೆ ನಿಮಗೆಷ್ಟು ಗೊತ್ತು..?..ಕಳಗಿನ ಕೆಲ ವಿವರಗಳನ್ನು ನೋಡಿ...

ರಾಹುಲ್ ಗಾ೦ಧಿ ಇತಿಹಾಸ :  ಸ೦ಗ್ರಹ  : The curious case of Rahul Gandhi  by Nitin Gupta :

ಪಾಸ್ ಪೋರ್ಟ ನಲ್ಲಿರುವ ನಿಜ ನಾಮಧೇಯ : ರಾಹುಲ್ ವಿನ್ಸಿ (Raul Vinci in english). . .... ರಾಹುಲ್  ಪರದೇಶದಲ್ಲಿ ಓದುತ್ತಿದ್ದಾಗ ಆತನ ಅಕ್ಯಾಡ್ಯಾಮಿಕ್ ರಿಕಾರ್ಡಗಳಲ್ಲಿ ಮತ್ತು ಇತರೆಡೆ ಬಳಸಿದ್ದು ಇದೇ ಅಡ್ಡ ಹೆಸರನ್ನು.  ಆದರೆ ರಾಹುಲ್ ಭಾರತಕ್ಕೆ ಬ೦ದ ನ೦ತರ ಆತನ  ಹಿ೦ದೆ ತನ್ನ   ತ೦ದೆಯ ವ೦ಶದ  ಹೆಸರು  (ಗಾ೦ಧಿ)  ಜೋಡಣೆಯಾಯಿತು...ಭಾರತೀಯರ ಮನ ಗೆಲ್ಲಲು....

ಈ ರಾಹುಲ್ ವಿನ್ಸಿ ಅಲ್ಲಲ್ಲ ಗಾ೦ಧಿಯನ್ನು ೨೦೦೧ ರ೦ದು ಅಮೇರಿಕದ ಬೋಸ್ಟನ್ ವಿಮಾನ ನಿಲ್ದಾಣದಲ್ಲೊಮ್ಮೆ ಅರೆಸ್ಟ ಮಾಡಲಾಯಿತು. ಅರೆಸ್ಟ ಮಾಡಿದವರು F.B.I. ಅದಕ್ಕೆ ಕಾರಣ ಇವನ ಹತ್ತಿರವಿದ್ದ $ 1,60,000 ಡಾಲರ್ ಹಣ. ಆಗ ರಾಹುಲ  ಜೊತೆಗಿದ್ದವಳು ಆತನ ಗರ್ಲ ಫ್ರೆ೦ಡ ವೆರೋನಿಕ್ ಕಾರ್ಟೆಲಿ ( Veronique Cartelli ) ಎ೦ಬಾಕೆ, ಈಕೆ ಯಾರು ಗೊತ್ತಾ...?  ಇಟಲಿಯ ಡ್ರಗ್ ಮಾಫಿಯಾ ದೊರೆಯೊಬ್ಬಳ ಮಗಳು...ಈಕೆಯ ಜೊತೆ ರಾಹುಲ್ ಗೆ ೩ ವರ್ಷಗಳಿ೦ದ ಸ೦ಭ೦ಧ ಇತ್ತು ಎ೦ಬುದು ರುಜುವಾತಾಗಿದೆ . ಮು೦ದೆ ಈ ವಿಷಯವನ್ನು ಮುಚ್ಚಿ ಹಾಕಲಾಯಿತು.

ಅದೆಲ್ಲ ಹೋಗಲಿ... ಆ ಹಣ ಎಲ್ಲಿ೦ದ ಬ೦ತು ಎ೦ಬ ಪ್ರಶ್ನೆಗೆ ರಾಹುಲ್ ಬಳಿ ಸಮರ್ಪಕ ಉತ್ತರವಿರಲಿಲ್ಲ. ಸುಮಾರು ೯ ಗ೦ಟೆ ಈತನನ್ನು ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಮು೦ದೆ ಅ೦ದು ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿವರ ಮಧ್ಯಸ್ಥಿಕೆಯಲ್ಲಿ ಈತನ ಬಿಡುಗಡೆಯಾಯಿತು. ಆದರೆ ಈ ವಿಚಾರ ಯಾವ ಮೀಡಿಯಾದಲ್ಲೂ ಪ್ರಸಾರವಾಗದ೦ತೆ ನೋಡಿಕೊಳ್ಳಲಾಯಿತು. ಇದನ್ನೆಲ್ಲ ಹೊರತೆಗೆದವರು ಡಾ. ಸುಬ್ರಮಣ್ಯಸ್ವಾಮಿ.

ಇ೦ಗ್ಲೆ೦ಡ ನ ಹಾರ್ವರ್ಡ ಉನಿವರ್ಸಿಟಿಯಲ್ಲಿ ರಾಹುಲ್ ವಿಧ್ಯಾಭ್ಯಾಸ ..ಅದೂ ಡೊನೇಶನ್ ಸೀಟಿನಲ್ಲಿ . ಈ ಡೊನೇಶನ್ ( ೧೧ ಮಿಲಿಯನ್ ಡಾಲರ್ ) ಕೊಟ್ಟವರು ಹಿ೦ದುಜಾ ಕ೦ಪನಿಯವರು. ಆಗ ರಾಜೀವ್ ಗಾ೦ಧಿ ಪ್ರಧಾನಿಯಾಗಿದ್ದರು. ನ೦ತರ ಮೊರೇ ತಿ೦ಗಳಲ್ಲಿ ಆ ಯುನಿವರ್ಸಿಟಿಯಿ೦ದ ರಾಹುಲ್ ನನ್ನು ಹೊರ ದಬ್ಬಲಾಯಿತು. ಆದರೂ ರಾಹುಲ್ ನ ಬಯೋಡಾಟಾ ದಲ್ಲಿ ಆತ  " ಮಾಸ್ಟರ್ಸ ಇನ್ ಎಕಾನಾಮಿಕ್ಸ "...ಅದೂ " ಹಾರ್ವರ್ಡ ಯುನಿವರ್ಸಿಟಿ "  ಯಿ೦ದ....ದೊಡ್ಡವರು ಏನು ಮಾಡಿದರೂ ನಡೆಯುತ್ತದೆ..ಎ೦ದಿರಾ...?  ಅಲ್ಲಿಗೆ ರಾಹುಲ್ ನ ನಿಜವಾದ ವಿದ್ಯಭ್ಯಾಸ ಎಲ್ಲಿಯವರೆಗೆ ಎ೦ಬುದಿನ್ನೂ ನಿಗೂಢ. ಆದರೂ ರಾಹುಲ್ ಹೇಳುತ್ತಾರೆ..ನಮ್ಮ ದೇಶದ ರಾಜಕೀಯಕ್ಕೆ ವಿದ್ಯಾವ೦ತ ಯುವಕರು ಬರಬೇಕು ಎ೦ದು...

ರಾಹುಲ್ ಗೆ  ಹಿ೦ದೂ ಗಳು ಭಯೋತ್ಪಾದಕರು...ಆದರೆ ಅಕ್ಬರುದ್ದೀನ್ ಓವೈಸಿ..?

ಇನ್ನು ಸೋನಿಯಾಜಿ ಇತಿಹಾಸ ನೋಡೋಣ :

ಸೋನಿಯಾಜಿ ಬಯೋಡಾಟಾ ಹೇಳುತ್ತದೆ...ಆಕೆ ಇ೦ಗ್ಲೀಷ ಮೇಜರ್... " ಕೆ೦ಬ್ರಿಡ್ಜ  ಯುನಿವರ್ಸಿಟಿ"  ಯಿ೦ದ ಎ೦ದು. ಆದರೆ ಕೆ೦ಬ್ರಿಜ್ ಯುನಿವರ್ಸಿಟಿ ಯ ರೆಕಾರ್ಡ ನಲ್ಲಿ ಸೋನಿಯಾ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ. ಡಾ. ಸುಬ್ರಮ್ಮಣ್ಯ ಸ್ವಾಮಿ ಈ ವಿಷಯ ಕೋರ್ಟ ಗೆ ಫೈಲ್ ಮಾಡಿದಾಗ ಸೋನಿಯಾ ತನ್ನ ಬಯೋಡಾಟಾ ದಿ೦ದ ಕೆ೦ಬ್ರಿಡ್ಜ  ಯುನಿವರ್ಸಿಟಿ ಹೆಸರು ತೆಗೆದು ಹಾಕಿದ್ದು. ಒ೦ದು ಮೂಲದ ಪ್ರಕಾರ ಸೋನಿಯಾಜಿ ಹೈಸ್ಕೂಲ್ ಸಹ ಪಾಸ್ ಮಾಡಿಲ್ಲ (ಭಾರತದ ಪ್ರಧಾನಿಯಾಗಲು ಇದೇನೂ ಅಡ್ದಿಯಲ್ಲ ಬಿಡಿ ).  ಸೋನಿಯಾಜಿ ಇತಿಹಾಸ ಅರಿಯಲು..ಡಾ. ಸುಬ್ರಮಣ್ಯ ಸ್ವಾಮಿ ಯವರ ಈ ಪತ್ರವನ್ನೊಮ್ಮೆ  ಕೂಲ೦ಕಷ ವಾಗಿ...ಓದಿ . ಸೋನಿಯಾಜಿಗೆ ಪಾಕಿಸ್ತಾನ ಉಗ್ರರ ಜೊತೆಗಿರುವ ನ೦ಟು ಬಹಿರ೦ಗವಾಗುತ್ತದೆ.



 

 ಇದೆಲ್ಲಾ ಸುಳ್ಳು ಎ೦ದಿರಾ...?  ಇದು ಸುಳ್ಳಾಗಿದ್ದರೆ ಏನಾಗುತ್ತಿತ್ತು ನೋಡೋಣ....

ಇದನ್ನು ಡಾ. ಸುಬ್ರಮಣ್ಣ್ಯಸ್ವಾಮಿ ಬರೆದದ್ದು ಆಗಿನ ಭಾರತದ ರಾಷ್ಟ್ರ ಪತಿಗಳಾದ ಡಾ. ಅಬ್ದುಲ್ ಕಲಾ೦ ಅವರಿಗೆ. ಐದನ್ನು ಬರೆದಾಗ ಕಾ೦ಗೆಸ್ ಪಕ್ಷ ದೇಶದ ಗದ್ದುಗೆ ಏರುವುದರಲ್ಲಿತ್ತು. ಸೋನಿಯಾಜಿ ಭಾರತದ ಮು೦ದಿನ ಪ್ರಧಾನಮ೦ತ್ರಿ  ಎ೦ದೇ ಬಿ೦ಬಿತವಾಗಿದ್ದರು. ಈ ಪತ್ರದಲ್ಲಿನ ವಿಷಯಗಳು ಸುಳ್ಳಾಗಿದ್ದರೆ ಸೋನಿಯಾಜಿ ಡಾ.ಸುಬ್ರಮ್ಮಣ್ಯರ ಮೇಲೆ ಮಾನಹಾನಿ ಕೇಸು ಹಾಕಿ ಅವರನ್ನು ಜೈಲಿಗೆ ದಬ್ಬಿ ಜೀವನ ಪರ್ಯ೦ತ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡಬಹುದಿತ್ತು. ಆದರೆ ಹಾಗೇನೂ ಅಗಲಿಲ್ಲ. " ಕಳ್ಳನ ಮನಸ್ಸು ಹುಳ್ಳಗೆ " ಎನ್ನುವ ಹಾಗೆ ಸೋನಿಯಾ ಮೌನವಾದರು.

೨೦೦೪ ರಲ್ಲಿ ಬಿಜೇಪಿ ಸರಕಾರ ಪತನವಾದಾಗ  ಸೊನಿಯಾಜಿ ಪ್ರಧಾನಿ ಪದವಿಯ ಪಟ್ಟಾಭಿಷೇಕದ ಎಲ್ಲ ತಯಾರಿ ನಡೆದಿದ್ದವು. ಆಗ ಮತ್ತೆ ಅಡ್ಡ ಬ೦ದವರು ಡಾ. ಸುಬ್ರಮಣ್ಯ ಸ್ವಾಮಿ. ಅವರು ರಾಷ್ಟ್ರಪತಿಗಳ  ಗಮನಕ್ಕೆ ತ೦ದ ವಿಷಯ..." ಭಾರತದ ನಾಗರಿಕ ರಲ್ಲದವರು / ಭಾರತದಲ್ಲಿ ಹುಟ್ಟಿ ಬೆಳೆದಿಲ್ಲದವರು ಭಾರತದ ಪ್ರಧಾನಿಯಾಗರು ಯೋಗ್ಯರಲ್ಲ "  ಎ೦ಬ ಸ೦ವಿಧಾನದ ವಿಧೇಯಕ ವಿದೆ.  ಆಗ ಸೋನಿಯಾ ಇನ್ನೂ ಇಟ್ಯಾಲಿಯನ್ ನಾಗರೀಕರಾಗಿದ್ದರು ( ಮು೦ದೆ ಅವರಿಗೆ ಎಲ್ಲ ನಿಯಮ ಗಳನ್ನು ಗಾಳಿಗೆ ತೂರಿ ದಾಖಲೇ ವೇಗದಲ್ಲಿ ಭಾರತೀಯ ನಾಗರೀಕತ್ವ ದೊರಕಿಸಲಾಯಿತು ) . ಆಗ ರಾಷ್ಟ್ರಪತಿಗಳು ಈ ವಿಷಯವನ್ನು ಸೋನಿಯಾ ಗಮನಕ್ಕೆ ತ೦ದಾಗ...ನಿರಾಶಳಾದ ಸೋನಿಯಾ ದೇಶದ ನಾಗರೀಕರ ಮನಗೆಲ್ಲಲು ಆಡಿದ್ದು " ಪದತ್ಯಾಗ " ದ ನಾಟಕ...ಪ್ರಧಾನಿ ಹುದ್ದೆಯಲ್ಲಿ ಕೂಡಿಸಿದ್ದು..ಕೈ ಗೊ೦ಬೆಯ೦ತಹ " ಮನ್ ಮೋಹನ್ ಸಿ೦ಗ್ " ಎ೦ಬ ವಿಧೇಯ ಕಾ೦ಗ್ರೆಸ್ಸಿಗನನ್ನು.


ಇ೦ಥ ಸೋನಿಯಾ ಮತ್ತು ರಾಹುಲ್  ನಾಯಕತ್ವದ ಕಾ೦ಗ್ರೆಸ್  ಪಕ್ಷವನ್ನು ಅಧಿಕಾರಕ್ಕೆ ತರುವ  ಮುನ್ನ ಆ ಪಕ್ಷ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಲಿ...

೧. " ಹಸನ್ ಅಲಿ " ಎ೦ಬ ಉದ್ಯಮಿಯ 74000 ಕೋಟಿ ರೂಗಳ ಟ್ಯಾಕ್ಸ ಹಗರಣ ಏನಾಯಿತು...ಯಾಕೆ ಮುಚ್ಚಿ ಹೋಯಿತು. ?

೨. 2G  ಹಗರಣದಲ್ಲಿ ಸೋನಿಯಾಜಿ ಪಡೆದ ೬೦ % ಕಮೀಷನ್ ಯಾವ ಬ್ಯಾ೦ಕಿನಲ್ಲಿದೆ...?

೩ .ರಾಜೀವ್ ಗಾ೦ಧಿ ಸಿಕ್ರೆಟ್ ಕೋಡ್  ಹೆಸರಿನಲ್ಲಿ ಸ್ವಿಸ್ ಬ್ಯಾ೦ಕ ನಲ್ಲಿಟ್ಟ 2.5 billion dollar ಹಣ ಯಾರದ್ದು...ಎಲ್ಲಿ೦ದ ಬ೦ತು..?      

೪. ಕಾಮನ ವೆಲ್ತ ಗೇಮ್ ಗಳ ಸಮಯದಲ್ಲಿ ಅಪರಾ ತಪಾರಾ ಆಗಿದ್ದು ಸಾವಿರಾರು ಕೋಟಿಗಳು. ಅದರಲ್ಲಿ ಕೇವಲ ನೂರಾರು ಕೋಟಿ ನು೦ಗಿದ್ದ "ಸುರೇಶ  ಕಲ್ಮಡಿ " ಯನ್ನು ಅಪರಾಧಿಯನ್ನಾಗಿ ಬಿ೦ಬಿಸಿ (making him scape goat ) ಜೈಲಿಗೆ ದಬ್ಬಲಾಯಿತು. ಉಳಿದ ಹಣ ಹೋಗಿದ್ದು ಯಾರ ಜೇಬಿಗೆ...?

೫. ಭಾರತದ ಸ್ವಿಸ್ ಬ್ಯಾ೦ಕ ಖಾತೆದಾರರ ಹೆಸರು ಬಹಿರ೦ಗ ಪಡಿಸಲು ಅ೦ದಿನ ವಿತ್ತಮ೦ತ್ರಿ ಪ್ರಣವ ಮುಖರ್ಜಿ ಯಾಕೆ ಹಿ೦ದೇಟು ಹಾಕಿದರು...?

೬. ಲಾಭದಲ್ಲಿದ್ದ ಇ೦ಡಿಯನ್ ಏರ್ ಲೈನ್ಸ ಈಗ ನಷ್ಟದಲ್ಲಿರುವುದು ಯಾರಿ೦ದ...ರಾಹುಲ್ ನ ಮಿತ್ರ ಪ್ರಫುಲ್ ಪಟೇಲ್ ಎ೦ಬ ಯುವ ನಾಯಕನಿ೦ದ.

ಇ೦ಥ  ಸುಳ್ಳುಗಾರರ  ಕೈಯಲ್ಲಿ ನಮ್ಮ ದೇಶದ ಚುಕ್ಕಾಣಿ ಕೊಡಬೇಕಾ...? ನಮ್ಮ ದೇಶ ಸುರಕ್ಷಿತವಾ...? ಹಿ೦ದುತ್ವ ಸುರಕ್ಷಿತವಾ? ಕೊಚ ಯೋಚಿಸಿ.


Disclaimer : ಇದು ಯಾವುದೇ ರಾಜಕೀಯ ಪಕ್ಷದ ಅವಹೇಳನ ಅಥವಾ ಪ್ರಚಾರಕ್ಕೆ ಬರೆದ ಲೇಖನವಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಬೆ೦ಬಲಿಗನೂ ಅಲ್ಲ. ನಡೆದ, ನಡೆಯುತ್ತಿರುವ,  ಕ೦ಡು, ಕೇಳಿದ  ಸ೦ಗತಿಗಳ ಬಗ್ಗೆ ಬೆಳಕು ಚೆಲ್ಲುವ ನನ್ನ ಪ್ರಯತ್ನ ಅಷ್ಟೇ...

No comments:

Post a Comment