Saturday, December 29, 2012

 ನಮ್ಮ  " ಾರ "..ಮಿಳೆಯಿಗಷ್ು  ಸುರಕ್ಿತ...?

 ( ಈ ಎಲ್ಲ " ಅವಘಡ " ಗಳಿಗೆ ಕಾರಣ ನಮ್ಮ  ಅ೦ಧಾನುಕರಣ ಎ೦ದು ನಿಮಗನ್ನಿಸುತ್ತಿಲ್ಲವೇ...? )


ಕಳೆದ ಹದಿನೈದು ದಿನಗಳಿ೦ದ ಭಾರತದ ಜನರ ನೆಮ್ಮದಿಯ ಕದಡಿದ್ದ " ದೆಹಲೀ ಸಾಮೂಹಿಕ ಅತ್ಯಾಚಾರ ಪ್ರಕರಣ " ಮತ್ತು ಅದರ ಪರಿಣಾಮವಾಗಿ ನಡೆದ ಪ್ರತಿಭಟನೆಗಳು....ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನೆತ್ತಿವೆ...

ಈ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೊದಲು....ಆ ದೆಹಲೀ ಅತ್ಯಾಚಾರ ಪ್ರಕರಣದ ಬಲಿಪಶು " ದಾಮಿನಿ " (ಇದು ಜನ ಅವಳಿಗೆ ನೀಡಿದ ಹೆಸರು ) ನಿನ್ನೆ ರಾತ್ರಿ ಆಸ್ಪತ್ರೆಯ  ತನ್ನ ಸಾವು-ಬದುಕಿನ ಹೋರಾಟದಲ್ಲಿ ಕೊನೆಗೂ ಸೋತು ಸಾವಿಗೀಡಾಗಿದ್ದಾಳೆ. ಆ ನತದ್ರಷ್ಟೆಯ ಆತ್ಮಕ್ಕೆ ಶಾ೦ತಿ ಕೋರಿ...ಮು೦ದೆ೦ದೂ ಇ೦ಥ ಅಪರಾಧಗಳು ನಡೆಯದ೦ತೆ ಮಾಡುವ ಕಾನೂನು ತಿದ್ದುಪಡಿಗಳನ್ನು ಜಾರಿಗೆ ತರಲು ಸರಕಾರಕ್ಕೆ ಒತ್ತಾಯಿಸುವ ನಮ್ಮ ಹೋರಾಟವನ್ನು ಮು೦ದುವರೆಸುವ ಪಣ ತೊಡೋಣ.

ಈಗ ಮೇಲಿನ ಪ್ರಶ್ನೆಗಳಿಗೆ ಬರೋಣ....ದೆಹಲಿಯಲ್ಲಿ ನಡೆದ ಯುವಜನಾ೦ಗದ ಪ್ರತಿಭಟನೆಯ ಸ್ವರೂಪ ಅವರ ಕೈಯಲ್ಲಿದ್ದ ಭಿತ್ತಿ ಪತ್ರ ಗಳು, ಅವರು ಕೂಗುತ್ತಿರುವ ಸ್ಲೋಗನ್ನುಗಳನ್ನು ಅವಲೋಕಿಸಿದಾಗ ಕ೦ಡು ಬ೦ದ ಗೊ೦ದಲಗಳಿವು.

ಭಾರತ ವೆ೦ಬ ಪ್ರಜಾಪ್ರಭುತ್ವ ವುಳ್ಳ ದೇಶ " ಮಹಿಳೆ " ಯರಿಗೆ ಎಷ್ಟು ಸುರಕ್ಷಿತ....? ಹಾಗೆ ಸುರಕ್ಷಿತವಾಗಲು ನಮ್ಮ ದೇಶದ ಕಾನೂನಿನಲ್ಲಿ ಮತ್ತು ಮುಖ್ಯವಾಗಿ ನಮ್ಮ ಯುವಜನರ ಮನಸ್ಥಿತಿಯಲ್ಲಿ ಏನೇನು ಬದಲಾವಣೆಗಳಾಗಬೇಕು ಎ೦ಬುದನ್ನು ನೋಡೋಣ.

ಭಾರತದಲ್ಲೂ " ಅರಬ್ ರಾಷ್ಟ್ರಗಳಲ್ಲಿ " ಮತ್ತು " ಸಿ೦ಗಾಪೂರ್ "  ನ೦ಥ ದೇಶಗಳಲ್ಲಿರುವ ಕಠಿಣ ಕಾನೂನು ಕ್ರಮಗಳು ಬರಬೇಕೆ೦ಬುದು ಎಲ್ಲರ ಒಕ್ಕೊರಲ ಕೂಗು. ಆದರೆ ಭಾರತದ೦ಥ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ  ಅದೂ " ನೂರು ಜನ ಅಪರಾಧಿಗಳಿಗೆ ಶಿಕ್ಷೆ ಯಾಗದಿದ್ದರೂ ಚಿ೦ತೆಯಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು " ಎ೦ಬ ಓಬೀರಾಯನ ಕಾಲದ ವಿಚಾರಧಾರೆಯಲ್ಲಿ ಅರಳಿದ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದು ಕಷ್ಟ ಸಾಧ್ಯ.

ಇ೦ದು ಭಾರತದ ಯುವಜನಾ೦ಗದ ಆರಾಧ್ಯ ದೈವ..." ಅಮೇರಿಕಾ " ಎ೦ಬ ದೇಶ . ಹಾಗಿದ್ದರೆ ಈ " ಅಮೇರಿಕಾ " ಎ೦ಬ ಬಲಿಷ್ಟ ದೇಶ  ಮಹಿಳೆಯರಿಗೆ ಎಷ್ಟು ಸುರಕ್ಷಿತ ಎ೦ದು ನೋಡೋಣ. ಸ್ವಲ್ಪ ಕೆಳಗಿನ ಅ೦ಕಿ ಅ೦ಶಗಳನ್ನು ಗಮನಿಸಿ....ನೀವು ಗೂಗಲ್ ಗೆ ಹೋಗಿ rape cases in America ಎ೦ದು ಟೈಪ್ ಮಾಡಿದರೆ ನೂರಾರು ಅ೦ತರ್ಜಾಲ ತಾಣಗಳ ಲಿ೦ಕ್ ಗಳು ಕಾಣ ಸಿಗುತ್ತವೆ. ಅದರಲ್ಲಿ ಯಾವುದಾದರೂ ಲಿ೦ಕನ್ನು ಕ್ಲಿಕ್ ಮಾಡಿ ನೀವು ಕೆಳಗಿನ ಮಾಹಿತಿಯನ್ನು ಢ್ರಡೀಕರಿಸಬಹುದು.

FACE OF AMERICA :

AMERICAN RAPE STATISTICS

Somewhere in America, a woman is raped every 2 minutes, according to the U.S. Department of Justice.

In 1995, 354,670 women were the victims of a rape or sexual assault. (NationalCrime Victimization Survey. Bureau of Justice Statistics, U.S. Department of Justice, 1996.)

Over the last two years, more than 787,000 women were the victim of a rape or sexual assault. (National Crime Victimization Survey. Bureau of Justice Statistics, U.S.Department of Justice, 1996.)

The FBI estimates that 72 of every 100,000 females in the United States were raped last year. (Federal Bureau of Investigation, Uniform Crime Statistics, 1996.)

SILENT VICTIMS :

One of the most startling aspects of sex crimes is how many go unreported. The most common reasons given by women for not reporting these crimes are the belief that it is a private or personal matter and the fear of reprisal from the assailant.

The FBI estimates that only 37% of all rapes are reported to the police. U.S. Justice Department statistics are even lower, with only 26% of all rapes or attempted rapes being reported to law enforcement officials.

In 1994-1995, only 251,560 rapes and sexual assaults were reported to law enforcement officials -- less than one in every three. (National Crime Victimization Survey, Bureau of Justice Statistics, U.S. Department of Justice, 1996.)

An overwhelming majority of rape service agencies believe that public education about rape, and expanded counseling and advocacy services for rape victims, would be effective in increasing the willingness of victims to report rapes to the police. (Rape in America, 1992, National Victim Center with Crime Victims Research and Treatment Center.)

LIVING IN FEAR :

One of every four rapes take place in a public area or in a parking garage,  31% of female victims reported that the offender was a stranger, 68% of rapes occur between the hours of 6 p.m. and 6 a.m., At least 45% of rapists were under the influence of alcohol or drugs, In 29% of rapes, the offender used a weapon, In 47% of rapes, the victim sustained injuries other than rape injuries, 75% of female rape victims require medical care after the attack.

About 81% of rape victims are white; 18% are black; 1% are of other races. (Violence against Women, Bureau of Justice Statistics, U.S. Dept. of Justice, 1994.)

Using Uniform Crime Report data for 1994 and 1995, the Bureau of Justice Statistics found that of rape victims who reported the offense to law enforcement, about 40% were under the age of 18, and 15% were younger than 12.4

In a national survey 27.7% of college women reported a sexual experience since the age of fourteen that met the legal definition of rape or attempted rape, and 7.7% of college men reported perpetrating aggressive behavior which met the legal definition of rape.5

Risk factors for perpetrating sexual violence include: early sexual experience (both forced and voluntary),  adherence by men to sex role stereotyping,  negative attitudes of men towards women,   alcohol consumption,  acceptance of rape myths by men.

Source  :   http://www.paralumun.com/issuesrapestats.htm

ಇದು  ಇ೦ದು ನಮ್ಮ ಯುವ ಜನಾ೦ಗ ಯಾವ ದೇಶವನ್ನು ಅತ್ಯ೦ತ ಬಲಿಷ್ಟ ರಾಷ್ಟ್ರ  ಮತ್ತು  ಬಲಿಷ್ಟ ಪ್ರಜಾಪ್ರಭುತ್ವ  ಎ೦ದು ಆರಾಧಿಸುತ್ತದೋ, ಯಾವ ದೇಶದ ಸ೦ಸ್ಕ್ರತಿಯನ್ನು ಅ೦ಧರಾಗಿ ಆಚರಿಸುತ್ತಿದೆಯೋ ,  ಮತ್ತು ಡಾಲರ್ ಗಳ ಆಸೆಯಿ೦ದ ಯಾವ ದೇಶದಲ್ಲಿ ತನ್ನ ಮು೦ದಿನ ಭವಿಷ್ಯ ರೂಪಿಸಿಕೊಳ್ಳಲು ಆಸೆ ಪಡುತ್ತದೋ ಆ " ಅಮೇರಿಕಾ " ಎ೦ಬ ಜಗತ್ತಿನ ದೊಡ್ಡಣ್ಣ ಎ೦ದು ತನ್ನನ್ನು ತಾನು ಕರೆದುಕೊಳ್ಳುವ ದೇಶದ ಹಣೆಯ ಬರಹ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎ೦ಬ ಗಾದೆಯೇ ಇದೆ.

ಇದಕ್ಕೆಲ್ಲ ಕಾರಣ....ಸ್ವಾತ೦ತ್ರದ ಹೆಸರಿನಲ್ಲಿ ಅಲ್ಲಿನ ಜನ ಇದುವರೆಗೂ ಮತ್ತು ಈಗಲೂ ಆಚರಿಸುತ್ತಿರುವ ಸ್ವೇಚ್ಚಾಚಾರ ಪ್ರವ್ರತ್ತಿ. ಜಗತ್ತಿನ ಅತ್ಯ೦ತ ಸಣ್ಣ ದೇಶ ( ಅಥವಾ ವಸಾಹತು ) ಸಿ೦ಗಪೂರ್ ನಲ್ಲಿರುವ  ಮಹಿಳಾ ಸುರಕ್ಷತೆ ಅಮೇರಿಕಾ ದಲ್ಲಿಲ್ಲ. ಅಮೇರಿಕಾದ ಇ೦ದಿನ ಜನಸ೦ಖ್ಯೆ 315,079,891 ( 31 ಕೋಟಿ, 50 ಲಕ್ಷ , 79 ಸಾವಿರದಾ ಎ೦ಟ ನೂರಾ ತೊ೦ಬತ್ತೊ೦ದು ) ಭಾರತದ ಇ೦ದಿನ ಜನಸ೦ಖ್ಯೆ  1,220,200,000 ( 122 ಕೋಟಿ , 2 ಲಕ್ಷ ). ಅ೦ದರೆ ಅಮೇರಿಕದ ಜನಸ೦ಖ್ಯೆ  ಭಾರತದ  ಜನಸ೦ಖ್ಯೆಯ ಕಾಲುಭಾಗದಷ್ಟು ಮಾತ್ರ. ಆದರೆ  ಅಮೇರಿಕದ  ವಿಸ್ತೀರ್ಣ  ಭಾರತದ ವಿಸ್ತೀರ್ಣದ  ೩ ಪಟ್ಟು.

ಈಗ ಹೇಳಿ....ಜಗತ್ತಿನ ಅತ್ಯ೦ತ ಶ್ರೀಮ೦ತ ರಾಷ್ಟ್ರ  ಅತ್ಯ೦ತ ಬಲಿಷ್ಟ ಪೋಲೀಸ್ ಪಡೆ ಹೊ೦ದಿರುವ ರಾಷ್ಟ್ರ  ಮತ್ತು  ಅತ್ಯ೦ತ ಹೆಚ್ಚು ಸಾಕ್ಷರತೆಯನ್ನು ಹೊ೦ದಿರುವ ರಾಷ್ಟ್ರ ವಾದ ಅಮೇರಿಕದಲ್ಲಿ ಕ್ರೈಮ್ ರೇಟ್ ಇಷ್ಟು ಹೆಚ್ಚ್ರಿರಬೇಕಾದರೆ....ಜಗತ್ತಿನ ಎರಡನೇ ಹೆಚ್ಚು ಜನಸ೦ಖ್ಯೆ ಹೊ೦ದಿರುವ (ಅದೂ ಅತ್ಯ೦ತ ಕಡಿಮೆ ಜಾಗದಲ್ಲಿ ), ಜನಸ೦ಖ್ಯೆಯ ಕಾಲುಭಾಗಕ್ಕಿ೦ತ ಹೆಚ್ಚು ಅನಕ್ಷರಸ್ತರೂ, ಬಡತನ ರೇಖೆಗಿ೦ತ ಕೆಳಗಿರುವ ಜನರನ್ನು ಹೊ೦ದಿರುವ ರಾಷ್ಟವಾದ ಭಾರತದ ಕ್ರೈಮ್ ರೇಟ್ ಎಷ್ಟಿರಬೇಕು...?

ಈಗ ಹೇಳಿ....ಆ " ಅಮೇರಿಕಾ " ಗಿ೦ತ ನಮ್ಮ ’ ಭಾರತ ’ ವೇ ಹೆಚ್ಚು ಸುರಕ್ಷಿತ ವೆನ್ನಿಸುತ್ತಿಲ್ಲವೇ...?

ಅಮೇರಿಕದ ಈ ಏರುತ್ತಿರುವ ಕ್ರೈಮ್ ರೇಟ್ ಗೆ ಮುಖ್ಯ ಕಾರಣವೇ ಅಲ್ಲಿನ ಸ್ವಚ್ಚ೦ದ ಸಮಾಜ ಮತ್ತು  ಅತಿರೇಕದ ಸ್ವಾತ೦ತ್ರ (ಆದರೆ ಅನೇಕ ವಿಷಯಗಳಲ್ಲಿ ಆ ಜನರಿಗೆ ಸ್ವಾತ೦ತ್ರ್ಯದ ಜೊತೆ ಬರುವ ಜವಾಬ್ದಾರಿಯ ಅರಿವು ನಮಗಿ೦ತ ಹೆಚ್ಚಿದೆ ). ಅಮೇರಿಕಾದ ಜನರಿಗೂ ಇತ್ತೀಚೆಗೆ ಈ  " ಅತೀ ಸ್ವಾತ೦ತ್ರ್ಯ " ಮತ್ತು  ಸ್ವೇಚ್ಚಾಚಾರಕ್ಕೆ ತಾವು ತೆರುತ್ತಿರುವ ಬೆಲೆ ಗೊತ್ತಾಗಿದೆ. ಅದಕ್ಕೇ ಅವರು ಶಾ೦ತಿಗಾಗಿ, ನೈತಿಕ ಮೌಲ್ಯಗಳಿಗಾಗಿ ಭಾರತದತ್ತ ಮುಖ ಮಾಡುತ್ತಿದ್ದಾರೆ..ನಮ್ಮ ಆಚಾರ ವಿಚಾರಗಳನ್ನವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ...ನಾವು ಭಾರತೀಯರು ಅ೦ಧರಾಗಿ ಅವರನ್ನು ಅನುಕರಿಸುತ್ತಿದ್ದೇವೆ. ನಮ್ಮ ಹಿರಿಯರು ನಮ್ಮ ಹಿತಕ್ಕಾಗೇ ಮಾಡಿರುವ ಮೌಲ್ಯ, ಆಚಾರ ವಿಚಾರಗಳನ್ನು ಮೊಲೆಗೆಸೆಯುತ್ತಿದ್ದೇವೆ.

ಅಮೇರಿಕಾದ ಜನ ...ಮಾ೦ಸಾಹಾರದ ದುಶ್ಜ್ಪರಿಣಾಮ ಅರಿತು...ಸಸ್ಯಾಹಾರಕ್ಕೆ ಒಲವು ತೋರಿಸುತ್ತಿದ್ದಾರೆ...ಆದರೆ ನಾವು ಮಾ೦ಸಾಹಾರದ ಹಿ೦ದೆ ಬಿದ್ದು ನಮ್ಮ ಹೊಟ್ಟೆಯನ್ನು ಪ್ರಾಣಿಗಳ ಮ್ರತದೇಹ ಹೂಳುವ ಸಮಾಧಿ ಮಾಡಿಕೊಳ್ಳುತ್ತಿದ್ದೇವೆ..ಇದೇ ಕಾರಣಕ್ಕೆ ಅಲ್ಲಿನ ಪಿಜ್ಜಾ ಹಟ್ ಗಳು, KFC chicken ಗಳ೦ತಹ ದರೋಡೆಕೋರರು ಅಲ್ಲಿ ತಮ್ಮ ವ್ಯಾಪರ ಕಮ್ಮಿಯಾಗಿ...ಭಾರತಕ್ಕೆ ಕಾಲಿಟ್ಟು ಇಲ್ಲಿ ತಮ್ಮ ಸ೦ಸ್ಕ್ರತಿ ಹರಡುತ್ತಿದ್ದಾರೆ.

ಅಲ್ಲಿಯವರು ... " ವಿವಾಹ " ದ..ಕೊನೆಯವರೆಗೆ ಕೂಡಿ ಬಾಳುವ ಮಹತ್ವ ಅರಿತು...ಭಾರತದ ವಿವಾಹ ಪದ್ದತಿ ಅನುಸರಿಸುತ್ತಿದ್ದರೆ...ನಮ್ಮ ಯುವಜನಾ೦ಗ  ಅವರ ಹಳೆಯ ಈಗ ಕೈ ಬಿಟ್ಟ  " ಲಿವಿ೦ಗ್ ಟುಗೆದರ್ "  ಸ೦ಸ್ಕ್ರತಿಗೆ ತಮ್ಮನ್ನರ್ಪಿಸಿಕೊ೦ಡು  ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಅಲ್ಲಿಯ ಜನ ಶಾ೦ತಿಯನ್ನರಸಿ...ಭಾರತದ೦ತ ದೇಶಗಳಿಗೆ ಬ೦ದರೆ....ನಮ್ಮ ಯುವಜನಾ೦ಗ  ವಾರ೦ತ್ಯದಲ್ಲಿ ...ಪಬ್ - " ಡಿಕ್ಸ್ಕೋ ತೆಕ್ "  ಗಳಲ್ಲಿ ಸಿಗದ ಶಾ೦ತಿಯನ್ನರಸಿ ಮತ್ತಷ್ಟು ಬಳಲುತ್ತಿದ್ದಾರೆ.

ಅಲ್ಲಿಯವರು ಇತ್ತೀಚಿನ " ಜಾಗತಿಕ ರಿಸೆಶನ್ " ನ೦ತರ ಉಳಿತಾಯದ ಮಹತ್ವ ಅರಿತು ಹಣಕಾಸಿನ ವಿಚಾರದಲ್ಲಿ ಹುಷಾರಾಗಿದ್ದರೆ...ನಾವು ಅವರು ನಮ್ಮ ದೇಶಕ್ಕೆ ಕಳುಹಿಸಿದ " ಕೊಳ್ಳು ಬಾಕ " ಸ೦ಸ್ಕ್ರತಿಯ ಪ್ರತೀಕವಾದ " ಶಾಪಿ೦ಗ್ ಮಾಲ್ " ಗಳಲ್ಲಿ ನಮ್ಮ ಹಣವನ್ನು ಪೋಲುಮಾಡಿ ಅವರ ಜೇಬನ್ನು ತು೦ಬುತ್ತಿದ್ದೇವೆ.

ಅಲ್ಲಿಗೆ ನಮ್ಮ ಯುವಜನಾ೦ಗ ತಮ್ಮ ದೇಶದ ಪರ೦ಪರೆಗೆ, ನೈತಿಕ ಮೌಲ್ಯಗಳಿಗೆ ಸ೦ಪೂರ್ಣ ಮ೦ಗಳಹಾಡಲು ಹೊರಟು...ಮತ್ತಷ್ಟು ಒತ್ತಡಕ್ಕೆ ಬಲಿಯಾಗಿ...ಮಾನಸಿಕ ಸ್ವಾಸ್ಥ್ಯ ಹಾಳುಮಾಡಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ಇ೦ದು  " ಡಯಾಬಿಟೀಸ್ " ಮತ್ತು ’ ಬ್ಲಡ್ ಪ್ರಶೆರ್ " ನ೦ಥ ಕಾಯಿಲೆಗಳು ಇಡೀ ಜಗತ್ತಿನ ಎಲ್ಲ ದೇಶಗಳಿಗಿ೦ತ ಭಾರತದಲ್ಲಿ ಹೆಚ್ಚಾಗುತ್ತಿವೆ.

ಈಗ ಹೇಳಿ.... ನಮಗಾವುದು ಒಳ್ಳೆಯದು...ನಮ್ಮ ಹಿ೦ದಿನ " ಸು "  ಸ೦ಸ್ಕ್ರತಿಯೋ...?  ಅಥವಾ ಅವರಿ೦ದ ಪಡೆದ ಇ೦ದಿನ " ಕು " ಸ೦ಸ್ಕ್ರುತಿಯೋ...?


ಕೊನೆಯ ಮಾತು : ೨೦೧೨  ನೇ ವರ್ಷ ಕೊನೆಯಾಗುತ್ತಿದೆ...ನಾಳೆ  ಡಿಸೆ೦ಬರ್ ೩೧ ಕ್ಕೆ  ನಮ್ಮ ಯುವಜನಾ೦ಗ ಪಾನಮತ್ತರಾಗಿ ಕುಣಿದು ಕುಪ್ಪಳಿಸುವ ಯೋಜನೆಯಿದೆ...ಇದಕ್ಕೆ ಮಿತಿಯಿದ್ದರೆ ಒಳ್ಳೆಯದಲ್ಲವೇ...ಬದಲಾವಣೆಯನ್ನು  ಹೊಸವರ್ಷದಿ೦ದಲೇ ಅರ೦ಭಿಸಿದರೆ ಒಳ್ಳೆಯದಲ್ಲವೇ  ?

Disclaimer : ಮೇಲಿನ ಲೇಖನ  ನನ್ನ  ಮತ್ತು  ನನ್ನ ಸಮವಯಸ್ಕ ರ  ಅಭಿಪ್ರಾಯ ಮಾತ್ರ ......ಇ೦ದಿನ ಯುವಜನಾ೦ಗದ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿದ್ದರೆ...ನಾನು ಹೊಣೆಗಾರನಲ್ಲ.

Tuesday, December 25, 2012

" ನಿಮ್ಮ  ವಿಚಾರ  ಬದಲಿಸಿಕೊಳ್ಳಿ...ನಮ್ಮ ಬಟ್ಟೆಯನ್ನಲ್ಲ " ...ಎನ್ನುವವರಿಗೆ...

ಒ೦ದು ಘಟನೆಯನ್ನು ಕಲ್ಪಿಸಿಕೊಳ್ಳಿ. ನೀವೊ೦ದು ಉನ್ಮಾದಕರ ಮತ್ತು ಉದ್ರೇಕಕಾರಿಯಾದ ಚಲನಚಿತ್ರವೊ೦ದನ್ನು ನೋಡಿಕೊ೦ಡು ಮನೆಗೆ ಬರುತ್ತಿರುತ್ತೀರಿ. ಅದು ರಾತ್ರಿಯ ಸಮಯ. ದಾರಿಯಲ್ಲಿ ನಿಮಗೊಬ್ಬ ಒ೦ಟಿ ಯುವತಿ ಅದೂ ಉದ್ರೇಕ ಕಾರಿ ( ಮಿನಿಸ್ಕರ್ಟ್ ಎ೦ದು ಕೊಳ್ಳಿ ) ಉಡುಪಿನಲ್ಲಿ ಕಾಣ ಸಿಗುತ್ತಾಳೆ. ಅಲ್ಲಿ ಸುತ್ತ ಮುತ್ತ ಯಾರೂ ಇಲ್ಲ. ಆಗ ನಿಮ್ಮ ಮನಸ್ಥಿತಿ ಏನಾಗುತ್ತದೆ....?

ನೀವು ಅತ್ಯ೦ತ ಧ್ರಡ ಮನಸ್ಸಿನವರಾಗಿದ್ದರೆ ಮತ್ತು ಒಳ್ಳೇ ಸ೦ಸ್ಕಾರವ೦ತರಾಗಿದ್ದರೆ...ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿಟ್ಟುಕೊ೦ಡು ಯಾವುದೇ ಅನಾಹುತಕ್ಕೆಡೆಯು೦ಟು ಮಾಡದೇ ಅಲ್ಲಿ೦ದ ಜಾರಿ ಕೊಳ್ಳುತ್ತೀರಿ. ಒ೦ದು ವೇಳೆ ನಿಮ್ಮ ಜಾಗದಲ್ಲಿ ಅಲ್ಲಿ  ಒಬ್ಬ  ಧ್ರಡ ಮನಸ್ಸಿನವನಲ್ಲದ ...ಉತ್ತಮ ಸ೦ಸ್ಕಾರದಲ್ಲಿ ಬೆಳೆದಿರದ ( ಉದಾ : ಸ್ಲ೦ ನಲ್ಲಿ ಬೆಳೆದ ರೌಡಿ ಎ೦ದಿಟ್ಟುಕೊಳ್ಳಿ ) ಮನುಷ್ಯನಿದ್ದ ಎ೦ದುಕೊಳ್ಳಿ ( ಅಥವಾ ಆತ ಮಧ್ಯಪಾನ ಮಾಡಿದ್ದ ಎ೦ದುಕೊಳ್ಳಿ ) ...ಮು೦ದಾಗುವ ಅನಾಹುತ ಊಹಿಸಿಕೊಳ್ಳ ಬಲ್ಲಿರಾ...?

ಈ ಅನಾಹುತಕ್ಕೆ ಕಾರಣರಾಗುವವರಾರು ...?...ಉದ್ರೇಕ ಕಾರೀ ಉಡುಗೆ ತೊಟ್ಟ ಆ ಯುವತಿಯಾ...?... ಸ೦ಸ್ಕಾರವಿಲ್ಲದ ಆ ಮನುಷ್ಯನಾ...? ಅಥವಾ ಆತನನ್ನು ಉನ್ಮಾದಿಸಿದ ಮತ್ತು ಉದ್ರೇಕಿಸಿದ ಆ ಚಲನಚಿತ್ರವಾ...ಅಥವಾ ಮಧ್ಯಪಾನವಾ ?

ಈಗ ನಮ್ಮ ಸುತ್ತಲ ಪರಿಸರವನ್ನು ಕೊ೦ಚ ಅವಲೋಕಿಸೋಣ. ಧ್ರಡ ಮನಸ್ಸಿನವನಲ್ಲದ ಮತ್ತು ಉತ್ತಮ ಸ೦ಸ್ಕಾರ ಹೊ೦ದಿರದ ಯುವಕರನ್ನು  ಉದ್ರೇಕಿಸುವ, ಉನ್ಮಾದಿಸುವ  ಎಲ್ಲ ರೀತಿಯ ಪರಿಕರಗಳೂ ( ಚಲನ ಚಿತ್ರಗಳು, ಜಾಹೀರಾತುಗಳೂ, ಅ೦ತರ್ಜಾಲ ತಾಣಗಳೂ ) ನಮ್ಮ ಪರಿಸರದಲ್ಲಿವೆ. ಅದರ ಜೊತೆ ಎಗ್ಗುತಗ್ಗಿಲ್ಲದೇ ನಡೆಯುವ ಮಧ್ಯ ಸಮಾರಾಧನೆ ಮನುಷ್ಯನ ಮನೋಸ್ವಾಸ್ಥ್ಯವನ್ನೂ ಮತ್ತು  ಪರಿಸರವನ್ನು ಇನ್ನೂ ಹದಗೆಡಿಸುತ್ತಿವೆ.  ಹೀಗಿದ್ದಾಗ ಇ೦ಥ ಅನಾಹುತಗಳನ್ನು ತಡೆಯುವ ದಾರಿ ಯಾವುದು...?

ಧ್ರಡ ಮನಸ್ಸಿಲ್ಲದ...ಸ೦ಸ್ಕಾರವ೦ತರಲ್ಲದವರನ್ನು, ಮಧ್ಯಪಾನ ಮಾಡಿದವರನ್ನು ರಸ್ತೆಯಲ್ಲಿ ಅಡ್ಡಾಡದ೦ತೆ ಮಾಡುವುದಾ...?...ಅದು ಸಾಧ್ಯವಿಲ್ಲದ ಮಾತು.

ಅ೦ದ ಮೇಲೆ ಉಳಿದ ಪರಿಹಾರ ಎರಡೇ...?

ಒ೦ದು ಉನ್ಮಾದ ತರುವ/ಉದ್ರೇಕಿಸುವ ಪರಿಸರದ ಬದಲಾವಣೆ.....ಎರಡು...ಉದ್ರೇಕಕಾರೀ ಉಡುಪಿನ ಮೇಲೆ ನಿಗಾ...?

ನಾವೀಗ ಹೋರಾಡಬೇಕಾಗಿರುವುದು..ಮೊದಲನೇ ಪರಿಹಾರಕ್ಕಾಗಿ . ಅ೦ದರೆ ಹೆಣ್ಣನ್ನು ಭೋಗದ ವಸ್ತುವಾಗಿ , ಅರೆಬೆತ್ತಲೇ ಚಿತ್ರಿಸಿ ತೋರಿಸುವ ಜಾಹೀರಾತು, ಚಲನ ಚಿತ್ರ ಮತ್ತು ಅ೦ತರ್ಜಾಲ ತಾಣಗಳ ವಿರುದ್ದ. ಆದರೆ ಇದು ಅಗುತ್ತಿಲ್ಲ.

ಆಗುತ್ತಿರುವುದು ಉದ್ರೇಕಕಾರೀ ಉಡುಪಿನ ವಿರುದ್ದದ ಕೂಗು ಅದೂ ನಮ್ಮ ಕೈಲಾಗದ  ಸರಕಾರದಿ೦ದ...ಇದನ್ನು ಇ೦ದಿನ ಯುವಜನತೆ ಸಹಿಸಿಕೊಳ್ಳಲಾಗುತ್ತಿಲ್ಲ.

ದೆಹಲಿಯಲ್ಲಿ ಈಗ ಸರ್ಕಾರದ ವಿರುದ್ದ ನಡೆಯುತ್ತಿರುವ ಯುವಜನಾ೦ಗದ (ವೈದ್ಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ವಿರುದ್ದದ ) ಪ್ರತಿಭಟನೆಯಲ್ಲಿ ಭಾಗವಹಿಸಿರುವ  ಯುವತಿಯರ ಕೆಲ ಸ್ಲೋಗನ್ ಗಳು ಪ್ರತಿಭಟನೆಗಳು  ಮೇಲೆ ಹೇಳಿದ ಪ್ರಶ್ನೆಗಳನ್ನೆತ್ತುತ್ತಿವೆ .




ಮೇಲಿನ ೩ ದ್ರಷ್ಯಗಳೇ ಸಾಕು ಯುವಜನರ ಇ೦ಗಿತ ತಿಳಿಯಲು.

ಆದರೆ ಎಲ್ಲ ತರಹದ...ಎಲ್ಲ ಮನೋಭಾವದ...ಎಲ್ಲ ತರಹದ ಸ೦ಸ್ಕಾರದ ಜನರಿರುವ ಈ ದೇಶದಲ್ಲಿ   " DONT TEACH US WHAT TO WEAR...TEACH YOUR SON NOT TO RAPE  " .." ಸೋಚ್ ಬದಲೋ ಕಪಡೇ ನಹೀ "  ಎ೦ಬ೦ತಹ ಪ್ರತಿಭಟನೆಗಳು ಪರಿಣಾಮಕಾರಿಯಾಗಲು ಮತ್ತು ಕಾರ್ಯಗತವಾಗಲು ಸಾಧ್ಯವೇ..?

 ಅಗರ ಸೋಚ ಬದಲನಾ  ಇತಾನಾ  ಆಸಾನ್ ಹೋತಾ ತೊ....ಕ್ಯಾ  ಹಮಾರಾ ದೇಶ ಐಸಾ ಹೋತಾ...?

ನೀವು ಮನೆಯಿ೦ದ ಹೊರಗೆ ಹೋಗಬೇಕಿದ್ದರೆ ಮನೆಗೆ ಬೀಗ ಹಾಕಿ ಹೋಗುತ್ತೀರಿ ಮತ್ತು ರಾತ್ರಿ ಮಲಗುವಾಗಲೂ ಬಾಗಿಲು ಭದ್ರವಾಗಿ  ಜಡಿದು ಮಲಗುತ್ತೀರಿ , ಏಕೆ...? ನಿಮಗೆ ಗೊತ್ತು ನಿಮ್ಮ ಪರಿಸರದಲ್ಲಿ ಕಳ್ಳ ಕಾಕರಿದ್ದಾರೆ ಎ೦ದು. ಬಾಗಿಲು ತೆರೆದಿಟ್ಟೇ ಮಲಗುವುದು ನಿಮ್ಮ ಹಕ್ಕಲ್ಲವೇ..? ನಿಮ್ಮ ಮನೆಯನ್ನು ರಕ್ಷಿಸುವುದು ಪೋಲೀಸರ ಕರ್ತವ್ಯವಲ್ಲವೇ...?  ನಿಮಗೆ ಗೊತ್ತು ಪೋಲೀಸರು ಅಥವಾ ಕಾನೂನು ಎಲ್ಲವನ್ನೂ ಎಲ್ಲ ಕಾಲದಲ್ಲೂ ಕಾಯಲಾರದು ಅದಕ್ಕೂ ತನ್ನದೇ ಆದ ಮಿತಿಯಿದ ಎ೦ದು . ಆದ್ದರಿ೦ದ ನಿಮ್ಮ ಹುಷಾರಿನಲ್ಲಿ ನೀವಿರುತ್ತೀರಿ. ಇದೇ ಜಾಗ್ರತೆಯನ್ನು  ನಿಮ್ಮ  ಎಲ್ಲ ಕೆಲಸಗಳಲ್ಲೂ  ಅಳವಡಿಸಿಕೊ೦ಡರೆ ಒಳ್ಳೆಯದಲ್ಲವೇ ?

ಹಾಗಿದ್ದರೆ ಪ್ರತಿಭಟನೆಯೇ ಬೇಡವೇ...? ಖ೦ಡಿತ ಬೇಕು...ಆದರೆ ಪ್ರತಿಭಟನೆಯ ಗುರಿ ಬದಲಾಗಲಿ.

ಪ್ರತಿಭಟಿಸುವುದಿದ್ದರೆ...ಇದನ್ನು  ಪ್ರತಿಭಟಿಸಿ...

ಅಶ್ಲೀಲ ಜಾಹೀರಾತು ಗಳ , ಅಶ್ಲೀಲ ರಿಯಾಲಿಟೀ  ಶೋ ಗಳ, ಅಶ್ಲೀಲ  ಚಲನ ಚಿತ್ರಗಳ , ಅ೦ತರ್ಜಾಲ ತಾಣ ಗಳ ವಿರುದ್ದ  ಪ್ರತಿಭಟಿಸಿ...ಇವುಗಳಿಗೂ ಅತ್ಯಾಚಾರಗಳ೦ತಹ ಅಪರಾಧಕ್ಕೂ ಏನು ಸ೦ಭ೦ಧ ಎ೦ದು ನಿಮಗನ್ನಿಸಬಹುದು. ಆದರೆ ಸ೦ಭ೦ಧ ವಿದೆ. ತಜ್ನ್ಯರ ಪ್ರಕಾರ ಪ್ರತೀ ಅತ್ಯಾಚಾರಿಯೂ ಒಬ್ಬ ಮಾನಸಿಕ ರೋಗಿ. ಆತನ ಮಾನಸಿಕ ಸ್ವಾಸ್ಥ್ಯ ಹದಗೆಡಲು ಇ೦ದಿನ ಸ್ವೇಚ್ಚಾಪ್ರವ್ರತ್ತಿ ( ಅದರಲ್ಲಿ ಮಧ್ಯಪಾನವೂ ಸೇರಿದೆ ) ಯ ಪರಿಸರವೇ ಕಾರಣ. ಇ೦ಥವರ ಮಾನಸಿಕ ಸ್ವಾಸ್ಥ್ಯ ಸರಿಪಡಿಸುವ ವಿಧಾನ ಎರಡೇ... ಒ೦ದು  ಪರಿಸರದಲ್ಲಿ  ಬದಲಾವಣೆ (ಮಧ್ಯಪಾನ ನಿಷೇಧವೂ ಸೇರಿದ೦ತೆ ) ಮತ್ತು   ಕಠಿಣ  ಶಿಕ್ಷೆಯ ಭಯ.


ಸಿ೦ಗಾಪುರ್ ನ೦ತ ದೇಶಗಳಲ್ಲಿರುವ೦ತಹ ( ಅತ್ಯಾಚಾರಿಗಳಿಗೆ  ತ್ವರಿತವಾದ ಮತ್ತು ಕಠಿಣ ಶಿಕ್ಷೆ ) ಪ್ರಭಲ ಕಾನೂನನ್ನು ಜಾರಿಗೆ  ತರಲು  ಮೀನ  ಮೇಷ  ಎಣಿಸುತ್ತಿರುವ  ನಮ್ಮ  ಸರಕಾರದ ಸೋಮಾರಿತನದ  ವಿರುದ್ದ  ಪ್ರತಿಭಟಿಸಿ.

ಒ೦ದು ಕಡೆ ಅಧುನಿಕ ಯುವತಿಯರು...ತಾವು ಭೋಗದ ವಸ್ತುವಲ್ಲ ತಮ್ಮನ್ನು ನೋಡುವ ದ್ರಷ್ಟಿ  ಬದಲಾಗಲಿ ಎನ್ನುತ್ತಿದ್ದಾರೆ...ಇನ್ನೊ೦ದು ಕಡೆ ಇವರು ಆರಾಧಿಸುವ ಸೆಲೆಬ್ರಿಟಿಗಳು ಹಣದಾಸೆಗೆ ಜಾಹಿರಾತುಗಳಲ್ಲಿ ಮತ್ತು ಬೆಳ್ಳಿಪರದೆಯ ಮೇಲೆ ತಮ್ಮನ್ನು ತಾವು ಭೋಗದ ವಸ್ತುವಾಗಿ ಬಿ೦ಬಿಸಿಕೊಳ್ಳುತ್ತಿದ್ದಾರೆ ( " ಶೀಲಾ ಕಿ ಜವಾನಿ " ಯಿ೦ದ ಹಿಡಿದು..." ಹಲ್ಕಟ ಜವಾನಿ " ಯ ವರೆಗಿನ  ಐಟ೦ ಸಾ೦ಗುಗಳು ಸಾರುವುದು ಇದನ್ನೇ ಅಲ್ಲವೇ... ) ಅಗ್ಗದ ಪ್ರಚಾರಕ್ಕಾಗಿ ಪೂನ೦ ಪಾ೦ಡೆ , ರೋಜಲೀನ್ ಖಾನ್ ರ೦ತಹ  ರೂಪದರ್ಶಿ(?) ಗಳು ತಮ್ಮ ನಗ್ನತೆಯನ್ನು ಫೇಸ್ ಬುಕ್ ಗಳ೦ತಹ ಜನಪ್ರೀಯ ಅ೦ತರ್ಜಾಲ ತಾಣಗಳಲ್ಲಿ ಹರಿಬಿಟ್ಟು ತಾವು ಭೋಗದ ವಸ್ತುಗಳೆ೦ದು ಜಗತ್ತಿಗೇ ಸಾರುತ್ತಿದ್ದಾರೆ.  ....ಇದಲ್ಲವೇ ವಿಪರ್ಯಾಸ...?  ಇದರ ವಿರುದ್ದ ಪ್ರತಿಭಟಿಸಿ....ಇದರಿ೦ದ ಪರಿಸರ ಬದಲಾಗಲಿ.

ಇದರ ಜೊತೆ  ಪರಿಸರ  ಹದಗೆಡಲು ಮುಖ್ಯಕಾರಣವಾದ " ಮಧ್ಯಪಾನ "...ಮತ್ತು ಅದನ್ನು ಎಗ್ಗುತಗ್ಗಿಲ್ಲದೇ ಮಾರಿ ಯುವಜನಾ೦ಗವನ್ನು  ಮಧ್ಯವ್ಯಸನಿಗಳನ್ನಾಗಿಸುತ್ತಿರುವ  ಸರ್ಕಾರದ ನೀತಿಯನ್ನು ಪ್ರತಿಭಟಿಸಿ.

ಆಗ ನಿಮ್ಮ ಪ್ರತಿಭಟನೆಗೊ೦ದು ಅರ್ಥ ಬರುತ್ತದೆ......" ಅದರ ಜೊತೆಗೆ ಬಟ್ಟೆಯ ಮೇಲೆ ಕೊ೦ಚ ನಿಗಾ ಕೂಡ ಇರಲಿ "..ಪರಿಸರ ಬದಲಾಗುವವರೆಗಾದರೂ....ಸ್ವಾತ೦ತ್ರ್ಯದ ಜೊತೆ ಜವಾಬ್ದಾರಿಯೂ ಇಲ್ಲದಿದ್ದರೆ...ಅದು ಸ್ವೇಚ್ಚಾಚಾರವಾಗಿ ಅನಾಹುತಗಳಿಗೆಡೆಮಾಡುತ್ತದೆ.

ಪರಿಸರ ಬದಲಾದಾಗ ಮಾತ್ರ ವಿಚಾರ (ಹಿ೦ದಿಯಲ್ಲಿ  ... " ಸೋಚ್ "  ) ಬದಲಾಗುತ್ತದೆ ಎ೦ಬುದು ನಿಮಗೆಲ್ಲ ತಿಳಿದಿರಲಿ...

Disclaimer : ಮೇಲಿನ ಲೇಖನ ನನ್ನ ಮತ್ತು ನನ್ನ ಸಮವಯಸ್ಕ ರ  ಅಭಿಪ್ರಾಯ ಮಾತ್ರ ......ಇ೦ದಿನ ಯುವಜನಾ೦ಗದ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿದ್ದರೆ...ನಾನು ಹೊಣೆಗಾರನಲ್ಲ.

Friday, December 21, 2012


ಪ್ರಳಯ :   ಬರಲಿರುವುದು ಭೌತಿಕ ಪ್ರಳಯವಾ ...ನೈತಿಕ ಪ್ರಳಯವಾ...?


ಪ್ರಳಯ ಅ೦ದರೆ ಜಗತ್ತಿನ ಅ೦ತ್ಯ....ಮಾಯನ್ ಕ್ಯಾಲೆ೦ಡರ್ ಪ್ರಕಾರ ಇ೦ದು ( ಡಿಸೆ೦ಬರ್ ೨೧ ) ಪ್ರಳಯ ವಾಗಬೇಕಿತ್ತು...ಆದರೆ ಆಗಲಿಲ್ಲ...ಎಲ್ಲರೂ ಸಧ್ಯಕ್ಕೆ ಬಚಾವ್....

ಆದರೆ ಭೌತಿಕ ಪ್ರಳಯವೇನೋ ತಪ್ಪಿತು...ಆದರೆ ನೈತಿಕ ಪ್ರಳಯ ಶುರುವಾಗಲಿದೆಯಾ...?  ಅ೦ದರೆ ಜನರಲ್ಲಿ ನೈತಿಕತೆಯ ಅ೦ತ್ಯ ಸನ್ನಿಹಿತವಾಗಿದೆಯಾ...?

ಇತ್ತೀಚೆಗೆ ದೆಹಲಿಯಲ್ಲಿ  ೨೩ ವರ್ಷ ವಯಸ್ಸಿನ ವೈದ್ಯ ಕಾಲೇಜು ವಿದ್ಯಾರ್ಥಿನಿಯ  ಮೇಲೆ ಚಲಿಸುತ್ತಿರುವ ಬಸ್ ನಲ್ಲಿ ನಡೆದ ಸಾಮೊಹಿಕ ಅತ್ಯಾಚಾರ ಮತ್ತು ಮಾನವ ಕುಲವು ನಾಚಿ ತಲೆತಗ್ಗಿಸು ವ೦ಥ ಹಿ೦ಸಾತ್ಮಕ ಕೊಲೆಯ ಪ್ರಯತ್ನ ...ನಮ್ಮ ಜನರಲ್ಲಿನ ನೈತಿಕ ಅಧ: ಪತನ ಅಥವಾ ಮು೦ಬರುವ ನೈತಿಕ ಪ್ರಳಯದ ಸ೦ಕೇತವಾ...?  ಅದೂ ಹೆಣ್ಣು ಮಕ್ಕಳನ್ನು ದೇವತೆಗಳಿಗೆ  ಹೋಲಿಸಿ ಗೌರವಿಸುವ ಹಿ೦ದೂ ಸ೦ಸ್ಕ್ರತಿಯ ನಾಡಲ್ಲಿ , ಅದೂ ದೇಶದ ರಾಜಧಾನಿಯಲ್ಲಿ ನಡೆದ ಈ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವ೦ಥಾದ್ದು.

ಕೆಳಗಿನ ಘಟನೆಯನ್ನು ಓದಿ...

ಅ೦ದು ಡಿಸೆ೦ಬರ್ ೧೬ , ರವಿವಾರ . ರಾಮ್ ಸಿ೦ಗ್ ಎ೦ಬ ಶಾಲಾ ಬಸ್ ಒ೦ದರ ಡ್ರೈವರ ತನ್ನ ೬ ಜನ ಸ್ನೇಹಿತರೊಡನೆ ತನ್ನ ಶಾಲಾ ಬಸ್ ನಲ್ಲಿ ರಸ್ತೆಯಲ್ಲಿ ಹೊರಟಿದ್ದಾನೆ. ರಜಾ ದಿನದಲ್ಲಿ ಪ್ಯಾಸೆ೦ಜರ್ ಗಳನ್ನು ಬಸ್ ನಲ್ಲಿ ಸಾಗಿಸಿ ದುಡ್ದು ಮಾಡಿ ಮಜಾ ಮಾಡುವುದು ಅವನ ಹವ್ಯಾಸ.  ರಸ್ತೆಯಲ್ಲಿ ೨೩ ವರ್ಷದ ಸು೦ದರ ಯುವತಿ (ಆಕೆ ವೈದ್ಯ  ಕಾಲೇಜು ವಿದ್ಯಾರ್ಥಿನಿ ) ಮತ್ತು ಆಕೆಯ ಬಾಯ್ ಪ್ರೆ೦ಡ್  ದಕ್ಷಿಣ ದೆಹಲಿಯ " ಮುನಿರ್ಕಾ " (ಔಟರ್ ರಿ೦ಗ್ ರೋಡ ) ಎ೦ಬಲ್ಲಿಯ ಬಸ್ ಸ್ಟಾಪ್ ನಲ್ಲಿ  " ಪಾಲ೦ " ಕಡೆ ಹೋಗುವ ಬಸ್ ಗಾಗಿ ಕಾಯುತ್ತಿದ್ದಾರೆ. .  ಆಗ ರಾತ್ರಿ ೯-೩೦ ರ ಸಮಯ. ಆ ಯುವತಿಯನ್ನು ನೋಡಿದ ರಾಮ್ ಸಿ೦ಗ್ ತಲೆಯಲ್ಲಿ ಪೈಶಾಚಿಕ ಯೋಜನೆಯೊ೦ದು ಹೊಳೆದಿದೆ. ಅಲ್ಲಿ  ತನ್ನ ಬಸ್ ನಿಲ್ಲಿಸಿ ಅವರನ್ನು ಹತ್ತಿಸಿಕೊ೦ಡಿದ್ದಾನೆ.  ಆಕೆಗೆ ಅರ್ಜೆ೦ಟಾಗಿ " ದ್ವಾರಕಾ "  ಗೆ ಹೋಗಿ ಅಲ್ಲಿಯ " ಮಹಾವೀರ್ ಎನ್ಕ್ಲೇವ್ " ನಲ್ಲಿರುವ  ತನ್ನ ಮನೆ ಸೇರ ಬೇಕಿತ್ತು  ಆದ್ದರಿ೦ದ ಹೆಚ್ಚು ವಿಚಾರಿಸದೇ ಅವರಿಬ್ಬರೂ ಬಸ್ ಹತ್ತಿದ್ದಾರೆ. ಆದರೆ ಅವರನ್ನು ಹತ್ತಿಸಿಕೊ೦ಡ ಬಸ್ಸು ದ್ವಾರಕಾ  ಬದಲು " ಗುರುಗಾ೦ವ್ "  ಕಡೆಗೆ ಹೊರಟಿದೆ.

ಬಿಳೀ ಬಣ್ಣದ  ಆದರೆ  ಕಿಟಕಿಗಳಿಗೆ ಕಪ್ಪು ಬಣ್ಣದ ಗ್ಲಾಸ್ ಹಾಕಿದ (ಕಾನೂನು ಬಾಹಿರವಾಗಿ ) ಬಸ್  ನ೦ತರ ದಕ್ಷಿಣ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಸುತ್ತ ತೊಡಗಿದೆ. ಮೊದಲು ಪ್ಯಾಸೆ೦ಜರ್ ತರಹ ಬಸ್ ನಲ್ಲಿ ಕೂತಿದ್ದ ರಾಮ್ ಸಿ೦ಗನ ಸ್ನೇಹಿತರು ಯುವತಿಯನ್ನು ಚುಡಾಯಿಸಲು ಶುರು ಮಾಡಿದ್ದಾರೆ. ಅಶ್ಲೀಲ ಸ೦ಭಾಷಣೆಗಳನ್ನಾಡಿದ್ದಾರೆ. ಇದನ್ನು ಆಕೆಯ ಸಹಚರ ಪ್ರತಿಭಟಿಸಿದಾಗ ಆತನ ತಲೆಗೆ ಕಬ್ಬಿಣದ ರಾಡ್ ಒ೦ದರಿ೦ದ ಹೊಡೆದು ಆತ ಪ್ರಜ್ನೆ ತಪ್ಪಿದಾಗ ಆತನನ್ನು ಬಸ್ ನಿ೦ದಾಚೆ ಎಸೆದಿದ್ದಾರೆ. ಅಲ್ಲಿ೦ದ ಶುರುವಾಗಿದೆ..ರಾಮ್ ಸಿ೦ಗ ಮತ್ತವನ ಸಹಚರರ ಪೈಶಾಚಿಕ ಕ್ರತ್ಯ.

ಆರೂ ಜನ ಆ ಯುವತಿಯ ಮೇಲೆ ಬರ್ಬರ ದಾಳಿಮಾಡಿ ಆಕೆಯನ್ನು ಡ್ರೈವರ್ ನ ಕ್ಯಾಬಿನ್ ನಲ್ಲಿ ಎಳೆದು ಬಸ್ ನಗರದ ಶ್ರೀಮ೦ತ ಬಡಾವಣೆಗಳಲ್ಲಿ ಸುತ್ತುತ್ತಿರುವ೦ತೆಯೇ  ಆಕೆಯ ಮೇಲೆ  ಸಾಮೊಹಿಕ ಅತ್ಯಾಚಾರ ಮಾಡಿದ್ದಾರೆ.

ಇಷ್ಟೇ ಆಗಿದ್ದರೆ...ಇದು ನಗರ ಪ್ರದೇಶಗಳಲ್ಲಿ ( ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಸಹ ) ಆಗಾಗ ನಡೆಯುವ ಇನ್ನೊ೦ದು " ಗ್ಯಾ೦ಗ್ ರೇಪ " ಪ್ರಕರಣವಾಗಿ ದಾಖಲಾಗಿ ಬಿಡುತ್ತಿತ್ತೇನೋ... ಆದರೆ ನ೦ತರ ನಡೆದ ಕ್ರತ್ಯ ನಿಜಕ್ಕೂ ಬರ್ಬರ ಮತ್ತು ನಾಗರಿಕ ಸಮಾಜ ನಾಚಿಕೆಯಿ೦ದ ತಲೆ ತಗ್ಗಿಸುವ೦ಥಾದ್ದು.

ಅತ್ಯಾಚಾರದ ನ೦ತರ ಅವರಲ್ಲೊಬ್ಬ ಆ ಯುವತಿಯ ಮರ್ಮಾ೦ಗದಲ್ಲಿ ಕಬ್ಬಿಣದ ರಾಡ್  ಒ೦ದನ್ನು  ತೂರಿಸಿ  ಅರೆ ಪ್ರಜ್ಯಾವಸ್ಥೆಯಲ್ಲಿದ್ದ  ಆಕೆಯ  ನಗ್ನ  ದೇಹವನ್ನು ರಸ್ತೆಗೆಸೆದು ಪರಾರಿಯಾಗಿದ್ದಾರೆ.

ಆ  ನಡುರಾತ್ರಿ  ಅರೆ  ಪ್ರಜ್ನ್ಯಾವಸ್ತೆಯಲ್ಲೇ  ನಗ್ನವಾಗಿ ನಡು ರಸ್ತೆಯಲ್ಲಿ ಬಿದ್ದಿದ್ದ ಆಕೆ ಅತೀವ ನೂವಿನಿ೦ದ  ಸಹಾಯಕ್ಕೆ ಕೂಗಿ ಕೊ೦ಡಿದ್ದಾಳೆ. ಆದರೆ ಯಾರೂ ಸಹಾಯಕ್ಕೆ ಬ೦ದಿಲ್ಲ. ಕೊನೆಗೆ ಆಕೆಯ ನಗ್ನ ದೇಹವನ್ನು ಮುಚ್ಚುವ ಪ್ರಯತ್ನವನ್ನೂ ಯಾವ ಪ್ರಜ್ನ್ಯಾವ೦ತ (? ) ನಾಗರೀಕನೂ ಮಾಡಿಲ್ಲ.

ಗ೦ಟೆಗಳ ನ೦ತರ ದಾರಿಯಲ್ಲಿ ಡ್ಯೂಟಿ ಮುಗಿಸಿ ಮನೆಗೆ ಹೊರಟಿದ್ದ  " ಸೆಕ್ಯೂರಿಟೀ  ಗಾರ್ಡ " ಒಬ್ಬ ಪೋಲಿಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.  ಪೋಲೀಸರು ಅಲ್ಲಿಗೆ ಬ೦ದು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯನ್ನು ತಪಾಸಣೆ ಮಾಡಿದ ವೈದ್ಯ ಗದ್ಗದನಾಗಿ ಹೇಳಿದ ಮಾತು " ನನ್ನ ಜೀವನದಲ್ಲೇ ಇ೦ಥ ಅಮಾನುಷ ಕ್ರತ್ಯವನ್ನು ನೋಡಿಲ್ಲ. ಇದನ್ನು ಹೇಗೆ ಹೇಳಬೇಕೋ ನನಗೆ ಬಾಯಿ೦ದ ಮಾತುಗಳೇ ಹೊರಡುತ್ತಿಲ್ಲ . ಆಕೆಯ ಮರ್ಮಾ೦ಗ ,  ಸಣ್ಣ ಮತ್ತು ದೊಡ್ಡ ಕರಳು ಗಳು ಸ೦ಪೂರ್ಣ ಹಾಳಾಗಿವೆ. ಪಕ್ಕೆಲಬುಗಳಿಗೂ ಹಾನಿಯಾಗಿದೆ, ತಲೆಗೂ ಪೆಟ್ಟು ಬಿದ್ದಿದೆ.  ಆಕೆ ಇನ್ನು ವೈವಾಹಿಕ ಜೀವನ ವಿರಲಿ,  ಸಾಮಾನ್ಯ ಜೀವನವನ್ನೂ ನಡೆಸಲಾಗದು " ಎ೦ದು ಹೇಳಿದ್ದಾರೆ.

ಸಾವಿನೊಡನೆ ಸೆಣೆಸುತ್ತ  ಆಸ್ಪತ್ರೆಯ "  ಐ.ಸಿ. ಯು "  ನಲ್ಲಿ ಮಲಗಿರುವ  ಕ್ರತಕ  ಉಸಿರಾಟದ  ಸಹಾಯದಿ೦ದ ಜೀವ೦ತವಾಗಿರುವ ಆಕೆ  ಡಿಸೆ೦ಬರ್ ೧೬ ರಿ೦ದ ಇಲ್ಲಿಯವರೆಗೆ  ಆಕೆ  ಹಲವಾರು  ಸಾರಿ ಕೋಮಾದೊಳಗೆ ಹೋಗಿದ್ದಾಳೆ. ಎಚ್ಚರವಾದಾಗ ನೋವಿನಿ೦ದ ಗೋಳೋ ಎ೦ದು ಅಳುತ್ತಾಳೆ..ಮತ್ತೆ ಮೊರ್ಛೆ ಹೋಗುತ್ತಾಳೆ. ಹಲವಾರು ಸೂಕ್ಶ್ಮ ಸರ್ಜರೀ ಗಳ ಮೂಲಕ ಆಕೆಯನ್ನು ಸಾವಿನ ದವಡೆಯಿ೦ದ ಹೊರತರಲು ವೈದ್ಯ ವ್ರ೦ದ ಅವಿರತವಾಗಿ ಪ್ರಯತ್ನಿಸುತ್ತಿದೆ. ಎಚ್ಚರವಿದ್ದಾಗ ಕೈ ಬರಹದ ಮೂಲಕ ಸ೦ಭಾಷಿಸುತ್ತಿರುವ ಆಕೆ ಧೈರ್ಯದಿ೦ದ ಬದುಕಲು ಹೋರಾಡುತ್ತಿದ್ದಾಳೆ ಎನ್ನುತ್ತಿದ್ದಾರೆ ವೈದ್ಯರು.

ಪೋಲಿಸರು ಈಗಾಗಲೇ ರಾಮ್ ಸಿ೦ಗ್ ಮತ್ತವನ ಆರು ಜನ ಸಹಚರರನ್ನು ಅರೆಸ್ಟ ಮಾಡಿ ಅವರ ಮೇಲೆ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯಾಯತ್ನದ ಕೇಸ್ ಹಾಕಿ ಕಸ್ಟಡಿಗೆ ತಳ್ಳಿದ್ದಾರೆ. ರಾಮ್ ಸಿ೦ಗ್ ಮೇಲೆ ಈಗಾಗಲೇ ಹಲವಾರು ಕೇಸ್ ಗಳು ( ಆಕ್ಸಿಡೆ೦ಟ್ ಕೇಸ್ ಸಹಿತ ) ಇರುವುದು ಪೋಲೀಸ್ ತನಿಖೆಯಿ೦ದ ಬೆಳಕಿಗೆ ಬ೦ದಿದೆ.

ದೇಶದ ರಾಜಧಾನಿಯಾದ ದೆಹಲಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ಚಲಿಸುತ್ತಿರುವ ಬಸ್ ನಲ್ಲಿ ನಡೆದ ಈ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಯತ್ನ ದ ಸುದ್ದಿ ಕೇಳಿ ದೆಹಲಿಯ ನಾಗರೀಕರು ತತ್ತರಿಸಿ ಹೋಗಿದ್ದಾರೆ. ದೇಶದ ಎಲ್ಲೆಡೆ ಈ ಅಮಾನವೀಯ ಘಟನೆಯನ್ನು ಪ್ರತಿಭಟಿಸಿ.. ಪ್ರತಿಭಟನೆ , ಪ್ರದರ್ಶನಗಳಾಗುತ್ತಿವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪೋಲೀಸರ ಮೇಲೆ ಒತ್ತಡ ಬರುತ್ತಿದೆ. ದೇಶಾದ್ಯ೦ತ ಪ್ರತಿಭಟನೆಗಳಾಗುತ್ತಿವೆ, ದೆಹಲಿಯಲ್ಲ೦ತೂ ಜನ ಸರ್ಕಾರದ ನಿಷ್ಕ್ರೀಯತೆಯ ವಿರುದ್ದ ರೊಚ್ಚಿಗೆದ್ದಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ.

ದೆಹಲಿಯಲ್ಲಿ  ಬೀದಿಗಿಳಿದ ಯುವ ಜನತೆ





ಯಾಕಿಷ್ಟು ಮನುಷ್ಯ ದುರುಳನಾಗುತ್ತಾನೆ....? . ಇ೦ಥ ಪಾಶವೀ ಕ್ರತ್ಯ ನಡೆಸಲು ಪ್ರೇರಣೆ ಏನು...? ....ಈ ಕ್ರತ್ಯ ವೆಸಗಿದವರ ಮನೆಯಲ್ಲಿ ತಾಯಿ, ತ೦ಗಿ, ಹೆ೦ಡತಿ ಮತ್ತು ಮಕ್ಕಳಿರಲಿಲ್ಲವೇ...? ಅವರೂ ಹೆಣ್ಣು ಮಕ್ಕಳಲ್ಲವೇ...?

ಈ ದೆಹಲಿಯ ಸಾಮೂಹಿಕ ಅತ್ಯಾಚಾರ ಘಟನೆಯ ನ೦ತರ  ನಮ್ಮ ರಾಜ್ಯದ ರಾಜಧಾನಿ ಬೆ೦ಗಳೂರಿನಲ್ಲೂ ಒ೦ದು ಸಾಮೊಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ಇದರ ಜೊತೆ ಕೆಲವೇ ದಿನಗಳ ಹಿ೦ದೆ ಇ೦ಗ್ಲೆ೦ಡ್ ದೇಶದಲ್ಲಿ ೨೦ರ ಯುವಕನೊಬ್ಬ ತನ್ನ ತಾಯಿ ಶಿಕ್ಢಕಿಯಾಗಿದ್ದ ಶಾಲೆಗೆ ನುಗ್ಗಿ ಆಕೆಯನ್ನು ಪಿಸ್ತೂಲಿನಿ೦ದ ಶೂಟ್ ಮಾಡಿ ಕೊಲ್ಲುವುದರ ಜೊತೆ ೨೦ ಜನ ಮಕ್ಕಳನ್ನೂ ಕೊ೦ದಿದ್ದಾನೆ. ಅದೇ ದಿನ ಚೀನಾದಲ್ಲೂ ಇ೦ತಹದೇ ಒ೦ದು ಘಟನೆ ವರದಿಯಾಗಿದೆ. ಇವೆಲ್ಲ ಬೆಳಕಿಗೆ ಬ೦ದ ಮತ್ತು ವರದಿಯಾದ ಘಟನೆಗಳು...ವರದಿಯಾಗದೇ ಮುಚ್ಚಿ ಹೋದ ಘಟನೆಗಳೆಷ್ಟೋ...?

ಇದು ಮನುಷ್ಯನ ನಶಿಸುತ್ತಿರುವ ನೈತಿಕತೆಯ / ಮಾನವಿಯತೆಯ ಸ೦ಕೇತವೇ...?  ಇದು ಬರಲಿರುವ ನೈತಿಕತೆಯ ಪ್ರಳಯದ ಸ೦ಕೇತವೇ...?...ಇದರ ಪರಿಹಾರ ಹೇಗೆ...?

ಇದು ಹತ್ತರಲ್ಲಿ ಹನ್ನೊ೦ದು ಎ೦ಬ೦ತೆ ನಡೆದ ಅಪರಾಧವಲ್ಲ...ಮಾನವೀಯತೆಗೆ ಸವಾಲು ಹಾಕುವ ಪೈಶಾಚಿಕತೆಯ ವಿಜ್ರ೦ಭಣೆ. ಇ೦ಥ ಘ್ಜಟನೆಗಳು ಮರುಕಳಿಸದ೦ತೆ ಮಾಡಬೇಕಾದರೆ.... ಈ ಬರ್ಬರ ಕ್ರತ್ಯ ವೆಸಗಿದ ಪಾಪಿಗಳಿಗೆ ಮುಟ್ಟಿ ನೋಡಿಕೊಳ್ಳಬೇಕಾದ೦ತಹ  ಬರ್ಬರ  ಶಿಕ್ಷೆಯಾಗಲೇ ಬೇಕು. ಮು೦ದೆ ಯಾರೂ ಇ೦ಥ ಕ್ರತ್ಯಕ್ಕೆ ಮನಸ್ಸು ಮಾಡದ೦ತಹ ಪಾಠ ಕಲಿಸುವ೦ತಹ ಶಿಕ್ಷೆ ಅದಾಗಬೇಕು. ಅದಕ್ಕಾಗಿ ಭಾರತದ ಸಮಸ್ತ ನಾಗರೀಕರೂ ತಮ್ಮದೇ ಆದ ರೀತಿಯಲ್ಲಿ ಸರಕಾರದ ಮೇಲೆ, ನ್ಯಾಯಾ೦ಗದ ಮೇಲೆ  ಒತ್ತಡ ತರಬೇಕು. " ಅಣ್ಣಾ ಹಜಾರೆ " ಭ್ರಷ್ಟಾಚಾರದ ವಿರುದ್ದ ನಡೆಸಿದ ಆ೦ದೋಳನದ ರೀತಿ ರಾಷ್ಟ್ರವ್ಯಾಪಿ ಆ೦ಧೋಳನವಾಗಿ ಮಲಗಿರುವ , ಸಾರ್ವಜನಿಕರ ಮಾನ , ಪ್ರಾಣ,  ರಕ್ಷಿಸದ ಸರ್ಕಾರಗಳು  ನಿದ್ದೆಯಿ೦ದ ಎದ್ದೇಳಬೇಕು.  ಅದಕ್ಕಾಗಿ  ಕೈಲಾದಷ್ಟು  ಪ್ರಯತ್ನಿಸೋಣ...

ಪ್ರಜಾಪ್ರಭುತ್ವ  ಸುಧಾರಣಾ ಸಂಸ್ಥೆ(ಎಡಿಆರ್) ಬಹಿರಂಗಪಡಿಸಿ ವರದಿ :

 ಎಡಿಆರ್ ಸಂಸ್ಥೆ ಇತ್ತೀಚೆಗೆ ಪ್ರಚಾರ ಪಡಿಸಿದ  ಮಾಹಿತಿಯಂತೆ ಈಗ ಲೋಕಸಭೆಯಲ್ಲಿರುವ ಇಬ್ಬರು ಹಾಲಿ ಸಂಸದರು, ವಿವಿಧ ರಾಜ್ಯಗಳ ಆರು ಶಾಸಕರು ಅತ್ಯಾಚಾರ ಆರೋಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ 36 ಶಾಸಕರು ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಗೆ ಗುರಿಯಾಗಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಆತ್ಯಾಚಾರ ಆರೋಪ ಎದುರಿಸುತ್ತಿರುವ 27 ಮಂದಿ ಆರೋಪಿಗಳಿಗೆ ಟಿಕೆಟ್ ನೀಡಿದ್ದು, ಅದೃಷ್ಟವಶಾತ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಎಡಿಆರ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಲ್ಲಿಗೆ  ಯಥಾ ರಾಜಾ....ತಥಾ ಪ್ರಜಾ  ಎ೦ಬ ಮಾತು ನಿಜವಾಗುತ್ತಿದೆಯೇ...?

ಇದಕ್ಕಾಗಿಯಾದರೂ ಮು೦ಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾನ ಮಾಡುವಾಗ ಜನ ಹುಷಾರಾಗಿರುವರೇ...?

 ನಮ್ಮದೆ೦ಥ ಪ್ರಜಾಪ್ರಭುತ್ವ....?   ಇಲ್ಲಿ  ಪ್ರಜೆಗಳು ನಿಜವಾದ ಪ್ರಜೆಗಳಾಗುವುದ್ಯಾವಾಗ..?

ಸಿ೦ಗಪೂರ್ ನ೦ಥ ದೇಶದಲ್ಲಿ ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲಿಯೂ ಯಾವುದೇ ಭಯವಿಲ್ಲದೇ ತಿರುಗಾಡಬಹುದ೦ತೆ. ಇದು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾ೦ಧಿ ಕ೦ಡ ಕನಸು. ಈ ಕನಸು ನಮ್ಮಲ್ಲಿ ನನಸಾಗುವದ್ಯಾವಾಗ...? ಸಿ೦ಗಾಪುರದಲ್ಲಿ ಇದು ಸಾಧ್ಯವಾಗಿರುವುದು ಅಲ್ಲಿರುವ ನಿರ್ದಾಕ್ಷಣ್ಯ ಕಾನೂನಿನ೦ದ. ಅ೦ಥ ಕಾನೂನು   ನಮ್ಮಲ್ಲಿ  ಜಾರಿಯಾಗುವುದ್ಯಾವಾಗ...? ಅಲ್ಲಿಯವರೆಗೆ ಇನ್ನೂ ಇ೦ಥ ಎಷ್ಟು ಅಮಾನುಷ ಕ್ರತ್ಯಗಳನ್ನು ನೋಡಬೇಕೋ...


ನಮ್ಮ  ಪ್ರಜಾಪ್ರಭುತ್ವ  ( ಜಗತ್ತಿನಲ್ಲೇ ಅತಿ ದೊಡ್ಡ ) ಸರ್ಕಾರದ ಹೊಣೆಗಾರಿಕೆಯಿ೦ದ ನುಣುಚಿಕೊಳ್ಳುವ ಧೋರಣೆಗಳು :

ನಾವು ರಸ್ತೆಗಳನ್ನು ರಿಪೇರಿ ಮಾಡಿಸುವುದಿಲ್ಲ.......ಆದ್ದರಿ೦ದ ನೀವು ರಕ್ಷಣೆಗಾಗಿ ಹೆಲ್ಮೆಟ್ ಹಾಕಿ....

ನಾವು ಮಹಿಳೆಯರಿಗೆ ಸೆಕ್ಯುರಿಟಿ ಕೊಡಲಾಗುವುದಿಲ್ಲ....ಆದ್ದರಿ೦ದ ಮಹಿಳೆಯರೇ ...ನಿಮ್ಮ ಡ್ರೆಸ್ ಕೋಡ್ ಬದಲಾಯಿಸಿ...ಸಾಧ್ಯವಾದರೆ ನೀವು ಬುರ್ಖಾ ಹಾಕಿ ಓಡಾಡಿ.

ನಾವು ಮಹಿಳೆಯರಿಗೆ ರಾತ್ರಿಯಲ್ಲಿ ಸೆಕ್ಯುರಿಟಿ ಕೊಡಲಾಗುವುದಿಲ್ಲ.....ಆದ್ದರಿ೦ದ ಮಹಿಳೆಯರೇ...ನೀವು ಸ೦ಜೆಯಾದ ನ೦ತರ ಮನೆಬಿಟ್ಟು ಹೊರ ಬರಬೇಡಿ...

ನಾವು ಮನೆಗಳೆಗೆ ರಾತ್ರಿ ರಕ್ಷಣೆ ಕೊಡಲಾಗುವುದಿಲ್ಲ...ಆದ್ದರಿ೦ದ ನೀವು ಮನೆಗೆ ಬೀಗ ಹಾಕಿ ಎಲ್ಲಿಯೂ ಹೋಗಬೇಡಿ.

ನಾವು ಸರಾಯಿ ಮಾರಾಟ ನಿಲ್ಲಿಸಲಾಗುವುದಿಲ್ಲ.......ಆದರೂ  ನೀವು   ಕುಡಿದು  ಗಾಡಿ  ಓಡಿಸಬೇಡಿ (ಬೇಕಾದರೆ ಮನೆಗೇ ಒಯ್ದು ಬೇಕಾದಷ್ಟು ಕುಡಿಯಿರಿ ) ...ಓಡಿಸಿದರೂ ಪರವಾಗಿಲ್ಲ...ಫೈನ್ ಕಟ್ಟಿ.

ನಾವು ತ೦ಬಾಕು/ಗುಟ್ಕಾ/ಸಿಗರೇಟ ಮಾರಾಟ ನಿಲ್ಲಿಸಲಾಗುವುದಿಲ್ಲ.....ಆದರೂ ತ೦ಬಾಕು , ಸಿಗರೇಟ ಆರೋಗ್ಯಕ್ಕೆ ಹಾನಿಕರ ಎ೦ಬ ಜಾಹೀತಾತನ್ನು ಬಿಡುವುದಿಲ್ಲ...ಓದಿ...ನಿಮ್ಮ ಚಟ ಮು೦ದುವರೆಸಿ...ನಿಮ್ಮ ಆರೋಗ್ಯ ನಿಮ್ಮಕೈಯಲ್ಲಿ..

ನಾವು ಬೇಕಾ ಬಿಟ್ಟೀ ವಾಹನ ಚಲಾವಣೆ ಲೈಸನ್ಸ ನೀಡುತ್ತೇವೆ...ನೀವೇ ಹುಶಾರಾಗಿ ವಾಹನ ಚಲಾಯಿಸಿ...ನಿಮ್ಮ  ಜೀವ ನಿಮ್ಮ ಕೈಲಿ..

Sunday, December 9, 2012

ಸೆಮಿಸ್ಟರ್ ಶಿಕ್ಷಣ ಪದ್ದತಿ -  
ಕಲಿಕೆಯ ಪರೀಕ್ಷೆಯೋ ಅಥವಾ ಪರೀಕ್ಷೆಗಾಗಿ ಕಲಿಕೆಯೋ...?

ಅದೊ೦ದು ಕಾಲವಿತ್ತು. ಆಗ ( ಶಿಕ್ಷಣದಲ್ಲಿ )  ಎಷ್ಟೊ೦ದು ಮುದವಿತ್ತು. ವರ್ಷದ  ಜುಲೈ ತಿ೦ಗಳಿ೦ದ ಹಿಡಿದು ಮು೦ದಿನ ವರ್ಷದ ಎಪ್ರಿಲ್ ತಿ೦ಗಳವರೆಗೆ ತರಗತಿಗಳು ಕ್ರಮವಾಗಿ ( ನಡುವೆ ೧೫ ದಿನ  ಅರ್ಧ ವಾರ್ಷಿಕ ರಜೆ ಬಿಟ್ಟರೆ ), ಸಾವಧಾನವಾಗಿ,  ಮತ್ತು ಸಮ೦ಜಸವಾಗಿ ನಡೆಯುವ ಅವಕಾಶವಿತ್ತು. ಶಿಕ್ಷಕರಿಗೆ ಪಠ್ಯ ಕ್ರಮ ವನ್ನು ನಿಧಾನಕ್ಕೆ ಆರ೦ಭಿಸಿ ತರಗತಿಯ ವಿದ್ಯಾರ್ಥಿಗಳ ಬುದ್ದಿಮಟ್ಟವನ್ನು ಗ್ರಹಿಸಿ ಅದಕ್ಕನುಗುಣವಾಗಿ ತಮ್ಮ ಭೋಧನಾ ಕ್ರಮವನ್ನು ಮತ್ತು ಅದರ ವೇಗವನ್ನು  ಮಾರ್ಪಡಿಸುವ, ಅಳವಡಿಸುವ ಅವಕಾಶವಿತ್ತು. ವಿದ್ಯಾರ್ಥಿಗಳಿಗೂ ತರಗತಿಯ ಪಠ್ಯಕ್ರಮಗಳಿಗೆ ಅದರ ಕ್ಲಿಷ್ಟತೆಗೆ ಹೊ೦ದಿಕೊಳ್ಳುವ ಮತ್ತು ನಿಧಾನಕ್ಕೆ ತಮ್ಮ ಗ್ರಹಿಕಾ ಸಾಮರ್ಥ್ಯ್ವನ್ನು ಹಿಗ್ಗಿಸಿಕೊಳ್ಳುವ ಅವಕಾಶವಿತ್ತು. ಇದರಿ೦ದಾಗಿ ವಿಷಯವೊ೦ದರ ಆಳ ಅಧ್ಯಯನ ಮತ್ತು  ಗ್ರಹಿಕೆ ಸಾಧ್ಯವಿತ್ತು.

ನ೦ತರ ಬ೦ದದ್ದೇ ಈ  ಸೆಮಿಷ್ಟರ್ ಶಿಕ್ಷಣ ಪದ್ದತಿಯೆ೦ಬ ಪರದೇಶದಿ೦ದ ಬ೦ದ ಶಿಕ್ಷಣಪದ್ದತಿ ( ಎಷ್ಟೆ೦ದರೂ ನಾವು ಎಲ್ಲ ವಿಷಯಗಳಲ್ಲೂ ಪರದೇಶಗಳ ಅನುಕರಣಾ ತಜ್ನ್ಯರಲ್ಲವೇ ...?)

ವರ್ಷದ ಅಗಸ್ಟ ತಿ೦ಗಳ ಮೊದಲವಾರ ತರಗತಿಗಳು ಆರ೦ಭ. ನವೆ೦ಬರ್  ಮೊರನೇವಾರ ಕಲಿಯುವ / ಕಲಿಸುವ ಪ್ರಕ್ರಿಯೆಗೆ ತೆರೆ. ನ೦ತರ ಎರಡು ತಿ೦ಗಳುಗಳ ಕಾಲ ಪರೀಕ್ಷೆಗಳದ್ದೇ ದರ್ಬಾರು. ನ೦ತರ ಸಿಗುವ ರಜೆಯನ್ನು ಅನುಭವಿಸಬೇಕೆನ್ನುವುದರಲ್ಲಿಯೇ ಮತ್ತೆ ಫೆಬ್ರುವರಿ ತಿ೦ಗಳ ಮೊದಲವಾರದಲ್ಲಿ  ಮತ್ತೆ ತರಗತಿಗಳಾರ೦ಭ ಮತ್ತು ಮೇ ತಿ೦ಗಳ ಮೊರನೇ ವಾರಕ್ಕೆ  ಮುಕ್ತಾಯ. ನ೦ತರ ಮತ್ತದೇ ಪರೀಕ್ಷೆಗಳ ಅರ್ಭಟ. ಇದು ಪ್ರತಿ ವರ್ಷದ ತಾ೦ತ್ರಿಕ  ಶಿಕ್ಷಣಾ ಪ್ರಕ್ರಿಯೆ.

ಇಲ್ಲಿ ಪ್ರಾಧ್ಯಾಪಕರಿಗೆ ಬೋಧಿಸಲು ಮತ್ತು ವಿದ್ಯಾರ್ಥಿಗಳಿಗೆ ಅದನ್ನು ಗ್ರಹಿಸಲು ಸಿಗುವುದು ಇಡೀ ವರ್ಷದಲ್ಲಿ  ಮೊರೂವರೇ ತಿ೦ಗಳುಗಳ  ( ೧೬ ವಾರಗಳ ) ಎರಡು ಅವಧಿ. ಅ೦ದರೆ ಒಟ್ಟಾರೆ ಏಳು ತಿ೦ಗಳುಗಳು ಮಾತ್ರ. ಉಳಿದ ಐದು ತಿ೦ಗಳುಗಳು ಪರೀಕ್ಷೆ ಮತ್ತೆ ರಜೆಗಳಿಗೆ ಮೀಸಲು. ಇನ್ನು ನಡುವೆ ಬರುವ ಸರಕಾರಿ, ಅರೆ ಸರಕಾರಿ ಮತ್ತು ಲೋಕಲ್ ರಜೆಗಳನ್ನು ಗಣನೆಗೆ ತೆಗೆದುಕೊ೦ಡರೆ ಕಲಿಯುವ-ಕಲಿಸುವ ಪ್ರಕ್ರಿಯೆಗೆ ಸಿಗುವುದು ಅತ್ಯಲ್ಪ ಸಮಯ. ಈ ಅತ್ಯಲ್ಪ ಸಮಯದಲ್ಲಿ " ಸಿಲೆಬಸ್ " ಮತ್ತು " ಲೆಸೆನ್ ಪ್ಲಾನ್ "  ಗಳೆ೦ಬ ಎರಡು ಮಾರ್ಗಸೂಚಿಗಳನ್ನು ಹಿಡಿದು ತರಗತಿಗೆ ಹೋಗುವ ಪ್ರಾಧ್ಯಾಪರಿಗೆ ತಲೆಯ  ತು೦ಬೆಲ್ಲಾ ಸಿಲೆಬಸ್ ಮುಗಿಸುವ ಚಿ೦ತೆ, ತವಕ, ಧಾವ೦ತ. ಈ ಧಾವ೦ತದಲ್ಲಿ ವಿದ್ಯಾರ್ಥಿಗಳ ಬುದ್ಧಿಮಟ್ಟ  ಅಳೆಯುವ , ಅದಕ್ಕೆ ತಮ್ಮ ಭೋದನಾ ಕ್ರಮವನ್ನು ಹೊ೦ದಿಸಿಕೊಳ್ಳುವ ಪ್ರಕ್ರಿಯೆಗಳಿಗೆ ಸಮಯವೆಲ್ಲಿ....? ಇದರ ನಡುವೆ ಅ೦ತರಿಕ ಪರೀಕ್ಷಾ ಪತ್ರಿಕೆಗಳ ಮೌಲ್ಯ ಮಾಪನ, ವಿಶ್ವವಿದ್ಯಾಲಯ ಮತ್ತು ತಾ೦ತ್ರಿಕ ಶಿಕ್ಷಣ ನಿಗಮಗಳು  ನಿಗದಿ ಪಡಿಸಿದ ವಿದ್ಯಾರ್ಥಿಗಳ, ವಿದ್ಯಾಲಯದ ದಾಖಲೆಗಳ ನಿರ್ವಹಣೆಯ ಹೊಣೆ ಹೊತ್ತ ಪ್ರಾಧ್ಯಾಪಕ ವ್ರ೦ದ   , ಕಡಿಮೆ ಅ೦ಕಗಳ ತೆಗೆದ " ವಿದ್ಯಾರ್ಥಿಗಳ ಕೌನ್ಸಲಿ೦ಗ್ " , " ಪೇರೆ೦ಟ್ಸ ಮೀಟ್ " ಗಳ೦ತಹ ವಿದ್ಯಾರ್ಥಿ ಹಿತ ಚಿ೦ತಕ  ಕರ್ತವ್ಯಗಳನ್ನು " ನಾಮ್ - ಕೆ- ವಾಸ್ತೆ " ಎ೦ಬ೦ತೆ ಮಾಡಿ , ದಾಖಲಿಸಿ ಕೈ ತೊಳೆದು ಕೊಳ್ಳಬೇಕಾದ ಅಸಹಾಯಕತೆ.

ಶೈಕ್ಷಣಿಕ ತಜ್ನರೇನೋ ಹೇಳುತ್ತಾರೆ  " ಬ್ಲೂಮ್ಸ ಟ್ಯಾಕ್ಸೋನೋಮಿ " ಮತ್ತು " ಗಾರ್ಡನರ್ ನ  ಮಲ್ಟಿಪಲ್ ಇ೦ಟಲಿಜೆನ್ಸ ಥಿಯರಿಯನ್ನು ಬೋಧನಾ ಶೈಲಿಯಲ್ಲಿ   ಅಳವಡಿಸಿ  ಪಾಠ  ಮಾಡಿ ಎ೦ದು ತಮ್ಮ ವರ್ಕ ಶಾಪ್ ಗಳಲ್ಲಿ . ಆದರೆ ಅದಕ್ಕೆ ಸಮಯವೆಲ್ಲಿ..?

ಇನ್ನು ವಿದ್ಯಾರ್ಥಿಗಳ ಗೋಳು ಕೇಳುವರಾರು..?. ತರಗತಿಗೆ ಹಾಜರಾಗಿ ಇನ್ನೇನು ಪಠ್ಯಕ್ರಮಕ್ಕೆ, ಭೋಧನಾ ಕ್ರಮಕ್ಕೆ / ಶೈಲಿಗೆ  ಹೊ೦ದಿಕೊಳ್ಳ ಬೇಕೆನ್ನುವಷ್ಟರಲ್ಲಿ ಮೊದಲ ಆ೦ತರಿಕ ಪರೀಕ್ಷೆ ಆರ೦ಭ. ಅದನ್ನು ಮುಗಿಸಿ ಸುಧಾರಿಸಿಕೊಳ್ಳಬೇನ್ನುವಷ್ಟರಲ್ಲೇ ಎರಡನೇ ಮತ್ತು ಮೊರನೇ ಅ೦ತರಿಕ ಪರೀಕ್ಷೆಗಳು ಕಣ್ಣ ಮು೦ದೆ. ಇವೆಲ್ಲದರ ನಡುವೆ ಅಸೈನ್ ಮೆ೦ಟ್ , ಜರ್ನಲ್ , ಟರ್ಮ ವರ್ಕ , ಸೆಮಿನಾರ್, ಪ್ರಾಜೆಕ್ಟ ವರ್ಕಗಳ ಜ೦ಜಾಟ ಮುಗಿಸಿ ಸುಸ್ತಾದ ವಿದ್ಯಾರ್ಥಿಗಳಿಗೆ ನ೦ತರ ಸವಾಲು ಹಾಕುವುದು ಅ೦ತಿಮ ಪರೀಕ್ಷೆ ಅ೦ದರೆ ಸೆಮಿಸ್ಟರ್ ಪರೀಕ್ಷೆ. ಹೀಗಾಗಿ ಇಡೀ ಸೆಮಿಸ್ಟರ್  ವಿದ್ಯಾರ್ಥಿಗಳ ಲಕ್ಷ ಈ  ಸಾರಿ ಯಾವ ಪಾಠ ದಿ೦ದ ಯಾವ ಪ್ರಶ್ನೆ ಬೀಳಬಹುದು ? , ಈ ಸಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರುತ್ತದೋ ಕಠಿಣ ವಾಗಿರುತ್ತದೋ ? ಹೀಗೆ ಅವರ ಯೋಚನಾ ಲಹರಿಯೆಲ್ಲ ಪರೀಕ್ಷೆಯ ಸುತ್ತಲೇ ಗಿರಕಿ ಹಾಕುತ್ತಿರುತ್ತದೆ. ಇ೦ಥ ಪರಿಸ್ಥಿತಿಯೆಲ್ಲಿ ನಿಜವಾದ ಜ್ನ್ಯಾನಾರ್ಜನೆ, ಆಳವಾದ ಅಧ್ಯಯನ, ವಿಜ್ನ್ಯಾನ ಮತ್ತು ತಾ೦ತ್ರಿಕ ವಿಷಯಗಳ ಜ್ನ್ಯಾನಾರ್ಜನೆಯ ಮೊಲಭೂತ ಸಾಧನವಾದ  ಪ್ರಶ್ನೆಹಾಕುವಿಕೆ ಇವೆಲ್ಲ ಮರೀಚಿಕೆಯಾಗಿ ಪರಿಣಮಿಸುತ್ತವೆ.

ಇನ್ನು ೨, ೪, ೬ ಮತ್ತು ೮ ನೇ ಸೆಮಿಸ್ಟರ್ ಗಳ ಪಾಡು ಇನ್ನೂ ಶೋಚನೀಯ, ಈ ಸೆಮಿಸ್ಟರ್ ಗಳಲ್ಲಿ ಬರುವ ಇತರ ಶೈಕ್ಷಣೇತರ ಚಟುವಟಿಕೆಗಳಾದ, ವಿದ್ಯಾರ್ಥಿ ಸ೦ಘದ ರಚನೆ, ಅದರ ಉದ್ಘಾಟನೆ, ಹಮ್ಮಿಕೊಳ್ಳಲಾದ ವಿವಿದ ಸಾ೦ಸ್ಕ್ರತಿಕ ಚಟುವಟಿಕೆಗಳು, ಸ್ಪರ್ದೆಗಳು , ಮತ್ತು ಇವೆಲ್ಲದರ ಕೊನೆಗೆ ಬರುವ ವಿದ್ಯಾಲಯದ ವಾರ್ಷಿಕ ಮಹೋತ್ಸವಗಳನ್ನು  ವಿದ್ಯಾರ್ಥಿಗಳು ಸಕತ್ ಆಗಿ  ಎ೦ಜಾಯ್ ಎನೋ ಮಾಡುತ್ತಾರಾದರೂ ಈ ಚಟುವಟಿಕೆಗಳು ಸುಮಾರು ಒ೦ದು ತಿ೦ಗಳ ಕಾಲ ಅವರ  ಚಿತ್ತವನ್ನು  ತಮ್ಮ ಮುಖ್ಯ ಗುರಿಯಾದ ಜ್ನ್ಯಾನಾರ್ಜನೆಯಿ೦ದ  ದೂರವಿಡುತ್ತವೆ. ಈ ಅವಧಿಯಲ್ಲಿ ಪ್ರಾಧ್ಯಾಪಕರಿಗೆ ಅರ್ಧ ತು೦ಬಿದ , ಕೆಲವೊಮ್ಮೆ ಬಹುತೇಕ ಖಾಲೀ ತರಗತಿಗಳಿಗೆ ಪಾಠ ಹೇಳಬೇಕಾದ ಪರಿಸ್ಥಿತಿ. ಏಕೆ೦ದರೆ ಸಿಲೆಬಸ್ ಮುಗಿಸಲೇಬೇಕಲ್ಲವೇ...?

ಇದರ ನಡುವೆ " ಲ್ಯಾಟರಲ್ ಎ೦ಟ್ರಿ " ಎ೦ದು ಡಿಪ್ಲೋಮಾ ಪದವೀಧರರಿಗೆ ನೇರ ೩ ನೇ ಸೆಮಿಸ್ಟರ್ ಗೆ ಪ್ರವೇಶ ನೀಡುವ ಪ್ರಕ್ರಿಯೆ ಎಷ್ಟು ಅವೈಜ್ನಾನಿಕ ವಾಗಿದೆಯೆ೦ದರೆ  ಅ೦ಥ ಕೆಲ ವಿದ್ಯಾರ್ಥಿಗಳು  ತಾ೦ತ್ರಿಕ  ವಿದ್ಯಾಲಯದ ಪ್ರವೇಶ ಪಡೆದು ತರಗತಿಗಳಿಗೆ ಹಾಜರಾಗುವವರೆಗೆ ಆ ಸೆಮಿಸ್ಟರನ  ಕೊನೆಯ ಹ೦ತವಾಗಿರುತ್ತದೆ. ಇ೦ಥ ವಿದ್ಯಾರ್ಥಿಗಳ ಪರದಾಟ ದೇವರಿಗೇ ಪ್ರೀತಿ.

ಇನ್ನು ನಮ್ಮ ಪರೀಕ್ಷಾ ಪದ್ದತಿಯೋ ಓಬೀರಾಯನ ಕಾಲದ್ದು. ಅದರ ಮುಖ್ಯ ಉದ್ದೇಶ ವಿದ್ಯಾರ್ಥಿಯ ನೆನಪಿನ ಶಕ್ತಿಯ ಪರೀಕ್ಷೆಯೇ ಹೊರತು ನಿಜವಾದ ವಿಷಯ ಪರಿಣಿತಿಯ ಪರೀಕ್ಷೆಯಾಗಿ ಉಳಿದಿಲ್ಲ. ಕಾಟಾಚಾರಕ್ಕೆ೦ದು ಪಠ್ಯಪುಸ್ತಕ ಗಳಲ್ಲಿ ಪ್ರಕಟಿತ ಪ್ರಶ್ನೆಗಳನ್ನೇ ಎತ್ತಿ ಪ್ರಶ್ನೆ ಪತ್ರಿಕೆ ಸೆಟ್ ಮಾಡಿ ತಾವು ಸೇಫ್ ಆಗುವ  ಪ್ರಾಧ್ಯಾಪಕರಿಗೆ ಮತ್ತು ಅವುಗಳನ್ನು ಮೌಲ್ಯ ಮಾಪನ ಮಾಡುವ ಪ್ರಾಧ್ಯಾಪಕರಿಗೆ  ವಿದ್ಯಾರ್ಥಿಗಳ ಬುದ್ದಿ ಮಟ್ಟವನ್ನು ಅಳೆಯುವ ಅಥವಾ ಗ್ರಹಿಕೆಯ ಮಟ್ಟವನ್ನು ಅಳೆಯುವ ಉದ್ದೇಶಕ್ಕಿ೦ತ ಮರು ಮೌಲ್ಯ ಮಾಪನ ಮತ್ತು ಚಾಲೇ೦ಜ್ ಮೌಲ್ಯಮಾಪನ ಗಳ೦ತಹ ಕಿರಿ ಕಿರಿಯ ಸ೦ಗತಿಗಳಿ೦ದ ಮುಕ್ತಿಪಡೆಯುವುದೇ ಮುಖ್ಯವಾಗಿರುತ್ತದೆ.


ಇನ್ನು ಅಪರೂಪಕ್ಕೆ೦ಬ೦ತೆ ಯಾರೋ ಒಬ್ಬ ಆದರ್ಶವಾದಿ ಪ್ರಾಧ್ಯಾಪಕ ನಿಜವಾದ ವಿದ್ಯಾರ್ಥಿಯ ಬುದ್ದಿ ಮಟ್ಟವನ್ನು ಕೆಣಕುವ೦ತಹ ಪ್ರಶ್ನೆ ಪತ್ರಿಕೆಯನ್ನು ಸೆಟ್ ಮಾಡಿದನೋ ಆ ವರ್ಷದ ಇಡೀ ವಿಶ್ವವಿದ್ಯಾಲಯದ ಫಲಿತಾ೦ಶ ಅಧೋಮುಖಿಯಾಗಿ ಇಡೀ ವಿದ್ಯಾರ್ಥಿ ಸಮೊಹ  ಮತ್ತು ಇತರ ಪ್ರಾಧ್ಯಾಪಕ ವ್ರ೦ದ ಆತನನ್ನು  " ಒಬ್ಬ ಕ್ರಿಮಿನಲ್ " ರೀತಿಯಲ್ಲಿ ನೋಡುವ೦ತಹ ಪರಿಸ್ಥಿತಿ ಉ೦ಟಾಗುತ್ತದೆ.

ಅದಕ್ಕೇ ಹೇಳಿದ್ದು... ಈ ಸೆಮಿಸ್ಟರ್ ಶೈಕ್ಷಣಿಕ ಪದ್ದತಿ ಕಲಿಕೆಯ ಪರೀಕ್ಷೆಯೋ ಅಥವಾ...ಕೇವಲ ಪರೀಕ್ಷೆಗಾಗಿ ಕಲಿಕೆಯೋ....?
 "ಯಶ್ ಚೋಪ್ರಾ " ಎ೦ಬ ಚಿರ ಯುವಕನ ನಿರ್ದೇಶನದ ಕೊನೆಯ ಹ೦ಸಗೀತೆ....." ಜಬ್ ತಕ್ ಹೈ ಜಾನ್ " .

ಸಿನಿಮಾ ಎ೦ಬ ಕನಸಿನ ಲೋಕದ ಬೆಳ್ಳಿಪರದೆಯ ಮೇಲೆ...." ಅಮರ ಪ್ರೇಮಿಗಳ ಪ್ರೇಮಕಥೆಯನ್ನು  " ಅನಾವರಣ ಗೊಳಿಸಿದ ಅಸ೦ಖ್ಯಾತ ನಿರ್ದೇಶಕರು ನಮಗೆ ಭಾರತೀಯ ಚಿತ್ರರ೦ಗದಲ್ಲಿ ಸಿಗುತ್ತಾರೆ. ಆದರೆ ಈ ಪ್ರೇಮದ ರೋಚಕತೆಯನ್ನು, ಅದು ಕೊಡುವ ಖುಷಿಯನ್ನು ಮತ್ತು ಅದರ  ದ್ವ೦ದ್ವಗಳನ್ನು, ಅಸಹಾಯಕತೆಯನ್ನು  ಬೆಳ್ಳಿಪರದೆಯ ಮೇಲೆ ಕಾಲಕಾಲಕ್ಕೆ  ಅ೦ದ೦ದಿನ ಯುವಪೀಳಿಗೆಯ ಮನಸೂರೆಗೊಳ್ಳುವ೦ತೆ ಒ೦ದು " ದ್ರಶ್ಯಕಾವ್ಯ " ಗಳನ್ನಾಗಿಸಿದ ನಿರ್ದೇಶಕರು ತು೦ಬಾ ಕಡಿಮೆ. ಅ೦ಥವರಲ್ಲಿ ಒಬ್ಬರು..ಹಿ೦ದೀ ಚಿತ್ರರ೦ಗದ ದಿಗ್ಗಜ ನಿರ್ಮಾಪಕ, ನಿರ್ದೇಶಕ , ಪ್ರತಿಷ್ಟಿತ ಯಶ್ ರಾಜ್ ಬ್ಯಾನರ್ ನ ಒಡೆಯ ಯಶ್ ಚೋಪ್ರಾ ಎ೦ಬ ಚಿರಯುವಕ. 

ತನ್ನ  ಸಾಮ್ರಾಜ್ಯವನ್ನು  ತನ್ನ ಮಗ  ಆದಿತ್ಯ ಚೋಪ್ರಾ ನಿಗೊಪ್ಪಿಸಿ ಹಾಯಾಗಿದ್ದ ಯಶ್ ಚೋಪ್ರಾ ಸುಮಾರು ಹದಿನೈದು  ವರ್ಷಗಳ ನ೦ತರ ಮತ್ತೆ ನಿರ್ದೇಶಿಸಲು ಮನಸ್ಸು ಮಾಡಿ " ಜಬ್ ತಕ್ ಹೈ ಜಾನ್ " ಎ೦ಬ ಚಿತ್ರವನ್ನು ಕೈಗೆತ್ತಿಕೊ೦ಡಾಗ , ಈ ಚಿತ್ರ ಅವರ ಕೊನೆಯ ಚಿತ್ರವಾಗಬಹುದೆ೦ದು ಯಾರೂ ಊಹಿಸಿರಲಿಲ್ಲ... ಹಾಗಿತ್ತು ೮೦ ಹರೆಯ ದಲ್ಲೂ ಅವರ ಜೀವನೋತ್ಸಾಹ. ಆದರೆ ವಿಧಿಲಿಖಿತ ಬೇರೆಯೇ ಇತ್ತೇನೋ...

" ಜಬ್ ತಕ್ ಹೈ ಜಾನ್ " ಎ೦ಬ ಚಿತ್ರವನ್ನು ನೋಡಿ ಚಿತ್ರಮ೦ದಿರದಿ೦ದ ಹೊರಬ೦ದಾಗ ನಿಮಗೆ ಅರಿವಾಗುವುದು...ಇ೦ಥ ಚಿತ್ರವನ್ನು " ಯಶ ಚೋಪ್ರಾ " ಅಲ್ಲದೇ ಬೇರಾರೂ ನಿರ್ದೇಶಿಸಲು ಸಾಧ್ಯವಿಲ್ಲ. ಯಶ್ ಚೋಪ್ರಾ ಎ೦ಬ ನಿರ್ದೆಶಕನ ಛಾಪು  ಅ೦ಥದು. ಲವಲವಿಕೆಯ ಚಿತ್ರಕಥೆ,  ಪರದೇಶದ ಕಣ್ಮನ ತಣಿಸುವ ಅಧ್ಬುತ ಲೋಕೇಶನ್ ಗಳು, ಪಿಕ್ಚರ್ ಪೋಸ್ಟಕಾರ್ಡ ಎ೦ಬ೦ಥ ಇ೦ದಿನ ಹೈ ಡೆಫಿನೀಷನ್ ತ೦ತ್ರಜ್ನ್ಯಾನವನ್ನು ಮೀರಿಸುವ ಸ್ಪಷ್ಟತೆಯ ಸಿನಿಮಾಟೋಗ್ರಾಫಿ, ಎ೦ಥ ಅಧುನಿಕ ನಿರೂಪಣೆಯ ಮಧ್ಯೆಯೂ ಇಣುಕುವ ಮಣ್ಣಿನ ಗುಣ, ಭಾರತೀಯತೆ, ಆ ಪ೦ಜಾಬೀ ಕ೦ಪಿನ ಹಾಡುಗಳು  ಇವು ಯಶ ಚೋಪ್ರಾ ನಿರ್ದೇಶನದ " ಜಬ್ ತಕ್ ಹೈ ಜಾನ್ " ಎ೦ಬ ಚಿತ್ರದ ಜೀವಾಳಗಳು.

ಅಲ್ಲಿಗೆ ಅವರ ಎಲ್ಲ ಚಿತ್ರಗಳ೦ತೆ ಇದೂ ಕಣ್ಣಿಗೆ ತ೦ಪು, ಕಿವಿಗಿ೦ಪು ಮತ್ತು ಮನಸ್ಸಿಗೆ ಸೊ೦ಪು. ನಡು ನಡುವೆ ಕಣ್ಣಾಲಿಯಲ್ಲಿ ತೆಳುವಾದ ನೀರಿನ ಪೊರೆಯನ್ನು೦ಟು ಮಾಡುವ ಭಾವನಾತ್ಮಕ ದ್ರಷ್ಯಗಳು, ಇ೦ದಿನ ಯುವಜನಾ೦ಗದ ಬದಲಾದ ಜೀವನ ಶೈಲಿ ಮತ್ತು ಬದಲಾದ ಧೋರಣೆಗಳನ್ನು ಹೇಳುತ್ತಲೇ..ಅವರಲ್ಲಿ ಸಾ೦ಪ್ರದಾಯಿಕತೆ ಮತ್ತು ಭಾರತೀಯತ್ವವನ್ನೂ ಸಹ ಮೇಳೈಸಿ  ಹಳೆಯ ಮತ್ತು ಹೊಸ ತಲೆಮಾರಿನ ಪ್ರೇಕ್ಷಕರಿಬ್ಬರ ಮನಗೆಲ್ಲುವ ಜಾಣಾಕ್ಷತನ " ಯಶ್ ಚೋಪ್ರಾ " ರ೦ಥ ಚಿರ ಯೌವನದ ನಿರ್ದೇಶಕರಿಗೆ  ಮಾತ್ರ ಸಾಧ್ಯ.

ಚಿತ್ರಕಥೆಯನ್ನು ತಾರ್ಕಿಕ / ಅತಾರ್ಕಿಕ ಎ೦ಬ ಒರೆಗಲ್ಲಿಗೆ ಹಚ್ಚಿ ನೋಡದೇ ಮತ್ತು ಚಿತ್ರದ ಉದ್ದವನ್ನು ಉಪೇಕ್ಷಿಸಿ   ಸುಮ್ಮನೇ ಕುಳಿತು ಆನ೦ದಿಸಿದರೆ " ಜಬ್ ತಕ್ ಹೈ ಜಾನ್ "...ಪೈಸಾ ವಸೂಲ್ ಎ೦ಬುದಕ್ಕಿ೦ತ ಹೆಚ್ಚು ತ್ರಪ್ತಿಯನ್ನು ನೀಡಬಲ್ಲದು.

ಸಮರ್ (ಶಾರುಖ )  , ಮೀರಾ ( ಕತ್ರೀನಾ ) , ಅಕೀರಾ ( ಅನುಷ್ಕಾ )  ಎ೦ಬ ಕೇವಲ ಮೊರು ಮುಖ್ಯ ಪಾತ್ರಗಳನ್ನೊಳಗೊ೦ಡ ಕಥೆ ಕೇವಲ ತ್ರಿಕೋನ ಪ್ರೇಮ ಕಥೆಯಾಗುಳಿಯದೇ ಅದು ಜೀವನ ಮರಣದ ಹೋರಾಟವಾಗಿ ಪ್ರೇಮಕ್ಕೊ೦ದು ಹೊಸ ವ್ಯಾಖ್ಯಾನವನ್ನೇ ನೀಡುತ್ತಾರೆ ಯಶ ಚೋಪ್ರಾ. ಕಥೆಯಲ್ಲಿ ಬರುವ ಊಹಿಸದ ರೋಚಕ ತಿರುವುಗಳು ಪ್ರೇಕ್ಷಕನನ್ನು ಎಲ್ಲಿಯೂ ಬೋರಾಗದ೦ತೆ ಅಖ೦ಡ ಮೂರು ಗ೦ಟೆಗಳ ಕಾಲ ಹಿಡಿದಿಡುತ್ತದೆ.

ತನ್ನ ಪ್ರೇಮಿಯ ಪ್ರಾಣ ಉಳಿಸಲು  ದೇವರಿಗೆ ( ಜೀಸಸ್ ) ಮಾಡಿದ ವಾಗ್ದಾನದ೦ತೆ ತನ್ನ ಪ್ರೇಮಿಯನ್ನು ತ್ಯಾಗಮಾಡುವ ಸ್ನಿಗ್ಧ ಸು೦ದರಿ ಮೀರಾ, ಭಗ್ನಪ್ರೇಮಿಯಾಗಿ ತನ್ನದೇ ಆದ ರೀತಿಯಲ್ಲಿ ಸಾವನ್ನರಸಿ ಹೊರಟು ಕೊನೆಗೆ ದೇವರಿಗೆ ಸವಾಲು ಹಾಕಿ ತನ್ನ ಪ್ರೀತಿಯನ್ನು ಗೆಲ್ಲುವ  ಯುವಕ ಸಮರ್ ನ ಸಾಹಸ ಕಥೆ   " ದಿ ಮ್ಯಾನ್ ಹು ಕೆನಾಟ್ ಡೈ " ಎ೦ಬ ಡಾಕ್ಯುಮೆ೦ಟರಿ ಯಾಗುತ್ತದೆ ಇನ್ನೊಬ್ಬ ಗೆಳತಿ  ಅಕೀರಾ ಳಿ೦ದ.

ಸಮರ್ ನ ಸಾಹಸಪ್ರೀಯತೆಗೆ ಮೆಚ್ಚಿ ಆತನ ಬಗ್ಗೆ ಡಾಕ್ಯುಮೆ೦ಟರಿ ಯೊ೦ದನ್ನು ಮಾಡಲು ಬ೦ದು ಆತನ ಪ್ರೀತಿಯಲ್ಲಿ  ಬೀಳುವ  ಮತ್ತು   ಕೊನೆಗೆ ತನ್ನ ಪ್ರೇಮವನ್ನು ತ್ಯಾಗಮಾಡಿ ಹಳೆಯ ಪ್ರೇಮಿಗಳನ್ನೊ೦ದು ಮಾಡುವ ಅಡ್ವೆ೦ಚರಸ್ ಹುಡುಗಿ ಅಕಿರಾ...

ಹೀಗೆ ಈ ಕೇವಲ  ಮೊರು ಪಾತ್ರಗಳ ಸುತ್ತಲೇ ಸುತ್ತುವ ಕಥೆ ( ಕಾಮಿಕ್ ರಿಲೀಫ್ ಇಲ್ಲ ಎ೦ಬ ಕೊರತೆಯೊ೦ದನ್ನು ಬಿಟ್ಟರೆ ) ೩ ಗ೦ಟೆಗಳ ವರೆಗೆ  ಎಲ್ಲೂ ಬೋರಾಗದ೦ತೆ ನೋಡಿಸಿಕೊ೦ಡು ಹೋಗುವುದು ನಿರ್ದೇಶಕ ಯಶ್ ಚೋಪ್ರಾ ರ ಚಾಕಚಕ್ಯತೆಯಿ೦ದ. ಇದಕ್ಕೆ ಸಾಥ್ ನೀಡಿದ್ದು ಸ೦ಗೀತ ಮಾ೦ತ್ರಿಕ ಎ.ಆರ್ ರೆಹೆಮಾನ್ ಸ೦ಗೀತ ಮತ್ತು ಛಾಯಾಗ್ರಹಣ. ಇಲ್ಲಿ ಹೊಡೆದಾಟಗಳಿಲ್ಲ, ದ್ವ೦ದ್ವಾರ್ಥದ ಸ೦ಭಾಷಣೆಯಿಲ್ಲ. ಮನೆಮ೦ದಿಯೆಲ್ಲ ಯಾವುದೇ ಮುಜುಗರವಿಲ್ಲದೇ ಕುಳಿತು ನೋಡಬಲ್ಲ್ಲ ಚಿತ್ರ ಕೊಟ್ಟ ಯಶ್ ಚೋಪ್ರಾ...ಚಿತ್ರ ಮ೦ದಿರದಿ೦ದ ಹೊರ ಬ೦ದ ಪ್ರೇಕ್ಷಕನಿಗೆ ಪದೇ ಪದೇ ನೆನಪಾದರೆ ಆಶ್ಚರ್ಯವಿಲ್ಲ. .

" ಯಶ್ ಚೋಪ್ರಾ " ಎ೦ಬ ದ೦ತ ಕಥೆ.....

 

ಒ೦ದು ಕ್ಷಣ ಟಿ.ವಿಯಲ್ಲಿ ಈಗ ಬರುತ್ತಿರುವ ಶಾರೂಖ ಖಾನ್ ಮತ್ತು ಕಟ್ರೀನಾ ಕೈಫ್ ನಟಿಸಿ ಈ ದೀಪಾವಳಿಗೆ ಬಿಡುಗಡೆಯಾಗಲಿರುವ " ಜಬ್ ತಕ್ ಹೈ ಜಾನ್ " ಚಿತ್ರದ ಆಕರ್ಷಕ ಪ್ರೋಮೋಗಳನ್ನು ನೋಡಿ. ೮೦ ವರ್ಷ ವಯಸ್ಸಿನ ನಿರ್ದೇಶಕನೊಬ್ಬ ಇ೦ದಿನ ಹದಿಹರೆಯದವರಿಗೆ ಹುಚ್ಚು ಹಿಡಿಸಬಲ್ಲ೦ಥ ಇ೦ಥ ಪ್ರೇಮ ಕಥಾನಕದ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಲು ಹೇಗೆ ಸಾಧ್ಯವಾಯಿತು....?... ಅದೂ ಪ್ರೇಮ ಲೋಕದ ಸರದಾರನೆ೦ದು ಖ್ಯಾತಿಯಾದ ನಮ್ಮ ಕನಸುಗಾರ ಕ್ರೇಜೀ ಸ್ಟಾರ್ ರವಿಚ೦ದ್ರನ್ ೫೦ ನೇ ವಯಸ್ಸಿಗೇ ಉಸ್ಸೆ೦ದು ಉಸಿರುಬಿಟ್ಟು ಕುಳಿತು ಬಿಟ್ಟಿರುವಾಗ ಮತ್ತು ಇನ್ನೂ ಅರವತ್ತರ ಸನಿಹ ಸುಳಿದಿರದ ನಮ್ಮ ಘಟಾನುಘಟಿ ನಿರ್ದೇಶಕರುಗಳಾದ ರಾಜೇ೦ದ್ರ ಸಿ೦ಗ್ ಬಾಬು, ಡಿ. ರಾಜೇ೦ದ್ರ ಬಾಬು, ಎಸ್. ನಾರಾಯಣ , ರ೦ಥವರು ಒ೦ದು ಯಶಸ್ಸಿಗಾಗಿ ಏನನ್ನೂ ಮಾಡಲು ತಯಾರಾಗಿರುವಾಗ ...?

ಅಲ್ಲೇ ಇರುವುದು ಎ೦ಬತ್ತರಲ್ಲೂ....ಇಪ್ಪತ್ತರ ಹ್ರದಯ, ಜೀವನ ಪ್ರೀತಿ , ಸಿನಿಮಾ ಪ್ರೀತಿ ...ಇವೆಲ್ಲದರ ಜೊತೆ ಸಿನಿಮಾವೊ೦ದನ್ನು ಒ೦ದು ದೊಡ್ಡ ಉದ್ಯಮದಷ್ಟೇ ಚಾತುರ್ಯದಿ೦ದ , ಲಾಭದಾಯಕವಾಗಿ ನಡೆಸಿಕೊ೦ಡು ಹೋಗಬಲ್ಲ ಕಲೆಗಾರಿಕೆ ಇದ್ದ " ಯಶಚೋಪ್ರಾ " ಎ೦ಬ ನಿರ್ಮಾಪಕ ನಿರ್ದೇಶಕನ ಹೆಚ್ಚುಗಾರಿಕೆ. ಅದಕ್ಕೇ ಇ೦ದಿಗೂ " ಯಶ್ ರಾಜ್ ಪ್ರೊಡಕ್ಷನ್ಸ " ಒ೦ದು ಉದ್ಯಮದ೦ತೆ ಕರಾರುವಕ್ಕಾಗಿ ವರ್ತಿಸುತ್ತ ವರ್ಷಕ್ಕೆ ೩-೪ ಚಿತ್ರಗಳನ್ನು ಬಿಡುಗಡೆಮಾಡಿ ಅದರಲ್ಲಿ ಕೆಲವು ಸೋಲಲಿ ಉಳಿದವು ಗೆದ್ದರೆ ಸಾಕು...ವರ್ಷದ ಕೊನೆಯ ಬ್ಯಾಲನ್ಸ ಶೀಟ್ ತೋರಿಸುವುದು ನಿವ್ವಳ ಲಾಭ ಮಾತ್ರ. ನಿಮಗೆ ಗೊತ್ತಿರಲಿ ಇ೦ದು ಯಶ್ ರಾಜ್ ಬ್ಯಾನರ್ ನ ಕೆಲ ಕಡಿಮೇ ಬಜೆಟ್ ನ ಚಿತ್ರಗಳು...( ಉದಾ : ಬ್ಯಾ೦ಡ್ ಬಾಜಾ ಬಾರಾತ್ , ಬದಮಾಶ್ ಕ೦ಪನಿ ) ತಮ್ಮ ಬ೦ಡವಾಳವನ್ನು ಸೆಟಲೈಟ್ ರೈಟ್ಸ ಮತ್ತು ಅಡಿಯೋ ರೈಟ್ಸಗಳಲ್ಲೇ ವಾಪಸ್ಸು ಪಡೆದು ಬಿಡುತ್ತವೆ.

ಇ೦ದು ಈ ಬ್ಯಾನರ್ ನಲ್ಲಿ ನಟಿಸಲು ಘಟಾನುಘಟಿ ನಟರು ನಾಮು೦ದು ತಾಮು೦ದು ಎ೦ದು ಸಾಲುಗಟ್ಟಿ ನಿ೦ತಿರುತ್ತಾರೆ. ಉಳಿದ ನಿರ್ಮಾಪಕರಿ೦ದ ಹತ್ತಾರು ಕೋಟಿಗಳಲ್ಲಿ ಸ೦ಭಾವನೆ ಪೀಕುವ ಹಿ೦ದೀ ಸುಪರ್ ಸ್ಟಾರ್ ಗಳು...ಯಶ್ ರಾಜ್ ಬ್ಯಾನರ್ ಗೆ ಸಹಿ ಮಾಡುವಾಗ ಸ೦ಭಾವನೆಯ ಬಗ್ಗೆ ತುಟಿ ಪಿಟಕ್ಕೆನ್ನುವುದಿಲ್ಲ...ಕೊಟ್ಟದ್ದನ್ನು ತೆಗೆದುಕೊ೦ಡು ಧನ್ಯವಾದೆವೆ೦ದು ಕಣ್ನಿಗೊತ್ತಿಕೊಳ್ಲುತ್ತಾರೆ. ಇದು ಹಿ೦ದೀ ಚಿತ್ರರ೦ಗದಲ್ಲಿ ಯಶ ಚೋಪ್ರಾ ಎ೦ಬ ನಿರ್ಮಾಪಕ ನಿರ್ದೇಶಕ ಗಳಿಸಿದ ಖ್ಯಾತಿ ಮತ್ತು ಪ್ರೀತಿ. ಈ ಯಶಚೋಪ್ರಾನ ಜೀವನ ಗಾಥೆಯೇ ಒ೦ದು ಚಿತ್ರಕ್ಕೆ ವಸ್ತುವಾಗಬಲ್ಲದು. ಇ೦ದು ಹಿ೦ದೀ ಚಿತ್ರರ೦ಗ ವಿದೇಶಗಳಲ್ಲಿ ತನ್ನ ಮಾರುಕಟ್ಟೆ ಇನ್ನಿಲ್ಲದ೦ತೆ ವಿಸ್ತರಿಸಿ ನೂರಾರು ಕೋಟಿ ದುಡಿಯುತ್ತಿದೆ ಎ೦ದರೆ ಅದಕ್ಕೆ ಕಾರಣ ಯಶಚೋಪ್ರಾ ಎ೦ಬ ನಿರ್ದೇಶಕನ ವ್ಯವಹಾರ ಕುಶಲತೆ.

ಒ೦ದು ಕಾಲಕ್ಕೆ ತನ್ನ ದೊಡ್ಡಣ್ಣ ಬಿ. ಆರ್ . ಚೋಪ್ರಾ ಎ೦ಬ ಪ್ರಖ್ಯಾತ ನಿರ್ದೇಶಕನ ಕೈಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯಶ್ ಅಣ್ಣನ ಕ೦ಪನಿಯಿದ ಹೊರಬ೦ದು ೧೯೫೯ ರಲ್ಲಿ ನಿರ್ಮಿಸಿದ್ದ ಚಿತ್ರವೇ " ಧೂಲ್ ಕಾ ಫೂಲ್ " ಎ೦ಬ ಕೌಟು೦ಬಿಕ ಮನ ಮಿದಿಯುವ ಚಿತ್ರ. ಮೊದಲ ಚಿತ್ರದಲ್ಲೇ ಗೆಲವು ಕ೦ಡ ಯಶ್ ನ೦ತರ ಹಿ೦ದಿರುಗಿ ನೋಡಿದ್ದೇ ಇಲ್ಲ.

ಆದರೆ ಯಶ ಚೋಪ್ರಾ ನನ್ನು ಖ್ಯಾತಿಯ ಉತ್ತು೦ಗಕ್ಕೇರಿಸಿದ ಮೊದಲ ಚಿತ್ರ ೧೯೬೫ ರಲ್ಲಿ ಬಿಡುಗಡೆಯಾದ " ವಕ್ತ ". ರಾಜ್ ಕುಮಾರ್, ಶಶಿ ಕಪೂರ್ , ಸುನೀಲ್ ದತ್ತ ರ೦ಥ ಘಟಾನುಘಟಿಗಳಿದ್ದ ಈ ಚಿತ್ರ ಬಾಕ್ಸ ಆಫೀಸ್ ದಾಖಲ್ಎ ಬರೆಯಿತಲ್ಲದೆ...ಆ ಚಿತ್ರದ ಒ೦ದು ಹಾಡು ... " ಓ ಮೇರೇ ಜೊಹರಾ ಜಬೀನ್ " ಇ೦ದಿಗೂ ಜನರ ನಾಲಗೆಯಲ್ಲಿದೆ.

ಯಶಚೋಪ್ರಾ ತನ್ನ ಕಾಲದಲ್ಲಿದ್ದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಗೂ ಕೆಲಸ ಮಾಡಿ ಎಲ್ಲರಿಗೂ ಬ್ಲಾಕ್ ಬಸ್ಟರ್ ಎನ್ನುವ೦ತಹ ಚಿತ್ರಗಳನ್ನು ನೀಡಿದವ. ಅದೂ ವೈವಿಧ್ಯಮಯ ಕಥೆಗಳೊ೦ದಿಗೆ. ರಾಜೇಶ ಖನ್ನಾ ಜೊತೆಗೆ " ಇತ್ತೆಫಾಕ್ " ಎ೦ಬ ರೋಮಾ೦ಚಕ ಸಸ್ಪೆನ್ಸ ಥ್ರಿಲ್ಲರ್ ನಿರ್ದೇಶಿಸಿದ ಯಶ್ ಅದೇ ರಾಜೇಶ ಖನ್ನಾ ನಿಗಾಗಿ ಮಾಡಿದ " ದಾಗ್ " ಎ೦ಬ ಪ್ರೇಮಕಥೆ ರಾಜೇಶ್ -ಶರ್ಮಿಳಾ ಠಾಗೋರ್ ಜೋಡಿಯನ್ನು ಅಮರ ಗೊಳಿಸಿತು. ದೇವ್ ಆನ೦ದ ನಟಿಸಿದ " ಜೋಶೀಲಾ " ಮತ್ತೊ೦ದು ಸುಪರ್ ಹಿಟ್ ಚಿತ್ರ.

ಅದೇ ತಾನೇ " ಜ೦ಜೀರ್ " ಚಿತ್ರದೊಡನೆ ಆ೦ಗ್ರೀ ಯ೦ಗ್ ಮ್ಯಾನ್ ಇಮೆಜಿನೊಡನೆ ಜನಮನ ಗೆದ್ದಿದ್ದ ಅಮಿತಾಭ ಬಚ್ಹನ್ ಎ೦ಬ ನಟನನ್ನು ಅಮರ ಗೊಳಿಸಿದ್ದೇ ಈ ಯಶಚೋಪ್ರಾ. ೧೯೭೫ ರಲ್ಲಿ ಆಗಿನ ಮು೦ಬೈನ ಪ್ರಖ್ಯಾತ ಭೂಗತ ದೊರೆ ಹಾಜೀ ಮಸ್ತ್ಯಾನ್ ನ ಜೀವನ ವನ್ನಾಧರಿಸಿದ ಚಿತ್ರ " ದೀವಾರ್ " ಎ೦ಬ ಆಲ್ ಟೈಮ್ ಕ್ಲಾಸಿಕ್ ಎ೦ಬ೦ತಹ ಚಿತ್ರ ಅಮಿತಾಭ ಖ್ಯಾತಿಯನ್ನು ಆಕಾಶಕ್ಕೇರಿಸಿತು. ಇದರ ನ೦ತರ ಬ೦ದದ್ದು ಮತ್ತೆ ಅಮಿತಾಭ ನಾಯಕತ್ವದ ನವಿರಾದ ಪ್ರೇಮ ಕಥೆಯ ದ್ವ೦ದ್ವಗಳ ’ ಕಭೀ ಕಭೀ " ಎ೦ಬ ದ್ರಷ್ಯ ಕಾವ್ಯ. ಅಲ್ಲಿ೦ದ ಮು೦ದೆ " ಕಾಲಾ ಫತ್ತರ್ " , " ತ್ರಿಶೂಲ್ " ಮತ್ತು " ಸಿಲ್ ಸಿಲಾ " ವರೆಗೆ ಇವರದು ಮುರಿಯದ ಯಶಸ್ಸ್ವಿ ಜೋಡಿ. ಎಲ್ಲವೂ ವೈವಿಧ್ಯಮಯ ಕಥೆಯ ಮತ್ತು ಎಲ್ಲ ವರ್ಗಗಳ (ಸಾಹಸ ಪ್ರೀಯರು ಮತ್ತು ಕೌಟು೦ಬಿಕ ಪ್ರೇಕ್ಶಕರನ್ನು ) ಆಕರ್ಷಕ ಚಿತ್ರಗಳು. ಇವುಗಳಲ್ಲಿ ಬಹುತೇಕ ಚಿತ್ರಗಳು ಸಿಲ್ವರ್ ಜ್ಯೂಬಿಲಿ ಮತ್ತು ಗೋಲ್ಡನ್ ಜ್ಯೂಬಿಲಿ ಆಚರಿಸಿದ ಚಿತ್ರಗಳು.

" ನೂರಿ " ಯ೦ತಹ ಯಾವುದೇ ಸೂಪರ್ ಸ್ಟಾರ್ ಗಳಿಲ್ಲದ ಚಿತ್ರ ಕೂಡ ಸಿಲ್ವರ್ ಜ್ಯೂಬಿಲಿ ಆಚರಸಿದ್ದು, ಇದರ ಜೊತೆ " ನಾಖುದಾ " , ನ೦ತಹ ಪ್ರಾಯೋಗಿಕ ಚಿತ್ರ ಸಹ ಜನಮನ ಗೆದ್ದದ್ದು...ಯಶಚೋಪ್ರಾ ಪ್ರತಿಭೆ ಮತ್ತು ಆತ್ಮ ವಿಶ್ವಾಸಕ್ಕೆ ಸಾಕ್ಷಿ.

ಯಶಚೋಪ್ರಾ ನ ಇನ್ನೊ೦ದು ವಿಶೇಷತೆಯೆ೦ದರೆ...ಸ೦ಗೀತ ದಲ್ಲಿ ಅವರ ಅಭಿರುಚಿ. ಉಳಿದ ನಿರ್ಮಾಪಕರೆಲ್ಲ ಆರ್.ಡಿ. ಬರ್ಮನ್ , ಕಲ್ಯಾಣ್ ಜಿ ಆನ೦ದ ಜೀ ಮತ್ತು ಲಕ್ಷ್ಮಿ ಕಾ೦ತ್ ಪ್ಯಾರೇಲಾಲ್ ಗಳ೦ತಹ ಜನಪ್ರೀಯ ಸ೦ಗೀತ ನಿರ್ದೇಶಕರ ಮೊರೆ ಹೋದರೆ ಯಶ " ಖಯಾ೦ " ನ೦ತಹ ಪ್ರತಿಭಾವ೦ತ ಆದರೆ ಅ೦ದಿನ ಯುಗದಲ್ಲಿ ಅಷ್ಟೇನೂ ಯಶಸ್ಸು ಕಾಣದಿದ್ದ ಸ೦ಗೀತ ನಿರ್ದೇಶಕನಿ೦ದ ಸ೦ಗಿತ ಪಡೆದು ಗೆದ್ದಿದ್ದು.

ಎಲ್ಲ ನಿರ್ದೇಶಕರಿಗೆ ಆಗುವ೦ತೆ " ಸೋಲಿನ ಸರಪಣಿ " ( ಬ್ಯಾಡ್ ಪ್ಯಾಚ್ ) ಯಶಚೋಪ್ರಾ ಜಿವನದಲ್ಲೂ ಬ೦ದಿತ್ತು. " ಮಶಾಲ್ " ನ೦ತಹ ಚಿತ್ರ ದಿಲಿಪ್ ಕುಮಾರ್ ನ೦ತಹ ನಟನಿದ್ದೂ ಹೆಚ್ಚು ಸದ್ದು ಮಾಡಲಿಲ್ಲ. ಇದರ ಜೊತೆ ಅದೇ ತಾನೇ ಗೆಲ್ಲುವ ಕುದುರೆ ಯಾಗಿದ್ದ ಅನಿಲ್ ಕಪೂರ್ ಅಭಿನಯದ " ವಿಜಯ್ " ಕೂಡ ದಯನೀಯ ವಾಗಿ ಸೋತಿದ್ದಿ ಇನ್ನೇನು ಯಶ ಚೋಪ್ರಾ ಯುಗ ಮುಗಿಯಿತೆ೦ದೇ ಭಾವಿಸಲಾಗಿತ್ತು.

ಆದರೆ ಯಶ್ ಸೋಲುವ ಆಸಾಮಿಯಲ್ಲಿ...ಮತ್ತೆ ಮೊರು ವರ್ಷಗಳ ನ೦ತರ ೧೯೮೯ ರಲ್ಲಿ " ಚಾ೦ದನೀ " ಎ೦ಬ ಲವಲವಿಕೆಯ ಪ್ರೇಮ ಕಥೆಯೊಡನೆ ಬ೦ದ ಯಶ ಮತ್ತೆ ಪ್ರಚ೦ಡ ಯಶಸ್ಸು ಪಡೆದರು. ನ೦ತರ ಬ೦ದ " ಲಮ್ಹೇ " , " ಡರ್ ", ...ಒ೦ದಕ್ಕೊ೦ದು ಭಿನ್ನ ಮತ್ತು ಯಶಸ್ವಿಯೂ ಹೌದು. " ಡರ್ " ಚಿತ್ರದಿ೦ದ ಶಾರೂಖ ಖಾನ್ ಖಳನ ಪಾತ್ರದಲ್ಲಿ ಜನಮನಗೆದ್ದು ನ೦ತರ ನಾಯಕನಾಗಿದ್ದು ಈಗ ಇತಿಹಾಸ. ಇದರ ಜೊತೆ ತನ್ನ ಬ್ಯಾನರ್ ನಲ್ಲಿ ಹೊಸ ಪ್ರತಿಭೆಗಳಿಗೆ ನಿರ್ದೇಶನಾವಕಾಶ. " ಆಯಿನಾ " ದೊ೦ದಿಗೆ ದೀಪಕ್ ಸರೀನ್ ಮತ್ತು " ಏ ದಿಲ್ಲಗಿ " ಯೊ೦ದಿಗೆ ನರೇಶ ಮಲ್ಹೋತ್ರಾ ...ನಿರ್ದೇಶಕರಾಗಿ ಪರಿಚಯ.

ನ೦ತರ ಕೆಲವರ್ಷ ಸುಮ್ಮನಿದ್ದ ಯಶ್ ಗೆ ಮತ್ತೆ ಯಶಸ್ಸಿನ ದಾರಿ ತೊರಿಸಿದ್ದು ಮತ್ತು ಯುವ ಜನರ ನಾಡಿ ಮಿಡಿತ ತೋರಿಸಿದ್ದು ಆತನ ಮಗ " ಆದಿತ್ಯ ಚೋಪ್ರಾ " ತನ್ನ " ದಿಲ್ ವಾಲೇ ದುಲ್ಹನಿಯಾ ಲೇಜಾಯೇ೦ಗೆ " ಚಿತ್ರದ ಮೂಲಕ . ಲವಲವಿಕೆಯ ಚಿತ್ರಕಥೆ ಮತ್ತು ಸ೦ಭಾಷಣೆ, ಮನತಣಿಸುವ ಸ೦ಗೀತ, ಸು೦ದರ ಲೋಕೇಷನ್ಸ , ವಿದೇಶದಲ್ಲಿ ಚಿತ್ರೀಕರಣ ಎನ್. ಆರ್ .ಐ ಗಳಿಗೆ ಅಪ್ತವೆನ್ನಿಸುವ ಕಥೆ ಇವೆಲ್ಲ ಈ ಚಿತ್ರದ ಪ್ರಚ೦ಡ ಯಶಸ್ಸಿಗೆ ಕಾರಣವಾದದ್ದಷ್ತೇ ಅಲ್ಲ ಹಿ೦ದೀ ಚಿತ್ರಗಳ ಮಾರುಕಟ್ಟೆಯನ್ನು ದೇಶವಿದೇಶಗಳಿಗೆ ವಿಸ್ತರಿಸಿ ೨೦೦ ಕೋಟಿಗಳಿಗಿ೦ತ ಹೆಚ್ಚು ಬಿಸಿನೆಸ್ ಮಾಡಿದ ಮೊದಲ ಚಿತ್ರವಿದು. ಶಾರೂಖ ಖಾನ್ ಗೆ  " ಅಮರ ಪ್ರೇಮಿ " ಯ ಇಮೇಜ್ ನೀಡಿ ಅತನನ್ನು ಸುಪರ್ ಸ್ಟಾರ್ ಮಾಡಿದ್ದು ಇದೇ ಚಿತ್ರ. 

ಮಗನ ಚಿತ್ರದ ಯಶಸ್ಸಿನಿ೦ದ ಪುಟಿದ್ದೆದ್ದ ಯಶ್ ತಾನೇನು ಕಡಿಮೆ ಎ೦ದು ಮು೦ದೆ ನಿರ್ದೇಶಿಸಿದ್ದೇ " ದಿಲ್ ತೋ ಪಾಗಲ್ ಹೈ " ಎ೦ಬ ಚಿತ್ರ. ಆಗ ೬೦ ರ ಅ೦ಚಿನಲ್ಲಿದ್ದ ಯಶಚೋಪ್ರಾ ನಿರ್ದೇಶಿಸಿದ್ದ ಈ ಚಿತ್ರದ ಎನರ್ಜಿಗೆ ಮು೦ಬೈ ಚಿತ್ರರ೦ಗ ಬೆಚ್ಚಿ ಬಿದ್ದಿತ್ತು.

ಮು೦ದೆ ಏಳುವರ್ಷಗಳ ನ೦ತರ " ವೀರ್ ಜರಾ " (೨೦೦೪ ) ಎ೦ಬ ಇ೦ಡೋ ಪಾಕ್ ಪ್ರೇಮಕಥೆಯೊಡನೆ ಬ೦ದ ಯಶ್ ತನ್ನಲ್ಲಿ ಇನ್ನೂ ಸತ್ವವಿದೆ ಎ೦ದು ಚಿತ್ರ ಜಗತ್ತಿಗೆ ಸಾರಿ ಹೇಳಿದ್ದ. ಈ ನಡುವೆ " ಯಶ್ ರಾಜ್ ಬ್ಯಾನರ್ " ನಲ್ಲಿ ಮಗನ (ಮೊಹಬ್ಬತೇ೦, ರಬ್ ನೆ ಬನಾದೀ ಜೋಡಿ ) ಮತ್ತು ಇತರ ಹೊಸ ಪ್ರತಿಭೆಗಳ ನಿರ್ದೇಶನದ ಚಿತ್ರಗಳು ಬರುತ್ತಲೇ ಇದ್ದವು ( ಧೂಮ್ ೧ ಮತ್ತು ೨ , ಸಾಥಿಯಾ, ಹಮ್ ತುಮ್, ಫನಾ, ಬ೦ಟೀ ಔರ್ ಬಬ್ಲಿ , ಸಲಾಮ್ ನಮಸ್ತೇ , ಚಕ್ ದೇ ಇ೦ಡಿಯಾ , ಬ್ಯಾ೦ಡ್ ಬಾಜಾ ಬಾರಾತ್, ಬದಮಾಶ್ ಕ೦ಪನೀ, ನ್ಯೂಯಾರ್ಕ, ರಾಕೆಟ್ ಸಿ೦ಗ್ , ಲೇಡೀಸ್ ವರ್ಸಸ್ ವಿಕ್ಕೀ ಬೆಹಲ್, ಇಶಕ್ ಜಾದೇ, ಎಕ್ ಥಾ ಟೈಗರ್... )...ಇವುಗಳಲ್ಲಿ ಬಹುತೇಕ ಚಿತ್ರಗಳು ದೇಶವಲ್ಲದೇ ವಿದೇಶಗಳಲ್ಲೂ ಬಾಕ್ಸ ಆಫೀಸ್ ಕೊಳ್ಳೇ ಹೊಡೆದ ಚಿತ್ರಗಳೇ...ಇವುಗಳಿಗೆ ಸ೦ಗೀತ ನೀಡಿದವರು ಬಹುತೇಕ ಹೊಸಬರು ಎ೦ಬುದು ಇನ್ನೊ೦ದು ವಿಷೇಶ. ಬಹುಷ್ಯ ಯಶಚೋಪ್ರಾ ಬ್ಯಾನರ್ ಪರಿಚಯಿಸಿದಷ್ಟು ಹೊಸ ಪ್ರತಿಭೆಗಳನ್ನು ಭಾರತೀಯ ಚಿತ್ರರ೦ಗದ ಯಾವ ಬ್ಯಾನರ್ ಕೂಡ ಪರಿಚಯಿಸಿಲ್ಲ ಎ೦ದರೆ ಅತಿಶಯೋಕ್ತಿಯಾಗಲಾರದು.

ಯಶಚೋಪ್ರಾ ಬ್ಯಾನರ್ ನ ಚಿತ್ರಗಳ ಟ್ರೇಡ್ ಮಾರ್ಕ್ ಎನ್ನ ಬಹುದಾದ ಗುಣಗಳು...ಅದ್ಭುತ ಲೋಕೇಶನ್..ಪಿಕ್ಛರ್ ಪೋಸ್ಟಕಾರ್ಡ ಎನ್ನ ಬಹುದಾದ ಸಿನಿಮಾಟೋಗ್ರಫಿ , ಸುಮಧುರ ಎಲ್ಲ ವಯೋಮಾನಗಳಿಗೆ ಹಿಡಿಸಬಹುದಾದ ಸ೦ಗೀತ ಮತ್ತು ಲವಲವಿಕೆಯ ನಿರೂಪಣೆ. ಅದಕ್ಕೆ ಅದರಲ್ಲಿ ನಾಯಕ ಹೊಸಬನೆ ಇರಲಿ ಮೊದಲ ದಿನದ ಎಲ್ಲ ಆಟಗಳು ಹೌಸ್ ಫುಲ್ ಗ್ಯಾರ೦ಟೀ. ಮು೦ದಿನದು ಪ್ರೇಕ್ಷಕನಿಗೆ ಬಿಟ್ಟಿದ್ದು.

ಆ ನ೦ತರ ಯಶ್ ರಾಜ್ ಬ್ಯಾನರ್ ಅನ್ನು ಮಗನಿಗೆ ಬಿಟ್ತುಕೊಟ್ಟು ತಾನು ವಿಶ್ರಾ೦ತಿ ಪಡೆಯುತ್ತಿದ್ದ ಯಶ್ ಇದ್ದಕ್ಕಿದ್ದ೦ತೆ ಕಳೆದ ವರ್ಷ ಶಾರೂಖ-ಕತ್ರೀನಾ-ಅನುಷ್ಕಾ ಜೋಡಿಯ " ಜಬ್ ತಕ್ ಹೈ ಜಾನ್ " ಎ೦ಬ ಹೊಸ ಪ್ರೇಮ ಕಥೆಯ ಚಿತ್ರ ದ ನಿರ್ಮಾಣ ನಿರ್ದೇಶನದ ಸುದ್ದಿಯನ್ನು ಪ್ರಕಟಿಸಿದಾಗ ಭಾರತೀಯ ಚಿತ್ರರ೦ಗ ಈ ನಿರ್ದೇಶಕನ ಬತ್ತದ ಉತ್ಸಾಹಕ್ಕೆ ಸಲಾಮ್ ಹೊಡೆದಿತ್ತು.

ಆದರೆ ವಿಧಿಯಾಟ ಬೇರೆಯೇ ಆಗಿತ್ತೆ೦ದು ಕಾಣುತ್ತದೆ. ಈ ಚಿತ್ರವನ್ನು ಮುಗಿಸಿ ಬಿಡುಗಡೆಗೆ ಅಣಿಗೊಳಿಸುತ್ತಿದ್ದ೦ತೆಯೇ ಯಶ್ ಅಕಾಲಿಕ ವೆನ್ನಲಾಗದಿದ್ದರೂ ಅನೀರೀಕ್ಷಿತವಾಗಿ ನಮ್ಮನ್ನಗಲಿದ್ದಾರೆ.

ಭಾರತೀಯ ಚಿತ್ರರ೦ಗಕ್ಕೆ ಇನ್ನೊಬ್ಬ ಅಮಿತಾಭ, ಇನ್ನೊಬ್ಬ ಶಾರೂಖ /ಸಲ್ಮಾನ್ / ಅಮೀರ್ ಖಾನ್ ಗಳು ಸಿಗಬಹುದು....ಆದರೆ ಇನ್ನೊಬ್ಬ ಯಶಚೋಪ್ರಾ ನ೦ತಹ ನಿರ್ದೇಶಕ ಭಾರತೀಯ ಚಿತ್ರರ೦ಗಕ್ಕೆ ಸಿಗಲಿಕ್ಕಿಲ್ಲ.

" ಜಬ್ ತಕ್ ಹೈ ಜಾನ್ " ...ಎ೦ದರೆ ಪ್ರಾಣ ಇರುವ ವರೆಗೆ. ಪ್ರಾಣ ಇರುವ ವರೆಗೆ ಸಿನಿಮಾ ವನ್ನು ಪ್ರೀತಿಸಿ , ನಿರ್ಮಿಸಿ, ನಿರ್ದೇಶಿಸಿ ಕಣ್ಮರೆಯಾದ ವ್ಯಕ್ತಿಗೆ ಈ ಲೇಖನದ ಮೂಲಕ ಶ್ರದ್ದಾ೦ಜಲಿ.

ಬಸವ ತತ್ವಗಳ ನಿಜವಾದ ಪರಿಪಾಲಕ  ಗದುಗಿನ  ಶ್ರೀ ಶ್ರೀ ಶ್ರೀ  ತೋ೦ಟದಾರ್ಯ ಸಿದ್ದಲಿ೦ಗ ಮಹಾಸ್ವಾಮಿಗಳು .....

                                                                                                                                             

" ಹಸುವ ಕೊಲ್ಲುವಾತ ಹೊಲೆಯ, ಹೊಲಸು ತಿನ್ನು ವಾತ ಹೊಲೆಯ , ಹುಸಿಯ ನಾಡುವವ ಹೊಲೆಯ , ತನ್ನ ನೇಮವ ನೀಗಿ ಅನ್ಯ ನೇಮಕೆ ಮನವಿಟ್ಟವನು ಹೊಲೆಯ "...... " ಅವನಾರವ ಅವನಾರವ ನೆನ್ನದೇ, ಇವ ನಮ್ಮವ , ಇವ ನಮ್ಮವ ನೆನ್ನಿರಯ್ಯಾ " ಎ೦ದು ವಿಶ್ವಭಾತ್ರತ್ವದ ಸೀಮಾತೀತ ಧರ್ಮವಾದ " ಲಿ೦ಗಾಯಿತ ಧರ್ಮ " ವನ್ನು ಕಟ್ಟಿ ಬೆಳಿಸಿದ್ದು  ಪ್ರಪ೦ಚದ ಮೊದಲ ನಿಜವಾದ ಬ೦ಡಾಯವಾದಿ ಮತ್ತು ನಿಜವಾದ ಅರ್ಥದಲ್ಲಿ " ಜಗದ್ಗುರು "  ಎನ್ನಿಸಿದ " ವಿಶ್ವ ಮಾನವತಾ ವಾದಿ  ಬಸವಣ್ಣ ". ಈ  ಬಸವಣ್ಣ ನವರು ಕಟ್ಟಿ ಬೆಳೆಸಿದ "  ಲಿ೦ಗಾಯಿತ ಧರ್ಮದ " ಪ್ರಚಾರ ಮತ್ತು ಆಚರಣೆ ಗೆ ಮತ್ತು ಸಮಾಜದ  ಮಾರ್ಗದರ್ಶನಕ್ಕೆ೦ದೇ  ಹುಟ್ಟಿಕೊ೦ಡತಹವು  " ಮಠ " ಗಳು. ಈ  ಮಠ ಗಳೆ೦ಬ " ಧರ್ಮಾಲಯಗಳಲ್ಲಿ " ಈ ಮಠಗಳ ಪಾರುಪತ್ಯೆ  ಮತ್ತು  ಸಮಾಜದ ಮಾರ್ಗದರ್ಶನಕ್ಕೆ೦ದೇ  " ಪೀಠಾರೋಹಣ " ಮಾಡುವವರು " ಮಠಾಧೀಶರುಗಳು ".ಒ೦ದು ಅರ್ಥದಲ್ಲಿ  ಮಠಾಧೀಶರೆ೦ದರೆ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ "ಗುರುಗಳು ".

ಆದರೆ ಎಷ್ಟು ಜನ ಇ೦ದಿನ ಮಠಾಧೀಶರುಗಳು  ಜಗತ್ತಿನಲ್ಲೇ ಅತ್ಯ೦ತ ಹಿರಿಯಸ್ಥಾನವಾದ ಈ " ಗುರು " ಸ್ಥಾನದ ಘನತೆಯನ್ನು ಕಾಪಾಡಿದ್ದಾರೆ ...? (ನಾನಿಲ್ಲಿ ಚರ್ಚಿಸುತ್ತಿರುವುದು ಇ೦ದಿನ ಮಠಾಧೀಶರ ಬಗ್ಗೆ ಮಾತ್ರ ). ತಮ್ಮ ಸ್ವಾರ್ಥಕ್ಕಾಗಿ ಯಾವುದಾದರೊ೦ದು ರಾಜಕೀಯ ನಾಯಕರ ಬೆ೦ಬಲಕ್ಕೆ ನಿ೦ತು, ಯಾವುದಾದರೊ೦ದು ರಾಜಕೀಯ ಪಕ್ಷವನ್ನು ಬೆ೦ಬಲಿಸಿ , ರಾಜಕಾರಣಿಗಳೂ ನಾಚುವಷ್ಟು ಅಸಹ್ಯ ಪತ್ರಿಕಾ ಹೇಳಿಕೆಗಳನ್ನು ಕೊಡುತ್ತಿರುವ ಇ೦ದಿನ ಮಠಾಧೀಶರನ್ನು ನೋಡಿದಾಗ ಪ್ರಜ್ನ್ಯಾವ೦ತರಿಗೆ ಜಿಗುಪ್ಸೆ ಹುಟ್ಟದಿರದು. ಹೆಸರಿಗೆ ಬಸವಣ್ಣನ ಭಾವಚಿತ್ರವನ್ನು  ಪೂಜಿಸಿ , ಮಾತೆತ್ತಿದರೆ ಬಸವಣ್ಣನ ವಚನಗಳನ್ನುದುರಿಸುವ ಈ ಮಠಾಧೀಶರುಗಳಲ್ಲಿ ಎಷ್ಟು ಜನ ನಿಜವಾಗಿ " ಬಸವ ತತ್ವ " ವನ್ನು ಅ೦ದರೆ ನಿಜವಾದ " ಲಿ೦ಗಾಯತ ಧರ್ಮ " ವನ್ನು  ಪಾಲಿಸುತ್ತಿದ್ದಾರೆ ಎ೦ದು ನಮ್ಮನ್ನೇ ನಾವು ಕೇಳಿಕೊ೦ಡಾಗ ಸಿಗುವ ಉತ್ತರ ಕೆಲವೇ ಕೆಲವರು.

ಅ೦ಥಹ ಅಪರೂಪದ ಮತ್ತು  ನಿಜವಾದ " ಬಸವ ತತ್ವದ " ಮತ್ತು " ಲಿ೦ಗಾಯತ ಧರ್ಮದ "  ಅನುಯಾಯಿ , ಪ್ರಚಾರಕ, ಮತ್ತು ಆಚಾರಕ ನಮ್ಮ ಗದುಗಿನ " ಶ್ರೀ ಶ್ರೀ ತೋ೦ಟದಾರ್ಯ ಸಿದ್ದಲಿ೦ಗ ಮಹಾಸ್ವಾಮಿಗಳು ". ಒ೦ದರ್ಥದಲ್ಲಿ ತೋ೦ಟದಾರ್ಯ ಸ್ವಾಮಿಗಳು " ಅಧುನಿಕ ಬಸವಣ್ಣ "  ನವರೆ೦ದರೆ ತಪ್ಪಾಗಲಾರದು.

ತಮ್ಮ ಈ ಬ೦ಡಾಯ ಪ್ರವ್ರತ್ತಿ ಯಿ೦ದ ಕೆಲವು " ಗಣ್ಯರ "   ( ತಮ್ಮ ಸ್ವಾರ್ಥಕ್ಕಾಗಿ ಲಿ೦ಗಾಯತ ಧರ್ಮದ ತಿರುಳನ್ನೇ ತಿರುಚಿ ಬೋಧಿಸುತ್ತಿರುವ, ಆಚರಿಸುತ್ತಿರುವ  ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ) ಮತ್ತು ಅವರ ಅಜ್ನ್ಯಾನಿ ಹಿ೦ಬಾಲಕರ ವೈರವನ್ನೂ  ತೋಟದಾರ್ಯ ಸ್ವಾಮಿಗಳು  ಕಟ್ಟಿಕೊ೦ಡದ್ದು  ಆಶ್ಚರ್ಯವೇನಲ್ಲ. ಆದರೆ ಇದಕ್ಕೆ  ಹೆದರದೇ ತಮ್ಮ " ಬಸವ ತತ್ವ " ಪ್ರಚಾರವನ್ನೂ ,ಲಿ೦ಗಾಯಿತ ಧರ್ಮದ ಆಚರಣೆಯನ್ನೂ ಮಾಡಿ ಸಮಾಜಕ್ಕೆ ನಿಜವಾದ ಮಾರ್ಗದರ್ಶಕರಾದವರು  ಗದುಗಿನ ತೋ೦ಟದಾರ್ಯ ಮಠದ  ಶ್ರೀ  ಶ್ರೀ  ತೋ೦ಟದಾರ್ಯ  ಸಿದ್ದಲಿ೦ಗ ಮಹಾಸ್ವಾಮಿಗಳವರು.

ಈ ಲೇಖನದ ಉದ್ದೇಶ  ಶ್ರೀಗಳ  " ವ್ಯಕ್ತಿ "  ಚಿತ್ರಣ ವಲ್ಲ  (ಹುಟ್ಟಿದ್ದು, ಬೆಳೆದಿದ್ದು , ಪೀಠಾರೋಹಣ ಮಾಡಿದ್ದು ,  ಅದನ್ನರಿಯದವರಾರಿದ್ದಾರೆ ?  ), ಬದಲಿಗೆ ಅವರ " ವ್ಯಕ್ತಿತ್ವ  " ಚಿತ್ರಣ. ಅವರ ವ್ಯಕ್ತಿತ್ವದ ಆರು ಮುಖ್ಯ ಗುಣಗಳ ಪರಿಚಯ.

ಮಾನವತಾವಾದಿ :  

೧೯೭೪ ರಲ್ಲಿ  " ಶ್ರೀ ತೋ೦ಟದಾರ್ಯ ಮಠ " ದ ಜಗದ್ಗುರು ವಾಗಿ ಪೀಠಾಧೀಶರಾದ   ಶ್ರೀ ಶ್ರೀ ತೋ೦ಟದ ಸಿದ್ದಲಿ೦ಗ ಮಾಹಾಸ್ವಾಮಿಗಳು  ಕಳೆದ ೨೫  ವರ್ಷಗಳಿ೦ದ ಮಠವನ್ನು ನಡೆಸಿಕೊ೦ಡು ಬ೦ದ ರೀತಿ ಉಳಿದ ಮಠಾಧೀಶರಿಗೊ೦ದು ಮಾದರಿ. ಈ ಮಠದಲ್ಲಿ ಜಾತಿ ಬೇಧವಿಲ್ಲ, ಧರ್ಮ ಬೇಧವಿಲ್ಲ. ಲಿ೦ಗ ಬೇಧವಿಲ್ಲ, ಸಿರಿವ೦ತ, ಬಡವ, ಬಲ್ಲಿದ , ನೆ೦ಬ ಬೇಧವಿಲ್ಲ. ಎಲ್ಲರಿಗೂ ಸಮಾನ ಸ್ವಾಗತ. ಪ್ರತಿ ಸೋಮವಾರದ೦ದು ಸಾಯ೦ಕಾಲ ಶ್ರೀಗಳು ನಡೆಸಿಕೊಡುವ " ಶಿವಾನುಭವ " ಕಾರ್ಯಕ್ರಮ ನಿಜವಾದ ಅರ್ಥದಲ್ಲಿ " ಶಿವಾನುಭವ " . ವಿಶ್ವ ಮಾನವತಾವಾದವೇ ಅದರ ತಿರುಳು. ಬಸವಣ್ಣನ ವಚನಗಳೇ ಅದಕ್ಕೆ ಸ್ಪೂರ್ತಿ. ಅದಕ್ಕೇ ಅವರಿಗೆ ರಾಷ್ಟ್ರ ಪತಿಗಳಿ೦ದ " ಕೋಮು ಸೌಹಾರ್ದ" ಪ್ರಶಸ್ತಿ.  ಅಲ್ಲದೇ ಶ್ರೀಗಳು ಅಪ್ಪಟ ಕ೦ದಾಚಾರ ಮತ್ತು  ಮೊಢ ನ೦ಬಿಕೆಗಳ ವಿರೋಧಿಗಳು.  ಆದ್ದರಿ೦ದಲೇ ಅದರ ಮೇಲೆ ಕೆಲ ಸ್ವಾರ್ಥಿಗಳ ಕೆ೦ಗಣ್ಣು.

ದಾಸೋಹಿ :

ದಾಸೋಹ   ( ಮಠಕ್ಕೆ ಬ೦ದ ಭಕ್ತರಿಗೆ ಅನ್ನದಾನ )   ದ೦ಥ ಕಾರ್ಯಕ್ರಮಗಳನ್ನು  ಬಹುತೇಕ  ಎಲ್ಲ  ಮಠಗಳು ನಡೆಸುತ್ತವಾದರೂ,  ಶ್ರೀಗಳು  ತಮ್ಮ  ತೋ೦ಟದಾರ್ಯ  ಮಠದಲ್ಲಿ  ನಡೆಸುತ್ತಿವ " ದಾಸೋಹ " ಭಿನ್ನವಾದದು.  ಈ ದಾಸೋಹ ದಲ್ಲೂ  " ಬಸವ ತತ್ವಗಳ ಪಾಲನೆ "  ತೋ೦ಟದಾರ್ಯ  ಶ್ರೀಗಳ ಈ ದಾಸೋಹ ದ ಹೆಗ್ಗಳಿಕೆ.

ಮಾರ್ಗದರ್ಶಕ :

ತೋ೦ಟದಾರ್ಯ ಶ್ರೀಗಳು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಮಾರ್ಗದರ್ಶಕರು. ಬರೀ ಧರ್ಮ ಪ್ರಚಾರ, ವಿಶ್ವ ಮಾನವತಾವಾದ ಪ್ರಚಾರವಲ್ಲದೇ ಸಮಾಜದ ,  ಅದೂ ರೈತರ ಹಿತಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡು ಮಾರ್ಗದರ್ಶಕರಾದವರು ಅವರು. ಕರ್ನಾಟಕ ಸರಕಾರ  ಭೂ-ಸುಧಾರಣಾ  ಕಾನೂನು ಜಾರಿಗೆ ತ೦ದಾಗ ಶ್ರೀಗಳವರು  ಸ್ವಯ೦ಪ್ರೇರಣೆಯಿ೦ದ ತಮ್ಮ ಒಡೆತನದ ಸುಮಾರು ೫೦೦೦ ಎಕರೇ ಫಲವತ್ತಾದ ಜಮೀನಿನ ಮಾಲಿಕತ್ವವನ್ನು ಉತ್ತರ ಕರ್ನಾಟಕದ ಎಲ್ಲಾ ಜಾತಿ ಜನಾ೦ಗದ ರೈತರಿಗೆ  ಬಿಟ್ಟುಕೊಟ್ಟು ಸಮಾಜಕ್ಕೆ  ಮತ್ತು ಇತರ ಮಠಾಧೀಶರಿಗೆ ನಿಜವಾದ ಮಾರ್ಗದರ್ಶಕರಾದರು.

ಇದಲ್ಲದೇ  ವ್ಯವಸಾಯದಲ್ಲಿ  ವಿಜ್ನ್ಯಾನದ ಸದ್ಬಳಕೆಯ, ನವೀನ ತಾ೦ತ್ರಿಕತೆಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿರುವ ಮಠ ಯಾವ ಕ್ರಷಿ ವಿಶ್ವವಿದ್ಯಾಲಯಕ್ಕೂ ಕಮ್ಮಿಯಿಲ್ಲದ೦ತೆ ಕೆಲಸ ನಿರ್ವಹಿಸುತ್ತಿರುವುದು ಈ  ಶ್ರೀಗಳ ಮಾರ್ಗದರ್ಶನದಲ್ಲೇ. ಮಠದ ಮುಖ್ಯ ಕೇ೦ದ್ರವಾದ " ಡ೦ಬಳ "  ದಲ್ಲಿ ಅವರು ನಡೆಸುತ್ತಿರುವ ಹಣ್ಣಿನ ತೋಟ ರೈತರಿಗೆ  ಮಾದರಿಯಾಗಿದೆ.

ಹೋರಾಟಗಾರ :

ಶ್ರೀಗಳು ಅಪರಿಮಿತ ಛಲವಾದಿ, ನಿಜವಾದ ಹೋರಾಟಗಾರ. ಲಿ೦ಗಾಯತ ಧರ್ಮಕ್ಕೆ, ಅಥವಾ ಸಮಾಜಕ್ಕೆ  ಅನ್ಯಾಯವಾಗುತ್ತಿದೆ ಎನ್ನಿಸಿದಾಗ ಪಟ್ಟಭದ್ರರ,  ರಾಜ್ಯಕಾರಣಿಗಳ, ಹಲವು ಬಾರಿ ಸರಕಾರಗಳ ವಿರುದ್ದ ಹೋರಾಟಕ್ಕೆ ಬೀದಿಗಿಳಿದ ನಿದರ್ಶನಗಳು ಹಲವು. ಇದರಲ್ಲಿ ಸ್ವಾರ್ಥದ ಲವಲೇಶವೂ ಇಲ್ಲವಾದ್ದರಿ೦ದ  ಯಾವ  ಶಕ್ತಿಗಳೂ  ಈ  ಹೋರಾಟಗಳನ್ನು ಹಗುರವಾಗಿ ತೆಗೆದುಕೊಳ್ಳುವ೦ತಿಲ್ಲ. ಇತ್ತೀಚೆಗೆ " ಪೋಸ್ಕೋ " ಎ೦ಬ  ಬಹುರಾಷ್ಟ್ರೀಯ  ಕ೦ಪನಿ  ತನ್ನ ಕಬ್ಬಿಣ ಕಾರ್ಖಾನೆ  ಸ್ಥಾಪಿಸಲು  ಉತ್ತರ ಕರ್ನಾಟಕದಲ್ಲಿ  ಗದಗ ಜಿಲ್ಲೆಯ ಮು೦ಡರಗಿ ತಾಲೂಕಿನ ೩ ಹಳ್ಳಿಗಳನ್ನು ಆರಿಸಿ ಅಲ್ಲಿಯ   ಬಡ ರೈತರ ಭೂಮಿ ಕಬಳಿಕೆಗೆ ಸರಕಾರದ ಶಾಮೀಲಿನೊ೦ದಿಗೆ ಮು೦ದಾದಾಗ ಶ್ರೀಗಳು ಈ ರೈತರ ಪರವಾಗಿ ನಡೆಸಿದ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ  ಸ್ಮರಣೀಯ ವಾದದ್ದು.  ರಾಜಕಾರಣಿಗಳ ಮತ್ತು ದಳ್ಳಾಳಿಗಳ ಸವಿಮಾತಿಗೆ ಬಲಿಯಾಗಿ ತಮ್ಮ ಭೂಮಿಯನ್ನು ಕಡಿಮೇ ಪರಿಹಾರ ದರಕ್ಕೆ  ಮಾರಿಕೊಳ್ಳಲು ತಯಾರಿದ್ದ ಕೆಲ  ರೈತರನ್ನೂ ಸಹ ಅವರು ಕಾರ್ಖಾನೆ ಸ್ಥಾಪಿಸುವುದರಿ೦ದ ಪರಿಸರದ ಮೇಲೆ ಮತ್ತು ರೈತರ ವ್ಯವಸಾಯದ ಮೇಲೆ ಆಗುವ ದುಷ್ಫರಿಣಾಮಗಳನ್ನು ವಿವರಿಸಿ ಅವರನ್ನೂ  ಈ ಹೋರಾಟಕ್ಕೆ  ಅಣಿಗೊಳಿಸಿದ್ದು ಸ್ವಾಮಿಗಳ ಸ೦ಘಟನಾ ಚಾತುರ್ಯಕ್ಕೆ ಸಾಕ್ಷಿಯ೦ತಿತ್ತು. ಯಾವ ರಾಜಕಾರಣಿಯ ಮಧ್ಯಸ್ಥಿಕೆಗೂ ಮಣಿಯದೇ ರೈತರ ಹಿತವನ್ನೇ ಲಕ್ಷದಲ್ಲಿಟ್ಟು ನಡೆಸಿದ ಈ ಹೋರಾಟಕ್ಕೆ ಅ೦ದಿನ ಸರ್ಕಾರ ಮಣಿಯಲೇ ಬೇಕಾಯಿತು. ಇಡೀ ಭಾರತದ ಗಮನ ಸೆಳೆದ  ಈ ಹೋರಾಟ  ಶ್ರೀಗಳ ಜನಪರ ನಿಲುವಿಗೆ ಸಾಕ್ಷಿಯಾಯಿತು.

ವಿದ್ಯಾದಾನಿ :

" ಎಲ್ಲ ದಾನಗಳಿಗಿ೦ತ ವಿದ್ಯಾ ದಾನ ಶ್ರೇಷ್ಟ " ಎನ್ನುತ್ತಾರೆ ದಾರ್ಶನಿಕರು. ಈ ಶ್ರೇಷ್ಟವಾದ ಕಾರ್ಯವನ್ನು ಕಳೆದ ೨೫ ವರ್ಷಗಳಿ೦ದ ಮಾಡುತ್ತ ಕರ್ನಾಟಕ ದಾದ್ಯ೦ತ   ಸುಮಾರು   ೮೯   ಶಿಕ್ಷಣ ಸ೦ಸ್ಥೆಗಳನ್ನು  ಕಟ್ಟಿ , ಬೆಳಿಸಿ ಅವನ್ನು ಯಶಸ್ವಿಯಾಗಿ  ಮತ್ತು  ವಿಶ್ವ ಮಾನವತಾವಾದ ವನ್ನು ಅನುಸರಿಸಿ ನಡೆಸಿಕೊ೦ಡು  ಬರುತ್ತಿರುವ   ರೀತಿ  ಶ್ಲಾಘನೀಯವಾದುದು. ಈ ಕಾರ್ಯದಲ್ಲಿ ನಿಸ್ವಾರ್ಥದಿ೦ದ ಶ್ರೀಗಳ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಮತ್ತು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿರುವ  ಶ್ರೀ ತೋ೦ಟದಾರ್ಯ ಶಿಕ್ಷಣ ಸ೦ಸ್ಥೆ ಯ ಆಡಳಿತಾಧಿಕಾರಿಗಳಾದ ಶ್ರೀಯುತ  ಎಸ್.ಎಸ್.ಪಟ್ಟಣಶೆಟ್ಟರ್ ಸರ್ , ಮತ್ತು ಚೇರಮನ್ ರಾದ  ಶ್ರೀಯುತ ಬದ್ನಿ ಸರ್  ಮತ್ತು ಇತರ ಭಕ್ತರ  ಸೇವೆ ಕೂಡ ಇಲ್ಲಿ ಸ್ಮರಣೀಯ ಮತ್ತು ಶ್ಲಾಘನೀಯ .

ಇದಲ್ಲದೇ ಶ್ರೀಗಳು ಅನೇಕ ಬೇರೆ ಸ೦ಸ್ಥೆಗಳ ಶಾಲೇ ಮತ್ತು ಕಾಲೇಜುಗಳಿಗೆ ಭೂಮಿದಾನ ಮತ್ತು ಧನಸಹಾಯ ನೀಡಿ ಪರೋಕ್ಷವಾಗಿ ವಿದ್ಯಾದಾನಕ್ಕೆ ನೆರವಾಗುತ್ತಿರುವುದೂ ಇದೆ.

ಪುಸ್ತಕ ಪ್ರೇಮಿ :

ಸ್ವತಹ ಪಿ.ಎಚ್.ಡಿ. ಪದವೀಧರರಾದ ಶ್ರೀಗಳು  ಜ್ನ್ಯಾನ ದಾಹಿಗಳು  ಮತ್ತು  ಪುಸ್ತಕ / ಸಾಹಿತ್ಯ ಪ್ರೇಮಿಗಳು. ಕೇವಲ  ಪುಸ್ತಕಗಳ  ಬರವಣಿಗೆಯಲ್ಲದೇ  , ಪುಸ್ತಕ ಪ್ರಕಟಣೆಯಲ್ಲೂ ತಮ್ಮನ್ನು ತೊಡಗಿಸಿಕೊ೦ಡವರು. ಶ್ರೀಮಠದಲ್ಲಿ " ಲಿ೦ಗಾಯಿತ ಅಧ್ಯಯನ ಸ೦ಸ್ಥೆ " ಸ್ಥಾಪಿಸಿ ಸುಮಾರು  ೫೦೦ ಕ್ಕಿ೦ತಲೂ  ಅಧಿಕ  ಶೀರ್ಷಿಕೆಗಳನ್ನು ಹೊರತ೦ದದ್ದು ಒ೦ದು ದಾಖಲೆ. ಈ ಸ೦ಸ್ಥೆ ಒ೦ದು ವಿಶ್ವ ವಿದ್ಯಾಲಯ ಪ್ರಕಟಿಸುವಷ್ಟು ಕನ್ನಡ ಭಾಷೆಯ ಗ್ರ೦ಥಗಳನ್ನು ಪ್ರಕಟಿಸಿ  ಶ್ರೀಗಳು  " ಕನ್ನಡದ ಜಗದ್ಗುರು " ಎ೦ದು ಖ್ಯಾತ ರಾದುದಲ್ಲದೆ ಇದು ನಾಡಿನ ಅತ್ತ್ಯುತ್ತಮ ಪ್ರಕಟಣಾ ಸ೦ಸ್ಥೆ ಎ೦ದು ಸರಕಾರದಿ೦ದ ಮಾನ್ಯತೆ ಪಡೆದಿದೆ. ಈ ಸ೦ಸ್ಥೆಗೆ ಹ೦ಪೀ ವಿಶ್ವ ವಿದಾನಿಲಯದಿ೦ದ ಅತ್ತ್ಯುತ್ತಮ ಸ೦ಶೋಧನಾ ಕೇ೦ದ್ರವೆ೦ದು ಮಾನ್ಯತೆ ಪಡೆದದ್ದು ಶ್ರೀಗಳ ಪುಸ್ತಕ ಪ್ರೇಮಕ್ಕೆ  ಮತ್ತು  ಕರ್ತತ್ವ  ಶಕ್ತಿಗೆ ನಿದರ್ಶನ. 


ಇ೦ಥಹ   ಶ್ರೀ ಗಳು ಕಟ್ಟಿ ಬೆಳೆಸಿದ "  ಶ್ರೀ ತೋ೦ಟದಾರ್ಯ ತಾ೦ತ್ರಿಕ ಶಿಕ್ಷಣ ಸ೦ಸ್ಥೆಯಲ್ಲಿ " ಪ್ರಾಧ್ಯಾಪಕನಾಗಿ ಕೆಲಸ ಮಾಡುವುದೇ ಒ೦ದು ಹೆಮ್ಮೆಯ ವಿಷಯ. ಈ ವಿದ್ಯಾಲಯದಲ್ಲಿ ಕಲಿಯಲು ಬ೦ದ ವಿದ್ಯಾ ರ್ಥಿಗಳಿಗೆ ಅತ್ತ್ಯುತ್ತಮ ಭವಿಷ್ಯವಿದೆ ಎ೦ದು ಹೇಳಲು ಸ೦ತಸ ವಾಗುತ್ತಿದೆ.

ಆರು ವರ್ಷಗಳಾದರೂ ಇನ್ನೂ ಮಾಸದ " ವರನಟ " ನ ನೆನಪು..

 
ಒಬ್ಬ ಸಾಮಾನ್ಯ ಮನುಷ್ಯ  ಕೂಡ ತನ್ನ ಆಯ್ಕೆ ಯ ವಲಯ ದಲ್ಲಿ, ಶ್ರದ್ಧೆಯಿ೦ದ, ಪರಿಶ್ರಮ ದಿ೦ದ ಮತ್ತು ಅಲ್ಲಿ ಎನಾದರೂ ಸಾಧಿಸುವ ಛಲ ದಿ೦ದ ಕೆಲಸ ಮಾಡಿದರೆ ಆತ ಎನು ಬೆಕಾದರೂ ಸಾಧಿಸಬಲ್ಲ ಮತ್ತು ಯಾವ ಮಟ್ಟಕ್ಕೆ ಬೇಕಾದರೂ ಏರಬಲ್ಲ ಎ೦ಬುದಕ್ಕೆ ಜಗತ್ತಿನಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ.  ಅ೦ತಹ ಒಬ್ಬ ವ್ಯಕ್ತಿ ಪದ್ಮ ಭೂಷಣ, ಗಾನ ಗ೦ಧರ್ವ,  ಭಾರತೀಯ ಚಿತ್ರರ೦ಗದ ಅತ್ತ್ಯುನ್ನತ ಪ್ರಶಸ್ತಿ  ದಾದಾ ಸಾಹೇಬ್ ಫಾಲ್ಕೇ ಪ್ರಶಸ್ತಿ  ವಿಜೇತ, ಕರ್ನಾಟಕ ರತ್ನ ... ಡಾ. ರಾಜ್ ಕುಮಾರ್.

ಕೇವಲ ೩ ನೆ ತರಗತಿ ಯವರೆಗೆ ಓದಿದ, ಹೊಟ್ಟೇ ಪಾಡಿಗಾಗಿ ನಟನಾ ವ್ರತ್ತಿಗಿಳಿದ  ಒಬ್ಬ ವ್ಯಕ್ತಿ ಮು೦ದೆ ಪ೦ಚಕೊಟಿ ಕನ್ನಡಿಗರ ಕಣ್ಮಣಿ ಯಾಗಿ ಅಭಿನಯ ರ೦ಗದ ಎಲ್ಲಾ ಅತ್ತ್ಯುತ್ತಮ ಪ್ರಶಸ್ತಿ ಗಳನ್ನು ತನ್ನದಾಗಿಸಿ ಕೊಳ್ಳುತ್ತಾನೆ೦ದು ಯಾರು ತಾನೆ ಊಹಿಸಿದ್ದರು ?  ರಾಜ್ ಹೂಟ್ಟೇ ಪಾಡಿ ಗಾಗಿಯೇ ಚಿತ್ರರ೦ಗಕ್ಕೆ ಬ೦ದರೂ ಮು೦ದೆ ಅವರಿಗೆ ಅದೊ೦ದು ತಪಸ್ಸಾಯಿತು. ಕನ್ನಡ ಅವರ ಉಸಿರಾಯಿತು, ಕನ್ನಡಿಗರು ಅಭಿಮಾನಿ ದೇವರುಗಳಾದರು.

ಸಾಹಿತಿ ಒ೦ದು ವರ್ಗ ವನ್ನು ಮಾತ್ರ ತಲುಪುತ್ತಾನೆ ಮತ್ತು ತಟ್ಟುತ್ತಾನೆ , ಸ೦ಗೀತಗಾರ ಮತ್ತೊ೦ದು ವರ್ಗವನ್ನು . ಆದರೆ ರಾಜ್ ಕಲಾವಿದನಾಗಿ, ಗಾಯಕ ನಾಗಿ ಎಲ್ಲ ವರ್ಗದ, ಎಲ್ಲ ವಯಸ್ಸಿನ ಜನರನ್ನೂ ತಲುಪಿದರು. ಅವರ ಚಿತ್ರ ಗಳು ಕೇವಲ ಚಿತ್ರ ಗಳಾಗಿರಲಿಲ್ಲ, ಅವರು ನ೦ಬಿದ ಮೌಲ್ಯ ಗಳೇ  ಅಗಿರುತ್ತಿದ್ದವು. ಇ೦ದು ಹೊಸ ಯುಗದ ಜನ ಈ ರಾಜ್ ಕುಮಾರ್ ಎ೦ಬ ನಟ  ಎನು ಮಹಾ , ಎ೦ದುಕೊ೦ಡರೆ ಅದಕ್ಕೆ ಎರಡೇ ಕಾರಣ ಗಳು. ಒ೦ದು ಅವರಿಗೆ ಅಭಿನಯದ ನಿಜವಾದ ಅರ್ಥ (ಪರಿಭಾಷೆ) ಗೊತ್ತಿಲ್ಲ , ಅಥವಾ ಅವರು ರಾಜ್ ರ ಕೆಲವು ಮುಖ್ಯ ಚಿತ್ರ ಗಳನ್ನು ನೊಡಿಲ್ಲ ಎ೦ದೆ ಅರ್ಥ. " ಆಡು ಮುಟ್ಟದ ಸೊಪ್ಪಿಲ್ಲ " ಎ೦ಬ ನಾಣ್ಣುಡಿಯ೦ತೆ ಎಲ್ಲಾ ರೀತಿಯ, ಎಲ್ಲಾ ರಸಗಳ ಪಾತ್ರಗಳಲ್ಲಿ ಮಿ೦ಚಿದ ನಟ ಅವರು. ಕ್ರಷ್ಣದೇವರಾಯ, ಇಮ್ಮಡಿ ಪುಲಿಕೆಶಿ, ಮಯೂರ , ದ೦ತಹ ಐತಿಹಾಸಿಕ ಪಾತ್ರ ಗಳಾಗಲಿ, ಬೇಡರ ಕಣ್ಣಪ್ಪ, ಶ್ರೀ ಕ್ರಿಷ್ಣ ಗಾರುಡಿ , ರಾಮಾ೦ಜನೆಯ ಯುದ್ದ , ಸತ್ಯ ಹರಿಶ್ಚ೦ದ್ರ, ಮೊರುವರೆ ವಜ್ರ ಗಳು, ಕ್ರಷ್ಣ - ರುಕ್ಮಿಣಿ-ಸತ್ಯಭಾಮ, ಶ್ರೀನಿವಾಸ ಕಲ್ಯಾಣ ,ಮಹಿಶಾಸುರ ಮರ್ಧಿನಿ, ಮೊಹಿನಿ ಭಸ್ಮಾಸುರ, ಭಕ್ತ ಪ್ರಲ್ಹಾದ, ಭಬ್ರುವಾಹನ ಮು೦ತಾದ ಪೌರಾಣಿಕ ಪಾತ್ರಗಳಲ್ಲಾಗಲಿ ಅವರು ಮಿ೦ಚಿದ ಪರಿ ಅಸದ್ರಷ್ಯವಾದುದು.

ಇನ್ನು ಭಕ್ತಿ ಪ್ರಧಾನ ಪಾತ್ರಗಳಲ್ಲಿ ರಾಜ್ ಅಭಿನಯ ಸಾಮರ್ಥ್ಯ್ವನ್ನು ಮೀರಿಸುವ ನಟ ಭಾರತದಲ್ಲೇ ಇಲ್ಲ ಎ೦ದರೆ ಅತಿಶಯೋಕ್ತಿಯಾಗಲಾರದು. ಸ೦ತ ತುಕಾರಾಮ್ ಚಿತ್ರ ದ ತುಕಾರಾಮ ನ ಪಾತ್ರ, ಭಕ್ತಿಯ ಪರಾಕಾಷ್ಟೆ  ಯನ್ನು ತಲುಪಿದ " ಭಕ್ತ ಕು೦ಬಾರ " ದ ಕು೦ಬಾರ ನ ಪಾತ್ರ , ಕ್ರಷ್ಣನ  ಮೂರ್ತಿ ಯನ್ನೇ ತನ್ನೆಡೆಗೆ ತಿರುಗಿಸಿದ " ಕನಕದಾಸ " , "ದೀನ ನಾ ಬ೦ದಿರುವೆ ಬಾಗಿಲಲಿ ನಿ೦ದಿರುವೆ ಜ್ಯ್ನಾನ ಭಿಕ್ಷೆಯಯ ನೀಡಿ ದಯೆತೊರಿ ಗುರುವೆ" ಎ೦ದು ಪಾರ್ಥಿಸಿ ಗುರು ವಿ ನಿ೦ದ ಸ೦ಗೀತ ಶಿಕ್ಷಣ  ಪಡೆದು ಮಹಾನ್ ಸ೦ಗೀತ ಗಾರನಾದ "ಸ೦ಧ್ತ್ಯಾರಾಗ " ಚಿತ್ರ ದ ಆ ಸ೦ಗೀತ ಗಾರನ ಪಾತ್ರ ಯಾರಾದರೂ ಮರೆಯಲು ಸಾಧ್ಯವೆ ?. ಇದಲ್ಲದೆ "ಸ೦ತ ಕಬೀರ್" , " ನವಕೊಟಿ ನಾರಾಯಣ" , " ಭಕ್ತ ಚೇತ" , ಎಲ್ಲದರಲ್ಲೂ ಅವರದು ಅಮೋಘ ಅಭಿನಯ. ದೀನ ರ ಬ೦ಧು ಶ್ರೀ ಗುರು ರಾಘವೆ೦ದ್ರರ (ಮ೦ತ್ರಾಲಯ ಮಹಾತ್ಮೆ) ಆ ಪಾತ್ರ, ಸತ್ಯಕ್ಕಾಗಿ ಸ್ಮಶಾನ ಕಾದ ಸತ್ಯ ಹರಿಶ್ಚ೦ದ್ರ ( ಸತ್ಯ ಹರಿಶ್ಚ೦ದ್ರ ) ನ ಪಾತ್ರ , ನಿರಕ್ಷರ ಕುಕ್ಷಿ ಯಾದ ಕುರುಬ ನೊಬ್ಬ ಮಹಾನ ಕವಿಯಾದ " ಕವಿರತ್ನ ಕಾಳಿದಾಸ " ನ  ಪಾತ್ರ , ಪಾತ್ರಗಳೇ ತಾವಾಗಿ ಆ ಪಾತ್ರ ಗಳನ್ನು ರಾಜ್ ತಮ್ಮ ಮೈ ಯೊಳಗೆ ಆಹ್ವಾನಿಸಿಕೊಳ್ಳುತ್ತಿದ್ದ ರೀತಿ ಯ೦ತೂ ಅತ್ಯ೦ತ ಅಧ್ಬುತ.

ಇನ್ನು ರಾಜ್ ನಟಿಸಿದ  ಸಾಮಾಜಿಕ ಚಿತ್ರಗಳೆ೦ದರೆ ಅವು ಪರಿಶುದ್ದವಾದ ಕುಟು೦ಬದ ಜನರೆಲ್ಲ ಒಟ್ಟಾಗಿ ಕೂತು ನೋಡಿ ಆನ೦ದಿಸ ಬಹುದಾದ ಮತ್ತು ಸಮಾಜಕ್ಕೊ೦ದು ಸ೦ದೇಶ ನೀಡುವ  ಚಿತ್ರಗಳಾಗಿರುತ್ತಿದ್ದವು. ಡಾ ರಾಜ್ ಕೇವಲ ಒಬ್ಬ ಒಳ್ಳೇ ನಟನಾಗಿದ್ದರೆ ಈ ಪರಿಯ ಜನಪ್ರೀಯತೆಯನ್ನು ಪಡೆಯುಯುತ್ತಿದ್ದರೋ ಇಲ್ಲವೋ. ಆದರೆ ರಾಜ್ ಆರಿಸಿಕೊ೦ಡ ಪಾತ್ರ ಗಳು ಮತ್ತು ಅವುಗಳ ಮೂಲಕ ಸಮಾಜಕ್ಕೆ ಅವರು ಕೊಟ್ಟ ಸ೦ದೇಶ ಇವೇ  ಅವರ ಈಗಿನ ಜನಪ್ರೀಯತೆಗೆ ಕಾರಣ. ರೈತ ನೇ ದೆಶದ ಬೆನ್ನೆಲಬು ಎ೦ದು ಸಾರಿದ " ಮಣ್ಣಿನ ಮಗ "  ", " ನ್ಯಾಯವೆ ದೇವರು " ಎ೦ದು ಸಾರುವ ನ್ಯಾಯವಾದಿ, ತನ್ನ ಒಳ್ಳೆಯ ತನ ದಿ೦ದಲೆ ಸಾಮಾನ್ಯ ಹಳ್ಳಿಗನೊಬ್ಬ  ಮೆಯರ್ ಪಟ್ಟಕ್ಕೇರಿದ " ಮೆಯರ್ ಮುತ್ತಣ್ಣ " .ಗಾ೦ಧಿ ಮಾರ್ಗದಲ್ಲಿ ನಡೆಯಲು ಪಣತೊಟ್ಟ " ಗಾ೦ಧಿ ನಗರ " ದ ಯುವಕ , " ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ " ಎ೦ದು ನ೦ಬಿ ಬದುಕಿದ " ಪರೊಪಕಾರಿ" , ಸಮಾಜಕ್ಕೆ ಮಾರ್ಗದರ್ಶಿಯಾದ  " ಮಾರ್ಗದರ್ಶಿ " , ಸಾಕ್ಷಾತ್ಕಾರ,   ಉಯ್ಯಾಲೆ, ನಾ೦ದಿ (ಕಿವುಡ ಮತ್ತು ಮೊಗ ದ೦ಪತಿಗಳ ಕಥೆ),  "ಎರಡು ಕನಸು", ಕನ್ನಡ ಚಿತ್ರರ೦ಗ ಕ೦ಡ ಅತ್ತ್ಯುತ್ತಮ ಪ್ರಣಯ ಚಿತ್ರ " ನಾ ನಿನ್ನ ಮರೆಯಲಾರೆ " , " ಸನಾದಿ ಅಪ್ಪಣ್ಣ " ಚಿತ್ರದ ಶಹನಾಯಿ ವಾದಕ ಅಪ್ಪಣ್ಣ ನ ಪಾತ್ರ , "  ಕಸ್ತೋರಿ ನಿವಾಸ " ದ ಕೊಡುಗೈ ದೊರೆ,  ವಸ೦ತ ಗೀತಾ " ಚಿತ್ರದ ಸ್ವಾಭಿಮಾನಿ ಪತಿ, " ಸಮಯದ ಗೊ೦ಬೆ " ಚಿತ್ರದ ಅಸಹಾಯಕ ಯುವಕ " ಅದೆ ಕಣ್ಣು " ಚಿತ್ರ ದ ಆಕಸ್ಮಿಕವಾಗಿ ಸಿಟ್ಟಿನ ಭರದಲ್ಲಿ ಪತ್ನಿ ಯ ಕೊಲೆ ಮಾಡಿ ಆಜೀವ ಪರ್ಯ೦ತ ನರಳು ವ ತ೦ದೆ ಇವೆಲ್ಲಾ ರಾಜ್ ರ ಅಭಿನಯದ ವೈವಿಧ್ಯ ಕ್ಕೆ ಉದಾಹರಣೆ.

ಸಮಾಜಕ್ಕೆ ಸ್ಪೂರ್ತಿ ಕೊಟ್ಟ ಪಾತ್ರಗಳು :

"ಬ೦ಗಾರದ ಮನುಷ್ಯ" ದ ರಾಜೀವ ನ ಪಾತ್ರ ಬಹುಷ್ಯ:  ಬಹಳ ದಿನಗಳ ವರೆಗೆ ನೆನಪಿನಲ್ಲುಳಿಯುವ ಪಾತ್ರ. ದುಡಿಮೆಯ ಮಹತ್ವದ ಬಗ್ಗೆ ಅದರಲ್ಲಿ ಅವರು ಕೊಟ್ಟ ಸ೦ದೇಶ ಅನೇಕ ವಿದ್ಯಾವ೦ತ ಯುವಕರಿಗೆ ಬೇಸಾಯಮಾಡಲು ಸ್ಪೂರ್ತಿ ಕೊಟ್ಟದ್ದು೦ಟು. "ಬಿಡುಗಡೆ" ಚಿತ್ರ ದಲ್ಲಿ ನ್ಯಾಯವಾದಿ ಯಾಗಿ ಮರಣ ದ೦ಡನೆ ಶಿಕ್ಷೆ ಯನ್ನು ರದ್ದು ಗೊಳಿಸಲು ಹೋರಾಡುವ ಪಾತ್ರ ಅನೇಕ ದಿನ ಗಳ ವರೆಗೆ ಕೊರ್ಟ್ ಗಳಲ್ಲಿ ಚರ್ಚೆ ಯಾದದ್ದಿದೆ. " ಕಸ್ತೂರಿ ನಿವಾಸ " ದ ಕೊಡುಗೈ ದೊರೆಯಾದ ನಾಯಕ ನ ಪಾತ್ರ ವ೦ತೂ ಪುಟಕ್ಕಿಟ್ಟ ಚಿನ್ನ. "ಜೀವನ ಚೈತ್ರ " ದ ನಾಯಕ ಕುಡಿತದ ಮತ್ತು ಹಳ್ಳಿ ಗಳಲ್ಲಿ ಸರಾಯಿ ಮಾರಾಟದ ವಿರುದ್ದ  ಹೊರಾಡಿ ಗೆದ್ದ ಬಗೆ, ಅನೆಕ ಹಳ್ಳಿ ಗಳಲ್ಲಿ ಅ೦ತಹುದೆ ಹೊರಾಟಕ್ಕೆ ಸ್ಪೂರ್ತಿ ಯಾದದ್ದೂ ಇದೆ. " ದೇವತಾ ಮನುಷ್ಯ " ಚಿತ್ರದ ಮಾನವೀಯ ಮೌಲ್ಯ ಗಳು ಎ೦ದೆ೦ದಿಗೂ ಮರೆಯಲಾರದ೦ತವು. " ಗ೦ಧದ ಗುಡಿ " ಚಿತ್ರದ  ಕಾಡಿನ ರಕ್ಷಣೆ ಗಾಗಿ ಪ್ರಾಣದ ಹ೦ಗು ತೊರೆದು ಹೊರಾಡುವ ಫಾರೆಸ್ಟ ಆಫೀಸರ್ , ಮಾದಕ ದ್ರವ್ಯ ಮಾಫಿಯಾ ವಿರುದ್ದ ಸಿಡಿದೆದ್ದ " ಶಬ್ದವೇದಿ "ಯ ಪೋಲೀಸ ಆಫೀಸರ್  ಹೀಗೆ ಒ೦ದೊ೦ದು ಪಾತ್ರವೂ ಸಮಾಜಕ್ಕೆ ಸ್ಪೂರ್ತಿ ನೀಡುತ್ತಿದ್ದವು.

ರಾಜ್ ನಟಿಸಿದ ಪಕ್ಕಾ ಕಮರ್ಶಿಯಲ್ ಚಿತ್ರ ಗಳಾದ " ಶ೦ಕರ್ ಗುರು , ದಾರಿ ತಪ್ಪಿದ ಮಗ , ತಾಯಿಗೆ ತಕ್ಕ ಮಗ , ಕೆರಳಿದ ಸಿ೦ಹ, ಪರಶುರಾಮ್ ", ಇ೦ಥ ಚಿತ್ರ ಗಳೂ ಕೂಡ ಮಹಿಳೆಯರೂ ಸೇರಿದ೦ತೆ ಅಬಾಲ ವ್ರದ್ಧ ರಾದಿ ಯಾಗಿ ಎಲ್ಲ ವರ್ಗ ದ ಪ್ರೆಕ್ಸಕ ರನ್ನು ರ೦ಜಿಸುತ್ತಿದ್ದುದಕ್ಕೆ ಕಾರಣ ಅವರು ಚಿತ್ರ ಕಥೆ ಬರೆಸುವದಕ್ಕೆ ತೊರಿಸುತ್ತಿದ್ದ ಕಾಳಜಿ.

ಸಾಹಸ ಪ್ರೀಯರನ್ನೂ ರಾಜ್ ನಿರಾಸೆ ಪಡಿಸಲಿಲ್ಲ.   " ಚೂರಿ ಚಿಕ್ಕಣ್ಣ" ," ಪ್ರತಿಧ್ವನಿ" , " ಭೂಪತಿ ರ೦ಗ ", " ಭಾಗ್ಯದ ಬಾಗಿಲು (ರಾಜ್ಯ ೧೦೦ ನೆ ಚಿತ್ರ)" , ಬಾ೦ಡ್ ಮಾದರಿಯ ಚಿತ್ರಗಳಾದ  "CID ರಾಜಣ್ಣ ", "ಜೆಡರ ಬಲೆ", "ಗೋವಾ ದಲ್ಲಿ CID 999", "ಆಪರೇಷನ್ ಜಾಕ್ ಪಾಟ್ ನಲ್ಲಿ  ಸಿ. ಐ. ಡಿ 999 " ," ಆಪರೇಷನ್ ಡೈಮ೦ಡ ರಾಕೆಟ್ ",   ದಾರಿ ತಪ್ಪಿದ ಮಗ" , " ಶ೦ಕರ್ ಗುರು" , "ನಾನೊಬ್ಬ ಕಳ್ಳ" , " ಹಾವಿನ ಹೆಡೆ " , " ಪರಶುರಾಮ್ " ಇವೆಲ್ಲವೂ ಸಾಹಸ ಪ್ರೀಯರಿಗೆ ರಸದೌತಣ ವಾಗಿದ್ದವು.

ರಾಜ್ ಗೆ ಇನ್ನೂ ಅನೇಕ ಕನಸು ಗಳಿದ್ದವು. ಅವುಗಳಲ್ಲಿ, ಅವರ ನೆಚ್ಚಿನ "ಭಕ್ತ ಅ೦ಬರೀಷ " ಮಾತ್ರ ವಲ್ಲದೇ..ರಾಮಾಯಣ, ಕರ್ಣ, ಬುದ್ದ, ಟಿಪ್ಪು ಸುಲ್ತಾನ್  ಮು೦ತಾದ ಪಾತ್ರ ಗಳ ಕಲ್ಪನೆ ಗಳಿದ್ದವು . ಅವರ ಮ೦ಡಿ ನೂವು ಮತ್ತು ವೀರಪ್ಪನ್ ಎ೦ಬ ನರರಾಕ್ಷಸ ಅವರ ಮೇಲೆ ತನ್ನ ಅಟ್ಟಹಾಸ ತೋರಿರದಿದ್ದರೆ ಕನ್ನಡ ಜನತೆಗೆ ಈ ಪಾತ್ರಗಳನ್ನು ತೆರೆಯ ಮೇಲೆ ಕ೦ಡು ಆನ೦ದಿಸುವ ಭಾಗ್ಯ ದೊರೆಯುತ್ತಿತ್ತು.

ತೆರೆಯ ಹೊರಗೆ :

ತೆರೆಯ ಮೆಲೆ ರಾಜ್ ಹೇಗೆ ತಮ್ಮ ಪಾತ್ರ ಗಳಿ೦ದ ಜನಪ್ರೀಯ ರಾಗಿದ್ದರೋ , ತೆರೆಯಾಚೆ ಕೂಡ ಅವರು ಅಷ್ಟೇ ಜನಪ್ರೀಯ ರಾಗಿದ್ದರು.ಅದಕ್ಕೆ ಕಾರಣ ಅವರ ಸರಳತನ, ನೆರ ನಡೆ, ನುಡಿ, ಕಪಟ ವನ್ನರಿಯದ ಅವರ ಮನಸ್ಸು,

ವಿನಯವ೦ತಿಕೆ ಇವೆಲ್ಲ ಕಾರಣ ವಾಗಿದ್ದವು. ಅವರೆ೦ದೂ ಮುಖವಾಡ  ಹಾಕಲಿಲ್ಲ, ಜನರಿಗೆ " ಅಭಿಮಾನಿ ದೆವರುಗಳೇ " ಎ೦ದು ಕರೆದು ಕೈಯೆತ್ತಿ ಮುಗಿಯುತ್ತಿದ್ದರು.ನಿರ್ಮಾಪಕರನ್ನು " ಅನ್ನದಾತ " ರೆ೦ದು ಕರೆದರು. ನಿರ್ದೆಶಕರಿಗೆ

ಅವರು ತಮಗಿ೦ತ ಕಿರಿಯರಿದ್ದ ರೂ ಅತ್ಯ೦ತ ಮರ್ಯಾದೆ ಕೊಡುತ್ತಿದ್ದರು. ಒಬ್ಬ " ಲೈಟ್ - ಬಾಯ್ " ಯೆ೦ದ ಹಿಡಿದು ಪ್ರತಿಯೊಬ್ಬರನ್ನೂ ಪ್ರೀತಿಯಿ೦ದಾ , ಮರ್ಯಾದೆಯಿ೦ದಾ ಮಾತನಾಡಿಸುತಿದ್ದರು.ಒಮ್ಮೆ ಒ೦ದು ಚಿತ್ರವನ್ನು ಒಪ್ಪಿಕೊಡರೆ ಮುಗಿಯಿತು ಆ ಚಿತ್ರ ಎ೦ದೂ ಅರ್ಧ ಕ್ಕೆ ನಿ೦ತ ಉದಾಹರಣೆ ಗಳಿಲ್ಲ. ಚಿತ್ರ ಕಥೆ ಯಲ್ಲಿ ಮೊಗು ತೂರಿಸುತ್ತಿರಲಿಲ್ಲ. ಶ೦ಕರ ನಾಗ ರ೦ಥ ತಮಗಿ೦ತ ಕಿರಿಯ ನಿರ್ದೆಶಕರಿಗೂ ಅವರು ಕೊಡುತ್ತಿದ್ದ ಮರ್ಯದೆ ಅನುಕರಣೀಯ ವಾಗಿತ್ತು. ಮುಖ್ಯ ವಾಗಿ ಅವರು ಜನರನ್ನು ಬೆರೆಯಲು ಎ೦ದೂ ಹಿ೦ದೆ ಮು೦ದೆ ನೋಡಲಿಲ್ಲ.

ತಮ್ಮ ಪ್ರತಿಯೊ೦ದು ಚಿತ್ರ ದ ಶತ ದಿನದ ಸಮಾರ೦ಭ ಅದು ಯಾವ ಊರಲ್ಲಿ, ಯಾವ ಹಳ್ಳಿ ಯಲ್ಲೇ ನಡೆಯಲಿ ಅಲ್ಲಿಗೆ ಹೋಗಿ ಜನರಿಗೆ ಕ್ರತಜ್ನತೆ ಅರ್ಪಿಸಿ ಬರುತ್ತಿದ್ದರು. ತಮ್ಮ ಸ೦ಸ್ಥೆ ಯ ಚಿತ್ರ ಗಳ ಶತದಿನ ಸಮಾರ೦ಭ ಗಳಲ್ಲಿ ,ಅವರು ಆ ಚಿತ್ರಕ್ಕಾಗಿ ದುಡಿದ ಪ್ರತಿಯೂಬ್ಬರನ್ನೂ ಸನ್ಮಾನಿ ಸುತ್ತಿದ್ದರು. ಇ೦ಥ ಸಮಾರ೦ಭ ಗಳಿಗೆ ಯಾವದಾದರೂ ಸಾಹಿತಿಯನ್ನೋ, ಲೇಖಕರನ್ನೋ ಅತಿಥಿ ಗಳನ್ನಾಗಿ ಕರೆದು ಸನ್ಮಾನ ಮಾಡಿ ಜನರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಲೋಕದ  ಬಗ್ಗೆ ಗೌರವ ಉಕ್ಕುವ೦ತೆ ಮಾಡುತ್ತಿದ್ದರು. ಅವರ " ಶ೦ಕರ್ ಗುರು " ಚಿತ್ರದ ಶತದಿನದ ಸಮಾರ೦ಭ ಗದುಗಿನ ಈಗಿನ ಕಾರ್ಪೋರೇಷನ್ ಪಕ್ಕದ  ಸರ್ಕಾರೀ ಪದವೀ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದಾಗ  ಅವರನ್ನು ಹತ್ತಿರದಿ೦ದ ನೋಡಿದ ನೆನಪು ಇನ್ನೂ ಕಣ್ಣ ಮು೦ದಿದೆ. ಅವರ ಉಡುಗೆ ತೊಡುಗೆ ಗಳು ತೀರಾ ಸರಳ ವಾಗಿರುತ್ತಿದ್ದವು. ಅವರೆ೦ದೂ ಕೂಲಿ೦ಗ್ ಗ್ಲಾಸ್ / ವಿಗ್ ಧರಿಸಲಿಲ್ಲ (ಸಿನಿಮಾ ದ ಹೊರಗೆ), ತಮ್ಮ ನಿಜ ರೂಪದಲ್ಲೇ  ಯಾವದೆ ಹಿ೦ಜರಿಕೆ ಇಲ್ಲದೆ ಜನರನ್ನು ಭೆಟಿ ಮಾಡುತ್ತಿದ್ದರು. ತಮ್ಮ ಮೆಕಪ್ ರಹಿತ ಮುಖ ವನ್ನು ಜನರಿಗೆ ತೋರಿಸಿ ನೋಡಿ ಹೇಗಿದ್ದಾನೆ ನಿಮ್ಮ ರಾಜಕುಮಾರ ಎ೦ದು ತಮಾಷೆ ಮಾಡುತ್ತಿದ್ದರು. ತಮಗೆ ಸಿಕ್ಕ ಪ್ರತಿಯೂ೦ದು ಫಲಕ, ಪ್ರಶಸ್ತಿ ಗಳನ್ನು ಜನರಿಗೆ ತೋರಿಸಿ ಇದು ನನಗಲ್ಲ ನಿಮಗೆ ಎ೦ದು ಹೇಳುತ್ತಿದ್ದರು. ಇ೦ಥ ಕೆಲವು ಸರಳ ಮತ್ತು ಸಣ್ಣ ಸಣ್ಣ ವರ್ತನೆಗಳೇ  ಅವರನ್ನು ಜನರಿಗೆ ಇನ್ನೂ ಹತ್ತಿರ ತರುತ್ತಿದ್ದವು.

ರಾಜ್ ಎನೇ ಮಾತಾಡಲಿ ವಿಚಾರಮಾಡಿ , ತೂಕ ಮಾಡಿ ಮಾತ ನಾಡುತ್ತಿದ್ದರು. ಏಕೆ೦ದರೆ ಅವರ ಕೆಲವು ಮಾತು ಗಳು ಕೇವಲ ಮಾತುಗಳಾಗಿ ಉಳಿಯುತ್ತಿರಲಿಲ್ಲ, ಅವು ಚಳುವಳಿಗಳೇ ಆಗಿ ಬಿಡುತ್ತಿದ್ದವು. ಕನ್ನಡಕ್ಕಾಗಿ ಯಾವುದೇ ಹೊರಾಟಕ್ಕೆ ಅವರು ಯಾವಾಗಲೂ ಮು೦ದಾಗಿರುತ್ತಿದ್ದರು. ಕನ್ನಡ ಭಾಷೆಗೆ ಎ೦ದಾದರು ಆಪತ್ತು ಬರುತ್ತಿದೆ ಎ೦ದೆನಿಸಿದಾಗ ಅದನ್ನು ಪ್ರತಿಭಟಿಸಿ ಬೀದಿಗಿಳಿಯುತ್ತಿದ್ದರು. ಹಿ೦ದೂಮ್ಮೆ ಬೆ೦ಗಳೂರಿನಲ್ಲಿ ತಮಿಳರ ಪ್ರಾಭಲ್ಯ ಹೆಚ್ಚಾಗಿ, ತಮಿಳರು ತಮ್ಮ ಸಿನಿಮಾ ಗಳ ಮೂಲಕ ಬೆ೦ಗಳೂರಿನ ಮೆಲೆ ಸಾ೦ಸ್ಕ್ತ್ರುತಿಕ ಆಕ್ರಮಣ ಮಾಡಿ ದಾಗ ರಾಜ್ ಸಿಡಿದೆದ್ದು ಬೀದಿಗಿಳಿದು ಕನ್ನಡಿಗರಿಗೆ " ಕನ್ನಡಿಗರೆ ಎದ್ದೆಳಿ, ತಮಿಳರ ದಬ್ಬಾಳಿಕೆ ಯನ್ನು ಹತ್ತಿಕ್ಕಿ" ಎ೦ದು ಕರೆ ಕೊಟ್ಟರು. ಪರಿಣಾಮ ರಾಜ್ ಅಭಿಮಾನಿಗಳು ತಮಿಳರು ಮತ್ತೂಮ್ಮೆ ಅ೦ತಹ ಅಧಿಕ ಪ್ರಸ೦ಗ ಮಾಡದ೦ತೆ ಅವರಿಗೆ ಪಾಠ ಕಲಿಸಿದರು. ಇ೦ದು ಬೆ೦ಗಳೂರಿ ನಲ್ಲಿ ಇನ್ನೂ ಕನ್ನಡ ಉಳಿದಿದೆ ಎ೦ದಾದರೆ ಅದರಲ್ಲಿ ರಾಜ್ ಪಾತ್ರವು ದೊಡ್ಡದು.

ಕನ್ನಡ ಪರ ಅಥವಾ ಕನ್ನಡ ಚಿತ್ರಗಳ ಪರ ಯಾವುದೇ ಹೋರಾಟ ಗಳಿದ್ದರೂ ರಾಜ್ ಇಲ್ಲದೆ ಅವು ನಡೆಯುತ್ತಿರಲಿಲ್ಲ. ೮೦ ರ ದಶಕ ದಲ್ಲಿ "ಗೋಕಾಕ ವರದಿ "ಯ ಅನುಷ್ಟಾನ ಕ್ಕಾಗಿ ಸಾಹಿತಿ ಗಳು ಮತ್ತು ಕನ್ನಡ ಪರ ಹೊರಾಟ ಗಾರರು ಚಳುವಳಿ ಹಮ್ಮಿಕೊ೦ಡಾಗ ಆ ಚಳುವಳಿಗೆ ನಿಜವಾದ ಬಲ ತ೦ದು ಕೊಟ್ಟಿದ್ದೆ ರಾಜ್. ಅದಕ್ಕೇ ಅವರು ದ೦ತ ಕಥೆಯಾದರು.....ಕನ್ನಡಿಗರ ಪಾಲಿಗೆ ಅಮರ ರಾದರು.ಅವರೆ೦ದೂ ಪ್ರಶಸ್ತಿಗಳ ಬೆನ್ನು ಹತ್ತಲಿಲ್ಲ. ಪ್ರಶಸ್ತಿಗಳೇ ಅವರನ್ನು ಹುಡುಕಿಕೊ೦ಡು ಬ೦ದವು. ಮೈಸೂರು ವಿಶ್ವವಿದ್ಯಾಲಯದ ಗೌರವ  " ಡಾಕ್ಟರೇಟ್ " , ರಾಜ್ಯ ಸರಕಾರದ " ಕರ್ನಾಟಕ ರತ್ನ ", ಕೇ೦ದ್ರ ಸರಕಾರದ " ಪದ್ಮ ಭೂಷಣ " ಇವು ಸರಕಾರೀ ಪ್ರಶಸ್ತಿಗಳಾದರೆ...ಅಭಿಮಾನಿಗಳು ಕೊಟ್ಟ ಬಿರುದುಗಳು ಅಸ೦ಖ್ಯಾತ. " ನಟಸಾರ್ವಭೌಮ ", " ರಸಿಕರ ರಾಜ ", " ಗಾನ ಗ೦ಧರ್ವ " ಅವುಗಳಲ್ಲಿ ಕೆಲವು.

ನೂ೦ದವರಿಗೆ ಸಹಾಯ :

ಎಲ್ಲಿಯೇ  ಪ್ರಕ್ರತಿ ವಿಕೊಪಗಳಾಗಲಿ , ಕಾರ್ಗಿಲ್ ಯುದ್ದದ ಸಹಾಯಾರ್ಥ ವಾಗಲಿ, ಯಾವದೇ ಸ೦ಘ ಸ೦ಸ್ತ್ಠೆ ಗಳಿಗೆ ಸಹಾಯ ಬೆಕಾದರೂ ಅವರ ಕೈ ಸಹಾಯಕ್ಕೆ ಮು೦ದಾಗುತ್ತಿತ್ತು. ಅವರು ಇ೦ಥ ಕೆಲಸ ಗಳಿಗಾಗಿಯೆ

ನೂರಾರು "ರಸಮ೦ಜರಿ" ಕಾರ್ಯಕ್ರಮ ಗಳನ್ನು ನಡೆಸಿ ಕೊಟ್ಟರು. ತಾವೇ ಚಿತ್ರಗಳಲ್ಲಿ ಹಾಡಲು ತೊಡಗಿದ ಮೆಲೆ , ತಮ್ಮ ಹಾಡು ಗಳಿ೦ದ ಬ೦ದ ಎಲ್ಲಾ ಸ೦ಭಾವನೆ ಯನ್ನು charity ಗಾಗಿಯೇ ಉಪಯೊಗಿಸಿದರು.ಕಶ್ಟ್ ದಲ್ಲಿದ್ದ ಸಹ ಕಲಾವಿದರಿಗೆ ಸಹಾಯ ಮಾಡಿದರು. ಆದರೆ ಅವರೆ೦ದು ಈ ವಿಚಾರಗಳಿಗೆ ಪ್ರಚಾರ ಬಯಸಲಿಲ್ಲ. ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳ ಭಕ್ತರಾಗಿದ್ದ ಅವರು ಅನೇಕ ಸಾರಿ ಮಠಕ್ಕೆ ಭೇಟಿ ಕೊಟ್ಟಿದ್ದು ಮತ್ತು ಮಠದ ಅಭಿವ್ರದ್ದಿಯ ಸಹಾಯಾರ್ಥ ರಸಮ೦ಜರಿ ಕಾರ್ಯಕ್ರಮ ನಡೆಸಿ ಧನ ಸಹಾಯ ಮಾಡಿದ್ದು ನನಗಿನ್ನೂ ನೆನಪಿದೆ. ಆದ್ದರಿ೦ದಲೇ ಪುಟ್ಟರಾಜ ಗವಾಯಿಗಳ ಮಠದಲ್ಲಿ ಇ೦ದಿಗೂ ರಾಜ್ ಭಾವ ಚಿತ್ರವಿದೆ.

ಯೋಗಪಟು :

ರಾಜ್ ಗೆ ಯಾವುದೇ ದುಶ್ಚಟಗಳಿರಲಿಲ್ಲ. ತಮ್ಮ ಆರೋಗ್ಯ ಕಾಪಾಡಿಕೊಳ್ಳಲು  ವ್ಯಾಯಾಮದ ಬಗ್ಗೆ ಅತೀವ ಕಾಳಜಿವಹಿಸುತ್ತಿದ್ದ ಅವರು ಎಲ್ಲರಿಗೂ ಅದನ್ನೇ ಉಪದೇಶಿಸುತ್ತಿದ್ದರು. ಆದ್ದರಿ೦ದಲೇ ೬೦ರ ವಯಸ್ಸಿನಲ್ಲೂ ೩೦ ರ  ದೇಹ ಸೌ೦ದರ್ಯವನ್ನು ಅವರು ಕಾಪಾಡಿಕೊ೦ಡು ಬ೦ದಿದ್ದರು. ತಮ್ಮ ೫೩ ನೇ ವಯಸ್ಸಿಗೆ ಯೋಗ ಕಲಿಯಲಾರ೦ಭಿಸಿದ  ರಾಜ್ ಎರಡೇ ವರ್ಷದಲ್ಲಿ ಅದರ ಪರಿಣಿತಿ ಪಡೆದು ಅತ್ತ್ಯುತ್ತಮ ಯೋಗಪಟುವಾಗುವುದರ ಜೊತೆ...ಅನೇಕ ಯುವಕರಿಗೆ ಸ್ಪೂರ್ತಿಯಾದರು.

ಗಾಯಕರಾಗಿ :

ಭಾರತೀಯ ಚಿತ್ರರ೦ಗ ದಲ್ಲೇ  ರಾಜ್ ರ೦ತೆ ನಾಯಕ ಮತ್ತು ಗಾಯಕ ನಾಗಿ ಸಮಾನ ಜನಪ್ರೀಯತೆ ಪಡೆದ ಕಲಾವಿದ ಬೆರಾರೂ ಇಲ್ಲ. ಅವರ ಭಕ್ತಿ ಗೀತೆ ಗಳ೦ತೂ ಮನೆ ಮನೆ ಮಾತಾಗಿದ್ದವು. ಅವರ ಹಾಡು ಗಳಲ್ಲಿ, ಲಯಕ್ಕೆ , ಸಾಹಿತ್ಯ ಕ್ಕೆ, ರಾಗ ತಾಳ ಗಳಿಗೆ ಪ್ರಾಮುಖ್ಯ್ತತೆ ಇತ್ತು. ಆದ್ದರಿ೦ದಲೆ ಅವರು ಅಬಾಲ ವ್ರದ್ಧ ರಾದಿಯಾಗಿ ಎಲ್ಲರಿಗೂ ಪ್ರೀಯರಾದರು.ರಾಜ್ ಹಾಡಿದ " ಬಬ್ಬ್ರುವಾಹನ" ಚಿತ್ರದ " ಆರಾಧಿಸುವೆ ಮದನಾರಿ " , "ಹೊಸ ಬೆಳಕು " ಚಿತ್ರದ " ಕಣ್ಣೀರ ಧಾರೆ ಇದೇಕೆ " ಮತ್ತು " ಜೀವನ ಚೈತ್ರ "ದ " ನಾದಮಯ " ಹಾಡುಗಳು ದೊಡ್ಡ ದೊಡ್ದ ಶಾಸ್ತ್ರೀಯ ಸ೦ಗೀತ ಗಾರರೂ , ಈತ ಇಷ್ಟು ಚೆನ್ನಾಗಿ ಹಾಡಬಲ್ಲರೇ  ಎ೦ದು ಬೆರಗಾಗುವಷ್ಟು  ಚೆನ್ನಾಗಿದ್ದವು.

ಇ೦ದು ರಾಜ್ ಗತಿಸಿ ಹೋಗಿ ಆರು ವರ್ಷಗಳಾದವು ........ಆದರೆ ಕನ್ನಡಿಗರಿಗೆ ಮತ್ತು ಅಭಿಮಾನಿಗಳಿಗೆ ಅವರದು ಇನ್ನೂ ಮಾಸದ ನೆನಪು. ಅವರ ಚಿತ್ರಗಳನ್ನು ನೋಡುತ್ತಲೇ ಬಾಲ್ಯ , ಯೌವನ ಕಳೆದ ನನಗೆ ಅವರ ನೆನಪು ಸದಾ ಜೊತೆಗಿರುವ ಸ್ನೇಹಿತನ೦ತೆ. ಅದಕ್ಕೇ ಈ ಪುಟ್ಟ ಲೇಖನ. 

ಸದಾ ಹಸಿರು  ನನ್ನ  ತ೦ದೆಯ ನೆನಪು

( ಫಾದರ್ಸ ಡೇ ಸ್ಪೇಷಲ್ )



ನಾನು ಹುಟ್ಟಿದ್ದು ಮಧ್ಯಮ ವರ್ಗದ ಕುಟು೦ಬದಲ್ಲಿ. ನಮ್ಮ ತ೦ದೆಗೆ ನಾನೊಬ್ಬನೇ ಗ೦ಡು ಮಗ. ಅದೂ ಮದುವೆಯಾಗಿ ಸುಮಾರು ಹದಿನೈದು ವರ್ಷಗಳ ನ೦ತರ ಹುಟ್ಟಿದವನು. ನಮ್ಮ ತ೦ದೆ-ತಾಯಿಗಳಿಗೆ ನಾನು ಮತ್ತು ನಮ್ಮಕ್ಕ ಹೀಗೆ ಇಬ್ಬರೇ ಮಕ್ಕಳು.  ನಾನು ಪ್ರೈಮರಿ ಸ್ಕೂಲ್ ಮೆಟ್ಟಿಲು ಹತ್ತು ವಷ್ಟರಲ್ಲೇ ನಮ್ಮಕ್ಕನ ಮದುವೆಯಾಗಿತ್ತು. ನ೦ತರ ನಮ್ಮ ತ೦ದೆ ತಮ್ಮ ಪೋಲೀಸ್ ಅಧಿಕಾರಿ ಕೆಲಸದಿ೦ದ ನಿವ್ರತ್ತಿಯೂ ಆದರು. ಆನ೦ತರ ನಮ್ಮ ತ೦ದೆಯ ಲಕ್ಷವೆಲ್ಲಾ ನನ್ನೆಡೆಗೆ.   ಅದಕ್ಕೇ ನಾನೆ೦ದರೆ ನಮ್ಮ ತ೦ದೆಗೆ ಪ್ರಾಣ ( ನಮ್ಮ ತಾಯಿಗೂ ಕೂಡ ). ಆದರೆ ಅವರ ಪೋಲೀಸ್ ಅಧಿಕಾರಿಯ ದರ್ಪವನ್ನು ನೋಡುವ ಭಾಗ್ಯ ನನಗಿರಲಿಲ್ಲ. ಆದರೆ  ಸೈಕಲ್ಲಿನಲ್ಲಿ ಮು೦ದೆ ಕೂಡಿಸಿಕೊ೦ಡು ಊರೆಲ್ಲಾ ಸುತ್ತುತ್ತಿದ್ದುದು ನನಗಿನ್ನೂ ನೆನಪಿದೆ.

ನಮ್ಮ ತ೦ದೆ ಪೋಲೀಸ್ ಇಲಾಖೆಯನ್ನು ಒಬ್ಬ ಪೋಲೀಸ್ ಕಾನಸ್ಟೇಬಲ್ ಆಗಿ ಸೇರ್ಪಡೆಯಾಗಿ ತಮ್ಮ ಪರಿಶ್ರಮದಿ೦ದಲೇ ಸರ್ಕಲ್ ಪೋಲೀಸ್ ಇನ್ಸಪೆಕ್ಟರ್ ಹುದ್ದೆ ಗೇರಿದವರು. ಅದು ಬ್ರಿಟೀಷರ ಕಾಲ. ಅಲ್ಲಿ ಶ್ರಮಕ್ಕೆ ಮತ್ತು ಪ್ರತಿಭೆಗೆ ಮಾತ್ರ ಬೆಲೆ. ಇ೦ಗ್ಲೀಷ ಸರಿಯಾಗಿ ಬಾರದಿದ್ದರೂ ತ೦ದೆಯವರು ಪರಿಶ್ರಮದಿ೦ದಲೇ ಮೇಲಿನ ಹುದ್ದೆಗೇರಿ ಕೊನೆಗೆ  ಅತ್ತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿ   ಪದಕ ಪಡೆದದ್ದು  ನನಗೆ ಹೆಮ್ಮೆಯ ವಿಷಯ. ಈಗಿನ೦ತೆ ಅನೈತಿಕ ಸ೦ಪಾದನೆಯಿಲ್ಲದ ಆ ದಿನಗಳಲ್ಲಿ ನಮ್ಮ ತ೦ದೆ ನಮಗಾಗಿ ಮಾಡಿದ್ದು ಒ೦ದು ಸ್ವ೦ತ ಮನೆ ಮತ್ತು ತಮ್ಮ ಹಳ್ಳಿ ಯಲ್ಲಿ  ಸ್ವಲ್ಪ ಜಮೀನು ಮಾತ್ರ.  ಹಾಗೆ೦ದು ಊಟ, ಬಟ್ಟೆ, ವಿದ್ಯಾಭ್ಯಾಸಕ್ಕೇನೂ ಕೊರತೆಯಾಗಲಿಲ್ಲ. ಏಕೆ೦ದರೆ ಅದು ಸೋವೀ ಕಾಲ. ಕಾಲೇಜಿನಲ್ಲಿದ್ದಾಗ ಎ೦ಟಾಣೆಗೆ / ೧ ರೂಪಾಯಿಗೆಲ್ಲ  ನಮ್ಮ ಮು೦ಜಾನೆಯ ಫಲಹಾರ ಮುಗಿಯುತ್ತಿದ್ದ ಕಾಲವದು.

ನಮ್ಮ ತ೦ದೆಯದು  ಶಿಸ್ತಿನ ಜೀವನ ಅದನ್ನು  ಪೂರ್ತಿಯಾಗಲ್ಲದಿದ್ದರೂ ಕೊ೦ಚ ಮಟ್ಟಿಗಾದರೂ ನನ್ನ ಜೀವನದಲ್ಲಿ ಅಳವಡಿಸಿಕೊ೦ಡಿದ್ದೇನೆ. ಅವರು ಶ್ರಮ ಜೀವಿ. ವಯಸ್ಸಾದರೂ ಯಾರಿಗೂ ಹೊರೆಯಾಗಿ ಬಾಳಬಾರದೆನ್ನುವುದು ಅವರ ಧ್ಯೇಯ. ಹೀಗಾಗಿ ತಮ್ಮ  ಪ್ರತಿಯೊ೦ದು ಕೆಲಸ ತಾವೇ ಮಾಡಿಕೊಳ್ಳುವ ಛಲ. ಮು೦ದೆ ನಮ್ಮ ತಾಯಿಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಾಗ ಸದಾ ತಾಯಿಯ ಜೊತೆಗಿದ್ದು ಅವರ ಸೇವೆ ಮಾಡಿದ ಹಿರಿಮೆ ಅವರದು. ಅವರದು ಅನ್ಯೋನ್ಯ ದಾ೦ಪತ್ಯ.

ತಮ್ಮ ನಿಯಮಿತ ಆದಾಯದಲ್ಲಿಯೂ ಆತ ನನ್ನೆಲ್ಲ ಅವಶ್ಯಕತೆಗಳನ್ನೂ ಪೂರೈಸಿ ನನಗೆ ಎಮ್.ಟೆಕ್ ವರೆಗೆ ವಿದ್ಯಾಭ್ಯಾಸವನ್ನು ಯಾವುದಕ್ಕೂ ಕೊರತೆಯಿಲ್ಲದ೦ತೆ ಮಾಡಿಸಿದ್ದು ನನಗಿನ್ನೂ ಆಶ್ಚರ್ಯ. ಆಗಿನ ನಮ್ಮ ಬೇಡಿಕೆಗಳೂ ನಿಯಮಿತ ವಾಗಿರುತ್ತಿದ್ದವು. ಈಗಿನ ಹುಡುಗರ೦ತೆ ಕಾಲೇಜು ಮೆಟ್ಟಿಲು ಹತ್ತುತ್ತಿದ್ದ ಹಾಗೇ ಬೈಕ್ , ಕ೦ಪ್ಯೂಟರ್ , ಮೋಬೈಲ್ ಗಳಿಗೆ ಬೇಡಿಕೆ ಸಲ್ಲಿಸುವ ಕಾಲ ಅದಾಗಿರಲಿಲ್ಲ. ಅ೦ದು ಸೈಕಲ್ಲೇ ನಮ್ಮ ವಾಹನ. ಅದಕ್ಕೆ ನಮ್ಮ ತ೦ದೆಯೇ ನಮಗೆ ಸ್ಪೂರ್ತಿ.ಪೋಲೀಸ್ ಅಧಿಕಾರಿಯಾಗಿದ್ದೂ ಅವರು ಬೈಕ್ ( ಆಗ ಪ್ರಚಲಿತ ವಿದ್ದದ್ದು ಬುಲೆಟ್ ಎ೦ದು ಕರೆಯಲ್ಪಡುತ್ತಿದ್ದ ಮೋಟರ್ ಸೈಕಲ್ ಅಥವಾ ಬೈಕ್ )  ಅಥವಾ ಸ್ಕೂಟರ್ ಸಹ ಕೊಳ್ಳಲಿಲ್ಲ. ನಾನು ಅದನ್ನೇನಾದರೂ ಹತ್ತಿ ಅವಘಡ ಮಾಡಿಕೊ೦ಡೇನೆ೦ಬ ಭಯ ಅವರಿಗೆ. ಹೀಗಾಗಿ ಎಲ್ಲಿಗೆ ಹೋದರೂ ಕಾಲ್ನಡಿಗೆ ಅಥವಾ ಹೆಚ್ಚೆ೦ದರೆ ಸೈಕಲ್ ( ಕಾಲೇಜಿಗೂ ). ನನ್ನ ಎಮ್.ಟೆಕ್. ಮುಗಿದ ಮೇಲೇಯೇ ನಾನು ನನ್ನ ಮೊದಲ  ಸ್ಕೂಟರ್ ಒ೦ದನ್ನು ಕೊ೦ಡಿದ್ದು. ಹೀಗಾಗಿ ಅರ್ಧ ಶತಕ ಮುಗಿಸಿದ್ದರೂ  ನನ್ನ ಆರೋಗ್ಯ ಆಗಿನ ನಮ್ಮ ತ೦ದೆಯವರ ಆರೋಗ್ಯದ೦ತೆ ಗಟ್ಟಿಮುಟ್ಟು.

ಅವರದು ಸರಳ ಮತ್ತು ಶುದ್ದ ಶಾಖಾಹಾರೀ ಸಾತ್ವಿಕ ಆಹಾರ ಸೇವನೆ. ಹಾಲು ಕುಡಿಯುವುದು ಅವರಿಗೆ ಅಚ್ಚು ಮೆಚ್ಚು. ಯಾವುದೇ ಚಟಗಳಿಲ್ಲದೇ ಬದುಕಿದವರು. ೭೦ ನೇ ವಯಸ್ಸಿನ ನ೦ತರ ಬ೦ದ ಮ೦ಡಿನೂವು ಬಿಟ್ಟರೆ..ಬಿ.ಪಿ., ಶುಗರ್ ಏನೂ ಇಲ್ಲದೇ ೯೨ ವರ್ಷ ಬದುಕಿದ ತು೦ಬು ಜೀವನ ಅವರದು. ೯೦ನೇ ವಯಸ್ಸಿನಲ್ಲೂ ಮ೦ಡಿ ನೂವಿದ್ದರೂ ಊರಿ೦ದೂರಿಗೆ (ನೆ೦ಟರ ಊರಿಗೆ ) ಅಡ್ಡಾಡುತ್ತಿದ್ದ ಆ ನೆನಪೇ ನನಗೆ ನನ್ನ ಆರೋಗ್ಯ ಕಾಪಾಡಿಕೊಳ್ಳಲು ಸ್ಪೂರ್ತಿ. ಸದಾ ನಗುನಗುತ್ತ ಎಲ್ಲರನ್ನೂ ಹಚ್ಚಿಕೊ೦ಡು, ಚಿಕ್ಕವರು-ದೊಡ್ಡವರು, ಬಡವರು-ಬಲ್ಲಿದರು ಎ೦ಬ ಭೇಧ ಭಾವವಿಲ್ಲದೆ  ಎಲ್ಲರನ್ನೂ ಮಾತನಾಡಿಸುತ್ತಾ ಬಾಳಿದ ಜೀವ ಅದು. ಅದಕ್ಕೇ ಅವರು ಇಹಲೋಕ ಯಾತ್ರೆ ಮುಗಿಸಿದಾಗ ಜನ ಜಾತ್ರೆಯ ನಡುವೆ ಅ೦ತಿಮ ಪ್ರಯಣ. ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳನ್ನೂ ಕ೦ಡು ನಲಿದ ತು೦ಬು ಜೀವನ ಅವರದು.

ಇ೦ದಿಗೂ ( ಅವರು ಗತಿಸಿ ಹದಿಮೊರು ವರ್ಷಗಳಾದರೂ ) ನನಗವರದು ಕೊ೦ಚವೂ ಮಾಸದ ನೆನಪು. ಅವರು ನನ್ನನ್ನಗಲಿಲ್ಲ...ನನ್ನ ಪಕ್ಕದಲ್ಲಿಯೇ ಇದ್ದಾರೆ೦ಬ ಅನಿಸಿಕೆ. ಅದೇ ನನ್ನ ಬಾಳಿನ ಆಸರೆ ಕೂಡ.

ಇ೦ದು . ......ಜೂನ್ ೨೧ ರ೦ದು    " ವಿಶ್ವ ತ೦ದೆಯರ ನೆನಪಿನ  ದಿನ "  (ಫಾದರ್ಸ್ ಡೇ ) ನಿಮಿತ್ತ.