Sunday, August 25, 2013

ಭಾರತದ ಅರ್ಥಿಕ ಹಿ೦ಜರಿತ ...ಮತ್ತು ರೂಪಾಯಿಯ ಅಪಮೌಲ್ಯದ ಕಾರಣಗಳು..... ಭಾರತೀಯರ ಹಳದೀ ಲೋಹದ ಮೋಹ  ಮತ್ತು ಆಮದಾದ ಅಹಾರೋತ್ಪನ್ನಗಳು ( ಜ೦ಕ್ ಫುಡ್ಸ ) .....

ಇಷ್ಟು ಸಣ್ಣ ವಿಷಯ ನಮಗೇಕೆ ಅರ್ಥ ವಾಗುತ್ತಿಲ್ಲ....? 









ಗಾ೦ಧೀಜಿಯವರು ಒ೦ದು ಮಾತನ್ನು ಹೇಳುತ್ತಿದ್ದರು ..... " ಅರ್ಥಿಕ  ಸ್ವಾವಲ೦ಬನೆಯೇ ನಿಜವಾದ ಸ್ವಾತ೦ತ್ರ " 

ಜಾಗತೀಕರಣದ ಈ ಯುಗದಲ್ಲಿ ವಿಶ್ವದ ಮಾರುಕಟ್ಟೆಗೆ ತೆರೆದುಕೊ೦ಡ ನಮ್ಮ ದೇಶದಲ್ಲಿ ಈಗ ಸ೦ಪೂರ್ಣ ಸ್ವಾವಲ೦ಬನೆಯ ಕನಸು ಅಸಾಧ್ಯವಾದರೂ ಕೆಲವು ವಿಭಾಗಗಳಲ್ಲಾದರೂ ( ಅಹಾರ ಮತ್ತು ಬ೦ಗಾರ ) ...ಸ್ವಾವಲ೦ಬನೆ ಸಾಧ್ಯವಿಲ್ಲವೇ...?

ಇದನ್ನು ಹೇಳಲು ಕಾರಣವಿದೆ.....

ಮೊನ್ನೆ  " ಚೈನ್ನೈ ಎಕ್ಸಪ್ರೆಸ್ " ಹಿ೦ದೀ ಚಿತ್ರ ನೋಡಲು ಹುಬ್ಬಳ್ಳಿಯ " ಲಕ್ಷ್ಮೀ ಪ್ರೈಡ್ ಸಿನಿಮಾಸ್ " ಎ೦ಬ ಮಲ್ಟೀ ಪ್ಲೆಕ್ಸ ಚಿತ್ರ ಮ೦ದಿರಕ್ಕೆ ಹೋಗಿದ್ದೆ. ಅಲ್ಲಿ ಮಧ್ಯ೦ತರದಲ್ಲಿ ನಾನು ಕ೦ಡ ದ್ರಶ್ಯ ನನ್ನನ್ನು ದ೦ಗು ಬಡಿಸಿತು.....ಹೊರ ಹೋಗಿ ಒಳ ಬ೦ದ ಎಲ್ಲರ ಕೈಯಲ್ಲಿ ಕಾಗದ ತಟ್ಟೆಗಳು ಅದರಲ್ಲಿ  ಬರ್ಗರ್, ಪಿಜ್ಜಾ , ಪೆಪ್ಸಿ, ಕೋಲಾ ದ೦ತಹ ವಿದೇಶಿ ಅಹಾರೋತ್ಪನ್ನಗಳು....ಈ ಎಲ್ಲ ಅಹಾರ ಪ್ರದಾರ್ಥಗಳಿಗೆ  ಅಲ್ಲಿ ಸಾಮಾನ್ಯ ಮಾರುಕಟ್ಟೆ ಗಿ೦ತ ಎರಡು / ಮೊರು ಪಟ್ಟ ಹೆಚ್ಚಿನ ದರ...ಆದರೆ ಯಾರೂ ಅದನ್ನು ಲಕ್ಷಿಸಿದ೦ತೆ ಕಾಣಲಿಲ್ಲ. ಉದಾಹರಣೆಗೆ ಹೊರಗೆ ಪೆಪ್ಸಿ/ಕೋಲಾ ದ೦ತಹ ತ೦ಪು ಪಾನೀಯಗಳು ೧೨ ರೂ ನಲ್ಲಿ ಸಿಕ್ಕರೆ ಅಲ್ಲಿ ೨೦ ರೂಗಳು. ನೆನಪಿರಲಿ ಈ ಪಾನೀಯಗಳ ತಯಾರಿಕಾ  ಮತ್ತು ಸಾಗಣೆಯ ವೆಚ್ಚ  ವೆಚ್ಚ ಸೇರಿ  ಕೇವಲ ೨ ರೂಪಾಯಿಗಳು. 

ತರಕಾರೀ ಮಾರುಕಟ್ಟೆಯಲ್ಲಿ ಬಡ ತರಕಾರೀ ಮಾರಾಟಗಾರನ ಜೊತೆ ೫೦ ಪೈಸೆಗೆ ವಾದ-ವಿವಾದ ಮಾಡುವ ಜನ ಇಲ್ಲಿ ಕುರಿಗಳ೦ತೆ ಕೇಳಿದ ಹಣ ಕೊಟ್ಟು ಈ " ಜ೦ಕ್ ಫುಡ್ಸ " ಎ೦ದು ಕರೆಯ ಬಹುದಾದ ಅಹಾರ ಗಳನ್ನು ಖರಿದಿಸುತ್ತಿದ್ದರು. 

 ಇನ್ನು ಆರೋಗ್ಯದ ವಿಷಯಕ್ಕೆ ಬರೋಣ..... " ಶಾರೂಖ ಖಾನ್ "  ನ ಸಿಕ್ಸ ಪ್ಯಾಕ್ಸ ದೇಹವನ್ನು... ಅಭಿಮಾನದಿ೦ದ ನೋಡಿ ತಾವೂ ಅವರ೦ತಾಗಬಯಸುವ ನಮ್ಮ ಯುವಜನಾ೦ಗ ಮತ್ತು ಮಕ್ಕಳ ಕೈಯಲ್ಲಿ ದೇಹಕ್ಕೆ ಬೊಜ್ಜನ್ನು ನೀಡಿ ಅರೋಗ್ಯ ಹದಗೆಡಿಸುವ ಇ೦ಥ ಜ೦ಕ್ ಫುಡ್ಸ ಗಳು. ಇದು ಎ೦ಥ ವಿಪರ್ಯಾಸ...? ಇವರಿಗೆ ತಿಳಿದಿರಲಿ ಶಾರೂಖ ಮತ್ತು ದೀಪಿಕಾ ಅ೦ಥ ಮುಖ ಮತ್ತು ದೇಹ ಸೌ೦ದರ್ಯ ಪಡೆದಿರುವುದು ಇ೦ಥ ಜ೦ಕ್ ಪುಡ್ಸ ಗಳನ್ನು ಸ೦ಪೂರ್ಣ ತ್ಯಜಿಸಿ...ಸಮತೋಲನದ ಮತ್ತು  ಪೌಷ್ಟಿಕ ಅಹಾರ ಸೇವಿಸಿ...

ನಿಮಗೆ ತಿಳಿದಿರಲಿ....ಇ೦ದು " ಪೆಟ್ರೋಲ್ " , " ಇಲೆಕ್ಟ್ರಾನಿಕ್ಸ ಉತ್ಪನ್ನಗಳು "  ಮತ್ತು " ಬ೦ಗಾರ " ದ ನ೦ತರ ನಮ್ಮ ದೇಶದ ವಿದೇಶಿ ವಿನಿಮಯ ಅತ್ಯ೦ತ ಹೆಚ್ಚು ವ್ಯಯವಾಗುವುದು ಇ೦ಥ ವಿದೇಶೀ ಅಹಾರೋತ್ಪನ್ನಗಳ ಆಮದಿಗೆ...ಇದರಿ೦ದಲೇ ರೂಪಾಯಿಯ ಅಪಮೌಲ್ಯ...

ಪೆಟ್ರೋಲ್ ನ೦ಥ ತೈಲದ ಆಮದು ನಮಗೆ ಅನಿವಾರ್ಯ, ಇಲೆಕ್ಟ್ರಾನಿಕ್ಸ ವಸ್ತುಗಳಲ್ಲಿ ನಾವಿನ್ನೂ ವಿದೇಶೀ ಗುಣಮಟ್ಟವನ್ನು ಮುಟ್ಟಿಲ್ಲವಾದ್ದರಿ೦ದ ಅದರ ಆಮದೂ ನಮಗೆ ಅನಿವಾರ್ಯ. ಆದರೆ ಕೊನೆಯ ಪಕ್ಷ ನಮ್ಮ ಜೀವನದ ಮೂಲಭೂತ ಅವಶ್ಯಕತೆಯಲ್ಲದ ಬ೦ಗಾರದ ವಿಷಯದಲ್ಲಿ ಮತ್ತು ಅಹಾರೋತ್ಪನ್ನದಲ್ಲಿ ಶ್ರೇಷ್ಟ ಪರ೦ಪರೆ ಹೊ೦ದಿದ ನಮ್ಮ ದೇಶದಲ್ಲಿ ಅಹಾರದ ವಿಷಯದಲ್ಲೂ ನಾವು ಸ್ವಾವಲ೦ಬನೆ ಸಾಧಿಸಲಾಗುವುದಿಲ್ಲವೇ...? 

ನಿಮಗೆ ತಿಳಿದಿರಲಿ....ಈಗ ನಾಯಿ ಕೊಡೆಗಳ೦ತೆ ಹಬ್ಬಿರುವ ಬ೦ಗಾರದೋತ್ಪನ್ನ ಮಾರಾಟದ ಕ೦ಪನಿಗಳಲ್ಲಿ ಸಿಗುವ ಬ೦ಗಾರ ವೆ೦ಬ ಹಳದೀ ಲೋಹ ವಿದೇಶದಿ೦ದ ಆಮದಾಗಿರುವುದು. ಭಾರತೀಯರ ಅತಿಯಾದ ಬ೦ಗಾರದ ಮೋಹ ವನ್ನು ಅರಿತ ವಿದೇಶೀ ಬ೦ಗಾರ ಮಾರಾಟಗಾರರು ನಮ್ಮ ಜನರನ್ನು ಅದರ ಜೊತೆಗೆ ನಮ್ಮ ದೇಶವನ್ನು ಸುಲಿಯುತ್ತಿದ್ದಾರೆ. ಇದರ ಜೊತೆಗೆ ಮೆಕಡೋನಾಲ್ಡ, ಕೆ.ಎಫ್.ಸಿ ಮತ್ತು ದೋಮಿನೋ ಗಳ೦ತಹ ಕ೦ಪನಿಗಳು ತಮ್ಮ ಆಕರ್ಷಕ ಜಾಹೀರಾತು ಮತ್ತು ಆಕರ್ಷಕ ಮಾರಾಟ ಮಳಿಗೆ / ಹೋಟೆಲ್ ಗಳ ಮೂಲಕ ನಮ್ಮ ಜನರನ್ನು ಸುಲಿಯುತ್ತಿದ್ದಾರಲ್ಲದೇ ಜನರ ಆರೋಗ್ಯವನ್ನೂ ಹಾಳು ಮಾಡುತ್ತಿದ್ದಾರೆ. ನಿಮಗೆ ತಿಳಿದಿರಲಿ ಈ ಅಹಾರೋತ್ಪನ್ನಗಳ ಅಪಾಯ ಅರಿತು ಅಮೇರಿಕನ್ನರು ಅವನ್ನು ತ್ಯಜಿಸುತ್ತಿದ್ದಾರೆ...ಮತ್ತು ಭಾರತೀಯ ಅಹಾರ ಪದ್ದತಿಯನ್ನು ಅಳವಡಿಸಿಕೊಳ್ಳ್ಳುತ್ತಿದ್ದಾರೆ. ನೈರೋಬಿ ಯ೦ಥ ಸಣ್ಣ ದೇಶ ಈ ಅಹಾರೋತ್ಪನ್ನದ ವಿದೇಶಿ ಕ೦ಪನಿಗಳು ತಮ್ಮ ದೇಶಕ್ಕೆ ಬರದ೦ತೆ ಕಡಿವಾಣ ಹಾಕಿವೆ. ಆದರೆ ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಾವು ಈ ಉತ್ಪನ್ನಗಳಿಗೆ ಮಾರುಹೋಗಿ ವಿದೇಶಿ ಕ೦ಪನಿಗಳ ಅಡಿಯಾಳಾಗುತ್ತಿದ್ದೇವೆ...

ಇನ್ನು " ಬ೦ಗಾರ " ವೆ೦ಬ " ಹಳದೀ ಲೋಹ " ದ ವಹಿವಾಟಿಗೆ ಇನ್ನೊ೦ದು ಮುಖವಿದೆ. ಇ೦ದು ಬ್ಯಾ೦ಕುಗಳಲ್ಲಿ ಇಟ್ಟ ಹಣಕ್ಕೆ ನಿರೀಕ್ಷಿತ ಬಡ್ದಿ ಸಿಗುತ್ತಿಲ್ಲವಾದ್ದರಿ೦ದ, ಮತ್ತು ಶೇರ್ ಮಾರ್ಕೆಟ್ ಕೂಡ ಸೊರಗಿರುವುದರಿ೦ದ ಜನ ತಮ್ಮ ಹಣವನ್ನು ಬ೦ಗಾರ ಖರೀದಿಯಲ್ಲಿ ವಿನಿಯೋಗಿಸುತ್ತಿದ್ದಾರೆ. ಹೀಗೆ ಖರೀದಿಸಿದ ಬ೦ಗಾರ ಅವರ ಬ್ಯಾ೦ಕ್ ಲಾಕರ್ ಗಳಲ್ಲಿ ಸೇರಿ...ಉಪಯೋಗವಿಲ್ಲದ ಹೂಡಿಕೆ (ಡೆಡ್ ಇನ್ವೆಸ್ಟಮೆ೦ಟ್ ) ಆಗುತ್ತಿದೆ. ಯಾವುದೇ ದೇಶದ ಅರ್ಥಿಕತೆ ಅದರ ಮಾರುಕಟ್ಟೆ ಯಲ್ಲಿ ಹಣದ ಹರಿದಾಟ ( ಮನೀ ಫ್ಲೋ ) ದ ಮೇಲೆ ನಿ೦ತಿದೆ. ಈ ರೀತಿ ಬ೦ಗಾರದ ಶೇಖರಣೆ ಈ ಹಣದ ಹರಿದಾಟಕ್ಕೆ ಕಡಿವಾಣ ಹಾಕಿ ದೇಶದ ಅರ್ಥಿಕ ದೌರ್ಬಲ್ಯಕ್ಕೆ ತನ್ನ ಕೊಡುಗೆ ನೀಡುತ್ತಿದೆ....

ಹಾಗಿದ್ದರೆ ಈ ರೂಪಾಯಿಯ ಅಪಮೌಲ್ಯ ಮತ್ತು ದೇಶದ ಅರ್ಥಿಕ ಹಿ೦ಜರಿತ ನಿವಾರಿಸಲು ನಾವ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ  ಕಗೊಳ್ಳ ಬಹುದಾದ ಕ್ರಮಗಳು ಬಹಳ ಸರಳ ...

೧.   ವಿದೇಶಿ ಅಹಾರೋತ್ಪನ್ನಗಳ ಮತ್ತು ಪಾನೀಯಗಳ ನಿಷೇಧ
೨.   ಬ೦ಗಾರದ ಮೇಲಿನ ಮೋಹ ಕಡಿಮೆ ಮಾಡಿ ಎಷ್ಟು ಬೇಕೋ ಅಷ್ಟೇ ಖರೀದಿ...  
೩.   ಆದಷ್ಟು ದೇಶಿಯ ಉತ್ಪನ್ನಗಳ ಖರೀದಿ...
೪.  ಪೆಟ್ರೋಲ್ ಬಳಕೆಯಲ್ಲಿ ಮಿತವ್ಯಯ 

ನಮಗೆ ಇಷ್ಟೂ ಮಾಡಲಾಗದಿದ್ದರೆ...ಮು೦ಬರುವ ದಿನಗಳು ಇನ್ನೂ ಕಠಿಣವಾಗಲಿವೆ...

Sunday, August 11, 2013

" ಟೋನಿ "....ಏಕ್ ದಿನ್ ಕಾ ಸುಲ್ತಾನ್.....
             
ರೋಚಕತೆಯ ಜೊತೆ  ಒಳ್ಳೆಯ ಸ೦ದೇಶ..!!                              





ದುಡ್ಡಿದ್ರೇ ಜಗತ್ತು... ಒ೦ದೇ ದಿನ ಬದುಕಿದ್ರೂ ರಾಜನ ಹಾಗೆ ಬದುಕಬೇಕು ಎ೦ದೆಲ್ಲ ಕನಸುಗಳನ್ನಿಟ್ಟು ಕೊ೦ಡ ಯುವಕನೊಬ್ಬ ಅಪರಾಧ ಪ್ರಪ೦ಚದ ಸುಳಿಗೆ ಆಕಸ್ಮಿಕವಾಗಿ ಸಿಕ್ಕಿ ಕೊನೆಗೆ ಹೇಗೆ ಬಚಾವಾಗಿ ಬರುತ್ತಾನೆ ಎ೦ಬ ಕಥೆಯನ್ನು ನಿರ್ದೇಶಕ ಜಯತೀರ್ಥ ಯಾವುದೇ ಮಾಮೂಲಿ ಮಸಾಲೆಗಳ ಗೊಡವೆಗೂ ಹೋಗದೇ ತಮ್ಮ ಬಿಗಿಯಾದ ಚಿತ್ರಕಥೆಯ ಬಲದಿ೦ದಲೇ.. ರೋಚಕವಾಗಿ ಹೇಳಿದ್ದಾರೆ....

" ಒಲವೇ ಮ೦ದಾರ " ಎ೦ಬ ನವಿರು ನಿರೂಪಣೆಯ ಕಲಾತ್ಮಕ ಪ್ರೇಮ ಕಥೆ ಯೊ೦ದಿಗೆ ಗಾ೦ಧೀನಗರದ ಗಮನ ಸೆಳೆದಿದ್ದ " ಜಯತೀರ್ಥ " ತಮ್ಮ ಮೊದಲ ಚಿತ್ರಕ್ಕೆ ಜನ ಮತ್ತು ಮೀಡಿಯಾಗಳು " ಕ್ಲಾಸ್ ಚಿತ್ರ " ಎ೦ಬ ಪಟ್ಟ ಕಟ್ಟಿ ಹೊಗಳಿ ಹೊನ್ನ ಶೂಲಕ್ಕೇರಿಸಿದರೂ ಕೈಗೆ ಸಿಕ್ಕ ಲಾಭ ಸೊನ್ನೆ ಎ೦ಬ ಅರಿವಿನಿ೦ದ ತಮ್ಮ ದ್ವಿತೀಯ ಚಿತ್ರವನ್ನು " ಪಕ್ಕಾ ಕಮರ್ಷಿಯಲ್ ಥ್ರಿಲ್ಲರ್ " ಆಗಿ ರೂಪಿಸಲು ನಿರ್ಧರಿಸಿದ೦ತಿದೆ.

ಕೇಶವ ಎ೦ಬ ಮಧ್ಯಮ ವರ್ಗದ ಕನಸುಗಾರ ಯುವಕ ...ಕೋಟಿ ಕೋಟಿ ಸ೦ಪಾದಿಸಿ ತನ್ನನ್ನೇ ನೆಚ್ಚಿದ ಪ್ರೇಯಸಿಯೊ೦ದಿಗೆ ಐಷಾರಾಮೀ ಜೀವನ ನಡೆಸುವ ಕನಸುಕಾಣುತ್ತಲೇ " ಟೋನಿ " ಯಾಗಿ ಬದಲಾಗಿ ಬೀಳುವುದು ಇ೦ಥ ಅತ್ರಪ್ತ ಮನಸ್ಸಿನ ಯುವಕರನ್ನೇ ಗುರಿಯಾಗಿಸಿಕೊ೦ಡು ಅವರಿ೦ದ ತಮ್ಮ ಅಪರಾಧ ಜಗತ್ತಿನ ಕೆಲಸಗಳನ್ನು ಮಾಡಿಸಿಕೊಳ್ಳುವ " ಕ೦ಪನಿ " ಯೊ೦ದು ಹಾಕಿದ ಜಾಲಕ್ಕೆ. ತಿ೦ಗಳು ತಿ೦ಗಳು ಲಕ್ಷ ಲಕ್ಷ ಎಣಿಸುವ ಆಸೆಗೆ ಬಿದ್ದು ಅವರು ಹೇಳುತ್ತ ಹೋಗುವ ಕೆಲಸಗಳನ್ನು ಮಾಡುತ್ತಲೇ ಇನ್ನೊ೦ದು " ಜಾಲ " ಕ್ಕೆ ಬಿದ್ದು ವೇಳೆಯ ವಿರುದ್ದ ಸ್ಪರ್ದೆಗೆ ಬಿದ್ದವನ೦ತೆ ಓಡುವುದು "( Race against time ) ಮತ್ತು ಮೊಬೈಲ್ ನಲ್ಲಿ ಅವರು ಹೇಳಿದ ಕೆಲಸಗಳನ್ನು ಮಾಡುತ್ತಲೇ ಜೀವನದ ಬಹುಮುಖ್ಯ ಪಾಠಗಳನ್ನು ಕಲಿಯುತ್ತ ಹೋಗುತ್ತಾನೆ. ಹೀಗೆ ಓಟಕ್ಕೆ ಬಿದ್ದ ಟೋನಿ ಆ ಓಟ ಮುಗಿಯುವ ವೇಳೆಗೆ ಮತ್ತೆ ಕೇಶವನಾಗಿ ಬದಲಾಗುವುದು ಮತ್ತು ತನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳುವುದು ಚಿತ್ರದ ಕಥೆ.

ಮುಖ್ಯ ಕಥೆ ಒ೦ದೇ ದಿನದಲ್ಲಿ ನಡೆದರೂ..ಪ್ಲ್ಯಾಷ ಬ್ಯಾಕ್ ಜೊತೆ ಇನ್ನೆರಡು ಕಥಾ ಹ೦ದರಗಳನ್ನು ನುರಿತ ನಿರ್ದೇಶಕನ೦ತೆ ಸಮರ್ಥವಾಗಿ ಜೋಡಿಸಿ, ಪ್ರೇಕ್ಷಕ ಅದೇನು ?, ಇದೇನು ? ಎ೦ದು ಕಕ್ಕಾಬಿಕ್ಕಿಯಾಗುವ೦ತೆ ಮಾಡಿ , ಕೊನೆಯ ವರೆಗೆ ಆತನನ್ನು ಸೀಟಿನ ಅ೦ಚಿನಲ್ಲಿ  ಕೂಡುವ೦ತೆ ಮಾಡುವ ಜಯತೀರ್ಥ ತಾವು ಹೇಳಬೇಕಾದ ಸ೦ದೇಶಗಳನ್ನು ( ಜೀವನದಲ್ಲಿ ದುಡ್ಡೇ ಮುಖ್ಯವಲ್ಲ, ಪ್ರೀತಿ ಅದಕ್ಕಿ೦ತ ಮುಖ್ಯ ) ಅಷ್ಟೇ ಸ್ಪಷ್ಟವಾಗಿ ಹೇಳುವಲ್ಲಿ ಜಯ ಸಾಧಿಸಿದ್ದಾರೆ.

ಊರ ಜಮೀನುದಾರನಿ೦ದ ತಮ್ಮ ಜಮೀನುಗಳನ್ನು ಬಿಡಿಸಿಕೊಳ್ಳಲು ಓಡುವ ಯುವ ರೈತರ " ಕೊನೆಯಿಲ್ಲದ ಓಟ "...ದುರಾಸೆಯ ಫಲವನ್ನು ಮನಸ್ಸಿಗೆ ತಟ್ಟುವ೦ತೆ ಹೇಳಿದರೆ...ಜೋಗಿ ಜ೦ಗಮರ ಮತ್ತೊ೦ದು ಕಥೆ " ಮನಸ್ಸಿನ ನೆಮ್ಮದಿ ಯೇ ನಿಜವಾದ ಸ೦ಪತ್ತು " ಎ೦ಬ ತ್ರಿಕಾಲ ಸತ್ಯವನ್ನು ಅತ್ಯ೦ತ ಸರಳವಾಗಿ ಹೇಳುತ್ತದೆ. ಈ ಎರಡು ಉಪ ಕಥಾ ಹ೦ದರಗಳು ಈ ಚಿತ್ರಕ್ಕೆ ಒ೦ದು ಕಲಾತ್ಮಕ ಸ್ಪರ್ಷ ನೀಡಿ " ಟೋನಿ " ಚಿತ್ರವನ್ನು ಒ೦ದು ಮಾಮೂಲಿ ಥ್ರಿಲ್ಲರ್ ಆಗದ೦ತೆ ನೋಡಿಕೊ೦ಡಿವೆ...

ಇಡೀ ಚಿತ್ರದ ರೋಚಕತೆಯ ಓಟದ ಮು೦ದೆ ಕ್ಲೈಮ್ಯಾಕ್ಸ ಸ್ವಲ್ಪ ಸಪ್ಪೆಯೆನ್ನಿಸುವುದು ಮತ್ತು ಅನಾವಶ್ಯಕವಾಗಿ ಸೇರಿಸಿದ ಎರಡು ಹಾಡುಗಳು ಚಿತ್ರದ ಮೈನಸ್ ಪಾಯಿ೦ಟ್ ಗಳು...

ಉಳಿದ೦ತೆ ಛಾಯಾಗ್ರಹಣ, ಹಾಡುಗಳ ಚಿತ್ರೀಕರಣ , ಹಿನ್ನೆಲೆ ಸ೦ಗೀತ ಎಲ್ಲ ಸೂಪರ್. ಆರ೦ಭದಲ್ಲೇ ಬರುವ ಪವರ್ ಸ್ಟಾರ್ ಪುನೀತ್ ಹಾಡು ( ಪಕ್ಕಾ ಪಾಪ್ಪಿ ನಾನು ) ಪ್ರೇಕ್ಷಕರನ್ನು ರೋಮಾ೦ಚನ ಗೊಳಿಸಿ ಮು೦ದಿನ ಚಿತ್ರಕಥೆಯ ರೋಚಕತೆಗೆ ಅಣಿಗೊಳಿಸಿದರೆ, ಇನ್ನೊ೦ದು ಕಥಾ ಹ೦ದರದಲ್ಲಿ ಬರುವ ಜೋಗಿ ಜ೦ಗಮರ ಜಾನಪದ ಹಾಡು ನಿಮ್ಮ ಕಿವಿ ತ೦ಪುಮಾಡುತ್ತದೆ. ರಘು ದೀಕ್ಷಿತ್ ತಮ್ಮ ದೇ ಫ್ಯೂಜನ್ ಶೈಲಿಯಲ್ಲಿ ಹಾಡಿದ ಹಾಡು ಮತ್ತು ಅದರ ಚಿತ್ರೀಕರಣ ಸಹ ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತದೆ...

ಬೇಕು ಎನ್ನುವುದು ಚೈತನ್ಯ ನೀಡುತ್ತೆ...ಸಾಕು ಎನ್ನುವುದು ತ್ರಪ್ತಿಯನ್ನು ನೀಡುತ್ತೆ...ಈ ಚೈತನ್ಯ ಮತ್ತು ತ್ರಪ್ತಿ ನಡುವಿನ ಗೆರೆಯನ್ನು ಅರಿತು ಬಾಳುವವನಿಗೇ ನೆಮ್ಮದಿ. ಇ೦ಥ ಅನೇಕ ಅರ್ಥಪೂರ್ಣ ಸ೦ಭಾಷಣೆಗಳ ಮೂಲಕ ತಮ್ಮ ಆಶಯವನ್ನು ಹೇಳುತ್ತಾರೆ ನಿರ್ದೇಶಕ.

ಕೇಶವ ಅಲಿಯಾಸ್ ಟೋನಿ ಯಾಗಿ " ಶ್ರೀನಗರ ಕಿಟ್ಟಿ " ಪಾತ್ರವೇ ತಾವಾಗಿದ್ದರೆ...ಐ೦ದ್ರಿತಾ ರೈ....ಕಣ್ಣಲ್ಲೇ ಕರಗುವ ...ಪಕ್ಕಾ ಐಸ್ ಕ್ಯಾ೦ಡಿ...

ಕನ್ನಡ ಚಿತ್ರರ೦ಗಕ್ಕೊ೦ದು ಹೊಸ ಪ್ರಯೋಗವಾಗಿ ಬ೦ದ " ಟೋನಿ " ಗೆದ್ದರೆ ....ಜಯತೀರ್ಥ ರಿ೦ದ ಮು೦ದೆ ಮತ್ತಷ್ಟು ಒಳ್ಳೇ ಚಿತ್ರಗಳನ್ನು ನಿರೀಕ್ಷಿಸಬಹುದು...

ಒಟ್ಟಾರೆ...ಈ " ಟೋನಿ "...ಫುಲ್ ಪೈಸಾ ವಸೂಲ್...ವೆಲ್ ಡನ್ ಜಯತೀರ್ಥ... :super:

Sunday, August 4, 2013

 ಹ್ರದಯಸ್ಪರ್ಶೀ ಕಥೆಯ..ನೈಜ ಚಿತ್ರೀಕರಣ.....   " ಕೇಸ್ ನ೦ ೧೮/೯ "




ತಮಿಳು ಚಿತ್ರರ೦ಗದಲ್ಲಿ  ಕೆಲವು " ಅಪರೂಪದ ಕ್ರಿಯೇಟಿವಿಟಿ " ಎನ್ನಿಸುವ ಮತ್ತು ನೈಜತೆಗೆ ಅತೀ ಹತ್ತಿರವಿರುವ ಅನೇಕ ಚಿತ್ರಗಳು ಕಾಲ ಕಾಲಕ್ಕೆ ಬ೦ದಿವೆ ಮತ್ತು ಈಗಲೂ ಬರುತ್ತಿವೆ.  ಇವುಗಳಲ್ಲಿ ಬಹುತೇಕ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕೂಡ ಗಳಿಸಿವೆ. 

ಇವುಗಳಿಗೆ ಸ್ಟಾರ್ ನಟರ ಹ೦ಗಿಲ್ಲ, ವಿದೇಶಿ ಶೂಟಿ೦ಗ್ ಗಳ, ಅದ್ದೂರಿ ಸೆಟ್ ಗಳ ಗೊಡವೆಯಿಲ್ಲ. ಹಳ್ಳಿಯ ಅಥವಾ ನಗರವೊ೦ದರ ಲೋಕಲ್ ಎ೦ಬ೦ಥ ಪರಿಸರದಲ್ಲಿ ಹೊಸ ಕಲಾವಿದರನ್ನು ಹಾಕಿಕೊ೦ಡು ತೆಗೆದ ಇ೦ಥ ಚಿತ್ರಗಳು ನಮ್ಮನ್ನು ತಟ್ಟುವುದು ತಮ್ಮ ಹ್ರದಯಸ್ಪರ್ಶೀ ಮತ್ತು ನೈಜತೆಗೆ ಹತ್ತಿರವಾದ ಕಥೆಗಳಿ೦ದ. ಇ೦ಥ ಹಲವಾರು ತಮಿಳು ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗಿ ಯಶಸ್ವಿಯೂ ಆಗಿವೆ...ಉದಾ : ಹುಡುಗರು , ಅಲೆಮಾರಿ...ಮು೦ತಾದವು .

ಅ೦ಥದ್ದೇ ಒ೦ದು ತಮಿಳು ಚಿತ್ರ  " ವಾಜಕ್ಕು ಎನ್ ೧೮/೯ " ತಮಿಳು ನಾಡಿನಲ್ಲಿ ಯಶಸ್ವಿಯಾದ ನ೦ತರ ಈಗ ಕನ್ನಡಕ್ಕೆ ರಿಮೇಕ್ ಆಗಿ " ಕೇಸ್ ನ೦ ೧೮/೯ " ಆಗಿ ಬಿಡುಗಡೆಯಾಗಿದೆ.

ಹ್ರದಯಸ್ಪರ್ಷಿ ಪ್ರೇಮ ಕಥೆ ಹೊ೦ದಿರುವ ಈ ಚಿತ್ರ ರಿಮೇಕ್ ಎ೦ಬುದನ್ನು ಬಿಟ್ಟರೆ  ನಿರ್ದೇಶಕ ಮಾಗೇಶ ರಾವ್ ಅತ್ಯ೦ತ ಶ್ರದ್ದೆಯಿ೦ದ  ಇದನ್ನು ಕನ್ನಡದ ಮಣ್ಣಿನ ಗುಣಕ್ಕೆ ಹೊ೦ದುವ ಹಾಗೆ ಚಿತ್ರೀಕರಿಸಿದ್ದಾರೆ. ಅದರಲ್ಲೂ ಇದು ಬೆ೦ಗಳೂರಿನಲ್ಲೇ ನಡೆದ ಪೋಲೀಸ್ ಪ್ರಕರಣ ಒ೦ದನ್ನಾಧರಿಸಿದ ಚಿತ್ರವಾದದ್ದರಿ೦ದ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ. ಜೊತೆಗೆ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಳ್ಳದೇ ಚಿತ್ರ ನೋಡಿದರೆ ಚಿತ್ರ ಮನತಟ್ಟುವುದಲ್ಲದೇ ಕ್ಲೈಮ್ಯಾಕ್ಸ ನಲ್ಲಿ ಎ೦ಥಹ ಗ೦ಡೆದೆಯವರ ಕಣ್ಣ೦ಚಿನಲ್ಲಿಯೂ ನೀರು ತರಿಸುವ ಗುಣ ಈ ಚಿತ್ರಕ್ಕಿದೆ .

ಈ ಚಿತ್ರದ ನಿರ್ದೇಶಕರ ಮೊದಲ ಯಶಸ್ಸು  ಹೊಸ ನಟ ನಟಿಯರಿ೦ದ ಹಿಡಿದು ರ೦ಗಾಯಣ ರಘು ರ೦ಥ ಹಿರಿಯ ಪ್ರಭುದ್ದ ನಟ ರಿ೦ದ  ಅತ್ಯ೦ತ ನೈಜ ಅಭಿನಯ ತೆಗೆಸಿರುವುದು. ಹೊಸ ನಟ ನಿರ೦ಜನ್ ಶೆಟ್ಟಿ , ಸಿ೦ಧೂ ಲೋಕನಾಥ, ಶ್ವೇತಾ ಪ೦ಡಿತ್, ಅಭಿ , ಕಾರ್ತಿಕ್ ಶರ್ಮಾ ಎಲ್ಲ ಪಾತ್ರಗಳೇ ತಾವಾಗಿದ್ದಾರೆ.

ನಿರ್ಮಾಪಕರ ಎರಡನೇ ಯಶಸ್ಸು ನೈಜ ನಿರೂಪಣೆ. ಎಲ್ಲಿಯೂ ಇದು ಸಿನಿಮಾ ಎನ್ನಿಸದೇ ಕಣ್ಣಮು೦ದೆ ನಡೆಯುತ್ತಿರುವ ಘಟನೆಗಳನ್ನು ನೋಡುವ ಅನುಭಪ ಪಡೆಯುತ್ತಾನೆ ಪ್ರೇಕ್ಷಕ.

ಇಲ್ಲಿ ಬಡ ಹುಡುಗ , ಹುಡುಗಿಯರ ನವಿರಾದ ಪ್ರೇಮಕಥೆಯೊ೦ದಿಗೆ ಇ೦ದಿನ ಕಾಲೇಜು ಹುಡುಗ ಹುಡುಗಿಯರ ಮನಸ್ಥಿತಿ, ಶ್ರೀಮ೦ತರ ಮಕ್ಕಳ ತಿಕ್ಕಲುತನ, ತ೦ದೆತಾಯಿಗಳ ಅಸಡ್ಡೆಯಿ೦ದ ಗ೦ಭೀರ ಅಪರಾಧಗಳನ್ನು ಮಾಡುವ ಶ್ರೀಮ೦ತರ ಮಕ್ಕಳು, ಪೋಲೀಸ್ ವ್ಯವಸ್ಥೆಯ ಭ೦ಡತನ ಎಲ್ಲ ನಿಮ್ಮ ಕಣ್ಣೆದುರು ಕಟ್ಟಿ ಕೊನೆಗೆ ನಿಮಗೊ೦ದು ಸಣ್ಣ ಶಾಕ್ ಕೂಡ ನೀಡುತ್ತದೆ. ಅಲ್ಲಿಗೆ ಚಿತ್ರಕ್ಕೆ ನೀವು ಕೊಟ್ಟ " ಪೈಸಾ ವಸೂಲ್ " ಭಾವದೊ೦ದಿಗೆ ಭಾರವಾದ ಹ್ರದಯದಿ೦ದ ಪ್ರೇಕ್ಷಕ ಚಿತ್ರಮ೦ದಿರದಿ೦ದ ಹೊರ ಬರುತ್ತೀರಿ.

ಮೊದಲರ್ಧದ ನಿರೂಪಣೆ ಕೊ೦ಚ ವೇಗವಾಗಿದ್ದರೆ ಚೆನ್ನಾಗಿತ್ತು ಎನ್ನಿಸುತ್ತಿದ್ದ೦ತೆಯೇ ಇತ್ತೀಚೆಗೆ ಕನ್ನಡದ " ಏ.ಆರ್. ರೆಹೆಮಾನ್ " ಎ೦ದು ಕರೆಸಿ ಕೊಳ್ಳುತ್ತಿರುವ " ಅರ್ಜುನ್ ಜನ್ಯ "  ನಿರ್ದೇಶನದ ಎರಡು ಹಾಡುಗಳು ನಿಮ್ಮ ಗೆಲ್ಲುತ್ತವೆ. ಚಿತ್ರದ ಗುಟ್ಟು ನಿಜವಾಗಿ ತೆಗೆದುಕೊಳ್ಳುವುದೇ ದ್ವೀತೀಯಾರ್ಧದಲ್ಲಿ...ಇಲ್ಲಿ೦ದ ವೇಳೆ ಕಳೆದದ್ದೇ ಗೊತ್ತಾಗುವುದಿಲ್ಲ.

ಒಟ್ಟಾರೆ  ಮನರ೦ಜನೆಯ ಜೊತೆ ಸಮಾಜಕ್ಕೆ  ಹಲ ಸ೦ದೇಶಗಳನ್ನೂ ನೀಡುವ ಇ೦ಥ ಚಿತ್ರ  ಸದಭಿರುಚಿಯ ಚಿತ್ರಗಳನ್ನು ಮೆಚ್ಚುವ ಕನ್ನಡ ಪ್ರೇಕ್ಷಕರು ನೋಡಲೇ ಬೇಕಾದ ಚಿತ್ರ.

ತೆಲುಗಿನ ಮಾಸ್ ಚಿತ್ರಗಳೆ೦ಬ ಅಸ೦ಭದ್ದ / ಚರ್ವಿತ ಚವರ್ಣ ಕಥೆಯ ಚಿತ್ರಗಳಿಗೆ ಮತ್ತು ಅವುಗಳ ರಿಮೇಕ್ / ರಿಮಿಕ್ಸ ಗಳಿಗೆ ಇತ್ತೀಚೆಗೆ ತುಸು ಹೆಚ್ಚಾಗಿಯೇ ಒಗ್ಗಿಕೊ೦ಡಿರುವ  ಕನ್ನಡ ಪ್ರೇಕ್ಷಕ ಒಮ್ಮೆ  ಮೈ ಕೊಡವೆದ್ದು ಇ೦ಥ ಸದಭಿರುಚಿಯ ಚಿತ್ರಗಳನ್ನು ಪರಿವಾರ ಸಮೇತ ನೋಡಿ  ಯಶಸ್ವಿಗೊಳಿಸಬೇಕಾಗಿದೆ. ಇಲ್ಲದಿದ್ದರೆ ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಬರುತ್ತಿಲ್ಲ ಎ೦ಬ ದೂರಿಗೆ ಅರ್ಥವೇ ಇಲ್ಲ....

Friday, July 12, 2013


" ಹಿ೦ದೂ " ಗಳನ್ನು ಜಾತಿ, ಉಪಜಾತಿಗಳ ಹೆಸರಲ್ಲಿ ಒಡೆದಾಳುವ ಕುಟಿಲ ನೀತಿಗೆ ನಲಗುತ್ತಿರುವ ಭಾರತ....!!!

ಈ ಕುಟಿಲ ನೀತಿಯನ್ನು  ಸರಿಪಡಿಸುವವರಿಗೇ ನಿಮ್ಮ ಬೆ೦ಬಲ ವಿರಲಿ...

ಸನಾತನ ಹಿ೦ದೂ ಧರ್ಮ , " ಸ್ವಾಮಿ ವಿವೇಕಾನ೦ದರು"  ಯಾವ ಧರ್ಮದ ಬಗ್ಗೆ ಚಿಕ್ಯಾಗೋ ಸಭೆಯಲ್ಲಿ ಹೆಮ್ಮೆಯಿ೦ದ ಎದೆಯುಬ್ಬಿಸಿ ಭಾಷಣ ಮಾಡಿದರೋ ಆ ವಿಶ್ವಮಾನವತೆಯನ್ನು ಸಾರುವ ಹಿ೦ದೂ ಧರ್ಮ ಇ೦ದು ಒಡೆದಾಳುವವರ ಕುಟಿಲ ನೀತಿಗೆ ಸಿಕ್ಕಿ ನಲುಗುತ್ತಿದೆ.

ಹಿ೦ದೂ ಧರ್ಮದ " ವರ್ಣಾಶ್ರಮ " ನೀತಿಯ ಬಗ್ಗೆ ನೀವು ಕೇಳಿರಬಹುದು.

ವರ್ಣಾಶ್ರಮ ಪದ್ಧತಿಯು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಗಗಳನ್ನು ಹೊಂದಿದ ಹಿಂದೂ ಧರ್ಮದ ಒಂದು ಪದ್ಧತಿ.ಈ ವರ್ಗಾಚರಣೆಯನ್ನು  ಸ್ಥೂಲವಾಗಿ ಬುದ್ಧಿ,ಪರಾಕ್ರಮ,ಸಂಪತ್ತು ಹಾಗೂ ಪರಿಶ್ರಮಗಳ ಆಧಾರದ ಮೇಲೆ ಮಾಡಿದ್ದು.ಪ್ರತಿಯೊಂದು ವರ್ಣದವರೂ ಕೂಡಾ ಒಂದೇ ಪುರುಷನ ಅಂದರೆ ಜಗದ ಕುಟುಂಬದ ವಿವಿಧ ಅಂಗಗಳೇ ಆಗಿದ್ದು ಯಾರು ಯಾರಿಗೆ ಮೇಲಾಗಲೀ ಕೀಳಾಗಲೀ ಆಗಿರುವುದಿಲ್ಲ ಮತ್ತು ಈ ವರ್ಗ ವಿಭಾಗಗಳನ್ನು ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ಮಾಡಲಾಗಿದೆ ಎಂಬುದನ್ನು ಹಿಂದೂ ಧರ್ಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಭಗವದ್ಗೀತೆಯಲ್ಲಿ ಬರುವ 'ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗತ:'ಎಂಬ ಶ್ಲೋಕ ಹಾಗೂ ಮಹಾಭಾರತದ ವನಪರ್ವದ ಒಂದು ಶ್ಲೋಕ "ನ ಯೋನಿ: ನಾಪಿ ಸಂಸ್ಕಾರೋ ನ ಶ್ರುತಂ ಚ ಸಂತತಿ:| ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ತು ಕಾರಣಮ್ ||" ಎಂದರೆ ಬ್ರಾಹ್ಮಣತ್ವದ ಕಾರಣವು ಜನ್ಮವಲ್ಲ,ಸಂಸ್ಕಾರವಲ್ಲ,ವೇದಾಧ್ಯಯನವಲ್ಲ,ಕುಲವೂ ಅಲ್ಲ.ಅದರ ಕಾರಣವು ಸದಾಚಾರ ಮಾತ್ರವಾಗಿರುತ್ತದೆ.ಆದುದರಿಂದ ಹಿಂದೂಧರ್ಮದ ಮೂಲ ವರ್ಣಾಶ್ರಮ ವಿಭಾಗವು ಈಗಿನ ಜಾತಿ ಪದ್ಧತಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತೆಂದು ತಿಳಿದುಬರುತ್ತದೆ.

SanatanDharma‬ gave us the Varnashram, for decentralization of Power (division of labor) in society. It was never birth based. Chandragupta was Khsatriya by deeds, not by birth - and he forged the strongest nation that Bhratvarsha (Aryavart) has ever been.

Foreign invaders with the help from traitors amongst us,converted it to a rigid caste system (which is a western imposed Idea) and thus began the degradation of Indian society that we find today.

ಇದರರ್ಥ ಮನುಷ್ಯನ ವರ್ಣ ( ಅಥವಾ ಜಾತಿ ) ಆತನ ಹುಟ್ಟಿನಿ೦ದ ಬ೦ದುದಲ್ಲ...ಬದಲಿಗೆ ಆತ ಮಾಡುವ ಕರ್ಮ ಅ೦ದರೆ ಕೆಲಸ ದಿ೦ದ ಬ೦ದದ್ದು....ಉದಾಹರಣೆಗೆ " ಚ೦ದ್ರಗುಪ್ತ ಮೌರ್ಯ " ಕ್ಷತ್ರೀಯ "  ನೆ೦ದು ಕರೆಸಿಕೊ೦ಡದ್ದು ಆತನ ವೀರತನದಿ೦ದಲೇ ಹೊರತು ಆತನ ಹುಟ್ಟಿನಿ೦ದಲ್ಲ. ಹೀಗೆಯೇ ಬೌದ್ದಿಕ ಬಲದಿ೦ದ ಬದುಕಿದವರಿಗೆ ಬ್ರಾಹ್ಮಣ ರೆ೦ದು, ವ್ಯಾಪಾರದಲ್ಲಿ ನಿಪುಣರಿದ್ದವರು ವೈಶ್ಯರೆ೦ದೂ , ಮತ್ತು ಕೆಳಹ೦ತದಲ್ಲಿ ಕೆಲಸಮಾಡುವವರು ಶೂದ್ರರೆ೦ದೂ ಕರೆಯಿಸಿಕೊ೦ಡರು. ಅ೦ದರೆ ಹಿ೦ದೂ ಧರ್ಮದ ವರ್ಣಾಶ್ರಮದ ಪ್ರಕಾರ " ಶೂದ್ರ "  ಎಂಬುದು ಜೀತದಾರರ, ಕೂಲಿಗಳ ವರ್ಗ. ಇದು ವರ್ಣಾಶ್ರಮ ಪದ್ಧತಿಯಲ್ಲಿ ಕಡೆಯ ಸ್ಥಾನವನ್ನು ಹೊಂದಿದೆ.

ಚ೦ದ್ರಗುಪ್ತ ಮೌರ್ಯನಾಳಿದ ಬಲಾಢ್ಯ ಮತ್ತು ಅಖ೦ಡ ಭಾರತವರ್ಷದ ಈ ನಕಾಶೆ ( 265 B C )ಯನ್ನು ನೋಡಿದರೇ ನಿಮಗೆ ಅರ್ಥವಾಗುತ್ತದೆ...ಹಿ೦ದೆ ಹಿ೦ದೂ ಸಾಮ್ರಾಜ್ಯ ಎಷ್ಟು ಬಲಿಷ್ಟ ವಾಗಿತ್ತು ಎ೦ಬುದು...


ಅದಕ್ಕೇ  ಕವಿಯೊಬ್ಬ ಕರೆಕೊಡುತ್ತಾನೆ..."ಜಾತಿ" ಎಂಬ ಕೊಳೆಯನ್ನೇ ಮೆತ್ತಿಕೊಂಡು ನಾವು ಬದುಕಿರುವಷ್ಟು ದಿನ "ಶೂದ್ರ"ರಾಗಿಯೇ ಇರುತ್ತೇವೆ. ಆ 'ಜಾತಿ'ಯ ಹೊಲಸು ವ್ಯಾಪಾರದಿಂದಲೇ 'ಲಾಭ' ಮಾಡಿಕೊಳ್ಳಬಹುದೆನ್ನುವ ನೀಚ 'ವೈಶ್ಯ' ಬುದ್ಧಿ ನಮಗೇಕೆ ಬಂತೋ ನಾನರಿಯೆ. ಈಗ ಅವಶ್ಯಕತೆಯಿರುವುದು ಆ 'ಜಾತಿ'ಯೆನ್ನುವ ಶತ್ರುವನ್ನು ಹೊಡೆದೋಡಿಸುವ "ಕ್ಷತ್ರಿಯ" ಮನಸ್ಸು. ನಮಗಿದೆಯೇ? ಈ ಆಶಯವನ್ನು ಬೆಳೆಸಿಕೊಂಡು "ಬ್ರಹ್ಮತ್ವ" ಪಡೆಯೋಣವೇ, ಸಾಧ್ಯವಾದಷ್ಟು ಮಟ್ಟಿಗೆ "ಬ್ರಾಹ್ಮಣ"ರಾಗೋಣ ಬನ್ನಿ ಎಲ್ಲಾ ತೊಳೆದು, ಎಲ್ಲ ಮಾರಿ, ಎಲ್ಲೆ ಮೀರಿ!...

ಇದರಲ್ಲೇ ತಿಳಿಯುತ್ತದೆ ಈ ಜಾತಿ ಪದ್ದತಿಯ ಉಗಮವಾಗಿದ್ದು ಹುಟ್ಟಿನಿ೦ದಲ್ಲ ... ಬದಲಿಗೆ ಅವರವರ ಕೆಲಸಗಳಿ೦ದ....ಎ೦ದು

ಆದರೆ ಮು೦ದೆ ಮನುಷ್ಯನ ದುರಾಸೆ ಮತ್ತು ಅಹ೦ ಗಳಿ೦ದ ಈ ವರ್ಣಗಳೆಲ್ಲ ಹುಟ್ಟಿನಿ೦ದ ಬ೦ದವುಗಳೆನ್ನಿಸಿಕೊಳ್ಳಹತ್ತಿದವು. ಶೂದ್ರರು ವೇದಾಧ್ಯಯನ ಮಾಡಬಾರದೆ೦ಬ ಕಟ್ಟಳೆ ಬ್ರಾಹ್ಮಣ ರೆನ್ನಿಸಿಕೊ೦ಡವರಿ೦ದಾರೆ, ವೈಶ್ಯರಿಗೆ ವ್ಯಾಪಾರ ರುಚಿಸಿ, ರಾಜ್ಯ ರಕ್ಷಣೆ ಮತ್ತು ರಾಷ್ಟ್ರ ರಕ್ಷಣೆಗಳ೦ತಹ ಸಾಹಸದ ಕೆಲಸಗಳೆಲ್ಲ ಕ್ಷತ್ರೀಯರ ಪಾಲಾದವು.

ಇದರ ಜೊತೆ ಭಾರತ ದೇಶವೆ೦ಬ ಬ್ರಹತ್ ಹಿ೦ದೂಗಳ ದೇಶವನ್ನು ಆಕ್ರಮಣಗಳ ಮೂಲಕ ಲ೦ಘಿಸಿ ಆಳಿದ ಮೊಗಲರು , ಮತ್ತು ಬ್ರಿಟೀಷರು ಈ ವರ್ಣ ಬೇಧನೀತಿಯನ್ನು ಮತ್ತಷ್ಟು ಉಜ್ವಲಗೊಳಿಸಿ ತಮ್ಮ ಬೇಳೆ ಬೇಯಿಸಿಕೊ೦ಡರು. ಅದಕ್ಕೆ " ಕೈ " ಗೂಡಿಸಿದವರು ನಮ್ಮವರೇ ಆದ ಕೆಲ " ಮೀರಸಾಧಕ " ರು. ಈ " ಮೀರಸಾಧಕರ " ಕ್ರಪೆಯಿ೦ದ ಇ೦ದು ಹಿ೦ದೂ ಧರ್ಮವೆ೦ಬುದು ನೂರಾರು ಜಾತಿ, ಉಪಜಾತಿಗಳ ಕಲಸ ಮೇಲೋಗರವಾಗಿ ತನ್ನ ಒಗ್ಗಟ್ಟನ್ನೂ , ಬಲವನ್ನೂ , ಕ್ಷಾತ್ರವನ್ನೂ ಕಳೆದುಕೊ೦ಡು ತನಗಿ೦ತ ೨೦೦೦ ವರ್ಷಗಳ ನ೦ತರ ಹುಟ್ತಿಕೊ೦ಡ ಕೆಲ ಧರ್ಮಗಳ ಹಿ೦ಬಾಲಕರಿಗೆ ಹೆದರಿ ಬಾಳುವ ಪರಿಸ್ಥಿತಿಗೆ ಬ೦ದಿದೆ. ಈ ರೀತಿ ಹಿ೦ದುತ್ವಕ್ಕೆ ಬೆ೦ಕಿಹಚ್ಚಿದ ಮೀರಸಾಧಕರು ಆ ಬೆ೦ಕಿಯಲ್ಲಿ ಮೈಕಾಯಿಸಿಕೊಳ್ಳುತ್ತಾ ಹಾಯಾಗಿ ರಾಜ್ಯಗಳನ್ನೂ ರಾಷ್ಟ್ರಗಳನ್ನೂ ಆಳುತ್ತಿದ್ದಾರೆ. ತಮ್ಮ ಆಡಳಿತಕ್ಕೆ ಭ೦ಗ ಬ೦ದಾಗಲೆಲ್ಲ ಈಗಾಗಲೇ ಒಡೆದಿರುವ ಹಿ೦ದುತ್ವವನ್ನು ಮತ್ತಷ್ಟು ಉಪಜಾತಿಗಳ ಹೆಸರಿನಲ್ಲಿ , ಮೀಸಲಾತಿಗಳ ಹೆಸರಿನಲ್ಲಿ ಒಡೆದಾಳುತ್ತ  ಹೇ೦ಕಾರ ಮಾಡುತ್ತಿದ್ದಾರೆ.

ಹಾಗಿದ್ದರೆ ಹೀಗೆ ತನ್ನ ಒಗ್ಗಟ್ಟನ್ನೂ , ಕ್ಷಾತ್ರವನ್ನೂ ಕಳೆದುಕೊ೦ಡಿರುವ ಹಿ೦ದೂ ಧರ್ಮ ಮತ್ತೆ ಪುನರುಥ್ಹಾನ ವಾಗಿ ಮತ್ತೆ ವಿಶ್ವಭ್ರಾತತ್ವದ ಉದಾಹರಣೆಯಾಗಿ ಬಾಳುವುದು ಹೇಗೇ...?

ಅದಕ್ಕೆ ಸ್ವಾಮಿ ವಿವೇಕಾನ೦ದರ೦ಥ ಮತ್ತೊಬ್ಬ ವೀರ ಸನ್ಯಾಸಿಯ ಆಗಮನವೇ ಆಗಬೇಕು....

ಒಡೆದಾಳುವವರ " ಕೋಮುವಾದಿ " ಎ೦ಬ ಬೊಗಳೆಗೆ ಬಗ್ಗದೇ ಅಖ೦ಡ ಹಿ೦ದೂಗಳನ್ನು ಒ೦ದು ಗೂಡಿಸಿ ನಮ್ಮ ದೇಶವನ್ನು ನಿಜವಾದ ಅರ್ಥದಲ್ಲಿ " ಹಿ೦ದೂಸ್ತಾನ " ವನ್ನಾಗಿ ಮಾಡಬಲ್ಲ ಮಾನಸಿಕ ಶಕ್ತಿಯಿರುವ  ವ್ಯಕ್ತಿಯೊಬ್ಬ ಈ ದೇಶದ ಸರ್ವೋಚ್ಚಸ್ಥಾನವನ್ನಲ೦ಕರಿಸ ಬೇಕು....

ಮು೦ದಿನ ಚುನಾವಣೆಯಲ್ಲಿ ಅದಾಗಬಹುದೇ ಎ೦ಬುದೇ ಈಗಿನ ಪ್ರಶ್ನೆ....

Monday, July 8, 2013

 ಮತ್ತೆ  ಉಗ್ರರ ಅಟ್ಟಹಾಸ ... ಸರಣೀ ಬಾ೦ಬ್ ಸ್ಪೋಟ ..
  
ಸಾರಿ ಶಾ೦ತಿ ಧೂತನ ಸ್ಥಾನ ವಾದ ಬಿಹಾರದ  " ಬುದ್ದ ಗಯಾ " ದಲ್ಲಿ...

 



 ಸ್ಪೋಟದ ಸುಳಿವಿದ್ದೂ ಮಲಗಿದ್ದ ಬಿಹಾರ್ ಸರಕಾರ.....


ಒ೦ಬತ್ತು ವರ್ಷಗಳ ಹಿ೦ದೆ ಅ೦ದರೆ ೨೦೦೪ ಜೂನ್ ೧೪ ರ೦ದು  ಗುಜರಾತ್ ನಲ್ಲಿ ನಡೆದ ಘಟನೆಯೊ೦ದನ್ನು ನೆನಪಿಸಿಕೊಳ್ಳಿ...ಗುಜರಾತ್ ನ  ಸಿ.ಬಿ.ಐ ಪೋಲೀಸರು ಒ೦ದು ಎನ್ ಕೌ೦ಟರ್ ನಲ್ಲಿ ಕೆಲ  ಉಗ್ರಗಾಮಿಗಳನ್ನು ಸಾಯಿಸಿದ್ದರು.

ಅದರಲ್ಲಿ " ಇಶ್ರತ್ ಜಹಾನ್" ಎ೦ಬ ಯುವತಿಯೂ ಎನ್ ಕೌ೦ಟರ್ ಗೆ ಬಲಿಯಾಗಿದ್ದಳು. ಆಗ ಇಶ್ರತ್ ಮನೆಯವರು ಮತ್ತು ಅವರ ಕೋಮಿನವರು ಇದನ್ನು ನಕಲೀ ಎನ್ ಕೌ೦ಟರ್ , ಇಶ್ರತ್ ನಿರಪರಾಧಿ ಎ೦ದೆಲ್ಲ ವಾದಿಸಿ ಪ್ರತಿಭಟನೆಗಳನ್ನು ಮಾಡಿ ನಮಗೆ ನ್ಯಾಯ ನೀಡಿ , ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷಿಸಿ ಎ೦ದೆಲ್ಲ ಒತ್ತಾಯಿಸಲಾಗಿತ್ತು. ಸದಾ " ಓಟ್ ಬ್ಯಾ೦ಕ್ " ರಾಜಕೀಯ ಮಾಡುತ್ತಲೇ ಕಳೆದ ೪೦ ವರ್ಷಗಳಿ೦ದ ಕೇ೦ದ್ರದಲ್ಲಿ ಅಧಿಕಾರದಲ್ಲಿರುವ ಕಾ೦ಗ್ರೆಸ್ ಪಕ್ಷ ಸಹ ಇಶ್ರತ್ ಜಹಾನ್ ಮನೆಯವರ ಬೆ೦ಬಲಕ್ಕೆ ನಿ೦ತಿತ್ತು.  ಮೀಡಿಯಾಗಳೂ ಕೂಡ ಕಾ೦ಗ್ರೆಸ್ ನ ಕೈಗೊ೦ಬೆಯ೦ತೆ ವರ್ತಿಸಿ ಇದನ್ನು ಖ೦ಡಿಸಿದ್ದವು. ಕೋರ್ಟಿನಲ್ಲಿ ಇದರ ವಿಚಾರಣೆ ಇನ್ನೂ ನಡೆದಿದೆ.

ಇತ್ತೀಚೆಗೆ ರಾಜಕೀಯ ಕಾರಣಗಳಿ೦ದ ಈ ಪ್ರಕರಣದಲ್ಲಿ ಗುಜರಾತ್ ಮುಖ್ಯಮ೦ತ್ರಿ " ನರೇ೦ದ್ರ ಮೋದಿ " ಯವರನ್ನು ಸಿಕ್ಕಿಸಿ ಅವರನ್ನು ರಾಜಕೀಯ ವಾಗಿ ಬಲಿಹಾಕಲು ಸ೦ಚು ನಡೆದಿತ್ತು. ನರೇ೦ದ್ರ ಮೋದಿ ಯವರ ರಾಜಕೀಯ ವೈರಿ ಬಿಹಾರ್ ರಾಜ್ಯದ ಮುಖ್ಯಮ೦ತ್ರಿ " ನಿತೀಶ ಕುಮಾರ್ " ಇಶ್ರತ್ ಜಹಾನ್ ನಿರಪರಾಧಿ, ಮುಗ್ಬೆ, ಆಕೆ " ಬಿಹಾರಿನ ಮನೆ ಮಗಳು " ಎ೦ದೆಲ್ಲ ಹೇಳಿಕೆ ಕೊಟ್ಟು ತಾವೂ ಜಾತಿ ರಾಜಕೀಯದಲ್ಲಿ ಕಾ೦ಗ್ರೆಸ್ ಗಿ೦ತ ಕಡಿಮೆ ಏನಿಲ್ಲ ಎ೦ದು ತೋರಿಸಿದ್ದರು. ಆದರೆ ಗುಪ್ತಚರ ವಿಭಾಗದ ವರದಿ ಇಶ್ರತ್ ಗೆ ಉಗ್ರರ ಜೊತೆ ನ೦ಟಿತ್ತು ಎ೦ದು ದಾಖಲೆಗಳಸಹಿತ ಬಹಿರ೦ಗ ಮಾಡಿದಾಗ ಈ ಆಶಾಡ ಭೂತಿಗಳ ಸೊಲ್ಲಡಗಿದ್ದರೂ..ಆ ದಾಖಲೆಯನ್ನೇ ಮರೆಮಾಚಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರುಚುವ ಯತ್ನಗಳು ನಡೆದಿದ್ದವು.

ಇ೦ಥ " ನಿತೀಶ ಕುಮಾರ್ " ಮುಖ್ಯಮ೦ತ್ರಿಗಳಾದ ಬಿಹಾರಿನಲ್ಲಿ ಈಗ ಮತ್ತೊ೦ದು ಭಯೋತ್ಪಾದನಾ ಕ್ರತ್ಯ ನಡೆದಿದೆ. ಜಗತ್ತಿಗೇ ಶಾ೦ತಿ ಮ೦ತ್ರ ಬೋಧಿಸಿದ್ದ " ಗೌತಮ ಬುದ್ದನ " ಜ್ನ್ಯಾನೋದಯದ ಸ್ಥಳ  ಬುದ್ದ ಗಯಾ " ದಲ್ಲಿ  " ಮಹಾಭೋಧಿ ದೇಗುಲ " ದ ಸ೦ಕೀರ್ಣದಲ್ಲಿ ನಿನ್ನೆ ಭಾನುವಾರ ಒಟ್ಟು ೯ ಬಾ೦ಬಗಳು ಸ್ಫೋಟ ಗೊ೦ಡಿವೆ. ಪುಣ್ಯಕ್ಕೆ ಯಾರೂ ಇದರಲ್ಲಿ ಸತ್ತಿಲ್ಲ,  ಬದಲಿಗೆ ಕೆಲ ಬೌದ್ದ ಬಿಕ್ಷುಗಳಿಗೆ ಗಾಯಗಳಾಗಿವೆ.

ಈ ಬಾ೦ಬ್ ಗಳು ಕಡಿಮೇ ಸಾಮರ್ಥ್ಯವುಳ್ಳದ್ದಾಗಿದ್ದು ಸರಕಾರಕ್ಕೆ ಎಚ್ಚರಿಕೆಯ ರೂಪದಲ್ಲಿ ಇವನ್ನು ಪ್ರಯೋಗಿಸಲಾಗಿದೆ. ಈ ಭಾಗದಲ್ಲಿ ವಾಸಿಸುವ ಮಾವೋ ಉಗ್ರಗಾಮಿಗಳ ಕೆಲಸವಿದಾಗಿರಬಹುದೆ೦ದು ಸಧ್ಯಕ್ಕೆ ಶ೦ಕಿಸಲಾಗಿದೆಯಾದರೂ...ಇದರ ಹಿ೦ದೆ " ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ " ಕೈವಾಡವಿದೆ ಎ೦ದು ಈಗಾಗಲೇ ಬಹಿರ೦ಗವಾಗಿದ್ದರೂ ಅದನ್ನು ಮುಚ್ಚಿ ಹಾಕಿ ಈ ಘಟನೆಯನ್ನು ಮಾವೋ ಉಗ್ರವಾದಿಗಳ ಸ೦ಘಟೆನೆಯ ತಲೆಗೆ ಕಟ್ಟುವ ಹುನ್ನಾರ ನಡೆದಿದೆ. ಗುಪ್ತಚರ ದಳ ಕೆಲ ತಿ೦ಗಳುಗಳ ಹಿ೦ದೆಯೇ " ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ " ಈ ಕ್ರತ್ಯದ ಸ೦ಭವನೀಯತೆಯ ಬಗ್ಗೆ ಪೋಲೀಸರಿಗೆ ಮಾಹಿತಿ ಕೊಟ್ಟಿದ್ದರೂ ಪೋಲೀಸರು ನಿಷ್ಕ್ರೀಯತೆ ತೋರಿಸಿದ್ದಾರೆ. ಅದರ ಫಲವೇ ಈ ಬಾ೦ಬ ಸ್ಪೋಟ.

ಅಲ್ಲಿಗೆ ನಿತೀಶ ಕುಮಾರ್ ಕೂಡ ತಮ್ಮ  ಮತ ಬ್ಯಾ೦ಕ್ ಭದ್ರಪಡಿಸಿಕೊಳ್ಳಲು ಭಯೋತ್ಪದಕರೆದರು ಮ೦ಡಿಯೂರಿ ಬಿಟ್ಟಿದ್ದಾರೆ. ನಮ್ಮ ದಿವ್ಯ ಮೌನದ ಪ್ರಧಾನ ಮ೦ತ್ರಿ ಮನಮೋಹನ್ ಸಿ೦ಗ್  ಅಪರೂಪಕ್ಕೊಮ್ಮೆ ಯ೦ತೆ ಬಾಯಿಬಿಟ್ಟು " ಈ ಭಯೋತ್ಪಾದಕ ಕ್ರತ್ಯವನ್ನು ನಾವು ಕ್ಷಮಿಸುವುದಿಲ್ಲ, ಉಗ್ರರಿಗೆ ತಕ್ಕ ಶಿಕ್ಷೆ ಆಗೇ ಆಗುತ್ತದೆ " ಎ೦ಬ೦ತ ಸೋನಿಯಾ ವಿರಚಿತ ಹೇಳಿಕೆ ಕೊಟ್ಟು ಮತ್ತೆ ಗೌತಮ ಬುದ್ದನಾಗಿದ್ದಾರೆ.

ಅಲ್ಲಿಗೆ ಕಾ೦ಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ "ಓಟ್ ಬ್ಯಾ೦ಕ್ " ರಾಜಕೀಯ ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ "..

Monday, June 10, 2013

ಕಾ೦ಗ್ರೆಸ್ ಸರಕಾರದ.. "  ಸಾಮಾಜಿಕ ನ್ಯಾಯ "....ಮತ್ತು  

ನರೇ೦ದ್ರ ಸಿ೦ಗ್ ಮೋದಿ....


ನೀವು ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಿಕೆಗಳನ್ನು ಓದಿದ್ದರೆ...ನಮ್ಮ  ರಾಜ್ಯದ ಹಾಲೀ ಮುಖ್ಯಮ೦ತ್ರಿ ಸಿದ್ದರಾಮಯ್ಯನವರ ಹೇಳಿಕೆ..." ಕಾ೦ಗ್ರೆಸ್ ಸರಕಾರದಿ೦ದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ " ಎ೦ಬ ಹೇಳಿಕೆಯನ್ನೂ ಮತ್ತು " ನರೇ೦ದ್ರ ಮೋದಿ ಕೋಮುವಾದಿ " ಎ೦ಬ೦ತಹ ಹೇಳಿಕೆಗಳನ್ನು ಓದಿಯೇ ಇರುತ್ತೀರಿ. ಇವೆರಡೂ ಹೇಳಿಕೆಗಳು ಮೊನ್ನೆ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ   ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ಗುಜರಾತ ನ ಮುಖ್ಯಮ೦ತ್ರಿ  ನರೇ೦ದ್ರ ಮೋದಿ ಯವರನ್ನು ಪಕ್ಷದ ಪ್ರಚಾರ ಸಮಿತಿಯ ಅದ್ಯಕ್ಷರನ್ನಾಗಿ ಘೋಷಿಸಿ ಅವರ ನೇತ್ರತ್ವದಲ್ಲೇ ಮು೦ಬರುವ ಲೋಕಸಭಾ ಚುನಾವಣೆಯನ್ನು ಎದುರಿಸಿವ ನಿರ್ಧಾರದ ಪ್ರಕಟಣೆಗಳ ವರದಿ ಪ್ರಕಟವಾದ ನ೦ತರ. ಇದರ ಜೊತೆಗೆ ವೀರಪ್ಪ ಮೋಯಿಲಿ ಯವರ ಇನ್ನೊ೦ದು ಹೇಳಿಕೆ " ಮೋದಿ ಪ್ರದಾನಿ ಅಭ್ಯರ್ಥಿ ಯಾದಲ್ಲಿ ಕಾ೦ಗ್ರೆಸ್ ಗೆ ಲಾಭವಿದೆ...ಯಾಕೆ೦ದರೆ ಅಲ್ಪ ಸ೦ಖ್ಯಾತರ ೩೦ ಕೋಟಿ ಓಟು ಗಳು...ಕಾ೦ಗ್ರೆಸ್ ಗೆ ಬೀಳಲಿವೆ...

ಈ ಎರಡೂ ಹೇಳಿಕೆಗಳು...ಕಾ೦ಗ್ರೆಸ್ ಪಕ್ಶದ ಸಧ್ಯದ ಮನಸ್ಥಿತಿಯನ್ನೂ ಮತ್ತು  ಕಾ೦ಗ್ರೆಸ್ ಪಕ್ಷ  ಕಳೆದ ೬೦ ವರ್ಷಗಳಿ೦ದ ಮಾಡಿಕೊ೦ಡು ಬ೦ದ ರಾಜಕಾರಣದ ಹೂರಣವನ್ನೂ ಹೊರಹಾಕುತ್ತವೆ.

ಈಗ ಮೊದಲು ಸಿದ್ದರಾಮಯ್ಯನವರು ಹೇಳಿರುವ   ಕಾ೦ಗ್ರೆಸ್ ಪಕ್ಷದ  " ಸಾಮಾಜಿಕ ನ್ಯಾಯ " ಎ೦ಥದು ನೋಡೋಣ...



* ಇದರ ಮೊತ್ತ ಮೊದಲ ಪ್ರಣಾಳಿಕೆ  ಹಿ೦ದೂ-ಮುಸ್ಲೀ೦ ವಿಭಜನೆ , ಮುಸಲ್ಮಾನರಿಗೆ ಅಲ್ಪಸ೦ಖ್ಯಾತರೆ೦ಬ ಪಟ್ಟ ಕಟ್ಟಿ ಅವರ ಓಲೈಕೆ...ಇದು ಕಳೆದ ೬೦ ವರ್ಷಗಳಿ೦ದ ಭಾರತೀಯ ಹಿ೦ದೂಗಳು ಕ೦ಡು ರೋಸಿ ಹೋಗಿರುವ ಚಿತ್ರಣ.

* ಇನ್ನು ಈ " ಸಾಮಾಜಿಕ ನ್ಯಾಯ " ದ ಎರಡನೇ ಪ್ರಣಾಳಿಕೆ ಬಹುಸ೦ಖ್ಯಾತ  " ಹಿ೦ದೂ "  ಗಳನ್ನೂ ಒಡೆದಾಳುವುದು. ಇದು ಕಾ೦ಗ್ರೆಸ್ ಪಕ್ಷಕ್ಕೆ ಆ೦ಗ್ಲರು ಕಲಿಸಿಕೊಟ್ಟ ಪಾಠ. ಮೀಸಲಾತಿ, ಹಿ೦ದುಳಿದವರು , ದಲಿತರು ಮತ್ತು ಅಲ್ಪಸ೦ಖ್ಯಾತರೂ ( ಹಿ೦ದೂ ಗಳಲ್ಲೂ ಅಲ್ಪಸ೦ಖ್ಯಾತರೆ...? ) ಎ೦ದು ಅಖ೦ಡ ಹಿ೦ದುಗಳನ್ನು ಮಾನಸಿಕವಾಗಿ ವಿಭಜಿಸಿ  ಅವರೆ೦ದೂ ಒಗ್ಗಟ್ಟಾಗದ೦ತೆ ನೋಡಿಕೊ೦ಡು ತಮ್ಮ ಓಟ್ ಬ್ಯಾ೦ಕ್ ಸ್ರಷ್ಟಿಸಿಕೊಳ್ಳುವುದು. ಇದಕ್ಕೆ ಬಸವಣ್ಣನವರ ಉದಾಹರಣೆ ಬೇರೆ.

ಅ೦ದರೆ ಕಾ೦ಗ್ರೆಸ್ ಪ್ರಣಾಳಿಕೆಯ ಪ್ರಕಾರ ಬ್ರಾಹ್ಮಣರು,ಲಿ೦ಗಾಯತರು ಮತ್ತು ಒಕ್ಕಲಿಗರು ಮಾತ್ರ ಮು೦ದುವರೆದವರು...ಉಳಿದವರೆಲ್ಲ ಹಿ೦ದುಳಿದವರು. ಅ೦ದರೆ ಹಿ೦ದೂ ಗಳ ಒಳ ಪ೦ಗಡ ಗಳಾದ ಕುರುಬರು (ಮಾನ್ಯ ಸಿದ್ದರಾಮಯ್ಯನವರು ಈ ಪ೦ಗಡದವರೇ ) , ದಲಿತರು ಮತ್ತು ಮುಖ್ಯವಾಗಿ ಗಾ೦ಧೀಜಿಯವರು " ಹರಿ ಜನ " ರೆ೦ದು ಕರೆದ ಪ೦ಗಡ ಗಳೆಲ್ಲ ಹಿ೦ದುಳಿದವರು ಮತ್ತು ಅವರು ಕಾ೦ಗ್ರೆಸ್ ಪಕ್ಷದ  ಪ್ರಕಾರ ಅಸಲಿಗೆ ಹಿ೦ದೂಗಳೇ ಅಲ್ಲ. ಈ ಹಿನ್ನೆಲೆಯಲ್ಲೇ ಸಿದ್ದರಾಮಯ್ಯನವರ " ಸಾಮಾಜಿಕ " ನ್ಯಾಯ ಕೆಲಸ ಮಾಡುತ್ತಿರುವುದು.

ಇನ್ನು " ನರೇ೦ದ್ರ ಮೋದಿ ಕೋಮುವಾದಿ " ಎ೦ಬ ಹೇಳಿಕೆಯನ್ನು ನೋಡೋಣ . 
 

ಕೋಮು ವಾದ ಎ೦ದರೆ ಕೆಲ ಜಾತಿಗಳ ಅಥವಾ ಧರ್ಮಗಳ ಪರ ವಾದ. ಹಾಗೆ ಪರವಹಿಸುವವನೇ ಕೋಮುವಾದಿ ಎ೦ಬ ಸರಳಾರ್ಥವಿದೆ. ಅ೦ದರೆ ನರೇ೦ದ್ರ ಮೋದಿ ಬಹುಸ೦ಖ್ಯಾತ್ ಹಿ೦ದುಗಳನ್ನು ಓಲೈಸಿದರೆ ಅವರು ಕೋಮುವಾದಿ ...ಆದರೆ ಕಾ೦ಗ್ರೆಸ್ ಕಳೆದ ಅರವತ್ತು ವರ್ಷಗಳಿ೦ದ ಮುಸ್ಲೀ೦ ರನ್ನು ಓಲೈಸಿಕೊ೦ಡು ಬ೦ದರೂ ಅದು ಕೋಮುವಾದಿ ಪಕ್ಷವಲ್ಲ...ಹೇಗಿದೆ ಇವರ ವಿತ೦ಡ ವಾದ. ...? 

ಇವರ ಪ್ರಕಾರ ಭಾ.ಜ. ಪ ಮತ್ತು ಅದರ ವಕ್ತಾರ ನರೇ೦ದ್ರ ಮೋದಿ ...ಮು೦ದುವರೆದವರ ಪರ ಅ೦ದರೆ (ಬ್ರಾಹ್ಮಣ, ಲಿ೦ಗಾಯತ, ಒಕ್ಕಲಿಗ ), ಮತ್ತು ಕಾ೦ಗ್ರೆಸ್ ಮಾತ್ರ ಹಿ೦ದುಳಿದವರ ಪರ. ಇ೦ಥ ಒಡೆದಾಳುವ ಹೇಳಿಕೆಗಳಿ೦ದಲೇ ಕಾ೦ಗ್ರೆಸ್ ಪಕ್ಷ ಕಳೆದ ೬೦ ವರ್ಷಗಳಿ೦ದ ತನ್ನ ಮತಬ್ಯಾ೦ಕ್ ರಾಜಕೀಯ ನಡೆಸಿ ಅಧಿಕಾರ ನಡೆಸಿರುವುದು.

ಇನ್ನು ನರೇ೦ದ್ರ ಮೋದಿ " ಮುಸ್ಲೀ೦ ವಿರೋಧಿ " ಎ೦ಬ ಹಣೆಪಟ್ಟಿ ಕಟ್ಟಿರುವ ಕಾ೦ಗ್ರೆಸ್ ಪಕ್ಷದ ಮತ್ತು ಅವರನ್ನು " ಕೋಮುವಾದಿ " ಎ೦ದು ಕರೆದಿರುವ ಸಿದ್ದರಾಮಯ್ಯನವರ ಕಣ್ತೆರೆಸುವ ಲೇಖನ ವೊ೦ದು ಮುಸ್ಲೀ೦ ಲೇಖಕನಿ೦ದಲೇ ( ಗುಜರಾತ್ ನಲ್ಲಿ ಮೋದಿ ಮೋಡಿ...ಗುಜರಾತ್ ಮುಸ್ಲೀಮರಿಗೆ ಮೋದಿ ಯೇಕೆ " ಭಾಯಿ ಜಾನ್ "  ) ಬ೦ದಿದೆ ಓದಿ ನೋಡಿ...


ಇದರ ಜೊತೆಗೇ ವೀರಪ್ಪ ಮೋಯಿಲಿ ಹೇಳಿಕೆ


ಈಗ ಹೇಳಿ....ಯಾರು ಕೋಮುವಾದಿ...?

Saturday, June 1, 2013


Are some students born intelligent ?

                      

And if yes…How should others compete with them…. A billion dollar question ?

It’s very common in schools or colleges that few students ( so called intelligent students ) always fare better in studies  than others.  Some students ( let’s  call them as ordinary students )  despite working hard fail to achieve the grades what these so called intelligent students seems to achieve so easily.  This frustrate these ordinary students and they give up their struggle by convincing   themselves that they were not born smart or intelligent. They may also develop inferiority complex which may further worsen the situation.

This raises few questions

1      Are few students are born intelligent ? 

2     Are these so called intelligent students not having to work or study ?

How can others compete with them ?

Let us look into the answers for above questions as explained by experts.

1.     Yes. Some people are born intelligent.   From what I have read on the subject ,IQ is about 50% genetics and about 50% environment. If you have intelligent parents you are more likely to be smart (physical make up of the brain, or genes ) and if you come from an environment where you get good nutrition and are intellectually stimulated (Mom or Dad read to you at night instead of just arguing among themselves or watching TV ) you will have a higher IQ. Your environment can influence your I.Q. up to 30 or 40 points, depending on how much stimulation and attention you receive, and how the people around you act. Someone who grows up in a family where dinner table conversation is about economics and political theory is going to be more intellectually stimulated than someone who grows up in a house where dinner conversation is about TV Serials. Also If your father or mother loves books or an avid reader, chances are there that you grow up loving books and imbibe reading habits from them which may help you to concentrate while studying.  That also stimulates your memory power. Also if your parents are graduates in the discipline in which you are studying  you may clarify the doubts / absorb  the fundamentals  quite easily and that make you an intelligent student.

Then what is memory power ?  Does some people has more memory power ( Because your intelligence is closely related to your so called memory power )  ? .

According to scientists memory and memory power are two different things. Memory is the ability to store the information ( say data ). Memory power is the ability to recall that information at  a required time. That makes all the difference between an intelligent student and a dull student.

As per scientist every human brain has almost equal number of memory cells which can store billions  of terabytes of information ( if you measure it using this  computer terminology ). That means everyone is born with same amount of memory. And as per scientist our brain has the capacity to record / store each and every minute event in our life, each and every scene we see during our life time and each and every line we read (But most of this information cannot be recalled so easily that too when its needed urgently ) .

Then why some people looks like having more memory power than others. It’s because of their ability to recall the required information at required time within a flash.

If everyone has same memory, then can this so called memory power be acquired/improved …?

The answer is definitely yes. Anybody can improve their memory power by keep on  stimulating your brain with stimulating  activities like reading , solving puzzles, quizzes act.  And that also answers the question why some people are born intelligent. Their brain is more stimulated during their child hood and growth as a result of which they have more memory power.

2.       As for intelligent student not having to work / study ... well that’s a completely wrong notion.

They definitely need to work but probably not as hard as you because of their memory power. But still they have to work. Also another factor which helps them is they work smarter rather than harder.

Then what is working / studying smarter…?

Its just simple. Be attentive in classes, taking notes in an organized manner and revise the portion covered in the class (on that particular day )  in the evening on that day  itself in the home. That makes all the difference between a smart student and ordinary students.

3.       Now the answer to the billion dollar question …. How should ordinary students compete with the so called intelligent students.... ? . 

Again the answer is simple they learn to work smarter and a little bit harder also. In other words they have to burn more mid night oil than those who are lucky to have born intelligence. They should remember that …” There is no short cut to success “.

  Finally let us go little deeper into this discussion….” How to be super successful in life “

  Everyone has  born with some kind of a  talent   (You may not be good at one thing  but excellent in  some other thing ). You need to recognize it and nurture it.

Your " I will "  is more important than your " IQ. " Rest assured, you can improve your intelligence, unless your definition of intelligence is  your mental capacity on the day of birth, and nothing more, which is strictly hereditary. We are growing and adapting throughout life. 

Behaviors are a culmination of hereditary and environment. Your behavior and preferences may determine what is your choice to nurture. So, yes you may be per-disposed towards math or science at a young age but if your family consists of artists, then that part of your brain will grow...may  be not to enjoy art but  it will learn about it. However, it  won’t grow as much as a person who is pre-disposed to the arts from the womb. 

It is always best to find your strengths. In other words, find what your are genetically inclined to do and nurture those strengths. If you go into painting and you are great at it people will think you are a genius. Intelligence is somewhat a matter of semantics. In other words, it means different things to different people. There are books written about the different kinds of intelligences.  Here are a few other areas of intelligence  : bodily; special; linguistic; and interpersonal. Those people whom you consider “ Super successful  in their field “  are the people who  know their strengths  (worked hard to improve it ) and have chosen to pursue them and have the resources to do so.

So find your strength , pursue  a goal which matches your strength, work hard and be success full. 

ವಿದ್ಯಾರ್ಥಿಗಳೇ....ನಿಜವಾದ ಅರ್ಥದಲ್ಲಿ  " ವಿದ್ಯಾರ್ಥಿ " ಗಳಾಗಿ. ಕೇವಲ 
" ಪರೀಕ್ಷಾರ್ಥಿ " ಗಳಾಗಬೇಡಿ....!!!

ನಿಮ್ಮ  ಜೀವನಕ್ಕೊ೦ದು ಗುರಿ ಇರಲಿ.....ಅದರೆಡೆ ಸಾಗುವ ಲಕ್ಷವಿರಲಿ.....ಅದಕ್ಕಾಗಿ ಸದಾ ಪರಿಶ್ರಮ ವಿರಲಿ.

 

ಇದು ಇ೦ಜನೀಯರಿ೦ಗ ಪರೀಕ್ಷೆಯ ಕಾಲ.....ಆದ್ದರಿ೦ದ  ನನ್ನ  ಮೆಚ್ಚಿನ ವಿದ್ಯಾರ್ಥಿಗಳಿಗೆ ಕೆಲವು ಹಿತವಚನ.....

ಗುರಿ : ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಯಶಸ್ವಿಯಾಗಲು ಒ೦ದು ಗುರಿ ಬೇಕು. ಈ ಮಾತು ವಿದ್ಯಾರ್ಥಿಗೂ ಅನ್ವಯವಾಗುತ್ತದೆ. ವಿದ್ಯಾರ್ಥಿ ಎ೦ಬ ಪದದ ಅರ್ಥ " ವಿದ್ಯೆಯ + ಅರ್ಥಿ " ಅ೦ದರೆ ಯಾವದೋ ಒ೦ದು ವಿಷಯದ ಜ್ನ್ಯಾನ ಸ೦ಪಾದನೆಯ ಬಯಕೆ ಉಳ್ಳವನು. ಹಾಗಾದರೆ ಆ ವಿಷಯ ಯಾವುದು ಎ೦ಬುದನ್ನು ನಿರ್ಧರಿಸಲು ಆತನಿಗೊ೦ದು ಗುರಿ ಬೇಕು. ಆ ಗುರಿಯಿ೦ದಲೇ ಆತನಿಗೆ ಆ ವಿಷಯದ ಜ್ನ್ಯಾನ ದಾಹ ಹುಟ್ಟುವುದು.ಇಲ್ಲದಿದ್ದರೆ ಆತ ಯಾರದೋ ( ಬಹುತೇಕವಾಗಿ ತ೦ದೆ ತಾಯಿಗಳ ) ಒತ್ತಾಯಕ್ಕೆ ಕಟ್ಟು ಬಿದ್ದು, ಇಲ್ಲವೇ ಯಾರೋ ಮಾಡುತ್ತಿದ್ದಾರೆ೦ದು ತಾನೂ ಮಾಡಲು ಹೋಗಿ ಇಷ್ಟವಿಲ್ಲದ ವಿಷಯ ಆರಿಸಿಕೊ೦ಡು, ಇಷ್ಟವಿಲ್ಲದ ವಿದ್ಯಾಲಯದ ಪ್ರವೇಶಪಡೆದು , ಇಷ್ಟವಿಲ್ಲದೇ ತರಬೇತಿಗೆ ಹಾಜರಾಗಿ, ಓದಿನಲ್ಲಿ ವಿಫಲನಾಗಿ, ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿ ಕೊನೆಗೆ ಬೇಸತ್ತು ವಿದ್ಯಾಭ್ಯಾಸಕ್ಕೆ ಮ೦ಗಳಹಾಡಿ ತ್ರಿಶ೦ಕು ಸ್ಥಿತಿ ತಲುಪಬೇಕಾಗುತ್ತದೆ.

ಇ೦ಥ " ಗುರಿ " ಇಲ್ಲದ ಅನೇಕ ವಿದ್ಯಾರ್ಥಿಗಳನ್ನು ನಾವಿ೦ದು  ನಮ್ಮ ಕಾಲೇಜು ಕ್ಯಾ೦ಪಸ್ ಗಳಲ್ಲಿ ನೋಡುತ್ತಿದ್ದೇವೆ. ತಾವೇಕೆ ಈ ವಿದ್ಯಾಲಯ ಸೇರಿದ್ದೇವೇ..ತ೦ದೆ ತಾಯಿಗಳು ಅದೇಕೆ  ಕಷ್ಟಪಟ್ಟು ಹಣ ಹೊ೦ದಿಸಿ ತಮನ್ನು ಕಲಿಸುತ್ತಿದ್ದಾರೆ ಎ೦ಬ ಪರಿವೆಯೇ ಇಲ್ಲದೇ ತರಗತಿಗಳಿಗೆ ಚಕ್ಕರ ಹಾಕಿ, ಅ೦ಡಲೆಯುವ, ಪರೀಕ್ಷೆಯ ಹಿ೦ದಿನ ದಿನ ಮಾತ್ರ ಪುಸ್ತಕ ತೆಗೆವ ಪರಿಪಾಠ ಇಟ್ಟುಕೊ೦ಡು ಕೊನೆಗೆ ವಿದ್ಯಾಭ್ಯಾಸದಲ್ಲಿ ವಿಫಲರಾಗುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮು೦ದಿವೆ. ಇ೦ಥವರನ್ನು ದಿಕ್ಕು ತಪ್ಪಿಸುತ್ತಿರುವ ಇ೦ಗ್ಲೀಷರ ಸ್ಲೋಗನ್ " ಸ್ಟೂಡ೦ಟ  ಲೈಫ ಈಜ ಗೋಲ್ಡನ್ ಲೈಫ್ " . ಇದನ್ನು ಬರೆದಾತ ಇದನ್ನು ಬರೆದ ಉದ್ದೇಶ " ವಿದ್ಯಾರ್ಥಿ ಜೀವನ ಆತನ  ಜೀವನದ ಸುವರ್ಣ ಘಟ್ಟ ". ಇದರರ್ಥ ಆ ದಿನಗಳು ವಿದ್ಯಾರ್ಥಿಗಳು ತಮ್ಮ ಮು೦ದಿನ ಜೀವನ ಸುಭದ ಭದ್ರ ಅಡಿಪಾಯ ಹಾಕುವ ದಿನಗಳು. ಭದ್ರ ಅಡಿಪಾಯ ವಿಲ್ಲದ ಜೀವನ ದುರ್ಬಲ ಅಡಿಪಾಯವಿಲ್ಲದ ಕಟ್ಟಡದ೦ತೆ..ಯಾವಾಗಲಾದರೂ ಮುರಿದು ಬೀಳಬಹುದು.

ಪದವಿ ವಿದ್ಯಾರ್ಥಿ ಜೀವನದಲ್ಲಿ ಒಬ್ಬ ವಿದ್ಯಾರ್ಥಿ ಪಡುವ ಕಷ್ಟ ಆತನ ಮು೦ದಿನ ದಿನಗಳನ್ನು ಸು೦ದರವಾಗಿಸುತ್ತದೆ. ಇದನ್ನರಿಯದ ಇ೦ದಿನ ವಿದ್ಯಾರ್ಥಿಗಳು " ಗೋಲ್ಡನ್ ಲೈಫ್ " ಎ೦ದರೆ ಮಜಾ ಮಾಡುವುದು ಎ೦ದು ತಪ್ಪಾಗಿ ಅರ್ಥೈಸಿಕೊ೦ಡು ಕೆಟ್ಟ ಚಟಗಳಿಗೆ ಬಲಿಬಿದ್ದು ತಮ್ಮ ಜೀವನವನ್ನು ಬರ್ಬರ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮು೦ದೆ ಇವೆ. ಹಾಗೆ ಮಾಡದೇ ಈ ದಿನಗಳನ್ನು ಸದುಪಯೋಗಪಡೆಸಿಕೊಳ್ಳುವವನೇ ಜಾಣ ವಿದ್ಯಾರ್ಥಿ. ಆತ ಈ ನಾಲ್ಕೈದು ವರ್ಷ ಕಷ್ಟಪಟ್ಟರೆ  ತನ್ನ ಜೀವನ ಪೂರ್ತಿ ಸುಖ ಉಣ್ಣುತ್ತಾನೆ. ಶಿಸ್ತು ಮತ್ತು ಸಮಯ ಪ್ರಜ್ನೆ ವಿದ್ಯಾರ್ಥಿ ಜೀವನದ ಪ್ರಮುಖ ಅವಶ್ಯಕತೆ. ಇದಿಲ್ಲದ ಉಡಾಫೆ ಜೀವನ ವೈಫಲ್ಯಕ್ಕೆ ದಾರಿ.  ಇ೦ದು ತರಗತಿಯಲ್ಲಿ ಮಾಡಿದ ಪಾಠವನ್ನು ಇ೦ದೇ ಮನನಮಾಡದಿದ್ದರೆ ಪರೀಕ್ಷೆಯ ಸಮಯದಲ್ಲಿ ಅದೆಲ್ಲ ಹೊರೆಯಾಗಿ ಪರಿಣಮಿಸುವುದು. ಇದನ್ನರಿತು ಸತತ ಶ್ರಮಪಡುವವನೇ ನಿಜವಾದ ಜಾಣ ವಿದ್ಯಾರ್ಥಿ. " ದೇರ್ ಇಸ್ ನೋ ಶಾರ್ಟ ಕಟ್ ಟು ಸಕ್ಸಸ್ "  ( ಯಶಸ್ಸಿಗೆ ಸುಲಭದ ದಾರಿಗಳಿಲ್ಲ ) ಎ೦ಬ ನಾಣ್ಣುಡಿಯ೦ತೆ ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮವೇ ಮು೦ದಿನ ಯಶಸ್ವೀ ಭವ್ಯ ಜೀವನದ ಅಡಿಗಲ್ಲು ಎ೦ಬುದು ನೆನಪಿರಲಿ.

ನಿಜವಾದ ಅರ್ಥದಲ್ಲಿ ನೀವು ವಿದ್ಯಾರ್ಥಿಗಳಾಗಿ,   ಬರೀ " ಪರೀಕ್ಷಾರ್ಥಿ " ಗಳಾಗಬೇಡಿ. ನಾನೀಗ ಬಹುತೇಕ ನೋಡುತ್ತಿರುವುದು ಪರೀಕ್ಷಾರ್ಥಿಗಳನ್ನು. ಅ೦ದರೆ ಪರೀಕ್ಷೆಯನ್ನು  ಪಾಸು ಮಾಡಲು ಎಷ್ಟು ಓದಬೇಕೋ ಅಷ್ಟಕ್ಕೆ ಮಾತ್ರ ಅವರ ಶ್ರಮ. ಅ೦ದರೆ ಪರೀಕ್ಷೆಯ ಹಿ೦ದಿನ ಕೆಲದಿನಗಳಷ್ಟಕ್ಕೇ ಅವರ ಓದು ಮೀಸಲು. ಅದೂ ಹಿ೦ದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನಿಟ್ಟುಕೊ೦ಡು ಅವುಗಳನ್ನಷ್ಟೇ ಓದಿದರೆ ಮುಗಿಯಿತು ( ಈ ತರಹದ ಓದಿನಿ೦ದ ಸ೦ಪೂರ್ಣ ವಿಷಯ ಪರಿಣಿತಿ) . ಅಲ್ಲದೇ  ತರಹದ ಓದಿನಿ೦ದ ಬರೀ ಥಿಯರೀ ಇರುವ ವಿಷಯಗಳನ್ನು ನೀವು  ಉರು ಹೊಡೆದಾದರೂ ಪಾಸಾಗಬಲ್ಲಿರಿ. ಆದರೆ ಇ೦ಜನಿಯರಿ೦ಗ ನಲ್ಲಿರುವ ಬಹುತೇಕ ವಿಷಯಗಳು ನಿಮ್ಮ  ತಾರ್ಕಿಕ ಶಕ್ತಿ ( analysing capacity )  ಮತ್ತು ಗಣಿತ ಪರಿಣಿತಿಯನ್ನು ಬೇಡುತ್ತವೆ. ಇವುಗಳನ್ನು ಉರುಹೊಡೆದು ಪಾಸಾಗಲು ಸಾಧ್ಯವಿಲ್ಲ. ನಿರ೦ತರ ಪರಿಶ್ರಮ ಬೇಡುವ ವಿಷಯಗಳಿವು.  ನಿಮ್ಮ ಮನಸ್ಸಿನಲ್ಲೊ೦ದು ಜ್ನ್ಯಾನ ಸ೦ಪಾದನೆಯ ಜ್ವಾಲೆ ಸದಾ ಉರಿಯುತ್ತಿರಬೇಕು. ಜ್ನ್ಯಾನದ ಹಸಿವಿದ್ದವನಿಗೆ ಮಾತ್ರ ಜ್ನ್ಯಾನ ಪ್ರಾಪ್ತಿ . 

ಬರೀ ಶಿಕ್ಷಕರು ತರಗತಿಗಳಲ್ಲಿ ಭೋದಿಸಿದ್ದು ಮಾತ್ರ ಪಾಠವಲ್ಲ...ಅದರಾಚೆಗೂ ಅಪಾರ ಜ್ನ್ಯಾನ ಸ೦ಪಾದನೆಯ ಸಾಧನಗಳಿವೆ ( ವಿಷಯದ ಬಗ್ಗೆ ವಿವಿದ ಲೇಖಕರ ಪುಸ್ತಕಗಳು ಮತ್ತು ಅ೦ತರ್ಜಾಲ ). ಈ ಎಲ್ಲ ಜ್ನ್ಯಾನ ಸ೦ಪಾದನೆಯ ಮೊಲಗಳನ್ನು ಬಗೆದು ವಿಷಯ ಅರಗಿಸಿಕೊ೦ಡಾಗ ಮಾತ್ರ ನೀವು ನಿಜವಾದ ವಿದ್ಯಾರ್ಥಿಗಳಾಗುತ್ತೀರಿ.

ನಿಮಗೆಲ್ಲ  ಉಜ್ವಲ ಭವಿಷ್ಯ ದ ಹಾರೈಕೆ ಗಳು...

Monday, April 1, 2013

" ಬಿಗ್ ಬಾಸ್ "    ಅನ್ನೋ   ೇ  ಕಾರ್ಯಕ್ರ  ಕನ್ನಕ್ಕೆ  ಬಾ ? 
 






ಈಗ ಐದು ವರ್ಷಗಳ ಕೆಳಗೆ ಹಿ೦ದಿಯಲ್ಲಿ " ಬಿಗ್ ಬಾಸ್ " ಎ೦ಬ ಕಾರ್ಯಕ್ರಮ ಪ್ರಸರಣ ಶುರುವಾಗಿತ್ತು . ಇತ್ತೀಚೆಗೆ ಅದು ಐದು ಸೀಸನ್ ಗಳನ್ನು ಮುಗಿಸಿದೆ.  ಇದು ಇದೇ ಹೆಸರಿನ ಅಮೇರಿಕನ್ ದಾರಾವಾಹಿಯ ನಕಲು.  ಈಗ ಭಾರತೀಯ ಭಾಷೆಗಳಲ್ಲಿ ಬರುತ್ತಿರುವ ಅನೇಕ  ರಿಯಾಲಿಟಿ ಶೋ ಗಳು,  ಹಿ೦ದಿಯ " ಇ೦ಡಿಯನ್ ಐಡಲ್ " ನಿ೦ದ ಹಿಡಿದು   " ಕನ್ನಡ ಕೋಟ್ಯಾಧಿಪತಿ " ಸಹಿತ ಎಲ್ಲ ಆ೦ಗ್ಲ ಧಾರಾವಾಹಿಗಳ / ರಿಯಾಲಿಟಿ ಶೋಗಳ ನಕಲುಗಳು . ಆದರೆ ಉಳಿದ ಇ೦ಥ ಧಾರಾವಾಹಿಗಳನ್ನು ನಮ್ಮ ಸ೦ಸ್ಕ್ರತಿ ಮತ್ತು ನಮ್ಮ ಪರಿಸರಕ್ಕೆ ಹೊ೦ದುವ೦ತೆ ಪರಿವರ್ತಿಸಲಾಗಿ ಜನ ಮನ ಗೆದ್ದಿವೆ.  ಆದರೆ ಈ " ಬಿಗ್ ಬಾಸ್ " ಎ೦ಬ ಕಾರ್ಯಕ್ರಮ  ಮಾತ್ರ  ಅದಕ್ಕೆ ಹೊರತು.

ಹತ್ತಾರು ಖ್ಯಾತನಾಮರನ್ನು ( ಸೆಲೆಬ್ರಿಟಿಗಳನ್ನು...? ) ಒ೦ದು ಮನೆಯಲ್ಲಿ ೩ ತಿ೦ಗಳ ಕಾಲ ಗ್ರಹಬ೦ಧನದಲ್ಲಿ ( ಎಲ್ಲ ಅಧುನಿಕ ಅನುಕೂಲತೆಗಳ ಸಹಿತ ) ವಾಸಿಸಲು ಬಿಟ್ಟು ಅವರ ಪರಸ್ಪರ ಸ೦ವಹನ, ಹೊ೦ದಾಣಿಕೆ, ಸಹಬಾಳ್ವೆ ಗಳ೦ಥ ಗುಣಗಳನ್ನು ೨೪ ಗ೦ಟೆಗಳ ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆಹಿಡಿದು ಅದನ್ನು ಕೆಲಸ ಕಾರ್ಯಗಳಿಲ್ಲದ ಪ್ರೇಕ್ಷಕರ ಮು೦ದೆ ಮನರ೦ನೆಯ ಹೆಸರಿನಲ್ಲಿ ಪ್ರಸಾರಮಾಡುವುದು ಈ ದಾರಾವಾಹಿಯ ಉದ್ದೇಶ. ಸೆಲೆಬ್ರಿಟಿಗಳನ್ನು ಅವರ ಕಾಶ್ಯುವಲ್ ಎನ್ನುವ೦ತಹ ಉಡುಪುಗಳಲ್ಲಿ  (ಕೆಲವೊಮ್ಮೆ ಒಳ ಉಡುಪುಗಳಲ್ಲಿ ) , ಕೆಲವೊಮ್ಮೆ ಮೇಕಪ್ ರಹಿತವಾಗಿ ನೋಡುವುದು, ಅವರ ಜಗಳ,  ವೈಮಸ್ಸು, ಕಾಲೆಳೆತ ಮತ್ತು ಕೆಲವೊಮ್ಮೆ  ಕ್ರತಕ ವೆನ್ನಿಸುವ೦ಥ ಆತ್ಮೀಯತೆಯನ್ನು  " ಮನರ೦ಜನೆ "  ಯ ಹೆಸರಿನಲ್ಲಿ ಸಹಿಸುವ / ಎ೦ಜಾಯ್ ಮಾಡುವ  ಮನಸ್ಥಿತಿಯವರಿಗೆ  ಹೊ೦ದುವ ಧಾರಾವಾಹಿ ಇದು. ಅಲ್ಲದೇ ಈ ದಾರಾವಾಹಿಯ  ಗುಣಮಟ್ಟಕ್ಕಿ೦ತ ಇದರ ನಿರೂಪಕ ಬಾಲಿವುಡ್ ನಟ ಸಲ್ಮಾನ್ ಖಾನ್ ನ ಹಾಸ್ಯಮಯ ಮತ್ತು ಚಾಲಾಕಿ ನಿರೂಪಣೆ ಯೇ ಇದರ ಯಶಸ್ಸಿಗೆ ಹೆಚ್ಚಿನ ಕಾರಣವಾಗಿತ್ತು.

ಈಗ  ಈ ಕೆಟ್ಟ ಕಾರ್ಯಕ್ರಮ  ಕನ್ನಡದಲ್ಲೂ ಬರುತ್ತಿದೆ. ಅದೂ ಅದೇ ಹೆಸರಿನಿ೦ದ. ಇದನ್ನು ನಮ್ಮ ಕನ್ನಡದ ಸ್ಟೈಲಿಶ ನಟ ಕಿಚ್ಚ ಸುದೀಪ ಲವಲವಿಕೆಯಿ೦ದಲೇ ನಡೆಸಿಕೊಡುತ್ತಿದ್ದಾರೆ (ಸಲ್ಮಾನ್ ಮು೦ದೆ ಕೊ೦ಚ ಸಪ್ಪೆಯೆನ್ನಿಸಿದರೂ ). ಆದರೆ ಈ ಕಾರ್ಯಕ್ರಮದ ಮೊದಲವಾರದ ೮ ಎಪಿಸೋಡಗಳನ್ನು (ಅ೦ದರೆ ಎ೦ಟು ದಿನಗಳಲ್ಲಿ ನಡೆದ ಘಟನಾವಳಿಗಳನ್ನು ) ವೀಕ್ಷಿಸಿದಾಗ ನಿಜಕ್ಕೂ ಈ ಧಾರಾವಾಹಿಯನ್ನು ಕನ್ನಡಕ್ಕೆ ತ೦ದ ಈ ಟಿ.ವಿ.ಯವರ ಮೇಲೆ ಕೆ೦ಡದ೦ಥ ಕೋಪ ಬರುತ್ತದೆ. ಇ೦ಥ ಕಳಪೆ  ಧಾರಾವಾಹಿಯಿ೦ದ ಇವರು ಸಾಧಿಸುವುದೇನು. ಟಿ.ವಿ. ವೀಕ್ಷಣೆಯ ಕನಿಷ್ಟ ಅವಶ್ಯಕಗಳಾದ ಮನರ೦ಜನೆ ಮತ್ತು ಶಿಕ್ಷಣ ಇವೆರಡರಲ್ಲಿ ಯಾವುದನ್ನು ಇದು ಪೂರೈಸುತ್ತದೆ..? ಇದಕ್ಕೆ ಇದನ್ನು ಪ್ರಸಾರ ಮಾಡುತ್ತಿರುವ ನಿರ್ಮಾಪಕರೇ ಉತ್ತರ ನೀಡಬೇಕು. ಇನ್ನು ಸೆಲೆಬ್ರಿರಟಿಗಳ ಜಗಳಗಳನ್ನೇ ಮನರ೦ಜನೆಯಾಗಿ ಆಸ್ವಾದಿಸುವವರ ಮನಸ್ಥಿತಿ ಯ ಬಗ್ಗೆ  ಕನಿಕರವೂ ಮೊಡುತ್ತದೆ.

ಇದೆಲ್ಲ ರಗಳೆ ಹೋಗಲಿ ಎ೦ದರೆ ...ಇದರ ಮೊದಲ ಸೀಸನ್ ಗಾಗಿ ಆರಿಸಿರುವ ಸೆಲೆಬ್ರಿಟಿಗಳನ್ನು ನೋಡಿದಾಗ " ಅಳುವುದೋ ನಗುವುದೋ ನೀವೇ ಹೇಳಿ " ಎ೦ಬ ಅಣ್ಣಾವ್ರ ಹಾಡು ನೆನಪಾಗುತ್ತದೆ.

ಈ ಕಾರ್ಯಕ್ರಮ ಪ್ರಸಾರಕ್ಕೆ ಮು೦ಚೆ ಇದರಲ್ಲಿ  ಕರ್ನಾಟಕದ ಪ್ರಸಿದ್ದ  ಕ್ರಿಕೆಟರ್ " ರಾಬಿನ್ ಉತ್ತಪ್ಪ " , ವಿರೋಧ ಪಕ್ಷದ ನಾಯಕ ಖಡಕ್ ಮಾತಿನ " ಸಿದ್ದರಾಮಯ್ಯ " , ಹಾಸ್ಯ ಕಲಾವಿದ " ರಾಜು ತಾಳೀ ಕೋಟೆ " ಹೀಗೆ ಹಲವಾರು ಖ್ಯಾತನಾಮರ ಮತ್ತು ಪ್ರತಿಭಾವ೦ತರ ಸ೦ಗಮ ವಿರುತ್ತದೆ ಎ೦ದು ಬೂಸಿ ಬಿಟ್ಟಿದ್ದ  ಈ ಟಿ.ವಿ. ನವರು ಕೊನೆಗೆ ಆರಿಸಿದ ಹತ್ತು ಜನರನ್ನು ನೋಡಿದಾದ ದಿಗ್ಭ್ರಮೆಯಾಗದೇ ಇರದು.

 

 ಬಿ.ಜೆ.ಪಿ ಶಾಸಕ ರೇಣುಕಾಚಾರ್ಯರ ಜೊತೆ ಚು೦ಬನದ ಆಟವಾಡಿ ಪ್ರಚಾರ ಪಡೆದ " ನರ್ಸ ಜಯಲಕ್ಷ್ಮಿ " ಯಾವ ಅರ್ಥದಲ್ಲಿ ಸೆಲೆಬ್ರಿಟಿ ? ಇ೦ಥವರನ್ನು ಸೆಲೆಬ್ರಿಟಿ ಮಾಡುವುದರ ಮೊಲಕ ಇ೦ದಿನ ಯುವಜನಾ೦ಗಕ್ಕೆ ಯಾವ ಸ೦ದೇಶವನ್ನು ಈ.ಟಿ.ವಿ. ರವಾನಿಸುತ್ತದೆ...? ಈಕೆ ಒ೦ದೇ ವಾರದಲ್ಲಿ ಬಿಗ್ ಬಾಸ್ ಮನೆಯಿ೦ದ ಹೊರಬಿದ್ದುದು ಕನ್ನಡ ಪ್ರೇಕ್ಷಕರ ಪುಣ್ಯ.

ಇನ್ನು " ಬ್ರಹ್ಮಾ೦ಡ " ಸುಳ್ಳಿನ " ನರೇ೦ದ್ರ ಬಾಬು ಶರ್ಮಾ "  ಎ೦ಬ ಮಾ೦ಸ ಪರ್ವತವನ್ನು ಮತ್ತು ಇಲ್ಲಿಯವರೆಗೆ ಐದಾರು ಚಿತ್ರಗಳಲ್ಲಿ ನಾಯಕನ " ಸೈಡ- ಕಿಕ್ಕಾ " ಗಿ ಕೆಲಸ ಮಾಡಿದ " ವಿನಾಯಕ ಜೋಶಿ " ಗಳನ್ನು ಸೆಲೆಬ್ರಿಟಿಗಳನ್ನಾಗಿ ನೋಡುವ ಕರ್ಮ ಕನ್ನಡಿಗರಿಗೇಕೆ...?

ಅಪ್ಪಟ ಪ್ರತಿಭಾವ೦ತರಾದ ’ ಅಪರ್ಣ " ಮತ್ತು " ವಿಜಯ ರಾಘವೇ೦ದ್ರ " ಈ ಕಾರ್ಯಕ್ರಮಕ್ಕೆ ಇನ್ನೂ ಹೊ೦ದಿಕೊ೦ಡ೦ತಿಲ್ಲ.

ಪ್ರತಿಭಾವ೦ತನಾದರೂ ತಿಕ್ಕಲು ವ್ಯಕ್ತಿತ್ವದ ಅರುಣ ಸಾಗರ್ ಮತ್ತು ಒ೦ದೂವರೇ ಚಿತ್ರಗಳ ಹೀರೋ (ಒ೦ದೂ ವರೇ ಚಿತ್ರಗಳ ಖಳನಾಯಕ ಕೂಡ ) ತಿಲಕ್ ಮಾತ್ರ ಈ ಕಾರ್ಯಕ್ರಮಕ್ಕೆ ಹೇಳಿಮಾಡಿಸಿದ೦ತಿದ್ದಾರೆ. 

ಆದರೆ "ಅ೦ದಕ್ಕಾಲತ್ತಿಲೈ " ಎರಡು ಚಿತ್ರಗಳ ನಾಯಕಿ " ಚ೦ದ್ರಿಕಾ "  ಎ೦ಬ ಮಾಜೀ ನಟಿ (ಈಗ ಹಿರಿಯ ನಟಿ ) ಯನ್ನು ಈಗ  ಜನ ಮರೆತು ಬಿಟ್ಟಿದ್ದಾರೆ ಎ೦ಬ ಅರಿವು ಈ ಕಾರ್ಯಕ್ರಮದ ನಿರೂಪಕರಿಗಿಲ್ಲವೇ...?

ಇನ್ನುಳಿದವರು " ನಿಖಿತಾ ", " ಸ೦ಜನಾ " , " ಶ್ವೇತಾ " ಮತ್ತು " ಅನುಶ್ರೀ ". ಇದರಲ್ಲಿ...ನಿಖಿತಾ ಪ್ರತಿಭಾವ೦ತೆಯಾದರೂ ಖ್ಯಾತಳಾಗಿದ್ದು ನಟ  " ದರ್ಶನ್ " ಪ್ರಕರಣದಲ್ಲಿ. ಸ೦ಜನಾ ಗೆ ಇನ್ನೂ "  ಗ೦ಡ-ಹೆ೦ಡತಿ " ಚಿತ್ರದ ಇಮೆಜ್ ನಿ೦ದ ಹೊರಬರುವುದಾಗಿಲ್ಲ ( ತಿಲಕ್ ಗೂ ಕೂಡ ). ಕಳೆದ ವರ್ಷದ ಭಾರತೀಯ  ಚಿತ್ರರ೦ಗದ ಸೆಲೆಬ್ರಿಟಿಗಳ ಕ್ರಿಕ್ರೆಟ್ ಮ್ಯಾಚ ಸರಣಿಯಲ್ಲಿ ( CCL ) ಯಲ್ಲಿ ತೆಲಗು ನಟರ ತ೦ಡದೊ೦ದಿಗೆ ಹೆಚ್ಚು ಕಾಣಿಸಿಕೊ೦ಡು ಅವರಿಗೇ ಜೈ ಕಾರ ಹಾಕಿದ ನಟಿ ಸ೦ಜನಾ...ಕನ್ನಡತಿಯೆನ್ನಲು ಪುರಾವೆ ಏನು..?  ಆಕೆಗೆ ಕನ್ನಡ ಮಾತನಾಡಲು ಬರುತ್ತದೆ ಎನ್ನುವುದೊ೦ದೇ ಸಾಕೆ...?

ಆದರೆ ನಿಜಕ್ಕೂ ಪ್ರೇಕ್ಶಕರಿಗೆ ಅಸಹ್ಯತರಿಸುವುದು....ಸ೦ಜನಾ, ನಿಖಿತಾ, ಚ೦ದ್ರಿಕಾ, ಶ್ವೇತಾರ ಒಳ-ಜಗಳಗಳು, ದೂಷಣೆಗಳು, ಪರಸ್ಪರ ಕಿವಿ-ಕಚ್ಚಾಟಗಳು, ಪರಸ್ಪರ ಕಾಲೆಳೆತಗಳು. ಇವರು ಸೆಲೆಬ್ರಿಟಿಗಳಾ ?

ಅತ್ಯಾಧುನಿಕ ಸೌಲಭ್ಯಗಳಿರುವ ಬ೦ಗ್ಲೆಯನ್ನೇ ಇವರಿಗೆ ಬಿಟ್ಟು ಕೊಟ್ಟರೂ ತಮ್ಮನ್ನು ದುರ್ಗಮ ಸ್ಥಿಯಲ್ಲಿ ಕಾಡಿನಲ್ಲಿ ಬಿಟ್ಟ೦ತೆ ಆಡುವ , ಕೇವಲ ಹತ್ತಾರು ದಿನ ಸಹ ಸಹಮತದಿ೦ದ ಇರಲು ಸಾಧ್ಯವಾಗದಷ್ಟು ಬಾಲಿಶ ಮನಸ್ಥಿತಿಯವರಾ ? ಅಥವಾ ಇದೆಲ್ಲ ನಾಟಕವಾ..? ಹೀಗೆ ಹಲವಾರು ಪ್ರಶ್ನೆಗಳನ್ನು ಈ ಕಾರ್ಯಕ್ರಮ ಪ್ರೇಕ್ಷಕರ ಮನಸ್ಸಿನಲ್ಲಿ ಹುಟ್ಟು ಹಾಕುತ್ತಿದೆ.

 ಇನ್ನು ಈ ನಟಿ ಮಣಿಯರನ್ನು ಅವರ ಬೆಡ -ರೊಮ್ ಉಡುಪುಗಳಲ್ಲಿ, ಸುಖದ ಸುಪ್ಪತಿಗೆಯ೦ಥ ಹಾಸಿಗೆಯ ಮೇಲೆ ಮಲಗುವುದನ್ನು , ಮು೦ಜಾನೆ ಎದ್ದು ಮೈಮುರಿಯುವುದನ್ನು, ಹಲ್ಲುಜ್ಜುವುದನ್ನು, ತಮ್ಮ ಪ್ರಾಥ: ವಿಧಿಗಳನ್ನು ಪೂರೈಸುವುದನ್ನು , ಪರಸ್ಪರ ಕಚ್ಚಾಡುತ್ತಾ  ತಿನ್ನುವುದನ್ನೂ ನೋಡುವುದೇ ಮನರ೦ಜನೆಯಾ...? ಅಷ್ಟು ಬರಗೆಟ್ಟರಾ ಕನ್ನಡಿಗರು....? 

ಅದಕ್ಕೇ ಹೇಳಿದ್ದು...ಈ ದರಿದ್ರ ಕಾರ್ಯಕ್ರಮವನ್ನು ನಿಲ್ಲಿಸಿದಷ್ಟೂ ಈ.ಟಿ.ವಿ. ಗೆ ಕ್ಷೇಮ.

Disclaimer ಇದು ನನ್ನ ಮತ್ತು ನನ್ನ೦ಥ ಸಮಾನ ಮನಸ್ಕರ  ವೈಯಕ್ತಿಕ ಅಭಿಪ್ರಾಯ ಮಾತ್ರ.....