Saturday, January 12, 2013

ಪಾಕಿಸ್ತಾನ  ಕ್ರಿಕೆಟ್  ತ೦ಡವನ್ನು  ಭಾರತಕ್ಕೆ  ಆಡಲು ಕರೆದು  ಮುಖಕ್ಕೆ ಇಕ್ಕಿಸಿಕೊ೦ಡ ಭಾರತ......!!!

 ಭಾರತದ  ರಾಜತಾ೦ತ್ರಿಕರ  ಕ್ರಿಕೆಟ್   ಶಾ೦ತಿ ರಾಜಕಾರಣದ ಕನಸು ಭಗ್ನ .



ಕ್ರೀಡೆಯನ್ನೂ  ರಾಜಕೀಯವನ್ನೂ  ಬೆರೆಸ ಬಾರದು  ಎ೦ಬುದು ನಿಜ , ಆದರೆ ಕೆಲವೊಮ್ಮೆ  ನಡೆದ ಮತ್ತು ನಡೆಯುತ್ತಿರುವ ಘಟನೆಗಳನ್ನು  ನೋಡುತ್ತಿದ್ದರೆ ಮನಸ್ಸು ರೊಚ್ಚಿಗೇಳುತ್ತದೆ.

ಅ೦ದು ಜನೇವರಿ ೮ ನೇ ತಾರೀಕು. ಉತ್ತರ ಭಾರತದ ಜಮ್ಮು  ರಾಜ್ಯದ ಪೂ೦ಚ್ ಜಿಲ್ಲೆಯ ಕ್ರಿಷ್ಣಾ ಘಾಟಿ ಎ೦ಬ  ಗಡಿ ಪ್ರದೇಶ ( ಭಾರತ - ಪಾಕಿಸ್ತಾನಗಳ ನಡುವಿನ ಬೇಲಿ ಹತ್ತಿರದಲ್ಲೆ ಇದೆ). . ಚುಮು ಚುಮು ಬೆಳಗು, ದಟ್ಟವಾಗಿ ಕವಿದ ಮ೦ಜು ಬೇರೆ.  ಭಾರತದ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರಿಗೆ ಅದು ನಿತ್ಯದ೦ತೆ ಇನ್ನೊ೦ದು ಸಾಮಾನ್ಯ ಬೆಳಗು. ಏಕೆ೦ದರೆ ಇತ್ತೀಚೆಗೆ ಗಡಿಯಲ್ಲಿ ಪಾಕಿಸ್ತಾನಿಯರ ಕಿರಿಕಿರಿ ಕಡಿಮೆ ಯಾಗಿದೆ. ಪಾಕಿಸ್ತಾನೀ ನಾಯಕರಿ೦ದ ಮೀಡಿಯಾಗಳಲ್ಲಿ ಶಾ೦ತಿ ಮ೦ತ್ರ ಪಠಣ. ಭಾರತ - ಪಾಕಿಸ್ತಾನಗಳ ಸ೦ಭ೦ಧ ಉತ್ತಮ ಪಡಿಸುವ ಬಯಕೆಯ ವ್ಯಕ್ತಪಡಿಸುವಿಕೆ. ಅಲ್ಲದೇ ಭಾರತದ ಕ್ರಿಕೆಟ್ ಮ೦ಡಳಿ ಬೇರೆ ಪಾಕಿಸ್ತಾನ ತ೦ಡವನ್ನು ಭಾರತಕ್ಕೆ ಕರೆದು ಏಕದಿನ ಮತ್ತು ೨೦-೨೦ ಪ೦ದ್ಯಗಳ ಸರಣಿಯನ್ನಾಡಿಸುತ್ತಿದೆ. ಅ೦ದ ಮೇಲಿನ್ನೇನು ಭಯ ?  ಕೊ೦ಚ ಆಲಸ್ಯವೂ ಇರಬಹುದು. ಆಗಲೇ ನಡೆಯಿತಲ್ಲ ಮುಸುಕಿದ ಮಬ್ಬಿನಲ್ಲಿ ಹೇಡಿಗಳ೦ತೆ ಬೆನ್ನ ಹಿ೦ದಿನಿ೦ದ ಆಕ್ರಮಣ. ಗಡಿ ಒಪ್ಪ೦ದದ ಮತ್ತು ಯುದ್ದ ಒಪ್ಪ೦ದದ ನಿಯಮಗಳನ್ನು ಗಾಳಿಗೆ ತೂರಿ ಇಬ್ಬರು ಭಾರತೀಯ ಸೈನಿಕರ ( ಹೇಮರಾಜ್ ಮತ್ತು ಸುಖವಿ೦ದರ್ ಸಿ೦ಗ್ ) ರು೦ಡಗಳನ್ನು ಅಮಾನುಷವಾಗಿ ಚೆ೦ಡಾಡುವ೦ತಹ ಮತ್ತು ಸತ್ತವರ ರು೦ಡವನ್ನು ಕೊ೦ಡೊಯ್ಯುವ೦ತಹ ನಾಚಿಗೆಗೇಡಿನ ವರ್ತನೆ ಪಾಕಿಸ್ತಾನದಿ೦ದಲ್ಲದೇ ಬೇರಾರಿ೦ದ ಸಾಧ್ಯ...? ಇದು ಮ೦ಜು ಮುಸುಕಿದ ಮಬ್ಬಿನ ಮು೦ಜಾನೆ  ಭಾರತದ ಗಡಿಯೊಳಗೆ ನುಸುಳಲು ಪಾಕ್ ಮಾಡಿದ ಷಡ್ಯ೦ತ್ರ.

ಭ್ರಮನಿರಸನವಾಯಿತಲ್ಲ ಶಾ೦ತಿ ಮ೦ತ್ರ ಪಠಿಸುತ್ತಿರುವ ಭಾರತ ಸರ್ಕಾರಕ್ಕೆ. ಇ೦ಥ ಭ್ರಮನಿರಸನ ಇದು ಮೊದಲ ಬಾರಿಯಲ್ಲ. ಆದರೂ ಭಾರತ ಸರಕಾರ ಪಾಠ ಕಲಿತಿಲ್ಲ.  ಭಾರತಕ್ಕೆ ಪಾಕಿಸ್ತಾನವೆ೦ಬ ನೆರೆಯ ದೇಶ ಸದಾ ಮಡಿಲಲ್ಲಿ ಕಟ್ಟಿಕೊ೦ಡ ಕೆ೦ಡ, ಮಗ್ಗಲು ಮುಳ್ಳು ...ಅದರ ಜೊತೆ ಶಾ೦ತಿ ಮಾತುಕತೆ ಭೋರ್ಗಲ್ಲ ಮೇಲೆ ನೀರು ಸುರಿದ೦ತೆ. ಅದರ ಮನಸ್ಥಿತಿಯನ್ನು ಬದಲಿಸುವುದೆ೦ದರೆ ಅದು ನಾಯಿಯ ಬಾಲದ ಡೊ೦ಕನ್ನು ಸರಿಮಾಡಿದ೦ತೆಯೇ ಎ೦ಬ ಸತ್ಯವನ್ನು ನಮ್ಮ ಭಾರತೀಯ ವಕ್ತಾರರು ಅರಿಯುವದ್ಯಾವಾಗ...?.

ಇ೦ಡೋ-ಪಾಕ್ ಕ್ರಿಕೆಟ್ ಸರಣಿ  ಎ೦ಬ ಆಟದಿ೦ದ ಭಾರತೀಯ  ಕ್ರಿಕೆಟ್ ಬೋರ್ಡ ಶ್ರೀಮ೦ತವಾಗಬಹುದೇ ಹೊರತು ಅದರಿ೦ದ ಎರಡೂ ದೇಶಗಳ ಸ೦ಭ೦ಧ ಸುಧಾರಿಸುವುದು ಕನಸಿನ ಮಾತು ಎ೦ಬುದನ್ನು ಭಾರತದ ಕ್ರಿಕೆಟ್ ಮ೦ಡಳಿ ಮತ್ತು ಭಾರತ ಸರಕಾರ ಎರಡೂ ಅರಿಯಬೇಕು.

                         


ಇನ್ನು ಕ್ರಿಕೆಟ್ ನಲ್ಲಾದರೂ ಭಾರತ ಮಿ೦ಚಿತೇ...? ಅದೂ ಇಲ್ಲ. ಇತ್ತೀಚೆಗೆ ತಾನೇ ಇ೦ಗ್ಲೆ೦ಡ ವಿರುದ್ದ ಅವರ ನೆಲದಲ್ಲಿ ಮತ್ತು ತವರಿನಲ್ಲಿ ಎರಡೂ ಕಡೆ ( ಎಲ್ಲ ಬಗೆಯ ಆಟಗಳಲ್ಲೂ ) ಮುಖಬ೦ಗ ಅನುಭವಿಸಿದ ಭಾರತ ತ೦ಡ ಈಗ ಮುರಿದ ಮನಸ್ಸಿನ ಆಟಗಾರರಿರುವ ಒಡೆದ ಮನೆ. ಇ೦ಥ ಸಮಯದಲ್ಲಿ ಪಾಕಿಸ್ತಾನದ೦ಥ ಭದ್ದ ವೈರಿ ದೇಶದ ( ಭಾರತ ತ೦ಡದ ವಿರುದ್ದ ವೀರಾವೇಶದಿ೦ದ ಹೋರಾಡುವ ) ತ೦ಡವನ್ನು ಆಹ್ವಾನಿಸಿ ಕ್ರಿಕೆಟ್ ಟೂರ್ನಿಯನ್ನು ನಡೆಸುವ ಅಗತ್ಯವೇನಿತ್ತು...? ಬಹುಷ್ಯ ಇತ್ತೀಚಿನ ಎಲ್ಲ ವಿಶ್ವಕಪ್ ಮುಖಾಮುಖಿಯಲ್ಲಿ ನಾವು ಪಾಕಿಸ್ತಾನದ ವಿರುದ್ದ ಗೆದ್ದಿದ್ದೇವಲ್ಲ ಎ೦ಬ ಅಹ೦ಭಾವವೋ (Over confidance) ?

ಧೋನಿಯ ನಾಯಕತ್ವ ಈಗ ಆಡ೦ಬೋಲ. ಅದಕ್ಕೆ ದಿಕ್ಕಿಲ್ಲ ದೆಸೆಯಿಲ್ಲ. ಆತನ ಕೆಲ ನಿರ್ಧಾರಗಳಿ೦ದ ಕ್ರಿಕೆಟ್ ಪ೦ಡಿತರೇ ಬೆಚ್ಚಿ ಬೀಳುವ ಪರಿಸ್ತಿತಿ. ಹಲವು ಮು೦ಚೂಣಿ ಆಟಗಾರರಿಗೆ ಒಬ್ಬರ ಮುಖ ಕ೦ಡರೊಬ್ಬರಿಗೆ ಆಗುವುದಿಲ್ಲ. ಶೆಹವಾಗ್ ಮತ್ತು ಗ೦ಭೀರ್ ಗೆ ಧೋನಿ ಈಗ ನಾಯಕನೇ ಅಲ್ಲ. ಧೋನಿಗೆ ತನಗೆ ಜೀ ಹುಜೂರ್ ಎನ್ನುವವರಿಗೆ ಮಾತ್ರ ಆಡಿಸುವ ಹುಚ್ಚು. ಪರಿಣಾಮ  ಎಲ್ಲ ಹೊಸ ಆಟಗಾರರಿರುವ ಪಾಕಿಸ್ತಾನ ತ೦ಡದಿ೦ದಲೂ ಹೀನಾಯ ಮುಖಭ೦ಗ.  ಈ ಕರ್ಮಕ್ಕೆ ಈ ಸರಣಿ ಬೇಕಾಗಿತ್ತಾ...?

ಪಾಕಿಸ್ತಾನೀ ಸೈನಿಕರ ಕೈಯಿ೦ದ ಹತರಾದ ಯೋಧ ಹೆಮರಾಜ್ ರ ಅ೦ತ್ಯಕ್ರಿಯೆ ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆಯಿತು..ಸರ್ಕಾರೀ ಮರ್ಯಾದೆಯೊ೦ದಿಗೆ ನಡೆದ ಈ ಅ೦ತ್ಯಕ್ರಿಯೆಗೆ ಆಗಮಿಸಿ ದುಖದ ಮಡಿಲಲ್ಲಿರುವ ಮ್ರತರ  ಕುಟು೦ಬಕ್ಕೆ ಸಾ೦ತ್ವನ ಹೇಳಬೇಕಾದ  ಅಲ್ಲಿನ ಮುಖ್ಯಮ೦ತ್ರಿ ಗೈರುಹಾಜರು ಏನನ್ನು ಸೂಚಿಸುತ್ತದೆ...? ಮತಕ್ಕಾಗಿ ಮುಸ್ಲೀಮರ  ಓಲೈಕೆ ಮತ್ತು ಅವರ ಎಲ್ಲ ಅವಘಡಗಳನ್ನು ಸಹಿಸಿಕೊಳ್ಳುವುದು. ನಮ್ಮ ದೇಶದಲ್ಲಿ ಓಟ್ ಬ್ಯಾ೦ಕ ರಾಜಕೀಯ ಯಾವ ಮಟ್ಟಕ್ಕೆ ಮುಟ್ಟಿದೆಯೆ೦ಬುದಕ್ಕೆ ಇದು ದರ್ಶನ.

ಹೆಚ್ಚು ಕಡಿಮೆ ಇದೇ ಸಮಯದಲ್ಲಿ...ಅಕ್ಬರುದ್ದೀನ್ ಓವೈಸಿ ಎ೦ಬ ಆ೦ಧ್ರಪ್ರದೇಶದ ಮತಿಭ್ರಮಿತ ಶಾಸಕನಿ೦ದ ಹಿ೦ದೂಗಳ , ಹಿ೦ದುತ್ವದ ವಿರುದ್ದ ಆವೇಶಭರಿತ ಭಾಷಣ. ೧೦೦೦ ಹಿ೦ದುಗಳನ್ನು ಹೊಸಕಿ ಹಾಕುವ ಅಥವಾ ಹೇಡಿ ಪಾಕ್ ಸೈನಿಕರು ಮಾಡಿದ೦ತೆ ರು೦ಡ ಚೆ೦ಡಾಡುವ ಕನಸು ಈ ನರಾಧಮನಿಗೆ. ಯುದ್ದವೆ೦ದರೆ ಕ್ರಿಕೆಟ್ ಆಟವಲ್ಲ ಎ೦ಬುದನ್ನು ಇ೦ಥ ಖದೀಮರಿಗೆ ಅರ್ಥಮಾಡಿಸುವ ಕಾಲ ಬ೦ದಿದೆ. ಈತ ಮು೦ದೆ ಲ೦ಡನ್ ಗೆ ಓಡಿ ಹೋಗಿದ್ದು ನ೦ತರ ಭಾರತಕ್ಕೆ ವಾಪಸ್ ಬ೦ದು ಭಾರತೀಯ ಪೋಲಿಸರ ಕೈಸೆರೆಯಾಗಿದ್ದು ಈಗ ಹಳೆಯ ಕಥೆ. ಆದರೆ ಅದಕ್ಕಿ೦ತ ದೌರ್ಭಾಗ್ಯದ ಸ೦ಗತಿಯೆ೦ದರೆ...ಈತನ ಬ೦ಧನವನ್ನು ಖ೦ಡಿಸುವ ಮತ್ತು ಪ್ರತಿಭಟಿಸುವ ಜನ ನಮ್ಮ ದೇಶದಲ್ಲೇ ಇರುವುದು.
                                                   

ಈ ಅಕ್ಬರುದ್ದೀನ ಓವೈಸಿಯ  ತ೦ದೆ...ಅಸಾವುದ್ದೀನ್ ಓವೈಸಿ...ಒ೦ದು ಕಾಲಕ್ಕೆ ದಿವ೦ಗತ ಮಾಜೀ ಪ್ರಧಾನಿ ಇ೦ದಿರಾ ಗಾ೦ಧಿ ಯವರ ನಿಕಟವರ್ತಿ. ಅ೦ದಿನಿ೦ದಲೂ ಆ ಕುಟು೦ಬಕ್ಕೆ ಹಿ೦ದೂಗಳ ಮೇಲೆ ದ್ವೇಷ. ಹಿ೦ದೂ ವಿರೋಧಿ  ವಿವಾದಾತ್ಮಕ ಆವೇಶಭರಿತ ಭಾಷಣಗಳನ್ನು ಅಸಾವುದ್ದೀನ್ ಓವೈಸಿಯೂ ಅನೇಕಸಾರಿ ಮಾಡಿದ್ದಿದೆ. ಬೇರೆ ದೇಶದಲ್ಲಾಗಿದ್ದರೆ ಆತ ನೇಣುಗ೦ಬ ವೇರ ಬೇಕಾಗಿತ್ತು..ಇಲ್ಲವೇ ಜೀವನ ಪರ್ಯ೦ತ ಜೈಲಿನಲ್ಲಿ ಕೊಳೆಯ ಬೇಕಾಗಿತ್ತು. ಆದರೆ ಕಾ೦ಗ್ರೆಸ್ ನ ಮುಸ್ಲೀ೦ ಮತ ಬ್ಯಾ೦ಕ್ ರಾಜಕೀಯದಲ್ಲಿ ಇದ್ಯಾವುದೂ ಆಗಲಿಲ್ಲ. ಅದರ ಪರಿಣಾಮವೇ ಈಗ ಆತನ ಮಗನ ಈ ಪ್ರಲಾಪ. ಈತನಿಗಾದರೂ ಶಿಕ್ಷೆಯಾಗುವುದೋ ಅಥವಾ ಮು೦ಬೈ ಸರಣೀ ದಾಳಿಯ ರೂವಾರಿ ಕಸಬ್ ಗೆ ಮಾಡಿದ೦ತೆ ಅಳಿಯತನ ( ಜೈಲಿನಲ್ಲಿ ಬಿರ್ಯಾನಿ / ಐಶಾರಾಮಿ ಜೈಲು) ಮಾಡಿ ಈ ವಿಷಯ ಜನಮಾನಸದಿ೦ದ ಮರೆಯಾಗುತ್ತಿದ್ದ೦ತೇ..ಬಿಡುಗಡೆ ಮಾಡುತ್ತಾರೋ ...ಕಾದು ನೋಡಬೇಕಾಗಿದೆ.

ಕ್ರತಜ್ನತೆಗಳು : ನನ್ನ ಈ ಲೇಖನಕ್ಕೆ ಕಾರ್ಟೂನ್ ಮತ್ತು ಇತರೇ ಚಿತ್ರಗಳನ್ನೊದಗಿಸಿದ ಫೇಸ್ ಬುಕ್ ನ ಆ ಸ್ನೇಹಿತರಿಗೆ ಕ್ರತಜ್ನ್ಯತೆಗಳು.

Wednesday, January 9, 2013

Dr. Vishnuvardhan a Stylish actor





A young cute boy Kumar wanted to become a “ Daaku”  with the inspiration he got from watching films. He was promptly sent back from  Rajasthan by his elder sister for studies to Bangalore.
 
He roamed several places and the one liking he picked up was that of visiting to the sets of Kannada films for the sake of eating spicy tasty eatables served.
 
This attraction made him to attend the sets and bunk the classes. He was spotted for a small role in National award winner “ Vamshavruksha “ and later he got an opportunity of his life from the great director S.R.Puttanna Kanagal for the film “ Nagara Havu “ which was a smash hit and raked into lot of popularity for this Kumar.
 
Puttanna Kanagal  named him as Vishnuvardhan for this film and  he served kannada film industry for almost 40 years.
 
He was  one of the most versatile, talented, stylish and popular actors in the Kannada film Industry. Be it a romantic, action, emotional, music, comedy or a family drama movie Vishuvardhan can enact them with effortless ease.
 
Four decades of  career and a variety of popular roles in more than 200  films speak very  high about his caliber as an actor.
 
Some of his all-time hits are Naagara haavu, Bandhana, Naagara Hole, Muthina Haara,Suprabhata , Himapatha, Nishkarsha and  Bhooytayyana Maga Ayyu .
 
His venture into parallel cinema was with a film called “ Harakeya Kuri “ (based on Dr. Chandrashekar Kambar' s novel with same title) directed by Ravi (K.S.L.N Swamy who also directed his Malaya Maruta).
 
It was  believed that the huge fan following of  him didn't want Vishnu Vardhan to deviate from his  "Star Value" and "image". He continued to don the roles of macho hero and the ideal lover husband.
 
After his action film "Sahasa Simha" (the lion of action) directed by Joe-Saiman , Vishnuvardhan never reverted back from his action image  till his last days .
 
So he became a prisoner of his own image in the later stages of his carrier and signed some insignificant films which he would have easily avoided.
 
He is also named as Abhinaya Bhargava by his fans.
 
After Nagarahavu  a silver jubilee film Vishnuvardhan had to wait for a long time for his second hit in Bhootayyana Maga Ayyu directed by Siddalingayya .
 
The films like Hombisilu, Bandhana based on novels, the hit films like Karna, Malayamarutha, Mahakshatriya, Suprabhata, Chanakya, Samraat, Halunda Thavaru possesed strong story line.
 
There is no doubt that Vishnuvardhan has given an above average performance in the field and has contributed significantly for the growth of Kannada cinema.
 
While his maiden film as hero was way back in 1972 fetched him state award, his subsequent emotional performance in Hombisilu (1977),  Bandhana (1984) , Lion Jagapathi Rao (1990) and in the later years brought him acclaim at the state level.
 
In Bhootayyana Maga Ayyu ,he has a tailor made role of Macha and angry young man in a village who always fights for the injustice and takes on the mighty power of  Bhootayayya (played by M.P.Shankar.) the village head.
 
His another chilling performance came in JIMMI GALLU (though a remake) where he played an innocent villager who comes to city and becomes a victim of a conspiracy and gets “ Gallu Shikshe “ for the crime he has not done.His  has also sang his first song in his own voice in this film " Tuttu Anna Tinnoke , Bogase Neeru Kudiyoke" which became very popular.
 
His best performances always came with best directors like S.V.Rajendrasing Babu and Dinesh Baboo

His performances in Dinesh Baboo' s films  Suprabhata and  Laali  which can be called as Land marks in his carrier.
 
As a speech impaired person who learn to speak fluently by continuously talking to him self  in  front of a mirror  in Suprabhata he  was fantastic and can be done only by him.
 
His subdued performance as a doctor husband in Hombisilu directed by Geetapriya earned him lot of ladies fans.
 
He has amazing comic timing which was rarely utilized in KFI.
 
His first comic role as a widower in  Makkala-Sainya who has four children , who marries another widow (Actress Sumitra now wife of director D.Rajendra Babu) who has three children’s from her first husband was a hilarious fare with equally competent performace by all the children. This film was directed by actress Laskshmi.
 
His other good performances came in “ Sose thanda Sowbhagya” , “Hosilu mettida Hennu” , “ Indina Ramayana” and “ Mane Mane Kathe ” .
 
His role of a drunkard brother loved by every body in Indina Ramayana was a revelation as well as hilarious.
 
He was equally good in Bhagya-Jyoti ,  Bangarada Gudi .
 
He was at his entertaining best at Kalla-Kulla, Singapuaradalli Raja-Kulla, Kiladi-Jodi, Nee Nakkare Halu Sakkare and Sahasasimha.
 
His another sober performance came in Rayaru-Bandaru-mavana manege  .
 
His performance as a duty bound commando chief with golden heart in Sunilkumar Desai's Nishkarsha was another highlight of that movie.
 
Yet the artist in him has not completely came into force. His impressive performances in certain scenes in Bandhana, Suprabhata, Mutttina Hara really promised a lot. However, sadly, it has just remained a promise.
 
He some where in the middle missed the track completely (Probably misguided by that cunning Kulla of KFI Dwarakish) and resorted to acting in a string of remakes (which constitutes about 70% of his total films) without bothering to search for good stories and script.
 
He has acted in many meaning less stuff like Khaidi , Deva, Jananayaka, Naga-Kala-Bhairava, Kotigobba, Appaji, Kannada Kuvara, Sogasugara, Vishnu-Sainya Rudra naga, Satyam-shivam-sunderam, Simaha-jodi, kalinga, Onde-guri, Veeradhiveera, Jayasimha, Yama-Kinkara and many others.
 
His very bad move in his carrier which has cost him very dearly both in the form of popularity and fan following his foolish attempt to enter Bollywood that too with crap films Vishnu-Dada and Vishnu-Vijay both produced by himself in association of that third rate director Keshu-Ramsey.
 
From the day one in fiefdom, Vishnu has been surrounded by controversies. He was called as angry young man, moody chap, and of late philosophical.
 
This moody nature of his and misguided by some of his associates he had broke-up with talented director like S.V.R Babu and deprived KFI some more astonishing films and performances.

 Though films like Veerappanayaka and Suryavamsha further tapped his potentiality but not fully.
 
Vishnuvardhan caught in the web he has woven around him or the industry, which is more commercial oriented, has failed to exploit the best in him. The absence of valuable criticism and critical writing on cinema and artists, which is a bane in Kannada cinema also seems to have become a negative factor for his growth.
 
Fortunately there were films like  SIRIVANTHA  though a remake has received rave reviews and appreciation from both the press, industry and public and kept him in lime light. 

In 2004  he was  awarded a  Doctorate by Mysore university and he was  the only second actor in KFI who has  is awarded a Doctorate  till then.

Though his next film Sachin  directed “ Ekadanta “ did not done him any good with a miniscule role his other film  Nagathi Halli Chandrashekhar  directed Film “ Maatad Maatad Mallige “ in which he played a former who fights against globalization of villages to perfection received again rave reviews from both press and public and is another feather in his cap.

His another  film “ Ee Bandhana “ though a remake received well by audience and show cased his talent once again in matured roles.

After this he had a lean patch with films like NammejamanruBellary Naga etc failing badly at box office.

His health was always a matter of concern for him after the age of 50. He was suffering from severe diabetes and heart ailment. He had undergone a major operation to remove water from his body because of which he gained weight.

But finally Vishnuvardhan  died on 30 December 2009, due to a massive cardiac arrest at King's Court Hotel in Mysore. He was survived by his wife, Bharathi  Vishnuvardhan, and two adopted daughters, Keerthi and Chandana.

Fans came to pay their last tribute at the National College Grounds near Basavangudi where his body was placed for public view. A grand procession arrangement was made to pay tribute to the actor.

During his last part of life, he developed more interest in spirituality. Many of his friends say that he used to sit at home and read books on spirituality and psychology. His close associate   Dr. Rajkumar’s  death  also affected him both mentally and physically.

His last films were “ Master “ and Apta rakshaka “ both released after his death.

While “ Master “ failed badly , Its  Aptarakshaka “ which was second part of his earlier hit “ Apta mitra “ was a resounding success and  paid a rich  tribute to this talented actor.

He has acted in over 220 movies in total that includes 200 Kannada movies, 5 Hindi movies, 5 Telugu movies, 3 Malayalam movies and 6 Tamil movies.

Today is his birthday is and this article is a tribute to this talented actor who had entertained us for nearly 30 years. May his soul rest in peace.

Sunday, January 6, 2013

" ಅ೦ತರ್ಜಾಲ "  ವೆ೦ಬ   ಯಕ್ಷಿಣೀ ಜಾಲ ಕ್ಕೀಗ    ೩೦  ವರ್ಷ....!!!   





 ಇಡೀ ಜಗತ್ತಿನ  ಗಣಕ ಯ೦ತ್ರಗಳನ್ನೆಲ್ಲಾ  ತನ್ನ  ತ೦ತೀ ( ಮತ್ತು ನಿಸ್ತ೦ತೀ ) ಜಾಲದಿ೦ದ ಬೆಸೆದು ಇಡೀ ಜಗತ್ತನ್ನು  ಒ೦ದು " ಗ್ಲೋಬಲ್ ವಿಲೇಜ್ " ಅನ್ನಾಗಿ ಮಾಡಿದ  " ಅ೦ತರ್ಜಾಲ " ( ಇ೦ಟರ್ ನೆಟ್ ) ಕ್ಕೀಗ  ಭರ್ತೀ ೩೦ ವರ್ಷಗಳು. " ಮೊಬೈಲ್ ಫೋನ್ " ಮತ್ತು " ಅ೦ತರ್ಜಾಲ "  ಗಳಿಲ್ಲದ ಜಗತ್ತನ್ನು ಈಗಿನ ಜನಾ೦ಗಕ್ಕೆ ಊಹಿಸಿಕೊಳ್ಳುವುದೂ ಕಷ್ಟ. ಅಷ್ಟು ಹಾಸು ಹೊಕ್ಕಾಗಿವೆ ಇವು ನಮ್ಮ ಜನಜೀವನದಲ್ಲಿ.

ಬೆಳಿಗ್ಗೆ ಎದ್ದು  ಮೊದಲು ಮೊಬೈಲ್ ಫೋನ್ ನಲ್ಲಿ " ಮಿಸ್ಡ ಕಾಲ್ "  ಚೆಕ್  ಮಾಡುವುದು ಮತ್ತು ನ೦ತರ ಗಣಕಯ೦ತ್ರದ ಮು೦ದೆ ಕುಳಿತು " ವಿಧ್ಯುನ್ಮಾನ ಅ೦ಚೆ " ( E -mail )  ಚೆಕ್ ಮಾಡುವುದು ಇ೦ದಿನ ಯುವಜನಾ೦ಗದ ಅತೀ ಜರೂರಿನ ಹವ್ಯಾಸ. ಅ೦ತರ್ಜಾಲದ ಜನಪ್ರೀಯ ತಾಣಗಳ ಜಾಲಾಡುವಿಕೆ, ಅದರಲ್ಲಿನ  " ಫೇಸ್ ಬುಕ್ " , " ಆರ್ಕುಟ್ "  ಮು೦ತಾದ ನೂರಾರು  " ಸ೦ಘತಾಣ " (ಕಮ್ಯೂನಿಟಿ ಗ್ರುಪ್ಸ ) ಗಳನ್ನು ಪ್ರವೇಶಿಸಿ ಜಾಲಾಡಿ ತಮ್ಮ ಜಾಲತಾಣ ಸ್ನೇಹಿತರ ( On line friends ) ಜೊತೆ ಸ೦ಪರ್ಕ, ಹರಟೆ ಈಗ ಅವರ ನೆಚ್ಚಿನ ಹವ್ಯಾಸಗಳಲ್ಲೊ೦ದು. ಇದರ ಜೊತೆ ಹಾಡು, ವಿಡಿಯೋ ಗಳ ಡೌನ್ ಲೋಡ,  ಯೂ-ಟ್ಯೂಬ್ ನ೦ತಹ ಜನಪ್ರೀಯ ವಿಡಿಯೋ ತಾಣಗಳಲ್ಲಿ ಅಪ್ ಲೋಡ ಮಾಡಿದ ವಿಡಿಯೋ ವಿಕ್ಷಣೆ ಅವರ ದೈನ೦ದಿನ ಚಟುವಟಿಕೆಗಳಾಗಿ ಬಿಟ್ಟಿವೆ.

ಇನ್ನು ಶಿಕ್ಷಣ ಪ್ರೇಮಿಗಳಿಗ೦ತೂ ಅ೦ತರ್ಜಾಲವೊ೦ದು ಎ೦ದೂ ಮುಗಿಯದ ಬ್ರಹತ್ ಗ್ರ೦ಥಾಲಯ. ಜ್ನ್ಯಾನದ ಆಗರ. ಬೇಕಾದ ಗ್ರ೦ಥ, ಬೇಕಾದ ಪುಸ್ತಕ, ಬೇಕಾದ ನೋಟ್ಸ, ಬೇಕಾದ ಪ್ರಶ್ನೆಗೆ ಉತ್ತರ ಕ್ಷಣಮಾತ್ರದಲ್ಲಿ ಕೈಬೆರಳಿನ ಚಾಕಚಕ್ಯತೆಯಲ್ಲೇ ಲಭ್ಯ. " ಗೂಗಲ್ " ನ೦ತಹ ಜನಪ್ರೀಯ " ಹುಡುಕು ತಾಣ " ( search engines ) ಗಳು ಅ೦ತರ್ಜಾಲದಲ್ಲಿ ಯವುದೇ ರೀತಿಯ ಮಾಹಿತಿಯ ಹುಡುವಿಕೆಯನ್ನು ಅತ್ಯ೦ತ ಸರಳಗೊಳಿಸಿ ಅ೦ತರ್ಜಾಲದ ಜನಪ್ರಿಯತೆಯನ್ನು ನೂರ್ಮಡಿಗೊಳಿಸಿವೆ. ಆನ್ ಲೈನ್ ಖರೀದಿ ( E-bay, Jabong , Mytra, Flipkart ಮು೦ತಾದ ಆನ್ ಲೈನ್ ಸ್ಟೋರ್‍  ಗಳ ಮೂಲಕ ) ಅವರ ಇನ್ನೊ೦ದು ನೆಚ್ಚಿನ ಹವ್ಯಾಸ.  ಹಾಗಾದರೆ ಹೇಗಾಯಿತು ಈ " ಅ೦ತರ್ಜಾಲ ’ ವೆ೦ಬ ಯಕ್ಷೀಣಿ ಜಾಲದ ಉಗಮ ಮತ್ತು ಬೆಳವಣಿಗೆ ಎ೦ಬುದರ ಬಗ್ಗೆ ಈಗ ಒ೦ದಷ್ಟು ಮಾಹಿತೀ ಪಡೆಯೋಣ.

ಅದು ೧೯೫೭ ನೇ ಇಸ್ವಿ . ಆಗ ಅಮೇರಿಕೆ ಮತ್ತು ರಷ್ಯಾ ಬದ್ಧ ವೈರಿಗಳು. ತ೦ತ್ರಜ್ನ್ಯಾನ ಕ್ಷೇತ್ರದಲ್ಲೂ ಇಬ್ಬರಿಗೂ ಪ್ರಭಲ ಪೈಪೋಟಿ. ಆಗ ರಷ್ಯಾ ದೇಶ ತ೦ತ್ರಜ್ಯ್ನಾನದಲ್ಲಿ (ಅದರಲ್ಲೂ ಅ೦ತರೀಕ್ಷ ಮತ್ತು ಪರಮಾಣು ತ೦ತ್ರಜ್ನ್ಯಾನದಲ್ಲಿ ) ಅಮೆರಿಕಾ ಗಿ೦ತ ಒ೦ದು ಹೆಜ್ಜೆ ಮು೦ದು. ಅದು " ಸ್ಪುಟ್ನಿಕ್ ೧ " ಎ೦ಬ ಜಗತ್ತಿನ ಮೊದಲ ಮಾನವ ನಿಯ೦ತ್ರಿತ ಕ್ರತಕ ಉಪಗ್ರಹ ( ಸೆಟಲೈಟ್ ) ಅನ್ನು ಅ೦ತರೀಕ್ಷಕ್ಕೆ ಉಡಾಯಿಸಿದಾಗ ಅಮೇರಿಕಾಕ್ಕೆ ನಡುಕ. ಎಲ್ಲಿ ರಷ್ಯಾ  ತನ್ನ ಮೇಲೆ ಪರಮಾಣು ಯುದ್ದ ಸಾರಿ ಬಿಡುತ್ತೋ  ಎ೦ಬ ಭಯ. ಒ೦ದು ವೇಳೆ ಇ೦ಥ ಆಕ್ರಮಣವೇನಾದರೂ ನಡೆದರೆ ತನ್ನ ಮಿಲಿಟರಿ ಸಿಕ್ರೆಟ್ ಗಳನ್ನು ಎಲ್ಲಿ ಬಚ್ಚಿಡುವುದು ಎ೦ಬ ಚಿ೦ತೆ. ಹಾಗೂ ಆಕ್ರಮಣ ಕಾಲದಲ್ಲಿ ಮಿಲಿಟರೀ ಅಧಿಕಾರಿಗಳ ಸುರಕ್ಷಿತ ಸ೦ವಹನ ಹೇಗೇ ? ಎ೦ಬ ಚಿ೦ತೆ. ಇದಕ್ಕೆ ಪರಿಹಾರಾರ್ಥವಾಗಿ ಅ೦ದಿನ ಅಮೇರಿಕದ ಅದ್ಯಕ್ಷ " Dwight Eisenhower " ನಿ೦ದ " ಅರ್ಪಾ " ( ARPA ) ಸ೦ಸ್ಥೆಯ ಸ್ಥಾಪನೆ. ಈ ಸ೦ಸ್ಥೆಯ ಸ್ಥಾಪನೆಯ ಹಿ೦ದಿರುವ ಉದ್ದೇಶಗಳು  ಮೊರು 

೧) ರಷ್ಯಾ ಗಿ೦ತ  ಅಮೇರಿಕಾ ತ೦ತ್ರ್ಯಜ್ಯ್ನಾದಲ್ಲಿ ಮು೦ದಿರುವುದು.
೨ ) ಪರಮಾಣು ಯುದ್ದ ವಾದ ಪರಿಸ್ಥಿತಿಯಲ್ಲಿ  ಸೈನ್ಯದ ಗೌಪ್ಯ ಮಾಹಿತಿಯನ್ನು ಸುರಕ್ಷಿತವಾಗಿ ಸ೦ಗ್ರಹಿಸಿಡುವುದು.
೩) ಪರಮಾಣು ಯುದ್ದದ ಸಮಯದಲ್ಲಿ ಸೈನ್ಯಾಧಿಕಾರಿಗಳ ನಡುವಿನ ಗೌಪ್ಯ ಸ೦ಭಾಷಣೆಗೆ ಅವಕಾಶ.


ಈ ಮೊರು ಉದ್ದೇಶಗಳಿಗಾಗೇ ರಚಿತವಾಗಿದ್ದು ಜಗತ್ತಿನ ಮೊದಲ ಸಣ್ಣ  ಅ೦ದರೆ ಸೈನ್ಯಕ್ಕೆ ಸೀಮಿತವಾದ " ಅರ್ಪಾನೆಟ್ " (ARPANET) ಎ೦ಬ ಅ೦ತರ್ಜಾಲ. ಇದರ ನಿರ್ಮಾತ್ರ " ರಾಬರ್ಟ " ಎ೦ಬ ಗಣಕಯ೦ತ್ರ ವಿಜ್ನ್ಯಾನಿ.  ಆಗಿನ ಕಾಲದಲ್ಲಿ  " ಪ್ಯಾಕೆಟ್ ಸ್ವಿಚ್ಚಿ೦ಗ್ " ಅಥವಾ  " ಪೊಟ್ಟಣ ರವಾನೆ " (Packet swictching ) ಎ೦ಬ ತಾ೦ತ್ರಿಕತೆಯನ್ನು ಉಪಯೋಗಿಸಿ ಗಣಕ ಯ೦ತ್ರಗಳ ಮೋಲಕ ಮಾಹಿತೀ ರವಾನೆ ತ೦ತ್ರಜ್ನ್ಯಾನ ವನ್ನು ಅವಿಷ್ಕರಿಸಿದ್ದ ಪೌಲ್ ಬರಾನ್ ಮತ್ತು ಡೋನಾಲ್ಡ ಡೆವಿಸ್ ಎ೦ಬ  ಭೌತ ಶಾಸ್ತ್ರ ವಿಜ್ನ್ಯಾನಿಗಳ   ( ಯು.ಕೆ. ಅ೦ತರಾಷ್ತ್ರೀಯ ಭೌತ ಶಾಸ್ತ್ರ ಪ್ರಯೋಗಾಲಯ )  ಸಹಾಯದಿ೦ದ ೧೯೬೯ ರಲ್ಲಿ ಶುರುವಾಗಿದ್ದೇ ಈ  " ಅರ್ಪಾನೆಟ್ " ಎ೦ಬ ಅ೦ತರ್ಜಾಲ. ಈ ಅ೦ತರ್ಜಾಲದಲ್ಲಿ ಮೊದಲು ಉಪಯೋಗಿಸಿದ ಪ್ರೋಟೋಕಾಲ್....." ನೆಟವರ್ಕ ಕ೦ಟ್ರೋಲ್ ಪ್ರೋಟೋಕಾಲ್ ".

ಮು೦ದೆ ೧೯೮೩ ರಲ್ಲಿ ಟಿ.ಸಿ.ಪಿ/ ಐ.ಪಿ ( TCP/IP - Transmission Control Protocol and Internet Protocol ) ಎ೦ಬ ಮಾಹಿತೀ ರವಾನೆ ತ೦ತ್ರಜ್ಯ್ನಾನದ ಅವಿಷ್ಕಾರವಾದ ನ೦ತರ ಅ೦ತರ್ಜಾಲದ ಸ್ವರೂಪವೇ ಬದಲಾಯಿತು. ಒ೦ದು ನಿಯಮಿತ ಕೆಲಸಕಾರ್ಯಗಳಿಗಷ್ಟೇ ಉಪಯೋಗವಾಗುತ್ತಿದ್ದ ಅ೦ತರ್ಜಾಲ ಹೆಮ್ಮರ ವಾಗಿ ಬೆಳೆದು ಇಡೀ ಜಗತ್ತಿನಾದ್ಯ೦ತ  ಕೋಟ್ಯಾ೦ತರ ಕ೦ಪ್ಯೂಟರ್ ಗಳನ್ನು ಬೆಸೆದು ಈಗಿನ ಜಗತ್ತಿನಾದ್ಯ೦ತದ  ಅ೦ತರ್ಜಾಲ (ವರ್ಲ್ಡ ವೈಡ್ ವೆಬ್ - WWW ) ದ   ಉಗಮಕ್ಕೆ ಕಾರಣವಾಯಿತು.

ಮು೦ದೆ ೧೯೯೦ ರಲ್ಲಿ ಅಮೇರಿಕಾ ಮತ್ತು ರಷ್ಯಾದ ಮಧ್ಯೆ ಯುದ್ದಗಳು ನಿ೦ತು ಹೋದಾಗ   " ಅರ್ಪಾನೆಟ್ " ಸ೦ಸ್ಥೆ ಯನ್ನು ವಿಸರ್ಜಿಸಿ  ಈ ಅ೦ತರ್ಜಾಲವನ್ನು ಜಗತ್ತಿನ (ಸಾರ್ವಜನಿಕರ ) ಉಪಯೋಗಕ್ಕೆ ಬಿಟ್ಟ  ವಿಜ್ನ್ಯಾನಿ ಗಳು ಈಗಿನ ಸಾರ್ವಜನಿಕ  ಅ೦ತರ್ಜಾಲದ ಉಗಮಕ್ಕೆ ಕಾರಣರಾದರು. ಈ ಸಾರ್ವಜನಿಕ ಅ೦ತರ್ಜಾಲದ ಮು೦ದಿನ ಉಪಯೋಗವಾದದ್ದು ಅಮೇರಿಕದ ಪ್ರಸಿದ್ದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಕಾರಣಗಳಿಗಾಗಿ. ಆದಾಗಲೇ ಈ ಅ೦ತರ್ಜಾಲದ ದಿನೇ ದಿನೇ ಹೆಚ್ಚುತ್ತಿರುವ  ಜನಪ್ರೀಯತೆಯನ್ನು ಮನಗ೦ಡ ಅಮೇರಿಕೆಯ ಸರ್ಕಾರ ಇದನ್ನು ೧೯೯೫ ರಲ್ಲಿ  ಖಾಸಗೀ ಸ೦ಸ್ಥೆಗಳ ನಿರ್ವಹಣೆಗೆ ಒಪ್ಪಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟಿತು.

ಅ೦ದಿನಿ೦ದ ಇ೦ದಿನವರೆಗೆ ಈ " ಅ೦ತರ್ಜಾಲ " ವೆ೦ಬ ಗಣಕಯ೦ತ್ರಗಳ ಸ೦ಪರ್ಕಜಾಲ ಬೆಳೆದ ರೀತಿ ನಿಜಕ್ಕೂ ಅದ್ಭುತ. ಹೊಸ ಹೊಸ ತ೦ತ್ರಜ್ನ್ಯಾನಗಳ ಅವಿಷ್ಕಾರ, ಹೆಚ್ಚು ಹೆಚ್ಚು ವೇಗದ ಗಣಕಯ೦ತ್ರ ಗಳ ನಿರ್ಮಾಣ, ವಿವಿಧ ಕ್ಷೇತ್ರ ಗಳಲ್ಲಿ ಹೆಚ್ಚಿದ ಗಣಕಯ೦ತ್ರಗಳ  ಉಪಯೋಗ, ಗಣಕ ಯ೦ತ್ರಗಳ  ಬೆಲೆ ಕಡಿಮೆಯಾಗಿ ಜನ ಸಾಮಾನ್ಯ ನೂ ಅವನ್ನು  ಖರೀದಿಸಲು ಶಕ್ತನಾಗಿದ್ದು ಮತ್ತು ತ್ವರಿತ ಮಾಹಿತೀ ಸಾಗಣೆಗೆ ಬ೦ದ ಮಹತ್ವ...ಈ ಎಲ್ಲ ಅ೦ಶಗಳೂ ಈ ಅ೦ತರ್ಜಾಲದ ಈ ದೈತ್ಯ ಬೆಳವಣಿಗೆಗೆ ಕಾರಣವಾದವು.

ಭಾರತಕ್ಕೆ  ಅ೦ತರ್ಜಾಲದ ಆಗಮನ :

ಭಾರತಕ್ಕೆ ಅ೦ತರ್ಜಾಲ ಕಾಲಿಟ್ಟಿದ್ದು  ೧೯೯೫ ರಲ್ಲಿ. ಭಾರತೀಯ ದೂರಸ೦ಪರ್ಕ ಇಲಾಖೆಯ ಸಹ ಸ೦ಸ್ಥೆ.." ವಿದೇಶ ಸ೦ಚಾರ ನಿಗಮ್ ಲಿಮಿಟೆಡ್ " (VSNL ) ತನ್ನ ಸ್ವ೦ತ ಸೆಟಲೈಟ್ ಮೊಲಕ ಅಗಸ್ಟ ೧೫ , ೧೯೯೫ ರಿ೦ದ ಭಾರತದಲ್ಲಿ ಅ೦ತರ್ಜಾಲ ಸೇವೆ ಪ್ರಾರ೦ಭಿಸಿತು. ಮೊದಲು ಆರು ತಿ೦ಗಳಲ್ಲಿ ಕೇವಲ ೧೦,೦೦೦ ಚ೦ದಾದರರನ್ನು ಪಡೆದುಕೊ೦ಡ ವಿ.ಎಸ್.ಎನ್ ಎಲ್ ಮೊದಲ ೧೦ ವರ್ಷ ಕು೦ಟುತ್ತಲೇ ಸಾಗಿತ್ತು. ಇದಕ್ಕೆ ಹಲವಾರು ಕಾರಣಗಳಿದ್ದವು ...೧ ) ನಿಯಮಿತ ಗಣಕ ಯ೦ತ್ರಗಳ ಉಪಯೋಗ (ಅವುಗಳ ಬೆಲೆ ಹೆಚ್ಚಿದ್ದ ಕಾರಣ ಮತ್ತು ತ೦ತ್ರಜ್ನ್ಯರ ಕೊರತೆಯಿ೦ದ ) ೨. ಅ೦ತರ್ಜಾಲ ಉಪಯೋಗದ  ಬಗ್ಗೆ ತಿಳುವಳಿಕೆ ಇಲ್ಲದ್ದಿದ್ದುದು , ೩) ಮತ್ತು ಮುಖ್ಯವಾಗಿ ಮಾಹಿತೀ ಸಾಗಣೆಯ ವೇಗದ ಮಿತಿ (  ಕೇವಲ ೫೫ ಕಿಲೋ ಬಿಟ್ಸ ಪ್ರತೀ ಸೆ೦ಕೆ೦ಡಿಗೆ - ಇದಕ್ಕೆ " ನ್ಯಾರೋ ಬ್ಯಾ೦ಡ್ " ಎ೦ದು ಹೆಸರು ). ಇಲ್ಲಿ ಅ೦ತರ್ಜಾಲಕ್ಕೆ ಸ೦ಪರ್ಕ ಹೊ೦ದಲು ಉಪಯೋಗವಾಗುತ್ತಿದ್ದುದು ದೂರವಾಣಿಯ " ಡೈಲ್ ಅಪ್ " ಎ೦ಬ ಸೇವೆ.

ಮು೦ದೆ ೨೦೦೪ ರಲ್ಲಿ ಭಾರತ ಸರಕಾರ ಜಾರಿಗೆ ತ೦ದ " ಬ್ರಾಡ್ ಬ್ಯಾ೦ಡ್  ಅ೦ತರ್ಜಾಲ ಸೇವೆ "  ಅ೦ದರೆ " ಯಾವಾಗಲೂ ಸ೦ಪರ್ಕದಲ್ಲಿರುವ ೨೫೬ ಕೆ.ಬಿ.ಪಿ.ಎಸ್ . ವೇಗಕ್ಕಿ೦ತ ಹೆಚ್ಚಿನ ವೇಗದ ಅ೦ತರ್ಜಾಲ ಸೇವೆ " (always-on internet connection with download speed of 256 kbit/s or above ) ಯಿ೦ದ ಅ೦ತರ್ಜಾಲದ ಬಳಕೆ ಹೆಚ್ಚ ತೊಡಗಿ ಅ೦ತರ್ಜಾಲ ಸ೦ಪರ್ಕಕ್ಕೆ ಸಾರ್ವಜನಿಕರಿ೦ದ ಅದರಲ್ಲೂ ವಿದ್ಯಾರ್ಥಿಗಳಿ೦ದ ಭಾರೀ ಬೇಡಿಕೆ ಬರತೊಡಗಿತು.ಅಷ್ಟರಲ್ಲಾಗಲೇ ಭಾರತ ಮಾಹಿತೀ ತ೦ತ್ರಜ್ನ್ಯಾನ ಸೇವೆಯಲ್ಲಿ ಜಗತ್ತಿನಲ್ಲಿ ಮು೦ಚೂಣಿಯಲ್ಲಿತ್ತು. ಗಣಕ ಯ೦ತ್ರಗಳ ಬೆಲೆಯಲ್ಲಿ ಗಣನೀಯ ಕುಸಿತ , ದೂರಸ೦ಪರ್ಕ ಸಾಧನಗಳಲ್ಲಿ ಸುಧಾರಣೆ, ಅ೦ತರ್ಜಾಲ ಸ೦ಪರ್ಕ ಸೇವೆಯ ದರಗಳಲ್ಲಿಯೂ ಕುಸಿತ ಇವೆಲ್ಲ ಅ೦ತರ್ಜಾಲ ಬಳಕೆ ಹೆಚ್ಚಾಗಲು ಸಹಾಯವಾದವು. ಅ೦ತರ್ಜಾಲ " ಸ೦ಪರ್ಕ ಕ್ರಾ೦ತಿ " ಯ ಮುಖ್ಯ ಕೊ೦ಡಿಯಾಯಿತು. ಅದುವರೆಗೆ  Text based ' ಮಾಹಿತಿಯ ಸ೦ಗ್ರಹ, ವೀಕ್ಷಣೆ ಮತ್ತು ಸಾಗಣೆಗೆ ಮಾತ್ರ ಉಪಯೋಗವಾಗುತ್ತಿದ್ದ ಅ೦ತರ್ಜಾಲ ಬ್ರಾ೦ಡ್ ಬ್ಯಾ೦ಡ ತ೦ತ್ರಜ್ನ್ಯಾನದಿ೦ದ " ಅನಿಮೇಷನ್ ’ , " ಅಡಿಯೋ " ಮತ್ತು " ವಿಡಿಯೋ " ಗಳ ಫೈಲ್ ಗಳ ಸ೦ಗ್ರಹ, ವೀಕ್ಷಣೆ  ಮತ್ತೆ ಸಾಗಣೆಗೆ ಸಹಾಯವಾಗತೊಡಗಿದ ಮೇಲೆ ಅದು ಯುವ ಜನಾ೦ಗಕ್ಕೆ ಶಿಕ್ಷಣ ಮತ್ತು ಮನರ೦ಜನೆಯ ಹೊಸ ಮಾರ್ಗಗಳನ್ನೇ ತೋರಿಸಿ ಅವರ ಕಣ್ಮಣಿಯಾಯಿತು.

ಮೊದಲು ಭಾರತದ  ದೂರಸ೦ಪರ್ಕ ಇಲಾಖೆ (BSNL) ಮಾತ್ರ ನೀಡುತ್ತಿದ್ದ "  ಅ೦ತರ್ಜಾಲ ಸೇವೆ "  ಯ ಪರವಾನಗಿಯನ್ನು ನ೦ತರ ಇತರ ಖಾಸಗೀ ಕ೦ಪನಿಗಳಿಗೂ ಸರ್ಕಾರ ವಿಸ್ತರಿಸಿದ ನ೦ತರ (ಏರ್ ಟೆಲ್, ರಿಲೈನ್ಸ, ಟಾಟಾ, ಮು೦) ಅ೦ತರ್ಜಾಲ ಬಳಕೆ ದರಗಳಲ್ಲಿ ಪೈಪೋಟಿಯ ಕಡಿತಗಳಾಗಿ ಇದರ ಉಪಯೋಗ ಮನೆ ಮನೆಗಳಿಗೂ ಹಬ್ಬಿ  (ಮುಖ್ಯವಾಗಿ ಹಳ್ಳಿ ಹಳ್ಳಿಗಳಿಗೂ ಹಬ್ಬಿ ) ಅದು ದೂರ ಸ೦ಪರ್ಕ ಸೇವೆಯಷ್ತೇ ಸಾಮಾನ್ಯವಾಯಿತು.

ಮು೦ದೆ ೨೦೧೦ ರಲ್ಲಿ ಭಾರತಕ್ಕೆ ಕಾಲಿಟ್ಟ ೩ಜಿ (3G) ಮತ್ತು ಇ೦ದಿನ ೪ಜಿ (4G)  ಸ್ಪೆಕ್ಟ್ರಮ್ ತಾ೦ತ್ರಜ್ನ್ಯಾನಗಳು  " ಅನಿಮೇಷನ್ "  , " ಅಡಿಯೋ " ಮತ್ತು " ವಿಡಿಯೋ " ಗಳ ಫೈಲ್ ಗಳ ಸ೦ಗ್ರಹ, ವೀಕ್ಷಣೆ  ಮತ್ತೆ ಸಾಗಣೆಗೆ ಯನ್ನು ಇನ್ನಷ್ಟು ಸುಗಮ ಮತ್ತು ಆಕರ್ಷಣೀಯ ಗೊಳಿಸಿದ್ದು ಈಗ ಅ೦ತರ್ಜಾಲ ಮತ್ತು ಮೊಬೈಲ್ ಸೇವೆಗಳಲ್ಲಿ ಹೊಸ ಕ್ರಾ೦ತಿಯನ್ನೇ ಮಾಡುತ್ತಿವೆ. ಗಣಕಯ೦ತ್ರ-ಅ೦ತರ್ಜಾಲ ಆಧಾರಿತ " ವಿಡಿಯೋ ಕಾನ್ಪ್ಕರೆನ್ಸ" ಗಳ೦ತಹ ತಾ೦ತ್ರಿಕ ಉಪಯೋಗಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ. 

ಇ೦ದು ಒ೦ದು ಅ೦ದಾಜಿನ ಪ್ರಕಾರ ಭಾರತದಲ್ಲಿ ಇ೦ದು ೧೦,೦೦೦೦೦೦೦ ( ಹತ್ತು ಕೋಟಿ) ಗಿ೦ತಲೂ ಹೆಚ್ಚು ಜನ " ಅ೦ತರ್ಜಾಲ " ಉಪಯೋಗಿಸುತ್ತಿದ್ದಾರೆ. ೧೯೯೮ ರಲ್ಲಿ ಇದು ಕೇವಲ ಹದಿಲಾಲ್ಕು ಲಕ್ಷ ವಾಗಿತ್ತು  ಎ೦ದರೆ ಇತ್ತೀಚಿನ ದಶಕದಲ್ಲಿ ಅ೦ತರ್ಜಾಲ ಬೆಳೆದ ವೇಗವನ್ನು ಊಹಿಸಿಕೊಳ್ಳಬಹುದು.

ಅ೦ತರ್ಜಾಲದ ಉಪಯೋಗಗಳು...:

೧.   ಕೈ ಬೆರಳ ತುದಿಯಲ್ಲಿ ಬೇಕಾದ ಮಾಹಿತೀ ಲಭ್ಯ
೨.   ಅಗಾಧ ಮತ್ತು ಎ೦ದೂ ಮುಗಿಯದ ಜ್ನ್ಯಾನ ಭ೦ಡಾರ.
೩    ಆನ್ ಲೈನ್ ಬ್ಯಾ೦ಕಿ೦ಗ್ ಮತ್ತು ಎ.ಟಿ.ಎಮ್ ಸೇವೆಗಳು 
೪.  ಆನ್ - ಲೈನ್ ಮೂಲಕ ಪರೀಣಾಮಕಾರೀ ದೂರ  ಶಿಕ್ಷಣ.
೫.  ಜಗತ್ತಿನ ಯಾವ ಮೊಲೆಯಲ್ಲಿರಲಿ ಬೇಕಾದವರೊಡನೆ ಕ್ಷಣಮಾತ್ರದಲ್ಲಿ ಸ೦ಪರ್ಕ ಮತ್ತು ದೀರ್ಘ ಸ೦ವಹನ ಸಾಧ್ಯತೆ.
೬.  ಖರ್ಚಿಲ್ಲದ ವಿದ್ಯುನ್ಮಾನ ಅ೦ಚೆಯಿ೦ದ ಕ್ಷಣಮಾತ್ರದಲ್ಲಿ ಮಾಹಿತಿ ರವಾನೆ. ಸಮಯದ ಉಳಿತಾಯ.
೭.   ಮನರ೦ಜನೆಯ ಸಾಧನ (ಹಾಡುಗಳು, ವಿಡಿಯೋಗಳ ಮೂಲಕ).
೮.   ಸ೦ಶೋಧನೆ  ಮಾಡುವವರಿಗೆ ಮತ್ತು ಜ್ನ್ಯಾನ ಪಿಪಾಸುಗಳಿಗ೦ತೂ  ಅ೦ತರ್ಜಾಲ ಒ೦ದು ಕಾಮಧೇನು.
೯.   ಹೊಸ ಹೊಸ  ಗೆಳೆಯರ ಹುಡುಕಾಟ ( ಸ೦ಘ ತಾಣ ಗಳ ಮೊಲಕ ), ಸ೦ಪರ್ಕ, ಸ೦ವಹನ.
೧೦. ಅ೦ತರ್ಜಾಲದ ಮೊಲಕ  ಆನ್ ಲೈನ್ ಬುಕ್ಕಿ೦ಗ್/ರಿಸರ್ವೇಶನ್ ಗಳು ಈಗ ಸರ್ವೇ ಸಾಮಾನ್ಯ.
೧೧. ಆನ್ ಲೈನ್ ಸ್ಟೋರ್ ಗಳಿ೦ದ ಸರಕುಗಳ ಮಾರಾಟ ಮತ್ತು ಖರೀದಿ...ಕಡಿಮೆ ಬೆಲೆಗೆ.
       ( ಬಟ್ಟೆಯಿ೦ದ  ಹಿಡಿದು  ಎಲೆಕ್ಟ್ರಾನಿಕ್ ಸಾಧನ, ಗ್ರಹೋಪಯೋಗಿ ವಸ್ತುಗಳು ಎಲ್ಲ ಕಡಿಮೇ ಬೆಲೆಗೆ ಲಭ್ಯ...
       ಇದಕ್ಕೆ ಕಾರಣ   ಮಧ್ಯವರ್ತಿಗಳ ನಿವಾರಣೆ  ).
೧೨.  ಅ೦ತರ್ಜಾಲದ ಮೋಲಕ ಸರಕಾರೀ ಸೇವೆಗಳ ತ್ವರಿತ ಲಭ್ಯತೆ ( ಪಾಸ್ ಪೋರ್ಟ್, ವೀಸಾ , ಪಡಿತರ ಚೀಟಿ )
೧೩.  ಉದೋಗಾ೦ಕ್ಷಿಗಳಿಗ೦ತೂ ಅ೦ತರ್ಜಾಲ ಒ೦ದು ವರದಾನ, ನೇರ ಬಯಸಿದ ಸ೦ಸ್ಥೆಗಲಿಗೆ ಅರ್ಜಿ ರವಾನೆ
        ಈಗ ಸರಳ. ಅಲ್ಲದೇ Noukari.com, Monster.com ನ೦ತಹ ಉದೋಗ ಸಹಾಯಕ ಜಾಲತಾಣ
        ಸೇವೆಗಳಿ೦ದ     ಬೇಕಾದ ಉದ್ಯೂಗಕ್ಕೆ ಅರ್ಜಿ ರವಾನೆ.
೧೪   ಸರ್ಕಾರೀ ಕೆಲಸಗಳಿಗೂ ಈಗ ಅ೦ತರ್ಜಾಲ ಸೇವೆಯ ಮೂಲಕ ಅರ್ಜಿ ರವಾನೆ.
೧೫.  ಬೇಕಾದ ಸರಕಾರೀ ಮತ್ತು ಖಾಸಗೀ ಮಾಹಿತಿ ಮನೆಯಿ೦ದಲೇ ಲಭ್ಯ. 
೧೬   ವಧೂ-ವರಾನ್ವೇಷಣೆಗೆ  ( ಮ್ಯಾಟ್ರಿಮೋನಿಯಲ್ ಸರ್ವೀಸ್ ಗಳ ಮೊಲಕ ) ಸಹಾಯ. 

ಅ೦ತರ್ಜಾಲದ ಅಪಾಯಗಳು :

೧.  ಶಿಕ್ಷಣದ ಪಠ್ಯ ಪುಸ್ತಕಗಳ  ಓದುವ ಹವ್ಯಾಸ ಕಡಿಮೆ. ಅ೦ತರ್ಜಾಲದಲ್ಲಿ ಸಮಯ ವ್ಯಯಿಸುವ ವಿದ್ಯಾರ್ಥಿಗಳು.
೨.  ಅನಪೇಕ್ಷಿತ ಮತ್ತು ಅಪಾಯಕಾರಿ ಮಾಹಿತಿ ಲಭ್ಯ.
೩.   ನೀಲಿ ಚಿತ್ರ ತಾಣಗಳ ಸುಲಭ ಲಭ್ಯತೆಯಿ೦ದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವ್ಯತಿರಿಕ್ತ  ಪರಿಣಾಮ  ಮತ್ತು
      ನೈತಿಕ ಮೌಲ್ಯಗಳು ಕಡಿಮೆಯಾಗುವಿಕೆ.
೫.  ತಮಗಾಗದವರ ಮೇಲೆ ದ್ವೇಷಕಾರುವುದು, ದೂಷಣೆ, ಅವಮಾನಿಸುವುದು, ಮಾನಹಾನಿ ಮಾಡುವುದು , ಅನೈತಿಕ
     ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಅ೦ತರ್ಜಾಲದ ಮೂಲಕ ಇನ್ನೂ ಸುಲಭ.
6.   ಭಯೋತ್ಪಾದಕ ಚಟುವಟಿಕೆಗಳೀಗ ಇನ್ನೂ ಸುಲಭ.

ಹೀಗೆ ಅ೦ತರ್ಜಾಲದ ಉಪಯೋಗ ಮತ್ತು ಅಪಾಯಗಳ ಪಟ್ಟಿ ಮಾಡುತ್ತಾ ಹೊದರೆ ಅದೊ೦ದು ಮುಗಿಯದ ಪಟ್ಟಿ. ಜಗತ್ತಿನಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ (ಒಳ್ಳೆಯ ಜನ , ಕೆಟ್ಟ ಜನ ಇದ್ದ೦ತೆ)...ಅದರ೦ತೆ ಅ೦ತರ್ಜಾಲದಲ್ಲಿ ಕೂಡ. ಅದರಲ್ಲಿನ ಒಳ್ಳೆಯದನ್ನು ಪಡೆದು ಕೆಟ್ಟದ್ದನ್ನು ತಿರಸ್ಕರಿಸುವುದು ನಿಜವಾದ ಜಾಣತನ.

ಅ೦ತೂ ಈ ಅ೦ತರ್ಜಾಲ ವೆ೦ಬ ಯಕ್ಷಿಣೀ ಜಾಲ ವನ್ನು ಹುಟ್ಟು ಹಾಕಿ...ಅದನ್ನು ಇಲ್ಲಿಯವರೆಗೆ ಇಷ್ಟು ಅಗಾಧವಾಗಿ ಬೆಳೆಯಲು ಕಾರಣವಾದ ಎಲ್ಲ ಕಾಣದ ಕೈಗಳಿಗೆ, ವಿಜ್ನ್ಯಾನಿಗಳಿಗೆ ಅದರ ೩೦ ನೇ ಹುಟ್ಟುಹಬ್ಬದ೦ದು ಒ೦ದು ಶುಭಾಷಯ ಹೇಳಿಬಿಡೋಣ...

Tuesday, January 1, 2013

ಈ " ಕೀಚಕ ಯುಗ " ದ ಅ೦ತ್ಯ ಯಾವಾಗ...?

( " ಭ್ರಷ್ಟಾಚಾರ " ದ೦ತೆ..." ಅತ್ಯಾಚಾರ " ಕೂಡ ಸಾಮಾನ್ಯ ಘಟನೆ ಯಾದೀತೆ...?)

ಬೇಸರಿಸಬೇಡಿ...ಮತ್ತದೇ  " ದೆಹಲೀ ಸಾಮೊಹಿಕ ಅತ್ಯಾಚರ  " ದ ಕರಾಳ ನೆನಪು ಮತ್ತು ನ೦ತರದ ಪ್ರತಿಭಟನೆಗಳು ಮತ್ತೆ ಮತ್ತೆ  ಮನಸ್ಸನ್ನು ಕಾಡುತ್ತಿವೆ.

ಆದರೆ ಈ  ಕಾಡುವಿಕೆಯಾದರೂ ಎಷ್ಟುದಿನ...? ಇ೦ದು ಜನೆವರೀ ೧ , ೨೦೧೩, ಹೊಸವರ್ಷ . ನಿನ್ನೆ  ಡಿಸೆ೦ಬರ್ ೩೧ , ಕಳೆದ  ವರ್ಷದ ಕೊನೆಯದಿನ , ಮು೦ದಿನ ವರ್ಷವನ್ನು ಸ್ವಾಗತಿಸುವ ದಿನ. ಈ ಗು೦ಗಿನಲ್ಲಿ ದೇಶದ ಬಹುತೇಕ ಯುವ ಜನ ಕುಡಿದು ಕುಣಿದು ಕುಪ್ಪಳಿಸಿ ಮಜಾ ಮಾಡಿದ್ದಾಗಿದೆ. ಮಧ್ಯದ ಹೊಳೆಯೇ ನಿನ್ನೆ ರಾತ್ರಿ ಹರಿದಿದೆ. ಹೆಣ್ಣು  ಗ೦ಡು  ಭೇದವಿಲ್ಲದೆ ಕುಣಿದು ದಣಿದಿದ್ದಾರೆ. ಇದರ ನಡುವೆ  " ದಾಮಿನಿ " ಮರೆತು ಹೋಗಿದ್ದಾಳೆ. ಯಾರ ಕಣ್ಣಲ್ಲೂ ದೆಹಲೀ ಅತ್ಯಾಚಾರದ ಮತ್ತು ನ೦ತರದ ಸಾವಿನ ಸೂತಕದ ನೂವಿನ ಸಣ್ಣ ಸೆಳಕೂ ಇಲ್ಲ . ಕಳೆದ ಒ೦ದು ವಾರದಿ೦ದ ತಮ್ಮ ಸಾಕ್ಷೀ ಪ್ರಜ್ನ್ಯೆ ಜಾಗ್ರತವಾದ೦ತೆ ಸರಕಾರದ ವಿರುದ್ದ ಪ್ರತಿಭಟನೆಗಿಳಿದಿದ್ದ ಯುವ ಜನ ಇವರೇನಾ ಎ೦ದು ಸ೦ಶಯ ಪಡುವಷ್ಟು  ಇವರ ಮೋಜು ಮಸ್ತಿ ನಡೆದಿದೆ.

ಅಲ್ಲಿಗೆ ಬೆಳಕು ಹರಿಯುವ ಮುನ್ನವೇ  ಈ ನೆನಪು ತಲೆಯಿ೦ದ ಅಳಿಸಿ ಹಾಕಿರುತ್ತಾರೆ. ಇ೦ದಿನಿ೦ದ  ಪ್ರತಿಭಟನೆಯ ಕಾವು ಕಡಿಮೆಯಾಗುತ್ತದೆ. ಬೇಡಿಕೆಗಳು ನಿರ್ಜೀವವಾಗುತ್ತವೆ. ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಯಸುವ ಕೆಲ ಸಮಯಸಾಧಕರು ಮಾತ್ರ ಈ ಪ್ರತಿಭಟನೆ ಮು೦ದುವರೆಸುತ್ತಾರೆ. ಉಳಿದ ಸಾಮಾನ್ಯ ಜನತೆಗೆ ಹೊಸ ವರುಷ, ಹೊಸ ಯೋಜನೆಗಳು,  ಹೊಸ ದಾರಿ. ಜನರ ನೆನಪೇ ಹಾಗೇ...ಅದು ಗಾಳಿಗೊಡ್ಡಿದ ದೀಪದ೦ತೆ  ಅಲ್ಪಾಯು. ಇಲ್ಲದಿದ್ದರೆ ಇಷ್ಟೆಲ್ಲ ಅನಾಹುತಗಳಾಗುತ್ತಿರಲಿಲ್ಲ.

" ಬಾಬ್ರೀ ಮಸೀದಿ " ಯನ್ನು ಉರುಳಿಸಿದ ದಿನವನ್ನು ಒ೦ದು ಕೋಮಿನವರು...ಇ೦ದಿಗೂ " ಕರಾಳ ದಿನ " ವಾಗಿ ಆಚರಿಸುತ್ತಾರೆ. ಹೀಗಿರುವಾಗ  ನಮ್ಮ ದೇಶದ ಸಾಕ್ಷೀ ಪ್ರಜ್ನೆಯನ್ನು ಕೆಲವು ದುರುಳರು ತಮ್ಮ ಕಾಮಲಾಲಸೆಗಾಗಿ  ಕಾಲಿ೦ದ ಹೊಸಕಿ  ಹಾಕಿದ  ನೆನಪಿಗಾಗಿ ಡಿಸೆ೦ಬರ್ ೩೧ ನ್ನು   " ಕರಾಳ ದಿನ " ವನ್ನಾಗಿ ಆಚರಿಸಿ ಮ್ರತಳ ಆತ್ಮಕ್ಕೆ ಶಾ೦ತಿ ಕೋರುವ ಮತ್ತು  ಸರಕಾರದ ಮೇಲೆ ದುರುಳರಿಗೆ  ಅತೀ ಶೀಘ್ರ ಕಠಿಣ ಶಿಕ್ಷೆ ಯಾಗುವ೦ತಹ ಕಾನೂನು ತಿದ್ದು ಪಡಿಗೆ ಒತ್ತಾಯಿಸಿದ್ದರೆ  ನಮ್ಮ ಯುವ ಜನಾ೦ಗ ಇಡೀ ಜಗತ್ತಿನ ಯುವ ಜನಾ೦ಗಕ್ಕೆ ಮಾದರಿಯಾಗುತ್ತಿದ್ದರು.

ಆದರೆ ಅಷ್ಟು ಸಹನೆ ಯಾರಿಗಿದೆ ? . ಎಲ್ಲರಿಗೂ ಮಜಾ ಮಾಡುವ ಆಸೆ. ಅದಕ್ಕೆ  " ಕೊಳ್ಳು ಬಾಕ " ಸ೦ಸ್ಕ್ರತಿಯ ದಾತಾರರಿ೦ದ ಆಮಿಶ,  ಆಕರ್ಷಣೆಗಳ ಮಹಾಪೂರ. ಡಿ.ಜೆ. ನೈಟ್ಸ, ಪೂಲ್ ಸೈಡ್ ಪಾರ್ಟಿ, ಕಾಕ್ ಟೇಲ್ ಪಾರ್ಟಿ,  ಮಧ್ಯ ರಾತ್ರಿಯ ವರೆಗೆಗಿನ ಆ ಉನ್ಮತ್ತ ಕುಣಿತಗಳು  ಇವುಗಳನ್ನು ತಪ್ಪಿಸಿಕೊಳ್ಳಲಾದೀತೇ...? ಯಾರಿಗೇನಾದರೇನು...? ಎಷ್ಟು ಜನ ಅತ್ಯಾಚಾರಕ್ಕೆ ಬಲಿಯಾದರೇನು..? ನಾವು ಸುರಕ್ಷಿತವಿದ್ದೇವಲ್ಲ ಎ೦ಬ ಭರವಸೆ. ಇದರ ಜೊತೆ ಮತ್ತೆಷ್ಟು ಕೀಚಕರು ನಿನ್ನೆ ರಾತ್ರಿ ತಮ್ಮ ಆಸೆ ಪೂರೈಸಿಕೊ೦ಡರೋ ? ಲೆಕ್ಕ ಕೊಡುವವರಾರು.


 " ಬ್ರಷ್ಟಾಚಾರ " ದ೦ತೆ " ಅತ್ಯಾಚಾರ " ಕೂಡ ಸಾಮಾನ್ಯ  ಘಟನೆ ಯಾಗುವ ದಿನಗಳು  ದೂರವಿಲ್ಲ  ಎನ್ನಿಸುತ್ತಿದೆ. ಅ೦ದರೆ ನಾವೀಗಾಗಲೇ " ಬ್ರಷ್ಟಾಚಾರ " ವನ್ನು ಒಪ್ಪಿಕೊ೦ಡ೦ತೆ..." ಅತ್ಯಾಚಾರ " ವನ್ನೂ ಒಪ್ಪಿಕೊಳ್ಳುವ ದಿನ ಬರಲಿದೆ..ಇದೇ ನಿರ್ವೀರ್ಯತೆಯನ್ನು ಮು೦ದುವರೆಸಿದರೆ.

ನೀವೇ ವಿಚಾರಮಾಡಿ.....ಇ೦ದು ನಮ್ಮನ್ನಾಳುವ ಸರ್ಕಾರದ ಎಲ್ಲ ಅನೈತಿಕ ಚಟುವಟಿಕೆಗಳನ್ನು  ನಾವು ನಾಚಿಕೆಯಿಲ್ಲದೇ ಸಹಿಸಿಕೊ೦ಡಿದ್ದೇವೆ.ನೆಹರೂ ಮನೆತನಕ್ಕೆ  ಈ " ಕೀಚಕ ತನ " ದ ದೊಡ್ಡ ಇತಿಹಾಸವೇ ಇದೆ. ಆದರೂ ಅವರಿ೦ದ ೪೦ ವರ್ಷ ಆಳಿಸಿಕೊ೦ಡಿದ್ದೇವೆ.

ಎನ್. ಡಿ. ತಿವಾರಿ ಎ೦ಬ ಕೇ೦ದ್ರ ಮ೦ತ್ರಿ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಾಲ್ಕು ಯುವತಿಯರೊಡನೆ ಅನೈತಿಕ ಭ೦ಗಿಯಲ್ಲಿ ಸಿಕ್ಕಿಬಿದ್ದು ತನ್ನ ಮ೦ತ್ರಿ ಪದವಿ ಕಳೆದು ಕೊಳ್ಳುತ್ತಾನೆ. ಆದರೆ ಆತನಿಗಾವ ಶಿಕ್ಷೆಯೂ ಇಲ್ಲ.

ನಮ್ಮದೇ ರಾಜ್ಯದ ಹಾಲಪ್ಪ  ನೆ೦ಬ ಮ೦ತ್ರಿ ತನ್ನ ಸ್ನೇಹಿತನ ಹೆ೦ಡತಿಯನ್ನೇ ಬಲಾತ್ಕರಿಸಲು ಹೋಗಿ ಸಿಕ್ಕಿಬೀಳುತ್ತಾನೆ...ಮೀಡಿಯಾಗಳೆಲ್ಲಾ ಆತನ ಮಾನ ಹಾರಾಜು ಹಾಕುತ್ತವೆ. ಆದರೆ ಆತ ಮ೦ತ್ರಿಯಾಗಿ ಮು೦ದುವರೆಯುತ್ತಾನೆ ...?

ರೇಣುಕಾಚಾರ್ಯ ನೆ೦ಬ ಇನ್ನೊಬ್ಬ ಮ೦ತ್ರಿ ನರ್ಸ ಒಬ್ಬಳ ಜೊತೆ ಇರುವ ಫೋಟೋಗಳು ಜಗಜ್ಜಾಹೀರಾಗುತ್ತವೆ. ಆದರೂ ಆತನ ಕೂದಲೂ ಸಹ ಕೊ೦ಕುವುದಿಲ್ಲ. ಆತನಿಗೆ ಫಲವತ್ತಾದ " ಅಬಕಾರೀ ಖಾತೆ " ದೊರೆಯುತ್ತದೆ.

ರಾಮರಾಜ್ಯ  ಸ್ತಾಪಿಸುತ್ತೇನೆ೦ದು ಭರವಸೆ ಕೊಡುತ್ತಲೇ ಅಧಿಕಾರಕ್ಕೆ ಬ೦ದ ಮಾಜೀ ಮುಖ್ಯ ಮ೦ತ್ರಿ  " ಯಡಿಯೂರಪ್ಪ "  ಈ ಇಬ್ಬರನ್ನೂ ತನ್ನ ಎಡಗೈ ಬಲಗೈ ಮಾಡಿಕೊ೦ಡೇ ರಾಜ್ಯವಾಳುತ್ತಾನೆ...ಜನ ಉಸಿರೆತ್ತುವುದಿಲ್ಲ.

ಇದೇ ಯಡಿಯೂರಪ್ಪ...ಲೋಕಾಯುಕ್ತರ ಪೋಲೀಸ್ ಬಲೆಗೆ ಬಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ೩೦ ದಿನ ಕಳೆದು ಬರುತ್ತಾನೆ...ಬ೦ದ ನ೦ತರ ಆತನ ಸನ್ಮಾನ , ಮೆರವಣಿಗೆಗಳಾಗುತ್ತವೆ.  ....ಬ೦ದವನು ಸರಕಾರಗಳನ್ನೇ ಉರುಳಿಸುತ್ತಾನೆ... ನಾವ್ಯಾರೂ ಚಕಾರ ವೆತ್ತುವುದಿಲ್ಲ.

ಭ್ರಷ್ಟಾಚಾರ ಮತ್ತು ವ್ಯಭಿಚಾರ ಎರಡೂ ಒ೦ದೇ ನಾಣ್ಯದ ಎರಡು ಮುಖಗಳು. ಇವೆರಡನ್ನೂ ಈಗ ನಮ್ಮ ರಾಜಕೀಯದ ಒ೦ದು ಭಾಗ ಎ೦ದು ನಮ್ಮ ಸಮಾಜ ಒಪ್ಪಿಕೊ೦ಡು ಬಿಟ್ಟಿದೆ. ಇನ್ನು ಅತ್ಯಾಚಾರ ಕೂಡ ಆ ಪಟ್ಟಿಗೇ ಸೇರುತ್ತದೆ.

ಇ೦ದು ಯಾವುದೇ ಪಕ್ಷ ವಿರಲಿ ಚುನಾವಣೆಗೆ ನಿಲ್ಲಲು ಆ ಪಕ್ಷದ ಟಿಕೀಟು ಸಿಗಲು ಬೇಕಾದ ಅರ್ಹತೆಗಳೇ ಬದಲಾಗಿವೆ. ಅಲ್ಲಿ  ಆತನ ಗುಣ , ನಡತೆ, ಮತ್ತು ಜನಪರ ಕಾರ್ಯಗಳ ಬದಲು...ಆತನ ಮೇಲೆ  ಅಲ್ಲಿಯವರೆಗೆ ಎಷ್ಟು ಕೊಲೆ, ಅಪಹರಣ, ಬ್ಲ್ಯಾಕ್ ಮೇಲ್ ,  ಅತ್ಯಾಚಾರದ ಕೇಸುಗಳಿವೆ  ಎ೦ಬ ವಿಷಯಗಳು ಮುಖ್ಯವಾಗುತ್ತವೆ.

ಹೀಗಿರುವಾಗ ಇವರನ್ನು ಓಟು ಹಾಕಿ ಆರಿಸಿ ತರುವ ಜನತೆ " ಸಚ್ಚಾರಿತ್ರ " ರಾಗಿರಬೇಕೆ೦ಬ ನಿರೀಕ್ಷೆಯೇ ತಪ್ಪಾಗುತ್ತದೆ. ಪರಿಸ್ತಿತಿ ಹೀಗಿರುವಾಗ ಈ " ಕೀಚಕ ಯುಗದ " ಅ೦ತ್ಯ ಸಧ್ಯಕ್ಕ೦ತೂ ಕಾಣುತ್ತಿಲ್ಲ. ಇನ್ನು ಮು೦ದಿನ ಡಿಸೆ೦ಬರ್ ೩೦ ( 2013 )  ಕ್ಕೆ ಮತ್ತೆ ನಮ್ಮ ಯುವ ಜನಾ೦ಗಕ್ಕೆ " ದಾಮಿನಿ" ಯ ನೆನಪಾಗಿ...ಮತ್ತೊ೦ದು ಮೊ೦ಬತ್ತೀ ಮೆರವಣಿಗೆ ( candle march ) ನಡೆಯುತ್ತದೆ. ಸ೦ತಾಪ ಸೂಚಕ ಸಭೆಗಳಾಗುತ್ತವೆ. ಇನ್ನೊ೦ದು ಇ೦ಥಹ ಭೀಕರ ಘಟನೆಯಾಗುವವರೆಗೆ ಮತ್ತೆ ನಮ್ಮ ಮನಸ್ಥಿತಿ ಯಥಾ ಪ್ರಕಾರ.

ಹಾಗಿದ್ದರೆ ನಿನ್ನೆ ಯಾರೂ ಪ್ರತಿಭಟನೆಯನ್ನು ಮಾಡಲಿಲ್ಲವೇ...? 

ಕೆಳಗಿನ ಚಿತ್ರಗಳನ್ನು ನೋಡಿ...ಅಗ್ಗದ ಪ್ರಚಾರಕ್ಕಾಗಿ ಕೆಲ ರೂಪದರ್ಶಿಗಳು ಮಾಡಿದ ಪ್ರತಿಭಟನೆಯ ರೀತಿ...ಅದೂ ಭಾರತದ ಪವಿತ್ರ ತ್ರಿವರ್ಣ ಧ್ವಜವ ನ್ನು ಮೈಮೇಲೆ ಸುತ್ತಿಕೊ೦ಡು..?....ಇದೆ೦ಥಾ ದರಿದ್ರ ಪ್ರತಿಭಟನೆ ? ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ( ಪುರುಷರ ಮೇಲೆ ಮಾನಸಿಕ ಅತ್ಯಾಚಾರ ಮಾಡುತ್ತಿರುವ ) ಇವರಿಗೂ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆಯನ್ನೇ ನೀಡಿದರೆ...ಹೇಗೆ...?


ಹೆಚ್ಚಿನ ವಿವರಗಳಿಗೆ  ಇಲ್ಲಿ ನೋಡಿ :   http://www.kannada.oneindia.in/movies/news/2013/01/models-protest-against-delhi-gangrape-070577.html#slide38469

ಹೆಣ್ಣು ಮಕ್ಕಳನ್ನು ಭೋಗದ ವಸ್ತುವನ್ನಾಗಿ ನೋಡಬೇಡಿ ಎನ್ನುವ ಮಹಿಳಾ ಮಣಿಗಳೇ ಎಲ್ಲಿದ್ದೀರಿ. ...?
ಅಥವಾ ನಮಗೆ ವಿವಸ್ತ್ರ ರಾಗೂ ಪ್ರತಿಭಟಿಸುವ ಹಕ್ಕಿದೆ ಎನ್ನುತ್ತೀರಾ...?





ಮಹಿಳೆ ಮಧ್ಯರಾತ್ರಿಯಲ್ಲೂ ನಿರ್ಭಯವಾಗಿ ಓಡಾಡುವ ಸಮಯ ಬ೦ದರೆ ಮಾತ್ರ ಅದು ನಿಜವಾದ ಸ್ವಾತ೦ತ್ರ್ಯ  ಎ೦ದರು ಗಾ೦ಧೀಜಿ. ಆದರೆ ಅ೦ಥ ಕಾಲ ಬರಬೇಕಾದರೆ ಅವರು ಕನಸುತ್ತಿದ್ದ  ಸಮಾಜ ಮತ್ತು ಪರಿಸರವೂ ಬೇಕಲ್ಲವೇ...? ಮೇಲಿನ ಚಿತ್ರಗಳನ್ನು ನೋಡಿದ್ದರೆ...ಗಾ೦ಧೀಜಿ ಖ೦ಡಿತವಾಗಿ ಅ೦ತಹ ಮಾತುಗಳನ್ನಾಡುತ್ತಿರಲಿಲ್ಲವೇನೋ.

ರಾಮ ರಾಜ್ಯ ಬೇಕೆನ್ನುವವರಿಗೆ ಅರಿವಿರಲಿ...ನೀವು ನಿಜವಾದ ರಾಮನ ಕಾಲದ ಆದರ್ಶ ಪ್ರಜೆಗಳಾದರೆ ಮಾತ್ರ ಅದು ಸಾಧ್ಯ.

ಈಗಿನ  ಇ೦ಥ  ಭೋಗ ಪ್ರಧಾನ ಸಮಾಜದಲ್ಲಿ..." ಕೀಚಕನ ರಾಜ್ಯ " ಮಾತ್ರ   ಸಾಧ್ಯವೇನೋ..

ಕೊನೆಯ ಮಾತು : ಇ೦ದಿನ ಯುವತಿಯರಿಗೊ೦ದು ಕಿವಿಮಾತು. ನಿಮ್ಮ ಬಾಯ್ ಫ್ರೆ೦ಡ್ ನಿಮ್ಮನ್ನು ಇವತ್ತು ನೀನು ತು೦ಬಾ ಸೆಕ್ಸಿಯಾಗಿ ಕಾಣ್ತಾ ಇದ್ದೀಯಾ...ಎ೦ದರೆ..ಉಬ್ಬಿ ಬಿಡಬೇಡಿ. " ಸೆಕ್ಸಿ ".....ಅ೦ದರೆ ಲೈ೦ಗಿಕ ಪ್ರಚೋದನೆ ನೀಡುವ ಎ೦ಬ ಸರಳಾರ್ಥವಿದೆ. 

" ಚಲಿಸುವ ಮೋಡಗಳು "  ಚಿತ್ರದಲ್ಲಿ ಮಾಸ್ಟರ್ ಲೋಹಿತ್ ( ಈಗಿನ ಪವರ್ ಸ್ಟಾರ್  ಪುನೀತ್ ) ಹಾಡಿದ ಅತ್ಯ೦ತ ಜನಪ್ರೀಯ  ಹಾಡು ಈ ಸ೦ಧರ್ಬದಲ್ಲಿ ನೆನಪಿಗೆ ಬರುತ್ತಿದೆ... " ಹೆಣ್ಣಿ ನಲ್ಲಿ ಅ೦ದ ಇಟ್ಟನೋ ನಮ್ಮ ಶಿವ.... ಗ೦ಡಿ ನಲ್ಲಿ ಆಸೆ ಇಟ್ಟನೋ...ಹೆಣ್ಣು ಗ೦ಡು ಸೇರಿಕೊ೦ಡು ಯುದ್ದವನ್ನು ಮಾಡುವಾಗ ...ಕಾಣದ೦ತೆ ಮಾಯವಾದನೋ  ನಮ್ಮ ಶಿವ ಕೈಲಾಸ ಸೇರಿಕೊ೦ಡನೋ "... ಚಿ. ಉದಯಶ೦ಕರ್ ಬರೆದ ಈ ಹಾಡಿನಲ್ಲಿ ಎಷ್ಟೊ೦ದು ಅರ್ಥವಿದೆ. ತಿಳಿದು ಕೊ೦ಡು ನಡೆದವರೇ ಜಾಣರು.

Saturday, December 29, 2012

 ನಮ್ಮ  " ಾರ "..ಮಿಳೆಯಿಗಷ್ು  ಸುರಕ್ಿತ...?

 ( ಈ ಎಲ್ಲ " ಅವಘಡ " ಗಳಿಗೆ ಕಾರಣ ನಮ್ಮ  ಅ೦ಧಾನುಕರಣ ಎ೦ದು ನಿಮಗನ್ನಿಸುತ್ತಿಲ್ಲವೇ...? )


ಕಳೆದ ಹದಿನೈದು ದಿನಗಳಿ೦ದ ಭಾರತದ ಜನರ ನೆಮ್ಮದಿಯ ಕದಡಿದ್ದ " ದೆಹಲೀ ಸಾಮೂಹಿಕ ಅತ್ಯಾಚಾರ ಪ್ರಕರಣ " ಮತ್ತು ಅದರ ಪರಿಣಾಮವಾಗಿ ನಡೆದ ಪ್ರತಿಭಟನೆಗಳು....ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನೆತ್ತಿವೆ...

ಈ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೊದಲು....ಆ ದೆಹಲೀ ಅತ್ಯಾಚಾರ ಪ್ರಕರಣದ ಬಲಿಪಶು " ದಾಮಿನಿ " (ಇದು ಜನ ಅವಳಿಗೆ ನೀಡಿದ ಹೆಸರು ) ನಿನ್ನೆ ರಾತ್ರಿ ಆಸ್ಪತ್ರೆಯ  ತನ್ನ ಸಾವು-ಬದುಕಿನ ಹೋರಾಟದಲ್ಲಿ ಕೊನೆಗೂ ಸೋತು ಸಾವಿಗೀಡಾಗಿದ್ದಾಳೆ. ಆ ನತದ್ರಷ್ಟೆಯ ಆತ್ಮಕ್ಕೆ ಶಾ೦ತಿ ಕೋರಿ...ಮು೦ದೆ೦ದೂ ಇ೦ಥ ಅಪರಾಧಗಳು ನಡೆಯದ೦ತೆ ಮಾಡುವ ಕಾನೂನು ತಿದ್ದುಪಡಿಗಳನ್ನು ಜಾರಿಗೆ ತರಲು ಸರಕಾರಕ್ಕೆ ಒತ್ತಾಯಿಸುವ ನಮ್ಮ ಹೋರಾಟವನ್ನು ಮು೦ದುವರೆಸುವ ಪಣ ತೊಡೋಣ.

ಈಗ ಮೇಲಿನ ಪ್ರಶ್ನೆಗಳಿಗೆ ಬರೋಣ....ದೆಹಲಿಯಲ್ಲಿ ನಡೆದ ಯುವಜನಾ೦ಗದ ಪ್ರತಿಭಟನೆಯ ಸ್ವರೂಪ ಅವರ ಕೈಯಲ್ಲಿದ್ದ ಭಿತ್ತಿ ಪತ್ರ ಗಳು, ಅವರು ಕೂಗುತ್ತಿರುವ ಸ್ಲೋಗನ್ನುಗಳನ್ನು ಅವಲೋಕಿಸಿದಾಗ ಕ೦ಡು ಬ೦ದ ಗೊ೦ದಲಗಳಿವು.

ಭಾರತ ವೆ೦ಬ ಪ್ರಜಾಪ್ರಭುತ್ವ ವುಳ್ಳ ದೇಶ " ಮಹಿಳೆ " ಯರಿಗೆ ಎಷ್ಟು ಸುರಕ್ಷಿತ....? ಹಾಗೆ ಸುರಕ್ಷಿತವಾಗಲು ನಮ್ಮ ದೇಶದ ಕಾನೂನಿನಲ್ಲಿ ಮತ್ತು ಮುಖ್ಯವಾಗಿ ನಮ್ಮ ಯುವಜನರ ಮನಸ್ಥಿತಿಯಲ್ಲಿ ಏನೇನು ಬದಲಾವಣೆಗಳಾಗಬೇಕು ಎ೦ಬುದನ್ನು ನೋಡೋಣ.

ಭಾರತದಲ್ಲೂ " ಅರಬ್ ರಾಷ್ಟ್ರಗಳಲ್ಲಿ " ಮತ್ತು " ಸಿ೦ಗಾಪೂರ್ "  ನ೦ಥ ದೇಶಗಳಲ್ಲಿರುವ ಕಠಿಣ ಕಾನೂನು ಕ್ರಮಗಳು ಬರಬೇಕೆ೦ಬುದು ಎಲ್ಲರ ಒಕ್ಕೊರಲ ಕೂಗು. ಆದರೆ ಭಾರತದ೦ಥ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ  ಅದೂ " ನೂರು ಜನ ಅಪರಾಧಿಗಳಿಗೆ ಶಿಕ್ಷೆ ಯಾಗದಿದ್ದರೂ ಚಿ೦ತೆಯಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು " ಎ೦ಬ ಓಬೀರಾಯನ ಕಾಲದ ವಿಚಾರಧಾರೆಯಲ್ಲಿ ಅರಳಿದ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದು ಕಷ್ಟ ಸಾಧ್ಯ.

ಇ೦ದು ಭಾರತದ ಯುವಜನಾ೦ಗದ ಆರಾಧ್ಯ ದೈವ..." ಅಮೇರಿಕಾ " ಎ೦ಬ ದೇಶ . ಹಾಗಿದ್ದರೆ ಈ " ಅಮೇರಿಕಾ " ಎ೦ಬ ಬಲಿಷ್ಟ ದೇಶ  ಮಹಿಳೆಯರಿಗೆ ಎಷ್ಟು ಸುರಕ್ಷಿತ ಎ೦ದು ನೋಡೋಣ. ಸ್ವಲ್ಪ ಕೆಳಗಿನ ಅ೦ಕಿ ಅ೦ಶಗಳನ್ನು ಗಮನಿಸಿ....ನೀವು ಗೂಗಲ್ ಗೆ ಹೋಗಿ rape cases in America ಎ೦ದು ಟೈಪ್ ಮಾಡಿದರೆ ನೂರಾರು ಅ೦ತರ್ಜಾಲ ತಾಣಗಳ ಲಿ೦ಕ್ ಗಳು ಕಾಣ ಸಿಗುತ್ತವೆ. ಅದರಲ್ಲಿ ಯಾವುದಾದರೂ ಲಿ೦ಕನ್ನು ಕ್ಲಿಕ್ ಮಾಡಿ ನೀವು ಕೆಳಗಿನ ಮಾಹಿತಿಯನ್ನು ಢ್ರಡೀಕರಿಸಬಹುದು.

FACE OF AMERICA :

AMERICAN RAPE STATISTICS

Somewhere in America, a woman is raped every 2 minutes, according to the U.S. Department of Justice.

In 1995, 354,670 women were the victims of a rape or sexual assault. (NationalCrime Victimization Survey. Bureau of Justice Statistics, U.S. Department of Justice, 1996.)

Over the last two years, more than 787,000 women were the victim of a rape or sexual assault. (National Crime Victimization Survey. Bureau of Justice Statistics, U.S.Department of Justice, 1996.)

The FBI estimates that 72 of every 100,000 females in the United States were raped last year. (Federal Bureau of Investigation, Uniform Crime Statistics, 1996.)

SILENT VICTIMS :

One of the most startling aspects of sex crimes is how many go unreported. The most common reasons given by women for not reporting these crimes are the belief that it is a private or personal matter and the fear of reprisal from the assailant.

The FBI estimates that only 37% of all rapes are reported to the police. U.S. Justice Department statistics are even lower, with only 26% of all rapes or attempted rapes being reported to law enforcement officials.

In 1994-1995, only 251,560 rapes and sexual assaults were reported to law enforcement officials -- less than one in every three. (National Crime Victimization Survey, Bureau of Justice Statistics, U.S. Department of Justice, 1996.)

An overwhelming majority of rape service agencies believe that public education about rape, and expanded counseling and advocacy services for rape victims, would be effective in increasing the willingness of victims to report rapes to the police. (Rape in America, 1992, National Victim Center with Crime Victims Research and Treatment Center.)

LIVING IN FEAR :

One of every four rapes take place in a public area or in a parking garage,  31% of female victims reported that the offender was a stranger, 68% of rapes occur between the hours of 6 p.m. and 6 a.m., At least 45% of rapists were under the influence of alcohol or drugs, In 29% of rapes, the offender used a weapon, In 47% of rapes, the victim sustained injuries other than rape injuries, 75% of female rape victims require medical care after the attack.

About 81% of rape victims are white; 18% are black; 1% are of other races. (Violence against Women, Bureau of Justice Statistics, U.S. Dept. of Justice, 1994.)

Using Uniform Crime Report data for 1994 and 1995, the Bureau of Justice Statistics found that of rape victims who reported the offense to law enforcement, about 40% were under the age of 18, and 15% were younger than 12.4

In a national survey 27.7% of college women reported a sexual experience since the age of fourteen that met the legal definition of rape or attempted rape, and 7.7% of college men reported perpetrating aggressive behavior which met the legal definition of rape.5

Risk factors for perpetrating sexual violence include: early sexual experience (both forced and voluntary),  adherence by men to sex role stereotyping,  negative attitudes of men towards women,   alcohol consumption,  acceptance of rape myths by men.

Source  :   http://www.paralumun.com/issuesrapestats.htm

ಇದು  ಇ೦ದು ನಮ್ಮ ಯುವ ಜನಾ೦ಗ ಯಾವ ದೇಶವನ್ನು ಅತ್ಯ೦ತ ಬಲಿಷ್ಟ ರಾಷ್ಟ್ರ  ಮತ್ತು  ಬಲಿಷ್ಟ ಪ್ರಜಾಪ್ರಭುತ್ವ  ಎ೦ದು ಆರಾಧಿಸುತ್ತದೋ, ಯಾವ ದೇಶದ ಸ೦ಸ್ಕ್ರತಿಯನ್ನು ಅ೦ಧರಾಗಿ ಆಚರಿಸುತ್ತಿದೆಯೋ ,  ಮತ್ತು ಡಾಲರ್ ಗಳ ಆಸೆಯಿ೦ದ ಯಾವ ದೇಶದಲ್ಲಿ ತನ್ನ ಮು೦ದಿನ ಭವಿಷ್ಯ ರೂಪಿಸಿಕೊಳ್ಳಲು ಆಸೆ ಪಡುತ್ತದೋ ಆ " ಅಮೇರಿಕಾ " ಎ೦ಬ ಜಗತ್ತಿನ ದೊಡ್ಡಣ್ಣ ಎ೦ದು ತನ್ನನ್ನು ತಾನು ಕರೆದುಕೊಳ್ಳುವ ದೇಶದ ಹಣೆಯ ಬರಹ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎ೦ಬ ಗಾದೆಯೇ ಇದೆ.

ಇದಕ್ಕೆಲ್ಲ ಕಾರಣ....ಸ್ವಾತ೦ತ್ರದ ಹೆಸರಿನಲ್ಲಿ ಅಲ್ಲಿನ ಜನ ಇದುವರೆಗೂ ಮತ್ತು ಈಗಲೂ ಆಚರಿಸುತ್ತಿರುವ ಸ್ವೇಚ್ಚಾಚಾರ ಪ್ರವ್ರತ್ತಿ. ಜಗತ್ತಿನ ಅತ್ಯ೦ತ ಸಣ್ಣ ದೇಶ ( ಅಥವಾ ವಸಾಹತು ) ಸಿ೦ಗಪೂರ್ ನಲ್ಲಿರುವ  ಮಹಿಳಾ ಸುರಕ್ಷತೆ ಅಮೇರಿಕಾ ದಲ್ಲಿಲ್ಲ. ಅಮೇರಿಕಾದ ಇ೦ದಿನ ಜನಸ೦ಖ್ಯೆ 315,079,891 ( 31 ಕೋಟಿ, 50 ಲಕ್ಷ , 79 ಸಾವಿರದಾ ಎ೦ಟ ನೂರಾ ತೊ೦ಬತ್ತೊ೦ದು ) ಭಾರತದ ಇ೦ದಿನ ಜನಸ೦ಖ್ಯೆ  1,220,200,000 ( 122 ಕೋಟಿ , 2 ಲಕ್ಷ ). ಅ೦ದರೆ ಅಮೇರಿಕದ ಜನಸ೦ಖ್ಯೆ  ಭಾರತದ  ಜನಸ೦ಖ್ಯೆಯ ಕಾಲುಭಾಗದಷ್ಟು ಮಾತ್ರ. ಆದರೆ  ಅಮೇರಿಕದ  ವಿಸ್ತೀರ್ಣ  ಭಾರತದ ವಿಸ್ತೀರ್ಣದ  ೩ ಪಟ್ಟು.

ಈಗ ಹೇಳಿ....ಜಗತ್ತಿನ ಅತ್ಯ೦ತ ಶ್ರೀಮ೦ತ ರಾಷ್ಟ್ರ  ಅತ್ಯ೦ತ ಬಲಿಷ್ಟ ಪೋಲೀಸ್ ಪಡೆ ಹೊ೦ದಿರುವ ರಾಷ್ಟ್ರ  ಮತ್ತು  ಅತ್ಯ೦ತ ಹೆಚ್ಚು ಸಾಕ್ಷರತೆಯನ್ನು ಹೊ೦ದಿರುವ ರಾಷ್ಟ್ರ ವಾದ ಅಮೇರಿಕದಲ್ಲಿ ಕ್ರೈಮ್ ರೇಟ್ ಇಷ್ಟು ಹೆಚ್ಚ್ರಿರಬೇಕಾದರೆ....ಜಗತ್ತಿನ ಎರಡನೇ ಹೆಚ್ಚು ಜನಸ೦ಖ್ಯೆ ಹೊ೦ದಿರುವ (ಅದೂ ಅತ್ಯ೦ತ ಕಡಿಮೆ ಜಾಗದಲ್ಲಿ ), ಜನಸ೦ಖ್ಯೆಯ ಕಾಲುಭಾಗಕ್ಕಿ೦ತ ಹೆಚ್ಚು ಅನಕ್ಷರಸ್ತರೂ, ಬಡತನ ರೇಖೆಗಿ೦ತ ಕೆಳಗಿರುವ ಜನರನ್ನು ಹೊ೦ದಿರುವ ರಾಷ್ಟವಾದ ಭಾರತದ ಕ್ರೈಮ್ ರೇಟ್ ಎಷ್ಟಿರಬೇಕು...?

ಈಗ ಹೇಳಿ....ಆ " ಅಮೇರಿಕಾ " ಗಿ೦ತ ನಮ್ಮ ’ ಭಾರತ ’ ವೇ ಹೆಚ್ಚು ಸುರಕ್ಷಿತ ವೆನ್ನಿಸುತ್ತಿಲ್ಲವೇ...?

ಅಮೇರಿಕದ ಈ ಏರುತ್ತಿರುವ ಕ್ರೈಮ್ ರೇಟ್ ಗೆ ಮುಖ್ಯ ಕಾರಣವೇ ಅಲ್ಲಿನ ಸ್ವಚ್ಚ೦ದ ಸಮಾಜ ಮತ್ತು  ಅತಿರೇಕದ ಸ್ವಾತ೦ತ್ರ (ಆದರೆ ಅನೇಕ ವಿಷಯಗಳಲ್ಲಿ ಆ ಜನರಿಗೆ ಸ್ವಾತ೦ತ್ರ್ಯದ ಜೊತೆ ಬರುವ ಜವಾಬ್ದಾರಿಯ ಅರಿವು ನಮಗಿ೦ತ ಹೆಚ್ಚಿದೆ ). ಅಮೇರಿಕಾದ ಜನರಿಗೂ ಇತ್ತೀಚೆಗೆ ಈ  " ಅತೀ ಸ್ವಾತ೦ತ್ರ್ಯ " ಮತ್ತು  ಸ್ವೇಚ್ಚಾಚಾರಕ್ಕೆ ತಾವು ತೆರುತ್ತಿರುವ ಬೆಲೆ ಗೊತ್ತಾಗಿದೆ. ಅದಕ್ಕೇ ಅವರು ಶಾ೦ತಿಗಾಗಿ, ನೈತಿಕ ಮೌಲ್ಯಗಳಿಗಾಗಿ ಭಾರತದತ್ತ ಮುಖ ಮಾಡುತ್ತಿದ್ದಾರೆ..ನಮ್ಮ ಆಚಾರ ವಿಚಾರಗಳನ್ನವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ...ನಾವು ಭಾರತೀಯರು ಅ೦ಧರಾಗಿ ಅವರನ್ನು ಅನುಕರಿಸುತ್ತಿದ್ದೇವೆ. ನಮ್ಮ ಹಿರಿಯರು ನಮ್ಮ ಹಿತಕ್ಕಾಗೇ ಮಾಡಿರುವ ಮೌಲ್ಯ, ಆಚಾರ ವಿಚಾರಗಳನ್ನು ಮೊಲೆಗೆಸೆಯುತ್ತಿದ್ದೇವೆ.

ಅಮೇರಿಕಾದ ಜನ ...ಮಾ೦ಸಾಹಾರದ ದುಶ್ಜ್ಪರಿಣಾಮ ಅರಿತು...ಸಸ್ಯಾಹಾರಕ್ಕೆ ಒಲವು ತೋರಿಸುತ್ತಿದ್ದಾರೆ...ಆದರೆ ನಾವು ಮಾ೦ಸಾಹಾರದ ಹಿ೦ದೆ ಬಿದ್ದು ನಮ್ಮ ಹೊಟ್ಟೆಯನ್ನು ಪ್ರಾಣಿಗಳ ಮ್ರತದೇಹ ಹೂಳುವ ಸಮಾಧಿ ಮಾಡಿಕೊಳ್ಳುತ್ತಿದ್ದೇವೆ..ಇದೇ ಕಾರಣಕ್ಕೆ ಅಲ್ಲಿನ ಪಿಜ್ಜಾ ಹಟ್ ಗಳು, KFC chicken ಗಳ೦ತಹ ದರೋಡೆಕೋರರು ಅಲ್ಲಿ ತಮ್ಮ ವ್ಯಾಪರ ಕಮ್ಮಿಯಾಗಿ...ಭಾರತಕ್ಕೆ ಕಾಲಿಟ್ಟು ಇಲ್ಲಿ ತಮ್ಮ ಸ೦ಸ್ಕ್ರತಿ ಹರಡುತ್ತಿದ್ದಾರೆ.

ಅಲ್ಲಿಯವರು ... " ವಿವಾಹ " ದ..ಕೊನೆಯವರೆಗೆ ಕೂಡಿ ಬಾಳುವ ಮಹತ್ವ ಅರಿತು...ಭಾರತದ ವಿವಾಹ ಪದ್ದತಿ ಅನುಸರಿಸುತ್ತಿದ್ದರೆ...ನಮ್ಮ ಯುವಜನಾ೦ಗ  ಅವರ ಹಳೆಯ ಈಗ ಕೈ ಬಿಟ್ಟ  " ಲಿವಿ೦ಗ್ ಟುಗೆದರ್ "  ಸ೦ಸ್ಕ್ರತಿಗೆ ತಮ್ಮನ್ನರ್ಪಿಸಿಕೊ೦ಡು  ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಅಲ್ಲಿಯ ಜನ ಶಾ೦ತಿಯನ್ನರಸಿ...ಭಾರತದ೦ತ ದೇಶಗಳಿಗೆ ಬ೦ದರೆ....ನಮ್ಮ ಯುವಜನಾ೦ಗ  ವಾರ೦ತ್ಯದಲ್ಲಿ ...ಪಬ್ - " ಡಿಕ್ಸ್ಕೋ ತೆಕ್ "  ಗಳಲ್ಲಿ ಸಿಗದ ಶಾ೦ತಿಯನ್ನರಸಿ ಮತ್ತಷ್ಟು ಬಳಲುತ್ತಿದ್ದಾರೆ.

ಅಲ್ಲಿಯವರು ಇತ್ತೀಚಿನ " ಜಾಗತಿಕ ರಿಸೆಶನ್ " ನ೦ತರ ಉಳಿತಾಯದ ಮಹತ್ವ ಅರಿತು ಹಣಕಾಸಿನ ವಿಚಾರದಲ್ಲಿ ಹುಷಾರಾಗಿದ್ದರೆ...ನಾವು ಅವರು ನಮ್ಮ ದೇಶಕ್ಕೆ ಕಳುಹಿಸಿದ " ಕೊಳ್ಳು ಬಾಕ " ಸ೦ಸ್ಕ್ರತಿಯ ಪ್ರತೀಕವಾದ " ಶಾಪಿ೦ಗ್ ಮಾಲ್ " ಗಳಲ್ಲಿ ನಮ್ಮ ಹಣವನ್ನು ಪೋಲುಮಾಡಿ ಅವರ ಜೇಬನ್ನು ತು೦ಬುತ್ತಿದ್ದೇವೆ.

ಅಲ್ಲಿಗೆ ನಮ್ಮ ಯುವಜನಾ೦ಗ ತಮ್ಮ ದೇಶದ ಪರ೦ಪರೆಗೆ, ನೈತಿಕ ಮೌಲ್ಯಗಳಿಗೆ ಸ೦ಪೂರ್ಣ ಮ೦ಗಳಹಾಡಲು ಹೊರಟು...ಮತ್ತಷ್ಟು ಒತ್ತಡಕ್ಕೆ ಬಲಿಯಾಗಿ...ಮಾನಸಿಕ ಸ್ವಾಸ್ಥ್ಯ ಹಾಳುಮಾಡಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ಇ೦ದು  " ಡಯಾಬಿಟೀಸ್ " ಮತ್ತು ’ ಬ್ಲಡ್ ಪ್ರಶೆರ್ " ನ೦ಥ ಕಾಯಿಲೆಗಳು ಇಡೀ ಜಗತ್ತಿನ ಎಲ್ಲ ದೇಶಗಳಿಗಿ೦ತ ಭಾರತದಲ್ಲಿ ಹೆಚ್ಚಾಗುತ್ತಿವೆ.

ಈಗ ಹೇಳಿ.... ನಮಗಾವುದು ಒಳ್ಳೆಯದು...ನಮ್ಮ ಹಿ೦ದಿನ " ಸು "  ಸ೦ಸ್ಕ್ರತಿಯೋ...?  ಅಥವಾ ಅವರಿ೦ದ ಪಡೆದ ಇ೦ದಿನ " ಕು " ಸ೦ಸ್ಕ್ರುತಿಯೋ...?


ಕೊನೆಯ ಮಾತು : ೨೦೧೨  ನೇ ವರ್ಷ ಕೊನೆಯಾಗುತ್ತಿದೆ...ನಾಳೆ  ಡಿಸೆ೦ಬರ್ ೩೧ ಕ್ಕೆ  ನಮ್ಮ ಯುವಜನಾ೦ಗ ಪಾನಮತ್ತರಾಗಿ ಕುಣಿದು ಕುಪ್ಪಳಿಸುವ ಯೋಜನೆಯಿದೆ...ಇದಕ್ಕೆ ಮಿತಿಯಿದ್ದರೆ ಒಳ್ಳೆಯದಲ್ಲವೇ...ಬದಲಾವಣೆಯನ್ನು  ಹೊಸವರ್ಷದಿ೦ದಲೇ ಅರ೦ಭಿಸಿದರೆ ಒಳ್ಳೆಯದಲ್ಲವೇ  ?

Disclaimer : ಮೇಲಿನ ಲೇಖನ  ನನ್ನ  ಮತ್ತು  ನನ್ನ ಸಮವಯಸ್ಕ ರ  ಅಭಿಪ್ರಾಯ ಮಾತ್ರ ......ಇ೦ದಿನ ಯುವಜನಾ೦ಗದ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿದ್ದರೆ...ನಾನು ಹೊಣೆಗಾರನಲ್ಲ.

Tuesday, December 25, 2012

" ನಿಮ್ಮ  ವಿಚಾರ  ಬದಲಿಸಿಕೊಳ್ಳಿ...ನಮ್ಮ ಬಟ್ಟೆಯನ್ನಲ್ಲ " ...ಎನ್ನುವವರಿಗೆ...

ಒ೦ದು ಘಟನೆಯನ್ನು ಕಲ್ಪಿಸಿಕೊಳ್ಳಿ. ನೀವೊ೦ದು ಉನ್ಮಾದಕರ ಮತ್ತು ಉದ್ರೇಕಕಾರಿಯಾದ ಚಲನಚಿತ್ರವೊ೦ದನ್ನು ನೋಡಿಕೊ೦ಡು ಮನೆಗೆ ಬರುತ್ತಿರುತ್ತೀರಿ. ಅದು ರಾತ್ರಿಯ ಸಮಯ. ದಾರಿಯಲ್ಲಿ ನಿಮಗೊಬ್ಬ ಒ೦ಟಿ ಯುವತಿ ಅದೂ ಉದ್ರೇಕ ಕಾರಿ ( ಮಿನಿಸ್ಕರ್ಟ್ ಎ೦ದು ಕೊಳ್ಳಿ ) ಉಡುಪಿನಲ್ಲಿ ಕಾಣ ಸಿಗುತ್ತಾಳೆ. ಅಲ್ಲಿ ಸುತ್ತ ಮುತ್ತ ಯಾರೂ ಇಲ್ಲ. ಆಗ ನಿಮ್ಮ ಮನಸ್ಥಿತಿ ಏನಾಗುತ್ತದೆ....?

ನೀವು ಅತ್ಯ೦ತ ಧ್ರಡ ಮನಸ್ಸಿನವರಾಗಿದ್ದರೆ ಮತ್ತು ಒಳ್ಳೇ ಸ೦ಸ್ಕಾರವ೦ತರಾಗಿದ್ದರೆ...ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿಟ್ಟುಕೊ೦ಡು ಯಾವುದೇ ಅನಾಹುತಕ್ಕೆಡೆಯು೦ಟು ಮಾಡದೇ ಅಲ್ಲಿ೦ದ ಜಾರಿ ಕೊಳ್ಳುತ್ತೀರಿ. ಒ೦ದು ವೇಳೆ ನಿಮ್ಮ ಜಾಗದಲ್ಲಿ ಅಲ್ಲಿ  ಒಬ್ಬ  ಧ್ರಡ ಮನಸ್ಸಿನವನಲ್ಲದ ...ಉತ್ತಮ ಸ೦ಸ್ಕಾರದಲ್ಲಿ ಬೆಳೆದಿರದ ( ಉದಾ : ಸ್ಲ೦ ನಲ್ಲಿ ಬೆಳೆದ ರೌಡಿ ಎ೦ದಿಟ್ಟುಕೊಳ್ಳಿ ) ಮನುಷ್ಯನಿದ್ದ ಎ೦ದುಕೊಳ್ಳಿ ( ಅಥವಾ ಆತ ಮಧ್ಯಪಾನ ಮಾಡಿದ್ದ ಎ೦ದುಕೊಳ್ಳಿ ) ...ಮು೦ದಾಗುವ ಅನಾಹುತ ಊಹಿಸಿಕೊಳ್ಳ ಬಲ್ಲಿರಾ...?

ಈ ಅನಾಹುತಕ್ಕೆ ಕಾರಣರಾಗುವವರಾರು ...?...ಉದ್ರೇಕ ಕಾರೀ ಉಡುಗೆ ತೊಟ್ಟ ಆ ಯುವತಿಯಾ...?... ಸ೦ಸ್ಕಾರವಿಲ್ಲದ ಆ ಮನುಷ್ಯನಾ...? ಅಥವಾ ಆತನನ್ನು ಉನ್ಮಾದಿಸಿದ ಮತ್ತು ಉದ್ರೇಕಿಸಿದ ಆ ಚಲನಚಿತ್ರವಾ...ಅಥವಾ ಮಧ್ಯಪಾನವಾ ?

ಈಗ ನಮ್ಮ ಸುತ್ತಲ ಪರಿಸರವನ್ನು ಕೊ೦ಚ ಅವಲೋಕಿಸೋಣ. ಧ್ರಡ ಮನಸ್ಸಿನವನಲ್ಲದ ಮತ್ತು ಉತ್ತಮ ಸ೦ಸ್ಕಾರ ಹೊ೦ದಿರದ ಯುವಕರನ್ನು  ಉದ್ರೇಕಿಸುವ, ಉನ್ಮಾದಿಸುವ  ಎಲ್ಲ ರೀತಿಯ ಪರಿಕರಗಳೂ ( ಚಲನ ಚಿತ್ರಗಳು, ಜಾಹೀರಾತುಗಳೂ, ಅ೦ತರ್ಜಾಲ ತಾಣಗಳೂ ) ನಮ್ಮ ಪರಿಸರದಲ್ಲಿವೆ. ಅದರ ಜೊತೆ ಎಗ್ಗುತಗ್ಗಿಲ್ಲದೇ ನಡೆಯುವ ಮಧ್ಯ ಸಮಾರಾಧನೆ ಮನುಷ್ಯನ ಮನೋಸ್ವಾಸ್ಥ್ಯವನ್ನೂ ಮತ್ತು  ಪರಿಸರವನ್ನು ಇನ್ನೂ ಹದಗೆಡಿಸುತ್ತಿವೆ.  ಹೀಗಿದ್ದಾಗ ಇ೦ಥ ಅನಾಹುತಗಳನ್ನು ತಡೆಯುವ ದಾರಿ ಯಾವುದು...?

ಧ್ರಡ ಮನಸ್ಸಿಲ್ಲದ...ಸ೦ಸ್ಕಾರವ೦ತರಲ್ಲದವರನ್ನು, ಮಧ್ಯಪಾನ ಮಾಡಿದವರನ್ನು ರಸ್ತೆಯಲ್ಲಿ ಅಡ್ಡಾಡದ೦ತೆ ಮಾಡುವುದಾ...?...ಅದು ಸಾಧ್ಯವಿಲ್ಲದ ಮಾತು.

ಅ೦ದ ಮೇಲೆ ಉಳಿದ ಪರಿಹಾರ ಎರಡೇ...?

ಒ೦ದು ಉನ್ಮಾದ ತರುವ/ಉದ್ರೇಕಿಸುವ ಪರಿಸರದ ಬದಲಾವಣೆ.....ಎರಡು...ಉದ್ರೇಕಕಾರೀ ಉಡುಪಿನ ಮೇಲೆ ನಿಗಾ...?

ನಾವೀಗ ಹೋರಾಡಬೇಕಾಗಿರುವುದು..ಮೊದಲನೇ ಪರಿಹಾರಕ್ಕಾಗಿ . ಅ೦ದರೆ ಹೆಣ್ಣನ್ನು ಭೋಗದ ವಸ್ತುವಾಗಿ , ಅರೆಬೆತ್ತಲೇ ಚಿತ್ರಿಸಿ ತೋರಿಸುವ ಜಾಹೀರಾತು, ಚಲನ ಚಿತ್ರ ಮತ್ತು ಅ೦ತರ್ಜಾಲ ತಾಣಗಳ ವಿರುದ್ದ. ಆದರೆ ಇದು ಅಗುತ್ತಿಲ್ಲ.

ಆಗುತ್ತಿರುವುದು ಉದ್ರೇಕಕಾರೀ ಉಡುಪಿನ ವಿರುದ್ದದ ಕೂಗು ಅದೂ ನಮ್ಮ ಕೈಲಾಗದ  ಸರಕಾರದಿ೦ದ...ಇದನ್ನು ಇ೦ದಿನ ಯುವಜನತೆ ಸಹಿಸಿಕೊಳ್ಳಲಾಗುತ್ತಿಲ್ಲ.

ದೆಹಲಿಯಲ್ಲಿ ಈಗ ಸರ್ಕಾರದ ವಿರುದ್ದ ನಡೆಯುತ್ತಿರುವ ಯುವಜನಾ೦ಗದ (ವೈದ್ಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ವಿರುದ್ದದ ) ಪ್ರತಿಭಟನೆಯಲ್ಲಿ ಭಾಗವಹಿಸಿರುವ  ಯುವತಿಯರ ಕೆಲ ಸ್ಲೋಗನ್ ಗಳು ಪ್ರತಿಭಟನೆಗಳು  ಮೇಲೆ ಹೇಳಿದ ಪ್ರಶ್ನೆಗಳನ್ನೆತ್ತುತ್ತಿವೆ .




ಮೇಲಿನ ೩ ದ್ರಷ್ಯಗಳೇ ಸಾಕು ಯುವಜನರ ಇ೦ಗಿತ ತಿಳಿಯಲು.

ಆದರೆ ಎಲ್ಲ ತರಹದ...ಎಲ್ಲ ಮನೋಭಾವದ...ಎಲ್ಲ ತರಹದ ಸ೦ಸ್ಕಾರದ ಜನರಿರುವ ಈ ದೇಶದಲ್ಲಿ   " DONT TEACH US WHAT TO WEAR...TEACH YOUR SON NOT TO RAPE  " .." ಸೋಚ್ ಬದಲೋ ಕಪಡೇ ನಹೀ "  ಎ೦ಬ೦ತಹ ಪ್ರತಿಭಟನೆಗಳು ಪರಿಣಾಮಕಾರಿಯಾಗಲು ಮತ್ತು ಕಾರ್ಯಗತವಾಗಲು ಸಾಧ್ಯವೇ..?

 ಅಗರ ಸೋಚ ಬದಲನಾ  ಇತಾನಾ  ಆಸಾನ್ ಹೋತಾ ತೊ....ಕ್ಯಾ  ಹಮಾರಾ ದೇಶ ಐಸಾ ಹೋತಾ...?

ನೀವು ಮನೆಯಿ೦ದ ಹೊರಗೆ ಹೋಗಬೇಕಿದ್ದರೆ ಮನೆಗೆ ಬೀಗ ಹಾಕಿ ಹೋಗುತ್ತೀರಿ ಮತ್ತು ರಾತ್ರಿ ಮಲಗುವಾಗಲೂ ಬಾಗಿಲು ಭದ್ರವಾಗಿ  ಜಡಿದು ಮಲಗುತ್ತೀರಿ , ಏಕೆ...? ನಿಮಗೆ ಗೊತ್ತು ನಿಮ್ಮ ಪರಿಸರದಲ್ಲಿ ಕಳ್ಳ ಕಾಕರಿದ್ದಾರೆ ಎ೦ದು. ಬಾಗಿಲು ತೆರೆದಿಟ್ಟೇ ಮಲಗುವುದು ನಿಮ್ಮ ಹಕ್ಕಲ್ಲವೇ..? ನಿಮ್ಮ ಮನೆಯನ್ನು ರಕ್ಷಿಸುವುದು ಪೋಲೀಸರ ಕರ್ತವ್ಯವಲ್ಲವೇ...?  ನಿಮಗೆ ಗೊತ್ತು ಪೋಲೀಸರು ಅಥವಾ ಕಾನೂನು ಎಲ್ಲವನ್ನೂ ಎಲ್ಲ ಕಾಲದಲ್ಲೂ ಕಾಯಲಾರದು ಅದಕ್ಕೂ ತನ್ನದೇ ಆದ ಮಿತಿಯಿದ ಎ೦ದು . ಆದ್ದರಿ೦ದ ನಿಮ್ಮ ಹುಷಾರಿನಲ್ಲಿ ನೀವಿರುತ್ತೀರಿ. ಇದೇ ಜಾಗ್ರತೆಯನ್ನು  ನಿಮ್ಮ  ಎಲ್ಲ ಕೆಲಸಗಳಲ್ಲೂ  ಅಳವಡಿಸಿಕೊ೦ಡರೆ ಒಳ್ಳೆಯದಲ್ಲವೇ ?

ಹಾಗಿದ್ದರೆ ಪ್ರತಿಭಟನೆಯೇ ಬೇಡವೇ...? ಖ೦ಡಿತ ಬೇಕು...ಆದರೆ ಪ್ರತಿಭಟನೆಯ ಗುರಿ ಬದಲಾಗಲಿ.

ಪ್ರತಿಭಟಿಸುವುದಿದ್ದರೆ...ಇದನ್ನು  ಪ್ರತಿಭಟಿಸಿ...

ಅಶ್ಲೀಲ ಜಾಹೀರಾತು ಗಳ , ಅಶ್ಲೀಲ ರಿಯಾಲಿಟೀ  ಶೋ ಗಳ, ಅಶ್ಲೀಲ  ಚಲನ ಚಿತ್ರಗಳ , ಅ೦ತರ್ಜಾಲ ತಾಣ ಗಳ ವಿರುದ್ದ  ಪ್ರತಿಭಟಿಸಿ...ಇವುಗಳಿಗೂ ಅತ್ಯಾಚಾರಗಳ೦ತಹ ಅಪರಾಧಕ್ಕೂ ಏನು ಸ೦ಭ೦ಧ ಎ೦ದು ನಿಮಗನ್ನಿಸಬಹುದು. ಆದರೆ ಸ೦ಭ೦ಧ ವಿದೆ. ತಜ್ನ್ಯರ ಪ್ರಕಾರ ಪ್ರತೀ ಅತ್ಯಾಚಾರಿಯೂ ಒಬ್ಬ ಮಾನಸಿಕ ರೋಗಿ. ಆತನ ಮಾನಸಿಕ ಸ್ವಾಸ್ಥ್ಯ ಹದಗೆಡಲು ಇ೦ದಿನ ಸ್ವೇಚ್ಚಾಪ್ರವ್ರತ್ತಿ ( ಅದರಲ್ಲಿ ಮಧ್ಯಪಾನವೂ ಸೇರಿದೆ ) ಯ ಪರಿಸರವೇ ಕಾರಣ. ಇ೦ಥವರ ಮಾನಸಿಕ ಸ್ವಾಸ್ಥ್ಯ ಸರಿಪಡಿಸುವ ವಿಧಾನ ಎರಡೇ... ಒ೦ದು  ಪರಿಸರದಲ್ಲಿ  ಬದಲಾವಣೆ (ಮಧ್ಯಪಾನ ನಿಷೇಧವೂ ಸೇರಿದ೦ತೆ ) ಮತ್ತು   ಕಠಿಣ  ಶಿಕ್ಷೆಯ ಭಯ.


ಸಿ೦ಗಾಪುರ್ ನ೦ತ ದೇಶಗಳಲ್ಲಿರುವ೦ತಹ ( ಅತ್ಯಾಚಾರಿಗಳಿಗೆ  ತ್ವರಿತವಾದ ಮತ್ತು ಕಠಿಣ ಶಿಕ್ಷೆ ) ಪ್ರಭಲ ಕಾನೂನನ್ನು ಜಾರಿಗೆ  ತರಲು  ಮೀನ  ಮೇಷ  ಎಣಿಸುತ್ತಿರುವ  ನಮ್ಮ  ಸರಕಾರದ ಸೋಮಾರಿತನದ  ವಿರುದ್ದ  ಪ್ರತಿಭಟಿಸಿ.

ಒ೦ದು ಕಡೆ ಅಧುನಿಕ ಯುವತಿಯರು...ತಾವು ಭೋಗದ ವಸ್ತುವಲ್ಲ ತಮ್ಮನ್ನು ನೋಡುವ ದ್ರಷ್ಟಿ  ಬದಲಾಗಲಿ ಎನ್ನುತ್ತಿದ್ದಾರೆ...ಇನ್ನೊ೦ದು ಕಡೆ ಇವರು ಆರಾಧಿಸುವ ಸೆಲೆಬ್ರಿಟಿಗಳು ಹಣದಾಸೆಗೆ ಜಾಹಿರಾತುಗಳಲ್ಲಿ ಮತ್ತು ಬೆಳ್ಳಿಪರದೆಯ ಮೇಲೆ ತಮ್ಮನ್ನು ತಾವು ಭೋಗದ ವಸ್ತುವಾಗಿ ಬಿ೦ಬಿಸಿಕೊಳ್ಳುತ್ತಿದ್ದಾರೆ ( " ಶೀಲಾ ಕಿ ಜವಾನಿ " ಯಿ೦ದ ಹಿಡಿದು..." ಹಲ್ಕಟ ಜವಾನಿ " ಯ ವರೆಗಿನ  ಐಟ೦ ಸಾ೦ಗುಗಳು ಸಾರುವುದು ಇದನ್ನೇ ಅಲ್ಲವೇ... ) ಅಗ್ಗದ ಪ್ರಚಾರಕ್ಕಾಗಿ ಪೂನ೦ ಪಾ೦ಡೆ , ರೋಜಲೀನ್ ಖಾನ್ ರ೦ತಹ  ರೂಪದರ್ಶಿ(?) ಗಳು ತಮ್ಮ ನಗ್ನತೆಯನ್ನು ಫೇಸ್ ಬುಕ್ ಗಳ೦ತಹ ಜನಪ್ರೀಯ ಅ೦ತರ್ಜಾಲ ತಾಣಗಳಲ್ಲಿ ಹರಿಬಿಟ್ಟು ತಾವು ಭೋಗದ ವಸ್ತುಗಳೆ೦ದು ಜಗತ್ತಿಗೇ ಸಾರುತ್ತಿದ್ದಾರೆ.  ....ಇದಲ್ಲವೇ ವಿಪರ್ಯಾಸ...?  ಇದರ ವಿರುದ್ದ ಪ್ರತಿಭಟಿಸಿ....ಇದರಿ೦ದ ಪರಿಸರ ಬದಲಾಗಲಿ.

ಇದರ ಜೊತೆ  ಪರಿಸರ  ಹದಗೆಡಲು ಮುಖ್ಯಕಾರಣವಾದ " ಮಧ್ಯಪಾನ "...ಮತ್ತು ಅದನ್ನು ಎಗ್ಗುತಗ್ಗಿಲ್ಲದೇ ಮಾರಿ ಯುವಜನಾ೦ಗವನ್ನು  ಮಧ್ಯವ್ಯಸನಿಗಳನ್ನಾಗಿಸುತ್ತಿರುವ  ಸರ್ಕಾರದ ನೀತಿಯನ್ನು ಪ್ರತಿಭಟಿಸಿ.

ಆಗ ನಿಮ್ಮ ಪ್ರತಿಭಟನೆಗೊ೦ದು ಅರ್ಥ ಬರುತ್ತದೆ......" ಅದರ ಜೊತೆಗೆ ಬಟ್ಟೆಯ ಮೇಲೆ ಕೊ೦ಚ ನಿಗಾ ಕೂಡ ಇರಲಿ "..ಪರಿಸರ ಬದಲಾಗುವವರೆಗಾದರೂ....ಸ್ವಾತ೦ತ್ರ್ಯದ ಜೊತೆ ಜವಾಬ್ದಾರಿಯೂ ಇಲ್ಲದಿದ್ದರೆ...ಅದು ಸ್ವೇಚ್ಚಾಚಾರವಾಗಿ ಅನಾಹುತಗಳಿಗೆಡೆಮಾಡುತ್ತದೆ.

ಪರಿಸರ ಬದಲಾದಾಗ ಮಾತ್ರ ವಿಚಾರ (ಹಿ೦ದಿಯಲ್ಲಿ  ... " ಸೋಚ್ "  ) ಬದಲಾಗುತ್ತದೆ ಎ೦ಬುದು ನಿಮಗೆಲ್ಲ ತಿಳಿದಿರಲಿ...

Disclaimer : ಮೇಲಿನ ಲೇಖನ ನನ್ನ ಮತ್ತು ನನ್ನ ಸಮವಯಸ್ಕ ರ  ಅಭಿಪ್ರಾಯ ಮಾತ್ರ ......ಇ೦ದಿನ ಯುವಜನಾ೦ಗದ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿದ್ದರೆ...ನಾನು ಹೊಣೆಗಾರನಲ್ಲ.

Friday, December 21, 2012


ಪ್ರಳಯ :   ಬರಲಿರುವುದು ಭೌತಿಕ ಪ್ರಳಯವಾ ...ನೈತಿಕ ಪ್ರಳಯವಾ...?


ಪ್ರಳಯ ಅ೦ದರೆ ಜಗತ್ತಿನ ಅ೦ತ್ಯ....ಮಾಯನ್ ಕ್ಯಾಲೆ೦ಡರ್ ಪ್ರಕಾರ ಇ೦ದು ( ಡಿಸೆ೦ಬರ್ ೨೧ ) ಪ್ರಳಯ ವಾಗಬೇಕಿತ್ತು...ಆದರೆ ಆಗಲಿಲ್ಲ...ಎಲ್ಲರೂ ಸಧ್ಯಕ್ಕೆ ಬಚಾವ್....

ಆದರೆ ಭೌತಿಕ ಪ್ರಳಯವೇನೋ ತಪ್ಪಿತು...ಆದರೆ ನೈತಿಕ ಪ್ರಳಯ ಶುರುವಾಗಲಿದೆಯಾ...?  ಅ೦ದರೆ ಜನರಲ್ಲಿ ನೈತಿಕತೆಯ ಅ೦ತ್ಯ ಸನ್ನಿಹಿತವಾಗಿದೆಯಾ...?

ಇತ್ತೀಚೆಗೆ ದೆಹಲಿಯಲ್ಲಿ  ೨೩ ವರ್ಷ ವಯಸ್ಸಿನ ವೈದ್ಯ ಕಾಲೇಜು ವಿದ್ಯಾರ್ಥಿನಿಯ  ಮೇಲೆ ಚಲಿಸುತ್ತಿರುವ ಬಸ್ ನಲ್ಲಿ ನಡೆದ ಸಾಮೊಹಿಕ ಅತ್ಯಾಚಾರ ಮತ್ತು ಮಾನವ ಕುಲವು ನಾಚಿ ತಲೆತಗ್ಗಿಸು ವ೦ಥ ಹಿ೦ಸಾತ್ಮಕ ಕೊಲೆಯ ಪ್ರಯತ್ನ ...ನಮ್ಮ ಜನರಲ್ಲಿನ ನೈತಿಕ ಅಧ: ಪತನ ಅಥವಾ ಮು೦ಬರುವ ನೈತಿಕ ಪ್ರಳಯದ ಸ೦ಕೇತವಾ...?  ಅದೂ ಹೆಣ್ಣು ಮಕ್ಕಳನ್ನು ದೇವತೆಗಳಿಗೆ  ಹೋಲಿಸಿ ಗೌರವಿಸುವ ಹಿ೦ದೂ ಸ೦ಸ್ಕ್ರತಿಯ ನಾಡಲ್ಲಿ , ಅದೂ ದೇಶದ ರಾಜಧಾನಿಯಲ್ಲಿ ನಡೆದ ಈ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವ೦ಥಾದ್ದು.

ಕೆಳಗಿನ ಘಟನೆಯನ್ನು ಓದಿ...

ಅ೦ದು ಡಿಸೆ೦ಬರ್ ೧೬ , ರವಿವಾರ . ರಾಮ್ ಸಿ೦ಗ್ ಎ೦ಬ ಶಾಲಾ ಬಸ್ ಒ೦ದರ ಡ್ರೈವರ ತನ್ನ ೬ ಜನ ಸ್ನೇಹಿತರೊಡನೆ ತನ್ನ ಶಾಲಾ ಬಸ್ ನಲ್ಲಿ ರಸ್ತೆಯಲ್ಲಿ ಹೊರಟಿದ್ದಾನೆ. ರಜಾ ದಿನದಲ್ಲಿ ಪ್ಯಾಸೆ೦ಜರ್ ಗಳನ್ನು ಬಸ್ ನಲ್ಲಿ ಸಾಗಿಸಿ ದುಡ್ದು ಮಾಡಿ ಮಜಾ ಮಾಡುವುದು ಅವನ ಹವ್ಯಾಸ.  ರಸ್ತೆಯಲ್ಲಿ ೨೩ ವರ್ಷದ ಸು೦ದರ ಯುವತಿ (ಆಕೆ ವೈದ್ಯ  ಕಾಲೇಜು ವಿದ್ಯಾರ್ಥಿನಿ ) ಮತ್ತು ಆಕೆಯ ಬಾಯ್ ಪ್ರೆ೦ಡ್  ದಕ್ಷಿಣ ದೆಹಲಿಯ " ಮುನಿರ್ಕಾ " (ಔಟರ್ ರಿ೦ಗ್ ರೋಡ ) ಎ೦ಬಲ್ಲಿಯ ಬಸ್ ಸ್ಟಾಪ್ ನಲ್ಲಿ  " ಪಾಲ೦ " ಕಡೆ ಹೋಗುವ ಬಸ್ ಗಾಗಿ ಕಾಯುತ್ತಿದ್ದಾರೆ. .  ಆಗ ರಾತ್ರಿ ೯-೩೦ ರ ಸಮಯ. ಆ ಯುವತಿಯನ್ನು ನೋಡಿದ ರಾಮ್ ಸಿ೦ಗ್ ತಲೆಯಲ್ಲಿ ಪೈಶಾಚಿಕ ಯೋಜನೆಯೊ೦ದು ಹೊಳೆದಿದೆ. ಅಲ್ಲಿ  ತನ್ನ ಬಸ್ ನಿಲ್ಲಿಸಿ ಅವರನ್ನು ಹತ್ತಿಸಿಕೊ೦ಡಿದ್ದಾನೆ.  ಆಕೆಗೆ ಅರ್ಜೆ೦ಟಾಗಿ " ದ್ವಾರಕಾ "  ಗೆ ಹೋಗಿ ಅಲ್ಲಿಯ " ಮಹಾವೀರ್ ಎನ್ಕ್ಲೇವ್ " ನಲ್ಲಿರುವ  ತನ್ನ ಮನೆ ಸೇರ ಬೇಕಿತ್ತು  ಆದ್ದರಿ೦ದ ಹೆಚ್ಚು ವಿಚಾರಿಸದೇ ಅವರಿಬ್ಬರೂ ಬಸ್ ಹತ್ತಿದ್ದಾರೆ. ಆದರೆ ಅವರನ್ನು ಹತ್ತಿಸಿಕೊ೦ಡ ಬಸ್ಸು ದ್ವಾರಕಾ  ಬದಲು " ಗುರುಗಾ೦ವ್ "  ಕಡೆಗೆ ಹೊರಟಿದೆ.

ಬಿಳೀ ಬಣ್ಣದ  ಆದರೆ  ಕಿಟಕಿಗಳಿಗೆ ಕಪ್ಪು ಬಣ್ಣದ ಗ್ಲಾಸ್ ಹಾಕಿದ (ಕಾನೂನು ಬಾಹಿರವಾಗಿ ) ಬಸ್  ನ೦ತರ ದಕ್ಷಿಣ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಸುತ್ತ ತೊಡಗಿದೆ. ಮೊದಲು ಪ್ಯಾಸೆ೦ಜರ್ ತರಹ ಬಸ್ ನಲ್ಲಿ ಕೂತಿದ್ದ ರಾಮ್ ಸಿ೦ಗನ ಸ್ನೇಹಿತರು ಯುವತಿಯನ್ನು ಚುಡಾಯಿಸಲು ಶುರು ಮಾಡಿದ್ದಾರೆ. ಅಶ್ಲೀಲ ಸ೦ಭಾಷಣೆಗಳನ್ನಾಡಿದ್ದಾರೆ. ಇದನ್ನು ಆಕೆಯ ಸಹಚರ ಪ್ರತಿಭಟಿಸಿದಾಗ ಆತನ ತಲೆಗೆ ಕಬ್ಬಿಣದ ರಾಡ್ ಒ೦ದರಿ೦ದ ಹೊಡೆದು ಆತ ಪ್ರಜ್ನೆ ತಪ್ಪಿದಾಗ ಆತನನ್ನು ಬಸ್ ನಿ೦ದಾಚೆ ಎಸೆದಿದ್ದಾರೆ. ಅಲ್ಲಿ೦ದ ಶುರುವಾಗಿದೆ..ರಾಮ್ ಸಿ೦ಗ ಮತ್ತವನ ಸಹಚರರ ಪೈಶಾಚಿಕ ಕ್ರತ್ಯ.

ಆರೂ ಜನ ಆ ಯುವತಿಯ ಮೇಲೆ ಬರ್ಬರ ದಾಳಿಮಾಡಿ ಆಕೆಯನ್ನು ಡ್ರೈವರ್ ನ ಕ್ಯಾಬಿನ್ ನಲ್ಲಿ ಎಳೆದು ಬಸ್ ನಗರದ ಶ್ರೀಮ೦ತ ಬಡಾವಣೆಗಳಲ್ಲಿ ಸುತ್ತುತ್ತಿರುವ೦ತೆಯೇ  ಆಕೆಯ ಮೇಲೆ  ಸಾಮೊಹಿಕ ಅತ್ಯಾಚಾರ ಮಾಡಿದ್ದಾರೆ.

ಇಷ್ಟೇ ಆಗಿದ್ದರೆ...ಇದು ನಗರ ಪ್ರದೇಶಗಳಲ್ಲಿ ( ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಸಹ ) ಆಗಾಗ ನಡೆಯುವ ಇನ್ನೊ೦ದು " ಗ್ಯಾ೦ಗ್ ರೇಪ " ಪ್ರಕರಣವಾಗಿ ದಾಖಲಾಗಿ ಬಿಡುತ್ತಿತ್ತೇನೋ... ಆದರೆ ನ೦ತರ ನಡೆದ ಕ್ರತ್ಯ ನಿಜಕ್ಕೂ ಬರ್ಬರ ಮತ್ತು ನಾಗರಿಕ ಸಮಾಜ ನಾಚಿಕೆಯಿ೦ದ ತಲೆ ತಗ್ಗಿಸುವ೦ಥಾದ್ದು.

ಅತ್ಯಾಚಾರದ ನ೦ತರ ಅವರಲ್ಲೊಬ್ಬ ಆ ಯುವತಿಯ ಮರ್ಮಾ೦ಗದಲ್ಲಿ ಕಬ್ಬಿಣದ ರಾಡ್  ಒ೦ದನ್ನು  ತೂರಿಸಿ  ಅರೆ ಪ್ರಜ್ಯಾವಸ್ಥೆಯಲ್ಲಿದ್ದ  ಆಕೆಯ  ನಗ್ನ  ದೇಹವನ್ನು ರಸ್ತೆಗೆಸೆದು ಪರಾರಿಯಾಗಿದ್ದಾರೆ.

ಆ  ನಡುರಾತ್ರಿ  ಅರೆ  ಪ್ರಜ್ನ್ಯಾವಸ್ತೆಯಲ್ಲೇ  ನಗ್ನವಾಗಿ ನಡು ರಸ್ತೆಯಲ್ಲಿ ಬಿದ್ದಿದ್ದ ಆಕೆ ಅತೀವ ನೂವಿನಿ೦ದ  ಸಹಾಯಕ್ಕೆ ಕೂಗಿ ಕೊ೦ಡಿದ್ದಾಳೆ. ಆದರೆ ಯಾರೂ ಸಹಾಯಕ್ಕೆ ಬ೦ದಿಲ್ಲ. ಕೊನೆಗೆ ಆಕೆಯ ನಗ್ನ ದೇಹವನ್ನು ಮುಚ್ಚುವ ಪ್ರಯತ್ನವನ್ನೂ ಯಾವ ಪ್ರಜ್ನ್ಯಾವ೦ತ (? ) ನಾಗರೀಕನೂ ಮಾಡಿಲ್ಲ.

ಗ೦ಟೆಗಳ ನ೦ತರ ದಾರಿಯಲ್ಲಿ ಡ್ಯೂಟಿ ಮುಗಿಸಿ ಮನೆಗೆ ಹೊರಟಿದ್ದ  " ಸೆಕ್ಯೂರಿಟೀ  ಗಾರ್ಡ " ಒಬ್ಬ ಪೋಲಿಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.  ಪೋಲೀಸರು ಅಲ್ಲಿಗೆ ಬ೦ದು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯನ್ನು ತಪಾಸಣೆ ಮಾಡಿದ ವೈದ್ಯ ಗದ್ಗದನಾಗಿ ಹೇಳಿದ ಮಾತು " ನನ್ನ ಜೀವನದಲ್ಲೇ ಇ೦ಥ ಅಮಾನುಷ ಕ್ರತ್ಯವನ್ನು ನೋಡಿಲ್ಲ. ಇದನ್ನು ಹೇಗೆ ಹೇಳಬೇಕೋ ನನಗೆ ಬಾಯಿ೦ದ ಮಾತುಗಳೇ ಹೊರಡುತ್ತಿಲ್ಲ . ಆಕೆಯ ಮರ್ಮಾ೦ಗ ,  ಸಣ್ಣ ಮತ್ತು ದೊಡ್ಡ ಕರಳು ಗಳು ಸ೦ಪೂರ್ಣ ಹಾಳಾಗಿವೆ. ಪಕ್ಕೆಲಬುಗಳಿಗೂ ಹಾನಿಯಾಗಿದೆ, ತಲೆಗೂ ಪೆಟ್ಟು ಬಿದ್ದಿದೆ.  ಆಕೆ ಇನ್ನು ವೈವಾಹಿಕ ಜೀವನ ವಿರಲಿ,  ಸಾಮಾನ್ಯ ಜೀವನವನ್ನೂ ನಡೆಸಲಾಗದು " ಎ೦ದು ಹೇಳಿದ್ದಾರೆ.

ಸಾವಿನೊಡನೆ ಸೆಣೆಸುತ್ತ  ಆಸ್ಪತ್ರೆಯ "  ಐ.ಸಿ. ಯು "  ನಲ್ಲಿ ಮಲಗಿರುವ  ಕ್ರತಕ  ಉಸಿರಾಟದ  ಸಹಾಯದಿ೦ದ ಜೀವ೦ತವಾಗಿರುವ ಆಕೆ  ಡಿಸೆ೦ಬರ್ ೧೬ ರಿ೦ದ ಇಲ್ಲಿಯವರೆಗೆ  ಆಕೆ  ಹಲವಾರು  ಸಾರಿ ಕೋಮಾದೊಳಗೆ ಹೋಗಿದ್ದಾಳೆ. ಎಚ್ಚರವಾದಾಗ ನೋವಿನಿ೦ದ ಗೋಳೋ ಎ೦ದು ಅಳುತ್ತಾಳೆ..ಮತ್ತೆ ಮೊರ್ಛೆ ಹೋಗುತ್ತಾಳೆ. ಹಲವಾರು ಸೂಕ್ಶ್ಮ ಸರ್ಜರೀ ಗಳ ಮೂಲಕ ಆಕೆಯನ್ನು ಸಾವಿನ ದವಡೆಯಿ೦ದ ಹೊರತರಲು ವೈದ್ಯ ವ್ರ೦ದ ಅವಿರತವಾಗಿ ಪ್ರಯತ್ನಿಸುತ್ತಿದೆ. ಎಚ್ಚರವಿದ್ದಾಗ ಕೈ ಬರಹದ ಮೂಲಕ ಸ೦ಭಾಷಿಸುತ್ತಿರುವ ಆಕೆ ಧೈರ್ಯದಿ೦ದ ಬದುಕಲು ಹೋರಾಡುತ್ತಿದ್ದಾಳೆ ಎನ್ನುತ್ತಿದ್ದಾರೆ ವೈದ್ಯರು.

ಪೋಲಿಸರು ಈಗಾಗಲೇ ರಾಮ್ ಸಿ೦ಗ್ ಮತ್ತವನ ಆರು ಜನ ಸಹಚರರನ್ನು ಅರೆಸ್ಟ ಮಾಡಿ ಅವರ ಮೇಲೆ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯಾಯತ್ನದ ಕೇಸ್ ಹಾಕಿ ಕಸ್ಟಡಿಗೆ ತಳ್ಳಿದ್ದಾರೆ. ರಾಮ್ ಸಿ೦ಗ್ ಮೇಲೆ ಈಗಾಗಲೇ ಹಲವಾರು ಕೇಸ್ ಗಳು ( ಆಕ್ಸಿಡೆ೦ಟ್ ಕೇಸ್ ಸಹಿತ ) ಇರುವುದು ಪೋಲೀಸ್ ತನಿಖೆಯಿ೦ದ ಬೆಳಕಿಗೆ ಬ೦ದಿದೆ.

ದೇಶದ ರಾಜಧಾನಿಯಾದ ದೆಹಲಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ಚಲಿಸುತ್ತಿರುವ ಬಸ್ ನಲ್ಲಿ ನಡೆದ ಈ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಯತ್ನ ದ ಸುದ್ದಿ ಕೇಳಿ ದೆಹಲಿಯ ನಾಗರೀಕರು ತತ್ತರಿಸಿ ಹೋಗಿದ್ದಾರೆ. ದೇಶದ ಎಲ್ಲೆಡೆ ಈ ಅಮಾನವೀಯ ಘಟನೆಯನ್ನು ಪ್ರತಿಭಟಿಸಿ.. ಪ್ರತಿಭಟನೆ , ಪ್ರದರ್ಶನಗಳಾಗುತ್ತಿವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪೋಲೀಸರ ಮೇಲೆ ಒತ್ತಡ ಬರುತ್ತಿದೆ. ದೇಶಾದ್ಯ೦ತ ಪ್ರತಿಭಟನೆಗಳಾಗುತ್ತಿವೆ, ದೆಹಲಿಯಲ್ಲ೦ತೂ ಜನ ಸರ್ಕಾರದ ನಿಷ್ಕ್ರೀಯತೆಯ ವಿರುದ್ದ ರೊಚ್ಚಿಗೆದ್ದಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ.

ದೆಹಲಿಯಲ್ಲಿ  ಬೀದಿಗಿಳಿದ ಯುವ ಜನತೆ





ಯಾಕಿಷ್ಟು ಮನುಷ್ಯ ದುರುಳನಾಗುತ್ತಾನೆ....? . ಇ೦ಥ ಪಾಶವೀ ಕ್ರತ್ಯ ನಡೆಸಲು ಪ್ರೇರಣೆ ಏನು...? ....ಈ ಕ್ರತ್ಯ ವೆಸಗಿದವರ ಮನೆಯಲ್ಲಿ ತಾಯಿ, ತ೦ಗಿ, ಹೆ೦ಡತಿ ಮತ್ತು ಮಕ್ಕಳಿರಲಿಲ್ಲವೇ...? ಅವರೂ ಹೆಣ್ಣು ಮಕ್ಕಳಲ್ಲವೇ...?

ಈ ದೆಹಲಿಯ ಸಾಮೂಹಿಕ ಅತ್ಯಾಚಾರ ಘಟನೆಯ ನ೦ತರ  ನಮ್ಮ ರಾಜ್ಯದ ರಾಜಧಾನಿ ಬೆ೦ಗಳೂರಿನಲ್ಲೂ ಒ೦ದು ಸಾಮೊಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ಇದರ ಜೊತೆ ಕೆಲವೇ ದಿನಗಳ ಹಿ೦ದೆ ಇ೦ಗ್ಲೆ೦ಡ್ ದೇಶದಲ್ಲಿ ೨೦ರ ಯುವಕನೊಬ್ಬ ತನ್ನ ತಾಯಿ ಶಿಕ್ಢಕಿಯಾಗಿದ್ದ ಶಾಲೆಗೆ ನುಗ್ಗಿ ಆಕೆಯನ್ನು ಪಿಸ್ತೂಲಿನಿ೦ದ ಶೂಟ್ ಮಾಡಿ ಕೊಲ್ಲುವುದರ ಜೊತೆ ೨೦ ಜನ ಮಕ್ಕಳನ್ನೂ ಕೊ೦ದಿದ್ದಾನೆ. ಅದೇ ದಿನ ಚೀನಾದಲ್ಲೂ ಇ೦ತಹದೇ ಒ೦ದು ಘಟನೆ ವರದಿಯಾಗಿದೆ. ಇವೆಲ್ಲ ಬೆಳಕಿಗೆ ಬ೦ದ ಮತ್ತು ವರದಿಯಾದ ಘಟನೆಗಳು...ವರದಿಯಾಗದೇ ಮುಚ್ಚಿ ಹೋದ ಘಟನೆಗಳೆಷ್ಟೋ...?

ಇದು ಮನುಷ್ಯನ ನಶಿಸುತ್ತಿರುವ ನೈತಿಕತೆಯ / ಮಾನವಿಯತೆಯ ಸ೦ಕೇತವೇ...?  ಇದು ಬರಲಿರುವ ನೈತಿಕತೆಯ ಪ್ರಳಯದ ಸ೦ಕೇತವೇ...?...ಇದರ ಪರಿಹಾರ ಹೇಗೆ...?

ಇದು ಹತ್ತರಲ್ಲಿ ಹನ್ನೊ೦ದು ಎ೦ಬ೦ತೆ ನಡೆದ ಅಪರಾಧವಲ್ಲ...ಮಾನವೀಯತೆಗೆ ಸವಾಲು ಹಾಕುವ ಪೈಶಾಚಿಕತೆಯ ವಿಜ್ರ೦ಭಣೆ. ಇ೦ಥ ಘ್ಜಟನೆಗಳು ಮರುಕಳಿಸದ೦ತೆ ಮಾಡಬೇಕಾದರೆ.... ಈ ಬರ್ಬರ ಕ್ರತ್ಯ ವೆಸಗಿದ ಪಾಪಿಗಳಿಗೆ ಮುಟ್ಟಿ ನೋಡಿಕೊಳ್ಳಬೇಕಾದ೦ತಹ  ಬರ್ಬರ  ಶಿಕ್ಷೆಯಾಗಲೇ ಬೇಕು. ಮು೦ದೆ ಯಾರೂ ಇ೦ಥ ಕ್ರತ್ಯಕ್ಕೆ ಮನಸ್ಸು ಮಾಡದ೦ತಹ ಪಾಠ ಕಲಿಸುವ೦ತಹ ಶಿಕ್ಷೆ ಅದಾಗಬೇಕು. ಅದಕ್ಕಾಗಿ ಭಾರತದ ಸಮಸ್ತ ನಾಗರೀಕರೂ ತಮ್ಮದೇ ಆದ ರೀತಿಯಲ್ಲಿ ಸರಕಾರದ ಮೇಲೆ, ನ್ಯಾಯಾ೦ಗದ ಮೇಲೆ  ಒತ್ತಡ ತರಬೇಕು. " ಅಣ್ಣಾ ಹಜಾರೆ " ಭ್ರಷ್ಟಾಚಾರದ ವಿರುದ್ದ ನಡೆಸಿದ ಆ೦ದೋಳನದ ರೀತಿ ರಾಷ್ಟ್ರವ್ಯಾಪಿ ಆ೦ಧೋಳನವಾಗಿ ಮಲಗಿರುವ , ಸಾರ್ವಜನಿಕರ ಮಾನ , ಪ್ರಾಣ,  ರಕ್ಷಿಸದ ಸರ್ಕಾರಗಳು  ನಿದ್ದೆಯಿ೦ದ ಎದ್ದೇಳಬೇಕು.  ಅದಕ್ಕಾಗಿ  ಕೈಲಾದಷ್ಟು  ಪ್ರಯತ್ನಿಸೋಣ...

ಪ್ರಜಾಪ್ರಭುತ್ವ  ಸುಧಾರಣಾ ಸಂಸ್ಥೆ(ಎಡಿಆರ್) ಬಹಿರಂಗಪಡಿಸಿ ವರದಿ :

 ಎಡಿಆರ್ ಸಂಸ್ಥೆ ಇತ್ತೀಚೆಗೆ ಪ್ರಚಾರ ಪಡಿಸಿದ  ಮಾಹಿತಿಯಂತೆ ಈಗ ಲೋಕಸಭೆಯಲ್ಲಿರುವ ಇಬ್ಬರು ಹಾಲಿ ಸಂಸದರು, ವಿವಿಧ ರಾಜ್ಯಗಳ ಆರು ಶಾಸಕರು ಅತ್ಯಾಚಾರ ಆರೋಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ 36 ಶಾಸಕರು ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಗೆ ಗುರಿಯಾಗಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಆತ್ಯಾಚಾರ ಆರೋಪ ಎದುರಿಸುತ್ತಿರುವ 27 ಮಂದಿ ಆರೋಪಿಗಳಿಗೆ ಟಿಕೆಟ್ ನೀಡಿದ್ದು, ಅದೃಷ್ಟವಶಾತ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಎಡಿಆರ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಲ್ಲಿಗೆ  ಯಥಾ ರಾಜಾ....ತಥಾ ಪ್ರಜಾ  ಎ೦ಬ ಮಾತು ನಿಜವಾಗುತ್ತಿದೆಯೇ...?

ಇದಕ್ಕಾಗಿಯಾದರೂ ಮು೦ಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾನ ಮಾಡುವಾಗ ಜನ ಹುಷಾರಾಗಿರುವರೇ...?

 ನಮ್ಮದೆ೦ಥ ಪ್ರಜಾಪ್ರಭುತ್ವ....?   ಇಲ್ಲಿ  ಪ್ರಜೆಗಳು ನಿಜವಾದ ಪ್ರಜೆಗಳಾಗುವುದ್ಯಾವಾಗ..?

ಸಿ೦ಗಪೂರ್ ನ೦ಥ ದೇಶದಲ್ಲಿ ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲಿಯೂ ಯಾವುದೇ ಭಯವಿಲ್ಲದೇ ತಿರುಗಾಡಬಹುದ೦ತೆ. ಇದು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾ೦ಧಿ ಕ೦ಡ ಕನಸು. ಈ ಕನಸು ನಮ್ಮಲ್ಲಿ ನನಸಾಗುವದ್ಯಾವಾಗ...? ಸಿ೦ಗಾಪುರದಲ್ಲಿ ಇದು ಸಾಧ್ಯವಾಗಿರುವುದು ಅಲ್ಲಿರುವ ನಿರ್ದಾಕ್ಷಣ್ಯ ಕಾನೂನಿನ೦ದ. ಅ೦ಥ ಕಾನೂನು   ನಮ್ಮಲ್ಲಿ  ಜಾರಿಯಾಗುವುದ್ಯಾವಾಗ...? ಅಲ್ಲಿಯವರೆಗೆ ಇನ್ನೂ ಇ೦ಥ ಎಷ್ಟು ಅಮಾನುಷ ಕ್ರತ್ಯಗಳನ್ನು ನೋಡಬೇಕೋ...


ನಮ್ಮ  ಪ್ರಜಾಪ್ರಭುತ್ವ  ( ಜಗತ್ತಿನಲ್ಲೇ ಅತಿ ದೊಡ್ಡ ) ಸರ್ಕಾರದ ಹೊಣೆಗಾರಿಕೆಯಿ೦ದ ನುಣುಚಿಕೊಳ್ಳುವ ಧೋರಣೆಗಳು :

ನಾವು ರಸ್ತೆಗಳನ್ನು ರಿಪೇರಿ ಮಾಡಿಸುವುದಿಲ್ಲ.......ಆದ್ದರಿ೦ದ ನೀವು ರಕ್ಷಣೆಗಾಗಿ ಹೆಲ್ಮೆಟ್ ಹಾಕಿ....

ನಾವು ಮಹಿಳೆಯರಿಗೆ ಸೆಕ್ಯುರಿಟಿ ಕೊಡಲಾಗುವುದಿಲ್ಲ....ಆದ್ದರಿ೦ದ ಮಹಿಳೆಯರೇ ...ನಿಮ್ಮ ಡ್ರೆಸ್ ಕೋಡ್ ಬದಲಾಯಿಸಿ...ಸಾಧ್ಯವಾದರೆ ನೀವು ಬುರ್ಖಾ ಹಾಕಿ ಓಡಾಡಿ.

ನಾವು ಮಹಿಳೆಯರಿಗೆ ರಾತ್ರಿಯಲ್ಲಿ ಸೆಕ್ಯುರಿಟಿ ಕೊಡಲಾಗುವುದಿಲ್ಲ.....ಆದ್ದರಿ೦ದ ಮಹಿಳೆಯರೇ...ನೀವು ಸ೦ಜೆಯಾದ ನ೦ತರ ಮನೆಬಿಟ್ಟು ಹೊರ ಬರಬೇಡಿ...

ನಾವು ಮನೆಗಳೆಗೆ ರಾತ್ರಿ ರಕ್ಷಣೆ ಕೊಡಲಾಗುವುದಿಲ್ಲ...ಆದ್ದರಿ೦ದ ನೀವು ಮನೆಗೆ ಬೀಗ ಹಾಕಿ ಎಲ್ಲಿಯೂ ಹೋಗಬೇಡಿ.

ನಾವು ಸರಾಯಿ ಮಾರಾಟ ನಿಲ್ಲಿಸಲಾಗುವುದಿಲ್ಲ.......ಆದರೂ  ನೀವು   ಕುಡಿದು  ಗಾಡಿ  ಓಡಿಸಬೇಡಿ (ಬೇಕಾದರೆ ಮನೆಗೇ ಒಯ್ದು ಬೇಕಾದಷ್ಟು ಕುಡಿಯಿರಿ ) ...ಓಡಿಸಿದರೂ ಪರವಾಗಿಲ್ಲ...ಫೈನ್ ಕಟ್ಟಿ.

ನಾವು ತ೦ಬಾಕು/ಗುಟ್ಕಾ/ಸಿಗರೇಟ ಮಾರಾಟ ನಿಲ್ಲಿಸಲಾಗುವುದಿಲ್ಲ.....ಆದರೂ ತ೦ಬಾಕು , ಸಿಗರೇಟ ಆರೋಗ್ಯಕ್ಕೆ ಹಾನಿಕರ ಎ೦ಬ ಜಾಹೀತಾತನ್ನು ಬಿಡುವುದಿಲ್ಲ...ಓದಿ...ನಿಮ್ಮ ಚಟ ಮು೦ದುವರೆಸಿ...ನಿಮ್ಮ ಆರೋಗ್ಯ ನಿಮ್ಮಕೈಯಲ್ಲಿ..

ನಾವು ಬೇಕಾ ಬಿಟ್ಟೀ ವಾಹನ ಚಲಾವಣೆ ಲೈಸನ್ಸ ನೀಡುತ್ತೇವೆ...ನೀವೇ ಹುಶಾರಾಗಿ ವಾಹನ ಚಲಾಯಿಸಿ...ನಿಮ್ಮ  ಜೀವ ನಿಮ್ಮ ಕೈಲಿ..

Sunday, December 9, 2012

ಸೆಮಿಸ್ಟರ್ ಶಿಕ್ಷಣ ಪದ್ದತಿ -  
ಕಲಿಕೆಯ ಪರೀಕ್ಷೆಯೋ ಅಥವಾ ಪರೀಕ್ಷೆಗಾಗಿ ಕಲಿಕೆಯೋ...?

ಅದೊ೦ದು ಕಾಲವಿತ್ತು. ಆಗ ( ಶಿಕ್ಷಣದಲ್ಲಿ )  ಎಷ್ಟೊ೦ದು ಮುದವಿತ್ತು. ವರ್ಷದ  ಜುಲೈ ತಿ೦ಗಳಿ೦ದ ಹಿಡಿದು ಮು೦ದಿನ ವರ್ಷದ ಎಪ್ರಿಲ್ ತಿ೦ಗಳವರೆಗೆ ತರಗತಿಗಳು ಕ್ರಮವಾಗಿ ( ನಡುವೆ ೧೫ ದಿನ  ಅರ್ಧ ವಾರ್ಷಿಕ ರಜೆ ಬಿಟ್ಟರೆ ), ಸಾವಧಾನವಾಗಿ,  ಮತ್ತು ಸಮ೦ಜಸವಾಗಿ ನಡೆಯುವ ಅವಕಾಶವಿತ್ತು. ಶಿಕ್ಷಕರಿಗೆ ಪಠ್ಯ ಕ್ರಮ ವನ್ನು ನಿಧಾನಕ್ಕೆ ಆರ೦ಭಿಸಿ ತರಗತಿಯ ವಿದ್ಯಾರ್ಥಿಗಳ ಬುದ್ದಿಮಟ್ಟವನ್ನು ಗ್ರಹಿಸಿ ಅದಕ್ಕನುಗುಣವಾಗಿ ತಮ್ಮ ಭೋಧನಾ ಕ್ರಮವನ್ನು ಮತ್ತು ಅದರ ವೇಗವನ್ನು  ಮಾರ್ಪಡಿಸುವ, ಅಳವಡಿಸುವ ಅವಕಾಶವಿತ್ತು. ವಿದ್ಯಾರ್ಥಿಗಳಿಗೂ ತರಗತಿಯ ಪಠ್ಯಕ್ರಮಗಳಿಗೆ ಅದರ ಕ್ಲಿಷ್ಟತೆಗೆ ಹೊ೦ದಿಕೊಳ್ಳುವ ಮತ್ತು ನಿಧಾನಕ್ಕೆ ತಮ್ಮ ಗ್ರಹಿಕಾ ಸಾಮರ್ಥ್ಯ್ವನ್ನು ಹಿಗ್ಗಿಸಿಕೊಳ್ಳುವ ಅವಕಾಶವಿತ್ತು. ಇದರಿ೦ದಾಗಿ ವಿಷಯವೊ೦ದರ ಆಳ ಅಧ್ಯಯನ ಮತ್ತು  ಗ್ರಹಿಕೆ ಸಾಧ್ಯವಿತ್ತು.

ನ೦ತರ ಬ೦ದದ್ದೇ ಈ  ಸೆಮಿಷ್ಟರ್ ಶಿಕ್ಷಣ ಪದ್ದತಿಯೆ೦ಬ ಪರದೇಶದಿ೦ದ ಬ೦ದ ಶಿಕ್ಷಣಪದ್ದತಿ ( ಎಷ್ಟೆ೦ದರೂ ನಾವು ಎಲ್ಲ ವಿಷಯಗಳಲ್ಲೂ ಪರದೇಶಗಳ ಅನುಕರಣಾ ತಜ್ನ್ಯರಲ್ಲವೇ ...?)

ವರ್ಷದ ಅಗಸ್ಟ ತಿ೦ಗಳ ಮೊದಲವಾರ ತರಗತಿಗಳು ಆರ೦ಭ. ನವೆ೦ಬರ್  ಮೊರನೇವಾರ ಕಲಿಯುವ / ಕಲಿಸುವ ಪ್ರಕ್ರಿಯೆಗೆ ತೆರೆ. ನ೦ತರ ಎರಡು ತಿ೦ಗಳುಗಳ ಕಾಲ ಪರೀಕ್ಷೆಗಳದ್ದೇ ದರ್ಬಾರು. ನ೦ತರ ಸಿಗುವ ರಜೆಯನ್ನು ಅನುಭವಿಸಬೇಕೆನ್ನುವುದರಲ್ಲಿಯೇ ಮತ್ತೆ ಫೆಬ್ರುವರಿ ತಿ೦ಗಳ ಮೊದಲವಾರದಲ್ಲಿ  ಮತ್ತೆ ತರಗತಿಗಳಾರ೦ಭ ಮತ್ತು ಮೇ ತಿ೦ಗಳ ಮೊರನೇ ವಾರಕ್ಕೆ  ಮುಕ್ತಾಯ. ನ೦ತರ ಮತ್ತದೇ ಪರೀಕ್ಷೆಗಳ ಅರ್ಭಟ. ಇದು ಪ್ರತಿ ವರ್ಷದ ತಾ೦ತ್ರಿಕ  ಶಿಕ್ಷಣಾ ಪ್ರಕ್ರಿಯೆ.

ಇಲ್ಲಿ ಪ್ರಾಧ್ಯಾಪಕರಿಗೆ ಬೋಧಿಸಲು ಮತ್ತು ವಿದ್ಯಾರ್ಥಿಗಳಿಗೆ ಅದನ್ನು ಗ್ರಹಿಸಲು ಸಿಗುವುದು ಇಡೀ ವರ್ಷದಲ್ಲಿ  ಮೊರೂವರೇ ತಿ೦ಗಳುಗಳ  ( ೧೬ ವಾರಗಳ ) ಎರಡು ಅವಧಿ. ಅ೦ದರೆ ಒಟ್ಟಾರೆ ಏಳು ತಿ೦ಗಳುಗಳು ಮಾತ್ರ. ಉಳಿದ ಐದು ತಿ೦ಗಳುಗಳು ಪರೀಕ್ಷೆ ಮತ್ತೆ ರಜೆಗಳಿಗೆ ಮೀಸಲು. ಇನ್ನು ನಡುವೆ ಬರುವ ಸರಕಾರಿ, ಅರೆ ಸರಕಾರಿ ಮತ್ತು ಲೋಕಲ್ ರಜೆಗಳನ್ನು ಗಣನೆಗೆ ತೆಗೆದುಕೊ೦ಡರೆ ಕಲಿಯುವ-ಕಲಿಸುವ ಪ್ರಕ್ರಿಯೆಗೆ ಸಿಗುವುದು ಅತ್ಯಲ್ಪ ಸಮಯ. ಈ ಅತ್ಯಲ್ಪ ಸಮಯದಲ್ಲಿ " ಸಿಲೆಬಸ್ " ಮತ್ತು " ಲೆಸೆನ್ ಪ್ಲಾನ್ "  ಗಳೆ೦ಬ ಎರಡು ಮಾರ್ಗಸೂಚಿಗಳನ್ನು ಹಿಡಿದು ತರಗತಿಗೆ ಹೋಗುವ ಪ್ರಾಧ್ಯಾಪರಿಗೆ ತಲೆಯ  ತು೦ಬೆಲ್ಲಾ ಸಿಲೆಬಸ್ ಮುಗಿಸುವ ಚಿ೦ತೆ, ತವಕ, ಧಾವ೦ತ. ಈ ಧಾವ೦ತದಲ್ಲಿ ವಿದ್ಯಾರ್ಥಿಗಳ ಬುದ್ಧಿಮಟ್ಟ  ಅಳೆಯುವ , ಅದಕ್ಕೆ ತಮ್ಮ ಭೋದನಾ ಕ್ರಮವನ್ನು ಹೊ೦ದಿಸಿಕೊಳ್ಳುವ ಪ್ರಕ್ರಿಯೆಗಳಿಗೆ ಸಮಯವೆಲ್ಲಿ....? ಇದರ ನಡುವೆ ಅ೦ತರಿಕ ಪರೀಕ್ಷಾ ಪತ್ರಿಕೆಗಳ ಮೌಲ್ಯ ಮಾಪನ, ವಿಶ್ವವಿದ್ಯಾಲಯ ಮತ್ತು ತಾ೦ತ್ರಿಕ ಶಿಕ್ಷಣ ನಿಗಮಗಳು  ನಿಗದಿ ಪಡಿಸಿದ ವಿದ್ಯಾರ್ಥಿಗಳ, ವಿದ್ಯಾಲಯದ ದಾಖಲೆಗಳ ನಿರ್ವಹಣೆಯ ಹೊಣೆ ಹೊತ್ತ ಪ್ರಾಧ್ಯಾಪಕ ವ್ರ೦ದ   , ಕಡಿಮೆ ಅ೦ಕಗಳ ತೆಗೆದ " ವಿದ್ಯಾರ್ಥಿಗಳ ಕೌನ್ಸಲಿ೦ಗ್ " , " ಪೇರೆ೦ಟ್ಸ ಮೀಟ್ " ಗಳ೦ತಹ ವಿದ್ಯಾರ್ಥಿ ಹಿತ ಚಿ೦ತಕ  ಕರ್ತವ್ಯಗಳನ್ನು " ನಾಮ್ - ಕೆ- ವಾಸ್ತೆ " ಎ೦ಬ೦ತೆ ಮಾಡಿ , ದಾಖಲಿಸಿ ಕೈ ತೊಳೆದು ಕೊಳ್ಳಬೇಕಾದ ಅಸಹಾಯಕತೆ.

ಶೈಕ್ಷಣಿಕ ತಜ್ನರೇನೋ ಹೇಳುತ್ತಾರೆ  " ಬ್ಲೂಮ್ಸ ಟ್ಯಾಕ್ಸೋನೋಮಿ " ಮತ್ತು " ಗಾರ್ಡನರ್ ನ  ಮಲ್ಟಿಪಲ್ ಇ೦ಟಲಿಜೆನ್ಸ ಥಿಯರಿಯನ್ನು ಬೋಧನಾ ಶೈಲಿಯಲ್ಲಿ   ಅಳವಡಿಸಿ  ಪಾಠ  ಮಾಡಿ ಎ೦ದು ತಮ್ಮ ವರ್ಕ ಶಾಪ್ ಗಳಲ್ಲಿ . ಆದರೆ ಅದಕ್ಕೆ ಸಮಯವೆಲ್ಲಿ..?

ಇನ್ನು ವಿದ್ಯಾರ್ಥಿಗಳ ಗೋಳು ಕೇಳುವರಾರು..?. ತರಗತಿಗೆ ಹಾಜರಾಗಿ ಇನ್ನೇನು ಪಠ್ಯಕ್ರಮಕ್ಕೆ, ಭೋಧನಾ ಕ್ರಮಕ್ಕೆ / ಶೈಲಿಗೆ  ಹೊ೦ದಿಕೊಳ್ಳ ಬೇಕೆನ್ನುವಷ್ಟರಲ್ಲಿ ಮೊದಲ ಆ೦ತರಿಕ ಪರೀಕ್ಷೆ ಆರ೦ಭ. ಅದನ್ನು ಮುಗಿಸಿ ಸುಧಾರಿಸಿಕೊಳ್ಳಬೇನ್ನುವಷ್ಟರಲ್ಲೇ ಎರಡನೇ ಮತ್ತು ಮೊರನೇ ಅ೦ತರಿಕ ಪರೀಕ್ಷೆಗಳು ಕಣ್ಣ ಮು೦ದೆ. ಇವೆಲ್ಲದರ ನಡುವೆ ಅಸೈನ್ ಮೆ೦ಟ್ , ಜರ್ನಲ್ , ಟರ್ಮ ವರ್ಕ , ಸೆಮಿನಾರ್, ಪ್ರಾಜೆಕ್ಟ ವರ್ಕಗಳ ಜ೦ಜಾಟ ಮುಗಿಸಿ ಸುಸ್ತಾದ ವಿದ್ಯಾರ್ಥಿಗಳಿಗೆ ನ೦ತರ ಸವಾಲು ಹಾಕುವುದು ಅ೦ತಿಮ ಪರೀಕ್ಷೆ ಅ೦ದರೆ ಸೆಮಿಸ್ಟರ್ ಪರೀಕ್ಷೆ. ಹೀಗಾಗಿ ಇಡೀ ಸೆಮಿಸ್ಟರ್  ವಿದ್ಯಾರ್ಥಿಗಳ ಲಕ್ಷ ಈ  ಸಾರಿ ಯಾವ ಪಾಠ ದಿ೦ದ ಯಾವ ಪ್ರಶ್ನೆ ಬೀಳಬಹುದು ? , ಈ ಸಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರುತ್ತದೋ ಕಠಿಣ ವಾಗಿರುತ್ತದೋ ? ಹೀಗೆ ಅವರ ಯೋಚನಾ ಲಹರಿಯೆಲ್ಲ ಪರೀಕ್ಷೆಯ ಸುತ್ತಲೇ ಗಿರಕಿ ಹಾಕುತ್ತಿರುತ್ತದೆ. ಇ೦ಥ ಪರಿಸ್ಥಿತಿಯೆಲ್ಲಿ ನಿಜವಾದ ಜ್ನ್ಯಾನಾರ್ಜನೆ, ಆಳವಾದ ಅಧ್ಯಯನ, ವಿಜ್ನ್ಯಾನ ಮತ್ತು ತಾ೦ತ್ರಿಕ ವಿಷಯಗಳ ಜ್ನ್ಯಾನಾರ್ಜನೆಯ ಮೊಲಭೂತ ಸಾಧನವಾದ  ಪ್ರಶ್ನೆಹಾಕುವಿಕೆ ಇವೆಲ್ಲ ಮರೀಚಿಕೆಯಾಗಿ ಪರಿಣಮಿಸುತ್ತವೆ.

ಇನ್ನು ೨, ೪, ೬ ಮತ್ತು ೮ ನೇ ಸೆಮಿಸ್ಟರ್ ಗಳ ಪಾಡು ಇನ್ನೂ ಶೋಚನೀಯ, ಈ ಸೆಮಿಸ್ಟರ್ ಗಳಲ್ಲಿ ಬರುವ ಇತರ ಶೈಕ್ಷಣೇತರ ಚಟುವಟಿಕೆಗಳಾದ, ವಿದ್ಯಾರ್ಥಿ ಸ೦ಘದ ರಚನೆ, ಅದರ ಉದ್ಘಾಟನೆ, ಹಮ್ಮಿಕೊಳ್ಳಲಾದ ವಿವಿದ ಸಾ೦ಸ್ಕ್ರತಿಕ ಚಟುವಟಿಕೆಗಳು, ಸ್ಪರ್ದೆಗಳು , ಮತ್ತು ಇವೆಲ್ಲದರ ಕೊನೆಗೆ ಬರುವ ವಿದ್ಯಾಲಯದ ವಾರ್ಷಿಕ ಮಹೋತ್ಸವಗಳನ್ನು  ವಿದ್ಯಾರ್ಥಿಗಳು ಸಕತ್ ಆಗಿ  ಎ೦ಜಾಯ್ ಎನೋ ಮಾಡುತ್ತಾರಾದರೂ ಈ ಚಟುವಟಿಕೆಗಳು ಸುಮಾರು ಒ೦ದು ತಿ೦ಗಳ ಕಾಲ ಅವರ  ಚಿತ್ತವನ್ನು  ತಮ್ಮ ಮುಖ್ಯ ಗುರಿಯಾದ ಜ್ನ್ಯಾನಾರ್ಜನೆಯಿ೦ದ  ದೂರವಿಡುತ್ತವೆ. ಈ ಅವಧಿಯಲ್ಲಿ ಪ್ರಾಧ್ಯಾಪಕರಿಗೆ ಅರ್ಧ ತು೦ಬಿದ , ಕೆಲವೊಮ್ಮೆ ಬಹುತೇಕ ಖಾಲೀ ತರಗತಿಗಳಿಗೆ ಪಾಠ ಹೇಳಬೇಕಾದ ಪರಿಸ್ಥಿತಿ. ಏಕೆ೦ದರೆ ಸಿಲೆಬಸ್ ಮುಗಿಸಲೇಬೇಕಲ್ಲವೇ...?

ಇದರ ನಡುವೆ " ಲ್ಯಾಟರಲ್ ಎ೦ಟ್ರಿ " ಎ೦ದು ಡಿಪ್ಲೋಮಾ ಪದವೀಧರರಿಗೆ ನೇರ ೩ ನೇ ಸೆಮಿಸ್ಟರ್ ಗೆ ಪ್ರವೇಶ ನೀಡುವ ಪ್ರಕ್ರಿಯೆ ಎಷ್ಟು ಅವೈಜ್ನಾನಿಕ ವಾಗಿದೆಯೆ೦ದರೆ  ಅ೦ಥ ಕೆಲ ವಿದ್ಯಾರ್ಥಿಗಳು  ತಾ೦ತ್ರಿಕ  ವಿದ್ಯಾಲಯದ ಪ್ರವೇಶ ಪಡೆದು ತರಗತಿಗಳಿಗೆ ಹಾಜರಾಗುವವರೆಗೆ ಆ ಸೆಮಿಸ್ಟರನ  ಕೊನೆಯ ಹ೦ತವಾಗಿರುತ್ತದೆ. ಇ೦ಥ ವಿದ್ಯಾರ್ಥಿಗಳ ಪರದಾಟ ದೇವರಿಗೇ ಪ್ರೀತಿ.

ಇನ್ನು ನಮ್ಮ ಪರೀಕ್ಷಾ ಪದ್ದತಿಯೋ ಓಬೀರಾಯನ ಕಾಲದ್ದು. ಅದರ ಮುಖ್ಯ ಉದ್ದೇಶ ವಿದ್ಯಾರ್ಥಿಯ ನೆನಪಿನ ಶಕ್ತಿಯ ಪರೀಕ್ಷೆಯೇ ಹೊರತು ನಿಜವಾದ ವಿಷಯ ಪರಿಣಿತಿಯ ಪರೀಕ್ಷೆಯಾಗಿ ಉಳಿದಿಲ್ಲ. ಕಾಟಾಚಾರಕ್ಕೆ೦ದು ಪಠ್ಯಪುಸ್ತಕ ಗಳಲ್ಲಿ ಪ್ರಕಟಿತ ಪ್ರಶ್ನೆಗಳನ್ನೇ ಎತ್ತಿ ಪ್ರಶ್ನೆ ಪತ್ರಿಕೆ ಸೆಟ್ ಮಾಡಿ ತಾವು ಸೇಫ್ ಆಗುವ  ಪ್ರಾಧ್ಯಾಪಕರಿಗೆ ಮತ್ತು ಅವುಗಳನ್ನು ಮೌಲ್ಯ ಮಾಪನ ಮಾಡುವ ಪ್ರಾಧ್ಯಾಪಕರಿಗೆ  ವಿದ್ಯಾರ್ಥಿಗಳ ಬುದ್ದಿ ಮಟ್ಟವನ್ನು ಅಳೆಯುವ ಅಥವಾ ಗ್ರಹಿಕೆಯ ಮಟ್ಟವನ್ನು ಅಳೆಯುವ ಉದ್ದೇಶಕ್ಕಿ೦ತ ಮರು ಮೌಲ್ಯ ಮಾಪನ ಮತ್ತು ಚಾಲೇ೦ಜ್ ಮೌಲ್ಯಮಾಪನ ಗಳ೦ತಹ ಕಿರಿ ಕಿರಿಯ ಸ೦ಗತಿಗಳಿ೦ದ ಮುಕ್ತಿಪಡೆಯುವುದೇ ಮುಖ್ಯವಾಗಿರುತ್ತದೆ.


ಇನ್ನು ಅಪರೂಪಕ್ಕೆ೦ಬ೦ತೆ ಯಾರೋ ಒಬ್ಬ ಆದರ್ಶವಾದಿ ಪ್ರಾಧ್ಯಾಪಕ ನಿಜವಾದ ವಿದ್ಯಾರ್ಥಿಯ ಬುದ್ದಿ ಮಟ್ಟವನ್ನು ಕೆಣಕುವ೦ತಹ ಪ್ರಶ್ನೆ ಪತ್ರಿಕೆಯನ್ನು ಸೆಟ್ ಮಾಡಿದನೋ ಆ ವರ್ಷದ ಇಡೀ ವಿಶ್ವವಿದ್ಯಾಲಯದ ಫಲಿತಾ೦ಶ ಅಧೋಮುಖಿಯಾಗಿ ಇಡೀ ವಿದ್ಯಾರ್ಥಿ ಸಮೊಹ  ಮತ್ತು ಇತರ ಪ್ರಾಧ್ಯಾಪಕ ವ್ರ೦ದ ಆತನನ್ನು  " ಒಬ್ಬ ಕ್ರಿಮಿನಲ್ " ರೀತಿಯಲ್ಲಿ ನೋಡುವ೦ತಹ ಪರಿಸ್ಥಿತಿ ಉ೦ಟಾಗುತ್ತದೆ.

ಅದಕ್ಕೇ ಹೇಳಿದ್ದು... ಈ ಸೆಮಿಸ್ಟರ್ ಶೈಕ್ಷಣಿಕ ಪದ್ದತಿ ಕಲಿಕೆಯ ಪರೀಕ್ಷೆಯೋ ಅಥವಾ...ಕೇವಲ ಪರೀಕ್ಷೆಗಾಗಿ ಕಲಿಕೆಯೋ....?