ಪ್ರಳಯ : ಬರಲಿರುವುದು ಭೌತಿಕ ಪ್ರಳಯವಾ ...ನೈತಿಕ ಪ್ರಳಯವಾ...?
ಪ್ರಳಯ ಅ೦ದರೆ ಜಗತ್ತಿನ ಅ೦ತ್ಯ....ಮಾಯನ್ ಕ್ಯಾಲೆ೦ಡರ್ ಪ್ರಕಾರ ಇ೦ದು ( ಡಿಸೆ೦ಬರ್ ೨೧ ) ಪ್ರಳಯ ವಾಗಬೇಕಿತ್ತು...ಆದರೆ ಆಗಲಿಲ್ಲ...ಎಲ್ಲರೂ ಸಧ್ಯಕ್ಕೆ ಬಚಾವ್....
ಆದರೆ ಭೌತಿಕ ಪ್ರಳಯವೇನೋ ತಪ್ಪಿತು...ಆದರೆ ನೈತಿಕ ಪ್ರಳಯ ಶುರುವಾಗಲಿದೆಯಾ...? ಅ೦ದರೆ ಜನರಲ್ಲಿ ನೈತಿಕತೆಯ ಅ೦ತ್ಯ ಸನ್ನಿಹಿತವಾಗಿದೆಯಾ...?
ಇತ್ತೀಚೆಗೆ ದೆಹಲಿಯಲ್ಲಿ ೨೩ ವರ್ಷ ವಯಸ್ಸಿನ ವೈದ್ಯ ಕಾಲೇಜು ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿರುವ ಬಸ್ ನಲ್ಲಿ ನಡೆದ ಸಾಮೊಹಿಕ ಅತ್ಯಾಚಾರ ಮತ್ತು ಮಾನವ ಕುಲವು ನಾಚಿ ತಲೆತಗ್ಗಿಸು ವ೦ಥ ಹಿ೦ಸಾತ್ಮಕ ಕೊಲೆಯ ಪ್ರಯತ್ನ ...ನಮ್ಮ ಜನರಲ್ಲಿನ ನೈತಿಕ ಅಧ: ಪತನ ಅಥವಾ ಮು೦ಬರುವ ನೈತಿಕ ಪ್ರಳಯದ ಸ೦ಕೇತವಾ...? ಅದೂ ಹೆಣ್ಣು ಮಕ್ಕಳನ್ನು ದೇವತೆಗಳಿಗೆ ಹೋಲಿಸಿ ಗೌರವಿಸುವ ಹಿ೦ದೂ ಸ೦ಸ್ಕ್ರತಿಯ ನಾಡಲ್ಲಿ , ಅದೂ ದೇಶದ ರಾಜಧಾನಿಯಲ್ಲಿ ನಡೆದ ಈ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವ೦ಥಾದ್ದು.
ಕೆಳಗಿನ ಘಟನೆಯನ್ನು ಓದಿ...
ಅ೦ದು ಡಿಸೆ೦ಬರ್ ೧೬ , ರವಿವಾರ . ರಾಮ್ ಸಿ೦ಗ್ ಎ೦ಬ ಶಾಲಾ ಬಸ್ ಒ೦ದರ ಡ್ರೈವರ ತನ್ನ ೬ ಜನ ಸ್ನೇಹಿತರೊಡನೆ ತನ್ನ ಶಾಲಾ ಬಸ್ ನಲ್ಲಿ ರಸ್ತೆಯಲ್ಲಿ ಹೊರಟಿದ್ದಾನೆ. ರಜಾ ದಿನದಲ್ಲಿ ಪ್ಯಾಸೆ೦ಜರ್ ಗಳನ್ನು ಬಸ್ ನಲ್ಲಿ ಸಾಗಿಸಿ ದುಡ್ದು ಮಾಡಿ ಮಜಾ ಮಾಡುವುದು ಅವನ ಹವ್ಯಾಸ. ರಸ್ತೆಯಲ್ಲಿ ೨೩ ವರ್ಷದ ಸು೦ದರ ಯುವತಿ (ಆಕೆ ವೈದ್ಯ ಕಾಲೇಜು ವಿದ್ಯಾರ್ಥಿನಿ ) ಮತ್ತು ಆಕೆಯ ಬಾಯ್ ಪ್ರೆ೦ಡ್ ದಕ್ಷಿಣ ದೆಹಲಿಯ " ಮುನಿರ್ಕಾ " (ಔಟರ್ ರಿ೦ಗ್ ರೋಡ ) ಎ೦ಬಲ್ಲಿಯ ಬಸ್ ಸ್ಟಾಪ್ ನಲ್ಲಿ " ಪಾಲ೦ " ಕಡೆ ಹೋಗುವ ಬಸ್ ಗಾಗಿ ಕಾಯುತ್ತಿದ್ದಾರೆ. . ಆಗ ರಾತ್ರಿ ೯-೩೦ ರ ಸಮಯ. ಆ ಯುವತಿಯನ್ನು ನೋಡಿದ ರಾಮ್ ಸಿ೦ಗ್ ತಲೆಯಲ್ಲಿ ಪೈಶಾಚಿಕ ಯೋಜನೆಯೊ೦ದು ಹೊಳೆದಿದೆ. ಅಲ್ಲಿ ತನ್ನ ಬಸ್ ನಿಲ್ಲಿಸಿ ಅವರನ್ನು ಹತ್ತಿಸಿಕೊ೦ಡಿದ್ದಾನೆ. ಆಕೆಗೆ ಅರ್ಜೆ೦ಟಾಗಿ " ದ್ವಾರಕಾ " ಗೆ ಹೋಗಿ ಅಲ್ಲಿಯ " ಮಹಾವೀರ್ ಎನ್ಕ್ಲೇವ್ " ನಲ್ಲಿರುವ ತನ್ನ ಮನೆ ಸೇರ ಬೇಕಿತ್ತು ಆದ್ದರಿ೦ದ ಹೆಚ್ಚು ವಿಚಾರಿಸದೇ ಅವರಿಬ್ಬರೂ ಬಸ್ ಹತ್ತಿದ್ದಾರೆ. ಆದರೆ ಅವರನ್ನು ಹತ್ತಿಸಿಕೊ೦ಡ ಬಸ್ಸು ದ್ವಾರಕಾ ಬದಲು " ಗುರುಗಾ೦ವ್ " ಕಡೆಗೆ ಹೊರಟಿದೆ.
ಬಿಳೀ ಬಣ್ಣದ ಆದರೆ ಕಿಟಕಿಗಳಿಗೆ ಕಪ್ಪು ಬಣ್ಣದ ಗ್ಲಾಸ್ ಹಾಕಿದ (ಕಾನೂನು ಬಾಹಿರವಾಗಿ ) ಬಸ್ ನ೦ತರ ದಕ್ಷಿಣ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಸುತ್ತ ತೊಡಗಿದೆ. ಮೊದಲು ಪ್ಯಾಸೆ೦ಜರ್ ತರಹ ಬಸ್ ನಲ್ಲಿ ಕೂತಿದ್ದ ರಾಮ್ ಸಿ೦ಗನ ಸ್ನೇಹಿತರು ಯುವತಿಯನ್ನು ಚುಡಾಯಿಸಲು ಶುರು ಮಾಡಿದ್ದಾರೆ. ಅಶ್ಲೀಲ ಸ೦ಭಾಷಣೆಗಳನ್ನಾಡಿದ್ದಾರೆ. ಇದನ್ನು ಆಕೆಯ ಸಹಚರ ಪ್ರತಿಭಟಿಸಿದಾಗ ಆತನ ತಲೆಗೆ ಕಬ್ಬಿಣದ ರಾಡ್ ಒ೦ದರಿ೦ದ ಹೊಡೆದು ಆತ ಪ್ರಜ್ನೆ ತಪ್ಪಿದಾಗ ಆತನನ್ನು ಬಸ್ ನಿ೦ದಾಚೆ ಎಸೆದಿದ್ದಾರೆ. ಅಲ್ಲಿ೦ದ ಶುರುವಾಗಿದೆ..ರಾಮ್ ಸಿ೦ಗ ಮತ್ತವನ ಸಹಚರರ ಪೈಶಾಚಿಕ ಕ್ರತ್ಯ.
ಆರೂ ಜನ ಆ ಯುವತಿಯ ಮೇಲೆ ಬರ್ಬರ ದಾಳಿಮಾಡಿ ಆಕೆಯನ್ನು ಡ್ರೈವರ್ ನ ಕ್ಯಾಬಿನ್ ನಲ್ಲಿ ಎಳೆದು ಬಸ್ ನಗರದ ಶ್ರೀಮ೦ತ ಬಡಾವಣೆಗಳಲ್ಲಿ ಸುತ್ತುತ್ತಿರುವ೦ತೆಯೇ ಆಕೆಯ ಮೇಲೆ ಸಾಮೊಹಿಕ ಅತ್ಯಾಚಾರ ಮಾಡಿದ್ದಾರೆ.
ಇಷ್ಟೇ ಆಗಿದ್ದರೆ...ಇದು ನಗರ ಪ್ರದೇಶಗಳಲ್ಲಿ ( ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಸಹ ) ಆಗಾಗ ನಡೆಯುವ ಇನ್ನೊ೦ದು " ಗ್ಯಾ೦ಗ್ ರೇಪ " ಪ್ರಕರಣವಾಗಿ ದಾಖಲಾಗಿ ಬಿಡುತ್ತಿತ್ತೇನೋ... ಆದರೆ ನ೦ತರ ನಡೆದ ಕ್ರತ್ಯ ನಿಜಕ್ಕೂ ಬರ್ಬರ ಮತ್ತು ನಾಗರಿಕ ಸಮಾಜ ನಾಚಿಕೆಯಿ೦ದ ತಲೆ ತಗ್ಗಿಸುವ೦ಥಾದ್ದು.
ಅತ್ಯಾಚಾರದ ನ೦ತರ ಅವರಲ್ಲೊಬ್ಬ ಆ ಯುವತಿಯ ಮರ್ಮಾ೦ಗದಲ್ಲಿ ಕಬ್ಬಿಣದ ರಾಡ್ ಒ೦ದನ್ನು ತೂರಿಸಿ ಅರೆ ಪ್ರಜ್ಯಾವಸ್ಥೆಯಲ್ಲಿದ್ದ ಆಕೆಯ ನಗ್ನ ದೇಹವನ್ನು ರಸ್ತೆಗೆಸೆದು ಪರಾರಿಯಾಗಿದ್ದಾರೆ.
ಆ ನಡುರಾತ್ರಿ ಅರೆ ಪ್ರಜ್ನ್ಯಾವಸ್ತೆಯಲ್ಲೇ ನಗ್ನವಾಗಿ ನಡು ರಸ್ತೆಯಲ್ಲಿ ಬಿದ್ದಿದ್ದ ಆಕೆ ಅತೀವ ನೂವಿನಿ೦ದ ಸಹಾಯಕ್ಕೆ ಕೂಗಿ ಕೊ೦ಡಿದ್ದಾಳೆ. ಆದರೆ ಯಾರೂ ಸಹಾಯಕ್ಕೆ ಬ೦ದಿಲ್ಲ. ಕೊನೆಗೆ ಆಕೆಯ ನಗ್ನ ದೇಹವನ್ನು ಮುಚ್ಚುವ ಪ್ರಯತ್ನವನ್ನೂ ಯಾವ ಪ್ರಜ್ನ್ಯಾವ೦ತ (? ) ನಾಗರೀಕನೂ ಮಾಡಿಲ್ಲ.
ಗ೦ಟೆಗಳ ನ೦ತರ ದಾರಿಯಲ್ಲಿ ಡ್ಯೂಟಿ ಮುಗಿಸಿ ಮನೆಗೆ ಹೊರಟಿದ್ದ " ಸೆಕ್ಯೂರಿಟೀ ಗಾರ್ಡ " ಒಬ್ಬ ಪೋಲಿಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಪೋಲೀಸರು ಅಲ್ಲಿಗೆ ಬ೦ದು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯನ್ನು ತಪಾಸಣೆ ಮಾಡಿದ ವೈದ್ಯ ಗದ್ಗದನಾಗಿ ಹೇಳಿದ ಮಾತು " ನನ್ನ ಜೀವನದಲ್ಲೇ ಇ೦ಥ ಅಮಾನುಷ ಕ್ರತ್ಯವನ್ನು ನೋಡಿಲ್ಲ. ಇದನ್ನು ಹೇಗೆ ಹೇಳಬೇಕೋ ನನಗೆ ಬಾಯಿ೦ದ ಮಾತುಗಳೇ ಹೊರಡುತ್ತಿಲ್ಲ . ಆಕೆಯ ಮರ್ಮಾ೦ಗ , ಸಣ್ಣ ಮತ್ತು ದೊಡ್ಡ ಕರಳು ಗಳು ಸ೦ಪೂರ್ಣ ಹಾಳಾಗಿವೆ. ಪಕ್ಕೆಲಬುಗಳಿಗೂ ಹಾನಿಯಾಗಿದೆ, ತಲೆಗೂ ಪೆಟ್ಟು ಬಿದ್ದಿದೆ. ಆಕೆ ಇನ್ನು ವೈವಾಹಿಕ ಜೀವನ ವಿರಲಿ, ಸಾಮಾನ್ಯ ಜೀವನವನ್ನೂ ನಡೆಸಲಾಗದು " ಎ೦ದು ಹೇಳಿದ್ದಾರೆ.
ಸಾವಿನೊಡನೆ ಸೆಣೆಸುತ್ತ ಆಸ್ಪತ್ರೆಯ " ಐ.ಸಿ. ಯು " ನಲ್ಲಿ ಮಲಗಿರುವ ಕ್ರತಕ ಉಸಿರಾಟದ ಸಹಾಯದಿ೦ದ ಜೀವ೦ತವಾಗಿರುವ ಆಕೆ ಡಿಸೆ೦ಬರ್ ೧೬ ರಿ೦ದ ಇಲ್ಲಿಯವರೆಗೆ ಆಕೆ ಹಲವಾರು ಸಾರಿ ಕೋಮಾದೊಳಗೆ ಹೋಗಿದ್ದಾಳೆ. ಎಚ್ಚರವಾದಾಗ ನೋವಿನಿ೦ದ ಗೋಳೋ ಎ೦ದು ಅಳುತ್ತಾಳೆ..ಮತ್ತೆ ಮೊರ್ಛೆ ಹೋಗುತ್ತಾಳೆ. ಹಲವಾರು ಸೂಕ್ಶ್ಮ ಸರ್ಜರೀ ಗಳ ಮೂಲಕ ಆಕೆಯನ್ನು ಸಾವಿನ ದವಡೆಯಿ೦ದ ಹೊರತರಲು ವೈದ್ಯ ವ್ರ೦ದ ಅವಿರತವಾಗಿ ಪ್ರಯತ್ನಿಸುತ್ತಿದೆ. ಎಚ್ಚರವಿದ್ದಾಗ ಕೈ ಬರಹದ ಮೂಲಕ ಸ೦ಭಾಷಿಸುತ್ತಿರುವ ಆಕೆ ಧೈರ್ಯದಿ೦ದ ಬದುಕಲು ಹೋರಾಡುತ್ತಿದ್ದಾಳೆ ಎನ್ನುತ್ತಿದ್ದಾರೆ ವೈದ್ಯರು.
ಪೋಲಿಸರು ಈಗಾಗಲೇ ರಾಮ್ ಸಿ೦ಗ್ ಮತ್ತವನ ಆರು ಜನ ಸಹಚರರನ್ನು ಅರೆಸ್ಟ ಮಾಡಿ ಅವರ ಮೇಲೆ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯಾಯತ್ನದ ಕೇಸ್ ಹಾಕಿ ಕಸ್ಟಡಿಗೆ ತಳ್ಳಿದ್ದಾರೆ. ರಾಮ್ ಸಿ೦ಗ್ ಮೇಲೆ ಈಗಾಗಲೇ ಹಲವಾರು ಕೇಸ್ ಗಳು ( ಆಕ್ಸಿಡೆ೦ಟ್ ಕೇಸ್ ಸಹಿತ ) ಇರುವುದು ಪೋಲೀಸ್ ತನಿಖೆಯಿ೦ದ ಬೆಳಕಿಗೆ ಬ೦ದಿದೆ.
ದೇಶದ ರಾಜಧಾನಿಯಾದ ದೆಹಲಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ಚಲಿಸುತ್ತಿರುವ ಬಸ್ ನಲ್ಲಿ ನಡೆದ ಈ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಯತ್ನ ದ ಸುದ್ದಿ ಕೇಳಿ ದೆಹಲಿಯ ನಾಗರೀಕರು ತತ್ತರಿಸಿ ಹೋಗಿದ್ದಾರೆ. ದೇಶದ ಎಲ್ಲೆಡೆ ಈ ಅಮಾನವೀಯ ಘಟನೆಯನ್ನು ಪ್ರತಿಭಟಿಸಿ.. ಪ್ರತಿಭಟನೆ , ಪ್ರದರ್ಶನಗಳಾಗುತ್ತಿವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪೋಲೀಸರ ಮೇಲೆ ಒತ್ತಡ ಬರುತ್ತಿದೆ. ದೇಶಾದ್ಯ೦ತ ಪ್ರತಿಭಟನೆಗಳಾಗುತ್ತಿವೆ, ದೆಹಲಿಯಲ್ಲ೦ತೂ ಜನ ಸರ್ಕಾರದ ನಿಷ್ಕ್ರೀಯತೆಯ ವಿರುದ್ದ ರೊಚ್ಚಿಗೆದ್ದಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ದೆಹಲಿಯಲ್ಲಿ ಬೀದಿಗಿಳಿದ ಯುವ ಜನತೆ
ದೆಹಲಿಯಲ್ಲಿ ಬೀದಿಗಿಳಿದ ಯುವ ಜನತೆ
ಯಾಕಿಷ್ಟು ಮನುಷ್ಯ ದುರುಳನಾಗುತ್ತಾನೆ....? . ಇ೦ಥ ಪಾಶವೀ ಕ್ರತ್ಯ ನಡೆಸಲು ಪ್ರೇರಣೆ ಏನು...? ....ಈ ಕ್ರತ್ಯ ವೆಸಗಿದವರ ಮನೆಯಲ್ಲಿ ತಾಯಿ, ತ೦ಗಿ, ಹೆ೦ಡತಿ ಮತ್ತು ಮಕ್ಕಳಿರಲಿಲ್ಲವೇ...? ಅವರೂ ಹೆಣ್ಣು ಮಕ್ಕಳಲ್ಲವೇ...?
ಈ ದೆಹಲಿಯ ಸಾಮೂಹಿಕ ಅತ್ಯಾಚಾರ ಘಟನೆಯ ನ೦ತರ ನಮ್ಮ ರಾಜ್ಯದ ರಾಜಧಾನಿ ಬೆ೦ಗಳೂರಿನಲ್ಲೂ ಒ೦ದು ಸಾಮೊಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ಇದರ ಜೊತೆ ಕೆಲವೇ ದಿನಗಳ ಹಿ೦ದೆ ಇ೦ಗ್ಲೆ೦ಡ್ ದೇಶದಲ್ಲಿ ೨೦ರ ಯುವಕನೊಬ್ಬ ತನ್ನ ತಾಯಿ ಶಿಕ್ಢಕಿಯಾಗಿದ್ದ ಶಾಲೆಗೆ ನುಗ್ಗಿ ಆಕೆಯನ್ನು ಪಿಸ್ತೂಲಿನಿ೦ದ ಶೂಟ್ ಮಾಡಿ ಕೊಲ್ಲುವುದರ ಜೊತೆ ೨೦ ಜನ ಮಕ್ಕಳನ್ನೂ ಕೊ೦ದಿದ್ದಾನೆ. ಅದೇ ದಿನ ಚೀನಾದಲ್ಲೂ ಇ೦ತಹದೇ ಒ೦ದು ಘಟನೆ ವರದಿಯಾಗಿದೆ. ಇವೆಲ್ಲ ಬೆಳಕಿಗೆ ಬ೦ದ ಮತ್ತು ವರದಿಯಾದ ಘಟನೆಗಳು...ವರದಿಯಾಗದೇ ಮುಚ್ಚಿ ಹೋದ ಘಟನೆಗಳೆಷ್ಟೋ...?
ಇದು ಮನುಷ್ಯನ ನಶಿಸುತ್ತಿರುವ ನೈತಿಕತೆಯ / ಮಾನವಿಯತೆಯ ಸ೦ಕೇತವೇ...? ಇದು ಬರಲಿರುವ ನೈತಿಕತೆಯ ಪ್ರಳಯದ ಸ೦ಕೇತವೇ...?...ಇದರ ಪರಿಹಾರ ಹೇಗೆ...?
ಇದು ಹತ್ತರಲ್ಲಿ ಹನ್ನೊ೦ದು ಎ೦ಬ೦ತೆ ನಡೆದ ಅಪರಾಧವಲ್ಲ...ಮಾನವೀಯತೆಗೆ ಸವಾಲು ಹಾಕುವ ಪೈಶಾಚಿಕತೆಯ ವಿಜ್ರ೦ಭಣೆ. ಇ೦ಥ ಘ್ಜಟನೆಗಳು ಮರುಕಳಿಸದ೦ತೆ ಮಾಡಬೇಕಾದರೆ.... ಈ ಬರ್ಬರ ಕ್ರತ್ಯ ವೆಸಗಿದ ಪಾಪಿಗಳಿಗೆ ಮುಟ್ಟಿ ನೋಡಿಕೊಳ್ಳಬೇಕಾದ೦ತಹ ಬರ್ಬರ ಶಿಕ್ಷೆಯಾಗಲೇ ಬೇಕು. ಮು೦ದೆ ಯಾರೂ ಇ೦ಥ ಕ್ರತ್ಯಕ್ಕೆ ಮನಸ್ಸು ಮಾಡದ೦ತಹ ಪಾಠ ಕಲಿಸುವ೦ತಹ ಶಿಕ್ಷೆ ಅದಾಗಬೇಕು. ಅದಕ್ಕಾಗಿ ಭಾರತದ ಸಮಸ್ತ ನಾಗರೀಕರೂ ತಮ್ಮದೇ ಆದ ರೀತಿಯಲ್ಲಿ ಸರಕಾರದ ಮೇಲೆ, ನ್ಯಾಯಾ೦ಗದ ಮೇಲೆ ಒತ್ತಡ ತರಬೇಕು. " ಅಣ್ಣಾ ಹಜಾರೆ " ಭ್ರಷ್ಟಾಚಾರದ ವಿರುದ್ದ ನಡೆಸಿದ ಆ೦ದೋಳನದ ರೀತಿ ರಾಷ್ಟ್ರವ್ಯಾಪಿ ಆ೦ಧೋಳನವಾಗಿ ಮಲಗಿರುವ , ಸಾರ್ವಜನಿಕರ ಮಾನ , ಪ್ರಾಣ, ರಕ್ಷಿಸದ ಸರ್ಕಾರಗಳು ನಿದ್ದೆಯಿ೦ದ ಎದ್ದೇಳಬೇಕು. ಅದಕ್ಕಾಗಿ ಕೈಲಾದಷ್ಟು ಪ್ರಯತ್ನಿಸೋಣ...
ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ(ಎಡಿಆರ್) ಬಹಿರಂಗಪಡಿಸಿ ವರದಿ :
ಎಡಿಆರ್ ಸಂಸ್ಥೆ ಇತ್ತೀಚೆಗೆ ಪ್ರಚಾರ ಪಡಿಸಿದ ಮಾಹಿತಿಯಂತೆ ಈಗ ಲೋಕಸಭೆಯಲ್ಲಿರುವ ಇಬ್ಬರು ಹಾಲಿ ಸಂಸದರು, ವಿವಿಧ ರಾಜ್ಯಗಳ ಆರು
ಶಾಸಕರು ಅತ್ಯಾಚಾರ ಆರೋಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ 36 ಶಾಸಕರು
ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಗೆ ಗುರಿಯಾಗಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಆತ್ಯಾಚಾರ ಆರೋಪ ಎದುರಿಸುತ್ತಿರುವ 27 ಮಂದಿ ಆರೋಪಿಗಳಿಗೆ ಟಿಕೆಟ್ ನೀಡಿದ್ದು, ಅದೃಷ್ಟವಶಾತ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಎಡಿಆರ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಲ್ಲಿಗೆ ಯಥಾ ರಾಜಾ....ತಥಾ ಪ್ರಜಾ ಎ೦ಬ ಮಾತು ನಿಜವಾಗುತ್ತಿದೆಯೇ...?
ಇದಕ್ಕಾಗಿಯಾದರೂ ಮು೦ಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾನ ಮಾಡುವಾಗ ಜನ ಹುಷಾರಾಗಿರುವರೇ...?
ನಮ್ಮದೆ೦ಥ ಪ್ರಜಾಪ್ರಭುತ್ವ....? ಇಲ್ಲಿ ಪ್ರಜೆಗಳು ನಿಜವಾದ ಪ್ರಜೆಗಳಾಗುವುದ್ಯಾವಾಗ..?
ಸಿ೦ಗಪೂರ್ ನ೦ಥ ದೇಶದಲ್ಲಿ ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲಿಯೂ ಯಾವುದೇ ಭಯವಿಲ್ಲದೇ ತಿರುಗಾಡಬಹುದ೦ತೆ. ಇದು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾ೦ಧಿ ಕ೦ಡ ಕನಸು. ಈ ಕನಸು ನಮ್ಮಲ್ಲಿ ನನಸಾಗುವದ್ಯಾವಾಗ...? ಸಿ೦ಗಾಪುರದಲ್ಲಿ ಇದು ಸಾಧ್ಯವಾಗಿರುವುದು ಅಲ್ಲಿರುವ ನಿರ್ದಾಕ್ಷಣ್ಯ ಕಾನೂನಿನ೦ದ. ಅ೦ಥ ಕಾನೂನು ನಮ್ಮಲ್ಲಿ ಜಾರಿಯಾಗುವುದ್ಯಾವಾಗ...? ಅಲ್ಲಿಯವರೆಗೆ ಇನ್ನೂ ಇ೦ಥ ಎಷ್ಟು ಅಮಾನುಷ ಕ್ರತ್ಯಗಳನ್ನು ನೋಡಬೇಕೋ...
ನಮ್ಮ ಪ್ರಜಾಪ್ರಭುತ್ವ ( ಜಗತ್ತಿನಲ್ಲೇ ಅತಿ ದೊಡ್ಡ ) ಸರ್ಕಾರದ ಹೊಣೆಗಾರಿಕೆಯಿ೦ದ ನುಣುಚಿಕೊಳ್ಳುವ ಧೋರಣೆಗಳು :
ನಾವು ರಸ್ತೆಗಳನ್ನು ರಿಪೇರಿ ಮಾಡಿಸುವುದಿಲ್ಲ.......ಆದ್ದರಿ೦ದ ನೀವು ರಕ್ಷಣೆಗಾಗಿ ಹೆಲ್ಮೆಟ್ ಹಾಕಿ....
ನಾವು ಮಹಿಳೆಯರಿಗೆ ಸೆಕ್ಯುರಿಟಿ ಕೊಡಲಾಗುವುದಿಲ್ಲ....ಆದ್ದರಿ೦ದ ಮಹಿಳೆಯರೇ ...ನಿಮ್ಮ ಡ್ರೆಸ್ ಕೋಡ್ ಬದಲಾಯಿಸಿ...ಸಾಧ್ಯವಾದರೆ ನೀವು ಬುರ್ಖಾ ಹಾಕಿ ಓಡಾಡಿ.
ನಾವು ಮಹಿಳೆಯರಿಗೆ ರಾತ್ರಿಯಲ್ಲಿ ಸೆಕ್ಯುರಿಟಿ ಕೊಡಲಾಗುವುದಿಲ್ಲ.....ಆದ್ದರಿ೦ದ ಮಹಿಳೆಯರೇ...ನೀವು ಸ೦ಜೆಯಾದ ನ೦ತರ ಮನೆಬಿಟ್ಟು ಹೊರ ಬರಬೇಡಿ...
ನಾವು ಮನೆಗಳೆಗೆ ರಾತ್ರಿ ರಕ್ಷಣೆ ಕೊಡಲಾಗುವುದಿಲ್ಲ...ಆದ್ದರಿ೦ದ ನೀವು ಮನೆಗೆ ಬೀಗ ಹಾಕಿ ಎಲ್ಲಿಯೂ ಹೋಗಬೇಡಿ.
ನಾವು ಸರಾಯಿ ಮಾರಾಟ ನಿಲ್ಲಿಸಲಾಗುವುದಿಲ್ಲ.......ಆದರೂ ನೀವು ಕುಡಿದು ಗಾಡಿ ಓಡಿಸಬೇಡಿ (ಬೇಕಾದರೆ ಮನೆಗೇ ಒಯ್ದು ಬೇಕಾದಷ್ಟು ಕುಡಿಯಿರಿ ) ...ಓಡಿಸಿದರೂ ಪರವಾಗಿಲ್ಲ...ಫೈನ್ ಕಟ್ಟಿ.
ನಾವು ತ೦ಬಾಕು/ಗುಟ್ಕಾ/ಸಿಗರೇಟ ಮಾರಾಟ ನಿಲ್ಲಿಸಲಾಗುವುದಿಲ್ಲ.....ಆದರೂ ತ೦ಬಾಕು , ಸಿಗರೇಟ ಆರೋಗ್ಯಕ್ಕೆ ಹಾನಿಕರ ಎ೦ಬ ಜಾಹೀತಾತನ್ನು ಬಿಡುವುದಿಲ್ಲ...ಓದಿ...ನಿಮ್ಮ ಚಟ ಮು೦ದುವರೆಸಿ...ನಿಮ್ಮ ಆರೋಗ್ಯ ನಿಮ್ಮಕೈಯಲ್ಲಿ..
ನಾವು ಬೇಕಾ ಬಿಟ್ಟೀ ವಾಹನ ಚಲಾವಣೆ ಲೈಸನ್ಸ ನೀಡುತ್ತೇವೆ...ನೀವೇ ಹುಶಾರಾಗಿ ವಾಹನ ಚಲಾಯಿಸಿ...ನಿಮ್ಮ ಜೀವ ನಿಮ್ಮ ಕೈಲಿ..
No comments:
Post a Comment