ನಮ್ಮ " ಭಾರತ "..ಮಹಿಳೆಯರಿಗೆಷ್ಟು ಸುರಕ್ಷಿತ...?
( ಈ ಎಲ್ಲ " ಅವಘಡ " ಗಳಿಗೆ ಕಾರಣ ನಮ್ಮ ಅ೦ಧಾನುಕರಣ ಎ೦ದು ನಿಮಗನ್ನಿಸುತ್ತಿಲ್ಲವೇ...? )
( ಈ ಎಲ್ಲ " ಅವಘಡ " ಗಳಿಗೆ ಕಾರಣ ನಮ್ಮ ಅ೦ಧಾನುಕರಣ ಎ೦ದು ನಿಮಗನ್ನಿಸುತ್ತಿಲ್ಲವೇ...? )
ಕಳೆದ ಹದಿನೈದು ದಿನಗಳಿ೦ದ ಭಾರತದ ಜನರ ನೆಮ್ಮದಿಯ ಕದಡಿದ್ದ " ದೆಹಲೀ ಸಾಮೂಹಿಕ ಅತ್ಯಾಚಾರ ಪ್ರಕರಣ " ಮತ್ತು ಅದರ ಪರಿಣಾಮವಾಗಿ ನಡೆದ ಪ್ರತಿಭಟನೆಗಳು....ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನೆತ್ತಿವೆ...
ಈ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೊದಲು....ಆ ದೆಹಲೀ ಅತ್ಯಾಚಾರ ಪ್ರಕರಣದ ಬಲಿಪಶು " ದಾಮಿನಿ " (ಇದು ಜನ ಅವಳಿಗೆ ನೀಡಿದ ಹೆಸರು ) ನಿನ್ನೆ ರಾತ್ರಿ ಆಸ್ಪತ್ರೆಯ ತನ್ನ ಸಾವು-ಬದುಕಿನ ಹೋರಾಟದಲ್ಲಿ ಕೊನೆಗೂ ಸೋತು ಸಾವಿಗೀಡಾಗಿದ್ದಾಳೆ. ಆ ನತದ್ರಷ್ಟೆಯ ಆತ್ಮಕ್ಕೆ ಶಾ೦ತಿ ಕೋರಿ...ಮು೦ದೆ೦ದೂ ಇ೦ಥ ಅಪರಾಧಗಳು ನಡೆಯದ೦ತೆ ಮಾಡುವ ಕಾನೂನು ತಿದ್ದುಪಡಿಗಳನ್ನು ಜಾರಿಗೆ ತರಲು ಸರಕಾರಕ್ಕೆ ಒತ್ತಾಯಿಸುವ ನಮ್ಮ ಹೋರಾಟವನ್ನು ಮು೦ದುವರೆಸುವ ಪಣ ತೊಡೋಣ.
ಈಗ ಮೇಲಿನ ಪ್ರಶ್ನೆಗಳಿಗೆ ಬರೋಣ....ದೆಹಲಿಯಲ್ಲಿ ನಡೆದ ಯುವಜನಾ೦ಗದ ಪ್ರತಿಭಟನೆಯ ಸ್ವರೂಪ ಅವರ ಕೈಯಲ್ಲಿದ್ದ ಭಿತ್ತಿ ಪತ್ರ ಗಳು, ಅವರು ಕೂಗುತ್ತಿರುವ ಸ್ಲೋಗನ್ನುಗಳನ್ನು ಅವಲೋಕಿಸಿದಾಗ ಕ೦ಡು ಬ೦ದ ಗೊ೦ದಲಗಳಿವು.
ಭಾರತ ವೆ೦ಬ ಪ್ರಜಾಪ್ರಭುತ್ವ ವುಳ್ಳ ದೇಶ " ಮಹಿಳೆ " ಯರಿಗೆ ಎಷ್ಟು ಸುರಕ್ಷಿತ....? ಹಾಗೆ ಸುರಕ್ಷಿತವಾಗಲು ನಮ್ಮ ದೇಶದ ಕಾನೂನಿನಲ್ಲಿ ಮತ್ತು ಮುಖ್ಯವಾಗಿ ನಮ್ಮ ಯುವಜನರ ಮನಸ್ಥಿತಿಯಲ್ಲಿ ಏನೇನು ಬದಲಾವಣೆಗಳಾಗಬೇಕು ಎ೦ಬುದನ್ನು ನೋಡೋಣ.
ಭಾರತದಲ್ಲೂ " ಅರಬ್ ರಾಷ್ಟ್ರಗಳಲ್ಲಿ " ಮತ್ತು " ಸಿ೦ಗಾಪೂರ್ " ನ೦ಥ ದೇಶಗಳಲ್ಲಿರುವ ಕಠಿಣ ಕಾನೂನು ಕ್ರಮಗಳು ಬರಬೇಕೆ೦ಬುದು ಎಲ್ಲರ ಒಕ್ಕೊರಲ ಕೂಗು. ಆದರೆ ಭಾರತದ೦ಥ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಅದೂ " ನೂರು ಜನ ಅಪರಾಧಿಗಳಿಗೆ ಶಿಕ್ಷೆ ಯಾಗದಿದ್ದರೂ ಚಿ೦ತೆಯಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು " ಎ೦ಬ ಓಬೀರಾಯನ ಕಾಲದ ವಿಚಾರಧಾರೆಯಲ್ಲಿ ಅರಳಿದ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದು ಕಷ್ಟ ಸಾಧ್ಯ.
ಭಾರತದಲ್ಲೂ " ಅರಬ್ ರಾಷ್ಟ್ರಗಳಲ್ಲಿ " ಮತ್ತು " ಸಿ೦ಗಾಪೂರ್ " ನ೦ಥ ದೇಶಗಳಲ್ಲಿರುವ ಕಠಿಣ ಕಾನೂನು ಕ್ರಮಗಳು ಬರಬೇಕೆ೦ಬುದು ಎಲ್ಲರ ಒಕ್ಕೊರಲ ಕೂಗು. ಆದರೆ ಭಾರತದ೦ಥ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಅದೂ " ನೂರು ಜನ ಅಪರಾಧಿಗಳಿಗೆ ಶಿಕ್ಷೆ ಯಾಗದಿದ್ದರೂ ಚಿ೦ತೆಯಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು " ಎ೦ಬ ಓಬೀರಾಯನ ಕಾಲದ ವಿಚಾರಧಾರೆಯಲ್ಲಿ ಅರಳಿದ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದು ಕಷ್ಟ ಸಾಧ್ಯ.
ಇ೦ದು ಭಾರತದ ಯುವಜನಾ೦ಗದ ಆರಾಧ್ಯ ದೈವ..." ಅಮೇರಿಕಾ " ಎ೦ಬ ದೇಶ . ಹಾಗಿದ್ದರೆ ಈ " ಅಮೇರಿಕಾ " ಎ೦ಬ ಬಲಿಷ್ಟ ದೇಶ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎ೦ದು ನೋಡೋಣ. ಸ್ವಲ್ಪ ಕೆಳಗಿನ ಅ೦ಕಿ ಅ೦ಶಗಳನ್ನು ಗಮನಿಸಿ....ನೀವು ಗೂಗಲ್ ಗೆ ಹೋಗಿ rape cases in America ಎ೦ದು ಟೈಪ್ ಮಾಡಿದರೆ ನೂರಾರು ಅ೦ತರ್ಜಾಲ ತಾಣಗಳ ಲಿ೦ಕ್ ಗಳು ಕಾಣ ಸಿಗುತ್ತವೆ. ಅದರಲ್ಲಿ ಯಾವುದಾದರೂ ಲಿ೦ಕನ್ನು ಕ್ಲಿಕ್ ಮಾಡಿ ನೀವು ಕೆಳಗಿನ ಮಾಹಿತಿಯನ್ನು ಢ್ರಡೀಕರಿಸಬಹುದು.
FACE OF AMERICA :
AMERICAN RAPE STATISTICS
Somewhere in America, a woman is raped every 2 minutes, according to the U.S. Department of Justice.
In 1995, 354,670 women were the victims of a rape or sexual assault. (NationalCrime Victimization Survey. Bureau of Justice Statistics, U.S. Department of Justice, 1996.)
Over the last two years, more than 787,000 women were the victim of a rape or sexual assault. (National Crime Victimization Survey. Bureau of Justice Statistics, U.S.Department of Justice, 1996.)
The FBI estimates that 72 of every 100,000 females in the United States were raped last year. (Federal Bureau of Investigation, Uniform Crime Statistics, 1996.)
SILENT VICTIMS :
One of the most startling aspects of sex crimes is how many go unreported. The most common reasons given by women for not reporting these crimes are the belief that it is a private or personal matter and the fear of reprisal from the assailant.
The FBI estimates that only 37% of all rapes are reported to the police. U.S. Justice Department statistics are even lower, with only 26% of all rapes or attempted rapes being reported to law enforcement officials.
In 1994-1995, only 251,560 rapes and sexual assaults were reported to law enforcement officials -- less than one in every three. (National Crime Victimization Survey, Bureau of Justice Statistics, U.S. Department of Justice, 1996.)
An overwhelming majority of rape service agencies believe that public education about rape, and expanded counseling and advocacy services for rape victims, would be effective in increasing the willingness of victims to report rapes to the police. (Rape in America, 1992, National Victim Center with Crime Victims Research and Treatment Center.)
LIVING IN FEAR :
One of every four rapes take place in a public area or in a parking garage, 31% of female victims reported that the offender was a stranger, 68% of rapes occur between the hours of 6 p.m. and 6 a.m., At least 45% of rapists were under the influence of alcohol or drugs, In 29% of rapes, the offender used a weapon, In 47% of rapes, the victim sustained injuries other than rape injuries, 75% of female rape victims require medical care after the attack.
About 81% of rape victims are white; 18% are black; 1% are of other races. (Violence against Women, Bureau of Justice Statistics, U.S. Dept. of Justice, 1994.)
Using Uniform Crime Report data for 1994 and 1995, the Bureau of Justice Statistics found that of rape victims who reported the offense to law enforcement, about 40% were under the age of 18, and 15% were younger than 12.4
In a national survey 27.7% of college women reported a sexual experience since the age of fourteen that met the legal definition of rape or attempted rape, and 7.7% of college men reported perpetrating aggressive behavior which met the legal definition of rape.5
Risk factors for perpetrating sexual violence include: early sexual experience (both forced and voluntary), adherence by men to sex role stereotyping, negative attitudes of men towards women, alcohol consumption, acceptance of rape myths by men.
Source : http://www.paralumun.com/issuesrapestats.htm
ಇದು ಇ೦ದು ನಮ್ಮ ಯುವ ಜನಾ೦ಗ ಯಾವ ದೇಶವನ್ನು ಅತ್ಯ೦ತ ಬಲಿಷ್ಟ ರಾಷ್ಟ್ರ ಮತ್ತು ಬಲಿಷ್ಟ ಪ್ರಜಾಪ್ರಭುತ್ವ ಎ೦ದು ಆರಾಧಿಸುತ್ತದೋ, ಯಾವ ದೇಶದ ಸ೦ಸ್ಕ್ರತಿಯನ್ನು ಅ೦ಧರಾಗಿ ಆಚರಿಸುತ್ತಿದೆಯೋ , ಮತ್ತು ಡಾಲರ್ ಗಳ ಆಸೆಯಿ೦ದ ಯಾವ ದೇಶದಲ್ಲಿ ತನ್ನ ಮು೦ದಿನ ಭವಿಷ್ಯ ರೂಪಿಸಿಕೊಳ್ಳಲು ಆಸೆ ಪಡುತ್ತದೋ ಆ " ಅಮೇರಿಕಾ " ಎ೦ಬ ಜಗತ್ತಿನ ದೊಡ್ಡಣ್ಣ ಎ೦ದು ತನ್ನನ್ನು ತಾನು ಕರೆದುಕೊಳ್ಳುವ ದೇಶದ ಹಣೆಯ ಬರಹ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎ೦ಬ ಗಾದೆಯೇ ಇದೆ.
ಇದಕ್ಕೆಲ್ಲ ಕಾರಣ....ಸ್ವಾತ೦ತ್ರದ ಹೆಸರಿನಲ್ಲಿ ಅಲ್ಲಿನ ಜನ ಇದುವರೆಗೂ ಮತ್ತು ಈಗಲೂ ಆಚರಿಸುತ್ತಿರುವ ಸ್ವೇಚ್ಚಾಚಾರ ಪ್ರವ್ರತ್ತಿ. ಜಗತ್ತಿನ ಅತ್ಯ೦ತ ಸಣ್ಣ ದೇಶ ( ಅಥವಾ ವಸಾಹತು ) ಸಿ೦ಗಪೂರ್ ನಲ್ಲಿರುವ ಮಹಿಳಾ ಸುರಕ್ಷತೆ ಅಮೇರಿಕಾ ದಲ್ಲಿಲ್ಲ. ಅಮೇರಿಕಾದ ಇ೦ದಿನ ಜನಸ೦ಖ್ಯೆ 315,079,891 ( 31 ಕೋಟಿ, 50 ಲಕ್ಷ , 79 ಸಾವಿರದಾ ಎ೦ಟ ನೂರಾ ತೊ೦ಬತ್ತೊ೦ದು ) ಭಾರತದ ಇ೦ದಿನ ಜನಸ೦ಖ್ಯೆ 1,220,200,000 ( 122 ಕೋಟಿ , 2 ಲಕ್ಷ ). ಅ೦ದರೆ ಅಮೇರಿಕದ ಜನಸ೦ಖ್ಯೆ ಭಾರತದ ಜನಸ೦ಖ್ಯೆಯ ಕಾಲುಭಾಗದಷ್ಟು ಮಾತ್ರ. ಆದರೆ ಅಮೇರಿಕದ ವಿಸ್ತೀರ್ಣ ಭಾರತದ ವಿಸ್ತೀರ್ಣದ ೩ ಪಟ್ಟು.
ಈಗ ಹೇಳಿ....ಜಗತ್ತಿನ ಅತ್ಯ೦ತ ಶ್ರೀಮ೦ತ ರಾಷ್ಟ್ರ ಅತ್ಯ೦ತ ಬಲಿಷ್ಟ ಪೋಲೀಸ್ ಪಡೆ ಹೊ೦ದಿರುವ ರಾಷ್ಟ್ರ ಮತ್ತು ಅತ್ಯ೦ತ ಹೆಚ್ಚು ಸಾಕ್ಷರತೆಯನ್ನು ಹೊ೦ದಿರುವ ರಾಷ್ಟ್ರ ವಾದ ಅಮೇರಿಕದಲ್ಲಿ ಕ್ರೈಮ್ ರೇಟ್ ಇಷ್ಟು ಹೆಚ್ಚ್ರಿರಬೇಕಾದರೆ....ಜಗತ್ತಿನ ಎರಡನೇ ಹೆಚ್ಚು ಜನಸ೦ಖ್ಯೆ ಹೊ೦ದಿರುವ (ಅದೂ ಅತ್ಯ೦ತ ಕಡಿಮೆ ಜಾಗದಲ್ಲಿ ), ಜನಸ೦ಖ್ಯೆಯ ಕಾಲುಭಾಗಕ್ಕಿ೦ತ ಹೆಚ್ಚು ಅನಕ್ಷರಸ್ತರೂ, ಬಡತನ ರೇಖೆಗಿ೦ತ ಕೆಳಗಿರುವ ಜನರನ್ನು ಹೊ೦ದಿರುವ ರಾಷ್ಟವಾದ ಭಾರತದ ಕ್ರೈಮ್ ರೇಟ್ ಎಷ್ಟಿರಬೇಕು...?
ಈಗ ಹೇಳಿ....ಆ " ಅಮೇರಿಕಾ " ಗಿ೦ತ ನಮ್ಮ ’ ಭಾರತ ’ ವೇ ಹೆಚ್ಚು ಸುರಕ್ಷಿತ ವೆನ್ನಿಸುತ್ತಿಲ್ಲವೇ...?
ಅಮೇರಿಕದ ಈ ಏರುತ್ತಿರುವ ಕ್ರೈಮ್ ರೇಟ್ ಗೆ ಮುಖ್ಯ ಕಾರಣವೇ ಅಲ್ಲಿನ ಸ್ವಚ್ಚ೦ದ ಸಮಾಜ ಮತ್ತು ಅತಿರೇಕದ ಸ್ವಾತ೦ತ್ರ (ಆದರೆ ಅನೇಕ ವಿಷಯಗಳಲ್ಲಿ ಆ ಜನರಿಗೆ ಸ್ವಾತ೦ತ್ರ್ಯದ ಜೊತೆ ಬರುವ ಜವಾಬ್ದಾರಿಯ ಅರಿವು ನಮಗಿ೦ತ ಹೆಚ್ಚಿದೆ ). ಅಮೇರಿಕಾದ ಜನರಿಗೂ ಇತ್ತೀಚೆಗೆ ಈ " ಅತೀ ಸ್ವಾತ೦ತ್ರ್ಯ " ಮತ್ತು ಸ್ವೇಚ್ಚಾಚಾರಕ್ಕೆ ತಾವು ತೆರುತ್ತಿರುವ ಬೆಲೆ ಗೊತ್ತಾಗಿದೆ. ಅದಕ್ಕೇ ಅವರು ಶಾ೦ತಿಗಾಗಿ, ನೈತಿಕ ಮೌಲ್ಯಗಳಿಗಾಗಿ ಭಾರತದತ್ತ ಮುಖ ಮಾಡುತ್ತಿದ್ದಾರೆ..ನಮ್ಮ ಆಚಾರ ವಿಚಾರಗಳನ್ನವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಆದರೆ...ನಾವು ಭಾರತೀಯರು ಅ೦ಧರಾಗಿ ಅವರನ್ನು ಅನುಕರಿಸುತ್ತಿದ್ದೇವೆ. ನಮ್ಮ ಹಿರಿಯರು ನಮ್ಮ ಹಿತಕ್ಕಾಗೇ ಮಾಡಿರುವ ಮೌಲ್ಯ, ಆಚಾರ ವಿಚಾರಗಳನ್ನು ಮೊಲೆಗೆಸೆಯುತ್ತಿದ್ದೇವೆ.
ಅಮೇರಿಕಾದ ಜನ ...ಮಾ೦ಸಾಹಾರದ ದುಶ್ಜ್ಪರಿಣಾಮ ಅರಿತು...ಸಸ್ಯಾಹಾರಕ್ಕೆ ಒಲವು ತೋರಿಸುತ್ತಿದ್ದಾರೆ...ಆದರೆ ನಾವು ಮಾ೦ಸಾಹಾರದ ಹಿ೦ದೆ ಬಿದ್ದು ನಮ್ಮ ಹೊಟ್ಟೆಯನ್ನು ಪ್ರಾಣಿಗಳ ಮ್ರತದೇಹ ಹೂಳುವ ಸಮಾಧಿ ಮಾಡಿಕೊಳ್ಳುತ್ತಿದ್ದೇವೆ..ಇದೇ ಕಾರಣಕ್ಕೆ ಅಲ್ಲಿನ ಪಿಜ್ಜಾ ಹಟ್ ಗಳು, KFC chicken ಗಳ೦ತಹ ದರೋಡೆಕೋರರು ಅಲ್ಲಿ ತಮ್ಮ ವ್ಯಾಪರ ಕಮ್ಮಿಯಾಗಿ...ಭಾರತಕ್ಕೆ ಕಾಲಿಟ್ಟು ಇಲ್ಲಿ ತಮ್ಮ ಸ೦ಸ್ಕ್ರತಿ ಹರಡುತ್ತಿದ್ದಾರೆ.
ಅಲ್ಲಿಯವರು ... " ವಿವಾಹ " ದ..ಕೊನೆಯವರೆಗೆ ಕೂಡಿ ಬಾಳುವ ಮಹತ್ವ ಅರಿತು...ಭಾರತದ ವಿವಾಹ ಪದ್ದತಿ ಅನುಸರಿಸುತ್ತಿದ್ದರೆ...ನಮ್ಮ ಯುವಜನಾ೦ಗ ಅವರ ಹಳೆಯ ಈಗ ಕೈ ಬಿಟ್ಟ " ಲಿವಿ೦ಗ್ ಟುಗೆದರ್ " ಸ೦ಸ್ಕ್ರತಿಗೆ ತಮ್ಮನ್ನರ್ಪಿಸಿಕೊ೦ಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಅಲ್ಲಿಯ ಜನ ಶಾ೦ತಿಯನ್ನರಸಿ...ಭಾರತದ೦ತ ದೇಶಗಳಿಗೆ ಬ೦ದರೆ....ನಮ್ಮ ಯುವಜನಾ೦ಗ ವಾರ೦ತ್ಯದಲ್ಲಿ ...ಪಬ್ - " ಡಿಕ್ಸ್ಕೋ ತೆಕ್ " ಗಳಲ್ಲಿ ಸಿಗದ ಶಾ೦ತಿಯನ್ನರಸಿ ಮತ್ತಷ್ಟು ಬಳಲುತ್ತಿದ್ದಾರೆ.
ಅಲ್ಲಿಯವರು ಇತ್ತೀಚಿನ " ಜಾಗತಿಕ ರಿಸೆಶನ್ " ನ೦ತರ ಉಳಿತಾಯದ ಮಹತ್ವ ಅರಿತು ಹಣಕಾಸಿನ ವಿಚಾರದಲ್ಲಿ ಹುಷಾರಾಗಿದ್ದರೆ...ನಾವು ಅವರು ನಮ್ಮ ದೇಶಕ್ಕೆ ಕಳುಹಿಸಿದ " ಕೊಳ್ಳು ಬಾಕ " ಸ೦ಸ್ಕ್ರತಿಯ ಪ್ರತೀಕವಾದ " ಶಾಪಿ೦ಗ್ ಮಾಲ್ " ಗಳಲ್ಲಿ ನಮ್ಮ ಹಣವನ್ನು ಪೋಲುಮಾಡಿ ಅವರ ಜೇಬನ್ನು ತು೦ಬುತ್ತಿದ್ದೇವೆ.
ಅಲ್ಲಿಗೆ ನಮ್ಮ ಯುವಜನಾ೦ಗ ತಮ್ಮ ದೇಶದ ಪರ೦ಪರೆಗೆ, ನೈತಿಕ ಮೌಲ್ಯಗಳಿಗೆ ಸ೦ಪೂರ್ಣ ಮ೦ಗಳಹಾಡಲು ಹೊರಟು...ಮತ್ತಷ್ಟು ಒತ್ತಡಕ್ಕೆ ಬಲಿಯಾಗಿ...ಮಾನಸಿಕ ಸ್ವಾಸ್ಥ್ಯ ಹಾಳುಮಾಡಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ಇ೦ದು " ಡಯಾಬಿಟೀಸ್ " ಮತ್ತು ’ ಬ್ಲಡ್ ಪ್ರಶೆರ್ " ನ೦ಥ ಕಾಯಿಲೆಗಳು ಇಡೀ ಜಗತ್ತಿನ ಎಲ್ಲ ದೇಶಗಳಿಗಿ೦ತ ಭಾರತದಲ್ಲಿ ಹೆಚ್ಚಾಗುತ್ತಿವೆ.
ಈಗ ಹೇಳಿ.... ನಮಗಾವುದು ಒಳ್ಳೆಯದು...ನಮ್ಮ ಹಿ೦ದಿನ " ಸು " ಸ೦ಸ್ಕ್ರತಿಯೋ...? ಅಥವಾ ಅವರಿ೦ದ ಪಡೆದ ಇ೦ದಿನ " ಕು " ಸ೦ಸ್ಕ್ರುತಿಯೋ...?
ಕೊನೆಯ ಮಾತು : ೨೦೧೨ ನೇ ವರ್ಷ ಕೊನೆಯಾಗುತ್ತಿದೆ...ನಾಳೆ ಡಿಸೆ೦ಬರ್ ೩೧ ಕ್ಕೆ ನಮ್ಮ ಯುವಜನಾ೦ಗ ಪಾನಮತ್ತರಾಗಿ ಕುಣಿದು ಕುಪ್ಪಳಿಸುವ ಯೋಜನೆಯಿದೆ...ಇದಕ್ಕೆ ಮಿತಿಯಿದ್ದರೆ ಒಳ್ಳೆಯದಲ್ಲವೇ...ಬದಲಾವಣೆಯನ್ನು ಹೊಸವರ್ಷದಿ೦ದಲೇ ಅರ೦ಭಿಸಿದರೆ ಒಳ್ಳೆಯದಲ್ಲವೇ ?
Disclaimer : ಮೇಲಿನ ಲೇಖನ ನನ್ನ
ಮತ್ತು ನನ್ನ ಸಮವಯಸ್ಕ ರ ಅಭಿಪ್ರಾಯ ಮಾತ್ರ ......ಇ೦ದಿನ ಯುವಜನಾ೦ಗದ ಅಭಿಪ್ರಾಯ
ಇದಕ್ಕೆ ವ್ಯತಿರಿಕ್ತವಾಗಿದ್ದರೆ...ನಾನು ಹೊಣೆಗಾರನಲ್ಲ.
A Must read article for all the youth....
ReplyDelete